[ಕ. ತತ್ರ ಶುದ್ಧರಾಗಾಃ]

೬೧೮   (ಅ) ಇದಾನೀಂ ಶುದ್ಧಾನಾಂ ಲಕ್ಷಣಮಾಹ –                                                                                    1

೬೧೯   ಅನಪೇಕ್ಷ್ಯಾನ್ಯಜಾತೀರ್ಯೇ ಸ್ವಜಾತಿಮನುವರ್ತಕಾಃ |
ಸ್ವಜಾತ್ಯನ್ಯತಮಾಶ್ಚೈವ ತೇ ಶುದ್ಧಾಃ ಪರಿಕೀರ್ತಿತಾಃ                                                              || ೪೧ ||

[೧. ಶುದ್ಧಷಾಡಮಃ]

೬೨೦   (ಅ ತತ್ರ ಷಾಡವ ಇತಿ ಕಸ್ಮಾತ್ ? (ಆ) ಕಿಂ ಷಡ್ಭಿಃ ಸ್ವರೈರ್ಗೀಯತ ಇತಿ ಷಾಡವಃ ಯದ್ವಾ ಷಟ್‌ಸು ರಾಗೆಷು ಮುಖ್ಯ ಇತಿ ಪಾಡವಃ (?) (ಇ) ತತ್ರ ನಾಯಮಾದ್ಯಪಕ್ಷಃ | (ಈ) ಕುತಃ?(ಉ) ಸಂಪೂರ್ಣತ್ವಾದಮುಷ್ಯ ರಾಗಸ್ಯ | (ಊ) ತಸ್ಮಾದುತ್ತರ ಪಕ್ಷ ಏವ ಜ್ಯಾಯಾನ್‌ | (ಋ) ನನು ಕಥಂ ಷಟ್ಸು ರಾಗೇಷುಃ ಮುಖ್ಯೋ sಯಮ್‌? (ೠ)ಉಚ್ಯತೇ – ಪೂರ್ವ[ರಂಗೇ ತು] ಶುದ್ಧಷಾಡವಃ ಪ್ರಯೋಕ್ತವ್ಯ ಇತಿ ವಚನಾತ್ ಪೂರ್ವರಂಗೇ ಪ್ರಚುರಪ್ರಯೋಗತ್ವಾದಸ್ಯ ಶುದ್ಧಷಾಡವಸ್ಯಾದೌ ನಿರ್ದೇಶಃ |                                                                      2

ಪಾಠವಿಮರ್ಶೆ: ೬೧೫ಅ ೬೧೭ಅ,ಆ ೬೧೯ಅ, ಅ-ೠ ೬೨೯ ಋ ೠ

—-

೬೧೫   ಟಕ್ಕರಾಗ, ಸೌವೀರ, ಹಾಗೆಯೇ ಮಾಲವಪಂಚಮ, ಷಾಡವ, ಬೋಟ್ಟರಾಗ, ಅಂತೆಯೇ ಹೊಂದೋಲವು ಮುಂದಿನದು;         ೩೮

೬೧೬   ಟ[ಕ್ಕ]ಕೈಶಿಕ ಎಂದು ಹೇಳಿರುವುದು, ಅಂತೆಯೇ ಮಾಲವಕೈಶಿಕ – ಈ ರಾಗಗಳನ್ನು ಮುನಿಶ್ರೇಷ್ಠರು ಹೆಸರು ಹಿಡಿದು ಹೇಳಿದ್ದಾರೆ.     ೩೯

೬೧೭   ನರ್ತ, ಶಕವೆಂಬುದು, ಕಕುಭ, ಅಂತೆಯೇ ಭಮ್ಮಾಣಪಂಚಮ, ರೂಪಸಾಧಾರಿತ, ಹಾಗೆಯೇ ಗಾಂಧಾರಪಂಚಮ, ಷಡ್ಜಕೈಶಿಕವೆಂಬ ಹೆಸರಿನದು- ಈ ಏಳು ಸಾಧಾರಣ [ರಾಗ]ಗಳೆಂದು ಸ್ಮರಿಸಲಾಗಿದೆ.                                                                 ೪೦

[ಹೀಗೆ ರಾಗಗಳ ಸಂಖ್ಯೆ ಮತ್ತು ನಾಮಸಂಗ್ರಹವು ಮುಗಿಯಿತು.]

 

[iv. ರಾಗಗಳ ವಿಶೇಷಲಕ್ಷಣಗಳು]

[ಅವುಗಳ ಪೈಕಿ ಶುದ್ಧರಾಗಗಳು]

೬೧೮   (ಅ) ಈಗ ಶುದ್ಧ[ರಾಗ]ಗಳ ಲಕ್ಷಣವನ್ನು (ಗ್ರಂಥಕಾರನು) ಹೇಳುತ್ತಾನೆ –                                      1

೬೧೯   ಯಾವ [ರಾಗ]ಗಳು (ತಮ್ಮ ಲಕ್ಷಣಗಳಿಗೆ) ಬೇರೆ ಜಾತಿಗಳ(ಲಕ್ಷಣಗಳ)ನ್ನು ಅಪೇಕ್ಷಿಸದೆ ತಮ್ಮದೇ (ಜನಕ)ಜಾತಿಗಳ (ಲಕ್ಷಣಗಳ)ನ್ನು ಅನುಸರಿಸುತ್ತವೋ, ತಮ್ಮದೇ ಜಾತಿಯ(ಹಲವು ರೂಪಗಳಲ್ಲಿ) ಒಂದಾಗಿರುತ್ತವೋ ಅವುಗಳನ್ನು ಶುದ್ಧರಾಗಗಳೆಂದು ನಿರೂಪಿಸಿವೆ.  ೪೧

[೧. ಶುದ್ಧಷಾಡವ]

೬೨೦   (ಅ) ಅವುಗಳ ಪೈಕಿ (ಇದಕ್ಕೆ) ಷಾಡವ ಎಂಬ ಹೆಸರಿಗೆ ಕಾರಣವೇನು? (ಆ) ಆರು ಸ್ವರಗಳಿಂದ ಹಾಡಲಾಗುತ್ತದೆ ಎಂಬುದರಿಂದ ಷಾಡವವೆಂದಾಗಿದೆಯೋ ಅಥವಾ ಆರು ರಾಗಗಳಲ್ಲಿ ಮುಖ್ಯವಾದುದು ಎಂಬುದರಿಂದ ಷಾಡವವೆಂದಾಗಿದೆಯೋ? (ಇ) ಇದರಲ್ಲಿ ಮೇಲೆ ಹೇಳಿದ ಮೊದಲನೆಯ ಪಕ್ಷವು ಹೊಂದುವುದಿಲ್ಲ. (ಈ) ಏಕೆ? (ಉ) ಈ ರಾಗವು ಸಂಪೂರ್ಣವಾಗಿರುವುದರಿಂದ (ಊ) ಆದುದರಿಂದ (ಎರಡನೆಯ) ಮುಂದಿನ ಪಕ್ಷವೇ ಪ್ರಸ್ತವಾಗಿದೆ. (ಋ) [ಪ್ರಶ್ನೆಃ] ಹಾಗಾದರೆ ಇದು ರಾಗಗಳಲ್ಲಿ ಹೇಗೆ (=ಏಕೆ) ಮುಖ್ಯ? (ಋ) [ಉತ್ತರವನ್ನು] ಹೇಳಲಾಗುವುದು – (ನಾಟ್ಯಪ್ರಯೋಗದ) ಪೂರ್ವರಂಗದಲ್ಲಿ ಶುದ್ಧಷಾಡವವನ್ನು ಪ್ರಯೋಗಿಸಬೇಕು ಎಂಬ (ಭರತಮುನಿಯ) ಮಾತಿನಿಂದಾಗಿ ಪೂರ್ವರಂಗದಲ್ಲಿ ಇದನ್ನು ವ್ಯಾಪಕವಾಗಿ ಬಳಸುವುದರಿಂದ ಶುದ್ಧಷಾಡವವನ್ನು ಮೊದಲು (ಇಲ್ಲಿ ಲಕ್ಷಣನಿರ್ದೇಶಕ್ಕಾಗಿ) ತೆಗೆದುಕೊಂಡಿದೆ.   2

೬೨೧   ವಿಕಾರಿಮಧ್ಯಮಾಜಾತೇಃ ಸಂಭೂತಃ ಶುದ್ಧಪಾಡವಃ
ನ್ಯಾಸೋ sಸ್ಯಮಧ್ಯಮೋ s೦ಶಶ್ಚ ಗಾಂಧಾರೇಣ ಚ ದುರ್ಬಲಃ                                                || ೪೨ ||

೬೨೨   (ಅ) ಅಸ್ಯಾರ್ಥಃ – ಶುದ್ಧಷಾಡವೋ ಮಧ್ಯಮಗ್ರಾಮಸಂಬಂಧಃ | (ಆ) ತಾರಮಧ್ಯಮೋ ಗ್ರಹಃ | (ಇ) ಮಧ್ಯಮೋ s೦ಶೋ ನ್ಯಾಸಶ್ಚ | (ಈ) ಗಾಂಧಾರಸ್ಯ ಚಾಲ್ಪತ್ವಮ್ (ಉ) ನಿಷಾದಗಾಂಧಾರೌ ಚಾತ್ರ ಕಾಕಲ್ಯಂತರೌ | (ಊ) ಪೂರ್ಣಸ್ವರಶ್ಚಾಯಮ್ | (ಋ) ಪೂರ್ವರಂಗೇ sಸ್ಯ ಪ್ರಯೋಗಃ | (ೠ) ಮಧ್ಯಮೋ ವಾದೀ | (ಎ) ಷಡ್ಜಃ ಸಂವಾದೀ | (ಏ) ಋಷಭಪಂಚಮಾವನುವಾದಿನೌ | (ಔ) ಅವರೋಹೀ ವರ್ಣಃ | (ಅಂ) ಪ್ರಸನ್ನಾಂತೋ sಲಂಕಾರಃ (ಅಃ) ತ್ರಿಷು ಮಾಗೇಷು ಗೀಯತೇ (ಕ) ದಕ್ಷಿಣೇ ಕಲಾ | ವೃತ್ತೌ ಕಲಾ, ಚಿತ್ರೇ ಕಲಾ, (ಖ)ಸ್ವರಪದಗೀತೇ ಚಚ್ಚತ್ಪುಟಾದಿ ತಾಲಃ | (ಗ) ಆಕ್ಷಿಪ್ತಿಕಾ ……..                                                                                                               3

[೨. ಶುದ್ಧಪಂಚಮಃ]

೬೨೩   ……………………………………………….

(ಆ) ಶುದ್ಧಪಂಚಮಃ ಷಡ್ಜೋದೀಚ್ಯವತೀಜಾತೇಃ ಸ್ಮೃತಃ                                                                  4

[೩. ಶುದ್ಧಸಾಧಾರಿತಃ]

೬೨೪   ಷಡ್ಜಾಂಶೋ ಮಧ್ಯಮನ್ಯಾಸಃ ಸ್ವಲ್ಪದ್ವಿಶ್ರುತಿಕಸ್ವರಃ |
ಸ್ಯಾತ್ ಷಡ್ಜಮಧ್ಯಮಾಜಾತೇಃ ಶುದ್ಧಃ ಸಾಧಾರಿತಸ್ತಥಾ                                                         || ೪೩ ||

೬೨೫   (ಅ) ಅಸ್ಯಾರ್ಥಃ – ಶುದ್ಧಸಾಧಾರಿತೋ ರಾಗಃ ಷಡ್ಜಗ್ರಾಮಸಂಬಂಧಃ ಷಡ್ಜ ಮಧ್ಯಮಾಜಾತೇರುತ್ಪನ್ನತ್ವಾತ್ | (ಆ) ತಾರಷಡ್ಜೋ ಗ್ರಹೋ s೦ಶಶ್ಚ | (ಇ) ಮಧ್ಯಮೋ ನ್ಯಾಸಶ್ಚ | (ಈ) ನಿಷಾದಗಾಂಧಾರಯೋರಲ್ಪತ್ಪಮ್ | (ಉ) ಪೂರ್ಣಶ್ಚಾಯಮ್ |

ಪಾಠವಿಮರ್ಶೆಃ ೬೨೧ಆ, ಇ,ಈ ೬೨೨ಋ, ಕ,ಖ ೬೨೩ಅ ೬೨೪ಆ ೬೨೫ಅ

____

೬೨೧   ಶುದ್ಧಷಾಡವವು ವಿಖೃತಮಧ್ಯಮಾ ಜಾತಿಯಿಂದ ಹುಟ್ಟಿದೆ. ಮಧ್ಯಮವು ಇದರ ನ್ಯಾಸ ಮತ್ತು ಅಂಶ; ಗಾಂಧಾರವು ದುರ್ಬಲವಾಗಿದೆ.  ೪೨

೬೨೨   (ಅ) ಇದರ ಅರ್ಥವು [ಹೀಗಿದೆ] : ಶುದ್ಧಷಾಡವ(ರಾಗ)ವು ಮಧ್ಯಮಗ್ರಾಮಕ್ಕೆ ಸೇರಿದೆ. (ಆ) ತಾರ(ಸ್ಥಾಯಿ), ಮಧ್ಯಮವು ಅದರ ಗ್ರಹ. (ಇ) ಮಧ್ಯಮವು ಇದರ ಅಂಶ ಮತ್ತು ನ್ಯಾಸ. (ಈ) ಗಾಂಧಾರಕ್ಕೆ ಅಲ್ಪತ್ವವಿದೆ. (ಉ) ಇದರಲ್ಲಿ ನಿಷಾದಗಾಂಧಾರಗಳು (ಕ್ರಮವಾಗಿ) ಕಾಕಲೀ-ಅಂತರಗಳು. (ಊ) ಇದು (ಸಂ) ಪೂರ್ಣಸ್ವರಗಳನ್ನುಳ್ಳದ್ದು. (ಋ) ಪೂರ್ವರಂಗದಲ್ಲಿ ಇದನ್ನು ಪ್ರಯೋಗಿಸಬೇಕು. (ೠ) (ಇದರಲ್ಲಿ) ಮಧ್ಯಮವು ವಾದಿ. (ಎ) ಷಡ್ಜವು ಸಂವಾದಿ. (ಏ) ರಿಷಭ-ಪಂಚಮಗಳು ಅನುವಾದಿಗಳು. (ಐ) ವಿವಾದಿ (ಸ್ವರವು) ಇಲ್ಲ. (ಒ) (ವಿನಿಯೋಗಿಸಬೇಕಾದ) ರಸಗಳು ಶೃಂಗಾರ ಮತ್ತು ಹಾಸ್ಯ. (ಓ) (ಇದರ) ಮೂರ್ಛನೆಯು ಮಧ್ಯಮದಿಂದ ಮೊದಲಾಗುತ್ತದೆ. (ಔ) ಅವರೋಹೀ ವರ್ಣ(ವನ್ನು ಹೆಚ್ಚಾಗಿ ಬಳಸಬೇಕು). (ಅಂ) (ಬಳಸಬೇಕಾದ) ಅಲಂಕಾರವು ಪ್ರಸನ್ನಾಂತ. (ಅಃ) ಮೂರೂ ಮಾರ್ಗಗಳಲ್ಲಿ (ಇದರ ಗೀತಿಯನ್ನು) ಹಾಡಲಾಗುತ್ತದೆ. (ಕ) ದಕ್ಷಿಣಮಾರ್ಗದಲ್ಲಿ (ತಾಳದ) ಕಲಾ(ಪ್ರಮಾಣವು) (ಇರುತ್ತದೆ.) ವಾರ್ತಿಕ (ಮಾರ್ಗ)ದಲ್ಲಿ ಕಲೆ ಇರುತ್ತದೆ, ಚಿತ್ರ (ಮಾರ್ಗ)ದಲ್ಲಿ ಕಲೆ (ಇರುತ್ತದೆ.) (ಖ) ಸ್ವರ(ಮತ್ತು) ಪದಗಳಿರುವ) ಗೀತದಲ್ಲಿ ಚಚ್ಚುತ್ಪುಟವೇ ಮೊದಲಾದ ತಾಳ(ಗಳನ್ನು ಪ್ರಯೋಗಿಸಬೇಕು). (ಗ) (ಈ ರಾಗದಲ್ಲಿ) ಆಕ್ಷಿಪ್ತಿಕೆಯು(ಹೀಗಿದೆ) : ………..                                                                               ೩

[೨. ಶುದ್ಧಪಂಚಮ]

೬೨೩   …………………………………………………..

(ಅ) ಶುದ್ಧಪಂಚಮ [ರಾಗ]ವು ಷಡ್ಜೋದೀಚ್ಯವತೀ ಜಾತಿಯಿಂದ (ಹುಟ್ಟಿದೆ) ಎಂದು ಸ್ಮರಿಸಲಾಗಿದೆ.           ೪

………………………………………………………..

(೩. ಶುದ್ಧಸಾಧಾರಿತ)

೬೨೪   ಶುದ್ಧಸಾಧಾರಿತ[ರಾಗವು] ಷಡ್ಜಮಧ್ಯಮಾಜಾತಿಯಿಂದ ಆಗಿದೆ. ಷಡ್ಜವು (ಅದರ) ಅಂಶ, ಮಧ್ಯಮವು ನ್ಯಾಸ, ದ್ವಿಶ್ರುತಿಸ್ವರಗಳು (= ಗಾಂಧಾರನಿಷಾದಗಳು) ಅಲ್ಪ (ಪ್ರಯೋಗವನ್ನು) ಪಡೆದಿರುತ್ತವೆ.                                                                ೪೩

೬೨೫   (ಅ) ಇದರ ಅರ್ಥವು [ಹೀಗಿದೆ]: ಶುದ್ಧಸಾಧಾರಿತ ರಾಗವು ಷಡ್ಜಗ್ರಾಮಕ್ಕೆ ಸೇರಿದ್ದು; ಏಕೆಂದರೆ ಷಡ್ಜಮಧ್ಯಮಾಜಾತಿಯಿಂದ ಹುಟ್ಟಿದೆ. (ಆ) ತಾರ(ಸ್ಥಾಯಿ) ಪಡ್ಜವು ಅದರ ಗ್ರಹ ಮತ್ತು ಅಂಶ. (ಇ) ಮಧ್ಯಮವು (ಅದರ) ನ್ಯಾಸ. (ಈ) ನಿಷಾದಗಾಂಧಾರಗಳಲ್ಲಿ ಅಲ್ಪತ್ವವಿದೆ. (ಉ) ಇದು (ಸಂ)ಪೂರ್ಣ

____

(ಊ)ಗರ್ಭಸಂಧೌವಿನಿಯೋಗಃ | (ಋ) ವೀರರೌದ್ರಾದಿಕೋರಸಃ | (ೠ) ಷಡ್ಜಾದಿಮೂರ್ಛನಾ | (ಎ) ಅವರೋಹೀವರ್ಣಃ | (ಏ) ಪ್ರಸನ್ನಾಂತೋ sಲಂಕಾರಃ | (ಐ) ದಕ್ಷಿಣೇ ಕಲಾ ವೃತ್ತೌ ಕಲಾ, ಚಿತ್ರೇ ಕಲಾ, ಸ್ವರಪದಗೀತೇ ಚಚ್ಚತ್ಪುಟಾದಿ ತಾಲಃ |                     5

[೪. ಶುದ್ಧಕೈಶಿಕಮಧ್ಯಮಃ]

೬೨೬   ಕೈಶಿಕೀಷಡ್ಜಮಧ್ಯಾಭಾಂ ಶುದ್ಧಕೈಶಿಕಮಧ್ಯಮಃ |
ಷಡ್ಜಾಂಶೋ ಮಧ್ಯಮನ್ಯಾಸಸ್ತ್ಯಕ್ತಾವೃಷಭಪಂಚಮೌ                                                            || ೪೪ ||

೬೨೭ (ಅ) ಅಸ್ಯಾರ್ಥಃ – ಶುದ್ಧಕೈಶಿಕಮಧ್ಯ ರಾಗಃ ಷಡ್ಜಗ್ರಾಮಸಂಭಂಧಃ ಕೈಶಿಕೀ ಷಡ್ಜಮಧ್ಯಾಜಾತಿಭ್ಯಾಂ ಸಮುತ್ಪನ್ನತ್ವಾತ್ | (ಅ) ನನು ಕೈಶಿಕೀ ಮಧ್ಯಮಗ್ರಾಮಸಂಬದ್ಧಾ, ಷಡ್ಜಮಧ್ಯಮಾ ಷಡ್ಜಗ್ರಾಮಸಂಬಂಧಾ, ಅತ ಉಭಯಗ್ರಾಮತಾ (S)ಸ್ತೀತಿ ಭಾವಃ | (ಇ) ಋಷಭಪಂಚಮಯೋರ್ಲೋಪೋ ನಾಸ್ತೀತಿ ಭಾವಃ | (ಈ) ತಾರಪಡ್ಜೋ sಸ್ಯ ಗ್ರಹೋ s೦ಶಶ್ಚ | (ಉ) ಮಧ್ಯಮೋ ನ್ಯಾಸಃ| (ಊ) ನಿಷಾದಗಾಂಧಾರಯೋರಲ್ಪತ್ವಮ್ | (ಋ) ಪಂಚಮರ್ಷಭಯೋರ್ಲೋಪಃ | (ೠ) ನಿಷಾದೋ sತ್ರ ಕಾಕಲೀ, ಔಡುವಶ್ಚ | (ಎ) ನಿರ್ವಹಣೇ ಚಾಸ್ಯ ಪ್ರಯೋಗಃ | (ಏ) ಷಡ್ಜಾದಿಮೂರ್ಛನಾ | (ಐ) ರೌದ್ರವೀರಾದಿಕೋ ರಸಃ | (ಒ) ಪ್ರಸನ್ನಾಂತೋsಲಂಕಾರಃ | …………6

[೫. ಶುದ್ಧಕೈಶಿಕಃ]

೬೨೮   ಷಡ್ಜಾಂಶಃ ಪಂಚಮನ್ಯಾಸಃ ಕೈಶಿಕೀಜಾತಿಸಂಭವಃ |
ತಥಾ ಕಾರ್ಮಾರವೀ ಜಾತೇಃ ಸ್ವರೈಃ ಪೂರ್ಣೈಶ್ಚ ಕೈಶಿಕಃ || ೪೫ ||

೬೨೯ (ಅ) ಅಸ್ಯಾರ್ಥಃ- ಶುದ್ಧಕೈಶಿಕೋ ನಾಮ [ರಾಗೋ] ಮಧ್ಯಮಗ್ರಾಮಸಂಭಂಧಃ, ಕೈಶಿಕೀಕಾರ್ಮಾರವೀಜಾತಿಭ್ಯಾಂ ಸಮುತ್ಪನ್ನತ್ವಾತ್ | (ಆ) ತಾರಷಡ್ಜೋ sಸ್ಯ ಗ್ರಹೋ

ಪಾಠವಿಮರ್ಶೆ: ೬೨೫ಅ,ಈ ೬೨೭ಅ, ಆ,ಇ ೬೨೮ ಅ ೬೨೯ ಆ

—-

(ರಾಗ). (ಊ) (ನಾಟ್ಯಪ್ರಯೋಗದ) ಗರ್ಭಸಂಧಿಯಲ್ಲಿ (ಇದನ್ನು) ವಿನಿಯೋಗಿಸಬೇಕು. (ಋ) (ಈ ವಿನಿಯೋಗವನ್ನು ಮಾಡಬೇಕಾದ) ರಸಗಳು ವೀರ, ರೌದ್ರ ಇತ್ಯಾದಿ. (ೠ) (ಇದರ) ಮೂರ್ಛನೆಯು ಷಡ್ಜದಿಂದ ಮೊದಲಾಗುತ್ತದೆ. (ಎ) ಅವರೋಹೀವರ್ಣ(ವನ್ನು ಮುಖ್ಯವಾಗಿ ಉಪಯೋಗಿಸಬೇಕು). (ಏ) ಪ್ರಸನ್ನಾಂತ ಅಲಂಕಾರ(ವನ್ನೂ ಬಳಸಬೇಕು). (ಐ) ದಕ್ಷಿಣ(ಮಾರ್ಗ)ದಲ್ಲಿ (ತಾಳದ) ಕಲಾ (ಪ್ರಮಾಣವು) (ಇದೆ); ವೃತ್ತಿ(=ವಾರ್ತಿಕ)(ಮಾರ್ಗ)ದಲ್ಲಿ ಕಲಾ (ಇದೆ); ಚಿತ್ರ(ಮಾರ್ಗ)ದಲ್ಲಿಕಲಾ (ಇದೆ). ಸ್ವರ (ಮತ್ತು) ಪದ(ಗಳನ್ನೊಳಗೊಂಡ) ಗೀತದಲ್ಲಿ ಚಚ್ಚತ್ಪುಟವೇ ಮೊದಲಾದ ತಾಳ(ಗಳ ಅನ್ವಯವಿದೆ).

