೮೬೪  [ಅತಃ ಪರಂ ಪ್ರವಕ್ಷ್ಯಂತೇ ಪಂಚಮೇ ದಶ ಚ ಭಾಷಾಃ |]                                        || ೮೯ ||

[i ಆಭೀರೀ]

೮೬೫   ಪಂಚಮಾಂಶಾ ತದಂತಾ ಚ ನಿಷಾದಬಹುಲಾ ಸದಾ |
ಪರಸ್ಪರಂ ದೃಶ್ಯೇತ ಷಡ್ಜಧೈವತಸಂಗತಿಃ                                                                           || ೯೦ ||

೮೬೬   ಪೂರ್ಣಾ ಪಂಚಮಜಾ ಹ್ಯೇಷಾ ತ್ವಾಭೀರೀ ದೇಶಸಂಭವಾ |
ಏಷಾ ಭಾಷಾ ವಿಜ್ಞೇಯಾ ಪ್ರಥಮಾ ಪಂಚಮೋದ್ಭವಾ |                                                          || ೯೧ ||

೮೬೭   ಉದಾಹರಣಂ – (ಅ) ಪಾಧಾಮಾಧನಿಧಾಪಾಪಾಪಾ ಪಧನಿಧಾಮಾಮಾಧಾ ನಿಸಾಸಾ ಸನಿಧನಿಸಧಾನಿಸಾನಿಧಾಸಾ ಧರಿಮಾಮಾಧಾನಿನಿಧಾಪಾಪಾ ಪಮಮಧ ನಿಸಾಸಾ ಸನಿನಿಸಾಸಾಸನಿಗರಿಮಮಮಾಗಾ ರಿಸಸಸಧನಿಪಾ ಧಾಮಾಮಾಸರಿ ಮಾಧಾರಿಮಪಾಪಾ | (ಆಭೀರೀ)                                                                                                                                     39

[ii ಭಾವಿನೀ]

೮೬೮   ಭಾವಿನೀ ಪಂಚಮನ್ಯಾಸಾ ಗಾಂಧಾರಾಂಶಾ sಲ್ಪಧೈವತಾ |
ಮಧ್ಯಮಪಂಚಮಯೋರ್ಯತ್ರ ಗಮನಂ ದೃಶ್ಯತೇ ಘನಮ್|
ಭಾಷಾ ತು ಭಾವಿನೀ ಜ್ಞೇಯಾ ಪೂರ್ಣಾ ಗಾಂಧರ್ವವೇದಿಭಿಃ |                                                     || ೯೨ ||

೮೬೯   ಉದಾಹರಣಂ – (ಅ) ಗಾಮಾಪಾಗಮಪಾನಿಧಾ[ಪಾ] (ಆ) ಗಮಪಾಮಾ ಗಾಗಾರೀರೀಗಾನೀಧಾಪಾಪಾಪಾಪಾ | (ಇ) ಮಾಮಾಗಾಮಾಪಾಪಾ ಮಾಪಾ ಪಾಮಾಧಾರೀಸಗಗಮಾಪಾ ಮಾಗಾರೀರೀಪಾಪಾ | (ಭಾವಿನೀ)                                                       40

[iii. ಮಾಂಗಾಲೀ]

೮೭೦   ಮಾಂಗಾಲೀ ಪಂಚಮಾಂತಾ ಚ ಧೈವತಾಂಶಾ ಪ್ರಕೀರ್ತಿತಾ |
ಷಡ್ಜಧೈವತಸಂವಾದೋ ಮಧ್ಯಮರ್ಷಭಯೋಸ್ತಥಾ                                                             || ೯೩ ||

೮೭೧   ಸಂಪೂರ್ಣಾ ಚ ಮತಾ ನಿತ್ಯಂ ಜ್ಞೇಯಾ ವೈ ದೇಶಸಂಭವಾ |
ಏಷಾ ಭಾಷಾ ಚ ಗೀತಜ್ಞೈರುಕ್ತಾ ಪಂಚಮಸಂಭವಾ                                                               || ೯೪ ||

ಪಾಠವಿಮರ್ಶೆ : ೮೬೫ಈ ೮೬೬ಅಆ, ೮೬೬ಅ, ಅಆ, ಆ,ಇ ೮೬೮ಅ-ಊ ೮೭೦ಅ,ಇ ೮೭೧ಅ

—-

[v ಈಗ ಪಂಚಮದಲ್ಲಿ ಹುಟ್ಟಿರುವ ಭಾಷಾಗಳ ಲಕ್ಷಣಗಳು]

೮೬೪   [ಇನ್ನು ಮುಂದೆ ಪಂಚಮ(ರಾಗ)ದಲ್ಲಿ (ಹುಟ್ಟಿರುವ) ಹತ್ತು ಭಾಷಾಗಳ(ಲಕ್ಷಣಗಳ)ನ್ನು ನಿರೂಪಿಸಲಾಗುವುದು.]    ೮೯

[i ಆಭೀರೀ]

