[i ವೇಸರಿ]
೮೫೩ ಷಡ್ಜಾಂಶನ್ಯಾಸಸಂಯುಕ್ತಾ ಧೈವತೇನ ಚ ದುರ್ಬಲಾ |
ಷಡ್ಜಗಾಂಧಾರಸಂಚಾರಸ್ತತ್ರ ಯೋಜ್ಯಃ ಪ್ರಯೋಕ್ಷೃಭಿಃ |
ಗಾಂಧಾರಸ್ಯ ಪ್ರಯೋಗೇಣ ಭಾಷೇಯಂ ಸ್ಯಾದ್ ಹಿ ವೇಸರೀ || ೮೩ ||
೮೫೪ ಉದಾಹರಣಂ – (ಅ) ಸಾಸಾಗಾಸಾಸನಿಪನಿ | (ಆ) ಮಾಧಾಮಾಗಾಸಮಾಸಾಸಾಸಾ | (ಇ) ಸಮಗಾಸಪಮರಿಗಾಸಾ ನಿನಿಮಾಸಾಗಾಸಾಸಾ | (ಈ) ಧನಿಪಾಪಾಪನಿಸಾಸಾ | (ವೇಸರೀ) 34
[ii ಪ್ರಥಮಮಂಜರೀ]
೮೫೫ ಪಂಚಮಾಂಶರ್ಷಭಹೀನಾ ಷಡ್ಜಾಂತಾ ಷಾಡವಾ ಭವೇತ್ |
ಷಡ್ಜಪಂಚಮಸಂವಾದೋ ದ್ವಿಶ್ರುತೀನಾಂ ತಥೈವ ಚ |
ಭಾಷಾ ಹಿಂದೋಲಕೇ ಹ್ಯೇಷಾ ಕಥಿತಾ ಪ್ರಥಮಮಂಜರೀ || ೮೪ ||
೮೫೬ ಉದಾಹರಣಂ – (ಅ) ಪಾಪಾಪಾಪಾಧಮಪಾನೀಸಾ ಪಂಚಮಪಾಧನಿ ಧಾಸಾ ಸಾಪಾಪಾನಿಸಾಸಾಸಾ ಗಾಸಾಪಾಗಾಮಾನಿಸನಿ ಪಾಪಾನಿಸಾ ಗಾನಿಸಾನಿಸಾಸಾ | (ಪ್ರಥಮಮಂಜರೀ) 35
[iii. ಛೇವಾಟೀ]
೮೫೭ ಷಡ್ಜಾಂಶನ್ಯಾಸಸಂಯುಕ್ತಾ ಸಂಪೂರ್ಣಾ ಧೇನ ದುರ್ಬಲಾ |
ಸಂವಾದಶ್ಚೈವ ಕರ್ತವ್ಯಃ ಷಡ್ಜಮಧ್ಯಮಯೋಸ್ತಥಾ |
ಷಡ್ಜಗಾಂಧಾರಯೋರ್ನಿತ್ಯಂ ಛೇವಾಟೀ ಸಂಪ್ರಕೀರ್ತಿತಾ || ೮೫ ||
—
ಪಾಠವಿಮರ್ಶೆ : ೮೫೨ಅ ೮೫೩ಈ,ಊ ೮೫೫ಅ ಊ ೮೫೭ಆ
—-
೮೫೧ ಉದಾಹರಣೆ – (ಅ) ಧನಿಧಾಧಾ | ನಿಧಾಪಾಪಾಮರಿಪಾಪಾಪಪಮಾಧಾಧಾ | ಪಾ ಸಾಮನಿಸಾಸನಿರಿರಿಸಾರೀ | (ಆ) ಧಾಧಾ | (ಇ)ಪರಿಮಾಪಾಪಾ | (ಈ) ಪಮಧಾಧಾಮಾನೀಧಾಪಾಪಾಪರೀಧಾ ಪಾಪಾಪಾಧಾಧಾಸನಿಧಾ | (ಭಿನ್ನಪಂಚಮೀ) 33
[IVಈಗ ಹಿಂದೋಲದಲ್ಲಿ ಹುಟ್ಟಿರುವ ಭಾಷಾಗಳ ಲಕ್ಷಣಗಳು]
[i ವೇಸರೀ]