[೪. ಶುದ್ಧಕೈಶಿಕಮಧ್ಯಮ]

೬೨೬ ಶುದ್ದಕೈಶಿಕಮದ್ಯಮವು ಕೈಶಿಕೀ (ಮತ್ತು) ಷಡ್ಜಮಧ್ಯಾ(ಜಾತಿ)ಗಳಿಂದ (ಜನಿಸಿದೆ). ಷಡ್ಜವು ಅದರ ಅಂಶ; ಮಧ್ಯಮವು ನ್ಯಾಸ;  ರಿಷಭಪಂಚಮಗಳನ್ನು (ಅದರಲ್ಲಿ) ಲೋಪಮಾಡಬೇಕು.                                                                          ೪೪

೬೨೭   (ಅ) ಇದರ ಅರ್ಥವು [ಹೀಗಿದೆ] : ಶುದ್ಧಕೈಶಿಕಮಧ್ಯಮರಾತಗವು ಷಡ್ದಜಗ್ರಾಮಕ್ಕೆ ಸೇರಿದೆ; ಏಕೆಂದರೆ ಅದು ಕೈಶಿಕೀ ಮತ್ತು ಷಡ್ಜಮಧ್ಯಾಜಾತಿಗಳಿಂದ ಹುಟ್ಟಿದೆ. (ಆ) [ಆಕ್ಷೇಪಃ] ಕೈಶಿಕೀಜಾತಿಯು ಮಧ್ಯಮಗ್ರಾಮಕ್ಕೆ ಸೇರಿದೆ, ಷಡ್ಜಮಧ್ಯಾಜಾತಿಯು ಷಡ್ಜಗ್ರಾಮಕ್ಕೆ ಸೇರಿದೆ. ಆದುದರಿಂದ (ಈ ರಾಗಕ್ಕೆ) ಎರಡೂ ಗ್ರಾಮಗಳ ಸಂಬಂಧವಿದೆ, ಎಂಬುದು ಇಲ್ಲಿ ತಾತ್ಪರ್ಯ: (ಇ) ರಿಷಭಪಂಚಮಗಳಿಲ್ಲದಿರುವುದರಿಂದ ಇದು ಷಡ್ಜಗ್ರಾಮಕ್ಕೆ ಸೇರಿದ್ದೇ : ಮಧ್ಯಮಗ್ರಾಮದಲ್ಲಿ ರಿಷಭಪಂಚಮಗಳ ಲೋಪವಿಲ್ಲ ಎಂಬುದು ಇಲ್ಲಿ ತಾತ್ಪರ್ಯ. (ಈ) ತಾರಷಡ್ಜವು ಇದರ ಗ್ರಹ ಮತ್ತು ಅಂಶ. (ಉ) ಮಧ್ಯಮವು ನ್ಯಾಸ. (ಊ) ನಿಷಾದಗಾಂಧಾರಗಳಲ್ಲಿ ಅಲ್ಪತ್ವಿದೆ. (ಋ) ಪಂಚಮರಿಷಭಗಳಲ್ಲಿ ಲೋಪವಿದೆ. (ಋ) ಇ(-ದರಲ್ಲಿ) ನಿಷಾದವು ಕಾಕಲೀ; ಔಡುವ(ರಾಗ); (ಎ) (ನಾಟ್ಯಪ್ರಯೋಗದ) ನಿರ್ವಹಣ(ಸಂಧಿ)ದಲ್ಲಿ ಇದನ್ನು ಪ್ರಯೋಗಿಸಬೇಖು. (ಏ) ಇದರ ಮೂರ್ಛನೆಯು ಷಡ್ಜದಿಂದ ಮೊದಲಾಗುತ್ತದೆ. (ಐ) (ಇದರ ಮಾತುವಿನಲ್ಲಿ ವಿನಿಯೋಗವಾಗಬೇಕಾದ) ರಸಗಳು ರೌದ್ರ. ವೀರ ಇತ್ಯಾದಿಗಳು. (ಒ) ಪ್ರಸನ್ನಾಂತ ಅಲಂಕಾರ(ವನ್ನು ಬಳಸಬೇಕು) ………….                                                                               6

[೫. ಶುದ್ಧಕೈಶಿಕ]

೬೨೮   (ಶುದ್ಧ) ಕೈಶಿಕ (ರಾಗ)ವು ಕೈಶಿಕೀಜಾತಿಯಲ್ಲೂ ಅಂತೆಯೇ ಕಾರ್ಮಾರವೀ ಜಾತಿಯಲ್ಲೂ ಹುಟ್ಟಿದೆ. ಷಡ್ಜವು (ಅದರ) ಅಂಶ, ಪಂಚಮವು ನ್ಯಾಸ ; (ಏಳೂ) ಸ್ವರಗಳಿಂದ (ಅದು) ಪೂರ್ಣವಾಗಿದೆ.                                                                              ೪೫

೬೨೯   (ಅ) ಇದರ ಅರ್ಥವು [ಹೀಗಿದೆ] : ಶುದ್ಧಕೈಶಿಕವೆಂಬ [ರಾಗವು] ಮಧ್ಯಮಗ್ರಾಮಕ್ಕೆ ಸೇರಿದೆ, ಏಕೆಂದರೆ (ಅದು) ಕೈಶಿಕೀ ಮತ್ತು ಕಾರ್ಮಾರವೀಜಾತಿಗಳಿಂದ ಉತ್ಪನ್ನವಾಗಿದೆ. (ಆ) ತಾರ [ಸ್ಥಾಯಿ]

____

s೦ಶಶ್ಚ | (ಇ) ಪಂಚಮೋ ನ್ಯಾಸಃ | (ಈ) ನಿಷಾದೋ sತ್ರ ಕಾಕಲೀ | (ಉ) ಪೂರ್ಣಸ್ವರಶ್ಚಾಯಂ, ಚಿತ್ರಸ್ಯಾಷ್ಟಾದಶಾಂಗಸ್ಯ (?) ನಿರ್ವಹಣೇ ವಿನಿಯೋಗಃ | (ಊ) ವೀರರೌದ್ರಾದಿಕೋ ರಸಃ | (ಋ) ಷಡ್ಜಾದಿಮೂರ್ಛನಾ | (ೠ) ಆರೋಹೀ ವರ್ಣಃ | (ಎ) ಪ್ರಸನ್ನಾದಿರಲಂಕಾರಃ | (ಏ) ದಕ್ಷಿಣೇ ಕಲಾ, ವೃತ್ತೌ ಕಲಾ, ಚಿತ್ರೇ ಕಲಾ | (ಐ) ಸ್ವರಪದಗೀತೇ ಚಚ್ಚತ್ಪುಟಾದಿ ತಾಲಃ |                                     7

[ಶುದ್ಧರಾಗಾಣಾಂ ಗ್ರಾಮವಿಭಾಗಃ]

೬೩೦   (ಅ) ನನು ಏತೇ ಗ್ರಾಮವಿಶೇಷಸಂಬಂಧಾಃ ಕುತೋsಯಂ ವಿಶೇಷಲಾಭಃ ? (ಆ) ಉಚ್ಯತೇ, ಭರತವಚನಾದೇವಾಸೌ ವಿಶೇಷೋ ಲಭ್ಯತೇ | (ಇ) ತಥಾ ಚಾಹ ಭರತಮುನಿಃ –‘ಜಾತಿಸಂಭೂತತ್ವಾದ್ ಗ್ರಾಮರಾಗಾಣಾಂ’ ಇತಿ ‘ಯತ್ ಕಿಂಚಿದ್ ಗೀಯತೇ ಲೋಕೇ ತತ್ಸರ್ವಂ ಜಾತಿಷು ಸ್ಥಿತಂ’ ಇತಿ ವಚನಾತ್ | (ಈ) ತಥಾ ಕಾಶ್ಯಪೇನಾಪ್ಯುಕ್ತಂ-                                                                                       8

೬೩೧   “ಷಾಡವೋ ಮಧ್ಯಮಗ್ರಾಮೇ ಪಂಚಮಃ ಕೈಶಿಕಸ್ತಥಾ |
ಷಡ್ಜೇ ಸಾಧಾರಿತಶ್ಚೈವ ತಥಾ ಕೈಶಿಕಮಧ್ಯಮಃ”                                                                    || ೪೬ ||

[ಶುದ್ಧರಾಗಾಣಾಂ ವಿನಿಯೋಗಃ]

೬೩೨   (ಅ) ನನು ಅಮೀ ವಿನಿಯೋಗವಿಶೇಷಾಃ ಕಸ್ಮಾಲ್ಲಭ್ಯಂತೇ ? (ಆ) (ಮುನಿ) ವಚನಾದೇವ ಲಭ್ಯಂತೇ | (ಇ) ತಥಾ ಚಾಹ ಭರತಃ –       9

೬೩೩   “ಮುಖೇ ತು ಮಧ್ಯಮಗ್ರಾಮಃ ಷಡ್ಜಃ ಪ್ರತಿಮುಖೇ ಭವೇತ್ |
ಗರ್ಭೇ ಸಾಧಾರಿತಶ್ಚೈವ ಹ್ಯವಮರ್ಶೇ ತು ಪಂಚಮಃ”                                                              || ೪೭ ||

೬೩೪   “ಸಂಹಾರೇ ಕೈಶಿಕಃ ಪ್ರೋಕ್ತಃ ಪೂರ್ವರಂಗೇ ತು ಷಾಡವಃ |
ಚಿತ್ರಸ್ಯಾಷ್ಟಾದಶಾಂಗಸ್ಯ ತ್ವಂತೇ ಕೈಶಿಕಮಧ್ಯಮಃ |

ಪಾಠವಿಮರ್ಶೆ : ೬೨೯ಉ, ೬೩೦ಅ,ಇ ೬೩೧ಅ,ಆ ೬೩೨ಅ ೬೩೩ಈ ೬೩೪ ಅ

—-

ಷಡ್ಜವು ಇದರ ಗ್ರಹ ಮತ್ತು ಅಂಶ. (ಇ) ಪಂಚಮವು ನ್ಯಾಸ. (ಈ) ಇದರಲ್ಲಿ ನಿಷಾದವು ಕಾಕಲೀ (ಉ) ಇದು [ಸಂ]ಪೂರ್ಣಸ್ವರಗಳನ್ನುಳ್ಳದ್ದು; ಚಿತ್ರ(ಅಭಿನಯ)ದ ಹದಿನೆಂಟು ಅಂಗಗಳ ನಿರ್ವಹಣದಲ್ಲಿ ಇದರ ವಿನಿಯೋಗ(ವಿದೆ). (ಊ) (ಇದರ ಹಾಡು ಪ್ರತೀತಗೊಳಿಸಬೇಕಾದ) ರಸಗಳು ವೀರ, ರೌದ್ರ ಇತ್ಯಾದಿಗಳು. (ಋ) (ಇದರ) ಮೂರ್ಛನೆಯು ಷಡ್ಜದಿಂದ ಮೊದಲಾಗುತ್ತದೆ (ೠ) (ಇದರಲ್ಲಿ ಮುಖ್ಯವಾಗಿ ಬಳಸಬೇಕಾದ) ವರ್ಣವು ಆರೋಹೀ. (ಎ) (ಬಳಸಬೇಕಾದ) ಅಲಂಕಾರವು ಪ್ರಸನ್ನಾದಿ. (ಏ) ದಕ್ಷಿಣ(ಮಾರ್ಗ)ದಲ್ಲಿ (ತಾಳದ) ಕಲಾ (ಪ್ರಮಾಣವು) (ಇದೆ.) ವೃತ್ತಿ(=) ವಾರ್ತಿಕದಲ್ಲಿ ಕಲಾ (ಇದೆ); ಚಿತ್ರದಲ್ಲಿ ಕಲಾ (ಇದೆ). (ಐ) ಸ್ವರ(ಮತ್ತು)ಪದ(ಗಳನ್ನೊಳಗೊಂಡ) ಗೀತದಲ್ಲಿ ಚಚ್ಚತ್ಪುಟ ಇತ್ಯಾದಿ ತಾಳ(ಗಳ) ಅನ್ವಯವಿದೆ.                                                                                                                                   7

[ಶುದ್ಧರಾಗಗಳ ಗ್ರಾಮವಿಭಾಗ]

೬೩೦   [ಆಕ್ಷೇಪಃ] ಈ (ಷಡ್ಜ – ಅಥವಾ ಮಧ್ಯಮ-) ಗ್ರಾಮಕ್ಕೆ ಸೇರಿದ್ದು ಎಂಬುದರಿಂದ ಆಗುವ ವಿಶೇಷ ಪ್ರಯೋಜನವೇನು? (ಆ) [ಸಮಾಧಾನವನ್ನು] ಹೇಳಲಾಗುವುದು – ಭರತನ ಮಾತಿನಿಂದಲೇ ಈ ವಿಶೇಷ(ಗ್ರಾಮ) ಸಂಬಂಧವು ದೊರೆಯುತ್ತದೆ. (ಇ) ( ಈ ವಿಷಯದಲ್ಲಿ ) ಭರತಮುನಿಯು ಹೀಗೆ ಹೇಳುತ್ತಾನೆ; ‘ಗ್ರಾಮರಾಗಗಳು ಜಾತಿಗಳಿಂದ ಹುಟ್ಟಿರುವುದರಿಂದ’ ಎಂಬ ಮತ್ತು ‘ಲೋಕದಲ್ಲಿ ಏನನ್ನೆಲ್ಲ ಹಾಡಲಾಗುತ್ತದೋ (ಮತ್ತು ನುಡಿಸಲಾಗುತ್ತದೋ) ಅದೆಲ್ಲ ಜಾತಿಗಳಲ್ಲಿ ಇರುತ್ತದೆ’ ಎಂಬ ಮಾತಿನಿಂದ ( ಈ ಪ್ರಯೋಜನವು ದೊರೆಯುತ್ತದೆ.) (ಈ) ಕಾಶ್ಯಪನೂ (ಈ ವಿಷಯದಲ್ಲಿ) ಹೀಗೆ ಹೇಳುತ್ತಾನೆ –                                                                        8

೬೩೧   “ಮಧ್ಯಮಗ್ರಾಮದಲ್ಲಿ ಷಾಡವ, ಪಂಚಮ, ಹಾಗೆಯೇ ಕೈಶಿಕಗಳೂ ಷಡ್ಜ(ಗ್ರಾಮ)ದಲ್ಲಿ (ಶುದ್ಧ)ಸಾಧಾರಿತವೂ ಹಾಗೆಯೇ ಕೈಶಿಕಮಧ್ಯಮವೂ [ಸೇರಿದೆ].”                                                                                                            ೪೬

[ಶುದ್ಧರಾಗಗಳ ವಿನಿಯೋಗ]

೬೩೨   (ಅ) [ಆಕ್ಷೇಪಃ] (ಮೇಲೆ ಹೇಳಿದ) ಈ (ನಾಟ್ಯಪ್ರಯೋಗಸಂದರ್ಭದ) ವಿಶೇಷ ವಿನಿಯೋಗಗಳು ಯಾವುದರಿಂದ (=ಯಾವ ಪ್ರಮಾಣದಿಂದ) ದೊರೆಯುತ್ತವೆ ? (ಆ) [ಉತ್ತರಃ] [ಭರತಮುನಿಯ] ಮಾತಿನಿಂದಲೇ ಇವು ದೊರೆಯುತ್ತವೆ. (ಇ) ( ಈ ವಿಷಯದಲ್ಲಿ) ಭರತನು ಹೀಗೆ ಹೇಳುತ್ತಾನೆ.                                                                                                                                     9

೬೩೩   “ಮುಖ(ಸಂಧಿ)ದಲ್ಲಿ ಮಧ್ಯಮಗ್ರಾಮ(ರಾಗ)ವೂ ಪ್ರತಿಮುಖದಲ್ಲಿ ಷಡ್ಜ(ಗ್ರಾಮರಾಗ)ವೂ (ಪ್ರಯುಕ್ತ)ವಾಗುತ್ತವೆ. ಗರ್ಭ(ಸಂಧಿ)ದಲ್ಲಿ [ಶುದ್ಧ]ಸಾಧಾರಿತ[ರಾಗ]ವೂ ಅವಮರ್ಶದಲ್ಲಿ ಪಂಚಮವೂ (ಪ್ರಯುಕ್ತವಾಗುತ್ತವೆ).”                                       ೪೭

೬೩೪   “ಸಂಹಾರ(ಸಂಧಿ)ದಲ್ಲಿ ಕೈಶಿಕವು (ಬಳಸಲ್ಪಡುತ್ತದೆಂದು) ಹೇಳಿದೆ; ಪೂರ್ವರಂಗದಲ್ಲಿ ಷಾಡವ, ಚಿತ್ರ(-ಅಭಿನಯದ) ಹದಿನೆಂಟು ಅಂಗಗಳ ಕೊನೆಯಲ್ಲಿ ಕೈಶಿಕಮಧ್ಯಮ[ದ]

____

ಶುದ್ಧಾನಾಂ ವಿನಿಯೋಗೋ sಯಂ ಬ್ರಹ್ಮಣಾ ಸಮುದಾಹೃತ”                                                          || ೪೮ ||

[ಖ. ಭಿನ್ನರಾಗಾಃ)

೬೩೫   (ಆ) ಇದಾನೀಂ ಭಿನ್ನಾನಾಂ ಲಕ್ಷಣಮಾಹ –                                                                                   10

೬೩೬   ಶ್ರುತಿಭಿನ್ನೋ ಜಾತಿಭಿನ್ನಃ ಶುದ್ಧಭಿನ್ನಃ ಸ್ವರಸ್ತಥಾ |
ಚತುರ್ಭಿದ್ಯತೇ ಯಸ್ಮಾತ್ ತಸ್ಮಾತ್ ಭಿನ್ನಕ ಉಚ್ಯತೇ                                                             || ೪೯ ||

೬೩೭   (ಅ) ನನು ಭಿನ್ನಶಬ್ದೇನ ಕಿಮಭಿಧೀಯತೇ ? (ಆ) ಕಿಂ ವಿದಾರಿತೋsರ್ಥಃ, ಏತದಸ್ಮಾದಯಂ ವ್ಯತಿರಿಕ್ತ ಇತ್ಯರ್ಥೋ ವಾ ಭಿನ್ನಶಬ್ಧಸ್ಯ? (ಇ) ಏತನ್ನ ವಾಚ್ಯಮ್ | (ಈ) ಭಿನ್ನೋsತ್ರ ವಿಕೃತ ಉಚ್ಯತೇ | (ಉ) ವಿಕೃತತ್ವಂ ಚ ಪೂರ್ವೋಕ್ತಶ್ರುತಿಭಿನ್ನೇತ್ಯಾದಿ ಲಕ್ಷಣಾತ್ |            11

 

[i. ಸ್ವರಭಿನ್ನಃ]

೬೩೮   (ಅ) ಇದಾನೀಂ ಭಿನ್ನಾನಾಂ ಪ್ರಾಗುಕ್ತಲಕ್ಷಣಪ್ರಕಟನಾರ್ಥಂ ತತ್ತಾದೌ ಸ್ವರಭಿನ್ನಸ್ಯ ಲಕ್ಷಣಮುಚ್ಯತೇ –         12

೬೩೯   ಯದಾ ವಾದೀ ಗೃಹೀತಃ ಸ್ಯಾತ್ ಸಂವಾದೀ ಚ ವಿಮೋಕ್ಷ್ಯತೇ |
ವಿವಾದೀ ವಾನುವಾದೀ ವಾ ಸ್ವರಭಿನ್ನಃ ಸ ಉಚ್ಯತೇ                                                                || ೫೦ ||

೬೪೦   (ಅ) ಅಸ್ಯಾರ್ಥಃ – ಮಧ್ಯಮಗ್ರಾಮಾಶ್ರಿತಸ್ಯ ಶುದ್ಧಷಾಡವಸ್ಯ ಯೋsಸೌ ಮಧ್ಯಮೋ ಗ್ರಹಾಂಶಃ, ತತ್‌ಸ್ಥಾನೇ ದೈವತೋ ವಿವಾದಿತ್ವೇನ ವಾ (s) ನುವಾದಿತ್ವೇನ ವಾ ಗೃಹೀತೋ ಭವತಿ | (ಆ) ಮಧ್ಯಮಸ್ವರಸ್ಯ ; ಸಂವಾದೀ ತ್ಯಜ್ಯತೇ ನ್ಯಸ್ಯತೇ ವಾ ತದಾಸೌ ಸ್ವರಭಿನ್ನ ಉಚ್ಯತೇ | (ಇ) ಭಿನ್ನಪಡ್ಜೇ ತತ್ರ ವದನಾದ್ ವಾದೀ ದೈವತಃ, ಪುನರ್ಬಹುಪ್ರಯೋಗೋ ಭವತಿ ತಸ್ಯ | (ಈ) ನನು ಪಂಚಸು ರಾಗೇಷು ಮಧ್ಯೇ ಭಿನ್ನಷಡ್ಜಸ್ಯ ಲಕ್ಷಣಮುಚ್ಯತೇ ಇತ್ಯಾದಾವೇವಾಭಿಧಾನಂ ಕುತಃ ? (ಉ) ಸತ್ಯಮುಕ್ತಮ್, ಮುಖ್ಯತ್ವಾದಸ್ಯ | (ಊ) ಮುಖ್ಯತ್ವಂ ಚ ಯಥಾ ಶುದ್ಧಗೀತಿಷು ಶುದ್ಧಷಾಡವಸ್ಯ ಏವಂ ಭಿನ್ನಗೀತಿಷು ಭಿನ್ನಷಡ್ಜಸ್ಯೇತಿ ತದ್‌ಭೇದ[ತ್ವಾ]ದಸ್ಯೇತಿ |                                         ೧೩

ಪಾಠವಿಮರ್ಶೆ: ೬೩೪ಮಾ ೬೩೬ಅ,ಆ ೬೩೭ಅ-ಉ ೬೩೯ಇ ೬೪೦ ಅ,ಆ,ಇ

—-

ಪ್ರಯೋಗವಾಗುತ್ತದೆ. ಶುದ್ಧ(ರಾಗ)ಗಳ ಈ ವಿನಿಯೋಗವನ್ನು ಬ್ರಹ್ಮನು ಹೇಳಿದ್ದಾನೆ.” (ನಾಶಾ. ಉದ್ದೃತಿ. ಸಂರ. ೨.೩೨)           ೪೮

(ಖ. ಭಿನ್ನರಾಗಗಳು)

೬೩೫   (ಅ) ಈಗ ಭಿನ್ನ[ರಾಗ]ಗಳ ಲಕ್ಷಣವನ್ನು [ಗ್ರಂಥಕರ್ತನು] ಹೇಳುತ್ತಾನೆ –                                              10

೬೩೬   ಶ್ರುತಿ[ಯಿಂದ] (ಭಿನ್ನ), ಜಾತಿ[ಯಿಂದ] ಭಿನ್ನ, ಶುದ್ಧ[ರಾಗದಿಂದ] ಭಿನ್ನ, ಹಾಗೆಯೇ ಸ್ವರ[ದಿಂದ ಭಿನ್ನ] (ಈ) ನಾಲ್ಕು ರೀತಿಗಳಲ್ಲಿ ಬೇರೆಯಾಗಿರುವುದರಿಂದ (ಇದನ್ನು) ಭಿನ್ನ[ರಾಗಗಳು] ಎಂದು ಹೇಳಿದೆ.                                                          ೪೯