೮೬೫   (ಆಭೀರೀ ರಾಗವು) ಪಂಚಮವನ್ನು ಅಂಶವಾಗಿಯೂ ಅದನ್ನೇ ನ್ಯಾಸವಾಗಿಯೂ ಯಾವಾಗಲೂ ನಿಷಾದವನ್ನು ಹೇರಳವಾಗಿಯೂ ಪಡೆದಿದೆ. ಷಡ್ಜಧೈವತಗಳಲ್ಲಿ ಪರಸ್ಪರವಾಗಿ ಸಂಗವನ್ನು (ಇದರಲ್ಲಿ) ಕಾಣಬೇಕು.                                                      ೯೦

೮೬೬   (ಇದು) (ಸಂ)ಪೂರ್ಣ(ರಾಗ), ಪಂಚಮ(ರಾಗ)ದಲ್ಲಿ ಹುಟ್ಟಿದೆ. ಈ ಆಭೀರಿಯು (ಆಭೀರ) ದೇಶದಲ್ಲಿ ಹುಟ್ಟಿದೆ. (=ದೇಶಜಾ ವರ್ಗದ್ದು). ಈ ಭಾಷಾರಾಗವು ಪಂಚಮದಲ್ಲಿ ಹುಟ್ಟಿರುವ(ವು ಗಳಲ್ಲಿ) ಮೊದಲನೆಯದೆಂದು ತಿಳಿಯಬೇಕು.                         ೯೧

೮೬೭   ಉದಾಹರಣೆ – (ಆ) ಪಾಧಾಮಾಧನಿಧಾಪಾಪಾಪಾ ಪಧನಿಧಾಮಾಮಾಧಾನಿಸಾಸಾ ಸನಿಧನಿಸಧಾನಿಸಾನಿಧಾಸಾ ಧರಿಮಾಮಾಧಾನಿನಿಧಾಪಾಪಾ ಪಮಮಧನಿಸಾಸಾ ಸನಿನಿ ಸಾಸಾಸನಿಗರಿಮಮಮಾಗಾ ರಿಸಸಧನಿಪಾ ಧಾಮಾಮಾಸರಿಮಾಧಾರಿಮಪಾಪಾ | (ಆಭೀರೀ)                                                                                                                                     39

[iii ಭಾವಿನೀ]

೮೬೮   ಭಾವಿನಿಯು ಪಂಚಮವನ್ನು ನ್ಯಾಸವಾಗಿಯೂ ಗಾಂಧಾರವನ್ನು ಅಂಶವಾಗಿಯೂ ಧೈವತವನ್ನು ಅಲ್ಪವಾಗಿಯೂ ಪಡೆದಿದೆ. (ಇದರಲ್ಲಿ) ಮಧ್ಯಮ ಮತ್ತು ಪಂಚಮಗಳ ನಡುವೆ ಪರಸ್ಪರ ಸಂಚಾರವು ಹೇರಳವಾಗಿ ಕಂಡುಬರುತ್ತದೆ. [ಈ] ಭಾವಿನೀ ಎಂಬ ಭಾಷಾರಾಗವು (ಸಂ)ಪೂರ್ಣವೆಂದು ಗಾಂಧರ್ವ(ಶಾಸ್ತ್ರ) ವನ್ನು ಬಲ್ಲವರು ತಿಳಿಯಬೇಕು.                                                ೯೨

೮೬೯   ಉದಾಹರಣೆ – (ಅ) ಗಾಮಾಪಾಗಮಪಾನಿಧಾ[ಪಾ] (ಆ) ಗಮಪಾಮಾಗಾಗಾರೀರೀಗಾನೀಧಾಪಾಪಾಪಾಪಾ | (ಇ)ಮಾಮಾಗಾಮಾಪಾಸಾ ಮಾಪಾಪಾಮಾಧಾರೀ – ಸಗಗಮಾಪಾ ಮಾಗಾರೀರೀಪಾಪಾ | (ಭಾವಿನೀ)                                                    40

[iii.ಮಾಂಗಾಲೀ]

೮೭೦   ಮಾಂಗಾಲಿಯು ಪಂಚಮವನ್ನು ನ್ಯಾಸವಾಗಿಯೂ ಧೈವತವನ್ನು ಅಂಶವಾಗಿಯೂ ಪಡೆದಿರುವುದೆಂದು ಹೆಸರುವಾಸಿಯಾಗಿದೆ. (ಇದರ) ಷಡ್ಜಧೈವತಗಳಲ್ಲಿಯೂ ಹಾಗೆಯೇ ಮಧ್ಯಮ ರಿಷಭಗಳಲ್ಲಿಯೂ ಸಂವಾದವು (=ಪರಸ್ಪರ ಸಂಚಾರವು) ಇದೆ.     ೯೩

೮೭೧   ಇದು ಯಾವಾಗಲೂ ಸಂಪೂರ್ಣವೆಂದು ಅಭಿಪ್ರಾಯಪಡಲಾಗಿದೆ; (ಮಂಗಲಾ?ಮಂಗಲೀ?) ಎಂಬ ದೇಶದಲ್ಲಿ ಹುಟ್ಟಿದೆ (=ದೇಶಜಾ ವರ್ಗದ್ದು) ಎಂದು ತಿಳಿಯಬೇಕು. ಈ ಭಾಷಾ ರಾಗವು ಪಂಚಮ(ರಾಗ)ದಲ್ಲಿ ಹುಟ್ಟಿದೆಯೆಂದು ಹಾಡಬಲ್ಲವರು ಹೇಳುತ್ತಾರೆ.      ೯೪

