[I ಈಗ ಟಕ್ಕರಾಗದಲ್ಲಿ ಹುಟ್ಟಿರುವ ಭಾಷಾಗಳು]

[i ತ್ರವಣಾ]

೭೭೫   ಮಧ್ಯಮವು ಅಂಶ, ಷಡ್ಜವು ನ್ಯಾಸ, ಪಂಚಮವನ್ನು ಬಿಟ್ಟಿದೆ. ಧೈವತ ಮತ್ತು ನಿಷಾದಗಳಲ್ಲಿ (ಕ್ರಮವಾಗಿ) ಅಂತೆಯೇ ಷಡ್ಜ ಮತ್ತು ಧೈವತಗಳಲ್ಲಿ-                                                                                                                               ೩೮

೭೭೬   -ಮತ್ತೆ ಮತ್ತೆ ಪರಸ್ಪರ ಗಮನವು ಇದರಲ್ಲಿ ಕಂಡುಬರುತ್ತದೆ. ಇದನ್ನು ಷಾಡವ(ರಾಗ)ವೆಂದು ತಿಳಿಯಬೇಕು; ಈ ತ್ರವಣಾ(ರಾಗವು) ಮೂಲಾ (ಎಂಬ ವರ್ಗಕ್ಕೆ ಸೇರಿದೆ).                                                                                                                    ೩೯

೭೭೭   ಉದಾಹರಣೆ – (ಅ) ಮಾಸಾಸಾಸಾ ಸಾನಿಧಾನಿಧಾನೀ ಧಾಗಾಸಾಸಾ | (ಆ) ಧಾನಿಸಾಮಾ ಗಾಗಾಗಾಮಾ ಸಾನಿಧಾಸಾಸಾಸಾಸಾ ಗಾಮಾಧಾನೀಧಾಧಾಮರೀ ಗಾರೀರೀಮರಿಗಾಸಾಸಾನಿಧಾಸಾಸಾ | (ಇ) ನೀಧಗಾಸಾಸಾ ನಿಧನಿಮಾಮಾನಿಧಾಸಾ ನಿಧಾಸಗಮಾಗಾಸಾ ನೀಧನೀಸಾ | (ತ್ರವಣಾ)                                                                                                                                        1

[iiತ್ರವಣೋದ್ಭವಾ]

೭೭೮ ಷಡ್ಜವು ನ್ಯಾಸವಾಗಿಯೂ, ಮಧ್ಯಮವು ಅಂಶವಾಗಿಯೂ ಯಾವಾಗಲೂ ಗಾಂಧಾರಕ್ಕೆ ಬಹುತ್ವವೂ, ಪಂಚಮದ ಲೋಪವೂ, ಧೈವತ-ರಿಷಭಗಳು ಬಹುವಾಗಿಯೂ, ಪಾಡವ(ರಾಗ)ವಾಗಿಯೂ, ಇರುವುದು ತ್ರವಣೋದ್ಭವಾ. (ಇದು) ಯಾವಾಗಲೂ ಸಂಕೀರ್ಣಾ(ಎಂಬ ವರ್ಗದ್ದು).          ೪೦

೭೭೯   (ಅ) ಉದಾಹರಣೆ- (ಅ) ಮಾನೀನೀನೀಸಾಸ(—) | (ಆ) ಸಾರೀರೀ ರೀಗಾಗಾ ಗಮಾಮಾ ಮಾಮಾರೀ | (ಇ) ಗರಿನಿನಿಧಾ ಧಾಧಾಮಾಮಗಾರಿಗಾ | (ಈ) ಸಾಮಾಗಾರೀ | (ಉ) ಸನಿನಿಗಾಗಾ ನಿನಿಧಾಸರಿಗಾರೀಮಾ | (ಊ) ಗಾಮಾಮಾನೀ | ನೀಸಸಾ | (ತ್ರವಣೋದ್ಭವಾ)          2

____

[iii ವೇರಂಜಿಕಾ]

೭೮೦   ವೇರಂಜಿಕಾ ತು ವಿಜ್ಞೇಯಾ ಗಾಂಧಾರಾಂಶಾsಲ್ಪಪಂಚಮಾ |
ಷಡ್ಜಾನ್ಯಾಸಾ ತು ಕರ್ತವ್ಯಾ, ಷಡ್ಜಧೈವತಯೋಸ್ತಥಾ                                                                      || ೪೧ ||

೭೮೧   ಗಮನಂ ಸಂಪ್ರಯುಜ್ಯ ತು ಗಾಂಧಾರರ್ಷಭಯೋಸ್ತಥಾ |
ಏವಂ ಭಾಷಾ ತು ವಿಜ್ಞೇಯಾ ಷಾಡವಾ ತು ನಿಗದ್ಯತೇ                                                                         || ೪೨ ||

೭೮೨   ಉದಾಹರಣಂ – (ಅ) ಗಾನಿಗಾಗಾ ಧರಿಮಾಮಾಗಾ ಮಾಮಾಗಾರೀಗಾಸಪಾಸಾ ನಿಗಾರೀನಿನಿಧಾಧಾಧನಿಗಾರೀಮಾಗಾರಿಸನೀಧನೀ | (ಆ) ಸಾಸಾಗಮಾಮಾಧಾಸಾ ಸಗನಿಗಾನಿಗಾನಿಗ ಧರೀಗರೀರಿಗಾರಿರೀಗ ಮಮಮಧಮಮಮ ಧರೀಗಸಾಸಾಸಾ ಸನೀಗಾರೀಗಾ ನಿನಿಧಾಮಾಧಾನಿಧಾಸನೀಗಾ ರೀಮಮರಿಸಾ ನಿಧಾನಿಸಾಸಾ | (ವೇಗರಂಜೀ)                                                                                             3

[i ಛೇವಾಟೀ]

೭೮೩   ಷಡ್ಜಾದ್ಯಂತಸಮಾಯುಕ್ತಾ ಸಂಪೂರ್ಣಾ ಮಧ್ಯಮೋಜ್ವಲಾ |
ಷಡ್ಜಮಧ್ಯಮಸಂವಾದೋ ದ್ವಿಶ್ರುತೀನಾಂ ಪರಸ್ಪರಮ್ ||
ಮೂಲಭಾಷಾ ತು ವಿಜ್ಞೇಯಾ ಛೇವಾಟೀ ಗೇಯವೇದಿಭಿಃ                                                                  || ೪೩ ||

೭೮೪   ಉದಾಹರಣಂ – (ಅ) ಸಾಗಾಗಪಾ | (ಆ) ಪಾಮಪಾಮಗಮಾಮಾ ರೀಗಸಾಸಾ ಸಾಸಮಾಗಪಾಪಾ | (ಇ) ಪಾದನೀಧಾ | (ಈ) ಮಪಾಪಾಮಾಪಾಮಾಮಾಮಗಾಸ ಸಾರಿಧಾನಿಸಾಸಾ ಸಧಾನೀಗಾರೀಗಾಮಾಪಾಗಾನಿಸಾ ನೀಗಾರೀನಿಸಾಸಾ | (ಉ) ನಿಧಾಪಾಮಾಗಾರೀಗಾಸಾ | (ಊ) ಮಾನೀಧನೀಧಾಸಾ | (ಛೇವಾಟೀ)                                                                                                 4