೬೩೭   (ಅ) [ಪ್ರಶ್ನೆ :] ಭಿನ್ನವೆಂಬ ಮಾತಿನಿಂದ ಏನನ್ನು ಹೇಳಿದೆ? (ಆ) ಭಿನ್ನವೆಂಬ ಮಾತಿಗೆ ಸೀಳಿದ್ದು, ಒಡೆದಿದ್ದು ಎಂಬ ಅರ್ಥವೋ? ವ್ಯತಿರಿಕ್ತ(=ವಿಲಕ್ಷಣ)ವಾಗಿರುವುದು ಎಂಬ ಅರ್ಥವೋ? (ಇ) ಹೀಗೆ, ಹೇಳಬಾರದು. (ಈ) ಭಿನ್ನ ಎಂದರೆ ಇಲ್ಲಿ ವಿಕೃತ ಎಂದು (ಅರ್ಥವನ್ನು) ಹೇಳಲಾಗುತ್ತದೆ. (ಉ) ಹಿಂದೆ ಹೇಳಿರುವ ಶ್ರುತಿಯಿಂದ ಭಿನ್ನ ಇತ್ಯಾದಿಯಾದ ಲಕ್ಷಣ(ವಿರುವುದರಿಂದ ಹೀಗೆ ಇಲ್ಲಿ ಇಟ್ಟುಕೊಳ್ಳಬೇಕು.)         11

 

[i. ಸ್ವರಭಿನ್ನ]

೬೩೮   (ಅ) ಈ ಭಿನ್ನ[ರಾಗ]ಗಳಿಗೆ ಹಿಂದೆ ಹೇಳಿದ ಲಕ್ಷಣವನ್ನು ಪ್ರಕಟಪಡಿಸುವುದಕ್ಕಾಗಿ ಮೊದಲು ಸ್ವರಭಿನ್ನ[ರಾಗ]ಗಳ ಲಕ್ಷಣವನ್ನು ಹೇಳಲಾಗುವುದು –                                                                                                                         12

೬೩೯   ವಾದಿ(ಸ್ವರ)ದಿಂದ (ರಾಗವನ್ನು) ಎತ್ತಿಕೊಂಡಲ್ಲಿ (=ಪ್ರಾರಂಭಿಸಿದಲ್ಲಿ) ಸಂವಾದಿಯಿಂದ, ವಿವಾದಿಯಿಂದ ಅಥವಾ ಅನುವಾದಿಯಿಂದ (ಅದನ್ನು) ಬಿಟ್ಟರೆ(=ಮುಕ್ತಾಯಮಾಡಿದರೆ) ಅದು (=ಅಂತಹ ರಾಗವು) ಸ್ವರಭಿನ್ನ ಎಂದು ಹೇಳಿದೆ.                     ೫೦

೬೪೦   (ಅ) ಇದರ ಅರ್ಥವು [ಹೀಗಿದೆ]: ಮಧ್ಯಮಗ್ರಾಮಕ್ಕೆ ಸೇರಿದ ಶುದ್ಧಷಾಡವದಲ್ಲಿ ಈ ಮಧ್ಯಮ[ಸ್ವರ]ವು ಗ್ರಹವೂ ಅಂಶವೂ (ಆಗಿದ್ದು), ಅದರ ಜಾಗದಲ್ಲಿ ದೈವತವನ್ನು ವಿವಾದಿಯಾಗಿಯೋ ಅನುವಾದಿಯಾಗಿಯೋ ತೆಗೆದುಕೊಳ್ಳುತ್ತದೆ. (ಆ) ಮಧ್ಯಮಸ್ವರದ ಸಂವಾದಿಯನ್ನು ಬಿಟ್ಟುಬಿಡುವ <ತ್ಯಾಗದ> ಅಥವಾ (ಬೇರೆಯಾಗಿ) ಇಡುವ (=ಬದಲಾಯಿಸುವ) (ಸ್ವರ)ವಾದರೆ (ಅದನ್ನು) ಸ್ವರಭಿನ್ನವೆನ್ನಲಾಗುತ್ತದೆ. (ಇ) ಭಿನ್ನಷಡ್ಜದಲ್ಲಿ (ರಾಗಭಾವವನ್ನು) ಹೇಳುವುದರಿಂದ ಧೈವತವು ವಾದಿ(ಯಾಗಿದೆ) : ಅಲ್ಲದೆ ಅದರ ಪ್ರಯೋಗವೂ ಬಹುವಾಗಿದೆ. (ಈ) [ಆಕ್ಷೇಪಃ] ಐದು (ಭಿನ್ನ)ರಾಗಗಳ ನಡುವೆ ಭಿನ್ನಷಡ್ಜದ ಲಕ್ಷಣವನ್ನು ಹೇಳಲಾಗುವುದು ಎಂದು ಮೊದಲೇ ಏಕೆ (ಅದನ್ನು) ವರ್ಣಿಸಿದೆ ? (ಉ) (ಹೀಗೆ) ಹೇಳಿದ್ದು ನಿಜವೇ; ಏಕೆಂದರೆ (ಅವುಗಳಲ್ಲಿ) ಅದು ಮುಖ್ಯವಾದುದರಿಂದ (ಹೀಗೆ ಹೇಳಿದೆ). (ಊ) ಈ ಮುಖ್ಯತ್ವವು ಎಂತಹದೆಂದರೆ – ಶುದ್ಧಗೀತಿಗಳಲ್ಲಿ ಶುದ್ಧಷಾಡವು ಹೇಗೆ

____

[೧. ಭಿನ್ನಷಡ್ಜಃ]

೬೪೧   ದೈವತಾಂಶೋ ಮಧ್ಯಮನ್ಯಾಸಃ ಪಂಚಮದುರ್ಷಭವರ್ಜಿತಃ |
ಷಡ್ಜೋದೀಚ್ಯವತೀಜಾತೋ ಭಿನ್ನಷಡ್ಜಃ ಸ್ಮೃತೋ ಬುಧೈಃ                                                    || ೫೧ ||

೬೪೨   (ಅ) (ಅಸ್ಯಾರ್ಥಃ- ಭಿನ್ನಷಡ್ಜಃ ಷಡ್ಜಗ್ರಾಮಸಂಬಂಧಃ ಷಡ್ಜೋರ್ದಿಚ್ಯವತೀ ಜಾತೇರ್ಜಾತತ್ವಾತ್ | (ಆ) ಧೈವತೋ ಗ್ರಹೋ sಶಶ್ಚ | (ಇ) ಮಧ್ಯಮೋ ನ್ಯಾಸಃ | (ಈ) ಋಷಭಪಂಚಮಹೀನ ಔಡುವಿತಃ | (ಉ) ನಿಷಾದಗಾಂಧಾರೌ ಕಾಕಲ್ಯಂತರೌ | (ಊ) ಸರ್ವೋಪಕರಣಪ್ರವೃತ್ತಸ್ಯ ವಿಜಾತೀಯಾದ್ ರಣಾನ್ನಿವೃತ್ತಸ್ಯ ಮೃಗಾಯಾಂ ಪ್ರವೃತ್ತಸ್ಯ ನಾಯಕಸ್ಯ ಪ್ರಾವೇಶಿಕೇಷು ಅಸ್ಯ ವಿನಿಯೋಗಃ (ಋ) ಬೀಭತ್ಸಭಯಾನಕೌ ರಸೌ | (ೠ) ಧೈವತಾದಿಮೂರ್ಛನಾ | (ಎ)ಸಂಚಾರೀವರ್ಣಃ | (ಏ) ಪ್ರಸನ್ನಾದಿರಲಂಕಾರಃ | (ಐ) ದಕ್ಷಿಣೇ ಕಲಾ, ವೃತ್ತೌ ಕಲಾ, ಚಿತ್ರೇ ಕಲಾ | (ಒ) ಸ್ವರಪದಗೀತೇ ಚಚ್ಚತ್ಪುಟಾದಿ ತಾಲಃ |                                                                                               14

[೨. ಭಿನ್ನಪಂಚಮಃ]

೬೪೩   (ಅ) ………………………. ಅಸೌ ಭಿನ್ನಪಂಚಮಃ ಸ್ವರಭಿನ್ನೋ sಭಿದೀಯತೇ |
(ಆ) ಲಕ್ಷಣಂ ಚ ತದ್ಯಥಾ-                                                                                                                  15

೬೪೪   ಶುದ್ಧಪಂಚಮವತ್ ಪ್ರೋಕ್ತಃ ಸ್ವರಜ್ಞೈರ್ಭಿನ್ನಪಂಚಮಃ |
ದೈವತಾಂಶಃ ಪಂಚಮಾಂತಃ ಸೂತ್ರಧಾರಪ್ರವೇಶನೇ || ೫೨ ||

೬೪೫   (ಅ) ಅಸ್ಯಾರ್ಥಃ – ಭಿನ್ನಪಂಚಮೋ ಮಧ್ಯಮಗ್ರಾಮಸಂಬಂಧಃ ಮಧ್ಯಮಾ ಪಂಚಮೀಜಾತ್ಯೋರ್ಜಾತತ್ವಾತ್‌ | (ಆ) ಗ್ರಹೋ s೦ಶಶ್ಚ ಧೈವತಃ | (ಇ) ಪಂಚಮೋ ನ್ಯಾಸಃ | (ಈ) ನಿಷಾದೋsತ್ರ ಕಾಕಲೀ | (ಉ) ಕ್ಚಚಿನ್ನಿಷಾದಸ್ಯಾಪಿ ಪ್ರಯೋಗಃ | (ಊ) ಸಂಪೂರ್ಣಶ್ಚಾಯಮ್‌ | (ಋ) ಸೂತ್ರಧಾರಪ್ರವೇಶೇ sಸ್ಯ ವಿನಿಯೋಗಃ | (ೠ)

ಪಾಠವಿಮರ್ಶೆ: ೬೪೧ಇ ೬೪೨ಅ, ಊ, ಋ, ಏ ೬೪೪ಅ ೬೪೫ ಅ

—-

ಮುಖ್ಯವೋ, ಹಾಗೆಯೇ ಭಿನ್ನಗೀತಿಗಳ ಪೈಕಿ ಭಿನ್ನಷಡ್ಜವು ಮುಖ್ಯ: ಏಕೆಂದರೆ (ಅದು) ಅದರ (=ಶುದ್ಧಷಾಡದವದ) (ಒಂದು) ಭೇದವಾಗಿದೆ.13

[೧. ಭಿನ್ನಷಡ್ಜ]

೬೪೧   ಭಿನ್ನಷಡ್ಜವು ಷಡ್ಜೋದೀಚ್ಯವತೀ[ಜಾತಿ]ಯಲ್ಲಿ ಹುಟ್ಟಿದೆ; ದೈವತವು (ಅದರ) ಅಂಶ, ಮಧ್ಯಮವು ನ್ಯಾಸ ; ಪಂಚಮರಿಷಭಗಳನ್ನು ಲೋಪಮಾಡಬೇಕು, ಎಂದು ವಿದ್ವಾಂಸರು ಸ್ಮರಿಸುತ್ತಾರೆ.                                                                         ೫೧

೬೪೨   (ಅ) [ಇದರ ಅರ್ಥವು ಹೀಗಿದೆ]; ಷಡ್ಜೋದೀಚ್ಯವತೀ[ಜಾತಿ]ಯಲ್ಲಿ ಹುಟ್ಟಿರುವುದರಿಂದ ಭಿನ್ನ ಷಡ್ಜವು ಷಡ್ಜಗ್ರಾಮಕ್ಕೆ ಸೇರಿದೆ. (ಆ) ದೈವತವು (ಇದರ) ಗ್ರಹ ಮತ್ತು ಅಂಶ. (ಇ) ಮಧ್ಯಮವು (ಅದರ) ನ್ಯಾಸ. (ಈ) ರಿಷಭಪಂಚಮಗಳು ಲೋಪವಾಗುವುದರಿಂದ ಔಡುವಿತವಾಗಿದೆ. (ಉ) ನಿಷಾದಗಾಂಧಾರಗಳು (ಕ್ರಮವಾಗಿ) ಕಾಕಲೀ ಮತ್ತು ಅಂತರಗಳು. (ಊ) (ತನಗೆ) ಸಾಧ್ಯವಾದ ಎಲ್ಲ ಸಾಧನಸಾಮಗ್ರಿಯನ್ನೂ ಬಳಸಿ, ತನ್ನ ಸ್ವಭಾವಕ್ಕೆ ಒಗ್ಗದ ಯುದ್ಧದಿಂದ ಹಿಂತಿರುಗುವ, (ಅಥವಾ?) ಬೇಟೆಯಲ್ಲಿ ತೊಡಗುವ ನಾಯಕನು (ದೃಶ್ಯವನ್ನು) ಪ್ರವೇಶಿಸುವಾಗ ಇದನ್ನು ವಿನಿಯೋಗಿಸಬೇಕು. (ಋ) (ಇಲ್ಲಿ ಪ್ರತೀತವಾಗಬೇಕಾದ) ರಸಗಳು ಬೀಭತ್ಸಭಯಾನಕಗಳು. (ೠ) ಇದರ ಮೂರ್ಛನೆಯು ದೈವತದಿಂದ ಮೊದಲಾಗುತ್ತದೆ. (ಎ) ಸಂಚಾರೀವರ್ಣ(ವನ್ನು ಮುಖ್ಯವಾಗಿ ಬಳಸಬೇಕು). (ಏ) ಪ್ರಸನ್ನಾದಿ ಅಲಂಕಾರ(ವನ್ನೂ ಬಳಸಬೇಕು).(ಐ)ದಕ್ಷಿಣ(ಮಾರ್ಗ)ದಲ್ಲಿ (ತಾಳದ) ಕಲಾ(ಪ್ರಮಾಣವಿರುತ್ತದೆ). ವಾರ್ತಿಕದಲ್ಲಿ ಕಲಾ (ಇರುತ್ತದೆ), ಚಿತ್ರದಲ್ಲಿ ಕಲಾ (ಇರುತ್ತದೆ). (ಒ) ಸ್ವರ(ಗಳೂ)ಪದ(ಗಳೂ ಇರುವ) ಗೀತದಲ್ಲಿ ಚಚ್ಚತ್ಪುಟ ಮುಂತಾದ ತಾಲ(ವನ್ನು ಪ್ರಯೋಗಿಸಬೇಕು).               14

[೨. ಭಿನ್ನಪಂಚಮ]

೬೪೩   (ಅ) …………………… ಈ ಭಿನ್ನಪಂಚಮವು ಸ್ವರಭಿನ್ನವೆಂಬ ಹೆಸರನ್ನು ಪಡೆದಿದೆ. (ಆ) (ಅದರ) ಲಕ್ಷಣವು ಹೇಗೆಂದರೆ-        15

೬೪೪ ಭಿನ್ನಪಂಚಮವು ಶುದ್ಧಪಂಚಮದ, ಹಾಗೆಯೇ ಇದೆ ಎಂದು ಸ್ವರಗಳಲ್ಲಿ ಪಂಡಿತರಾದವರು ಹೇಳುತ್ತಾರೆ. ಧೈವತವು (ಅದರ) ಅಂಶ, ಪಂಚಮವು ನ್ಯಾಸ; (ಅದನ್ನು) ಸೂತ್ರಧಾರನ ಪ್ರವೇಶದ (ಸಂದರ್ಭದಲ್ಲಿ)ಲ್ಲಿ ವಿನಿಯೋಗಿಸಬೇಕು.

೬೪೫   (ಅ) ಇದರ ಅರ್ಥವು [ಹೀಗಿದೆ] : ಮಧ್ಯಮಾ ಮತ್ತು ಪಂಚಮೀ ಜಾತಿಗಳಲ್ಲಿ ಹುಟ್ಟಿರುವುದರಿಂದ ಭಿನ್ನಪಂಚಮವು ಮಧ್ಯಮಗ್ರಾಮಕ್ಕೆ ಸೇರಿದೆ. (ಆ) ದೈವತವು (ಅದರ) ಗ್ರಹ ಮತ್ತು ಅಂಶ. (ಇ) ಪಂಚಮವು ನ್ಯಾಸ. (ಈ) ಇದರಲ್ಲಿ ನಿಷಾದವು ಕಾಕಲೀ. (ಉ) ಕೆಲವು ವೇಳೆ (ಶುದ್ಧ)ನಿಷಾದವೂ ಪ್ರಯುಕ್ತವಾಗುತ್ತದೆ. (ಊ) ಇದು ಸಂಪೂರ್ಣ (ರಾಗ). (ಋ) ಇದರ ವಿನಿಯೋಗವು ಸೂತ್ರಧಾರನ ಪ್ರವೇಶಸಮಯದಲ್ಲಿ ಇದೆ. (ೠ) (ಇದರಲ್ಲಿ ಪ್ರತೀತವಾಗಬೇಕಾದ)

____

ಬೀಭತ್ಸಭಯಾನಕೌ ರಸೌ | (ಎ) ದೈವತಾದಿಮೂರ್ಛನಾ | (ಏ) ಸಂಚಾರೀ ವರ್ಣಃ | (ಐ) ಪ್ರಸನ್ನಾದಿರಲಂಕಾರ (ಒ) ದಕ್ಷಿಣೇ ಕಲಾ, ವೃತ್ತೌ ಕಲಾ, ಚಿತ್ರೇ ಕಲಾ | (ಓ) ಸ್ವರಪದಗೀತೇ ಚಚ್ಚತ್ಪುಟಾದಿ ತಾಲಃ |                                                                     16

 

[ii. ಜಾತಿಭಿನ್ನಃ]

೬೪೬   (ಅ) ಇದಾನೀಂ ಜಾತಿಭಿನ್ನಸ್ಯ ಲಕ್ಷಣಮಾಹ –                                                                                17

೬೪೭  ಜಾತೀನಾಮಂಶಕಃ ಸ್ಥಾಪ್ಯಃ ಸ್ವಲ್ಪಕಸ್ತು ಬಹುಸ್ತಥಾ |
ಅಲ್ಪತ್ವಂ ಚ ಬಹುತ್ವಂ ಚ ಪ್ರಯೋಗಾಲ್ಪಬಹುತ್ವತಃ |
ಸೂಕ್ಷ್ಮಾತಿಸೂಕ್ಷ್ಮವಕ್ರೈಶ್ಚ ಜಾತಿಭಿನ್ನಃ ಸ ಉಚ್ಯತೇ                                                                || ೫೩ ||

೬೪೮   (ಅ) ಅಸ್ಯಾರ್ಥಃ – ಶುದ್ಧಕೈಶಿಕಮಧ್ಯಮೋ ಹಿ ಕೈಶಿಕೀಷಡ್ಜಮಧ್ಯಮಾಜಾತ್ಯೋರ್ಜಾತಃ | (ಆ) ಭಿನ್ನಕೈಶಿಕಮಧ್ಯ[ಮ]ಸ್ತು ಷಡ್ಜಮಧ್ಯಮಾ ಜಾತೇರ್ಜಾತತ್ವಾತ್ ತದಂಶಗ್ರಾಹಿತ್ವೇನ ಸ್ಥಾ ಯಿವರ್ಣಗ್ರಾಹಿತ್ವೇನ ಚ ಸೂಕ್ಷ್ಮಾತಿಸೂಕ್ಷ್ಮೈಃ ಪ್ರಯೋಗೈಶ್ಚ ಜಾತಿಭಿನ್ನೋ ಭವೇದಿತ್ಯರ್ಥಃ | (ಇ) ಲಕ್ಷಣಂ ಚಾಸ್ಯ ಯಥಾ –                                                                                      18

[೩. ಭಿನ್ನಕೈಶಿಕಮಧ್ಯಮಃ]

೬೪೯   ಸ್ಯಾತ್ ಷಡ್ಜಮಧ್ಯಮಾಜಾತೇರ್ಭಿನ್ನಕೈಶಿಕಮಧ್ಯಮಃ |
ಷಡ್ಜಾಂಶೋ ಮಧ್ಯಮನ್ಯಾಸೋ ಮದ್ರೈಸ್ತು ಗಮಕೈರುತ್ಯಃ                                                    || ೫೪ ||

೬೫೦   (ಅ) [ಅಸ್ಯಾರ್ಥಃ-] ಭಿನ್ನಕೈಶಿಕಮಧ್ಯಮಃ ಷಡ್ಜಗ್ರಾಮಸಂಬಂಧಃ ಷಡ್ಜಮಧ್ಯಮಾ ಜಾತೇರುತ್ಪನ್ನತ್ವಾತ್ | (ಅ) ಷಡ್ಜೋsಸ್ಯ ಗ್ರಹೋ s೦ಶಶ್ಚ | (ಇ) ಮಧ್ಯಮೋ ನ್ಯಾಸಃ | (ಈ) ಮಂದ್ರಗಮಕಶ್ಚ | (ಉ) ನಿಷಾದೋ sತ್ರ ಕಾಕಲೀ | (ಊ) ಪೂರ್ಣಶ್ಚಾಯಮ್ | (ಋ) ದಾನವೀರೇ ಚಾಸ್ಯ ಪ್ರಯೋಗಃ | (ೠ) ವೀರರೌದ್ರಾದಿಕೋ ರಸಃ | (ಎ) ಷಡ್ಜಾದಿಮೂರ್ಛನಾ | (ಏ) ವರ್ಣಃ ಸಂಚಾರೀ | (ಐ) ಪ್ರಸನ್ನಾದಿರಲಂಕಾರಃ | (ಒ)

ಪಾಠವಿಮರ್ಶೆ : ೬೪೭ಅ ೬೪೮ಅ,ಆ ೬೫೦ಆ

—-

ರಸಗಳು ಬೀಭತ್ಸ ಮತ್ತು ಭಯಾನಕ. (ಎ) (ಇದರ) ಮೂರ್ಛನೆಯು ದೈವತದಿಂದ ಮೊದಲಾಗುತ್ತದೆ. (ಏ) ಸಂಚಾರೀವರ್ಣ(ವನ್ನು ಬಳಸಬೇಕು). (ಐ) (ಬಳಸಬೇಕಾದ ಅಲಂಕಾರವು ಪ್ರಸನ್ನಾದಿ. (ಒ) ದಕ್ಷಿಣ [ಮಾರ್ಗ]ದಲ್ಲಿ (ತಾಳದ) ಕಲಾ (ಪ್ರಮಾಣವು ಇರುತ್ತದೆ.) ವಾರ್ತಿಕದಲ್ಲಿ ಕಲಾ (ಇರುತ್ತದೆ), ಚಿತ್ರದಲ್ಲಿ ಕಲಾ (ಇರುತ್ತದೆ). (ಓ) ಸ್ವರ (ಮತ್ತು) ಪದ (ಗಳಿರುವ) ಗೀತದಲ್ಲಿ ಚಚ್ಚತ್ಪುಟವೇ ಮೊದಲಾದ ತಾಲ(ಗಳನ್ನು ಅನ್ವಯಿಸಬೇಕು).                                                                                                                           16

 

[ii. ಜಾತಿಭಿನ್ನ­]

೬೪೬   (ಅ) ಈಗ ಜಾತಿಭಿನ್ನ[ರಾಗ]ದ ಲಕ್ಷಣವನ್ನು (ಗ್ರಂಥಕಾರನು) ಹೇಳುತ್ತಾನೆ –                                           17

೬೪೭   ಜಾತಿಗಳ ಅಂಶವನ್ನು (ಪ್ರಯೋಗದಲ್ಲಿ) ಸ್ಥಾಪಿಸಬೇಕು. ಸ್ವಲ್ಪ (ಪ್ರಯೋಗವಿರುವಸ್ವರ)ವನ್ನೂ ಬಹು (ಪ್ರಯೋಗವಿರುವ ಸ್ವರ)ವನ್ನೂ ಹಾಗೆಯೇ (ಸ್ಥಾಪಿಸಬೇಕು). ಅಲ್ಪ ಪ್ರಯೋಗದಿಂದ ಅಲ್ಪತ್ವವನ್ನೂ ಬಹುಪ್ರಯೋಗದಿಂದ ಬಹುತ್ವವನ್ನೂ (ಸ್ಥಾಪಿಸಬೇಕು). (ಇಂತಹ) ಸೂಕ್ಷ್ಮವೂ ಅತಿಸೂಕ್ಷ್ಮವೂ ವಕ್ರವೂ ಆಗಿರುವ (ಪ್ರಯೋಗಗಳಿಂದ) ಜಾತಿಭಿನ್ನವಾಗುತ್ತದೆಯೆಂದು ಹೇಳಿದೆ.             ೫೩

೬೪೮   (ಅ) ಇದರ ಅರ್ಥವು [ಹೀಗಿದೆ] – ಶುದ್ಧಕೈಶಿಕ ಮಧ್ಯಮವು ಕೈಶಿಕೀ ಮತ್ತು ಷಡ್ಜ ಮಧ್ಯಮಾಜಾತಿಗಳಲ್ಲಿ ಹುಟ್ಟಿದೆ. (ಆ) ಭಿನ್ನಕೈಶಿಕಮಧ್ಯ[ಮ]ವೂ ಷಡ್ಜಮಧ್ಯಾಜಾತಿಯಲ್ಲೇ ಹುಟ್ಟುವುದರಿಂದ ಅದರ (=ಷಡ್ಜಮಧ್ಯಮಾ-ಮತ್ತು ಕೈಶಿಕಗಳ) ಅಂಶವನ್ನು ತೆಗೆದುಕೊಂಡು, ಸ್ಥಾಯಿವರ್ಣವನ್ನು ತೆಗೆದುಕೊಂಡು ಸೂಕ್ಷ್ಮವೂ ಅತಿಸೂಕ್ಷ್ಮವೂ ಆಗಿರುವ ಪ್ರಯೋಗಗಳನ್ನು ಮಾಡುವುದರಿಂದ (ಭಿನ್ನಕೈಶಿಕಮಧ್ಯಮವು) ಜಾತಿ(ಯಿಂದಾಗಿ) ಭಿನ್ನವಾಗುತ್ತದೆ. (ಇ) ಅದರ ಲಕ್ಷಣವು ಏನೆಂದರೆ –                          18

[೩. ಭಿನ್ನಕೈಶಿಕಮಧ್ಯಮ]

೬೪೯   ಭಿನ್ನಕೈಶಿಕಮಧ್ಯಮವು ಷಡ್ಜಮಧ್ಯಾ ಜಾತಿಯಿಂದಾಗುತ್ತದೆ. ಷಡ್ಜವು (ಅದರ) ಅಂಶ, ಮಧ್ಯಮವು ನ್ಯಾಸ; ಮಂದ್ರ(ಸ್ಥಾಯಿ)[ಸ್ವರ]ಗಳಲ್ಲಿ ಗಮಕವಿದೆ.