____

೮೭೨   ಉದಾಹರಣಂ- (ಅ) [ಧಾಧಾ]ಸಾಸಾಸಾಸಧಾಸಾರಿರಿ [ಮರಿ] ಧಾಸಾರಿರಿಧಾಸಾ ಧಾಸಾಧಾಸಾಸಾರಿಮಾರಿಮಾಮಾಮಧ್ಯಮಧಪಾಪಾಪಾ ಧಾಮಪಾಪಮಸಾಸಾಸಾನಿಧಸಾ ರಿರಿಮಾಗರಿಸಾಸಾರಿಮಾರಿಮಾಮಮಧಮಪಪಾಪಾಪಾಮಾಪಾಪಮ ಸಾಸಾನಿಧಸಸಾರಿರಿಗಾರಿಮಾರೀಸಾ | (ಆ) ಧಾಸಾಸಾಧಮಾಸಾಸಾಸಾಸಾಮ ಪಮಾಮಾಪಾಪಾ | (ಮಾಂಗಾಲೀ)                                                           41

೮೭೨   ಉದಾಹರಣಂ – (ಅ) [ಧಾಧಾ]ಸಾಸಾಸಾಸಧಾಸಾರಿರಿ [ಮರಿ] ಧಾಸಾರಿರಿಥಾಸಾ ಧಾಸಾಧಾಸಾಸಾರಿಮಾರಿಮಾಮಾಮಧಮಧಪಾಪಾಪಾ ಧಾಮಪಾಪಮಸಾಸಾಸಾನಿಧಸಾ ರಿರಿಮಾಗರಿಸಾಸಾರಿಮಾರಿಮಾಮಮಧಮಪಪಾಪಾಪಾಮಾಪಾಪಮ ಸಾಸಾನಿಧಸಸಾರಿರಿಗಾರಿಮಾರೀಸಾ | (ಆ) ಧಾಸಾಸಾಧಮಾಸಾಸಾಸಾಸಾಮ ಪಮಾಮಾಪಾಪಾ | (ಮಾಂಗಾಲೀ)                                                           42

[ivಸೈಂಧವೀ]

೮೭೩   ಪಂಚಮಾಂಶಾ ತದಂತಾ ಚ ಸಂಪೂರ್ಣಾ ಪಂಚಮೋಜ್ಜ್ವಲಾ |
ಸಿಂಧುದೇಶಸಮುದ್ಭೂತಾಂ ವಿಭಾಷಾಂ ಸೈಂಧವೀಂ ವಿದುಃ |
ಷಡ್ಜಪಂಚಮಸಂವಾದೋ ದೃಶ್ಯತೇ ಚ ಮುಹುರ್ಮುಹುಃ                                                      || ೯೫ ||

೮೭೪   ಉದಾಹರಣಂ – (ಅ) ಪಾಪಾಧಸಾರಿಗಾಗಾಗರಿಮಾರಿಧಾ (ಆ) ಸಸಾನಿಧಾಧಾಸನಿ ಧಾಧಾಮಸರಿಗಾಗಾಗರಿ ಸಾಧಾಧಮಾಪಾಧಾಪಾಧಸಾರಿಗಾರಿಪಪಾರಿಗಾಗಾರಿರೀಸಾ ಧಾಸಾಧಾಪಾ ಮಾಪಾಪಾಧಾಪಾಧಾಪಾ ಮಾಮಾಮಾಪಾ ಧಾಧಾಸಾರೀರಿಸಾ ಧಾಪಾ ಮಾಪಾಪಾ | (ಸೈಂಧವಿ)                                                                                                                  42

[v ಗುರ್ಜರೀ]

೮೭೫   ಗುರ್ಜರೀ ಪಂಚಮಾಂತಾ ಚ ಗಾಂಧಾರಾಂಶಾ sಲ್ಪಮಧ್ಯಮಾ |
ಷಡ್ಜಮಧ್ಯಮಸಂವಾದಾ ಸಂಪೂರ್ಣಾ ನಿತ್ಯಮೇವ ಹಿ |
ವಿಭಾಷೇಯಂ ಸಮಾಖ್ಯಾತಾ ಸಂಪೂ(?-ಕೀ-?)ರ್ಣಾ ಪಂಚಮೋದ್ಭವಾ                                      || ೯೬ ||

೮೭೬   ಉದಾಹರಣಂ- (ಅ) ಗರೀಮಾಮಾಮಧಾನಿಧಾಪಾಪಾ ಧಾಧಾನೀಧಾಮಾಮಾಮಾಧಾ ಗಾರೀರೀಸರಿಗರಿಮಾಧಾಮಾಪಾ ಧಪಧನಿಧಾಧಾಧಧಪರೀರೀ ಸಾರಿಮಾಗಾರಿಮಾಮಾಮಾಧಾ ನೀಧರಿಪಧಾನೀಧಾಪಾಪಾ ನೀಧಾಮಾಮಾಮಧಮಧಮಗಾರಿರೀಮಾಮಾರೀಸಾ ಸಾಗಾರೀಮಾಮಾಪಾಧಾನೀಸನೀಸನೀಧಾಮಪಾಪಾ | (ಗುರ್ಜರೀ)                                                               43

