೮೯೦   ಅತಃಪರಂ ಪ್ರವಕ್ಷ್ಯಾಮಿ ಭಾಷಾ ವೈ ಭಿನ್ನಷಡ್ಜಕೇ                                                               || ೧೦೫ ||

[i ಶುದ್ಧಾ]

೮೯೧   ಧೈವತಾಂಶಾ ತದಂತಾ ಚ ಪಂಚಮರ್ಷಭವರ್ಜಿತಾ |
ಷಡ್ಜಗಾಂಧಾರಸಂಚಾರಾ ಭಿನ್ನಷಡ್ಜೇ ಪ್ರಯೋಕ್ತೃಭಿಃ |
ಏಷಾ ಹಿ ಶುದ್ಧಾ ವಿಜ್ಞೇಯಾ ಷಡ್ಜಹೀನೌಡುವಾ (?) ಭವೇತ್                                               || ೧೦೬ ||

೮೯೨   ಉದಾಹರಣೆ – (ಅ) ಧಾಧಾಮಾಗಾಮಾಮಾಗಗಸನಿಸನಿಸನಿಧಧಾ ಧಾನಿಮಾಮಾಗಾಮಾಗಸಾನಿಧನಿನಿಧಾ ಧಾನಿಸಾಧಮಾಗಾಸನಿನಿನಿಧಾಧಾಧಾಗಾಮಧ ಮಾಗಾಸಗಸಗಾಮಾಗಮಧಮಧಸಾಗಾಸಾಸಾಮಾಧಾ ಮಾಮಧಮಗಾಗಮಸಾಸಾಸಾಗಾ ಸಾನಿನಿನಿಸನಿಧಾದಾಧಾನಿಧಾ ಮಮಧಮಧಮಸಾಗಾಮಧಾ ಮಾಮಾಸಾಸಾನಿಧಾನಿಧಾನೀಗಾಸಾನಿಧಾನಿಧಾ | (ಶುದ್ಧಾ) 49

[ii ದಾಕ್ಷಿಣಾತ್ಯಾ]

೮೯೩   ಧೈವತಾಂಶಾ ಧೈವತಾಂತಾ ಷಡ್ಜಧೈವತಸಂಗತಾ |
ಷಡ್ಜಧೈವತಯೋಶ್ಚೈವರ್ಷಭಮಧ್ಯಮಯೋರ್ಗತಿಃ |
ವಿಭಾಷಾ ದಾಕ್ಷಿಣಾತ್ಯಾ ಚ ದೇಶಾಖ್ಯಾ ಷಡ್ಜಸಂಭವಾ                                                          || ೧೦೭ ||

೮೯೪   ಉದಾಹರಣೆ – (ಅ) ಧಾಧಾಸಾಸಾಗಧರಿಗಾರಿಸಾ ಗನಿರೀಸಾಸಾಧಾಸಾನೀನೀನೀನೀ ಧಾಧಾಧಾನಿಧಾಪಾಪಾಮಾಧಾಸಾಧಾ ನಿನಿಧಾಧಾಪಾಗಾಗಾಧಾರಿಧಾಮಾಮಾಧಾ ನಿನಿಧಾಧಾ | (ದಾಕ್ಷಿಣಾತ್ಯಾ) 50

[iiiಗಾಂಧಾರೀ]

೮೯೫   ಧೈವತಾದ್ಯಂತಸಂಯುಕ್ತರಾ ಗಾಂಧಾರಸ್ವರಭೂಷಿತಾ |
ಗಾಂಧಾರಧೈವತಸ್ಯಾತ್ರ ಗಮನಂ ದೃಶ್ಯತೇ ಘನಮ್ |
ಭಾಷಾ ಹ್ಯೇಷಾ ತು ಸಂಕೀರ್ಣಾ ಗಾಂಧಾರೀ ಸಮುದಾಹೃತಾ                                                  || ೧೦೮ ||