[v ಮಾಲ(ವ)ವೇಸರೀ]

೭೮೫   ಷಡ್ಜನ್ಯಾಸಾ ನಿಷಾದಾಂಶಾ ದುರ್ಬಲಾ ಪಂಚಮೇನ ತು |
ಷಡ್ಜಗಾಂಧಾರಸಂವಾದಃ ಷಡ್ಜಮಧ್ಯಮಯೋಸ್ತಥಾ |
ಭಾಷೇಯಂ ಷಾಡವಾ ಜ್ಞೇಯಾ ಮೂಲಾಖ್ಯಾ ಮಾಲವೇಸರೀ                                                              || ೪೪ ||

೭೮೬   ಉದಾಹರಣಂ – (ಅ) ನಿಧಾನಿನೀಸರಿಸಾಸಾ ಗಾಮಾಗಾಧಾರಿಸಮಾಮಾಸಾ ಗಾಸಾರಿಸಾಸಾಗಧಾರಿಸಾ | (ಆ) ಗಾಮಾಧಾಮಾ ಮಾಗಾಧಾಗಾ | (ಇ)ಸಾಸಾಸಾ | (ಮಾಲ(ವ)ವೇಸರೀ)                                                                                                       5

ಪಾಠವಿಮರ್ಶೆ : ೭೮೦ಅ,ಆ ೭೮೧ಆ ೭೮೨ಅ ೭೮೩ಉ,ಉಊ ೭೮೪ ಆ, ಈ, ಊ ೭೮೫ ಆ,ಉ,ಊ

—-

[iii ವೇರಂಜಿಕಾ]

೭೮೦   ವೇರಂಜಿಕಾ(ಭಾಷಾರಾಗ)ವು ಗಾಂಧಾರವನ್ನು ಅಂಶವಾಗಿಯೂ ಪಂಚಮವನ್ನು ಅಲ್ಪವಾಗಿಯೂ (ಹೊಂದಿರುವಂತಹದು) ಎಂದು ತಿಳಿಯಬೇಕು. (ಅದನ್ನು) ಷಡ್ಜವು ನ್ಯಾಸವಾಗಿರುವಂತೆ ಮಾಡಬೇಕು, ಷಡ್ಜ-ಧೈವತಗಳಲ್ಲಿಯೂ ಹಾಗೆಯೇ-        ೪೧

೭೮೧   ಗಾಂಧಾರ- ರಿಷಭಗಳಲ್ಲಿಯೂ ಪರಸ್ಪರ ಸಂಚಾರವಿರುವಂತೆ ಪ್ರಯೋಗಿಸಬೇಕು. ಹೀಗೆ ಈ ಭಾಷಾ(ಇರುತ್ತದೆ) ಎಂದು ತಿಳಿದುಕೊಳ್ಳಬೇಕು. ಇದನ್ನು ಷಾಡವವೆಂದು ಹೇಳಿದೆ.                                                                                                         ೪೨

೭೮೨   ಉದಾಹರಣೆ – (ಅ) ಗಾನಿಗಾಗಾ ಧರಿಮಾಮಾಗಾ ಮಾಮಾಗಾರೀಗಾಸಸಾಸಾ ನಿಗಾರೀನಿನಿಧಾಧಾಧನಿಗಾರೀಮಾಗಾರಿಸನೀಧನೀ | (ಆ) ಸಾಸಾಗಮಾಮಾಧಾಸಾ ಸಗನಿಗಾನಿಗಾನಿಗ ಧರೀಗರೀರಿಗಾರಿರೀಗ ಮಮಮಧಮಮಮ ಧರೀಗಸಾಸಾಸಾ ಸನೀಗಾರೀಗಾ ನಿನಿಧಾಮಾಧಾ-ನಿಧಾಸನೀಗಾ ರೀಮಮರಿಸಾ ನಿಧಾನಿಸಾಸಾ | (ವೇಗರಂಜೀ)                                                                          3

[ivಛೇವಾಟೀ]

೭೮೩   ಛೇವಾಟಿಯು ಷಡ್ಜವನ್ನು ಗ್ರಹನ್ಯಾಸಗಳನ್ನಾಗಿ ಹೊಂದಿದೆ, ಸಂಪೂರ್ಣ (ರಾಗ), ಮಧ್ಯಮವು ಅದರಲ್ಲಿ ಉಜ್ಜ್ವಲ (=ಬಹುಲ)ವಾಗಿದೆ. ಷಡ್ಜಮಧ್ಯಮಗಳಲ್ಲಿ ಸಂವಾದ(=ಸಂಗತಿ)ವಿದೆ, ಎರಡು ಶ್ರುತಿಗಳನ್ನುಳ್ಳ (=ಗಾಂಧಾರನಿಷಾದ)ಸ್ವರಗಳಲ್ಲಿ ಪರಸ್ಪರ ಗಮನವಿದೆ, ಅದು ಮೂಲಾ ಎಂಬ ಭಾಷಾವರ್ಗದ್ದು ಎಂದು ಹಾಡುಬಲ್ಲವರು ತಿಳಿಯಬೇಕು.                                                              ೪೩

೭೮೪   ಉದಾಹರಣೆ – (ಅ) ಸಾಗಾಗಪಾ | (ಆ) ಪಾಮಪಾಮಗಮಾಮಾ ರೀಗಸಾಸಾ ಸಾಸಮಾಗಪಾಪಾ | (ಇ) ಪಾಧನೀಧಾ (ಈ) ಮಪಾಪಾಮಾಪಾಮಾಮಾಮಗಾಸ ಸಾರಿಧಾನಿಸಾಸಾ ಸಧಾನೀಗಾರೀಗಾಮಾಪಾಗಾನಿಸಾ ನೀಗಾರೀನಿಸಾಸಾ | (ಉ) ನಿಧಾಪಾಮಾಗಾರೀಗಾಸಾ | (ಊ) ಮಾನೀಧನೀಧಾಸಾ | (ಛೇವಾಟೀ)                                                                                                4

[v ಮಾಲ(ವ)ವೇಸರೀ]

೭೮೫   ಮಾಲವೇಸರೀಯು ಷಡ್ಜವನ್ನು ನ್ಯಾಸವಾಗಿಯೂ ನಿಷಾದವನ್ನು ಅಂಶವಾಗಿಯೂ, ಪಂಚಮವನ್ನು ದುರ್ಬಲವಾಗಿಯೂ, ಷಡ್ಜಗಾಂಧಾರಗಳಲ್ಲಿ ಸಂವಾದ(=ಸಂಗತಿ)ವನ್ನೂ, ಷಡ್ಜಮಧ್ಯಮಗಳಲ್ಲಿ ಸಂವಾದವನ್ನೂ ಹೊಂದಿರುವ ಷಾಡವ(ರಾಗ); ಮೂಲಾ (ವರ್ಗದ) ಭಾಷಾ ಎಂದು ತಿಳಿಯಬೇಕು.                                                                                                              ೪೪

೭೮೬   ಉದಾಹರಣೆ – (ಅ) ನಿಧಾನಿನೀ ಸರಿಸಾಸಾಗಾಮಾಗಾಧಾರಿಸಮಾಮಾಸಾ ಗಾಸಾರಿಸಾಸಾಗಧಾರಿಸಾ | (ಆ) ಗಾಮಾಧಾಮಾ ಮಾಗಾಧಾಗಾ | (ಇ)ಸಾಸಾಸಾ- (ಮಾಲ(ವ) ವೇಸರೀ)                                                                                                      5