[viದಾಕ್ಷಿಣಾತ್ಯಾ]

೮೭೭   ಪಂಚಮಾದ್ಯಂತಸಂಯುಕ್ತಾ ದಾಕ್ಷಿಣಾತ್ಯಾ ಮನೋರಮಾ |
ಸಂಪೂರ್ಣಾ [ಕಥಿತಾ] ಹ್ಯೇಷಾ ಜಾತಾ ಗಾಂಧಾರಪ[o]ಮೇ |

ಪಾಠವಿಮರ್ಶೆ : ೮೭೩ಅ-ಊ, ಇ ೮೭೫ಅಆ, ಉ, ಅ-ಊ ೮೭೭ ಅಆ, ಇಈ

—-

೮೭೨   ಉದಾಹರಣೆ – (ಆ) [ದಾಧಾ]ಸಾಸಾಸಾಸಧಾಸಾರಿರಿ [ಮರಿ] ಧಾಸಾರಿರಿಧಾಸಾಧಾ ಸಾಧಾಸಾಸಾರಿಮಾರಿಮಾಮಾಮಧಮಧಪಾಪಾಪಾ ಧಾಮಪಾಪಮಸಾಸಾಸಾನಿಧಸಾ ರಿರಿಮಾ ಗರಿಸಾಸಾರಿಮಾರಿಮಾಮಮಧಮಪಪಾಪಾಪಾಮಾಪಾಪಮಸಾಸಾನಿಧಸಸಾರಿರಿಗಾರಿಮಾರೀಸಾ (ಆ) ಧಾಸಾಸಾಧಮಾಸಾಸಾಸಾಸಾಮಪಮಾಮಾಪಾಪಾಪಾ | (ಮಾಂಗಾಲೀ)                                                        41

[iv ಸೈಂಧವೀ]

೮೭೩   ಪಂಚಮವನ್ನು ಅಂಶವಾಗಿಯೂ ಅದನ್ನೇ ನ್ಯಾಸವಾಗಿಯೂ ಪಡೆದಿದ್ದು ಪಂಚಮ(ಸ್ವರ)ವು ಉಜ್ಜ್ವಲ(=ವಿಪುಲ)ವಾಗಿರುವ, ಸಿಂಧೂದೇಶದಲ್ಲಿ ಹುಟ್ಟಿರುವ೯(=ದೇಶಜಾ) ಸೈಂಧವಿಯು ವಿಭಾಷಾ ಎಂದು ತಿಳಿಯುತ್ತಾರೆ. (ಇದರ) ಷಡ್ಜಪಂಚಮಗಳಲ್ಲಿ(ಲ್ಲಿ) ಸಂವಾದ೯(=ಪರಸ್ಪರ ಸಂಚಾರವು)ವು ಮತ್ತೆ ಮತ್ತೆ ಕಂಡುಬರುತ್ತದೆ.                                                            ೯೫

೮೭೪   ಉದಾಹರಣೆ – (ಅ) ಪಾಪಾಧಸಾರಿಗಾಗಾಗರಿಮಾರಿ (ಆ) ಸಸಾನಿಧಾಧಾಸನಿಧಾಧಾಮಸರಿಗಾಗಾಗರಿ ಸಾಧಾಧಮಾಪಾಧಾಪಾಧಸಾರಿಗಾರಿಪಪಾರಿಗಾಗಾರಿರೀಸಾ ಧಾಸಾಧಾಪಾ ಮಾಪಾಪಾಧಾಪಾಧಾಪಾ ಮಾಮಾಮಾಪಾ ಧಾಧಾಸಾರೀರಿಸಾ ದಾಪಾ ಮಾಪಾಪಾ | (ಸೈಂಧವೀ)                                                                                                                 42

[v ಗುರ್ಜರೀ]

೮೭೫   ಗುರ್ಜರಿಯು ಪಂಚಮವನ್ನು ನ್ಯಾಸವಾಗಿಯೂ ಗಾಂಧಾರವನ್ನು ಅಂಶವಾಗಿಯೂ ಮಧ್ಯಮವನ್ನು ಅಲ್ಪವಾಗಿಯೂ ಪಡೆದಿದೆ ; ಷಡ್ಜಮಧ್ಯಮಗಳಲ್ಲಿ ಸಂವಾದ(=ಪರಸ್ಪರ ಸಂಚಾರ)ವನ್ನು ಹೊಂದಿದೆ ; ಇದು ಯಾವಾಗಲೂ ಸಂಪೂರ್ಣ(ರಾಗವೇ ಆಗಿದೆ). ಪಂಚಮ(ರಾಗ)ದಿಂದ ಹುಟ್ಟಿ ಸಂಪೂ(?-ಕೀ-?)ರ್ಣವಾಗಿರುವ ಇದನ್ನು ವಿಭಾಷಾ ಎಂದು ಹೇಳಿದೆ.                                                    ೯೬

