[i ಮಾಲವಪಂಚಮೀ]

೯೩೭   ಧೈವತಾಧ್ಯಂತಸಂಯುಕ್ತಾ ಜ್ಞೇಯಾ ಮಾಲವಪಂಚಮೀ |
ಷಡ್ಜರ್ಷಭಸಂವಾದಃ ಸ್ಯಾತ್‌ಷಡ್ಜಧೈವತಯೋಸ್ಥಾ |
ಸಂಪೂರ್ಣಾ ಸುಸ್ವರಾ ಹ್ಯೇಷಾ ದೇಶಭಾಷಾ ಮನೋಹರಾ || ೧೩೪ ||

೯೩೮ ಉದಾಹರಣಂ- (ಅ) ಧೈವತ ದಾಧಾಧೈವತ ಧಾಧಾಧಾರಿಮಾಮಾಧಾ | (ಆ)ಪಾಮಧಾಧಾಪಾಮಾಗರಿಮಾಧಾಪಾಧಾ (ಮಾಲವಾ? ಮಾಲವಪಂಚಮೀ)                                                                                                                          66

ಪಾಠವಿಮರ್ಶೆ: ೯೩೬ ೯೩೭ಆ,ಇ,ಈ,ಉ ೯೩೯ ಆ,ಇ ೯೪೦ಅ ೯೪೧ ೯೪೨ಅ ಅ-ಊ

—-

[XI ಈಗ ಟಕ್ಕಕೈಶಿಕದಲ್ಲಿ ಹುಟ್ಟಿರುವ ಭಾಷಾಗಳ ಲಕ್ಷಣಗಳು]

[i ಮಾಲವಪಂಚಮೀ]

೯೩೭ ಮಾಲವಪಂಚಮೀಯು ಗ್ರಹನ್ಯಾಸಗಳಾಗಿ ಧೈವತವನ್ನೊಡಗೂಡಿದೆ ಎಂದು ತಿಳಿಯಬೇಕು; (ಇಧರ) ಷಡ್ಜರಿಷಭಗಳಲ್ಲಿ ಸಂವಾದ (=ಪರಸ್ಪರ ಸಂಚಾರ)ವಿದೆ, ಷಡ್ಜಧೈವತಗಳಲ್ಲಿಯೂ ಹಾಗೆಯೇ (ಸಂವಾದವಿದೆ). ಇದು ಸಂಪೂರ್ಣವಾದ ರಾಗ; ಸುಸ್ವರಗಳನನನ್ನೊಳಗೊಂಡಿದೆ. ಇದು ಮನೋಹರವಾದ ದೇಶಜಾವರ್ಗದ ಭಾಷಾರಾಗ. ೧೩೪

೯೩೮ ಉದಾಹರಣೆ –(ಅ) ಧೈವತ ದಾಧಾಧೈವತ ಧಾಧಾಧಾರಿಮಾಮಾಧಾ | (ಆ) ಪಾಮಧಾಧಾಪಾಮಾಗರಿಮಾಧಾಪಾಧಾ (ಮಾಲವಾ? ಮಾಲವಪಂಚಮೀ)                                                                                                                          66

____

[ii ಭಿನ್ನವಾಲಿಕಾ]

೯೩೯   ಷಡ್ಜಾಂಶಾ ಧೈವತನ್ಯಾಸಾ ವಿಜ್ಞೇಯಾ ಭಿನ್ನವಾಲಿಕಾ |
ಧೈವತನಿಷಾದಬಾಹುಲ್ಯಂ ದೃಶ್ಯತೇ ಚ ಪರಸ್ಪರಮ್‌ || ೧೩೫ ||

೯೪೦   ಕ್ವಚಿದ್‌ದೃಷ್ಟಂ ನ ದೃಷ್ಟಂ ಚ ಭಿನ್ನಪಂಚಮಸಂಜ್ಞಿತಾ | [?] |
ಏಷಾ ತು ಕಥಿತಾ ಲೋಕೇ ಭಾಷಾ ಸಂಕೀರ್ಣಶೋಭನಾ || ೧೩೬ ||

೯೪೧ ಉದಾಹರಣಂ – (ಅ) ಸಾಸಾಸಾಗಾಸಾಧಾ ನೀಸಾಸಾಧಾನೀಮದಾ ನಿಧಾಧಾದಾ ನಿಧಾಮಾಧಾ ನಿಮಧಾಪಾಧಾಧಾಧಾ | (ಭಿನ್ನವಲಿಕಾ)    67

[iii ದ್ರಾವಿಡೀ]

೯೪೨   ಗಾಂಧಾರಾಂಶಾ ಧೈವತಾಂತಾ ಸಂಪ್ರಕೀರ್ತಿತಾ |
ದ್ವಿಶ್ರುತೀನಾಂ ಚ ಗಮನಂ ಷಡ್ಜಧೈವತಯೋಸ್ತಥಾ |
ದ್ರಾವಿಡವಿಷಯೇ ಹ್ಯೇಷಾ ದೇಶಾಖ್ಯಾ ಅಉಮನೋಹರಾ || ೧೩೭ ||

