[i ಕಾಂಬೋಜಾ]
೮೩೫ ಧೈವತಾದ್ಯಂತಸಂಯುಕ್ತಾ ಕಾಂಬೋಜಾ ಪೂರ್ಣಸುಸ್ವರಾ |
ಷಡ್ಜಧೈವತಸಂವಾದಃ ಪಂಚಮರ್ಷಭಯೋಸ್ತಥಾ |
ಏಷಾ ಭಾಷಾ ತು ದೇಶಾಖ್ಯಾ ಪ್ರಥಮಾ ಕಕುಭೋದ್ಭವಾ || ೭೨ ||
೮೩೬ ಉದಾಹರಣಂ – (ಅ) ಧಾಸಾಗಾಗಾ | (ಆ) ಮಾಗಾರೀಸಾಸಾಸನಿಸಾಸಾ | (ಇ) ಧಾಪಾಪಾ | (ಈ) ಧಾಮಾಸಾಸರಿಗಾ ಮಾಗಾರೀಸಾಸಾ ಸನಿಧಾಧಾ ಪಾಪಾಮಧಾ ನಿರಿಸನಿಧಾಧಾ | (ಕಾಂಬೋಜಾ | ) 27
[ii ಮಧ್ಯಮಗ್ರಾಮಿಕಾ]
೮೩೭ ಮಧ್ಯಮಾಂಶಾ ಧೈವತಾಂತಾ ಪೂರ್ಣಾ ಮಧ್ಯಮಗ್ರಾಮಿಕಾ |
ಪರಸ್ಪರಂ ತು ದೃಶ್ಯೇತೇ ಸಹಿತಾವೃಷಭಧೈವತೌ |
—
ಪಾಠವಿಮರ್ಶೆ : ೮೩೨ಆ, ಉ,ಊ ೮೩೪ಅ ೮೩೫ಅ ೮೩೭ಇ, ಇಈ
—-
[III ಈಗ ಕಕುಭದಲ್ಲಿ ಹುಟ್ಟಿರುವ ಭಾಷಾಗಳ ಲಕ್ಷಣಗಳು]
[i ಕಾಂಬೋಜಾ]
೮೩೫ ಕಾಂಬೋಜಾ ರಾಗವು ಧೈವತವನ್ನು ಗ್ರಹ ಮತ್ತು ನ್ಯಾಸವಾಗಿ ಪಡೆದಿದ್ದು ಸುಸ್ವರಗಳಿಂದ (ಸಂ)ಪೂರ್ಣವಾಗಿದೆ. (ಅದರಲ್ಲಿ) ಷಡ್ಜಧೈವತಗಳಲ್ಲಿಯೂ ಹಾಗೆಯೇ ಪಂಚಮ ರಿಷಭಗಳಲ್ಲಿಯೂ ಸಂವಾದ (=ಪರಸ್ಪರಸಂಚಾರ)ವಿದೆ. ಈ ಭಾಷಾರಾಗವು (ಕಾಂಬೋಜವೆಂಬ) ದೇಶದ ಹೆಸರಿನದು; ಕಕುಭದಲ್ಲಿ ಹುಟ್ಟಿರುವ ಮೊದಲನೆಯ (ಭಾಷಾ) ರಾಗ. ೭೨
೮೩೬ ಉದಾಹರಣೆ – (ಅ) ಧಾಸಾಗಾಗಾ | (ಆ) ಮಾಗಾರೀಸಾಸಾಸನಿಸಾಸಾ| (ಇ) ಧಾಪಾಪಾ | (ಈ) ಧಾಮಾಸಾರಿಗಾ ಮಾಗಾರೀಸಾಸಾ ಸನಿಧಾಧಾ ಪಾಪಾಮಧಾ ನಿರಿಸನಿಧಾಧಾ | (ಕಾಂಬೋಜಾ) 27
[ii ಮಧ್ಯಮಗ್ರಾಮಿಕಾ]
೮೩೭ ಮಧ್ಯಮಗ್ರಾಮಿಕಾರಾಗವು ಮಧ್ಯಮವನ್ನು ಅಂಶವಾಗಿಯೂ ಧೈವತವನ್ನು ನ್ಯಾಸವಾಗಿಯೂ ಹೊಂದಿದೆ. (ಸಂ)ಪೂರ್ಣ (ರಾಗ); ರಿಷಭಧೈವತಗಳು ಪರಸ್ಪರವಾಗಿ ಒಡಗೂಡಿರುವುದು