೮೭೬   ಉದಾಹರಣೆ – (ಅ) ಗರೀಮಾಮಾಮಧಾನಿಧಾಪಾಪಾ ಧಾಧಾನೀಧಾಮಾಮಾಮಾಧಾ ಗಾರೀರೀಸರಿಗರಿಮಾಧಾಮಾಪಾ ಧಪಧನಿಧಾಧಾಧಧಪರೀರೀ ಸಾರಿಮಾಗಾರಿಮಾಮಾಮಾಧಾ ನೀಧರಿಪಧಾನೀಧಾಪಾ ನೀಧಾಮಾಮಾಮಧಮಧಮಗಾರಿರೀಮಾಮಾರೀಸಾ ಸಾಗಾರೀಮಾಮಾಪಾಧಾನೀಸನೀಸನೀಧಾಮಪಾಪಾ | (ಗುರ್ಜರೀ)                                                               43

[vi ದಾಕ್ಷಿಣಾತ್ಯಾ]

೮೭೭   ಗ್ರಹ, ನ್ಯಾಸವಾಗಿ ಪಂಚಮವನ್ನೊಡಗೂಡಿರುವ ದಾಕ್ಷಿಣಾತ್ಯಾ(ರಾಗವು) ಮನಸ್ಸನ್ನು ರಮಿಸುತ್ತದೆ. (ಅದನ್ನು) ಸಂಪೂರ್ಣ(ವೆಂದು ಹೇಳಿದೆ). ಗಾಂಧಾರಪಂಚಮದಲ್ಲಿ (ಭಾಷಾರಾಗವಾಗಿ)

____

ವಿಭಾಷೇsಯಂ ಸದಾ ಜ್ಞೇಯಾ ದೇಶಾಖ್ಯಾ ಪಂಚಮೋದ್ಭವಾ                                                           || ೯೭ ||

೮೭೮   ಉದಾಹರಣಂ – (ಅ) ಪಾಪಾನೀರೀ | (ಆ) ನಿರಿಗಾರಿಗರಿಮಾಮರಿರಿನಿನಿರಿ | (ಇ) ಧಾಪಾಪಾಪಪಾ ನಿರಿಗರಿಗರಿಮಗರಿರಿರಿ | (ಈ) ಧನಿಧಧನಿಧಾಧನಿಧಾಪಾ ಪಾನಿರಿಗಾರಿಗಾಧಾಮಾಗಾರಿರಿಸಾ ನಿರಿಗಾಮಾಗಾರೀನಿಧಾಪಾಪಾ | (ದಾಕ್ಷಿಣಾತ್ಯಾ)          44

[viiಅಂಧಾಲೀ]

೮೭೯   ಋಷಭಾಂಶಾ ಪಂಚಮಾಂತಾ ವಿಜ್ಞೇಯಾ ಷಡ್ಜದುರ್ಬಲಾ |
ನಿಷಾದಕಾಕಲೀರೂಪಾ ಕರ್ತವ್ಯಾ ಸಾ ತು ನಿತ್ಯಶಃ |                                                                  || ೯೮ ||

೮೮೦   ಸಾಧಾರಣಕೃತಾ ಹ್ಯೇಷಾ ವಿಭಾಷಾ ಗೀತವೇದಿಭಿಃ |
ಅಂಧಾಲೀ ವಿಶ್ರುತಾ ಲೋಕೇ ಕಿನ್ನರಾಣಾಂ ಚ ವಲ್ಲಭಾಃ                                                      || ೯೯ ||

೮೮೧   ಉದಾಹರಣಂ- (ಅ) ರೀಮಾಪಾಪಾಧಾಧಾಧಾಧಾಪಾ ಧಾಧಾಸಾಪಾಪಾಪಾ ಧಾನಿನಿಪಾ | (ಆ) ಪಾಸಾಪಾಧಾಪಾಪಾಪಾ ಮರಿಮರಿಧಾಧಾಪದಪಸಾಧಾಧಾಪಾಪಾ ಧಧಪಧಪಾಪಾಧಾಪಾ | (ಇ) ಪಾಮಾರಿರಿಸಾಧಾಪಾಪಾಪಾ ಮಪಧಮಮರಿರಿಧಾಧಪಪಾಪ | (ಈ) ಮಾಮಾಧಪಪಾಪಮಮರಿರಿಮಪಾಪಾ ಧಪಾಪಾಪಧಪಧಸಾರಿಗರಿಧಪಾಪಾಪಾ | (ಆಂಧಾಲೀ)                          45

[viii ತಾನೋದ್ಭವಾ]

೮೮೨   ಅಲ್ಪರ್ಷಭಾ ಮಧ್ಯಮಾಂಶಾ ಪಂಚಮನ್ಯಾಸಸಂಯುತಾ |
ಮಧ್ಯಧೈವತಸಂವಾದೋ ಬಾಹುಲ್ಯಂ ಪಂಚಮಸ್ಯ ತು |
ಸಂಪೂರ್ಣಾ ಪಂಚಮಾಚ್ಚೇಯಂ ಭಾಷಾ ತಾನೋದ್ಭವಾ ಭವೇತ್                                          || ೧೦೦ ||