೬೫೦   (ಅ) [ಇದರ ಅರ್ಥವು ಹೀಗಿದೆ] : ಭಿನ್ನಕೈಶಿಕಮಧ್ಯಮವು ಷಡ್ಜಮಧ್ಯಮಾಜಾತಿಯಲ್ಲಿ ಹುಟ್ಟಿರುವುದರಿಂದ ಷಡ್ಜಗ್ರಾಮಕ್ಕೆ ಸೇರಿದೆ. (ಆ) ಷಡ್ಜವು ಅದರ ಗ್ರಹ ಮತ್ತು ಅಂಶ. (ಇ) ಮಧ್ಯಮವು (ಅದರ) ನ್ಯಾಸ. (ಈ) ಮಂದ್ರ[ಸ್ಥಾಯಿಯಲ್ಲಿ] ಗಮಕ(ಗಳಿವೆ). (ಉ) ಇದರಲ್ಲಿ ನಿಷಾದವು ಕಾಕಲೀ. (ಊ) ಇದು ಪೂರ್ಣ[ರಾಗ]ವಾಗಿದೆ. (ಋ) ಇದನ್ನು ದಾನವೀರನ (ಪಾತ್ರದ)ಲ್ಲಿ ವಿನಿಯೋಗಿಸಬೇಕು. (ೠ) ಇದರಲ್ಲಿ (ಪ್ರತೀತವಾಗಬೇಕಾದ) ರಸಗಳು ವೀರ, ರೌದ್ರ, ಇತ್ಯಾದಿ. (ಎ) (ಇದರ) ಮೂರ್ಛನೆಯು ಷಡ್ಜದಿಂದ ಮೊದಲಾಗುತ್ತದೆ. (ಏ) (ಬಳಸಬೇಕಾದ) ವರ್ಣವು ಸಂಚಾರೀ. (ಐ) (ಬಳಸಬೇಕಾದ) ಅಲಂಕಾರವು ಪ್ರಸನ್ನಾದಿ. (ಒ) (ಇದರ ತಾಳದ) ದಕ್ಷಿಣ(ಮಾರ್ಗ)ದಲ್ಲಿ

____

ದಕ್ಷಿಣೇ ಕಲಾ, ವಾರ್ತಿಕೇ ಕಲಾ, ಚಿತ್ರೇ ಕಲಾ | (ಓ) [ಸ್ವರಪದಗೀತೇ] ಚಚ್ಚತ್ಪುಟಾದಿ ತಾಲಃ |                            19

 

[iii. ಶುದ್ಧಭಿನ್ನಃ]

೬೫೧   (ಅ) [ಇದಾನೀಂ] ಶುದ್ಧಭಿನ್ನಸ್ಯ ಲಕ್ಷಣಮಾಹ –                                                                            20

೬೫೨   ಪರಿತ್ಯಜನ್ ಅನ್ಯಜಾತಿಂ ಸ್ವಜಾತಿಕುಲಭೂಷಣಃ |
ಸ್ವಕಂ ಕುಲಂ ತು ಸಂಗೃಹ್ಣನ್ ಶುದ್ಧಭಿನ್ನಃ ಪ್ರಕೀರ್ತಿತಃ                                                          || ೫೫ ||

೬೫೩   (ಅ) ಅಸ್ಯಾರ್ಥಃ – ಅನ್ಯಾಂ ಜಾತಿಂ ಪರಿಹರನ್ ಸ್ವಜಾತಿಕುಲಭೂಷಿತಂ ಸ್ವಮೂಲಂ ತು ಸಂಗೃಹ್ಣನ್ ಇತಿ | 21

[೪. ಭಿನ್ನಕೈಶಿಕಃ]

೬೫೪   (ಅ) ಶುದ್ಧಸ್ಯ ಲಕ್ಷಣಂ ಸಮಗ್ರಂ ಭಿನ್ನಕೈಶಿಕಸ್ಯಾಪಿ ವಿದ್ಯತೇ | (ಆ) ತರ್ಹಿ ಕೋ ಭೇದಃ? (ಇ) ಗೀತಿಕೃತೋ ಭೇದಃ | (ಈ) ಶುದ್ಧಕೈಶಿಕೋ ಹಿ ಶುದ್ಧಗೀತ್ಯಾ ಗೀಯತೆ, ಭಿನ್ನಕೈಶಿಕಸ್ತು ಭಿನ್ನಗೀತ್ಯಾ ಗೀಯತೇ | (ಉ) ಏತದುಕ್ತಂ ಭವತಿ- ಯೇನ ಸ್ವಸ್ಥಾನೇನ ರಾಗೀಯತೇ ಶುದ್ಧಕೈಶಿಕೇ ನ ತೇನ ಸ್ವಸ್ಥಾನೇನ ಭಿನ್ನಕೈಶಿಕೇ ರಾಗೀಯತ ಇತಿ | (ಊ) ಲಕ್ಷಣಂ ಚಾಸ್ಯ ಯಥಾ-                                                   22

೬೫೫   ಶುದ್ಧಕೈಶಿಕವದ್ ರೂಪಃ] ಸ್ವರಜ್ಞೈರ್ಭಿನಕೈಶಿಕಃ |
ಷಡ್ಜಾಂಶಃ ಪಂಚಮನ್ಯಾಸಃ ಸಂಪೂರ್ಣಃ ಸಪ್ತಭಿಃ ಸ್ವರೈಃ                                                           || ೫೬ ||

೬೫೬   (ಅ) ಅಸ್ಯಾರ್ಥಃ- ಭಿನ್ನಕೈಶಿಕೋ ಮಧ್ಯಮಗ್ರಾಮಸಂಬಂಧಃ ಕೈಶಕೀಕಾರ್ಮಾ ರವೀಜಾತ್ಯುತ್ಪನ್ನತ್ವಾತ್ | (ಆ) ಗ್ರಹೋ s೦ಶಶ್ಚ ಷಡ್ಜಃ | (ಇ) ಪಂಚಮೋ ನ್ಯಾಸಃ | (ಈ) ನಿಷಾದೋsತ್ರ ಕಾಕಲೀ | (ಉ) ಪೂರ್ಣಶ್ಚಾಯಮ್ | (ಊ) ಶುದ್ಧಕೈಶಿಕವದಯಂ ಯದ್ಯಪಿ ರಾಗಃ ತಥಾಪಿ ಭೇದೋsಸ್ತಿ | (ಋ) ಮಂದ್ರಬಹುಲೋsಯಮ್ | (ೠ) ಯೇನ ಸ್ವಸ್ಥಾನೇನ ಶುದ್ಧಕೈಶಿಕೇ ಸ್ವರಾಲಾಪಃ ಕ್ರಿಯತೇ, ತತ್ ಸ್ವಸ್ಥಾನಂ ವಿಹಾಯ ತೈರೇವ ಸ್ವರೈರಾಲಾಪಃ ಕರ್ತವ್ಯಃ | (ಎ) ಶುದ್ಧಕೈಶಿಕೇ ಹಿ ತಾರಸ್ವರೈರಾಲಾಪಃ ಕರ್ತವ್ಯ ಇತಿ

ಪಾಠವಿಮರ್ಶೆ: ೬೫೪ಇ,ಉ,ಊ ೬೫೬ಊ,ೠ, ಎ

—-

ಕಲಾ(ಪ್ರಮಾಣವಿರುತ್ತದೆ). ವಾರ್ತಿಕದಲ್ಲಿ ಕಲಾ (ಇರುತ್ತದೆ). ಚಿತ್ರದಲ್ಲಿ (ಕಲಾ) (ಇರುತ್ತದೆ). (ಓ) ಸ್ವರ(ಮತ್ತು) ಪದ(ಗಳಿರುವ) ಗೀತದಲ್ಲಿ (ಬಳಸಬೇಕಾದ) ತಾಳವು ಚಚ್ಚತ್ಪುಟ ಇತ್ಯಾದಿ.                                                                                      19

 

[iii. ಶುದ್ಧಬಿನ್ನ]

೬೫೧   (ಅ) (ಈಗ) ಶುದ್ಧಭಿನ್ನದ ಲಕ್ಷಣವನ್ನು (ಗ್ರಂಥಕಾರನು) ಹೇಳುತ್ತಾನೆ –                                               20

೬೫೨   ಬೇರೆ ಜಾತಿಯ(ಸಾಂಕರ್ಯವ)ನ್ನು ಬಿಟ್ಟು, ತನ್ನದೇ ಕುಲದ(=ಜನ್ಮಸ್ಥಾನವಾದ) ಜಾತಿಯಿಂದ ಅಲಂಕೃತವಾಗಿ, ತನ್ನದೇ ಕುಲವನ್ನು (=ಲಕ್ಷಣಗಳನ್ನು) ಸಂಗ್ರಹಿಸಿದರೆ ಅದು ಶುದ್ಧಭಿನ್ನವೆಂಬ ಹೆಸರನ್ನು ಪಡೆಯುತ್ತದೆ.                                         ೫೫

೬೫೩   (ಅ) ಇದರ ಅರ್ಥವು [ಹೀಗಿದೆ] : ಬೇರೆ ಜಾತಿಯ(ಲಕ್ಷಣಗಳ)ನ್ನು ನಿವಾರಿಸಿಕೊಂಡು, ತನ್ನದೇ ಕುಲಜಾತಿಗಳ ಲಕ್ಷಣಗಳಿಂದ, ತನ್ನದೇ ಮೂಲ(=ಜನ್ಮಸ್ಥಾನ)ದ ಲಕ್ಷಣಗಳನ್ನು ಸಂಗ್ರಹಿಸುತ್ತದೆ ಎಂದು (ಅರ್ಥ).                                                     21

[೪. ಭಿನ್ನಕೈಶಿಕ]

೬೫೪   (ಅ) ಶುದ್ಧ(ಕೈಶಿಕ)ದ ಲಕ್ಷಣವು ಪೂರ್ತಿಯಾಗಿ ಭಿನ್ನಕೈಶಿಕದಲ್ಲೂ ಕಂಡುಬರುತ್ತದೆ. (ಆ) ಹಾಗಿದ್ದರೆ (ಅವುಗಳಲ್ಲಿ) ವ್ಯತ್ಯಾಸವೇನು? (ಇ) ವ್ಯತ್ಯಾಸವು ಗೀತಿಯಿಂದಾದುದು. (ಈ) ಶುದ್ಧಕೈಶಿಕವನ್ನು ಶುದ್ಧಗೀತಿಯಲ್ಲಿ ಹಾಡಲಾಗುತ್ತದೆ; ಭಿನ್ನಕೈಶಿಕವನ್ನು ರಾಗವನ್ನಾಗಿ ಮಾಡಲಾಗುವುದಿಲ್ಲ. (ಊ) ಮತ್ತು ಅದರ ಲಕ್ಷಣವೇನೆಂದರೆ –                                                                  22

೬೫೫   ಭಿನ್ನಕೈಶಿಕವು ಶುದ್ಧಕೈಶಿಕದಂತೆಯೇ ರೂಪವುಳ್ಳದ್ದು ಎಂದು ಸ್ವರಪಂಡಿತರು (ಹೇಳುತ್ತಾರೆ). ಷಡ್ಜವು ಅದರ ಅಂಶ. ಪಂಚಮವು ನ್ಯಾಸಃ ಏಳೂ ಸ್ವರಗಳಿಂದ ಅದು ಸಂಪೂರ್ಣವಾಗಿದೆ.                                                                                          ೫೬

೬೫೬   (ಅ) ಇದರ ಅರ್ಥವು [ಹೀಗಿದೆ]- ಭಿನ್ನಕೈಶಿಕವು ಕೈಶಿಕೀ ಮತ್ತು ಕಾರ್ಮಾರವೀ ಜಾತಿಗಳಲ್ಲಿ ಹುಟ್ಟಿರುವುದರಿಂದ ಮಧ್ಯಮಗ್ರಾಮಕ್ಕೆ ಸೇರಿದ್ದು, (ಆ) (ಅದರ) ಗ್ರಹ ಮತ್ತು ಅಂಶವು ಷಡ್ಜ. (ಇ) ಪಂಚಮವು (ಅದರ) ನ್ಯಾಸ. (ಈ) ಇದರಲ್ಲಿ ನಿಷಾದವು ಕಾಕಲೀ. (ಉ) ಇದು (ಸಂ)ಪೂರ್ಣ(ರಾಗ)ವಾಗಿದೆ. (ಊ) ಇದು ಶುದ್ಧಕೈಶಿಕದ ಹಾಗೆಯೇ ಇರುವ ರಾಗವಾದರೂ ವ್ಯತ್ಯಾಸವಿದೆ. (ಋ) ಇದು ಮಂದ್ರ (ಸ್ವರ)ವನ್ನು ಬಹುವಾಗಿ ಉಳ್ಳದ್ದು. (ೠ) ಯಾವ ಸ್ವಸ್ಥಾನದಲ್ಲಿ ಶುದ್ಧಕೈಶಿಕದ ಸ್ವರ(ಗಳ) ಅಲಾಪವನ್ನು ಮಾಡಲಾಗುತ್ತದೋ, ಆ ಸ್ವಸ್ಥಾನವನ್ನು ಬಿಟ್ಟು ಅದೇ ಸ್ವರಗಳಿಂದ ಆಲಾಪವನ್ನು ಮಾಡಬೇಕು. (ಎ) ಶುದ್ಧಕೈಶಿಕವನ್ನು ತಾರಸ್ವರಗಳಿಂದ ಆಲಾಪಿಸಬೇಕು. ಎಂಬುದರಿಂದಾಗಿ ಬೇರೆ ರೂಪದಿಂದ ಇದು

____

ರೂಪಾನ್ಯತ್ವೇನಾಯಂ ಭಿದ್ಯತೇ | (ಏ) ದಾನವೀರೇ ಚಾಸ್ಯ ವಿನಿಯೋಗಃ | (ಐ) ವೀರರೌದ್ರಾದಿಕೋ ರಸಃ | (ಒ) ಷಡ್ಜಾದಿಮೂರ್ಛನಾ | (ಓ) ವರ್ಣಃ ಸಂಚಾರೀ | (ಔ) ಪ್ರಸನ್ನಾದಿರಲಃಕಾರಃ | (ಅಂ) ದಕ್ಷಿಣೇ ಕಲಾ, ವಾರ್ತಿಕೇ ಕಲಾ, ಚಿತ್ರೇ ಕಲಾ | (ಅಃ) ಸ್ವರಪದಗೀತೇ ಚಚ್ಚತ್ಪುಟಾದಿತಾಲಃ |     23

 

[iv ಶ್ರುತಿಭಿನ್ನಃ]

೬೫೭   (ಅ) ಸಾಂಪ್ರತಂ ಶ್ರುತಿಭಿನ್ನಸ್ಯ ಲಕ್ಷಣಮಾಹ –                                                                                24

೬೫೮   ಚತುಃಶ್ರುತಿಸ್ವರೋ ಯತ್ರ ಭಿನ್ನೋ ದ್ವಿಶ್ರುತಿಕೇನ ತು |
ಗಾಂಧಾರೋ ದ್ವಿಶ್ರುತಿಶ್ಚೈವ ಶ್ರುತಿಭಿನ್ನಃ ಸ ಉಚ್ಯತೇ                                                             || ೫೭ ||

೬೫೯ (ಅ) [ಅಸ್ಯಾರ್ಥಃ-] ಚತುಃಶ್ರುತೇಃ ಪಂಚಮಸ್ಯ ಯದಾ ಶ್ರುತಿದ್ವಯಂ ಗೃಹ್ಣಾತಿ ನಿಷಾದಃ ತದಾಸೌ ಶ್ರುತಿಭಿನ್ನೋ sಭಿಧೀಯತೇ | (ಅ) ನೆನು ಮಧ್ಯಮಗ್ರಾಮೇ ಪಂಚಮಸ್ಯ ತ್ರಿಶ್ರುತಿಕತ್ವಾತ್ ಕಥಂ ಶ್ರುತಿದ್ವಯಂ ಗೃಹ್ಣಾತಿ ನಿಷಾದಃ? (ಇ) ಉಚ್ಯತೇ | (ಈ) ಭೂತಪೂರ್ವನ್ಯಾಯೇನ ಚತುಃಶ್ರುತಿರುಚ್ಯತೇ | (ಉ) ಯಥಾ ಭಿನ್ನಕೈಶಿಕರಾಗೇ ತ್ರಿಶ್ರುತಿಪಂಚಮಸ್ಯ ಚ[ತುಃ]ಶ್ರುತಿತ್ವಮಾಶ್ರಿತ್ಯ ಲೋಪಃ ಕೃತಃ ಷಡ್ಜಗ್ರಾಮೇ, ಏವಮತ್ರಾಪಿ ಭವಿಷ್ಯತೀತಿ ನ ದೋಷಃ | (ಊ) ಲಕ್ಷಣಂ ಚಾಸ್ಯ ತದ್ಯಥಾ –                                                                       25

…………………………………..

[೫. ಭಿನ್ನತಾನಃ]

೬೬೦   ತಾನಸ್ತು ಮಧ್ಯಮನ್ಯಾಸಃ ಪಂಚಮಾಂಶೋ sಲ್ಪಸಪ್ತಮಃ |
ಮಧ್ಯಮಾಪಂಚಮೀಜಾತ್ಯೋಋೃಷಭೇಣ ತು ದುರ್ಬಲಃ  || ೫೮ ||

೬೬೧ (ಅ) ಅಸ್ಯಾರ್ಥಃ- ಭಿನ್ನತಾನೋ ಮಧ್ಯಮಗ್ರಾಮಸಂಭಂಧಃ ಮಧ್ಯಮಾಪಂಚಮೀ ಚಾತ್ಯತ್ಪನ್ನತ್ವಾತ್ | (ಅ) ಪಂಚಮೋ ಗ್ರಹೋs೦ಶಶ್ಚ | (ಇ) ಮಧ್ಯಮೋ ನ್ಯಾಸಃ | (ಈ) ಮಧ್ಯಮನಿಷಾದಯೋರಲ್ಪತ್ವಮ್ (?) | ನಿಷಾದೋ sತ್ರ ಕಾಕಲೀ |

ಪಾಠವಿಮರ್ಶೆ: ೬೫೭ಅ ೬೫೮ಅ-ಈ, ಇ ೬೫೯ಅ ೬೬೦ಅ-ಈ ೬೬೧ಅ

—-

ಭಿನ್ನವಾಗಿದೆ. (ಏ) ದಾನವೀರ(ನ ಪಾತ್ರ)ದಲ್ಲಿ ಇದನ್ನು ವಿನಿಯೋಗಿಸಬೇಕು. (ಐ) (ಇದರಲ್ಲಿ ಪ್ರತೀತಿಗೊಳ್ಳಬೇಕಾದುದು) ವೀರ, ರೌದ್ರ ಇತ್ಯಾದಿ ರಸ(ಗಳು). (ಒ) (ಇದರ) ಮೂರ್ಛನೆಯು ಷಡ್ಜದಿಂದ ಮೊದಲಾಗುತ್ತದೆ. (ಓ) (ಇದರಲ್ಲಿ ಬಳಸಬೇಕಾದ) ವರ್ಣವು ಸಂಚಾರೀ. (ಔ) (ಇದರಲ್ಲಿ ಬಳಸಬೇಕಾದ) ಅಲಂಕಾರವು ಪ್ರಸನ್ನಾದಿ. (ಅಂ) (ಇದರ ತಾಳದ) ದಕ್ಷಿಣ (ಮಾರ್ಗ)ದಲ್ಲಿ ಕಲಾ (ಪ್ರಮಾಣವಿರುತ್ತದೆ), ವಾರ್ತಿಕದಲ್ಲಿ ಕಲಾ, (ಇರುತ್ತದೆ) ಚಿತ್ರದಲ್ಲಿ ಕಲಾ (ಇರುತ್ತದೆ) | (ಅಃ) ಸ್ವರ(ಗಳೂ) ಪದ(ಗಳೂ ಇರುವ) ಗೀತದಲ್ಲಿ (ಬಳಸಬೇಕಾದ) ತಾಳವು ಚಚ್ಚತ್ಪುಟ ಇತ್ಯಾದಿ.          23

 

[iv ಶ್ರುತಿಭಿನ್ನ]

೬೫೭ (ಅ) ಈಗ ಶ್ರುತಿಭಿನ್ನದ ಲಕ್ಷಣವನ್ನು (ಗ್ರಂಥಕಾರನು) ಹೇಳುತ್ತಾನೆ –                                                  24

೬೫೮ ನಾಲ್ಕು ಶ್ರುತಿಗಳನ್ನುಳ್ಳ ಸ್ವರವು ಎರಡು ಶ್ರುತಿಗಳನ್ನುಳ್ಳ ಸ್ವರದಿಂದ ವಿಕೃತಗೊಂಡು ಗಾಂಧಾರವು ದ್ವಿಶ್ರುತಿಕವಾಗಿ (ಭಿನ್ನವಾಗಿಯೇ) ಉಳಿದರೆ ಅದನ್ನು ಶ್ರುತಿಭಿನ್ನವೆಂದು ಹೇಳಲಾಗುತ್ತದೆ.                                                                              ೫೭

೬೫೯   (ಅ) [ಇದರ ಅರ್ಥವು ಹೀಗಿದೆ:] ನಾಲ್ಕು ಶ್ರುತಿಗಳನ್ನುಳ್ಳ ಪಂಚಮದಿಂದ ನಿಷಾದವು ಎರಡು ಶ್ರುತಿಗಳನ್ನು ತೆಗೆದುಕೊಂಡರೆ ಆಗ ಶ್ರುತಿಭಿನ್ನವೆಂದು ಹೆಸರಿಸಲಾಗುತ್ತದೆ. (ಆ) [ಆಕ್ಷೇಪ:] ಮಧ್ಯಮಗ್ರಾಮದ ಪಂಚಮದಲ್ಲಿ ಮೂರೇ ಶ್ರುತಿಗಳಿರುವಾಗ ನಿಷಾದವು (ಅದರ) ಎರಡು ಶ್ರುತಿಗಳನ್ನು ಹೇಗೆ ತೆಗೆದುಕೊಳ್ಳಬಲ್ಲದು? (ಇ) [ಸಮಾಧಾನವನ್ನು] ಹೇಳಲಾಗುವುದು. (ಈ) (ಪಂಚಮವು ಷಡ್ಜಗ್ರಾಮದಲ್ಲಿ) ಹಿಂದೆ ಇದ್ದುದರ ಯುಕ್ತಿಯಿಂದ ನಾಲ್ಕು ಶ್ರುತಿಗಳನ್ನುಳ್ಳದ್ದು ಎಂದು ಹೇಳಿತು. (ಎ) ಭಿನ್ನಕೈಶಿಕರಾಗದಲ್ಲಿ ಮೂರು ಶ್ರುತಿಗಳನ್ನುಳ್ಳ ಪಂಚಮವನ್ನು (ಅದು ನಾಲ್ಕು ಶ್ರುತಿಗಳದ್ದಾಗಿರುವ) ಷಡ್ಜಗ್ರಾಮದಲ್ಲಿ ಲೋಪಮಾಡುವ ಹಾಗೇ ಇಲ್ಲೂ ಆಗುತ್ತದೆ. (ಆದುದರಿಂದ) ಅದು ದೋಷವಲ್ಲ. (ಊ) ಅದರ ಲಕ್ಷಣವು ಹೇಗೆಂದರೆ.-                                                                                                              25

……………………………………………………………..