____

[vi ಗುರ್ಜರೀ]

೭೮೭   ನಿಷಾದಾಂಶಾ ಚ ಷಡ್ಜಾಂತಾ ಸಂಪೂರ್ಣ ಷಡ್ಜಮಧ್ಯಯೋಃ |
ಸಂಗ[ತಿಸ್‌]ತತ್ರ ವಿಜ್ಞೇಯಾ ಪಂಚಮರ್ಷಭಯೋಸ್ತಥಾ |
ದೇಶಭಾಷಾತ್ರ ವಿಖ್ಯಾತಾ ಗುರ್ಜರೀ ಪರಮೋಜ್ಜ್ವಲಾ                                                                             ೪೫

೭೮೮   ಉದಾಹರಣಂ – (ಅ) ನಿಸಾಸಾನಿಪಾಪಾನೀಧಾನೀನೀ ಸಾನೀಸಾಸಾ | (ಆ) ಸಾರಿಸಾರಿರಿ | (ಇ) ಸಾಮಾಗಾ | (ಈ) ರಿರಿ | (ಉ) ನೀನೀನಿ | (ಊ) ಪಾಪಾಪಾ | (ಋ) ನಿಧಾನಿ | (ೠ) ನೀಗಾಸಾ | (ಗುರ್ಜರೀ)                                                              6

[vii ಸೌರಾಷ್ಟ್ರೀ]

೭೮೯   ನಿಷಾದಾಂಶಾ ತು ಷಡ್ಜಾಂತಾ ಸಂಪೂರ್ಣಾ ನಿತ್ಯಮೇವ ಹಿ
ಸೌರಾಷ್ಟ್ರಿಕಾ ತು ಭಾಷೇಯಂ ದೇಶಾಖ್ಯಾ ಗೀಯತೇ ಜನೈಃ                                                                        ೪೬

೭೯೦   ಉದಾಹರಣಂ – (ಅ) ನಿನಿಧಾನಿನಿಸಾಸಾ ನಿರಿಗಾಸಾಸಾ ಸಾಗಾಗಾಸಾ ಧನಿನಿನಿ | ಧಾಮಾಮಾನಿನಿ ನಿನಿಧಾಸಾಸಾಗಾಸಾಸಾಗಾ ಸಾಸಧಾನಿಧಾನಿಧಾ ಮಾಮಾಮಾರಿ- ಗಾಸಾಸಾ ಗಾಸನೀಸಾಸಾಸಾ | (ಸೌರಾಷ್ಟ್ರೀ)                                              7

[viii ಸೈಂಧವೀ]

೭೯೧   ಸೈಂಧವೀ ಮಧ್ಯಮಾಂಶಾ ತು ಷಡ್ಜಾಂತಾ ಧೈವತೋಜ್ಜ್ವಲಾ
ಸುಸಂಪೂರ್ಣಸ್ವರಾ ಹ್ಯೇಷಾ ಷಡ್ಜಧೈವತಯೋಸ್ತಥಾ                                                                    || ೪೭ ||

೭೯೨   ಗಾಂಧಾರಮಧ್ಯಮಾನಾಂ ತು ಗಮನಂ ದೃಶ್ಯತೇ ಘನಮ್ |
ದೇಶಭಾಷಾ ತು ದೇಶಾಖ್ಯಾ ಸೈಂಧವೀ ಟಕ್ಕರಾಗಜಾ                                                                       || ೪೮ ||

೭೯೩   ಉದಾಹರಣಂ – (ಅ) ಮಾಮಾಸಾಸಾ | (ಆ) ಸನೀನೀನೀನೀಧಾಧಾಸರಿಸಾ | ನೀಧಾಧಾಧರಿನಿಧಾಧಾ | (ಇ) ಧಾನಿಸಾಗಾರೀಮಾ | (ಈ) ಮಾಮಾ ಗಮಾಗಾಮಾಸಾಧಾಸಾರೀಮಾಮಾಮಾಸಾ ರಿಗಾಮಾಪಾಪಾಧಾನಿಪಧಾಪಾಮಾ ಗಾರೀರೀನಿರಿ ಧಾಧಾಧನೀಸಾ ರೀಗಾಮಾಮಾಗಾಮಾಮಾ ಗಾಮಾಮಾ ಮಾಸಾಸಾ | (ಸೈಂಧವೀ)                                                                8

ಪಾಠವಿಮರ್ಶೆ : ೭೮೨ಇಈ,ಉಊ ೭೮೮ಊ ೭೮೯ಅ,ಇಈ ೭೯೦ಅ ೭೯೧ಅ ೭೯೨ಅಆ, ಅಆ, ಇಈ

—-

[vi ಗುರ್ಜರೀ]

೭೮೭   ಗುರ್ಜರಿಯು ನಿಷಾದವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ ಹೊಂದಿದ್ದು ಸಂಪೂರ್ಣ (ಸ್ವರಗಳನ್ನುಳ್ಳ ರಾಗ); ಷಡ್ಜ-ಮಧ್ಯಮಗಳಲ್ಲಿಯೂ ಪಂಚಮ-ರಿಷಭಗಳಲ್ಲಿಯೂ ಅದರಲ್ಲಿ ಸಂಗವಿದೆ. ಅತ್ಯಂತ ಪ್ರಕಾಶಮಾನವಾದ ಇದು ದೇಶಜಾ ಬಾಷಾ (=ಗುರ್ಜರ ದೇಶದಲ್ಲಿ ಹುಟ್ಟಿದ್ದು) ಎಂದು ಹೆಸರುವಾಸಿಯಾಗಿದೆ.                                                                            ೪೫

೭೮೮   ಉದಾಹರಣೆ – (ಅ) ನಿಸಾಸಾನಿಪಾಪಾನೀಧಾನೀನೀ ಸಾನೀಸಾಸಾ (ಆ) ಸಾರಿಸಾರಿರಿ | (ಇ) ಸಾಮಾಗಾ | (ಈ) ರಿರಿ | (ಉ) ನೀನೀನೀ | (ಊ) ಪಾಪಾಪಾ | (ಋ) ನಿಧಾನಿ | (ೠ) ನೀಗಾಸಾ | (ಗುರ್ಜರೀ)                                                                       6

[vii ಸೌರಾಷ್ಟ್ರೀ]

೭೮೯   ಸೌರಾಷ್ಟ್ರಿಯು ನಿಷಾದವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ ಹೊಂದಿದೆ; ಯಾವಾಗಲೂ ಸಂಪೂರ್ಣ(ರಾಗ)ವಾಗಿಯೇ ಇರುತ್ತದೆ. ಈ ಭಾಷಾ (ರಾಗವು) ಸೌರಾಷ್ಟ್ರದೇಶದ ಹೆಸರಿನದು ಎಂದು ಜನಗಳು ಹಾಡುತ್ತಾರೆ.                           ೪೬