೮೯೬   ಉದಾಹರಣೆ – (ಅ) ಧಾಧಾಗಾಗಾಗಾರಿರಿಗಮಗಾಮಾದಾ ರಿರಿರಿರಿಗಾಮಾ ಪಾಮಾಮಾಪಾಮಾಪಾಮಾಪಾಸಗಾರಿರಿಗಾಗಾಗಾಧಾಪಾಧಾಗಾಗಾರೀಸಾಸಾಸಾ | (ಆ) ನಿಸಾಸಾನಿಗಾಮಾಪಾಸಾಸಾನೀಗಾರೀಮಾಗಮಾಗಾಮಾ ಮಾಮಾಮಾನಿನಿನಿನಿ ಮಧಾಧಾಧಾಧಾ | (ಗಾಂಧಾರೀ)                                                                             51

ಪಾಠವಿಮರ್ಶೆ : ೮೯೧ಈ, ಉ ೮೯೨ ೮೯೩ ಇಈ, ಉ ೮೯೫ ಇ, ಉ

—-

[i ಶುದ್ಧಾ]

೮೯೧   ಧೈವತವು ಅಂಶವಾಗಿಯೂ ಅದೇ ನ್ಯಾಸವಾಗಿಯೂ ಪಂಚಮರಿಷಭಗಳು ಲೋಪವಾಗಿರುವಂತೆಯೂ ಷಡ್ಜಗಾಂಧಾರಗಳಲ್ಲಿ (ಪರಸ್ಪರ) ಸಂಚಾರವಿರುವಂತೆಯೂ ಗಾಯಕವಾದಕರು ಭಿನ್ನಷಡ್ಜರಾಗದಲ್ಲಿ ಹುಟ್ಟಿರುವಂತೆ ಪ್ರಯೋಗಿಸಬೇಕು ; ಇದೇ ಶುದ್ಧಾ ರಾಗ ಎಂದು ತಿಳಿಯಬೇಕು. (ಇದು) ಷಡ್ಜವನ್ನು ಕಳೆದುಕೊಂಡು ಔಡುವ(!)ವಾಗುತ್ತದೆ.                                                   ೧೦೬

೮೯೨   ಉದಾಹರಣೆ – (ಅ) ಧಾಧಾಮಾಗಾಮಾಮಾಗಗಸನಿಸನಿಸನಿಧನಿಧಾ ಧಾನಿಮಾಮಾಗಾಮಾಗಸಾನಿಧನಿನಿಧಾ ಧಾನಿಸಾಧಮಾಗಾಸನಿನಿನಿಧಾಧಾಧಾಗಾಮಧ ಮಾಗಾಸಗಸಗಾಮಾಗಮಧಮಧಸಾಗಾಸಾಸಾಮಾಧಾ ಮಾಮಧಮಗಾಗಮಸಾಸಾಸಾಗಾ ಸಾನಿನಿನಿಸನಿಧಾದಾಧಾನಿಧಾ ಮಮಧಮಧಮಸಾಗಾಮಧಾ ಮಾಮಾಸಾಸಾನಿಧಾನಿಧಾನೀಗಾಸಾನಿಧಾನಿಧಾ | (ಶುದ್ಧಾ) 49

[iiದಾಕ್ಷಿಣಾತ್ಯಾ]

೮೯೩   ಧೈವತವು ಅಂಶವಾಗಿಯೂ ಧೈವತವು ನ್ಯಾಸವಾಗಿಯೂ ಷಡ್ಜಧೈವತಗಳಲ್ಲಿ ಸಂಗತಿಯೂ ಷಡ್ಜಧೈವತಗಳ ನಡುವೆ, ರಿಷಭಮಧ್ಯಮಗಳ ನಡುವೆ ಪರಸ್ಪರ ಸಂಚಾರವೂ ಇರುವ ದಾಕ್ಷಿಣಾತ್ಯಾರಾಗವು ವಿಭಾಷಾ; (ದಕ್ಷಿಣ) ದೇಶದ ಹೆಸರನ್ನು ಪಡೆದಿದೆ. (ದೇಶಜಾ), (ಭಿನ್ನ)ಷಡ್ಜದಲ್ಲಿ ಹುಟ್ಟಿದೆ.                                                                                                                                    ೧೦೭