[೫. ಭಿನ್ನತಾನಃ]

೬೬೦   [ಭಿನ್ನ]ತಾನವು ಮಧ್ಯಮವನ್ನು ನ್ಯಾಸವಾಗಿಯೂ ಪಂಚಮವನ್ನು ಅಂಶವನ್ನಾಗಿಯೂ ಏಳನೆಯದ(= ನಿಷಾದ ಸ್ವರವ)ನ್ನು ಅಲ್ಪವನ್ನಾಗಿಯೂ, ರಿಷಭವನ್ನು ದುರ್ಬಲವಾಗಿಯೂ ಹೊಂದಿದ್ದು ಮಧ್ಯಮಾ ಮತ್ತು ಪಂಚಮಾಜಾತಿಗಳಲ್ಲಿ ಹುಟ್ಟಿದೆ.            ೫೮

೬೬೧   (ಅ) ಇದರ ಅರ್ಥವು [ಹೀಗಿದೆ] : ಭಿನ್ನತಾನವು ಮಧ್ಯಮಾ ಮತ್ತು ಪಂಚಮೀ ಜಾತಿಗಳಲ್ಲಿ ಹುಟ್ಟಿರುವುದರಿಂದ ಮಧ್ಯಮಗ್ರಾಮಕ್ಕೆ ಸೇರಿದೆ. (ಆ) ಪಂಚಮವು (ಅದರ) ಗ್ರಹ ಮತ್ತು ಅಂಶ. (ಇ) ಮಧ್ಯಮವು (ಅದರ) ನ್ಯಾಸ. (ಈ) (ಅದರ) ಮಧ್ಯಮನಿಷಾದಗಳಲ್ಲಿ ಅಲ್ಪತ್ವವಿದೆ. (?). (ಉ) ಇದರಲ್ಲಿ

____

(ಊ) ಪೂರ್ಣಶ್ಚಾಯಮ್ | (ಋ) ಪ್ರೌಢಕರುಣೇ sಸ್ಯ ಪ್ರಯೋಗಃ | (ೠ) ಪಂಚಮಾದಿಮೂರ್ಛನಾ | (ಎ) ಸಂಚಾರೀ ವರ್ಣಃ | (ಏ) ಪ್ರಸನ್ನಾದಿರಲಂಕಾರಃ | (ಐ) ದಕ್ಷಿಣೇ ಕಲಾ, ವಾರ್ತಿಕೇ ಕಲಾ, ಚಿತ್ರೇ ಕಲಾ | (ಒ) ಸ್ವರಪದಗೀತೇ ಚಚ್ಚತ್ಪುಟಾದಿ ತಾಲಃ |    26

[ಭಿನ್ನರಾಗಾಣಾಂ ಗ್ರಾಮವಿಭಾಗಃ]

೬೬೨   (ಅ) ಭಿನ್ನಾನಾಂ ಗ್ರಾಮವಿಭಾಗಸ್ತು ಕಾಶ್ಯಪೇನೋಕ್ತಃ | (ಆ) ತಥಾ ಚ –                                                27

೬೬೩   “ಭಿನ್ನಷಡ್ಜಸ್ತು ಷಡ್ಜೇ ಸ್ಯಾದ್ ಭಿನ್ನಕೈಶಿಕಮಧ್ಯಮಃ |
ಪಂಚಮಃ ಕೈಶಿಕಸ್ತಾನೋ ಮಧ್ಯಮಗ್ರಾಮಸಂಶ್ರಿತಃ”                                                                 || ೫೯ ||

[ಗ.ಗೌಡರಾಗಾಃ]

೬೬೪   ಇತಿ ಭಿನ್ನಾಃ ಸಮಾಖ್ಯಾತಾ ಗೌಡಕಾಂ ಶೃಣು ಸಾಂಪ್ರತಮ್                                                        || ೬೦ ||

೬೬೫   (ಅ) ನನು ಗೌಡಃ ಕಥಮ್? (ಆ) ಉಚ್ಯತೇ, ಗೌಡಗೀತಿಸಂಬಂಧತ್ವಾತ್‌ | (ಇ) ಕಿಂ ಲಕ್ಷಣಮ್? (ಈ) ಉಚ್ಯತೇ | (ಉ) ತದ್ಯಥಾ –          28

೬೬೬   ಓಹಾಟೀ ಮಂದ್ರಚೋಪಾತ್ತಾ ಪ್ರಯೋಗೇ ಧ್ವನಿಕಂಪಿತೈಃ |
ಅವಿಶ್ರಾಮೇಣ ತ್ರಿಸ್ಥಾನೇ ಗೌಡೀಗೀತಿರುದಾಹೃತಾ                                                                  || ೬೧ ||

[೧. ಗೌಡಪಂಚಮಃ]

೬೬೭   (ಅ) ಗೌಡಪಂಚಮಸ್ಯ ಲಕ್ಷಣಮ್ –                                                                                             29

೬೬೮   ಗೌಡಪಂಚಮನಿಷ್ಪತ್ತೌ ಧೈವತೀಷಡ್ಜಮಧ್ಯಮೇ |
ಧೈವತಾಂಶೋ ಮಧ್ಯಮಾಂತೋ ರಹಿತಃ ಪಂಚಮೇನ ತು                                                         || ೬೨ ||

೬೬೯   (ಅ) ಅಸ್ಯಾರ್ಥಃ – ಗೌಡಪಂಚಮಃ ಷಡ್ಜಗ್ರಾಮಸಂಬಂಧಃ, ಧೈವತೀಷಡ್ಜಮಧ್ಯಮಾ ಜಾತ್ಯೋಃ ಸಮುತ್ಪನ್ನತಾತ್ | (ಆ) ದೈವತೋ s೦ಶೋ ಗ್ರಹಶ್ಚ | (ಇ) ಮಧ್ಯಮೋ ನ್ಯಾಸಃ |

ಪಾಠವಿಮರ್ಶೆ : ೬೬೩ಇ ೬೬೬ಅಆ,ಈ ೬೪೮ಇಈ ೬೬೯ಆ,ಋ,ಒ

—-

ನಿಷಾದವು ಕಾಕಲೀ. (ಊ) ಇದು (ಸ್ವರಗಳಿಂದ ಸಂ)ಪೂರ್ಣವಾಗಿದೆ. (ಋ) ಇದರ ಪ್ರಯೋಗವು ಪ್ರೌಢಕರುಣ(ರಸದಲ್ಲಾಗಬೇಕುಃ), (ೠ) (ಇದರ) ಮೂರ್ಛನೆಯ ಪಂಚಮದಿಂದ ಮೊದಲಾಗುತ್ತದೆ. (ಎ) ಸಂಚಾರೀವರ್ಣ(ವನ್ನು ಬಳಸಬೇಕು). (ಏ) ಪ್ರಸನ್ನಾದಿ ಅಲಂಕಾರ(ವನ್ನೂ ಬಳಸಬೇಕು). (ಐ) (ಇದರ ತಾಳದ) ದಕ್ಷಿಣ(ಮಾರ್ಗ)ದಲ್ಲಿ ಕಲಾ (ಪ್ರಮಾಣವು ಇರುತ್ತದೆ). ವಾರ್ತಿಕದಲ್ಲಿ ಕಲಾ, ಚಿತ್ರದಲ್ಲಿ ಕಲಾ, (ಒ) ಸ್ವರ(ಗಳೂ) ಪದ(ಗಳೂ – ಇರುವ) ಗೀತದಲ್ಲಿ ಚಚ್ಚತ್ಪುಟ ಮೊದಲಾದ ತಾಲವು (ಇರಬೇಕು).                                                             26

[ಭಿನ್ನರಾಗಗಳಲ್ಲಿ ಗ್ರಾಮವಿಭಾಗ]

೬೬೨   (ಅ) ಭಿನ್ನರಾಗಗಳಲ್ಲಿ ಗ್ರಾಮವಿಭಾಗವನ್ನು ಕಾಶ್ಯಪನು ಹೇಳಿದ್ದಾನೆ. (ಆ) ಅದು ಹೀಗಿದೆ:                     27

೬೬೩   “ಭಿನ್ನಷಡ್ಜವು ಷಡ್ಜ(ಗ್ರಾಮ)ದಲ್ಲಿದೆ ; ಭಿನ್ನಕೈಶಿಕಮಧ್ಯಮ(ವೂ ಅಷ್ಟೆ). (ಭಿನ್ನ)ಪಂಚಮ, (ಭಿನ್ನ)ಕೈಶಿಕ ಮತ್ತು (ಭಿನ್ನ)ತಾನಗಳು ಮಧ್ಯಮಗ್ರಾಮಕ್ಕೆ ಸೇರಿವೆ.                                                                                                                ೫೯

[ಗ. ಗೌಡರಾಗಗಳು]

೬೬೪   (ಹೀಗೆ) ಭಿನ್ನ(ರಾಗ)ಗಳನ್ನು ಹೇಳಿಯಾಯಿತು. ಈ ಗೌಡ(ರಾಗಗಳ ಲಕ್ಷಣ)ಗಳನ್ನು ಆಲಿಸು.                       ೬೦

೬೬೫   (ಅ) [ಪ್ರಶ್ನೆ:] ಗೌಡವೆಂಬುದು (ಹೆಸರು) ಹೇಗೆ? (ಆ) (ಉತ್ತರವನ್ನು) ಹೇಳಲಾಗುವುದು: ಗೌಡಗೀತಿಗಳಿಗೆ ಸಂಬಂಧಿಸಿರುವುದರಿಂದ (ಗೌಡವೆಂಬ ಹೆಸರು ಬಂದಿದೆ). (ಇ) ಅದರ ಲಕ್ಷಣವು ಏನು? (ಈ) ಹೇಳಲಾಗುವುದು. (ಉ) ಅದು (=ಲಕ್ಷಣವು) ಹೇಗೆಂದರೆ-  28

೬೬೬   ಮಂದ್ರ(-ಸ್ಥಾಯಿ)ದಲ್ಲಿ ಹುಟ್ಟಿದ ಓಹಾಟಿಯೂ ಆಲಾಪದ<ಪ್ರಯೋಗಗಳ>ಲ್ಲಿ ಧ್ವನಿಯ ನಡುಕಗಳೂ, ಎಡೆಬಿಡದೆ ಮೂರು ಸ್ಥಾಯಿಗಳಲ್ಲಿ (ಸಂಚಾರವೂ) ಇರುವುದು ಗೌಡೀಗೀತಿ ಎಂದು ಹೇಳಿದೆ.                                                         ೬೧

[೧. ಗೌಡಪಂಚಮ]

೬೬೭   (ಅ) ಗೌಡಪಂಚಮದ ಲಕ್ಷಣವು [ಹೀಗಿದೆ]:                                                                                     29

೬೬೮   ಗೌಡಪಂಚಮದ ಹುಟ್ಟಿನಲ್ಲಿ ಧೈವತೀ ಮತ್ತು ಷಡ್ಜಮಧ್ಯಮಾ(ಜಾತಿ)ಗಳು (ಕ್ರಿಯಾಶೀಲವಾಗಿವೆ). ಧೈವತವು (ಅದರ) ಅಂಶ, ಮಧ್ಯಮವು ನ್ಯಾಸ ಮತ್ತು ಪಂಚಮವು ಲೋಪವಾಗಿದೆ.                                                                                             ೬೨

೬೬೯   (ಅ) ಇದರ ಅರ್ಥವು [ಹೀಗಿದೆ]: ಗೌಡಪಂಚಮವು ಧೈವತೀ ಮತ್ತು ಷಡ್ಜಮಧ್ಯಮಾ ಜಾತಿಗಳಲ್ಲಿ ಹುಟ್ಟಿರುವುದರಿಂದ ಷಡ್ಜಗ್ರಾಮಕ್ಕೆ ಸೇರಿದೆ. (ಆ) ಧೈವತವು ಅದರ ಅಂಶ ಮತ್ತು ಗ್ರಹ. (ಇ)

____

(ಈ) ನಿಷಾದಗಾಂಧಾರೌ ಕಾಕಲ್ಯಂತರೌ | (ಉ) ಪಂಚಮರಹಿತೋ sಯಂ ಷಟ್‌ಸ್ವರಃ | (ಊ) ಉದ್ಭಟನಾಟ್ಯೇ ವಿಪ್ರಲಂಭಶೃಂಗಾರೇ ಚಾಸ್ಯ ವಿನಿಯೋಗಃ | (ಋ) ಬೀಭತ್ಸಭಯಾನಕರಸೌ | (ೠ) ದೈವತಾದಿಮೂರ್ಛನಾ | (ಎ) ಆರೋಹೀವರ್ಣಃ | (ಏ) ಪ್ರಸನ್ನಮಧ್ಯೋ sಲಂಕಾರಃ (ಐ) ದಕ್ಷಿಣೇ ಕಲಾ, ವಾರ್ತಿಕೇ ತಲಾ, ಚಿತ್ರೇ ಕಲಾ | (ಒ) ಸ್ವರಪದಗೀತೇ ಚಚ್ಚತ್ಪುಟಾದಿ ತಾಲಃ |                               30

[೨. ಗೌಡಕೈಶಿಕಃ]

೬೭೦   ಉತ್ಪನ್ನಃ ಕೈಶಿಕೀಷಡ್ಜಮಧ್ಯಮಾಜಾತಿತೋ ಮತಃ |
ಷಡ್ಜಾಂಶಃ ಪಂಚಮನ್ಯಾಸಃ ಸಂಪ್ತೋಕ್ತೋ ಗೌಡಕೈಶಿಕಃ                                                          || ೬೩ ||

೬೭೧   (ಅ) ಅಸ್ಯಾರ್ಥಃ – ಗೌಡಕೈಶಿಕೋ ರಾಗೋ ಮಧ್ಯಮಗ್ರಾಮಸಂಬಂಧಃ ಕೈಶಿಕೀಷಡ್ಜ ಮಧ್ಯಮಾಭ್ಯಾಂ ಜಾತಃ | (ಆ) ಷಡ್ಜೋ sಸ್ಯ ಗ್ರಹೋ s೦ಶಶ್ಚ | (ಇ) ಪಂಚಮೋ ನ್ಯಾಸಃ | (ಈ) ನಿಷಾದೋ sತ್ರ ಕಾಕಲೀ | (ಉ) ಪೂರ್ಣಶ್ಚಾಯಮ್ | (ಊ) ತಥಾ ಪ್ರಯೋಗೋ sಸ್ತಿ | (ಋ) ತ್ರಿಶ್ರುತಿಕತ್ವಾತ್ ಪಂಚಮಸ್ಯ, ಚತುಃಶ್ರಿತಿಕತ್ವಾದ್ ಧೈವತಸ್ಯ, ಮಧ್ಯಮಗ್ರಾಮಸಂಬಂಧ ಏವಾಸೌ ರಾಗಃ | (ೠ) ಯದ್ಯಪಿ ಗ್ರಾಮದ್ವಯಜಾತೌ ಜಾತಃ, ತಥಾಪಿ ಮಧ್ಯಮೋ sಸ್ಯ ಗ್ರಾಮಃ, ನ ಷಡ್ಜಃ | (ಎ) ತಥಾ ದರ್ಶನಾತ್ | (ಏ) ಕರುಣೇ ಚಾಸ್ಯ ವಿನಿಯೋಗಃ | (ಐ) ವೀರಾದಿಕೋ ರಸಃ | (ಒ) ಷಡ್ಜಾದಿಮೂರ್ಛನಾ | (ಓ) ಆರೋಹೀ ವರ್ಣಃ | (ಔ) ಪ್ರಸನ್ನಾದಿರಲಂಕಾರಃ | (ಅಂ) ದಕ್ಷಿಣೇ ಕಲಾ, ವಾರ್ತಿಕೇ ಕಲಾ, ಚಿತ್ರೇ ಕಲಾ| (ಅಃ) ಸ್ವರಪದಗೀತೇ ಚಚ್ಚತ್ಪುಟಾದಿ ತಾಲಃ |                                                                                               31

[೩. ಗೌಡಕೈಶಿಕಮಧ್ಯಮಃ]

೬೭೨   ಷಡ್ಜಾಂಶೋ ಮಧ್ಯಮನ್ಯಾಸಃ ಷಡ್ಜಮಧ್ಯಮಯಾ ಕೃತಃ |
ಪರಿಪೂರ್ಣಸ್ವರಃ ಪ್ರೋಕ್ತೋ ಗೌಡಕೈಶಿಕಮಧ್ಯಮಃ                                                                 || ೬೪ ||

ಪಾಠವಿಮರ್ಶೆ : ೬೭೦ಇ, ಅ-ಈ ೬೭೧ಅ, ಊ,ೠ ೬೭೨ಆ, ಅ-ಈ

—-

ಮಧ್ಯಮವು (ಅದರ) ನ್ಯಾಸ. (ಈ) (ಅದರ) ನಿಷಾದಗಾಂಧಾರಗಳು (ಕ್ರಮವಾಗಿ) ಕಾಕಲೀ, ಅಂತರಗಳು. (ಉ) ಪಂಚಮವನ್ನು ಬಿಟ್ಟಿರುವುದರಿಂದ ಇದು ಷಾಡವ. (ಊ) ಉದ್ಭಟನಾಟ್ಯದ (ಸಂದರ್ಭದ)ಲ್ಲಿ ವಿಪ್ರಲಂಭಶೃಂಗಾರದಲ್ಲಿ ಇದನ್ನು ವಿನಿಯೋಗಿಸಬೇಕು. (ಋ) (ಇದರಲ್ಲಿ ಪ್ರತೀತವಾಗಬೇಕಾದ) ರಸಗಳು ಬೀಭತ್ಸ ಮತ್ತು ಭಯಾನಕಗಳು. (ೠ) (ಇದರ) ಮೂರ್ಛನೆಯು ದೈವತದಿಂದ ಮೊದಲಾಗುತ್ತದೆ (ಎ) ಇದರಲ್ಲಿ ಬಳಸಬೇಕಾದುದು) ಆರೋಹೀ ವರ್ಣ. (ಏ) ಪ್ರಸನ್ನಮಧ್ಯ(ವೆಂಬ) ಅಲಂಕಾರ(ವನ್ನು ಇಲ್ಲಿ ಬಳಸಬೇಕು). (ಐ) (ಇದರ ತಾಳದ) ದಕ್ಷಿಣ(ಮಾರ್ಗ)ದಲ್ಲಿ ಕಲಾ (ಪ್ರಮಾಣವಿದೆ), ವಾರ್ತಿಕದಲ್ಲಿ ಕಲಾ (ಇದೆ), ಚಿತ್ರದಲ್ಲಿ ಕಲಾ ಇದೆ. (ಒ) ಸ್ವರ(ಗಳೂ)ಪದ(ಗಳೂ ಇರುವ) ಗೀತದಲ್ಲಿ ಚಚ್ಚತ್ಪುಟ ಇತ್ಯಾದಿ ತಾಲ(ವನ್ನು ಪ್ರಯೋಗಿಸಬೇಕು).                                                                            30

[೨. ಗೌಡಕೈಶಿಕ]

೬೭೦   ಗೌಡಕೈಶಿಕವು ಕೈಶಿಕೀ ಮತ್ತು ಷಡ್ಜಮಧ್ಯಮಾಜಾತಿಗಳಿಂದ ಹುಟ್ಟಿದೆಯೆಂದು ಸಮ್ಮತಿಸಿದೆ ; (ಅದರ) ಅಂಶವು ಷಡ್ಜ ಮತ್ತು ನ್ಯಾಸವು ಪಂಚಮ ಎಂದು ಹೇಳಿದೆ.                                                                                                                   ೬೩

೬೭೧   (ಅ) ಇದರ ಅರ್ಥವು [ಹೀಗಿದೆ] : ಗೌಡಕಯಶಿಕರಾಗವು ಕೈಶಿಕೀ ಮತ್ತು ಷಡ್ಜಮಧ್ಯಮಾ (ಜಾತಿ)ಗಳಲ್ಲಿ ಹುಟ್ಟಿರುವುದರಿಂದ ಮಧ್ಯಮಗ್ರಾಮಕ್ಕೆ ಸೇರಿದ್ದು. (ಆ) ಷಡ್ಜವು ಅದರ ಗ್ರಹ ಮತ್ತು ಅಂಶ. (ಇ) ಪಂಚಮವು (ಇದರ) ನ್ಯಾಸ. (ಈ) (ಇದರಲ್ಲಿ) ನಿಷಾದವು ಕಾಕಲೀ. (ಉ) ಇದು (ಸಂ)ಪೂರ್ಣ(ರಾಗ)ವಾಗಿದೆ. (ಊ) ಈ ರೀತಿಯಲ್ಲಿ ಅದರ ಪ್ರಯೋಗವಿದೆ. (ಋ) (ಈ ರಾಗದ) ಪಂಚಮದಲ್ಲಿ ಮೂರು ಶ್ರುತಿಗಳೂ ಧೈವತದಲ್ಲಿ ನಾಲ್ಕು ಶ್ರುತಿಗಳೂ ಇರುವುದರಿಂದ (ಅದು) ಮಧ್ಯಮ ಗ್ರಾಮಕ್ಕೆ ಸೇರಿದೆ. (ೠ) ಎರಡೂ ಗ್ರಾಮಗಳಿಗೆ ಸೇರಿದ ಜಾತಿಗಳಲ್ಲಿ ಇದು ಹುಟ್ಟಿದರೂ ಇದರ ಗ್ರಾಮವು ಮಧ್ಯಮ(ವೇ). ಷಡ್ಜವಲ್ಲ. (ಎ) (ಏಕೆಂದರೆ ಪ್ರಯೋಗದಲ್ಲಿ) ಹಾಗೆ(ಯೇ) ಕಂಡಿದೆ. (ಏ) ಕರುಣದಲ್ಲಿ ಇದನ್ನು ವಿನಿಯೋಗಿಸಬೇಕು. (ಐ) (ಇದನ್ನು) ವೀರವೇ ಮೊದಲಾದ ರಸ(ಗಳಲ್ಲಿ ವಿನಿಯೋಗಿಸಬೇಕು). (ಒ) ಇದರ ಮೂರ್ಛನೆಯು ಷಡ್ಜದಿಂದ ಮೊದಲಾಗುತ್ತದೆ. (ಓ) ಇದರಲ್ಲಿ ಪ್ರಯೋಗಿಸಬೇಕಾದುದು) ಆರೋಹಿಃವರ್ಣ. (ಔ) (ಮತ್ತು) ಪ್ರಸನ್ನಾದಿ ಅಲಂಕಾರ. (ಅಂ) (ಇದರ ತಾಳದ) ದಕ್ಷಿಣ(ಮಾರ್ಗ)ದಲ್ಲಿ ಕಲಾ (ಪ್ರಮಾಣವಿದೆ), ವಾರ್ತಿಕದಲ್ಲಿ ಕಲಾ, ಚಿತ್ರದಲ್ಲಿ ಕಲಾ (ಇದೆ). (ಅಃ) ಸ್ವರ(ಗಳೂ) ಪದ (ಗಳೂ ಇರುವ) ಗೀತದಲ್ಲಿ ಚಚ್ಚತ್ಪುಟ ಇತ್ಯಾದಿ ತಾಳ(ವನ್ನು ಪ್ರಯೋಗಿಸಬೇಕು).                                                                            31