೭೯೦   ಉದಾಹರಣೆ – (ಅ) ನಿನಿಧಾನಿನಿಸಾಸಾ ನಿರಿಗಾಸಾಸಾ ಸಾಗಾಗಾಸಾ ಧನಿನಿನಿ | ಧಾಮಾಮಾನಿನಿ ನಿನಿಧಾಸಾಸಾಗಾಸಾಸಾಗಾಸಾಸಧಾನಿಧಾನಿಧಾಮಾಮಾಮಾರಿಗಾಸಾಸಾ ಗಾಸನೀಸಾಸಾಸಾ | (ಸೌರಾಷ್ಟ್ರೀ)                7

[viii ಸೈಂಧವೀ]

೭೯೧   ಸೈಂಧವಿಯು ಮಧ್ಯಮವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ ಧೈವತವನ್ನು ಉಜ್ಜ್ವಲ (=ಬಹುಲ)ವಾಗಿಯೂ ಪಡೆದಿದ್ದು (ಎಲ್ಲಾ) ಸ್ವರಗಳಿಂದ ಸಂಪೂರ್ಣವಾಗಿದೆ. ಷಡ್ಜಧೈವತಗಳಲ್ಲಿಯೂ ಹಾಗೆಯೇ-                            ೪೭

೭೯೨   ಗಾಂಧಾರ-ಮಧ್ಯಮಗಳಲ್ಲಿಯೂ (ಪರಸ್ಪರ) ಸಂಗವು ಹೆಚ್ಚಾಗಿ ಕಂಡುಬರುತ್ತದೆ. ಟಕ್ಕ ರಾಗದಲ್ಲಿ ಹುಟ್ಟಿರುವ (ಈ) ಸೈಂಧವಿಯು (ಸೈಂಧವ) ದೇಶದ ಹೆಸರಿನದಾಗಿದ್ದು ದೇಶಜಾ ವರ್ಗದ ಭಾಷಾರಾಗವಾಗಿದೆ.                                                  ೪೮

೭೯೩   ಉದಾಹರಣೆ – (ಅ) ಮಾಮಾಸಾಸಾ | (ಆ) ಸನೀನೀನೀನೀಧಾಧಾಸರಿಸಾ ನೀಧಾಧಾಧರಿನಿಧಾಧಾ | (ಇ) ಧಾನಿಸಾಗಾರೀಮಾ | (ಈ) ಮಾಮಾ ಗಮಾಗಾಮಾಸಾಧಾಸಾರೀಮಾಮಾಮಾಸಾ ರಿಗಾಮಾಪಾಪಾಧಾನಿಪಧಾಪಾಮಾ ಗಾರೀರೀನಿರಿನಿ ಧಾಧಾಧನೀಸಾ ರೀಗಾಮಾಮಾಗಾಮಾಮಾ ಗಾಮಾಮಾ ಮಾಸಾಸಾ | (ಸೈಂಧವೀ)                                                                                                    8

೭೯೩ಅ

____

[ix ವೇಸರಿಕಾ]

೭೯೪   ಷಡ್ಜಾದ್ಯಂತಸಮಾಯುಕ್ತಾ ಪಂಚಮೇನ ವಿವರ್ಜಿತಾ |
ಧೈವತನಿಷಾದಯೋಶ್ಚ ಷಡ್ಜಧೈವತಯೋಸ್ತಥಾ                                                                 || ೪೯ ||

೭೯೫   ಪರಸ್ಪರಂ ತು ಗಮನಂ ದೃಶ್ಯತೇ ಚ ಕ್ಷಣೇ ಕ್ಷಣೇ |
ಭಾಷೇಯಂ ಷಾಡವಾ ಜ್ಞೇಯಾ ವೇಸರಿಕಾ ಪ್ರಯೋಕ್ತೃಭಿಃ                                                        || ೫೦ ||

೭೯೬   ಉದಾಹರಣಂ – (ಅ) ಸಾಸಾ | (ಆ) ಸಾಧನಿ | (ಇ) ಧಾಸಾಸಾಸಾ ಮಾಮಾ ಗಾಮಾ ಗಾಮಾಸಾಧಾ ಮಾಗರೀಸಾಸಾಸಾ | (ವೇಸರಿಕಾ)   9

[x ಪಂಚಮಾ(+ ಖ್ಯಾ?)]

೭೯೭   ಪಂಚಮಾಂಶಾ ತು ಷಡ್ಜಾಂತಾ ಸಂಪೂರ್ಣಾ ಲೋಕರಂಜಿಕಾ |
ಪಂಚಮರ್ಷಭಸಂವಾದಃ ಷಡ್ಜಮಧ್ಯಮಯೋಸ್ತಥಾ |
ಭಾಷೇಯಂ ಪಂಚಮಾಖ್ಯಾ ತು ಸಂಪೂರ್ಣಾ(!ಸಂಕೀರ್ಣಾ) ಸಮುದಾಹೃತಾ                                                    ೫೧

೭೯೮   ಉದಾಹರಣಂ – (ಆ) ಪಾಪಾಪಾರಿಪಾ | (ಆ) ರಿಪಾಪಾಪಾಪಮಾಪಾಪಾಮ ಪಮಾ ಸಾಸಾಸರೀರೀರೀ | (ಇ) ನಿಧಾಧಪಾಪಾ | (ಈ) ಪಸಾಮಾಮಾರಿರೀಗ ಗರಿಸಪಾ ಪಗಾರಿಸಾಗಾರಿಸಾರಿಪಾಪಾರಿರಿಗಾರಿ | (ಉ) ಗಾಧಾಮಾಗಾರಿರಿ ಧಪ ರಿಗಸಾಸಾ | (ಪಂಚಮಾ?+ಖ್ಯಾ)        10

[xi ರವಿಚಂದ್ರಿಕಾ]

೭೯೯   ಮಧ್ಯಮಂದ್ರಾ ತು ಷಡ್ಜಾಂತಾ ಗಾಂಧಾರಾಂಶಾಲ್ಪಸಪ್ತಮಾ |
ಋಷಭಗಾಂಧಾರಯೋಸ್ತು ಷಡ್ಜಮಧ್ಯಮಮಯೋಸ್ತಥಾ                                                                || ೫೨ ||

೮೦೦   ಪರಸ್ಪರಂ ತು ಗಮನಂ ಯತ್ರ ತತ್ ಸಂಪ್ರಯೋಜಯೇತ್ |
ಸಾ ಸಂಕೀರ್ಣಾ sಥ ವಿಜ್ಞೇಯಾ ಭಾಷಾ ವೈ ರವಿಚಂದ್ರಿಕಾ                                                                           ೫೩

೮೦೧   ಉದಾಹರಣಂ – (ಅ) ಗಾಗಾಗಾಮಾ | (ಆ) ಸಾಸಾ | (ಇ) ಮಾಗಾಮಾಮಾ ಗಾಮಾಸಾಸಾಸಾ | (ಈ) ಗಾಗಾಧಾನಿಸಾ ಸಾಗಾಧನಿಸಾ ಧಾಧಾಮಾರೀ ಮಾಗಾ ರೀಗಸಾ

ಪಾಠವಿಮರ್ಶೆ : ೭೯೫ಈ ೭೯೭ಊ ೭೯೮ಉ ೭೯೯ಇಈ, ಇ ೮೦೦ಇ, ಇಈ ೮೦೧ಅ

—-

[ix ವೇಸರಿಕಾ]