೮೯೪   ಉದಾಹರಣೆ – (ಅ) ಧಾಧಾಸಾಸಾಗಧರಿಗಾರಿಸಾ ಗನಿರೀಸಾಸಾಧಾಸಾನೀನೀನೀನೀ ಧಾಧಾಧಾನಿಧಾಪಾಪಾಮಾಧಾಸಾಧಾ ನಿನಿಧಾಧಾಪಾಗಾಗಾಧಾರಿಧಾಮಾಮಾಧಾ ನಿನಿಧಾಧಾ | (ದಾಕ್ಷಿಣಾತ್ಯಾ) 50

[iii ಗಾಂಧಾರೀ]

೮೯೫   ಗಾಂಧಾರಿಯು ಗ್ರಹನ್ಯಾಸಗಳನ್ನಾಗಿ ಧೈವತವನ್ನು ಕೂಡಿಕೊಂಡಿದೆ; ಗಾಂಧಾರಸ್ವರದಿಂದ (ಬಹುಲವಾಗಿ) ಅಲಂಕೃತವಾಗಿದೆ. ಇದರಲ್ಲಿ ಗಾಂಧಾರಧೈವತಗಳ ನಡುವೆ ಸಂಚಾರವು ಹೇರಳವಾಗಿ ಕಂಡುಬರುತ್ತದೆ. ಈ ಭಾಷಾರಾಗವು ಸಂಕೀರ್ಣಾವರ್ಗದ್ದು ಎಂದು ಹೇಳಲಾಗಿದೆ.          ೧೦೮

೮೯೬   ಉದಾಹರಣೆ – (ಅ) ಧಾಧಾಗಾಗಾಗಾರಿರಿಗಮಗಾಮಾದಾ ರಿರಿರಿರಿಗಾಮಾ ಪಾಮಾಮಾಪಾಮಾಪಾಮಾಪಾಸಗಾರಿರಿಗಾಗಾಗಾಧಾಪಾಧಾಗಾಗಾರೀಸಾಸಾಸಾ | (ಆ) ನಿಸಾಸಾನಿಗಾಮಾಪಾಸಾಸಾನೀಗಾರೀಮಾಗಮಾಗಾಮಾ ಮಾಮಾಮಾನಿನಿನಿನಿ ಮಧಾಧಾಧಾಧಾ | (ಗಾಂಧಾರೀ)                                                                             51

____

[iv ಶ್ರೀಕಂಠಿ]

೮೯೭   ಧೈವತಾದ್ಯಂತಸಂಯುಕ್ತಾ ಷಾಡವಾ ಪಂಚಮೋಜ್ಝಿತಾ |
ಮಧ್ಯಮರ್ಷಭಸಂವಾದೋ ದ್ವಿಶ್ರುತೀನಾಂ ಚ ಗೀಯತೇ |
ವಿಭಾಷಾ ಚೈವ ಶ್ರೀಕಂಠಿ ಪ್ರಯೋಗೇ ಲಲಿತಾಸ್ತುತೇ                                                              || ೧೦೯ ||

೮೯೮   ಉದಾಹರಣಂ- (ಅ) ಧಾನಿಮಾಗಾಗಾಧಾ ರಿಮಾಗಾಗಾಧಾ ರಿಮಾಗರಿಗಾರಿರಿಗಾರಿರಿಗಾಮಾಗಾರಿಗಾಧಾ ರಿರಿರೀನಿಸಾನಿನಿಧಾಧಾ | (ಶ್ರೀಕಂಠೀ)          52