[೩. ಗೌಡಕೈಶಿಕಮಧ್ಯಮ]

೬೭೨   ಗೌಡಕೈಶಿಕಮಧ್ಯಮವು ಷಡ್ಜಮಧ್ಯಾ(ಜಾತಿ)ದಿಂದ ಹುಟ್ಟಿದೆ <ಕೃತಂ> ; ಷಡ್ಜವು (ಅದರ) ಅಂಶ, ಮಧ್ಯಮವು ನ್ಯಾಸ; (ಅದು) ಸಂಪೂರ್ಣಸ್ವರ(ಗಳನ್ನುಳ್ಳದ್ದು) ಎಂದು ಹೇಳಲಾಗಿದೆ.                                                                            ೬೪

____

೬೭೩   (ಅ) ಅಸ್ಯಾರ್ಥ:- ಗೌಡಕೈಶಿಕಮಧ್ಯಮಃ ಷಡ್ಜಗ್ರಾಮಸಂಬಂಧಃ ಷಡ್ಜಮಧ್ಯಮಾ ಜಾತೇರ್ಜಾತತ್ವಾತ್ | (ಆ) ಷಡ್ಯೋ sಸ್ಯ ಗ್ರಹೋ s೦ಶಶ್ಚ | (ಇ) ಮಧ್ಯಮೋ ನ್ಯಾಸಃ | (ಈ) ನಿಷಾದೋ sತ್ರ ಕಾಕಲೀ | (ಉ) ಪೂರ್ಣಶ್ಚಾಯಮ್ | (ಊ) ಭಯಾನಕೇ ಚಾಸ್ಯ ವಿನಿಯೋಗಃ | (ಋ) ವೀರಾದಿಕೋ ರಸಃ | (ೠ) ಷಡ್ಜಾದಿಮೂರ್ಛನಾ | (ಎ) ಆರೋಹೀ ವರ್ಣಃ | (ಏ) ಪ್ರಸನ್ನಮಧ್ಯೋ sಲಂಕಾರಃ | (ಐ) ದಕ್ಷಿಣೇ ಕಲಾ, ವಾರ್ತಿಕೇ ಕಲಾ, ಚಿತ್ರೇ ಕಲಾ | (ಒ) ಸ್ವರಪದಗೀತೇ ಚಚ್ಚತ್ಪುಟಾದಿ ತಾಲಃ |                                                               32

[ಗೌಡರಾಗಾಣಾಂ ಗ್ರಾಮವಿಭಾಗಃ]

೬೭೪   (ಅ) ಇದಾನೀಂ ಗೌಡಾನಾಂ ಗ್ರಾಮವಿಭಾಗಮಾಹ –                                                                         33

೬೭೫   ಗೌಡಪಂಚಮಕಃ ಷಡ್ಜೇ ಗೌಡಕೈಶಿಕಮಧ್ಯಮಃ |
ಗೌಡಕೈಶಿಕರಾಗಸ್ತು ಮಧ್ಯಮಗ್ರಾಮಸಂಶಯಃ |
ತ್ರಯೋ ಗೌಡಾಃ ಸಮಾಖ್ಯಾತಾ ರಾಗಾನ್ ವಕ್ಷ್ಯಾಮ್ಯತಃ ಪರಮ್                                                 || ೬೫ ||

[ಘ. ರಾಗಗೀತಿಗತಾ ವೇಸರಾಗೀತಿಗತಾ ವಾ ರಾಗಾಃ]

೬೭೬   (ಅ) ನನು ವೇಸರಾಣಾಂ ಕಥಂ ರಾಗಶಬ್ದಃ ಪ್ರವರ್ತತೇ? (ಆ) ಆಪ್ತೋಪದೇಶಾತ್ |
(ಇ) ತಥಾ ಚಾಹ ಕಶ್ಯಪಃ-                                                                                          34   

೬೭೭   “ಚತುರ್ಣಾಮಪಿ ವರ್ಣಾನಾಂ ಯೋ ರಾಗಃ ಶೋಭನೋ ಭವೇತ್ |
ಸ ಸರ್ವೋ ದೃಶ್ಯತೇ ಯೇಷು ತೇನ ರಾಗಾ ಇತಿ ಸ್ಪೃತಾಃ”                                                                    || ೬೬ ||

೬೭೮   (ಅ) ದುರ್ಗಾಶಕ್ತಿಮತೇ ರಾಗಾ ಏವ ವೇಸರಾ ಗಣ್ಯಂತೇ | (ಆ) ತಥಾ ಚಾಹ ದುರ್ಗಾಶಕ್ತಿಃ-                35

೬೭೯   ಸ್ವರಾಃ ಸರಂತಿ ಯದ್ ವೇಗಾತ್ ತಸ್ಮಾದ್ ವೇಸರಕಾಃ ಸ್ಮೃತಾಃ                                                  || ೬೭ ||

ಪಾಠವಿಮರ್ಶೆ : ೬೭೩ಅ ೬೭೫ಆ ೬೭೬ಆ ೬೭೭ಆ ೬೭೭ಅ-ಈ ೬೭೯ಆಆ

—-

೬೭೩   (ಅ) ಇದರ ಅರ್ಥವು [ಹೀಗಿದೆ]: ಗೌಡಕೈಶಿಕಮಧ್ಯಮವು ಷಡ್ಜಮಧ್ಯಮಾ ಜಾತಿಯಲ್ಲಿ ಹುಟ್ಟಿರುವುದರಿಂದ ಷಡ್ಜಗ್ರಾಮಕ್ಕೆ ಸೇರಿದ್ದು, (ಆ) ಷಡ್ಜವು ಇದರ ಅಂಶ ಮತ್ತು ಗ್ರಹ. (ಇ) ಮಧ್ಯಮವು (ಇದರ) ನ್ಯಾಸ. (ಈ) ಇದರಲ್ಲಿ ನಿಷಾದವು ಕಾಕಲೀ. (ಉ) ವೀರ ಇತ್ಯಾದಿ ರಸ(ಗಳು ಇದರಲ್ಲಿ ಪ್ರತೀತವಾಗಬೇಕು.) (ೠ) ಇದರ ಮೂರ್ಛನೆಯು ಷಡ್ಜದಿಂದ ಮೊದಲಾಗುತ್ತದೆ. (ಎ) (ಇದರಲ್ಲಿ) ಆರೋಹಿವರ್ಣ(ವನ್ನು ಬಳಸಬೇಕು). (ಏ) (ಇದರಲ್ಲಿ) ಪ್ರಸನ್ನಮಧ್ಯ(ವೆಂಬ) ಅಲಂಕಾರ(ವಿರಬೇಕು). (ಐ) (ಇದರ ತಾಳದ) ದಕ್ಷಿಣ (ಮಾರ್ಗ)ದಲ್ಲಿ ಕಲಾ (ಪ್ರಮಾಣವು ಇದೆ), ವಾರ್ತಿಕದಲ್ಲಿ ಕಲಾ (ಇದೆ). ಚಿತ್ರ(ದಲ್ಲಿ) ಕಲಾ(ಇದೆ). (ಒ)ಸ್ವರ(ಗಳೂ)ಪದ(ಗಳೂ ಇರುವ) ಗೀತದಲ್ಲಿ ಚಚ್ಚತ್ಪುಟ ಮುಂತಾದ ತಾಳ(ವನ್ನು ಪ್ರಯೋಗಿಸಬೇಖು).                                                                                                                         32

[ಗೌಡರಾಗಗಳನ್ನು ಗ್ರಾಮಗಳಲ್ಲಿ ವಿಭಾಗಿಸುವುದು]

೬೭೪   (ಅ) ಈಗ ಗೌಡ(ರಾಗ)ಗಳ(ನ್ನು) ಗ್ರಾಮ(ಗಳಲ್ಲಿ)ವಿಭಾಗವನ್ನು(-ಗ ಮಾಡುವುದನ್ನು) (ಗ್ರಂಥಕರ್ತನು) ಹೇಳುತ್ತಾನೆ.         33

೬೭೫   ಗೌಡಪಂಚಮವು ಷಡ್ಜ(ಗ್ರಾಮ)ಕ್ಕೆ ಸೇರಿದ್ದು, ಗೌಡಕೈಶಿಕಮಧ್ಯಮವೂ (ಅಷ್ಟೆ). ಗೌಡಕೈಶಿಕರಾಗವಾದರೋ ಮಧ್ಯಮಗ್ರಾಮದಲ್ಲಿ ನೆಲೆಸಿದೆ. (ಹೀಗೆ)ಮೂರು ಗೌಡ(ರಾಗ)ಗಳನ್ನು ಹೇಳಿದ್ದಾಯಿತು. ಇನ್ನು ಮುಂದೆ ರಾಗ(ಎಂಬ ಹೆಸರಿನ ರಾಗಭೇದ)ಗಳನ್ನು ಹೇಳುವೇನು.        ೬೫

[ಘ. ರಾಗಗೀತಿಗಳಲ್ಲಿರುವ ಅಥವಾ ವೇಸರಾಗೀತಿಗಳಲ್ಲಿರುವ ರಾಗಗಳು]

೬೭೬   (ಅ) (ಪ್ರಶ್ನೆ:) ವೇಸರ (ರಾಗ)ಗಳಿಗೆ ರಾಗ ಎಂಬ ಮಾತು ಹೇಗೆ ಸಲ್ಲುತ್ತದೆ? (ಆ) ಆಪ್ತ(ರಾದ ಹಿರಿಯ)ರು ಹೇಳಿರುವ ಮಾತಿನಿಂದ (ಇದು ಸಿದ್ಧವಾಗುತ್ತದೆ). (ಇ) (ಈ ವಿಷಯದಲ್ಲಿ) ಕಶ್ಯಪನು ಹೀಗೆ ಹೇಳುತ್ತಾನೆ.                                                    34

೬೭೭   ನಾಲ್ಕು ವರ್ಣಗಳಿಂದ ಯಾವ ರಾಗವು (ರಂಜಿಸಿ) ಶೋಭಿಸುತ್ತದೋ, (ಈ ಶೋಭನವು) ಎಲ್ಲವೂ ಯಾವ ರಾಗಗಳಲ್ಲಿ ಕಂಡುಬರುತ್ತದೋ ಅವುಗಳನ್ನು ಈ ಕಾರಣದಿಂದ ರಾಗಗಳೆಂದು ಸ್ಮರಿಸಲಾಗಿದೆ.                                                                       ೬೬

೬೭೮   (ಅ) ದುರ್ಗಾಶಕ್ತಿಯ ಮತದಲ್ಲಿ ರಾಗಗಳನ್ನೇ ವೇಸರಗಳೆಂದು ಪರಿಗಣಿಸಲಾಗಿದೆ. (ಆ) (ಈ ವಿಷಯದಲ್ಲಿ) ದುರ್ಗಾಶಕ್ತಿಯು ಹೀಗೆ ಹೇಳುತ್ತಾನೆ:                                                                                                                                  35

೬೭೯   ಸ್ವರಗಳು ವೇಗವಾಗಿ ಸರಿಯುವುದರಿಂದ ವೇಸರಗಳೆಂದು ಸ್ಮರಿಸಲಾಗಿದೆ.                                              ೬೭

____

೬೮೦   (ಅ) ದುರ್ಗಾಶಕ್ತಿಮತೇ ವೇಸರಷಾಡವ ಏವ ಮುಖ್ಯಃ, ಷಾಡವತ್ವೇನ ಕ್ರಮಾಯತತ್ವಾತ್ |
(ಆ) ಕಶ್ಯಪಮತೇ ತು ಟಕ್ಕರಾಗ ಏವ ಮುಖ್ಯಸಿ ಲಕ್ಷ್ಮೀಪ್ರೀತಿಕರತ್ವಾತ್ | (ಇ) ತದ್ಯಥಾ-                        36

[೧. ಟಕ್ಕರಾಗಃ]

೬೮೧   ಷಡ್ಜಾಂಶನ್ಯಾಸಸಂಯುಕ್ತಷ್ಟಕ್ಕರಾಗೋ sಲ್ಪಪಂಚಮಃ |
ಕಾರಣಂ ಚಾಸ್ಯ ನಿರ್ದಿಷ್ಟೇ ದೈವತೀಷಡ್ಜಮಧ್ಯಮೇ                                                               || ೬೮ ||

೬೮೨   (ಅ) ಅಸ್ಯಾರ್ಥಃ – ಟಕ್ಕರಾಗಃ ಷಡ್ಜಗ್ರಾಮಸಂಬಂಧಃ, ಧೈವತೀಷಡ್ಜಮಧ್ಯಮಾ ಸಮುತ್ಪನ್ನತ್ವಾತ್ | (ಆ) ಷಡ್ಜೋ sಸ್ಯ ಗ್ರಹೋ s೦ಶಶ್ಚ ನ್ಯಾಸಶ್ಚ | (ಇ) ನಿಷಾದ ಪಂಚಮಯೋರಲ್ಪತ್ವಮ್ | (ಈ) ನಿಷಾದಗಾಂಧಾರಾವತ್ರ ಕಾಕಲ್ಯಂತರೌ | (ಉ) ಪೂರ್ಣತ್ಚಾಯಮ್ | (ಊ) ಯುದ್ಧವೀರೇ sಸ್ಯ ಪ್ರಯೋಗಃ | (ಋ) ವೀರಾದ್ಭುತೌ ರಸೌ | (ೠ) ಷಡ್ಜಾದಿಮೂರ್ಛನಾ | (ಎ) ವರ್ಣಃ ಸಂಚಾರೀ | (ಏ) ಪ್ರಸನ್ನಾಂತೋ sಲಂಕಾರಃ | (ಐ) ದಕ್ಷಿಣೇ ಕಲಾ, ವಾರ್ತಿಕೇ ಕಲಾ, ಚಿತ್ರೇ ಕಲಾ | (ಒ) ಸ್ವರಪದಗೀತೇ ಚಚ್ಚತ್ಪುಟಾದಿ ತಾಲಃ |         37

[೨. ಸೌವೀರಃ]

೬೮೩   ಅಂಶಶ್ಚ ಷಡ್ಜೋ ನ್ಯಾಸಶ್ಚ ಕಾರಣಂ ಷಡ್ಜಮಧ್ಯಮಾ |
ಸೌವೀರಕಸ್ಯ ಗಾಂಧಾರೋ ನಿಷಾದಶ್ಚಾಪಿ ದುರ್ಬಲಃ                                                                || ೬೯ ||

೬೮೪   (ಅ) ಅಸ್ಯಾರ್ಥಃ – ಸೌವೀರಕಃ ಷಡ್ಜಗ್ರಾಮಸಂಬಂಧಃ, ಷಡ್ಜಮಧ್ಯಮಾಜಾತೇರ್ಜಾ ತತ್ವಾತ್ | (ಆ) ಷಡ್ಜೋsಸ್ಯ ಗ್ರಹೋ ಅಂಶಶ್ಚ ನ್ಯಾಸಶ್ಚ | (ಇ) ಗಾಂಧಾರನಿಷಾದ ಯೋರಲ್ಪತ್ವಮ್ | (ಈ) ನಿಷಾದಃ ಕಾಕಲೀ | (ಉ) ಪೂರ್ಣಶ್ಚಾಯಮ್ | (ಊ) ಗೃಹಮೇಧಿನಾಂ ಸಂಯಮಿನಾಂ ತಾಪಸಾನಾಂ ಚ ಪ್ರವೇಶಾದಿಕೇ ಚರಿತೇ, ಶಾಂತರಸೇ ಚಾಸ್ಯ ವಿನಿಯೋಗಃ | (ಋ) ವೀರಾದಿಕೋ ರಸಃ | (ೠ) ಷಡ್ಜಾದಿಮೂರ್ಛನಾ |

ಪಾಠವಿಮರ್ಶೆ: ೬೮೧ಇ, ಅ-ಈ ೬೮೨ಇ,ಊ ೬೮೪ಇ

—-

೬೮೦   (ಅ) ದುರ್ಗಾಶಕ್ತಿಯ ಮತದಲ್ಲಿ ವೇಸರಷಾಡವ(ರಾಗ)ವೇ ಮುಖ್ಯವಾದುದು, ಏಕೆಂದರೆ (ತನ್ನ) ಷಾಡವತ್ವವನ್ನು ಅದು (ಶುದ್ಧಷಾಡವರಾಗದಿಂದ) ಕ್ರಮವಾಗಿ ಪಡೆದುಕೊಂಡಿದೆ. (ಆ) ಆದರೆ ಕಶ್ಯಪನ ಮತದಲ್ಲಿ ಲಕ್ಷ್ಮೀ(ದೇವಿ)ಗೆ ಪ್ರೀತಿಯನ್ನುಂಟುಮಾಡುವುದರಿಂದ ಟಕ್ಕರಾಗದೇ ಮುಖ್ಯ (ಇ) ಅದು ಹೇಗೆಂದರೆ –                                                                                         36

[೧. ಟಕ್ಕರಾಗ]

೬೮೧   ಟಕ್ಕರಾಗವು ಷಡ್ಜವನ್ನು ಅಂಶ ಮತ್ತು ನ್ಯಾಸಗಳನ್ನಾಗಿ ಹೊಂದಿದೆ ; [ಅದರ] ಪಂಚಮವು ಅಲ್ಪವಾಗಿದೆ. ಇದರ (ಹುಟ್ಟಿಗೆ) ಧೈವತೀ ಮತ್ತು ಷಡ್ಜಮಧ್ಯಮಾ (ಜಾತಿಗಳು ಕಾರಣ) ಎಂದು ನಿರ್ದೇಶಿಸಿದೆ.                                                                        ೬೮

೬೮೨   (ಅ) ಇದರ ಅರ್ಥವು [ಹೀಗಿದೆ] : ಟಕ್ಕರಾಗವು ಧೈವತೀ ಮತ್ತು ಷಡ್ಜಮಧ್ಯಮಾ(ಜಾತಿ)ಗಳಲ್ಲಿ ಹುಟ್ಟಿರುವುದರಿಂದ ಷಡ್ಜಗ್ರಾಮಕ್ಕೆ ಸಂಬಂಧಿಸಿದೆ. (ಆ) ಷಡ್ಜವು ಇದರ ಗ್ರಹ, ಅಂಶ ಮತ್ತು ನ್ಯಾಸ. (ಇ) (ಇದರ) ನಿಷಾದ ಮತ್ತು ಪಂಚಮಗಳಲ್ಲಿ ಅಲ್ಪತ್ವವಿದೆ. (ಈ) ಇದರಲ್ಲಿ ನಿಷಾದ ಮತ್ತು ಗಾಂಧಾರಗಳು (ಕ್ರಮವಾಗಿ) ಕಾಕಲೀ ಮತ್ತು ಅಂತರಗಳು. (ಉ) ಇದು (ಸಂ)ಪೂರ್ಣ(ರಾಗ). (ಊ) ಇದರ ಪ್ರಯೋಗವು ಯುದ್ಧವೀರ(ಸಂದರ್ಭ)ದಲ್ಲಿದೆ. (ಋ) (ಇದರಲ್ಲಿ ಪ್ರತೀತವಾಗಬೇಕಾದ) ರಸಗಳು ವೀರ ಮತ್ತು ಅದ್ಭುತ. (ೠ) ಇದರ ಮೂರ್ಛನೆಯು ಷಡ್ಜದಿಂದ ಮೊದಲಾಗುತ್ತದೆ. (ಎ) (ಇದರ) ವರ್ಣವು ಸಂಚಾರೀ. (ಏ) (ಮತ್ತು) ಅಲಂಕಾರವು ಪ್ರಸನ್ನಾಂತ. (ಐ) (ಇದರ ತಾಳದ) ದಕ್ಷಿಣ (ಮಾರ್ಗ)ದಲ್ಲಿ ಕಲಾ (ಪ್ರಮಾಣವಿದೆ), ವಾರ್ತಿಕದಲ್ಲಿ ಕಲಾ(ಇದೆ), ಚಿತ್ರದಲ್ಲಿ ಕಲಾ (ಇದೆ). (ಔ) ಸ್ವರ(ಗಳೂ)ಪದ(ಗಳೂ ಇರುವ)ಗೀತದಲ್ಲಿ ಚಚ್ಚತ್ಪುಟ ಮೊದಲಾದ ತಾಳ(ವನ್ನು ಪ್ರಯೋಗಿಸಬೇಕು).                                                                        37

[೨. ಸೌವೀರ]

೬೮೩   ಸೌವೀರ(ರಾಗ)ದ ಅಂಶವೂ ನ್ಯಾಸವೂ ಷಡ್ಜ ; (ಇದರ) ಹುಟ್ಟಿಗೆ ಷಡ್ಜಮಧ್ಯಮಾ (ಜಾತಿಯು) ಕಾರಣ. (ಸೌವೀರದ) ಗಾಂಧಾರವೂ ನಿಷಾದವೂ ದುರ್ಬಲಗಳಾಗಿವೆ.                                                                                                            ೬೯

೬೮೪   (ಅ) ಇದರ ಅರ್ಥವು [ಹೀಗಿದೆ]: ಸೌವೀರ(ರಾಗ)ವು ಷಡ್ಜಮಧ್ಯಮಾಜಾತಿಯಲ್ಲಿ ಹುಟ್ಟಿರುವುದರಿಂದ ಷಡ್ಜಗ್ರಾಮಕ್ಕೆ ಸಂಬಂಧಿಸಿದೆ. (ಆ) ಷಡ್ಜವು ಇದರ ಗ್ರಹ, ಅಂಶ ಮತ್ತು ನ್ಯಾಸ. (ಇ) (ಇದರ) ಗಾಂಧಾರನಿಷಾದಗಳಲ್ಲಿ ಅಲ್ಪತ್ವ(ವಿದೆ). (ಈ) (ಇದರ) ನಿಷಾದವು ಕಾಕಲೀ. (ಉ) ಇದು (ಸಂ)ಪೂರ್ಣ(ರಾಗ). (ಊ) ಇದರ ವಿನಿಯೋಗವು ಮನೆಯಲ್ಲಿ ಯಜ್ಞಯಾಗಾದಿಗಳನ್ನು ಮಾಡುವುದು, ಸಂಯಮವನ್ನು ಆಚರಿಸುವುದು, ತಪಸ್ವಿಗಳ ಪ್ರವೇಶ ಮುಂತಾದವುಗಳಲ್ಲಿಯೂ ಶಾಂತರಸದಲ್ಲಿಯೂ (ಆಗುತ್ತದೆ). (ಋ) (ಇದಕ್ಕೆ ಸರಿಯಾದುದು) ವೀರ ಇತ್ಯಾದಿ ರಸಗಳು. (ೠ) ಇದರ ಮುರ್ಛನೆಯು ಷಡ್ಜದಿಂದ ಮೊದಲಾಗುತ್ತದೆ.