೭೯೪   ಷಡ್ಜವನ್ನು ಗ್ರಹನ್ಯಾಸಗಳಾಗಿ ಹೊಂದಿ, ಪಂಚಮವು ಲೋಪವಾಗಿದ್ದು, ಧೈವತನಿಷಾದಗಳಲ್ಲಿಯೂ ಹಾಗೆಯೇ ಷಡ್ಜ-ಧೈವತಗಳಲ್ಲಿಯೂ –                                                                                                                      ೪೯

೭೯೫   ಪರಸ್ಪರ ಸಂಚಾರವು ಕ್ಷಣಕ್ಷಣಕ್ಕೂ ಕಂಡುಬಂದು ಇರುವ ಈ ವೇಸರಿಕಾ ಭಾಷಾ ರಾಗವು ಷಾಡವನೆಂದು ಗಾಯಕವಾದಕರು ತಿಳಿಯಬೇಕು.          ೫೦

೭೯೬   ಉದಾಹರಣೆ – (ಅ) ಸಾಸಾ | (ಆ) ಸಾಧನಿ | (ಇ) ಧಾಸಾಸಾಸಾ ಮಾಮಾಗಾಮಾ ಗಾಮಾಸಾಧಾ ಮಾಗಾರೀಸಾಸಾ | (ವೇಸರಿಕಾ)        9

[x ಪಂಚಮಾ(+ ಖ್ಯಾ?]

೭೯೭   ಪಂಚಮವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ, ಹೊಂದಿದ್ದು ಜನರನ್ನು ರಂಜಿಸುವುದಾಗಿಯೂ ಸಂಪೂರ್ಣ (ರಾಗ)ವಾಗಿಯೂ ಇರುವ, ಪಂಚಮ-ರಿಷಭ ಗಳಲ್ಲಿಯೂ ಷಡ್ಜ-ಮಧ್ಯಮಗಳಲ್ಲಿಯೂ ಸಂವಾದ(=ಸಂಗತಿ)ವಿರುವ ಈ ಪಂಚಮಾ (-ಖ್ಯಾ) ಎಂಬ ಭಾಷಾರಾಗವು ಸಂಕೀರ್ಣವರ್ಗದ್ದೆಂದು ಹೇಳಿದೆ.                                                                                      ೫೧

೭೯೮   ಉದಾಹರಣೆ – (ಅ) ಪಾಪಾಪಾರಿಪಾ | (ಆ) ರಿಪಾಪಾಪಾಪಮಾಪಾಪಾಮಪಮಾ ಸಾಸಾಸರೀರೀರಿ (ಇ) ನಿಧಾಧಪಾಪಾ | (ಈ) ಪಸಾಮಾಮಾರಿರೀಗಗರಿಸಪಾ ಪಗಾರಿಸಾಗಾರಿಸಾರಿ ಪಾಪಾರಿರಿಗಾರಿ | (ಊ) ಗಾಧಾಮಾಗಾರಿರಿ ಧಪರಿಗಸಾಸಾ | (ಪಂಚಮಾ+ಖ್ಯಾ?)           10

[xi ರವಿಚಂದ್ರಿಕಾ]

೭೯೯   ಮಧ್ಯ ಮತ್ತು ಮಂದ್ರ(ಸ್ಥಾಯಿ)ಗಳಲ್ಲಿ ವ್ಯಾಪ್ತಿಯಿರುವ (ಅಥವಾ ಮಧ್ಯಮವು ಮಂದ್ರ ಸ್ವರವಾಗಿರುವ), ಷಡ್ಜವು ನ್ಯಾಸವಾಗಿರುವ, ಗಾಂಧಾರವು ಅಂಶವಾಗಿರುವ, ಏಳನೆಯ (=ನಿಷಾದ)ಸ್ವರವು ಅಲ್ಪವಾಗಿರುವ, ರಿಷಭ-ಗಾಂಧಾರಗಳಲ್ಲಿಯೂ ಹಾಗೆಯೇ ಷಡ್ಜ-ಮಧ್ಯಮಗಳಲ್ಲಿಯೂ-                                                                                                                     ೫೨

೮೦೦   – ಪರಸ್ಪರ ಸಂಚಾರವಿರುವ ಹಾಗೆ ಎಲ್ಲಿ ಪ್ರಯೋಗವಿದೆಯೋ ಅಂತಹ ಭಾಷಾ ರಾಗವನ್ನು ರವಿಚಂದ್ರಿಕಾ ಎಂದೂ ಅದು ಸಂಕೀರ್ಣವರ್ಗದ್ದೆಂದೂ ತಿಳಿಯಬೇಕು.                                                                                                  ೫೩

೮೦೧   ಉದಾಹರಣೆ – (ಅ) ಗಾಗಾಮಾಮಾ | (ಆ) ಸಾಸಾ | (ಇ) ಮಾಗಾಮಾಮಾಗಾ ಮಾಸಾಸಾಸಾ | (ಈ) ಗಾಗಾಧಾನಿಸಾ ಸಾಗಾಧನಿಸಾ ಧಾಧಾಮಾರೀ ಮಾಗಾರೀಗಸಾ ಸಾಸಾಸಾಮಾ ಸಾರೀಧಾಧಾಧಾಧಾ ಧಮಾಗರೀಗಾಗಾ ಧಾರೀಸಾ ಸಾಸಾ | (ಉ) ಮಾಗಾಮಾಮಾಗಾ | (ಊ)

____

ಸಾಸಾಸಾಮಾ ಸಾರೀಧಾಧಾಧಾಧಾ ಧಮಾಗರೀಗಾಗಾ ಧಾರೀಸಾಸಾಸಾ | (ಉ) ಮಾಗಾಮಾಮಾಗಾ | (ಊ) ಮಾಸಾಸಾಮಾಗಾ ಧಾಧಾಧಾಪ ರೀಗಮಮರೀಗಮಸಾ ಸಾಸಾಮಾಗಾರೀಧಾ ಧಮಗರಿ ಗಮಧನೀ (ಋ) ಸಾ ಸಾಗಾಧಾನಿಸಾಸಾ | (ರವಿಚಂದ್ರಾ)        10

[xii ಅಂಬಾಹೇರೀ]

೮೦೨   ಮಧ್ಯಮಾಂಶಾ ತು ಷಡ್ಜಾಂತಾ ಬಹುಗಾಂಧಾರಧೈವತಾ |
ಅಸಂಪೂರ್ಣಸ್ವರಾ ನಿತ್ಯಮಂಬಾಹೇರೀ ಪ್ರಕೀರ್ತಿತಾ |
ಭಾಷೇಯಂ ಪೋಜ್ಝಿತಾ ನಿತ್ಯಂ ದೇಶಾಖ್ಯಾ ಸಂಪ್ರಕೀರ್ತಿತಾ                                                              || ೫೪ ||