[v ಪೌರಾಲೀ]

೮೯೯   ಮಧ್ಯಮಾಂಶಾ ಧೈವತಾಂತಾ ಋಷಭೇಣ ತು ದುರ್ಬಲಾ |
ಮಧ್ಯಮರ್ಷಭಪಂಚಮಾನಾಂ ಗಮನಂ(!-ಮಗಮನಂ?) ದೃಶ್ಯತೇ ಘನಮ್                                 || ೧೧೦ ||

೯೦೦   ಏಷಾ ವಿಭಾಷಾ ಪೌರಾಲೀ ರಮ್ಯಾ ಚಾತಿಮನೋಹರಾ |
ಗೀಯತೇ ನಾಗಲೋಕೇನ ಮಗಕೈರ್ಮಧುರಸ್ವರಾ                                                                 || ೧೧೧ ||

೯೦೧   ಉದಾಹರಣಂ- (ಅ) [ಮಾ]ಪಾಪಾಧಾ ನಿನಿಸಾಸಾಮಾನಿಧಾ ಪಧಾಧಾ- ಧಾಧಾ ನಿಸಾರಿರಿಮಾಗಾರಿಸಾರಿಮಾಗಾಸಾರಿಸಾರಿಮಾಮಾರಿಗಾರಿಮಾ1 | ಸಾಸಾಸಾಸಾ ನಿನಿನಿನೀಧಾಧಾ ಮಾಪಾಮಾಪಾಪಾಪಾನಿನಿರಿರಿಸಾನಿಧಾ ಪಾಧಾಧಾನಿನಿಧಾ ನಿನಿರಿರಿನಿರಿ ರಿಮಾಗಾರಿಸಾ ನಿರಿಸಾನಿಸಾಸಾನಿನಿಧಾಧಾ ಗಮಾಪಾ- ಧಾನಿನಿಸಾನಿಸಾನಿಧಾಧಾ | (ಪೌರಲೀ)                                                                                     53

[vi ಬಾಂಗಾಲೀ]

೯೦೨   ಧೈವತಾದ್ಯಂತಸಂಯುಕ್ತಾ ಸಂಪೂರ್ಣಾ ಲೋಕರಂಜಿಕಾ |
ಧೈವತನಿಷಾದಸಂವಾದಃ ಷಡ್ಜಗಾಂಧಾರಯೋಸ್ತಥಾ                                                             || ೧೧೨ ||

೯೦೩   ಬಂಗಾಲದೇಶಸಂಭೂತಾ ಬಾಂಗಾಲೀ ದಿವ್ಯರೂಪಿಣೀ |
ಏಷಾ ವೈ ಸರಸಾ ಭಾಷಾ ದೈವತಸ್ಯಾಪಿ ವಲ್ಲಭಾ |
ಪ್ರಯೋಗೇ ಶ್ಲಕ್ಷ್ಣಲಕ್ಷ್ಮಾ ಚ ಗಾಯಕೈಃ ಸ್ವರಶೋಭಿತೈಃ                                                      || ೧೧೩ ||

ಪಾಠವಿಮರ್ಶೆ : ೮೯೭ಆ,ಉ ೮೯೯ಅ, ಇ, ಈ ೯೦೦ಅ ೯೦೧ಅ ೯೦೩ಆ, ಇಈ, ಉ

—-

[iv ಶ್ರೀಕಂಠಿ]