____

(ಎ) ಆರೋಹಿ ವರ್ಣಃ | (ಏ) ಪ್ರಸನ್ನಾದಿರಲಂಕಾರಃ | (ಐ) ದಕ್ಷಿಣೇ ಕಲಾ, ವಾರ್ತಿಕೇ ಕಲಾ, ಚಿತ್ರೇ ಕಲಾ | (ಒ) ಸ್ವರಪದಗೀತೇ ಚಚ್ಚತ್ಪುಟಾದಿ ತಾಲಃ |         38

[೩. ಮಾಲವಪಂಚಮಃ]

೬೮೫   ಪಂಚಮಾಂಶಸ್ತದಂತಶ್ಚ ಪಂಚಮೀಮಧ್ಯಮೋದ್ಭವಃ |
ಸ್ವಲ್ಪದ್ವಿಶ್ರುತಿಕಶ್ಚೈವ ಜ್ಞೇಯೋ ಮಾಲವಪಂಚಮಃ                                                              || ೭೦ ||

೬೮೬   (ಅ) ಅಸ್ಯಾರ್ಥಃ – ಮಾಲವಪಂಚಮೋ ಮಧ್ಯಮಗ್ರಾಮಸಂಬಂಧಃ, ಮಧ್ಯಮಾ ಪಂಚಮೀಸಮುತ್ಪನ್ನತ್ವಾತ್ | (ಆ) ಪಂಚಮೋ sಒಶೋ ಗ್ರಹೋ ನ್ಯಾಸಶ್ಚ | (ಇ) ನಿಷಾದಗಾಂಧಾರಯೋರಲ್ಪತ್ವಮ್ | (ಈ) ನಿಷಾದೋ sತ್ರ ಕಾಕಲೀ | (ಉ) ಪೂರ್ಣಸ್ವರಶ್ಚಾಯಮ್ | (ಊ) ವಿಪ್ರಲಂಭಶೃಂಗಾರೇ ಕಂಚುಕೀಪ್ರವೇಶೇ sಸ್ಯ ವಿನಿಯೋಗಃ | (ಋ) ಪಂಚಮಾದಿಮೂರ್ಛನಾ | (ೠ) ರಸೌ ಶೃಂಗಾರಹಾಸ್ಯೌ | (ಎ) ಆರೋಹ್ಯಾದಿವರ್ಣಃ | (ಏ) ಪ್ರಸನ್ನಾದಿರಲಂಕಾರಃ | (ಐ) ದಕ್ಷಿಣೇ ಕಲಾ, ವಾರ್ತಿಕೇ, ಕಲಾ, ಚಿತ್ರೇ ಕಲಾ | (ಒ) ಸ್ವರಪದಗೀತೇ ಚಚ್ಚತ್ಪುಟಾದಿ ತಾಲಃ |         39

[೪. ವೇಸರಷಾಡವಃ]

೬೮೭   ಮಧ್ಯಮಾಂಶಸ್ತಥಾ ನ್ಯಾಸಃ ಕಾರಣಂ ಷಡ್ಜಮಧ್ಯಮಾ |
ದ್ವಿಶ್ರುತಿಭ್ಯಾಂ ವಿಹೀನಸ್ತು ಭವೇದ್ಯ ವೇಸರಷಾಡವಃ                                                             || ೭೧ ||

೬೮೮   (ಅ) ಅಸ್ಯಾರ್ಥಃ- ವೇಸರಪಾಡವಃ ಷಡ್ಜಗ್ರಾಮಸಂಬಂಧಃ ಷಡ್ಜಮಧ್ಯಮಾ ಜಾತತ್ವಾತ್ | (ಆ) ಮಧ್ಯಮೋ s೦ಶೋ ಗ್ರಹೋ ನ್ಯಾಸಶ್ಚ | (ಇ) ಗಾಂಧಾರನಿಷಾದಯೋರಲ್ಪತ್ವಮ್ | (ಈ) ಗಾಂಧಾರನಿಷಾದೌ ಕಾಕಲ್ಯಂತರೌ | (ಉ) ನಿತ್ಯಂ ಪೂರ್ಣಸ್ವರಶ್ಚಾಯಮ್ | (ಊ) ಶಾಂತರಸೇ ಚಾಸ್ಯ ಪ್ರಯೋಗಃ | (ಋ) ಶೃಂಗಾರಹಾಸ್ಯೌ ರಸೌ | (ೠ) ಮಧ್ಯಮಾದಿಮೂರ್ಛನಾ | (ಎ) ಆರೋಹೀ ವರ್ಣಃ | (ಏ) ಪ್ರಸನ್ನಾದಿಲಂಕಾರಃ | (ಐ) ದಕ್ಷಿಣೇ ಕಲಾ, ವಾರ್ತಿಕೇ ಕಲಾ, ಚಿತ್ರೇ ಕಲಾ | (ಒ) ಸ್ವರಪದಗೀತೇ ಚಚ್ಚತ್ಪುಟಾದಿ ತಾಲಃ |                                40

ಪಾಠವಿಮರ್ಶೆ : ೬೮೬ಋ ೬೮೭ಇಈ ೬೮೮ ಇ, ೠ

—-

(ಎ) (ಇದರದು) ಆರೋಹೀ ವರ್ಣ. (ಏ) (ಮತ್ತು) ಪ್ರಸನ್ನಾದಿ (ಯೆಂಬ) ಅಲಂಕಾರ (ಐ) (ಇದರ ತಾಳದ) ದಕ್ಷಿಣ(ಮಾರ್ಗ)ದಲ್ಲಿ ಕಲಾ (ಪ್ರಮಾಣವಿದೆ), ವಾರ್ತಿಕದಲ್ಲಿ ಕಲಾ, ಚಿತ್ರದಲ್ಲಿ ಕಲಾ (ಇದೆ). (ಒ) ಸ್ವರ(ಗಳೂ)ಪದ(ಗಳೂ ಇರುವ) ಗೀತದಲ್ಲಿ ಚಚ್ಚತ್ಪುಟ ಇತ್ಯಾದಿ ತಾಳ(ವನ್ನು ಪ್ರಯೋಗಿಸಬೇಕು).                                                                                                         38

[೩. ಮಾಲವಪಂಚಮ]

೬೮೫   ಮಾಲವಪಂಚಮವು ಪಂಚಮವನ್ನು ಅಂಶ, ನ್ಯಾಸಗಳನ್ನಾಗಿಯೂ ಅಲ್ಪನಿಷಾದಗಾಂಧಾರಗಳನ್ನೂ ಹೊಂದಿದ್ದು ಪಂಚಮೀ ಮತ್ತು ಮಧ್ಯಮಾ (ಜಾತಿ)ಗಳಿಂದ ಹುಟ್ಟಿದೆ ಎಂದು ತಿಳಿಯಬೇಕು.                                                                         ೭೦

೬೮೬   (ಅ) ಇದರ ಅರ್ಥವು [ಹೀಗಿದೆ] : ಮಾಲವಪಂಚಮವು ಮಧ್ಯಮಾ ಮತ್ತು ಪಂಚಮೀ (ಜಾತಿ)ಗಳಲ್ಲಿ ಹುಟ್ಟಿರುವುದರಿಂದ ಮಧ್ಯಮಗ್ರಾಮವನ್ನು ಸಂಬಂಧಿಸಿದೆ. (ಆ) ಪಂಚಮವು ಇದರ ಗ್ರಹ, ಅಂಶ ಮತ್ತು ನ್ಯಾಸ. (ಇ) (ಇದರ) ಗಾಂಧಾರನಿಷಾದಗಳಲ್ಲಿ ಅಲ್ಪತ್ವ(ವಿದೆ). (ಈ) (ಇದರ) ನಿಷಾದವು ಕಾಕಲೀ. (ಉ) ಇದು (ಸಂ)ಪೂರ್ಣ(ರಾಗ). (ಊ) ವಿಪ್ರಲಂಭಶೃಂಗಾರದ (ಸಂದರ್ಭದ)ಲ್ಲಿ ಕಂಚುಕಿಯು (ದೃಶ್ಯವನ್ನು) ಪ್ರವೇಶಿಸುವಾಗ (ಇದನ್ನು) ವಿನಿಯೋಗಿಸಬೇಕು. (ಋ) (ಇದರ) ಮೂರ್ಛನೆಯು ಪಂಚಮದಿಂದ ಮೊದಲಾಗುತ್ತದೆ. (ೠ) (ಇದರಲ್ಲಿ ಪ್ರತೀತವಾಗಬೇಕಾದ) ರಸಗಳು ಶೃಂಗಾರ ಮತ್ತು ಹಾಸ್ಯ. (ಎ) (ಮುಖ್ಯವಾಗಿ ಪ್ರಯೋಗಿಸಬೇಕಾದುದು) ಅರೋಹೀ ಇತ್ಯಾದಿ ವರ್ಣಗಳು. (ಏ) ಮತ್ತು ಪ್ರಸನ್ನಾದಿ ಅಲಂಕಾರ. (ಐ) (ಇದರ ತಾಳದ) ದಕ್ಷಿಣ(ಮಾರ್ಗ)ದಲ್ಲಿ ಕಲಾ (ಪ್ರಮಾಣವಿರುತ್ತದೆ). ವಾರ್ತಿಕದಲ್ಲಿ ಕಲಾ(ಇದೆ), ಚಿತ್ರದಲ್ಲಿ ಕಲಾ(ಇದೆ). (ಒ) ಸ್ವರ(ಗಳೂ)ಪದ(ಗಳೂ ಇರುವ) ಗೀತದಲ್ಲಿ ಚಚ್ಚತ್ಪುಟ ಮುಂತಾದ ತಾಳ(ವನ್ನು ಬಳಸಬೇಕು).  39

[೪. ವೇಸರಷಾಡವ]

೬೮೭   ವೇಸರಷಾಡವು ಮಧ್ಯಮವನ್ನು ಅಂಶ ಮತ್ತು ನ್ಯಾಸಗಳನ್ನಾಗಿಯೂ, ಗಾಂಧಾರನಿಷಾದಗಳನ್ನು ವರ್ಜಿಸಿಯೂ ಷಡ್ಜಮಧ್ಯಮಾ(ಜಾತಿ)ದಿಂದ ಹುಟ್ಟಿದ್ದಾಗಿಯೂ ಇದೆ.                                                                                                                  ೭೧

೬೮೮   (ಅ) ಇದರ ಅರ್ಥವು [ಹೀಗಿದೆ] ; ವೇಸರ ಪಾಡವವು ಷಡ್ಜಮಧ್ಯಮಾ(ಜಾತಿ)ದಿಂದ ಹುಟ್ಟಿರುವುದರಿಂದ ಷಡ್ಜಗ್ರಾಮಕ್ಕೆ ಸಂಬಂಧಿಸಿದೆ. (ಆ) ಮಧ್ಯಮವು (ಇದರ) ಅಂಶ, ಗ್ರಹ ಮತ್ತು ನ್ಯಾಸ. (ಇ) (ಇದರ) ಗಾಂಧಾರ ಮತ್ತು ನಿಷಾದಗಳಲ್ಲಿ ಅಲ್ಪತ್ಯ(ವಿದೆ). (ಈ) (ಇದರ) ಗಾಂಧಾರ ಮತ್ತು ನಿಷಾದಗಳು (ಕ್ರಮವಾಗಿ) ಅಂತರ ಮತ್ತು ಕಾಕಲೀಗಳು. (ಉ) ಇದು ಯಾವಾಗಲೂ (ಸಂ)ಪೂರ್ಣ ಸ್ವರಗಳನ್ನುಳ್ಳದ್ದು. (ಊ) ಶಾಂತರಸದಲ್ಲಿ ಇದರ ಪ್ರಯೋಗ(ವನ್ನು ಮಾಡಬೇಕು). (ಋ) (ಇದರಲ್ಲಿ ಪ್ರತೀತವಾಗಬೇಕಾದ) ರಸಗಳು ಶೃಂಗಾರ ಮತ್ತು ಹಾಸ್ಯ. (ೠ) (ಇದರ) ಮೂರ್ಛನೆಯು ಮಧ್ಯಮದಿಂದ ಮೊದಲಾಗುತ್ತದೆ. (ಎ) (ಇದರಲ್ಲಿ) ಆರೋಹೀವರ್ಣ(ವನ್ನು ಬಳಸಬೇಕು). (ಏ) ಪ್ರಸನ್ನಾದಿ ಅಲಂಕಾರ(ವನ್ನು ಪ್ರಯೋಗಿಸಬೇಕು). (ಐ) (ಇದರ ತಾಳದ) ದಕ್ಷಿಣ (ಮಾರ್ಗ)ದಲ್ಲಿ ಕಲಾ

____

[೫. ಬೋಟ್ಟರಾಗಃ]

೬೮೯   ಸ್ಯಾತ್ ಷಡ್ಜಮಧ್ಯಮಾಜಾತೇಃ ಪಂಚಮ್ಯಾಶ್ಚ ವಿನಿರ್ಗತಃ |
ಬೋಟ್ಟರಾಗಶ್ಚ ವಿಜ್ಞೇಯಃ ಪಂಚಮಾಂಶೋ s೦ತಮಧ್ಯಮಃ                                                    || ೭೨||

೬೯೦   (ಅ) [ಅಸ್ಯಾರ್ಥಃ-] ಬೋಟ್ಟರಾಗಃ ಷಡ್ಜಗ್ರಾಮಸಂಬಂಧಃ ಷಡ್ಜಮಧ್ಯಮಾ- ಪಂಚಮೀಜಾತ್ಯೋರ್ಜಾತತ್ವಾತ್ | (ಆ) ಯದ್ಯುಭಯಗ್ರಾಮಸಂಭೂತ ಜಾತಿದ್ವಯಸಮುತ್ಪನ್ನಃ, ತಥಾಪಿ ಪಂಚಮಸ್ಯ ಚತುಃಶ್ರುತಿಕಾತ್ವಾತ್ ಷಡ್ಜಗ್ರಾಮಸಂಬಂಧಃ | (ಇ) ಪಂಚಮೋ ಗ್ರಹೋ s೦ಶಶ್ಚ | (ಈ) ಮಧ್ಯಮೋ ನ್ಯಾಸಃ | (ಉ) ನಿಷಾದಗಾಂಧಾರಯೋರಲ್ಪತ್ವಮ್ | (ಊ) ನಿಷಾದೋsತ್ರ ಕಾಕಲೀ | (ಋ) ಪೂರ್ಣಸ್ವರಶ್ಚಾಯಮ್ | (ೠ) ಉತ್ಸವೇ ಚಾಸ್ಯ ವಿನಿಯೋಗಃ | (ಎ) ಶಾಂತಾದಿಕೋ ರಸಃ | (ಏ) ಪಂಚಮಾದಿಮೂರ್ಛನಾ | (ಐ) ಆರೋಹೀ ವರ್ಣಃ | (ಒ) ಪ್ರಸನ್ನಾಂತೋ sಲಂಕಾರಃ (ಓ) ದಕ್ಷಿಣೇ ಕಲಾ, ವಾರ್ತಿಕೇ ಕಲಾ, ಚಿತ್ರೇ ಕಲಾ | (ಔ) ಸ್ವರಪದಗೀತೇ ಚಚ್ಚತ್ಪುಟಾದಿ ತಾಲಃ |      41

[೬. ಹಿಂದೋಲಃ]

೬೯೧   ಷಡ್ಜಾಂಶನ್ಯಾಸಸಂಯುಕ್ತೋ ಧೈವತರ್ಷಭವರ್ಜಿತಃ |
ಧೈವತ್ಯಾರ್ಷಭಿಕಾಯುಕ್ತೋ ಹಿಂದೋಲಃ ಪ್ರೇಕ್ಷಣೇ ಭವೇತ್                                                     || ೭೩ ||

೬೯೨   (ಅ) [ಅಸ್ಯಾರ್ಥಃ-] ಹಿಂದೋಲಕೋ ಮಧ್ಯಮಗ್ರಾಮಸಂಬಂಧಃ | (ಆ)[ನನು] ಧೈವತ್ಯಾರ್ಷಭೀರಹಿತೋಭಯಗ್ರಾಮಸಂಬಂಧ್ಯಶೇಷಸ್ವರಾಖ್ಯಜಾತಿಸಮುತ್ಪನ್ನತ್ವಾದ್ ಉಭಯಗ್ರಾಮಿಕತ್ವಮೇವ ಯುಕ್ತಮ್, ಕಥಂ ಮಧ್ಯಮಗ್ರಾಮಾಶ್ರಿತ ಇತಿ? (ಇ) ಧೈವತರ್ಷಭಹೀನತ್ವಾನ್ಮಧ್ಯಮಗ್ರಾಮಸಂಬಂಧ ಏವ, ಭರತಕೋಹಲಾದಿಭಿರಾಚಾರ್ಯೈಃ ಷಡ್ಜಗ್ರಾಮೇ ಧೈವತರ್ಷಭಲೋಪನ್ಯಾನಿಷ್ಟತ್ವಾತ್ |

(ಈ) ಕೇಚಿತ್ ಷಡ್ಜಗ್ರಾಮಾಶ್ರಿತ ಏವಾಯಮಿತಿ ಮನ್ಯಂತೇ, ಚತುಃಶ್ರುತಿಕಸ್ಯ

ಪಾಠವಿಮರ್ಶೆ : ೬೮೯ಈ ೬೯೦ಅ, ಆ,ಉ ೬೯೧ಇ ೬೯೨ಆ, ಇ

—-

ಪ್ರಮಾಣವಿದೆ), ವಾರ್ತಿಕದಲ್ಲಿ ಕಲಾ(ಇದೆ), ಚಿತ್ರದಲ್ಲಿ ಕಲಾ(ಇದೆ), (ಒ) ಸ್ವರ(ಗಳೂ)ಪದ(ಗಳೂ ಇರುವ)ಗೀತದಲ್ಲಿ ಚಚ್ಚತ್ಪುಟ ಇತ್ಯಾದಿ ತಾಳ(ವನ್ನು ಪ್ರಯೋಗಿಸಬೇಕು).                                                                                                         40

[೫. ಬೋಟ್ಟರಾಗ]

೬೮೯   ಬೋಟ್ಟರಾಗವು ಷಡ್ಜಮಧ್ಯಮಾಜಾತಿಯಿಂದಲೂ ಪಂಚಮೀ(ಜಾತಿ)ದಿಂದಲೂ ಹುಟ್ಟಿದೆ ಎಂದು ತಿಳಿಯಬೇಕು. ಪಂಚಮವು ಅದರ ಅಂಶ, ಮಧ್ಯಮವು ನ್ಯಾಸ.                                                                                                                          ೭೨

೬೯೦   (ಅ) [ಇದರ ಅರ್ಥವು ಹೀಗಿದೆ:] ಬೋಟ್ಟರಾಗವು ಷಡ್ಜಮಧ್ಯಮಾ ಮತ್ತು ಪಂಚಮೀ ಜಾತಿಗಳಿಂದ ಹುಟ್ಟಿದೆಯಾಗಿ ಷಡ್ಜಗ್ರಾಮಕ್ಕೆ ಸಂಬಂಧಿಸಿದೆ. (ಆ) ಎರಡೂ ಗ್ರಾಮಗಳಿಂದ ಹುಟ್ಟಿದ ಜಾತಿಗಳೆರಡರಲ್ಲಿ ಉತ್ಪತ್ತಿಯಾಗಿದ್ದರೂ ಪಂಚಮವು ನಾಲ್ಕುಶ್ರುತಿಗಳದ್ದಾಗಿರುವುದರಿಂದ ಷಡ್ಜಗ್ರಾಮದ ಸಂಬಮಧ(ವೇ ಎಂದು ಇಲ್ಲಿ ಹೇಳಬೇಕು) (ಇ) ಪಂಚಮವು (ಇದರ) ಗ್ರಹ ಮತ್ತು ಅಂಶ. (ಈ) ಮಧ್ಯಮವು (ಇದರ) ನ್ಯಾಸ. (ಉ) (ಇದರ) ನಿಷಾದಗಾಂಧಾರಗಳಲ್ಲಿ ಅಲ್ಪತ್ವ(ವಿದೆ). (ಊ) ಇದರಲ್ಲಿ ನಿಷಾದವು ಕಾಕಲೀ. (ಋ) ಇದು (ಸಂ)ಪೂರ್ಣ ಸ್ವರಗಳನ್ನುಳ್ಳದ್ದು. (ೠ) ಉತ್ಸವಗಳಲ್ಲಿ ಇದರ ವಿನಿಯೋಗ(ವನ್ನು ಮಾಡಬೇಕು). (ಎ) ಶಾಂತ ಇತ್ಯಾದಿ ರಸ(ಗಳಲ್ಲಿ ಇದನ್ನು ವಿನಿಯೋಗಿಸಬೇಕು). (ಏ) (ಇದರ) ಮೂರ್ಛನೆಯು ಪಂಚಮದಿಂದ ಮೊದಲಾಗುತ್ತದೆ. (ಐ) ವರ್ಣವು ಆರೋಹೀ. (ಒ) (ಮತ್ತು) ಅಲಂಕಾರವು ಪ್ರಸನ್ನಾಂತ. (ಓ) (ಇದರ ತಾಳದ) ದಕ್ಷಿಣ (ಮಾರ್ಗ)ದಲ್ಲಿ ಕಲಾ (ಪ್ರಮಾಣವಿದೆ), ವಾರ್ತಿಕದಲ್ಲಿ ಕಲಾ(ಇದೆ), ಚಿತ್ರದಲ್ಲಿ ಕಲಾ (ಇದೆ). (ಔ) ಸ್ವರ(ಗಳೂ)ಪದ(ಗಳೂ ಇರುವ) ಗೀತದಲ್ಲಿ ಚಚ್ಚತ್ಪುಟ ಮುಂತಾದ ತಾಳ(ಗಳನ್ನು ಪ್ರಯೋಗಿಸಬೇಕು).                                                                       41

[೬. ಹಿಂದೋಲ]

೬೯೧   ಹಿಂದಲೋವು ಷಡ್ಜವನ್ನು ಅಂಶ, ನ್ಯಾಸಗಳನ್ನಾಗಿ ಉಳ್ಳದ್ದು, ಧೈವತರಿಷಭಗಳನ್ನು ಬಿಟ್ಟಿದೆ. ಧೈವತೀ, ಆರ್ಷಭೀ(ಜಾತಿ)ಗಳನ್ನು ಬಿಟ್ಟು ಉಳಿದ ಜಾತಿಗಳನ್ನು ಸೇರಿದೆ ; (ನಾಟ್ಯಪ್ರಯೋಗ) ದೃಶ್ಯಗಳಲ್ಲಿ ಪ್ರಯೋಗವನ್ನು ಹೊಂದಿದೆ.                            ೭೩

೬೯೨   (ಅ) [ಇದರ ಅರ್ಥವು ಹೀಗಿದೆ:] ಹಿಂದೋಲವು ಮಧ್ಯಮಗ್ರಾಮವನ್ನು ಸಂಬಂಧಿಸಿದೆ. (ಆ) [ಆಕ್ಷೇಪ:] (ಈ ರಾಗವು) ಧೈವತೀ, ಆರ್ಷಭೀಗಳನ್ನುಳಿದು ಎರಡೂ ಗ್ರಾಮಗಳ ಉಳಿದ ಎಲ್ಲ ಸ್ವರಗಳ ಹೆಸರುಗಳನ್ನುಳ್ಳ ಜಾತಿಗಳಿಂದ ಉತ್ಪತ್ತಿಯಾಗಿರಲಾಗಿ ಅದು ಎರಡು ಗ್ರಾಮಗಳಿಗೂ ಸಂಬಂಧಿಸಿದೆಯೆಂಬುದೇ ಸರಿ. (ಹೀಗಿರಲಾಗಿ) ಅದು ಮಧ್ಯಮಗ್ರಾಮವನ್ನು ಆಶ್ರಯಿಸಿದೆ ಎಂಬುದು ಹೇಗೆ (ಸಮಂಜಸವಾಗಿದೆ)? (ಇ) [ಸಮಾಧಾನ:] ಭರತ, ಕೋಹಲ ಇತ್ಯಾದಿ ಆಚಾರ್ಯರಿಗೆ ಷಡ್ಜಗ್ರಾಮದಲ್ಲಿ ಧೈವತ ಮತ್ತು ರಿಷಭಗಳನ್ನು ಲೋಪಮಾಡುವುದು ಸಮ್ಮತವಲ್ಲದ್ದರಿಂದಲೂ, ಈ ರಾಗದಲ್ಲಿ ಧೈವತರಿಷಭಗಳನ್ನು ಲೋಪಮಾಡಿರುವುದರಿಂದಲೂ (ಅದು) ಮಧ್ಯಮಗ್ರಾಮವನ್ನೇ ಸಂಬಂಧಿಸಿದೆ. (ಈ) ನಾಲ್ಕುಶ್ರುತಿಗಳ ಪಂಚಮವು ಇದರಲ್ಲಿ ದೊರೆಯುವುದರಿಂದ ಕೆಲವರು ಇದು ಷಡ್ಜಗ್ರಾಮದಲ್ಲಿ(ಯೇ) ನೆಲೆಸಿದೆ ಎಂದು