____
ಏಷಾ ಭಾಷಾ ಚ ಸಂಕೀರ್ಣಾ ರಮ್ಯಾ ಕಕುಭಸಂಭವಾ || ೭೩ ||
೮೩೮ ಉದಾಹರಣಂ – (ಅ) ಮಾಮಾ | (ಆ) ಗರಿಧಾಸಾರೀಸಾಮಾ | (ಇ) ನಿಗರಿ ಸನಿಸಾನಿಧಾ | (ಈ) ಸಾಧಾಸಾಧನಿರಿಸಾ | (ಉ) ಧನಿರಿರಿ | (ಊ) ಮಾಪಾಪಮಾಗಾ | (ಋ) ರಿರಿರಿರಿ | (ೠ) ಗಾಮ | (ಎ) ಗಾಮ | (ಏ) ಧಾಧಾಮಾಪಾ ಮಾಗಾರೀಸಾಸಾಧಾ ಧಧಧ | (ಮಧ್ಯಮಗ್ರಾಮಿಕಾ) 28
[iii ಸಾತವಾಹಿನೀ]
೮೩೯ ಋಷಭಾಂಶಾ ಧೈವತಾಂತಾ ವಿಜ್ಞೇಯಾ ಸಾತವಾಹನೀ |
ಪರಸ್ಪರಂ ತು ದೃಶ್ಯೇತೇ ಸಂಗತೌ ಮಧ್ಯಮರ್ಷಭೌ |
ಸಪ್ತಮಂ ಬಹುಮಿಚ್ಛಂತಿ ಕೇಚಿತ್ ತೇನೈವ ದುರ್ಬಲಮ್ || ೭೪ ||
೮೪೦ ಉದಾಹರಣಂ – (ಅ) [ರಿರಿ]ಗಧರಿರಿಮಾ | (ಆ) ಮಾಮಾನಿಮಾಧಾಧಾಧಾಧಾ | (ಇ) ಪಮಪಮಮರಿಮಮಾಸರಿ | (ಈ) ಮಾಮಪಪಾಮಪಪಾಪಾಪಾಪಮರಿ ಮರಿಮಾಮಾಸರಿ | (ಉ) ಪಾಪಪಸಸಾನಿ | (ಊ) ಧಾಧಾರಿ | (ಋ) ಸಾಸಾಸಾ ಸಾರೀಮನಿಧಾಧಾಧಾ ಪಧಾಸಾಧಪಾಧಾಪಮಪಾಪಾಮರಿಮಾಮಾಸಾರಿ ಮಾಪಾ ಪಾಮಾಸಾನಿಧಾಧಾ | (ಸಾತವಾಹಿನೀ) 29
[iv ಭೋಗವರ್ಧನೀ]
೮೪೧ ಮಧ್ಯಮಾಂಶಾ ನಿಷಾದಾಂತಾ ಋಷಭೇಣ ತು ದುರ್ಬಲಾ |
ಸಂಗತಿರ್ದೃಶ್ಯತೇಯತ್ರ ದ್ವಿಶ್ರುತ್ಯೋಃ ಪಂಚಮಸ್ಯ ಚ |
ಭಾಷೇಯಂ ಷಾಡವಾ ಜ್ಞೇಯಾ ಕಕುಭೇ ಭೋಗವರ್ಧನೀ || ೭೫ ||
೮೪೨ ಉದಾಹರಣಂ – (ಅ)[ಮಾಮಾ] ನಿನೀ | (ಆ) ಗಗಮಾ | (ಇ) ಪಾಮಾಪಮಾ | (ಈ) ಧಾಧಾ | (ಉ) ಸನಿಸನಿ | (ಊ) ಧಪಧಾಧಪಮಾಪಾಮ | (ಋ) ಗಗಗಗ | (ೠ) ಮಪಧಾಧಾನೀ | (ಎ) ಸಸಸಸ | (ಏ) ಮಾಗಸಾನಿಧಾಧಾ [ನೀ] | (ಭೋಗವರ್ಧೀನೀ) 30