೮೯೭   ಶ್ರೀಕಂಠಿಯು ಗ್ರಹನ್ಯಾಸಗಳಲ್ಲಿ ಧೈವತವನ್ನು ಕೂಡಿಕೊಂಡಿದೆ ; ಪಂಚಮವನ್ನು ಬಿಟ್ಟದೆ (ಆದುದರಿಂದ) ಷಾಡವವಾಗಿದೆ. ಮಧ್ಯಮರಿಷಭಗಳಲ್ಲಿಯೂ ಎರಡು ಶ್ರುತಿಗಳನ್ನುಳ್ಳ (=ಗಾಂಧಾರನಿಷಾದ)ಸ್ವರಗಳಲ್ಲಿಯೂ ಪರಸ್ಪರ ಸಂವಾದ(=ಸಂಚಾರ)ವಿದೆ. ಈ ವಿಭಾಷಾರಾಗವನ್ನು ಲಲಿತಾ(ದೇವತೆಯ) ಸ್ತುತಿಯಲ್ಲಿ ಪ್ರಯೋಗಿಸಬೇಕು.೧೦೯

೮೯೮   ಉದಾಹರಣಂ- (ಅ) ಧಾನಿಮಾಗಾಗಾಧಾ ರಿಮಾಗಾಗಾಧಾ ರಿಮಾಗರಿಗಾರಿರಿಗಾರಿರಿಗಾಮಾಗಾರಿಗಾಧಾ ರಿರಿರೀನಿಸಾನಿನಿಧಾಧಾ | (ಶ್ರೀಕಂಠೀ)          52

[v ಪೌರಾಲೀ]

೮೯೯   (ಪೌರಾಲೀಯು) ಮಧ್ಯಮವನ್ನು ಅಂಶವಾಗಿಯೂ ಧೈವತವನ್ನು ನ್ಯಾಸವಾಗಿಯೂ ರಿಷಭವನ್ನು ದುರ್ಬಲವಾಗಿಯೂ ಪಡೆದಿದೆ. ಮಧ್ಯಮರಿಷಭಪಂಚಮಗಳ ನಡುವೆ ಸಂಚಾರವು ಹೇರಳವಾಗಿರುವುದು ಕಂಡುಬರುತ್ತದೆ.                                 ೧೧೦

೯೦೦   ಈ ಪೌರಾಲೀ ಎಂಬ ವಿಭಾಷಾರಾಗವು ಮನಸ್ಸನ್ನು ರಮಿಸುತ್ತದೆ, ಅತಿಯಾಗಿ ಸುಂದರವಾಗಿದೆ. ಇದನ್ನು ನಾಗಲೋಕದಲ್ಲಿ ಗಮಕಸಹಿತವಾದ ಮಧುರಸ್ವರಗಳಿಂದ ಹಾಡಲಾಗುತ್ತದೆ.                                                                       ೧೧೧

೯೦೧   ಉದಾಹರಣಂ- (ಅ) [ಮಾ]ಪಾಪಾಧಾ ನಿನಿಸಾಸಾಮಾನಿಧಾ ಪಧಾಧಾಧಾಧಾ ನಿಸಾರಿರಿಮಾಗಾರಿಸಾರಿಮಾಗಾಸಾರಿಸಾರಿಮಾಮಾರಿಗಾರಿಮಾ | ಸಾಸಾಸಾಸಾ ನಿನಿನಿನೀಧಾಧಾ ಮಾಪಾಮಾಪಾಪಾಪಾನಿನಿರಿರಿಸಾನಿಧಾ ಪಾಧಾಧಾನಿನಿಧಾ ನಿನಿರಿರಿನಿರಿ ರಿಮಾಗಾರಿಸಾ ನಿರಿಸಾನಿಸಾಸಾನಿನಿಧಾಧಾ ಗಮಾಪಾಧಾನಿನಿಸಾನಿಸಾನಿಧಾಧಾ | (ಪೌರಲೀ)                                                                                       53

[viಬಾಂಗಾಲೀ]

೯೦೨   (ಬಾಂಗಾಲಿಯು)ಗ್ರಹ, ನ್ಯಾಸಗಳಲ್ಲಿ ಧೈವತದಿಂದ ಕೂಡಿದೆ, ಸಂಪೂರ್ಣರಾಗವಾಗಿದೆ, ಜನರನ್ನು ರಂಜಿಸುತ್ತದೆ. ಧೈವತನಿಷಾದಗಳ ನಡುವೆ, ಹಾಗೆಯೇ ಷಡ್ಜಗಾಂಧಾರಗಳ ನಡುವೆ ಸಂವಾದ (= ಪರಸ್ಪರ ಸಂಚಾರ)ವಿದೆ.                                               ೧೧೨