೮೫೩ ಅಂಶ, ನ್ಯಾಸವಾಗಿ ಷಡ್ಜದೊಡಗೂಡಿರುವ ವೇಸರೀಯಲ್ಲಿ ಧೈವತವು ದುರ್ಬಲವಾಗಿದೆ. ಗಾಯಕವಾದಕರು ಅದರಲ್ಲಿ ಷಡ್ಜಗಾಂಧಾರಗಳ (ಪರಸ್ಪರ)ಸಂಚಾರವನ್ನು ಯೋಜಿಸಬೇಕು. ಗಾಂಧಾರದ (ಬಹುಲ) ಪ್ರಯೋಗದಿಂದ ಈ ವೇಸರೀ ಭಾಷಾ ಆಗುತ್ತದೆ. ೮೩
೮೫೪ ಉದಾಹರಣೆ – (ಅ) ಸಾಸಾಗಾಸಾಸನಿಪನಿ | (ಆ) ಮಾಧಾಮಾಗಾಸಮಾಸಾಸಾಸಾ | (ಇ) ಸಮಗಾಸಪಮರಿಗಾಸಾ ನಿನಿಮಾಸಾಗಾಸಾಸಾ | (ಈ) ಧನಿಪಾಪಾಪನಿಸಾಸಾ | (ವೇಸರೀ) 34
[ii ಪ್ರಥಮಮಂಜರೀ]
೮೫೫ (ಪ್ರಥಮಮಂಜರಿಯು) ಪಂಚಮವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ ಪಡೆದು, ರಿಷಭದ ಲೋಪವಿದ್ದು (ಅದರಿಂದ) ಷಾಡವವಾಗಿದೆ. (ಅದರಲ್ಲಿ) ಷಡ್ಜ ಪಂಚಮಗಳ ಸಂವಾದ(=ಪರಸ್ಪರ ಸಂಚಾರ)ವಿದೆ; ಎರಡು ಶ್ರುತಿಗಳನ್ನುಳ್ಳ (ಗಾಂಧಾರ ನಿಷಾದ) ಸ್ವರಗಳಲ್ಲಿಯೂ ಹಾಗೆಯೇ (ಸಂವಾದವಿದೆ). ಈ ಪ್ರಥಮಮಂಜರಿಯು ಹಿಂದೋಲದ ಭಾಷಾ ಎಂದು ಹೇಳಿದೆ. ೮೪
೮೫೬ ಉದಾಹರಣೆ – ಪಾಪಾಪಾಪಾಧಮಪಾನೀಸಾ ಪಂಚಮಪಾಧನಿ ಧಾಸಾಸಾಪಾಪಾನಿ ಸಾಸಾಸಾಗಾಸಾಪಾಗಾಮಾನಿಸನಿ ಪಾಪಾನಿಸಾ ಗಾನಿಸಾನಿಸಾಸಾ | (ಪ್ರಥಮಮಂಜರೀ) 35
[iii.ಛೇವಾಟಿ]
೮೫೭ ಅಂಶ ಮತ್ತು ನ್ಯಾಸವಾಗಿ ಷಡ್ಜವನ್ನೊಡಗೂಡಿದ, ಸಂಪೂರ್ಣವಾದ, ಧೈವತದಿಂದ ದುರ್ಬಲವಾದ ರಾಗವು ಛೇವಾಟೀ ಎಂದು ಹೆಸರುವಾಸಿಯಾಗಿದೆ. ಅದರಲ್ಲಿ ಷಡ್ಜ ಮಧ್ಯಮಗಳ ನಡುವೆಯೂ ಹಾಗೆಯೇ ಷಡ್ಜಗಾಂಧಾರಗಳಲ್ಲಿಯೂ ಯಾವಾಗಲೂ ಸಂವಾದ (=ಪರಸ್ಪರ ಸಂಚಾರ)ವನ್ನು ಪ್ರಯೋಗಿಸಬೇಕು. ೮೫
