[i ತಾನೋದ್ಭವಾ]

೯೫೦   ಪಂಚಮಾಂಶಾ ತದಂತಾ ಚ ಭಿನ್ನತಾನೇ ಪ್ರಕೀರ್ತಿತಾ |
ಋಷಭೇಣ ವಿಹೀನಾ ತು ಕರ್ತವ್ಯಾ ಗೀತಕೋವಿದೈಃ |
ಸಾದಾರಣಕೃತಾ ಹ್ಯೇಷಾ ಭಾಷಾ ತಾನೋದ್ಭವಾ ಮತಾ || ೧೪೨ ||

೯೫೧ [ಉದಾಹರಣಂ-] …………..(ತಾನೋದ್ಭವಾ)

[ಏಷಾ ಭಿನ್ನತಾನೇ]

ಪಾಠವಿಮರ್ಶೆ: ೯೪೫ಅ ೯೪೬ಅ ೯೪೭ಈ ೯೪೮ಈ ೯೫೦ ೯೫೦ಊ

—-

೯೪೫ ಈ ಭಾಷಾರಾಗವನ್ನು ಜನರು ಒಳ್ಳೆಯ ಸಂಪೂರ್ಣಸ್ವರಗಳನ್ನುಳ್ಳದ್ಧಾಗಿ ಹಾಡುತ್ತಾರೆ. ಬಾಹ್ಯ ಷಾಡವರಾಗವು ವೇಸರಷಾಡವದ ಭಾಷಾ ಆಗಿದೆ.                                                                                                                                        ೧೩೯

೯೪೬ ಉದಾಹರಣೆ – (ಅ) ಮಾಮಾ ಸಾರಿಸಾರಿಗಾರಿಸಾಸಾಸಾರಿಮಾ ಪಾದೈವತಧಾಪಾಸಾಮಾಗಾಪಾಮಧ್ಯಮ | (ಆ) ಗಾಗಾಗಾರಿಗಗಧರಿಮಾ ಗಾನಿಸಾನಿಧಪಾಮಾಮಾ | (ಬಾಹ್ಯಷಾಡವಾ)                                                                                         69

[ii ನಾದಾಖ್ಯಾ]

೯೪೭ ನಾದಾಖ್ಯಾ ರಾಗವು ಷಡ್ಜವನ್ನು ಅಂಶವಾಗಿಯೂ ಮಧ್ಯಮವನ್ನು ನ್ಯಾಸವಾಗಿಯೂ ಗಾಂಧಾರವು ಮಂದ್ರ ಸ್ಥಾಯಿಯನ್ನು ಅಲಂಕರಿಸುವಂತೆಯೂ ಹೊಂದಿದೆ. (ಇದನ್ನು) (ವೇಸರ) ಷಾಡವದಲ್ಲಿ ಷಾಡವ (ಜನ್ಯರಾಗ)ವನ್ನಾಗಿ ಮಾಡಬೇಕು. ೧೪೦

೯೪೮ ಪಂಚಮವು ಲೋಪವಾಗಿ (ಈ ರಾಗವು ) ಷಾಡವವಾಗುತ್ತದೆಯೆಂದು ಪ್ರಸಿದ್ಧವಾಗಿದೆ. ಲೋಕವನ್ನು ರಂಜಿಸುವ ಇದು ಯಾವಾಗಲು ಸಂಕೀರ್ಣಾವರ್ಗದ್ದು ಎಂದು ಹೆಸರುವಾಸಿಯಾಗಿದೆ.                                                                               ೧೪೧

೯೪೯ ಉದಾಹರಣೆ – (ಅ) ಸಾಸಾನಿಮಾಮಾ ಸಾರಿಮಾಮಾದಾಮಾಮಾ ರಿಗಾರಿರಿನಿಗಾಸಾನಿಧಾಮಾಮಾ | (ನಾದಾಖ್ಯಾ)     70

[ಇವು ವೇಸರಷಾಡವದಲ್ಲಿ (ಹುಟ್ಟಿರುವ ಭಾಷಾರಾಗಗಳು]

[XIII ಈಗ ಭಿನ್ನತಾನದಲ್ಲಿ ಹುಟ್ಟಿರುವ ಭಾಷಾದ ಲಕ್ಷಣ]

[i ತಾನೋದ್ಭವಾ]

೯೫೦ ಪಂಚಮವು ಅಂಶ ಮತ್ತು ಅದೇ ನ್ಯಾಸವಾಗಿರುವ ತಾನೋದ್ಭವಾ ಭಿನ್ನತಾನದಲ್ಲಿ ಹುಟ್ಟಿದೆಯೆಂದು ಪ್ರಸಿದ್ಧವಾಗಿದೆ. ಹಾಡಬಲ್ಲವರು ಇದನ್ನು ರಿಷಭವಿಲ್ಲದೆ ಪ್ರಯೋಗಿಸಬೇಕು. ಇದು ಸಾದಾರಣವನ್ನಾಗಿಸಿದ (=ಗಾಂದಾರನಿಷಾದಗಳು ಅಂತರಕಾಕಲೀಗಳಾಗಿರುವ) ಭಾಷಾರಾಗವೆಂದು ಅಭಿಪ್ರಾಯಪಡಲಾಗಿದೆ.                                                                                                                 ೧೪೨

೯೫೧ ಉದಾಹರಣೆ-…………… (ತಾನೋದ್ಭವಾ)

(ಇದು ಭಿನ್ನತಾನದಲ್ಲಿ ಹುಟ್ಟಿದ ಬಾಷಾರಾಗ)

____