೮೦೩   ಉದಾಹರಣಂ – (ಅ) ಮಾಮಾಸಾ | (ಆ) ನೀನೀ | (ಇ) ನಿಧಾಧಾನೀಧಾಧಾನಿ | (ಈ) ಧಾನಿಧಾಧಾನೀ (ಉ) ಸಾಗಾಗಾರೀ | (ಊ) ಸನೀಸನೀಧಾ | (ಋ) ನಿ ಧಾನಿಗಾಗಾ ಮಾಗಾನಿಸಾಸಾನಿ | (ೠ) ಸಾಧಾನೀಗಾ ಗಾನಿಸಾಸಾ | (ಎ) ಸಾನಿ ನೀಸನೀಧಾ ದಾಮಾನೀಮಾ ದಾಸನಿನೀ | (ಏ) ನೀಸಾಧಾನೀಮಾಧಾಧಾಮಾಗಾಸಾ ನಿಸಾನಿಧಾ | (ಐ) ಮಾಧಾಧಾ | (ಒ) ಸಾಧಾನೀಧಾನೀಸಾಸಾ | (ಓ) ಮಾಮಾ ಧಾಸಾ ಸಾಮಾಮಾಗಾರೀಮಾಗಾಸಾಸಾ | (ಔ) ಮಾಸಾಮಾಮಾಗಾರೀಮಾಗಾ ಸಾಸಾ | (ಅಂ) ಮಸಾನೀ ನಿನಿಮಾನಿಧಾಧಾನಿಧಾಮಾಗಾ | (ಅಃ) ಸಾನೀಮಾಧಾ | (ಕ) ಸಾಸನೀಧಾ ಧನಿಸಾಧಾಧಾ | (ಖ) ಧನಿಧಾನೀಸಾ | (ಅಂಬಾಹೇರೀ)                                   12

[xiii ಲಲಿತಾ]

೮೦೪   ಷಡ್ಜಾದ್ಯಂತಸಮಾಯುಕ್ತಾ ಬಹುಮಧ್ಯಮಧೈವತಾ | |
ದ್ವಿಶ್ರುತಿಭ್ಯಾಂ ತು ಗಮನಂ ಹೀನತ್ವಂ ಋಷಭೇಣ ತು | |
ಭಾಷಾ ಷಾಡವಿತಾ ಹ್ಯೇಷಾ ಸಂಕೀರ್ಣಾ ಲಲಿತಾ ಭವೇತ್                                                                  || ೫೫ ||

೮೦೫   ಉದಾಹರಣಂ – (ಅ) ಸಗಾಗಾಧಾಗಾಮಾಮಾಗಾ | (ಆ) ಧಮಧಾನೀಸಾಸಾ | (ಇ) ನಿಧಾಗಾಗಾ | (ಈ) ಸಾಸಾಸಾಮಾಪಾಧಾನೀ ಧಾಪಾಮಾಸಾ ಸಾಧಾಪಾ ಧಾನೀಧಾಧಾಸಾ ನೀಧಾಗಾನೀಗಾಧನೀಸಸಾ | (ಲಲಿತಾ)                                          13

ಪಾಠವಿಮರ್ಶೆ: ೮೦೨ಅ,ಉ ೮೦೩ಅ,ಇ ೮೦೪ಅ,ಇ,ಈ,ಉ,ಊ ೮೦೪ಆ,ಇ,ಈ,ಉ,ಊ ೮೦೫ಇ

—-

ಮಾಸಾಸಾಮಾಗಾ ಧಾಧಾಧಾಪರೀಗಮ ಮರೀಗಮಾಸಾ ಸಾಸಾಮಾಗಾರೀಧಾ ಧಮಗರಿ ಗಮಧನೀ | (ಋ) ಸಾಸಾಗಾಧಾನಿಸಾಸಾ (ರವಿಚಂದ್ರಾ)          11

[xii ಅಂಬಾಹೇರಿ]

೮೦೨   ಅಂಬಾಹೇರೀ ರಾಗವು ಮಧ್ಯಮವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ ಗಾಂಧಾರಧೈವತಗಳನ್ನು ಬಹುವಾಗಿಯೂ ಹೊಂದಿದ್ದು ಯಾವಾಗಲೂ (ಸ್ವರಗಳಲ್ಲಿ) ಅಸಂಪೂರ್ಣವೆಂದು ಹೆಸರುವಾಸಿಯಾಗಿದೆ. (ಏಕೆಂದರೆ) ಇದು ಯಾವಾಗಲೂ ಪಂಚಮವನ್ನು ಬಿಟ್ಟಿರುತ್ತದೆ; ದೇಶಜಾ ವರ್ಗಕ್ಕೆ ಸೇರಿದ ಭಾಷಾ ಎಂದು ಪ್ರಸಿದ್ಧವಾಗಿದೆ.                                                      ೫೪

೮೦೩   ಉದಾಹರಣೆ – (ಅ) ಮಾಮಾಸಾ | (ಆ) ನೀನೀ (ಇ) ನಿಧಾಧಾನೀ ಧಾಧಾನಿ | (ಈ) ಧಾನಿಧಾಧಾನೀ | (ಉ) ಸಾಗಾಗಾರೀ | (ಊ) ಸನೀಸನೀಧಾ | (ಋ) ನಿಧಾನಿಗಾಗಾ ಮಾ- ಗಾನಿಸಾಸಾನಿ | (ೠ) ಸಾಧಾನೀಗಾ ಗಾನಿಸಾಸಾ | (ಎ) ಸಾನಿನೀಸನೀಧಧಾಮಾನೀಮಾಧಾಸನಿನೀ | (ಏ) ನೀಸಾಧಾನೀಮಾಧಾಧಾಮಾಗಾಸಾನಿಸಾನಿಧಾ | (ಐ) ಮಾಧಾಧಾ | (ಒ) ಸಾಧಾನೀ ಧಾನೀಸಾಸಾ (ಓ) ಮಾಮಾಧಾಸಾ ಸಾಮಾಮಾಗಾರೀಮಾಗಾಸಾಸಾ | (ಔ) ಮಾಸಾಮಾಮಾಗಾರೀ ಮಾಗಾ ಸಾಸಾ | (ಅಂ) ಮಸಾನೀ ನಿನಿಮಾನಿಧಾಧಾನಿಧಾಮಾಗಾ | (ಅಃ) ಸಾನೀಮಾಧಾ | (ಕ) ಸಾಸನೀಧಾ ಧನಿಸಾಧಾಧಾ | (ಖ) ಧನಿಧಾನೀಸಾ | (ಅಂಬಾಹೇರಿ)                                    12

[xiii ಲಲಿತಾ]

೮೦೪   ಲಲತಾ (ಭಾಷಾರಾಗವು) ಗ್ರಹ ಮತ್ತು ನ್ಯಾಸವಾಗಿರುವ ಷಡ್ಜದಿಂದ ಕೂಡಿದೆ; ಅದರ ಮಧ್ಯಮಧೈವತಗಳು ಬಹುವಾಗಿವೆ ; ಎರಡು ಶ್ರುತಿಗಳನ್ನುಳ್ಳ (=ಗಾಂಧಾರನಿಷಾದ) ಸ್ವರಗಳಲ್ಲಿ ಪರಸ್ಪರ ಸಂಚಾರವಿದೆ ; ಅದರ ರಿಷಭವು ಲೋಪವಾಗಿದೆ. (ಆದುದರಿಂದ) ಇದು ಷಾಡವಿತವಾಗಿದೆ ; ಈ ಭಾಷಾರಾಗವು ಸಂಕೀರ್ಣಾವರ್ಗದ್ದು.                                                                      ೫೫