____
೮೫೮ ಉದಾಹರಣಂ – (ಅ) ಸಾಪಾಸಾ | (ಆ) ಮಾಗಾಸಾಸಾ ಗಾಮನಿಮಾಪಾಮಾಸಾ ಸಾಮಾಮಾನೀಮಾಮಾನೀಮಾಮಾನೀಮಾಮಾಪಾಪಾಗಾಮಾ ಸಾಸಾಸಾಗಾಸಾನೀ | (ಇ) ಸಾಗಾಸಾನೀಸನಿಧಾಮಧಾಮಾಪಾಪಾ ಪಾಧಾಮಾಮಾಧಮಪಮಗರಿಸಾ ಸಾನೀನೀನೀಸಾಗಾರೀ ಮಾಮಾರೀನೀಸಾಸಾ | (ಛೇವಾಟೀ) 36
[iv ಷಡ್ಜಮಧ್ಯಮಾ]
೮೫೯ ಷಡ್ಜಾಂಶಾ ಮಧ್ಯಮಾಂತಾ ಚ ನಿಷಾದರ್ಷಭದುರ್ಬಲಾ |
ಷಡ್ಜಮಧ್ಯಮಸಂವಾದಸ್ತಥಾ ಗಾಂಧಾರಪಂಚಮೇ || ೮೬ ||
೮೬೦ ಷಾಡವೌಡುವಿತಾ ಜ್ಞೇಯಾ ಪ್ರಕೃತ್ಯಾ ಷಡ್ಜಮಧ್ಯಮಾ |
ಏಷಾ ಭಾಷಾ ತು ಕಥಿತಾ ಕಿನ್ನರೈರಪಿ ಗೀಯತೇ || ೮೭ ||
೮೬೧ ಉದಾಹರಣಂ = (ಅ) ಸಾಪಾಪಾಧಾಮಾಮಾ ಪಾಗಾಮಗಾಪಧಾಧಾಪಾಗಮಾ ಗಾಪಾಪಾಪಾಧಾಪಾಸಾಸಾಪಾಧಾಪಮಗಾಮಾಮಾ ಗಾಮಸಾಸಾಸಾಗಾಗಾಮಾ ಗಾಮಾಮಾ | ಷಡ್ಜ[ಮಧ್ಯಮಾ] ೩೭
[v ಮಧುಕರೀ]
೮೬೨ ಮಧ್ಯಮಾಂಶಾ ತು ಷಡ್ಜಾಂತಾ ದುರ್ಬಲಾ ಪಂಚಮೇನ ತು |
ಧೈವತನಿಷಾದಬಾಹುಲ್ಯಂ ಷಡ್ಜಧೈವತಯೋಸ್ತಥಾ ||
ಭಾಷೇಯಂ ಷಾಡವಾ ಜ್ಞೇಯಾ ಪ್ರೇಂಖಕೇ ಮಧುರೀ ಭವೇತ್ || ೮೮ ||
೬೩ ಉದಾಹರಣಂ – (ಅ) ಮಾಪಾಪಾಧಾಧಾಮಾಧನಿನಿಪಾಸನಿಧಸಾಸಾ ಮಾಪಾಧನಿಸನಿಸಾಸಾ ಮಾಪಾನಿಸಾರಿರೀಗಮಗಾರೀಸಾಸಾ ನಿಧಾಪಾಪಾಪಾಧನಿಧಾ ಸಾಸಾ ರಿರೀಮಮಾಗರಿಸಾಸಾ | (ಮಧು(ಕ)ರೀ) 38
ಇತಿ ಹಿಂದೋಲಕೇ ಭಾಷಾ(:) ಸಮಾಪ್ತಾ(:)
—
—
ಪಾಠವಿಮರ್ಶೆ : ೮೫೯ಅ-ಊ ೮೫೯-೮೬೦ ೮೬೧ ೮೬೨ಆ, ಇಈ, ಊ ೮೬೪
—-
೮೫೮ ಉದಾಹರಣೆ – (ಅ) ಸಾಪಾಸಾ | (ಆ) ಮಾಗಾಸಾಸಾ ಗಾಮನಿಮಾಪಾಮಾಸಾ ಸಾಮಾಮಾನೀ ಮಾಮಾನೀಮಾಮಾನೀಮಾಮಾಪಾಪಾಗಾಮಾ ಸಾಸಾಸಾಗಾಸಾನೀ | (ಇ) ಸಾಗಾಸಾನೀಸನಿಧಾಮಧಾ ಮಾಪಾಪಾ ಪಾಧಾಮಾಮಾಧಮಪಮಗರಿಸಾ ಸಾನೀನೀನೀಸಾಗಾರೀ ಮಾಮಾರೀನೀಸಾಸಾ | (ಛೇವಾಟೀ) 36
