[ಮಂಗಲಾ]

೯೩೩   ಪಂಚಮಾಂಶಾ ಮಧ್ಯಮಾಂತಾ ಸಂಪೂರ್ಣಾ ಮಧ್ಯಮೋಜ್ಜ್ವಲಾ |
ಸರ್ವೇಷಾಂ ಮಂಗಲಾನಾಂ ಚ ನಾಯಕೈರ್ಗೀಯತೇ ಸದಾ |
ಮಂಗಲ್ಯಾ ಚ ಪ್ರಶಸ್ತಾ ಚ ತೇನಾಸೌ ಮಂಗಲಾ ಸ್ಮೃತಾ || ೧೩೨ ||

೯೩೪   ಏಷಾ ಬಂಗಾಲ (?ಮಂಗಲಾ) ಭಾಷಾ ತು ಬೋಟ್ಟರಾಗೇ ಪ್ರಗೀಯತೆ |
ಸರ್ವೇಷಾಂ ಮಂಗಲಾನಾಂ ಚ ನಾಯಕೈರ್ಗೀಯತೇ ಸದಾ |
ಮಂಗಲ್ಯಾ ಚ ಪ್ರಶಸ್ತಾ ಚ ತೇನಾಸೌ ಮಂಗಲಾ ಸ್ಮೃತಾ || ೧೩೩ ||

೯೩೫ ಉದಾಹರಣಂ-(ಅ) ಪಾಧಾಪಾಧಾಮಾ ಧಾಪಾಮಾ ಗಾರಿರಿರಿಗಮಪಾ ಧಾಸಾ-ಗಾಸಾನಿಧಾಪಾಪಾಮಾ | (ಮಂಗಲಾ)  65

[IX ಈಗ ಬೋಟ್ಟರಾಗದಲ್ಲಿ ಹುಟ್ಟಿರುವ ಭಾಷಾರಾಗಗಳ ಲಕ್ಷಣಗಳು]

[i ಮಂಗಲಾ]

೯೩೩ (ಮಂಗಲಾರಾಗವು) ಪಂಚಮವನ್ನು ಅಂಶವಾಗಿಯೂ ಮಧ್ಯಮವನ್ನು ನ್ಯಾಸವಾಗಿಯೂ ಮಧ್ಯಮವನ್ನು ಉಜ್ಜ್ವಲ (=ವಿಪುಲ)ವಾಗಿಯೂ ಹೊಂದಿರುವ ಸಂಪೂರ್ಣರಾಗ. ಇದರ ಧೈವತನಿಷಾದಗಳಲ್ಲಿ (ಪರಸ್ಪರವಾದ) ಸಂಚಾರವು ಯಾವಾಗಲೂ ಬಹಳವಾಗಿ ಕಂಡುಬರುತ್ತದೆ.         ೧೩೨

೯೩೪ ಈ ಬಂಗಾಲ (? ಮಂಗಲಾ?) ಎಂಬ ಭಾಷಾರಾಗವನ್ನು ಬೋಟ್ಟರಾಗದಲ್ಲಿ (ಅದರ ಜನ್ಯವಾಗಿ) ಹಾಡಲಾಗುತ್ತದೆ. ಪ್ರತಿಯೊಂದು ಮಂಗಲ ಸಂದರ್ಭದಲ್ಲಿ (ನಾಟಕದ ಕಥಾ)ನಾಯಕನು (ಇದನ್ನು) ಯಾವಾಗಲೂ ಹಾಡುತ್ತಾನೆ. ಮಂಗಲಸನ್ನಿವೇಶಗಳಲ್ಲಿ (ಹಾಡಲು) ಪ್ರಶಸ್ತವಾಗಿರುವುದರಿಂದ ಇದು ಮಂಗಲವೆಂಬ ಹೆಸರಿನದೆಂದು ಸ್ಮರಿಸಲಾಗಿದೆ.                                              ೧೩೩

೯೩೫ ಉದಾಹರಣೆ – (ಅ) ಪಾಧಾಪಾಧಾಮಾ ಧಾಪಾಮಾ ಗಾರಿರಿರಿಗಮಪಾ ಧಾಸಾ-ಗಾಸಾನಿಧಾಪಾಪಾಮಾ | (ಮಂಗಲಾ)             65