__
ಪಾಠವಿಮರ್ಶೆ : ೮೩೯ ಆ,ಈ,ಉ ೮೪೧ ಅಆ
—-
ಕಂಡುಬರುತ್ತದೆ. ಕಕುಭದಲ್ಲಿ ಹುಟ್ಟಿದ್ದು ಮನಸ್ಸನ್ನು ರಮಿಸುವ ಈ ಭಾಷಾರಾಗವು ಸಂಕೀರ್ಣಾ ವರ್ಗದ್ದು. ೭೩
೮೩೮ ಉದಾಹರಣೆ- (ಅ) ಮಾಮಾ(ಆ) ಗರಿದಾಸಾರೀಸಾಮಾ | (ಇ) ನಿಗರಿಸನಿಸಾನಿಧಾ | (ಈ) ಸಾಧಾಸಾಧನಿರಿಸಾ | (ಉ) ಧನಿರಿರಿ | (ಊ) ಮಾಪಾಪಮಾಗಾ | (ಋ) ರಿರಿರಿರಿ | (ೠ) ಗಾಮ | (ಎ) ಗಾಮ | (ಏ) ಧಾಧಾಮಾಪಾಮಾಗಾರೀಸಾಸಾಧಾ ಧಧಧ | (ಮಧ್ಯಮ ಗ್ರಾಮಿಕಾ) 28
[iii ಸಾತವಾಹಿನೀ]
೮೩೯ ಸಾತವಾಹಿನೀ ರಾಗವು ರಿಷಭವನ್ನು ಅಂಶವಾಗಿಯೂ ಧೈವತವನ್ನು ನ್ಯಾಸವಾಗಿಯೂ ಪಡೆದಿದೆಯೆಂದು ತಿಳಿಯಬೇಕು. ಮಧ್ಯಮರಿಷಭಗಳು ಪರಸ್ಪರ ಸಂಗದಲ್ಲಿರುವುದು ಕಂಡುಬರುತ್ತದೆ. ಏಳನೆಯ ಸ್ವರ(=ನಿಷಾದ)ದಲ್ಲಿ ಬಹುತ್ವವನ್ನು ಕೆಲವರೂ ಅದರಲ್ಲೇ ದುರ್ಬಲತೆಯನ್ನು (ಬೇರೆಯವರೂ) ಅಪೇಕ್ಷಿಸುತ್ತಾರೆ. ೭೪
೮೪೦ ಉದಾಹರಣೆ – (ಅ) [ರಿರಿ]ಗಧರಿರಿಮಾ | (ಆ) ಮಾಮಾನಿಮಾಧಾಧಾಧಾಧಾ | (ಇ) ಪಮಪಮಮರಿಮಮಾಸರಿ | (ಈ) ಮಾಮಪಪಾಮಪಪಾಪಾಪಾಪಮರಿಮರಿಮಾಮಾಸರಿ | (ಉ) ಪಾಪಪಸಸಾನಿ | (ಊ) ಧಾಧಾರಿ | (ಋ) ಸಾಸಾಸಾಸಾರೀಮನಿಧಾಧಾಧಾ ಪಧಾಸಾಧಪಾಧಾಪಮಪಾಪಾಮರಿಮಾಮಾಸಾರಿ ಮಾಪಾಪಾಮಾಸಾನಿಧಾಧಾ | (ಸಾತವಾಹಿನೀ) 29
[i ಭೋಗವರ್ಧನೀ]
೮೪೧ ಭೋಗವರ್ಧನಿಯು ಮಧ್ಯಮವನ್ನು ಅಂಶವಾಗಿಯೂ ನಿಷಾದವನ್ನು ನ್ಯಾಸವಾಗಿಯೂ ಹೊಂದಿದೆ; ರಿಷಭದಿಂದ (ಇದು) ದುರ್ಬಲವಾಗಿದೆ; ಎರಡು ಶ್ರುತಿಗಳನ್ನುಳ್ಳ (=ನಿಷಾದಗಾಂಧಾರ) ಸ್ವರಗಳಲ್ಲಿಯೂ ಪಂಚಮದಲ್ಲಿಯೂ ಪರಸ್ಪರ ಸಂಗವಿದೆ. ಕಕುಭದಲ್ಲಿ ಹುಟ್ಟಿರುವ ಈ ಭಾಷಾರಾಗವು ಷಾಡವೆಂದು ತಿಳಿಯಬೇಕು. ೭೫