[iv ಷಡ್ಜಮಧ್ಯಮಾ]
೮೫೯ (ಷಡ್ಜಮಧ್ಯಮಾ ರಾಗವು) ಷಡ್ಜವನ್ನು ಅಂಶವಾಗಿಯೂ ಮಧ್ಯಮವನ್ನು ನ್ಯಾಸವಾಗಿಯೂ ನಿಷಾದರಿಷಭಗಳನ್ನು ದುರ್ಬಲವಾಗಿಯೂ ಪಡೆದಿದೆ. (ಅದರ) ಷಡ್ಜ-ಮಧ್ಯಮಗಳಲ್ಲಿಯೂ ಗಾಂಧಾರ-ಪಂಚಮಗಳಲ್ಲಿಯೂ ಸಂವಾದ (=ಪರಸ್ಪರ ಸಂಚಾರ)ವಿದೆ. ೮೬
೮೬೦ ಷಡ್ಜಮಧ್ಯಮಾರಾಗವು ತನ್ನ ಸ್ವಭಾವದಿಂದ ಷಾಡವಿತ ಮತ್ತು ಔಡುವಿತವಾಗುತ್ತದೆ. ಇದನ್ನು ಭಾಷಾ ಎಂದು ಹೇಳಿದೆ ; ಕಿನ್ನರರೂ ಸಹ (ಇದನ್ನು) ಹಾಡುತ್ತಾರೆ. ೮೭
೮೬೧ ಉದಾಹರಣೆ – (ಅ) ಸಾಪಾಪಾಧಾಮಾಮಾ ಪಾಗಾಮಗಾಪಧಾಧಾಪಾಗಮಾ ಗಾಪಾಪಾಪಾಧಾಪಾಸಾಸಾಪಾಧಾಪಮಗಾಮಾಮಾ ಗಾಮಸಾಸಾಸಾಗಾಗಾಮಾಗಾಮಾಮಾ | (ಷಡ್ಜಮಧ್ಯಮಾ) 37
[vಮಧುಕರೀ]
೮೬೨ ಮಧು(ಕ)ರೀ ರಾಗವು ಮಧ್ಯಮವನ್ನು ಅಂಶವಾಗಿಯೂ ಷಡ್ಜವನ್ನು ನ್ಯಾಸವಾಗಿಯೂ ಪಂಚಮವನ್ನು ದುರ್ಬಲವಾಗಿಯೂ, ಧೈವತನಿಷಾದಗಳಲ್ಲಿಯೂ ಅಂತೆಯೇ ಷಡ್ಜ ಧೈವತಗಳಲ್ಲಿಯೂ (ಪರಸ್ಪರ ಸಂಚಾರ)ಬಾಹುಲ್ಯವನ್ನೂ ಪಡೆದಿದೆ. ಈ ಭಾಷೆಯನ್ನು ಷಾಡವವೆಂದು ತಿಳಿಯಬೇಕು. ಮಧು(ಕ)ರಿಯು ಪ್ರೇಂಖ(=ಹಿಂದೋಲ)ದಲ್ಲಿ ಹುಟ್ಟಿದೆ. ೮೮
೮೬೩ ಉದಾಹರಣೆ – (ಅ) ಮಾಪಾಪಾಧಾಧಾಮಾಧನಿನಿಪಾಸನಿಧಸಾಸಾ ಮಾಪಾ ಧನಿಸನಿಸಾಸಾ ಮಾಪಾನಿಸಾರಿರೀಗಮಗಾರೀಸಾಸಾ ನಿಧಾಪಾಪಾಪಾಧನಿಧಾ ಸಾಸಾ ರಿರೀಮಮಾಗರಿಸಾಸಾ | (ಮಧು(ಕ)ರೀ) 38
ಹೀಗೆ ಹಿಂದೋಲದಲ್ಲಿ(ಲ್ಲಿ ಹುಟ್ಟಿದ) ಭಾಷಾ(ಗಳ ಲಕ್ಷಣ)ಗಳು ಮುಗಿದವು.
Leave A Comment