೮೦೫   ಉದಾಹರಣೆ – (ಅ) ಸಗಾಗಾಧಾಗಾಮಾಮಾಗಾ | (ಆ) ಧಮಧಾನೀಸಾಸಾ | (ಇ) ನಿಧಾಗಾಗಾ | (ಈ) ಸಾಸಾಸಾಮಾಪಾಧಾನೀ ಧಾಪಾಮಾಸಾ ಸಾಧಾಪಾಧಾನೀಧಾಧಾಸಾ ನೀಧಾಗಾನೀಗಾಧನೀಸಸಸಾ | (ಲಲಿತಾ)                                         13

____

[xivಕೋಲಾಹಲೀ]

೮೦೬   ಷಡ್ಜಾದ್ಯಂತಸಮಾಯುಕ್ತಾ ಪಂಚಮೇನ ವಿವರ್ಜಿತಾ |
ವಿರಹಿತಾ ಸಪ್ತಮೇನ ಷಡ್ಜೇ ಮಧ್ಯಮಸಂಗತಾ                                                                    || ೫೬ ||

೮೦೭   ಭಾಷಾ ಔಡುವಿತಾ ತತ್ರ ಸಂಕೀರ್ಣಾ ಟಕ್ಕರಾಗಜಾ |
ಕೋಲಾಹಲೀ ತು ವಿಖ್ಯಾತಾ ಗೀಯತೇ ಗಾನವೇದಿಭಿಃ                                                             || ೫೭ ||

೮೦೮   ಉದಾಹರಣಂ – (ಅ) ಸಾಮಾಸಾಮಾ | (ಆ) ಮಾಮಾಗಾಧಾಮಾಗಾರಿಸಾಸಾ | (ಇ) ಧಾಸಾಗಾಗಾರಿಸಾಸಾ ಮಾಧಾಸಾಸಾರಿರೀರಿಗಾಗಾ ಮಾಮಾ ಗಾರೀ ಗಾಧಾ ಮಾರೀಸಾಸಾ | (ಈ)ಧಾರೀ1ಸಾಸಾಮಾಧರೀಮಾಧರೀರೀ2 ಧಾಧಾ3ಗರೀಗಾಸಾಸಾ ಸಾಮಾಗಾರೀಸಾಸಾಗಾರೀ ಮಾಗಾರೀ4ಸಾ ಧಾಧಾಮಾಗಾರೀಸಾ | (ಕೋಲಾಹಲೀ)                                                                            14

೮೧೦   ಉದಾಹರಣಂ – (ಅ) ಮಾಧಾನೀ | (ಆ) ಗಾಧಾನೀ | (ಇ) ಸಾನೀಧಾ | (ಈ) ಮಾಮಾಮಾಧಾನೀಮಾಧಾನೀಸಾಸಾಮಾಧಾನೀ | (ಉ) ಮಾ | (ಊ) ಧಾನೀನೀ | (ಋ) ಧಾಪಾಗಾರೀಗಾಸಾಸಾ | (ೠ) ಗಾಸಾಸಾ | (ಎ) ನೀನೀಸಾನೀ | (ಏ) ಧಾಧಾ | (ಐ) ನಿಧಾಮಾಮಾಮಾಧಾನೀಧಾಮಾಮಾ, ದನೀಮಾಧಾನೀಸಾಸಾ | (ಮಧ್ಯಮ ಗ್ರಾಮ(ದೇಹಾ))                            ೧೫

[xviಗಾಂಧಾರಪಂಚಮೀ]

೮೧೧   ಧೈವತಾಂಶಾ ತು ಷಡ್ಜಾಂತಾ ಗಾಂಧಾರಸರ್ವರಭೂಷಿತಾ |
ಗಾಂಧಾರಪಂಚಮೀ ಜ್ಞೇಯಾ ಷಡ್ಜಮಧ್ಯಮಸಂಯುತಾ |
ಪೂರ್ಣಾ ಭಾಷಾ ಚ ಸಂಕೀರ್ಣಾ ಗೀಯತೇ ನಾಗಕಿನ್ನರೈಃ                                                          || ೫೯ ||

ಪಾಠವಿಮರ್ಶೆ : ೮೦೬ಇ ೮೦೭ಅ ೮೦೮ಈ ೮೦೯ಆ,ಇ,ಉ ೮೧೦ ೮೧೧ಉ,ಊ

—-

[xiv ಕೋಲಾಹಲೀ]

೮೦೬   ಗ್ರಹ ಮತ್ತು ನ್ಯಾಸವಾಗಿರುವ ಷಡ್ಜದೊಡನೆ ಕೂಡಿರುವ, ಪಂಚಮ ಮತ್ತು ಏಳನೆಯ ಸ್ವರ(=ನಿಷಾದ)ವನ್ನು ಬಿಟ್ಟುಬಿಟ್ಟಿರುವ, ಷಡ್ಜ –ಮಧ್ಯಮಗಳಲ್ಲಿ ಸಂಗವಿರುವ-                                                                                                           ೫೬

೮೦೭   ಕೋಲಾಹಲೀ ಭಾಷಾ(ರಾಗವು) ಔಡುವಿತವಾಗಿದೆ ; ಟಕ್ಕ(ವೆಂಬ ಗ್ರಾಮ-)ರಾಗದಲ್ಲಿ ಹುಟ್ಟಿದ ಈ ಭಾಷಾ(ರಾಗ)ವು ಸಂಕೀರ್ಣ ವರ್ಗದ್ದಾಗಿದ್ದು ಹಾಡುಬಲ್ಲವರು (ಅದನ್ನು ಹೀಗೆ) ಹಾಡುತ್ತಾರೆ.                                                          ೫೭

೮೦೮   ಉದಾಹರಣೆ – (ಅ) ಸಾಮಾಸಾಮಾ | (ಆ) ಮಾಮಾಗಾಧಾಮಾಗಾರಿಸಾಸಾ | (ಇ) ಧಾಸಾಗಾಗಾರಿಸಾಸಾ ಮಾಧಸಾಸಾರಿರೀರಿಗಾಗಾ ಮಾಮಾ ಗಾರೀ ಗಾಧಾ ಮಾರೀಸಾಸಾ | (ಈ) ಧಾರೀ1 ಸಾಸಾಮಾಧರೀಮಾಧರೀರೀ2ಧಾಧಾ3ಗರೀಗಾಸಾಸಾ ಸಾಮಾಗಾರೀಸಾಸಾಗಾರೀ ಮಾಗಾರೀ4ಸಾ ಧಾಧಾಮಾಗಾರೀಸಾ | (ಕೋಲಾಹಲೀ)                                                                            14

[xv ಮಧ್ಯಮಗ್ರಾಮ(ದೇಹಾ)]

೮೦೯   ಮಧ್ಯಮಗ್ರಾಮ(ದೇಹ)ವು ಮಧ್ಯಮವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ ಷಡ್ಜ-ಮಧ್ಯಮಗಳಲ್ಲಿ ಸಂಗವನ್ನೂ ಪಡೆದಿದೆ. (ಇದು) ಯಾವಾಗಲೂ ಸಂಪೂರ್ಣ (ರಾಗ)ವೆಂದು ಸ್ಮರಿಸಲಾಗಿದೆ. ಟಕ್ಕರಾಗದಲ್ಲಿ ವ್ಯವಸ್ಥೆಯನ್ನು ಪಡೆದಿರುವ ಇದು ಯಾವಾಗಲೂ ಸಂಕೀರ್ಣಾವರ್ಗದ ಭಾಷಾ ಆಗಿದೆ.                                                                                                        ೫೮