೯೦೩   ಬಾಂಗಾಲಿಯು ಬಂಗಾಲದೇಶದಲ್ಲಿ ಹುಟ್ಟಿದೆ (=ದೇಶಜಾ), ದೇವತಾಮಯ ರೂಪವನ್ನು ಪಡೆದಿದೆ ; ಇದು ರಸಭರಿತವಾದ ಭಾಷಾರಾಗ, (ಇಷ್ಟ)ದೇವತೆಗೂ ಇಷ್ಟವಾದುದು. ಗಾಯಕರು ಶೋಭಿಸುವ ಸ್ವರಗಳಿಂದ ನಯವಾದ ಲಕ್ಷಣಗಳಿರುವಂತೆ ಇದನ್ನು ಪ್ರಯೋಗಿಸುತ್ತಾರೆ.       ೧೧೩

____

೯೦೪   ಉದಾಹರಣಂ- (ಅ) ಧಾರೀಸಾರೀಗಾಗಾಧಾ ರೀಸಾರೀಮಾನೀಸಾನೀನೀಸಾ ಸಾಸಾರಿಧಾಮಾಪಾ ಧಾಧಾರಿಸಾಮಾಧಾನಿಧಾಧಾ | (ಬಾಂಗಾಲೀ)          54

[viiಸೈಂಧವೀ]

೯೦೫   ಮಧ್ಯಮಾಂಶಾ ಧೈವತಾಂತಾ ಪಂಚಮರ್ಷಭದುರ್ಬಲಾ |
ಷಡ್ಜಮಧ್ಯಮಸಂವಾದಃ ಷಡ್ಜಗಾಂಧಾರಯೋಸ್ತಥಾ |
ಸಿಂಧುವಿಷಯಸಂಭೂತಾಂ ದೇಶಾಖ್ಯಾಂ ಸೈಂಧವೀಂ ವಿದುಃ |                                                 || ೧೧೪ ||

೯೦೬   ಉದಾಹರಣಂ- (ಅ) ಮಾ || (ಆ) ಮಾಧಾನೀಧಾ ನೀಸಾಗಾಸಾಮಾಸಾಸಾಗಾ ಮಾಗಾಮಾ ಗಾಸಾನಿಸಾನಿಧಾ ಮಾಪಾಮಾಮಾಮಾಸಾಮಾಧಾ ಮಾನಿಸಾಸಾಸಾಸಾಗಾರೀಧಾನಿಧಾಧಾ ಮಾಧಾನೀಧಾಮಾಧಾಧಾಧಾ | (ಸೈಂಧವೀ) 55

[viii ಕಾಲಿಂಗೀ]

೯೦೭   ಗಾಂಧಾರಾಂಶಾ ತು ಕಾಲಿಂಗೀ ಧೈವತಾಂತಾ ಚತುಃಸ್ವರಾ |
ಪಂಚಮರ್ಷಭಹೀನಾ ಚ ನಿಷಾದೇನ ಚ ದುರ್ಬಲಾ                                                               || ೧೧೫ ||

೯೦೮   ಏಷಾ ಹ್ಯಂತರಭಾಷಾ ವೈ ಕಾಲಿಂಗೈಃ ಸಾ ತು ಗೀಯತೇ |
ಹೃದ್ಯಾ ಮನೋಹರಾ ಹ್ಯೇಷಾ ಪಂಚಮಾದನುಗೀಯತೇ                                                     || ೧೧೬ ||