೯೪೩ ಉದಾಹರಣಂ –[ಗಾ]ಧಾನಿಮಧಾನಿಧಾಧಾಧಾಮಧಾಮಧಾಪಾಧಾಧಾಧಾ ಪಾಪಾಮಾಧಾಧಾಗಾಧಾಧಾ ಸಾಗಾಸಾನಿಧಾಧಾ ಪಾಮಾಗಾಮಮನಿ(ದಾ) | (ದ್ರಾವಿಡೀ)                                                                                                  68

ಏತಷ್ಟಕ್ಕಕೈಶಿಭಾಷಾಸ್ತಿಸ್ರಃ

[ii ಭಿನ್ನವಾಲಿಕಾ]

೯೩೯ ಭಿನ್ನವಾಲಿಕಾ ರಾಗವು ಷಡ್ಜವನ್ನು ಅಂಶವಾಗಿಯೂ ಧೈವತವನ್ನು ನ್ಯಾಸವಾಗಿಯೂ ಹೊಂದಿದೆಯೆಂದು ತಿಳಿಯಬೇಕು. ಧೈವತನಿಷಾದಗಳಲ್ಲಿ ಪರಸ್ಪರ(ಸಂಚಾರ) ಬಾಹುಲ್ಯವು (ಇದರಲ್ಲಿ) ಕಂಡುಬರುತ್ತದೆ.                                   ೧೩೫

೯೪೦ (ಈ ಸಂಚಾರಬಾಹುಲ್ಯವು) ಕೆಲವು ವೇಳೆ ಕಂಡುಬರುತ್ತದೆ, ಕೆಲವು ವೇಳೆ ಕಂಡುಬರುವುದಿಲ್ಲ. ಭಿನ್ನಪಂಚಮವೆಂಬ ಹೆಸರಿನದು (? ಅದರ ಛಾಯೆಯು ಕೆಲವು ವೇಳೆ ಇದರಲ್ಲಿ ಕಂಡುಬರುತ್ತದೆ, ಕೆಲವುವೇಳೆ ಕಂಡುಬರುವುದಿಲ್ಲ?) ಈ ಭಾಷಾರಾಗವು ಸಂಕೀರ್ಣಾವರ್ಗದಲ್ಲಿ ಶೋಭಿಸುತ್ತದೆಂದು ಲೋಕದಲ್ಲಿ ಹೇಳುತ್ತಾರೆ.                                                                                     ೧೩೬

೯೪೧ ಉದಾಹರಣೆ – (ಅ) ಸಾಸಾಸಾಗಾಸಾಧಾ ನೀಸಾಸಾಧಾನೀಮಧಾ ನಿಧಾಧಾಧಾ ನಿಧಾಮಾಧಾ ನಿಮಧಾಪಾಧಾಧಾಧಾ | (ಭಿನ್ನವಾಲಿಕಾ)    67

[iii ದ್ರಾವಿಡೀ]

೯೪೨ ದ್ರಾವಿಡಿಯ ಗಾಂಧಾರವನ್ನು ಅಂಶವಾಗಿಯೂ ಧೈವತವನ್ನು ನ್ಯಾಸವಾಗಿಯೂ ಹೊಂದಿದೆಯೆಂದು ಹೆಸರುವಾಸಿಯಾಗಿದೆ. ಎರಡು ಶ್ರುತಿಗಳನ್ನುಳ್ಳ (=ನಿಷಾದಗಾಂಧಾರ) ಸ್ವರಗಳಲ್ಲಿಯೂ ಹಾಗೆಯೇ ಷಡ್ಜಧೈವತಗಳಲ್ಲಿಯೂ (ಪರಸ್ಪರ) ಸಂಚಾರವಿದೆ. ದ್ರಾವಿಡ ದೇಶದಲ್ಲಿ (ಹುಟ್ಟಿರುವ) ಇದು ದೇಶದ ಹೆಸರನ್ನು ಪಡೆದು (=ದೇಶಜಾ) ಸುಂದರವಾಗಿದೆ.                                             ೧೩೭

ಉದಾಹರಣೆ – (ಗಾ)ಧಾನಿಮಧಾನಿಧಾಧಾಧಾನಿಧಾಮಧಾಪಾಧಾಧಾಧಾ ಪಾಪಾಮಾಧಾಧಾಗಾಮಾಧಾಧಾ ಸಾಗಾಸಾನಿಧಾಧಾಪಾಗಾಮಮನಿ(ಧಾ) | (ದ್ರಾವಿಡೀ)                                                                                                                                    68

ಇವು ಮೂರು ಟಕ್ಕಕೈಶಿಕದ(ಲ್ಲಿ ಹುಟ್ಟಿರುವ) ಭಾಷಾಗಳು.