೮೪೨ ಉದಾಹರಣೆ – (ಅ) [ಮಾಮಾ]ನಿನೀ | (ಆ) ಗಗಮಾ | (ಇ) ಪಾಮಾಪಮಾ | (ಈ) ಧಾಧಾ| (ಉ) ಸನಿಸನಿ | (ಊ) ಧಪಧಾಧಪಮಾಪಾಮ | (ಋ) ಗಗಗಗ | (ೠ) ಮಪಧಾಧಾನೀ | (ಎ) ಸಸಸಸ | (ಏ) ಮಾಗಸಾನಿಧಾಧಾ)ನೀ) | (ಭೋಗವರ್ಧಿನೀ) 30
____
[v ಮಧುಕರೀ]
೮೪೩ ಪಂಚಮಂಶಾ ತೇನ ಬಹುಲಾ ಧಾಂತಾ ಮಧುಕರೀ ಶುಭಾ |
ಪರಸ್ಪರಂ ತು ಸಂವಾದೋ ಗಾಂಧಾರಪಂಚಮಸ್ಯ ಹಿ || ೭೬ ||
೮೪೪ ಧೈವತಸ್ಯ ನಿಷಾದಸ್ಯ ಸಂಯೋಗೋ ದೃಶ್ಯತೇ ಯತಃ |
ಏಷಾ ಪೂರ್ಣಾ ಚ ಸಂಕೀರ್ಣಾ ಭಾಷಾ ಕಕುಭಸಂಭವಾ || ೭೭ ||
೮೪೫ ಉದಾಹರಣಂ – (ಅ) [ಪಾಪಾ] ನಿನಿನಿನಿಪಧಪಾ ಧನಿಸಾಸನಿಸನಿ ಸಪಧಾನಿಧಾಧಪಾ ಧರಿಸಾಸಾಗರಿಸಸಮ | (ಆ) ಗರಿಸಾನಿನಿನಿಧಪಾಪಾಸಾಗಾ | (ಇ) ಪಾಪಾಮಧಾ | (ಈ) ಮಾಧಾಧಾಮಾ | (ಉ) ನೀಸಾಸಾಧಾಧಾ | (ಮಧುಕರೀ) 31
[vi ಶಕಮಿಶ್ರಿತಾ]
೮೪೬ ನಿಷಾದಾಂಶಾ ತು ಷಡ್ಜಾಂತಾ [ನಿಷಾದಗ್ರಹಸಂಯುತಾ] |
[ಭಾಷಾ] ಋಷಭಹೀನಾ ತು ವಿಜ್ಞೇಯಾ ಶಕಮಿಶ್ರಿತಾ || ೭೮ ||
೮೪೭ ನಿಷಾದಪಂಚಮಾನಾಂ ತು ಸಂವಾದಃ ಸ್ಯಾತ್ತು ಧೈವತೇ |
ಮಜು(!-ಧು) ವತ್ಯಂಶಜಾ ಛಾಯಾ ಛಾಯಾ ಶಕವಿಮಿಶ್ರಿತಾ || ೭೯ ||
೮೪೮ ಉದಾಹರಣಂ – (ಅ) ನೀಸಾನಿಗಾಧಮಾಗಾರಿರಿನಿ ನಿನಿಸಾಧಾಧಾನಿಧಾಗಮಾ ಮಾಮಪಾಸಾ ಸನಿಸಾಸಾಧಾಧಾಮನೀಧಾಧಾಮಾನೀಧಾಪಾಮಾಧಾನೀ ಸಾಸಾಸಾಸಾ ನೀಸಾಸಾಸಾರಿಗಾರಿಸಾ ನೀಸಾನೀಸಾನಿಧಾಧಾಮಾಸಾನೀ ಮಗಾರೀರಿ | (ಶಕಮಿಶ್ರಿತಾ) 32