೮೮೩   ಉದಾಹರಣಂ- (ಅ) ಮಾಮಾಮಗಾಸಾರಿರಿನಿಸಾಗರಿ | (ಆ) ಸಾನಿನಿಗಾಗಾಗಸಾನಿಪಾಪಾ ಪಾಸಾನಿಸಾಸಾಸಾನಿಸಾನಿನಿಧಧನಿನಿಸಾ | (ಇ) ಗರಿಸಾಸಾಸಾನಿನಿಸಾಧಾನಿಪಾಪಾ ಧಾನಿನಿಗಗಸಾಸಾಸಾಸಾಗಾಸಾನೀಧಾಮಾಪಾಪಾ | (ತಾನೋದ್ಭವಾ)                  46

ಪಾಠವಿಮರ್ಶೆ : ೮೭೯ಅ ೮೮೦ಇ ೮೮೨ಅ,ಇ,ಇಈ, ಉ,ಉಊ,

—-

ಹುಟ್ಟಿದೆ. ಪಂಚಮ(ರಾಗ)ದಲ್ಲಿ ಹುಟ್ಟಿರುವ ಇದು (ದಕ್ಷಿಣ)ದೇಶದ ಹೆಸರಿನದೆಂದೂ (ದೇಶಜಾ) ವಿಭಾಷಾರಾಗವೆಂದೂ ಯಾವಾಗಲೂ ತಿಳಿಯಬೇಕು.                                                                                                                                 ೯೭

೮೭೮   ಉದಾಹರಣೆ – (ಅ) ಪಾಪಾನೀರೀ | (ಆ) ನಿರಿಗಾರಿಗರಿಮಾಮರಿರಿನಿನಿರಿ | (ಇ) ಧಾಪಾಪಾಪಾಪಾನಿ ರಿರಿಗರಿಗರಿಮಗರಿರಿ | (ಈ) ಧನಿಧಧನಿಧಾಧನಿಧಾಪಾ ಪಾನಿರಿರಿಗಾರಿಗಾಧಾಮಾಗಾರಿರಿಸಾ ನಿರಿಗಾಮಾಗಾರೀನಿಧಾಪಾಪಾ | (ದಾಕ್ಷಿಣಾತ್ಯಾ)        44

[vii ಅಂಧಾಲೀ]

೮೭೯   (ಅಂಧಾಲಿಯನ್ನು) ರಿಷಭವು ಅಂಶವಾಗಿಯೂ ಪಂಚಮವು ನ್ಯಾಸವಾಗಿಯೂ ಷಡ್ಜವು ದುರ್ಬಲವಾಗಿಯೂ ನಿಷಾದವು ಕಾಕಲಿಯ ರೂಪದಲ್ಲಿಯೂ ಇರುವಂತೆ ಯಾವಾಗಲೂ ಹಾಡನ್ನು ಬಲ್ಲವರು ಪ್ರಯೋಗಿಸಬೇಕು.                                     ೯೮

೮೮೦   (ಹೀಗೆ) ಇದು ಸಾಧಾರಣವನ್ನಾಗಿಸಿದೆ ; ಇದು ವಿಭಾಷಾ ರಾಗ. ಕಿನ್ನರರಿಗೆ ಪ್ರಿಯವಾದ ಅಂಧಾಲಿಯು ಲೋಕದಲ್ಲಿ ಹೀಗೆ ಪ್ರಸಿದ್ಧವಾಗಿದೆ (=ವಿಶೇಷವಾಗಿ ಕೇಳಿಸುತ್ತದೆ)                                                                                                              ೯೯

೮೮೧   ಉದಾಹರಣೆ – (ಅ) ರೀಮಾಪಾಪಾಧಾಧಾಧಾಧಾಪಾ ಧಾಧಾಸಾಪಾಪಾಪಾ ಧಾನಿನಿಪಾ | (ಆ) ಪಾಸಾಪಾಧಾಪಾಪಾಸಾ ಮರಿಮರಿಧಾಧಾಪಧಪಸಾಧಾಧಾಪಾಪಾ ಧದಪಧಪಾಪಾಧಾಪಾ | (ಇ) ಪಾಮಾರಿರಿಸಾಧಾಪಾಪಾಪಾ ಮಪಧಮಮರಿರಿಧಾಧಪಪಾಪ | (ಈ) ಮಾಮಾಧಪಪಾಪಮಮರಿರಿಮಪಾಪಾ ಧಪಾಪಾಪಧಪಧಸಾಸಾರಿಗರಿಧಪಾಪಾಪಾ | (ಅಂಧಾಲೀ)                      45

[viii ತಾನೋದ್ಭವಾ]