೮೧೦   ಉದಾಹರಣೆ- (ಅ) ಮಾಧಾನೀ | (ಆ) ಗಾಧಾನೀ | (ಇ) ಸಾನೀಧಾ | (ಈ) ಮಾಮಾಮಾಧಾನೀಮಾಧಾನೀಸಾಸಾಮಾಧಾನೀ (ಉ) ಮಾ | (ಊ) ಧಾನೀನೀ | (ಋ) ಧಾಪಾಗಾರೀಗಾಸಾಸಾ | (ೠ) ಗಾಸಾಸಾ | (ಎ) ನೀನೀಸಾನೀ | (ಏ) ಧಾಧಾ | (ಐ) ನಿಧಾಮಾಮಾಮಾಧಾನೀಧಾಮಾಮಾ ಧನೀಮಾ ಧಾನೀಸಾಸಾ | (ಮಧ್ಯಮಗ್ರಾಮ (ದೇಹಾ))                            15

[xvi ಗಾಂಧಾರಪಂಚಮೀ]

೮೧೧   ಗಾಂಧಾರಪಂಚಮಿಯು ಧೈವತವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ ಗಾಂಧಾರಸ್ವರವನ್ನು ಒಡವೆ(=ಬಹುಲ)ಯಾಗಿಯೂ, ಷಡ್ಜ-ಮಧ್ಯಮಗಳಲ್ಲಿ ಸಂಗವನ್ನೂ ಪಡೆದಿದೆ. (ಇದು) (ಸಂ)ಪೂರ್ಣ ಭಾಷಾ(ರಾಗ). (ಇದನ್ನು) ನಾಗರೂ ಕಿನ್ನರರೂ ಸಂಕೀರ್ಣಾ(ವರ್ಗದ ರಾಗ)ವನ್ನಾಗಿ ಹಾಡುತ್ತಾರೆ.                                                                     ೫೯

____

೮೧೨   ಉದಾಹರಣಂ – (ಅ) ಧಧಾಪಾಪಾಧಾಮಾಮಾ | (ಆ) ಧಾಪಾಮಾಮಾ ಧಾಪಾ ಮಾಗಾರೀ | (ಇ) ಗಾಗಾ | (ಈ) ಧಾಪಮಾಗಾಸಾ ಸಾಮಾಸಾನೀ | (ಉ) ಧಾಧಾ | (ಊ) ಮಾಧಾನೀಸಾಸಾ | (ಋ) ಸಾಗಾಗಸಾಗಾಗಧರಿಧಾ ಮಾಮಾಧಾರೀಗಾ ಗಾಮಾಧಾಪಾಮಾಗಾಸಾ ನೀಧಾನೀಸಾಸಾಪಾಸಾ | (ಗಾಂಧಾರಪಂಚಮೀ)                                                                                        16

೮೧೩   ಏತಾಶ್ಚ ಯಾಷ್ಟಿಕಪ್ರೋಕ್ತಾಃ ಟಕ್ಕರಾಗಸ್ಯ ಷೋಡಶ                                                               || ೬೦ ||

[ಟಕ್ಕರಾಗವಿಭಾಷಾ]

[i ಪೋತಾ]

೮೧೪   ಪಂಚಮಾಂಶಾ ತು ಷಡ್ಜಾಂತಾ ಪೋತಾ ಮಧ್ಯಮಭೂಷಿತಾ
ವಿಭಾಷಾ ಟಕ್ಕರಾಗೋತ್ಥಾ ಭಾಷಾಂತೇಷು ಚ ಗೀಯತೇ                                                           || ೬೧ ||

೮೧೫   ಉದಾಹರಣಂ – (ಅ) ಪಾಪಾನೀಸಾಸಾನೀಸಾರೀಮಾ ಧಾರೀಧಾಪಾಪಾಮಾ ಗಾಗಾ | (ಆ) ಸಾಗಾಸಾಗಾಗಾಧರಿಗರಿಗರಿಮಾ | (ಇ) ಮಮಮಗ | (ಈ) ಗರಿ ಸಾನೀ ಧಾಧಾ ಸಾಗಾಗಾ | (ಉ) ಗಾರೀಗಾರೀ | (ಊ) ಸಾಸಾಗಾಮಾ ನೀಧಾಧಾ ಪಾಮಾರೀಸಾಸಾ ಗಾನೀಧಾನೀಸಾಸಾಪಾಸಾ(ಪೋತಾ)          17

[II ಅಥ ಮಾಲವಕೈಶಿಕೇ]

[i. ಪೌರಾಲೀ]

೮೧೬   ಷಡ್ಜಾದ್ಯಂತಸಮಾಯುಕ್ತಾ ಬಹುಲೌ ಷಡ್ಜಮಧ್ಯಮೌ |
ಸುಸಂಪೂರ್ಣಸ್ವರಾ ಜ್ಞೇಯಾ ಪೌರಾಲೀ ದೇಶಸಂಭವಾ |
ಭಾಷೇಯಂ ಪ್ರಥಮಾ ಜ್ಞೇಯಾ ಮಧ್ಯಮೇ ಮಾಲವಕೈಶಿಕೇ                                                       || ೬೨ ||

೮೧೭   ಉದಾಹರಣಂ – (ಅ) ಸಮಾ | (ಆ) ಗಾಗಾಗಾಗಾಪಾಪಾ | (ಇ) ಮಾಮಾಗಾಗಾ | (ಈ) ಸಾಮಾಮಾಮಾ | (ಉ) ಮಾಮಾ | (ಊ) ಮಾಮಾರೀರೀ | (ಋ) ರಿಗಾಗಾರೀಸಾಸಾಸಾರೀ | (ೠ) ಮಗಸಾಸಾಮಾಗಾರೀಸಾನೀ | (ಎ) ಸಾಸಾ | (ಪೌರಾಲೀ)   18

ಪಾಠವಿಮರ್ಶೆ: ೮೧೨ ಅ,ಋ ೮೧೪ಆ ೮೧೫ ಅಆ ೮೧೭ಅ,ಇ,ಈ,ಇಈ

—-

೮೧೨   ಉದಾಹರಣೆ – (ಅ) ಧಾದಾಪಾಪಾಧಾಮಾಮಾ (ಆ) ಧಾಪಾಮಾಮಾ ಧಾಪಾ ಮಾಗರೀ | (ಇ) ಗಾಗಾ | (ಈ) ಧಾಪಮಾಗಾಸಾ ಸಾಮಾಸಾನೀ | (ಉ) ಧಾಧಾ | (ಊ) ಮಾ ಧಾನೀಸಾಸಾ (ಋ) ಸಾಗಾಗಸಾಗಾಗಧರಿಧಾ ಮಾಮಾಧಾರೀಗಾಗಾಮಾಧಾಪಾಮಾಗಾಸಾ ನೀಧಾ ನೀಸಾಸಾವಾಸಾ | (ಗಾಂಧಾರಪಂಚಮೀ)                                                                                                16

೮೧೩   ಇವು ಯಾಷ್ಟಿಕನು ನಿರೂಪಿಸಿದ ಟಕ್ಕರಾಗದ ಹದಿನಾರು (ಭಾಷಾರಾಗಗಳು).                                        ೬೦