[vii. ಭಿನ್ನಪಂಚಮೀ]
೮೪೯ ಧೈವತಾಂಶಾ ಧೈವತಾಂತಾ ವಿಜ್ಞೇಯಾ ಭಿನ್ನಪಂಚಮೀ |
ನಿಷಾದಃ ಕಾಕಾಲೀ ಭೂಯೋ ಧೈವತೇನ ವಿಮಿಶ್ರಿತಃ || ೮೦ ||
೮೫೦ ಸಂಯೋಗೋ ದೃಶ್ಯತೇ ಯತ್ರ ಕಾಕಲ್ಯಾ ಧೈವತಸ್ಯ ಚ |
ಪಂಚಮರ್ಷಭಸಂವಾದೋ ಯತ್ರೈವ ಸಂಪ್ರಯೋಜಯೇತ್ |
ಸಾಧಾರಣಕೃತಾ ಹ್ಯೇಷಾ ಪೂರ್ಣಾ ಛಾಯಾ ಸಕಾಕಲೀ
(ಪ್ರಾಯಾ ಚ ಕಾಕಲೀ?) || ೮೧ ||
—
ಪಾಠವಿಮರ್ಶೆ: ೮೪೩ಆ, ಈ ೮೪೪ಅ,ಇಈ ೮೪೬ಆ,ಇ,ಈ ೮೪೯ಅ ೮೫೦ಆ, ಊ
—-
[v ಮಧುಕರೀ]
೮೪೩ ಶುಭಪ್ರದವಾದ ಮಧುಕರೀರಾಗವು ಪಂಚಮವನ್ನು ಅಂಶವಾಗಿಯೂ ಅದನ್ನೇ ಬಹುಲ(ಸ್ವರ)ವಾಗಿಯೂ, ಧೈವತವನ್ನು ನ್ಯಾಸವಾಗಿಯೂ ಹೊಂದಿದೆ ; ಗಾಂಧಾರ ಪಂಚಮಗಳಲ್ಲಿ ಪರಸ್ಪರ ಸಂವಾದವಿದೆ. (=ಸಂಗತಿಯಿದೆ).೭೬
೮೪೪ (ಇದರಲ್ಲಿ) ಧೈವತದ ಹಾಗೂ ನಿಷಾದದ (ಪರಸ್ಪರ) ಸೇರುವಿಕೆಯು ಕಂಡುಬರುತ್ತದೆ. ಕಕಂಭದಲ್ಲಿ ಹುಟ್ಟಿರುವ ಈ ಭಾಷಾರಾಗವು (ಸಂ)ಪೂರ್ಣ ಮತ್ತು ಸಂಕೀರ್ಣಾವರ್ಗದ್ದು. ೭೭
೮೪೫ ಉದಾಹರಣೆ – (ಅ) [ಪಾಪಾ]ನಿನಿನಿನಿಪಧಪಾ ಧನಿಸಾಸನಿಸನಿ ಸಪಧಾನಿ ಧಾಧಪಾಧರಿಸಾಸಾಗರಿಸಸಮ | (ಆ) ಗರಿಸಾನಿನಿನಿಧಪಾಪಾಸಾಗಾ | (ಇ) ಪಾಪಾಮಾಧಾ | (ಈ) ಮಾಧಾಧಾಮಾ | (ಉ) ನೀಸಾಸಾಧಾಧಾ | (ಮಧುಕರೀ) 31
[vi ಶಕಮಿಶ್ರಿತಾ]
೮೪೬ ಶಕಮಿಶ್ರಿತಾರಾಗವು ನಿಷಾದವನ್ನು ಅಂಶವಾಗಿಯೂ [ಮತ್ತು ಗ್ರಹವಾಗಿಯೂ] ಷಡ್ಜವನ್ನು ನ್ಯಾಸವಾಗಿಯೂ ಪಡೆದಿದೆ, ರಿಷಭವನ್ನು ಬಿಟ್ಟಿದೆ ಎಂದು ತಿಳಿಯಬೇಕು. ೭೮