೮೮೨   ರಿಷಭವನ್ನು ಅಲ್ಪವಾಗಿಯೂ ಮಧ್ಯಮವನ್ನು ಅಂಶವಾಗಿಯೂ ಪಂಚಮವನ್ನು ನ್ಯಾಸವಾಗಿಯೂ ಕೂಡಿಕೊಂಡಿರುವ ತಾನೋದ್ಭವಾ ಎಂಬೀ ಭಾಷಾರಾಗವು ಪಂಚಮ (ರಾಗ)ದಲ್ಲಿ ಹುಟ್ಟಿ, ಸಂಪೂರ್ಣವಾಗಿದೆ. ಅದರಲ್ಲಿ ಮಧ್ಯಮ-ಧೈವತಗಳ ನಡುವೆ, ಸಂವಾದ(=ಪರಸ್ಪರ ಸಂಚಾರ)ವಿದೆ, ಪಂಚಮದ ಬಹುತ್ವವಿದೆ.                                                                                            ೧೦೦

೮೮೩   ಉದಾಹರಣೆ –(ಅ) ಮಾಮಾಮಗಾಸಾರಿರಿನಿಸಾಗರಿ | (ಆ) ಸಾನಿನಿಗಾಗಾಗಸಾನಿಪಾಪಾ ಪಾಸಾನಿಸಾಸಾಸಾನಿಸಾನಿನಿಧಧನಿನಿಸಾ (ಇ) ಗರಿಸಾಸಾಸಾನಿನಿಸಾಧಾನಿಪಾಪಾ ಧಾನಿನಿಗಗಸಾಸಾಸಾ ಸಾಗಾಸಾನೀಧಾಮಾಪಾಪಾ | (ತಾನೋದ್ಭವಾ)                 46

____

[ix ತ್ರಾವಣೀ]

೮೮೪   ತ್ರಾವಣೀ ಪಂಚಮನ್ಯಾಸಾ ಪಂಚಮರ್ಷಭದುರ್ಬಲಾ |
ದ್ವಿಶ್ರುತೀನಾಂ ಸ್ವರೂಪೇಣ ಗಮನಂ ತತ್ ಪ್ರಯೋಕ್ತೃಭಿಃ                                                  || ೧೦೧ ||

೮೮೫   ಷಡ್ಜಮಧ್ಯಮಬಾಹುಲ್ಯಂ ಪಂಚಮರ್ಷಭಯೋಸ್ತಥಾ
ಸಾಧಾರಣಕೃತಾ ಹ್ಯೇಷಾ ತ್ರಾವಣೀ ದೇಶಸಂಭವಾ |                                                            || ೧೦೨ ||

೮೮೬   ಉದಾಹರಣಂ- (ಅ) ಸಾಸಾಸಾಪಾಪಾಪಾ ಧಾಧಾಧಾಧಾನೀನೀನೀಸಾಸಾನಿಧಾನಿಧಾಧಾರಿಸಾಸಾ ನೀಧಾನೀಧಾಸಾಮಮರಿಮಾರಿಮಾಗಾಗಾರಿಸಾ ಸನಿಪಾಪಾಪಾ ನಿಧಾನಿಸಾಸನಿಸನಿಮಧಧಸನಿಧಾಮಾಗಾಮಾಧಾನೀಸಾಸಾ ಧಾನೀಸಾಮಧಾ ಮಾಗಾಮಾಧಾನೀಸಾಸ | (ಆ) ಸಸಸನಿಸಾಸಾನಿಗಾಸನಿಧಾಮಾಮಾಮಾಧಾ- ರೀಸಾಸಾ ಸಧಾನೀಧಾಪಾ | (ತ್ರಾವಣೀ) 47

[x ಕೈಶಿಕೀ]

೮೮೭   ಕೈಶಿಕೀ ಪಂಚಮನ್ಯಾಸಾ ಮಧ್ಯಮಾಂಶಾ ನಿದುರ್ಬಲಾ |
ಮಧ್ಯಮಧೈವತಯಾನಂ ಬಾಹುಲ್ಯಂ ಪಂಚಮಸ್ಯ ತು |
ಏಷಾ ಭಾಷಾ ತು ಸಂಕೀರ್ಣಾ ನಿತ್ಯಂ ಪಂಚಮಸಂಭವಾ                                                            || ೧೦೩ ||

೮೮೮   ಉದಾಹರಣಂ- (ಅ) ಪಾಮಾಧಾನಿಧಾಪಾಪಾ ಪಾಧಾನೀಧಾಧಾಧಾಮಾಮಾ ಮಾಧಾಮಾಧಾಧಾನೀಸಾಸಾರಿರೀಪಾಪಾ ಮಾಧಾಮಾಧಮಧದಮಾಮಾಧಾ ನಿರಿಪಾಪಾ (ಕೈಶಿಕೀ)                                                                           48

೮೮೯   ಏತಾ ಯಾಪ್ಟಿಕನಿರ್ದಿಷ್ಟಾ ಭಾಷಾ ದಶ ಚ ಪಂಚಮೇ |                                                        || ೧೦೪ ||