೯೦೯   ಉದಾಹರಣಂ- (ಅ) ಗಾಸಾಮಾಗಾಮಾಗಾಸಾಸಾಸಾಸಾಧಾ ಮಾಸಾಸಾಧಾಮನೀಮಾಮಾಸಾಸಾಸಾಸಾಮಾಧಾ ಮಾಮಾಧಾಸಾಸಾಧಾನೀಗಾಧಾ | (ಕಾಲಿಂಗೀ)                                                                                        56

[ix ಪುಲಿಂದೀ]

೯೧೦   ಷಡ್ಜಾಂತಾ ಧೈವತಾಂಶಾ ಚ ಹೀನೌ ಗಾಂಧಾರಪಂಚಮೌ |
ಷಡ್ಜ[ಮಧ್ಯಮಸಂಗತ್ಯಾ ಷಡ್ಜ] ದೈವತಯೋಸ್ತಥಾ                                                           || ೧೧೭ ||

೯೧೧   ಏಷಾ ಹ್ಯಂತರಭಾಷಾ ವೈ ಪುಲಿಂದೇನ ತು ಗೀಯತೇ |
ಪುಲಿಂದಕೇಶಿ ವಿಖ್ಯಾತಾ ಷಡ್ಜ ಔಡುವಿತಾ ತಥಾ                                                                 || ೧೧೮ ||

ಪಾಠವಿಮರ್ಶೆ : ೯೦೪ ೯೦೫ ಅ, ಆ, ಉ ೯೦೬ಅ ೯೦೭ಅ ೯೦೮ಅ, ಆ, ಈ ೯೦೯ ೯೧೦ಅ, ಇಈ ೯೧೧ ಇ, ಈ

—-

೯೦೪   ಉದಾಹರಣಂ- (ಅ) ಧಾರೀಸಾರೀಗಾಗಾಧಾ ರೀಸಾರೀಮಾನೀಸಾನೀನೀಸಾ ಸಾಸಾರಿಧಾಮಾಪಾ ಧಾಧಾರಿಸಾಮಾಧಾನಿಧಾಧಾ | (ಬಾಂಗಾಲೀ)          54

[vii ಸೈಂಧವಿ]

೯೦೫   (ಸೈಂಧವಿಯು) ಮಧ್ಯಮವನ್ನು ಅಂಶವಾಗಿಯೂ ಧೈವತವನ್ನು ನ್ಯಾಸವಾಗಿಯೂ ಪಂಚಮರಿಷಭಗಳನ್ನು ದುರ್ಬಲವಾಗಿಯೂ ಪಡೆದಿದೆ. ಷಡ್ಜಮಧ್ಯಮಗಳಲ್ಲಿಯೂ ಹಾಗೆಯೇ ಷಡ್ಜಗಾಂಧಾರಗಳಲ್ಲಿಯೂ ನಡುವೆ ಸಂವಾದ(=ಪರಸ್ಪರ ಸಂಚಾರ)ವಿದೆ. (ಈ) ಸೈಂಧವಿಯನ್ನು ಸಿಂಧೂದೇಶದಲ್ಲಿ ಹುಟ್ಟಿದೆಯೆದೂ(=ದೇಶಜಾ) (ಈ) ದೇಶದ ಹೆಸರಿನದೆಂದೂ ತಿಳಿಯಲಾಗಿದೆ.                        ೧೧೪

೯೦೬   ಉದಾಹರಣಂ- (ಅ) ಮಾ | (ಆ) ಮಾಧಾನೀಧಾ ನೀಸಾಗಾಸಾಮಾಸಾಸಾಗಾ ಮಾಗಾಮಾ ಗಾಸಾನಿಸಾನಿಧಾ ಮಾಪಾಮಾಮಾಮಾಸಾಮಾಧಾ ಮಾನಿಸಾಸಾಸಾಸಾ ಗಾರೀಧಾನಿಧಾಧಾ ಮಾಧಾನೀಧಾಮಾಧಾಧಾಧಾ | (ಸೈಂಧವೀ)                                        55