೮೪೭ ನಿಷಾದಪಂಚಮಗಳಿಗೆ ಧೈವತದೂಡನೆ ಸಂವಾದ(=ಪರಸ್ಪರಗಮನ)ವಿದೆ. ಮಜು(!ಮಧು-) ವತೀ ಅಂಶ [=ಅಂಶಸ್ವರ? ಭಾಗ?]ದಿಂದ ಹುಟ್ಟಿರುವ ಛಾಯೆಯಿಂದ ಶಕಮಿಶ್ರಿತಾ ಭಾಷಾರಾಗವು ಛಾಯಾ[ಮಾತ್ರಾಶ್ರಯಾ] ವರ್ಗಕ್ಕೆ ಸೇರಿದೆ. ೭೯
೮೪೮ ಉದಾಹರಣೆ – (ಅ) ನೀಸಾನಿಗಾಧಮಾಗಾರಿರಿನಿ ನಿನಿಸಾಧಾಧಾನಿಧಾಗಮಾ ಮಾಮಪಾಸಾ ಸನಿಸಾಸಾಧಾಧಾಮನೀಧಾಧಾಮನೀಧಾಪಾಮಾಧಾನೀಸಾಸಾಸಾಸಾ ನೀಸಾಸಾಸಾರಿಗಾರಿಸಾ ನೀಸಾನೀಸಾನಿಧಾಧಾಮಾಸಾನೀಮಾಗಾರೀರಿ | (ಶಕಮಿಶ್ರಿತಾ) 32
[vii. ಭಿನ್ನಪಂಚಮೀ]
೮೪೯ ಭಿನ್ನಪಂಚಮಿ ಧೈವತವನ್ನು ಅಂಶವಾಗಿಯೂ ನ್ಯಾಸವಾಗಿಯೂ ಪಡೆದಿದೆಯೆಂದು ತಿಳಿಯಬೇಕು. ನಿಷಾದವು ಕಾಕಲಿಯಾಗಿದ್ದು ಧೈವತದೊಡನೆ ವಿಫುಲವಾಗಿ ಬೆರೆಯುತ್ತದೆ. ೮೦
೮೫೦ ಇದರಲ್ಲಿ ಕಾಕಲಿಯ ಮತ್ತು ಧೈವತದ ಸೇರುವಿಕೆಯು ಕಂಡುಬರುತ್ತದೆ. ಇದರಲ್ಲಿ ಪಂಚಮರಿಷಭಗಳ ಸಂವಾದ (=ಸಂಗತಿ)ವನ್ನು ಯೋಜಿಸಬೇಕು. ಕಾಕಲೀಸಹಿತವಾದುದರಿಂದ ಸಾಧಾರಣವನ್ನಾಗಿಸಿದೆಯೆಂದೂ, ಇದು (ಸಂ)ಪೂರ್ಣ ರಾಗವೆಂದೂ ಛಾಯಾ(ಮಾತ್ರಾಶ್ರಯ ಭಾಷಾರಾಗ) (ಕಾಕಲಿನಿಷಾದವು ಬಹುಲ?)ಎಂದೂ ತಿಳಿದುಕೊಳ್ಳಬೇಕು. ೮೧
____
೮೫೧ ಉದಾಹರಣಂ – (ಅ) ಧನಿಧಾಧಾ ನಿಧಾಪಾಪಾಮರಿಪಾಪಾಪಪಮಾಧಾಧಾ ಪಾ ಸಾಮನಿಸಾಸನಿರಿರಿಸಾರೀ | (ಆ) ಧಾಧಾ | (ಇ) ಪರಿಮಾಪಾಪಾ | (ಈ) ಪಮ ಧಾಧಾಮಾನೀಧಾಪಾಪಾಪರೀಧಾ ಪಾಪಾಪಾಧಾಧಾಸನಿಧಾ | (ಭಿನ್ನಪಂಚಮೀ) 33
೮೫೨ ಏತಾ ಭಾಷಾಃ ಸಮುದ್ಧಿಷ್ಟಾಃ [ಸಪ್ತ ವೈ ಕಕುಭಸ್ಯ ಚ|] || ೮೨ ||
Leave A Comment