ಪಾಠವಿಮರ್ಶೆ : ೮೮೪-೮೮೫ ೮೮೫ ಈ ೮೮೭ಆ,ಇ,ಉ ೮೮೯ಆ, ಈ ೮೯೦ಈ

—-

೮೮೪   ತ್ರಾವಣೀಯನ್ನು ಪಂಚಮವು ನ್ಯಾಸವಾಗಿರುವಂತೆಯೂ ಪಂಚಮರಿಷಭಗಳು ದುರ್ಬಲವಾಗಿಯೂ ಎರಡು ಶ್ರುತಿಗಳನ್ನುಳ್ಳ (ಗಾಂಧಾರನಿಷಾದ)ಸ್ವರಗಳ (ಶುದ್ಧ) ರೂಪದಲ್ಲಿ (ಪರಸ್ಪರವಾಗಿ) ಸಂಚಾರವಿರುವಂತೆಯೂ ಗಾಯಕವಾದಕರು ಪ್ರಯೋಗಿಸಬೇಕು.           ೧೦೧

೮೮೫   (ಅದರ) ಷಡ್ಜಮಧ್ಯಮಗಳಲ್ಲಿಯೂ ಹಾಗೆಯೇ ಪಂಚಮರಿಷಭಗಳಲ್ಲಿಯೂ ಬಾಹುಲ್ಯ (=ಸಂಗ)ವಿದೆ. (ತ್ರವಣಾ)ದೇಶದಲ್ಲಿ ಹುಟ್ಟಿದ (=ದೇಶಜಾ) ಈ ತ್ರಾವಣಿಯು ಸಾಧಾರಣವನ್ನಾಗಿ (ಕಾಕಲೀ-ಅಂತರ ಸಹಿತವಾಗಿ ಕೆಲವೊಮ್ಮೆ?) ಮಾಡಿರತಕ್ಕುದು. ೧೦೨

೮೮೬   ಉದಾಹರಣೆ – (ಅ) ಸಾಸಾಸಾಪಾಪಾಪಾ ಧಾಧಾಧಾಧಾನೀನೀನೀಸಾಸಾನಿಧಾನಿಧಾಧಾರಿಸಾಸಾ ನೀಧಾನೀಧಾಸಾಮಮರಿಮಾರಿಮಾಗಾಗಾರಿಸಾ ಸನಿಪಾಪಾಪಾ ನಿಧಾನಿಸಾಸನಿಸನಿಮಧಧಸನಿಧಾಮಾಗಾಮಾಧಾನೀಸಾಸಾಧಾನೀಸಾಮಧಾ ಮಾಗಾಮಾಧಾನೀಸಾಸ | (ಆ) ಸಸಸನಿಸಾಸಾನಿಗಾಸನಿಧಾಮಾಮಾಮಾಧಾರೀಸಾಸಾ ಸಧಾನೀಧಾಪಾ | (ತ್ರಾವಣೀ)  47

[x ಕೈಶಿಕೀ]

೮೮೭   ಕೈಶಿಕಿಯು ಪಂಚಮವನ್ನು ನ್ಯಾಸವಾಗಿಯೂ ಮಧ್ಯಮವನ್ನು ಅಂಶವಾಗಿಯೂ ನಿಷಾದವನ್ನು ದುರ್ಬಲವಾಗಿಯೂ ಹೊಂದಿದ್ದು ಮಧ್ಯಮಧೈವತಗಳಲ್ಲಿ (ಪರಸ್ಪರ) ಸಂಚಾರವಿದೆ ; ಪಂಚಮವು ಹೇರಳವಾಗಿದೆ. ಪಂಚಮ(ರಾಗ)ದಲ್ಲಿ ಹುಟ್ಟಿರುವ ಈ ಭಾಷಾರಾಗವು ಯಾವಾಗಲೂ ಸಂಕೀರ್ಣಾ(ವರ್ಗದ್ದಾಗಿದೆ).                                                                                          ೧೦೩

೮೮೮   ಉದಾಹರಣೆ – (ಅ) ಪಾಮಾಧಾನಿಧಾಪಾಪಾ ಪಾಧಾನೀಧಾಧಾಧಾಮಾಮಾ ಮಾಧಾಮಾಧಾಧಾನೀಸಾಸಾರಿರೀಪಾಪಾ ಮಾಧಾಮಾಧಮಧದಮಾಮಾಧಾ ನಿರಿಪಾಪಾ | (ಕೈಶಿಕೀ)                                                                        48

೮೮೯   ಇವು ಪಂಚಮ(ರಾಗ)ದಲ್ಲಿ ಯಾಷ್ಟಿಕನು (ಲಕ್ಷಣವನ್ನು) ನಿರೂಪಿಸಿರುವ ಹತ್ತು ಭಾಷಾ (ರಾಗ)ಗಳು.      ೧೦೪

[VI ಈಗ ಭಿನ್ನಷಡ್ಜದಲ್ಲಿ ಹುಟ್ಟಿರುವ ಭಾಷಾರಾಗಗಳ ಲಕ್ಷಣಗಳು]

೮೯೦   ಇನ್ನು ಮುಂದೆ ಭಿನ್ನಪಡ್ಜ(ರಾಗ)ದಲ್ಲಿ (ಹುಟ್ಟಿರುವ) ಭಾಷಾಗಳನ್ನು (ಕುರಿತು) ಹೇಳುತ್ತೇನೆ.               ೧೦೫

____