[viii ಕಾಲಿಂಗೀ]

೯೦೭   ಕಾಲಿಂಗಿಯ ಗಾಂಧಾರವನ್ನು ಅಂಶವಾಗಿಯೂ ಧೈವತವನ್ನು ನ್ಯಾಸವಾಗಿಯೂ ಉಳ್ಳ ನಾಲ್ಕೇ ಸ್ವರಗಳ ರಾಗ; ಅದು ಪಂಚಮರಿಷಭಗಳನ್ನು ಬಿಟ್ಟಿದೆ ಮತ್ತು ನಿಷಾದದಿಂದ ದುರ್ಬಲವಾಗಿದೆ.                                                                                    ೧೧೫

೯೦೮   ಇದು ಅಂತರಭಾಪಾರಾಗ. ಕಲಿಂಗದವರು ಇದನ್ನು ಹಾಡುತ್ತಾರೆ. ಇದು ಹೃದಯ ರಂಜಕವಾಗಿಯೂ ಸುಂದರವಾಗಿಯೂ ಇದೆ; ಪಂಚಮ(ರಾಗ)ವನ್ನು ಅನುಸರಿಸಿಕೊಂಡು (=ಅದರ ನಂತರ) ಇದನ್ನು ಹಾಡಲಾಗುತ್ತದೆ.೧೧೬

೯೦೯   ಉದಾಹರಣಂ- (ಅ) ಗಾಸಾಮಾಗಾಮಾಗಾಸಾಸಾಸಾಸಾಧಾ ಮಾಸಾಸಾಧಾಮನೀಮಾಮಾಸಾಸಾಸಾಸಾಮಾಧಾ ಮಾಮಾಧಾಸಾಸಾಧಾನೀಗಾಧಾ | (ಕಾಲಿಂಗೀ)                                                                                        56

[ix ಪುಲಿಂದೀ]

೯೧೦   ಪುಲಿಂದಿಯು ಷಡ್ಜವನ್ನು ನ್ಯಾಸವಾಗಿಯೂ ಧೈವತವನ್ನು ಅಂಶವಾಗಿಯೂ ಹೊಂದಿ ಗಾಂಧಾರ ಮತ್ತು ಪಂಚಮಗಳನ್ನು ಬಿಟ್ಟಿದೆ. ಷಡ್ಜ[ಮಧ್ಯಮಗಳ ನಡುವೆ, ಹಾಗೆಯೇ ಷಡ್ಜ]ಧೈವತಗಳ ನಡುವೆ ಸಂಗವಿದೆ.

೯೧೦   ಈ ಅಂತರಭಾಷಾ ರಾಗವನ್ನು ಪುಲಿಂದ(ಜನ)ರು ಹಾಡುತ್ತಾರೆ. ಇದು ಪುಲಿಂದಕವೆಂದು ಪ್ರಸಿದ್ಧವಾಗಿದೆ, ಔಡುವಿತವಾಗಿದೆ, (ಭಿನ್ನ)ಷಡ್ಜದಲ್ಲಿ (ಹುಟ್ಟಿದೆ).                                                                                                        ೧೧೮

____

೯೧೨   ಉದಾಹರಣಂ- (ಅ) [ಧಾಧಾ]ಸಾಸಾಸಾಧಾನಿಸಾರಿಸಾ ಧಾನಿಧಾಧಾಧಾರಿ- ರಿಸಾಸಾಸಾ ರಿರಿಧಾಧಾಧಾರಿಸಾಧಾನಿಸಾಸಾರಿಸಾ ರಿಸಾಧನೀಪಾ[ಸಾ|] (ಪುಲಿಂದೀ)                                                                                                                                57

೯೧೩   ಏತಾ ಯಾಷ್ಟಿಕನಿರ್ದಿಷ್ಟಾಭಾಷಾ ವೈ ಭಿನ್ನಷಡ್ಜಕೇ                                                         || ೧೧೯ ||