____

ಪಂಚಮಸ್ಯಾತ್ರೋಪಲಂಭಾತ್ | (ಉ) ಧೈವತಸ್ಯ ಚಾನಾಶಿತ್ವಂ ತಾನವಿಷಯಮೇವ ದ್ರಷ್ಟವ್ಯಂ ನ ಸರ್ವತ್ರೇತಿ | (ಊ) ಏತಚ್ಚಾಯುಕ್ತಮ್ | (ಋ) ಏವಂ ಹಿ ಸತಿ ಗ್ರಾಮಮೂರ್ಛನಾಭೇದೋ ನ ಸ್ಯಾದಿತಿ |                                                                    42

೬೯೩   (ಅ) ಷಡ್ಜೋ sಸ್ಯ ಗ್ರಹೋ s೦ಶೋ ನ್ಯಾಸಶ್ಚ | (ಆ) ನಿಷಾದೋ sತ್ರ ಕಾಕಲೀ | (ಇ) ಧೈವತರ್ಷಭಹೀನಂ ಔಡುವಿತಮ್ | (ಈ) ಸಂಭೋಗಶೃಂಗಾರೋ sಸ್ಯ ವಿನಿಯೋಗಃ | (ಉ) ವೀರಾದಿ ರಸಃ | (ಊ) ಮೂರ್ಛನಾ ಷಡ್ಜಾದಿಃ | (ಋ) ವರ್ಣ ಆರೋಹೀ | (ೠ) ಪ್ರಸನ್ನಾದಿರಲಂಕಾರಃ | (ಎ) ದಕ್ಷಿಣೇ ಕಲಾ, ವಾರ್ತಿಕೇ ಕಲಾ, ಚಿತ್ರೇ ಕಲಾ | (ಏ)ಸ್ವರಪದಗೀತೇ ಚಚ್ಚತ್ಪುಟಾದಿ ತಾಲಃ |   43

[೭. ಟಕ್ಕಕೈಶಿಕಃ]

೬೯೪   ಧೈವತಾಂಶಸ್ತದಂತಶ್ಚ ಸ್ವಲ್ಪದ್ವಿಶ್ರುತಿಕಸ್ವರಃ |
ಧೈವತೀಮಧ್ಯಮಾಜಾತ್ಯೋಃ ಸಂಜಾತಷ್ಟಕ್ಕಕೈಶಿಕಃ                                                              || ೭೪ ||

೬೯೫   (ಅ) [ಅಸ್ಯಾರ್ಥಃ-) ಧೈವತೀಮಧ್ಯಮಾಜಾತ್ಯೋರ್ಜಾತತ್ವಾಟ್ಟಕ್ಕಕೈಶಿಕಃ ಷಡ್ಜಗ್ರಾಮ ಸಂಬಂಧಃ | (ಆ) ನನು ಉಭಯಗ್ರಾಮಸಂಬಂಧಿನ್ಯೋರ್ಜಾತ್ಯೋಃ ಸಮುತ್ಪ- ನ್ನೋsಯಂ ರಾಗಃ ಷಡ್ಜಗ್ರಾಮಸಂಬಂಧ ಇತಿ ಕಥಂ ವಕ್ತುಂ ಯುಕ್ತಮ್? (ಇ) ಅಸ್ಯ ಪ್ರಯೋಗೇ ಚತುಃಶ್ರುತಿಸಂಬಂಧಃ ಪಂಚಮ ಉಪಲಭ್ಯತೇ | (ಈ)ಪಂಚಮಧೈವತೌ ದ್ವಿಗ್ರಾಮ ಯೋರ್ಭೇದಕಾರಿಣೌ, ಅತಃ ಪಂಚಮಸ್ಯ ಚತುಃಶ್ರುತಿಕತ್ವಾತ್ ಷಡ್ಜಗ್ರಾಮಸಂಬಂಧ ಏವಾಯಂ ರಾಗಃ | (ಉ) ಗ್ರಹೋ s೦ಶೋ ನ್ಯಾಸಶ್ಚ ಧೈವತಃ | (ಊ) ನಿಷಾದಗಾಂಧಾರೌ ಚಾತ್ರ ಕಾಕಲ್ಯಂತರೌ | (ಋ) ಪೂರ್ಣಸ್ವರಶ್ಚಾಯಮ್ | (ೠ) ಕಶ್ಯಪಮತೇ ನಿಷಾದಗಾಂಧಾರಯೋರ್ಲೋಪಾದಯಮೌಡುವಿತಃ | (ಎ) ಉದ್ಭಟನಾಟ್ಯೇ ಕಾಮಗ್ರಸ್ತತತ್‌ಕಂಚುಕಿ ಪ್ರವೇಶೇ ಚಾಸ್ಯ ವಿನಿಯೋಗಃ | (ಏ) ಬೀಭತ್ಸಾದಿ ರಸಃ | (ಐ) ಧೈವತಾದಿಮೂರ್ಛನಾ | (ಒ) ಆರೋಹೀ ವರ್ಣಃ | (ಓ) ದಕ್ಷಿಣೇ ಕಲಾ, ವಾರ್ತಿಕೇ ಕಲಾ, ಚಿತ್ರೇ ಕಲಾ | (ಔ) ಸ್ವರಪದಗೀತೇ ಚಚ್ಚತ್ಪುಟಾದಿ ತಾಲಃ |           44

ಪಾಠವಿಮರ್ಶೆ : ೬೯೩ಇ, ಈ, ಊ ೬೯೪ಈ ೬೯೫ ಆ, ಈ,ೠ, ಐ

—-

ತಿಳಿಯುತ್ತಾರೆ. (ಉ) ತಾನದ ವಿಷಯದಲ್ಲಿ ಮಾತ್ರ ಧೈವತವು ಲೋಪವಿಲ್ಲದ್ದು ಎಂದು ತಿಳಿಯಬೇಕೇ. ಹೊರತು ಎಲ್ಲೆಡೆಯಲ್ಲಿ ಅಲ್ಲ ಎಂಬುದರಿಂದ ಹೀಗೆ (ಅವರು ತಿಳಿಯುತ್ತಾರೆ). (ಊ) ಇದು ಸರಿಯಲ್ಲ. (ಋ) ಹೀಗೆ ಆದರೆ ಗ್ರಾಮ ಮತ್ತು ಮೂರ್ಛನೆಗಳಲ್ಲಿ ಭೇದವೇ ಇಲ್ಲವಾಗುತ್ತದೆ.                                                                                                                            42

೬೯೩   ಷಡ್ಜವು ಇದರ ಗ್ರಹ, ಅಂಶ ಮತ್ತು ನ್ಯಾಸ. (ಆ) ನಿಷಾದವು ಇದರಲ್ಲಿ ಕಾಕಲೀ. (ಇ) ಧೈವತರಿಷಭಗಳು ಇಲ್ಲ(ವಾದುದರಿಂದ ಇದು) ಔಡುವಿತ(ವಾಗಿದೆ). (ಈ) ಸಂಭೋಗ ಶೃಂಗಾರವು(-ರದಲ್ಲಿ) ಇದರ ವಿನಿಯೋಗ. (ಉ) (ಪ್ರತೀತವಾಗಬೇಕಾದ) ರಸವು ವೀರ ಇತ್ಯಾದಿ. (ಊ) (ಇದರ) ಮೂರ್ಛನೆಯು ಷಡ್ಜದಿಂದ ಮೊದಲಾಗುತ್ತದೆ. (ಋ) (ಇದರಲ್ಲಿ) ಆರೋಹೀ ವರ್ಣ(ವನ್ನು ಪ್ರಯೋಗಿಸಬೇಕು.) (ೠ) ಪ್ರಸನ್ನಾದಿಯು (ಇದರ) ಅಲಂಕಾರ. (ಎ) (ಇದರ ತಾಳದ) ದಕ್ಷಿಣ(ಮಾರ್ಗ)ದಲ್ಲಿ ಕಲಾ(ಪ್ರಮಾಣವಿದೆ), ವಾರ್ತಿಕದಲ್ಲಿ ಕಲಾ, ಚಿತ್ರದಲ್ಲಿ ಕಲಾ (ಇದೆ). (ಏ) ಸ್ವರ(ಗಳೂ)ಪದ(ಗಳೂ)(ಇರುವ) ಗೀತದಲ್ಲಿ ಚಚ್ಚತ್ಪುಟ ಇತ್ಯಾದಿ ತಾಳ(ವನ್ನು ಪ್ರಯೋಗಿಸಬೇಕು).                 43

[೭. ಟಕ್ಕಕೈಶಿಕ]

೬೯೪   ಟಕ್ಕಕೈಶಿಕ(ರಾಗ)ವು ಧೈವತೀಮಧ್ಯಮಾಜಾತಿಗಳಿಂದ ಹುಟ್ಟಿದೆ. ಧೈವತವು ಅದರ ಅಂಶ ಮತ್ತು ನ್ಯಾಸ ; (ಅದು) ಎರಡು ಶ್ರುತಿಗಳಿರುವ ಸ್ವರ(=ನಿಷಾದ ಗಾಂಧಾರ)ಗಳನ್ನು ಅಲ್ಪವಾಗಿ ಹೊಂದಿದೆ.                                                                        ೭೪

೬೯೫   (ಅ) [ಇದರ ಅರ್ಥವು ಹೀಗಿದೆ:] ಧೈವತೀ ಮತ್ತು ಮಧ್ಯಮಾ ಜಾತಿಗಳಿಂದ ಹುಟ್ಟಿರಲಾಗಿ ಟಕ್ಕಕೈಶಿಕವು ಷಡ್ಜಗ್ರಾಮಕ್ಕೆ ಸಂಬಂಧಿಸಿದೆ. (ಆ) [ಆಕ್ಷೇಪ:] ಎರಡೂ ಗ್ರಾಮಗಳಿಗೆ ಸಂಬಂಧಿಸಿರುವ ಜಾತಿಗಳಿಂದ ಹುಟ್ಟಿರುವ ಈ ರಾಗವು ಷಡ್ಜಗ್ರಾಮಕ್ಕೆ (ಮಾತ್ರ) ಸಂಬಂಧಿಸಿದೆಯೆಂದು ಹೇಳುವುದು ಹೇಗೆ ಹೊಂದುತ್ತದೆ? (ಇ) [ಸಮಾಧಾನ:] ಇದರ ಪ್ರಯೋಗದಲ್ಲಿ ನಾಲ್ಕು ಶ್ರುತಿಗಳ ಸಂಬಂಧವನ್ನು ಹೋಂದಿರುವ ಪಂಚಮವು ದೊರೆಯುತ್ತದೆ. (ಪಂಚಮಧೈವತಗಳು ಎರಡೂ ಗ್ರಾಮಗಳಲ್ಲಿ ಭೇದ(=ವ್ಯತ್ಯಾಸ)ವನ್ನು ಉಂಟುಮಾಡತಕ್ಕವುಗಳಾಗಿವೆ. ಹೀಗಾಗಿ ಪಂಚಮಕ್ಕೆ ನಾಲ್ಕು ಶ್ರುತಿಗಳಿರುವುದರಿಂದ ಈ ರಾಗವು ಷಡ್ಜಗ್ರಾಮದ್ದೇ ಸಂಬಂಧವನ್ನು ಹೊಂದಿದೆ (ಉ) (ಇದರ) ಗ್ರಹ, ಅಂಶ ಮತ್ತು ನ್ಯಾಸವು ಧೈವತ. (ಊ) ಇದರಲ್ಲಿ ನಿಷಾದಗಾಂಧಾರಗಳು (ಕ್ರಮವಾಗಿ) ಕಾಕಲೀ ಮತ್ತು ಅಂತರಗಳು (ಋ) ಇದು (ಸಂ)ಪೂರ್ಣ (ರಾಗವಾಗಿದೆ). (ೠ) ಕಶ್ಯಪನ ಮತದಂತೆ ನಿಷಾದಗಾಂಧಾರಗಳ ಲೋಪದಿಂದ ಇದು ಔಡುವಿತವಾಗುತ್ತದೆ. (ಎ) ಇದರ ವಿನಿಯೋಗವು ತೀವ್ರ (ಉದ್ಭಟ)ವಾದ ನಾಟ್ಯದಲ್ಲಿಯೂ ಕಾಮಪೀಡಿತ(ನಾಯಕ?)ನ ಹಾಗೂ ಅವನ ಕಂಚುಕಿಯ ಪ್ರವೇಶದಲ್ಲಿಯೂ (ಇರುತ್ತದೆ). (ಏ) (ಇದರಲ್ಲಿ ಪ್ರಕಟವಾಗಬೇಕಾದ) ರಸವು ಬೀಭತ್ಸ ಇತ್ಯಾದಿ. (ಐ) (ಇದರ) ಮೂರ್ಛನೆಯು ಧೈವತದಿಂದ ಪ್ರಾರಂಭವಾಗುತ್ತದೆ. (ಒ) (ಇದರ) ವರ್ಣವು ಆರೋಹೀ. (ಓ) (ಇದರ ತಾಳದ) ದಕ್ಷಿಣ(ಮಾರ್ಗ)ದಲ್ಲಿ ಕಲಾ(ಪ್ರಮಾಣವಿದೆ), ವಾರ್ತಿಕದಲ್ಲಿ ಕಲಾ(ಇದೆ), ಚಿತ್ರದಲ್ಲಿ ಕಲಾ (ಇದೆ). (ಔ) ಸ್ವರ(ಗಳೂ) ಪದ(ಗಳೂ ಇರುವ) ಗೀತದಲ್ಲಿ ಚಚ್ಚತ್ಪುಟ ಇತ್ಯಾದಿ ತಾಳ(ಗಳನ್ನು ಬಳಸಬೇಕು).                                                                   44

____

[೮. ಮಾಲವಕೈಶಿಕಃ]

೬೯೬   ಕೈಶಿಕೀಜಾತಿಸಂಭೂತಃ ಷಡ್ಜಾಂಶನ್ಯಾಸಸಂಯುತಃ |
ದುರ್ಬಲೋ ಧೈವತೇನ ಸ್ಯಾದ್ ರಾಗೋ ಮಾಲವಕೈಶಿಕಃ                                                        || ೭೫ ||

೬೯೭   ಪಂಚಮಂ ಕೇಚಿದಿಚ್ಛಂತಿ ಚಾಸ್ಯ ವೈ ನ್ಯಾಸಕರ್ಮಣಿ |
ಗಾಂಧಾರಂ ಚ ತಥಾ ಚಾನ್ಯೇ ತದ್ಧ ಲಕ್ಷ್ಯೇ ನ ದೃಶ್ಯತೇ                                                           || ೭೬ ||

೬೯೮   (ಅ) ಅಸ್ಯಾರ್ಥಃ- ಮಾಲವಕೈಶಿಕೋ ಮಧ್ಯಮಗ್ರಾಮಸಂಬಂಧಃ ಕೈಶಿಕೀ ಜಾತೇರ್ಜಾತತ್ವಾತ್ | (ಆ) ಷಡ್ಜೋ ಗ್ರಹೋ s೦ಶೋ ನ್ಯಾಸಶ್ಚ | (ಇ) ಧೈವತಸ್ಯಾತ್ರಾಲ್ಪತ್ವಮ್ | (ಈ) ಪ್ರಯೋಗೇ ನಿಷಾದೋ s ತ್ರ ಕಾಕಲೀ | (ಉ) ಪೂರ್ಣಸ್ವರಶ್ಚಾಯಮ್ | (ಊ) ವಿಪ್ರಲಂಭೇ ಶೃಂಗಾರೇ ಚಾಸ್ಯ ವಿನಿಯೋಗಃ | (ಋ) ವೀರಾದಿಕೋ ರಸಃ | (ೠ) ಷಡ್ಜಾದಿಮೂರ್ಛನಾ | (ಎ) ಆರೋಹೀ ವರ್ಣಃ | (ಏ) ಅಲಂಕಾರಃ ಪ್ರಸನ್ನಮಧ್ಯಮಃ | (ಐ) ದಕ್ಷಿಣೇ ಕಲಾ, ವಾರ್ತಿಕೇ ಕಲಾ, ಚಿತ್ರೇ ಕಲಾ | (ಒ) ಸ್ವರಪದಗೀತೇ ಚಚ್ಚತ್ಪುಟಾದಿ ತಾಲಃ |                        45

[ವೇಸರಾಣಾಂ ಗ್ರಾಮವಿಭಾಗಃ]

೬೯೯   (ಅ) ಇದಾನೀಂ ವೇಸರಾಣಾಂ ಗ್ರಾಮವಿಶೇಷೋ ದರ್ಶ್ಯತೇ –                                                              46

೭೦೦   ಟಕ್ಕರಾಗಶ್ಚ ಸೌವೀರಸ್ತಥಾ ವೈ ಟಕ್ಕಕೈಶಿಕಃ |
ಬೋಟ್ಟರಾಗಶ್ಚ ಷಡ್ಜಾಖ್ಯೇ ಭವೇದ್ ವೇಸರಷಾಡವಃ                                                         || ೭೭ ||

೭೦೧   ಹಿಂದೋಲಕಸ್ತು ವಿಜ್ಞೇಯೋ ಮಧ್ಯಮಗ್ರಾಮಸಂಭವಃ |
ಮಾಲವಪಂಚಮಶ್ಚೈವ ಮಾಲವಕೈಶಿಕಸ್ತಥಾ                                                                      || ೭೮ ||

೭೦೨   ಇತಿ ವೇಸರಕಾಃ ಪ್ರೋಕ್ತಾಃ ಸರ್ವೇ ನಿಶ್ಚಿತಲಕ್ಷಣಾಃ |
ಸ್ವರಾಣಾಂ ದೃಶ್ಯತೇ ವೇಗಸ್ತೇನ ವೇಗಸ್ವರಾಃ ಸ್ಮೃತಾಃ                                                          || ೭೯ ||

ಪಾಠವಿಮರ್ಶೆ : ೬೯೬ಅ-ಈ ೬೯೭ಅ-ಈ, ಅ ೬೯೮ಈ, ಊ ೬೯೯ಅ ೭೦೧ಅ

—-

[೮. ಮಾಲವಕೈಶಿಕ]

೬೯೬   ಮಾಲವಕೈಶಿಕರಾಗವು ಕೈಶಿಕೀಜಾತಿಯಲ್ಲಿ ಹುಟ್ಟಿದೆ, ಷಡ್ಜವನ್ನು ಅಂಶ, ನ್ಯಾಸಗಳನ್ನಾಗಿ ಹೊಂದಿದೆ. (ಇದರಲ್ಲಿ) ಧೈವತವು ದುರ್ಬಲವಾಗಿದೆ.                                                                                                                             ೭೫

೬೯೭   ಇದರಲ್ಲಿ ನ್ಯಾಸವನ್ನು ಮಾಡುವಾಗ ಕೆಲವರು ಪಂಚಮವನ್ನು (ನ್ಯಾಸ ಸ್ವರವಾಗಿರಬೇಕೆಂದು) ಅಪೇಕ್ಷಿಸುತ್ತಾರೆ. ಬೇರೆಯವರು ಗಾಂಧಾರವನ್ನು (ನ್ಯಾಸವಾಗಿರಬೇಕೆಂದು) ಅಪೇಕ್ಷಿಸುತ್ತಾರೆ. (ಆದರೆ) ಇದು ಲಕ್ಷ್ಯದಲ್ಲಿ ಕಂಡುಬರುವುದಿಲ್ಲ.          ೭೬

೬೯೮   (ಅ) ಇದರ ಅರ್ಥವು [ಹೀಗಿದೆ]: ಮಾಲವಕೈಶಿಕವು ಕೈಶಿಕೀಜಾತಿಯಿಂದ ಹುಟ್ಟಿರಲಾಗಿ ಮಧ್ಯಮಗ್ರಾಮಕ್ಕೆ ಸಂಬಂಧಿಸಿದೆ. (ಆ) ಷಡ್ಜವು (ಇದರ) ಗ್ರಹ, ಅಂಶ ಮತ್ತು ನ್ಯಾಸ. (ಇ) ಇದರಲ್ಲಿ ಧೈವತಕ್ಕೆ ಅಲ್ಪತ್ವವಿದೆ. (ಈ) ಇದರ ಪ್ರಯೋಗದಲ್ಲಿ ನಿಷಾದವು ಕಾಕಲಿಯಾಗಿದೆ. (ಉ) ಇದು (ಸಂ)ಪೂರ್ಣ ಸ್ವರ(ಗಳನ್ನುಳ್ಳ ರಾಗ). (ಊ) ಇದರ ವಿನಿಯೋಗವು ವಿಪ್ರಲಂಭ ಶೃಂಗಾರದಲ್ಲಿ (ಆಗಬೇಕು). (ಋ) ವೀರ ಇತ್ಯಾದಿ ರಸ(ಗಳಲ್ಲಿ ಇದನ್ನು ಪ್ರಯೋಗಿಸಬೇಖು). (ೠ) ಇದರ ಮೂರ್ಛನೆಯು ಷಡ್ಜದಿಂದ ಮೊದಲಾಗುತ್ತದೆ. (ಎ) ಆರೋಹೀವರ್ಣ(ವನ್ನು ಇದರಲ್ಲಿ ಬಳಸಬೇಕು). (ಏ) (ಇದರಲ್ಲಿ ಉಪಯೋಗಿಸಬೇಕಾದುದು) ಪ್ರಸನ್ನಮಧ್ಯ ಅಲಂಕಾರ. (ಐ) (ಇದರ ತಾಳದ) ದಕ್ಷಿಣ(ಮಾರ್ಗ)ದಲ್ಲಿ ಕಲಾ(ಪ್ರಮಾಣವಿದೆ). ವಾರ್ತಿಕದಲ್ಲಿ ಕಲಾ(ಇದೆ), ಚಿತ್ರದಲ್ಲಿ ಕಲಾ (ಇದೆ). (ಒ) ಸ್ವರ(ಗಳೂ)ಪದ(ಗಳೂ ಇರುವ) ಗೀತದಲ್ಲಿ ಚಚ್ಚತ್ಪುಟವೇ ಮೊದಲಾದ ತಾಳ(ಗಳನ್ನು ಪ್ರಯೋಗಿಸಬೇಕು).                                                                                                                         45

[ವೇಸರರಾಗಗಳನ್ನು ಗ್ರಾಮಗಳಲ್ಲಿ ವಿಭಾಗಿಸುವುದು]

೬೯೯   (ಆ) ಈಗ ವೇಸರರಾಗಗಳಲ್ಲಿ ಗ್ರಾಮದ ವಿಶೇಷತೆಯನ್ನು (=ಯಾವ ಗ್ರಾಮದಲ್ಲಿ ಯಾವ ರಾಗ ಎಂಬುದನ್ನು) ತೋರಿಸಲಾಗುವುದು.  46

೭೦೦   ಟಕ್ಕರಾಗ, ಅಂತೆಯೇ ಸೌವೀರ, ಟಕ್ಕಕೈಶಿಕ, ಬೋಟ್ಟರಾಗ (ಮತ್ತು) ವೇಸರಷಾಡವ – (ಇವು) ಷಡ್ಜ(ಗ್ರಾಮ) ಎಂಬುದರಲ್ಲಿ ಇರುತ್ತವೆ.          ೭೭

೭೦೧   ಹಿಂದೋಲವು ಮಧ್ಯಮಗ್ರಾಮದಲ್ಲಿ ಹುಟ್ಟಿದೆಯೆಂದು ತಿಳಿಯಬೇಕು. ಮಾಲವಪಂಚಮವೂ ಮಾಲವಕೈಶಿಕವೂ ಹಾಗೆಯೇ (ಮಧ್ಯಮಗ್ರಾಮದಲ್ಲಿ ಹುಟ್ಟಿವೆ).                                                                                                      ೭೮

೭೦೨   ಹೀಗೆ ನಿಶ್ಚಯಮಾಡಿದ ಲಕ್ಷಣಗಳನ್ನುಳ್ಳ ಎಲ್ಲ ವೇಸರ(ರಾಗ)ಗಳನ್ನೂ ಹೇಳಿಯಾಯಿತು. ಸ್ವರಗಳಲ್ಲಿ ವೇಗವು ಕಂಡುಬರುವುದರಿಂದ (ಇವು) ವೇಗಸ್ವರ(ಎಂಬ ಹೆಸರನ್ನು ಪಡೆದಿವೆ ಎಂದು) ಸ್ಮರಿಸಲಾಗಿದೆ.                                                           ೭೯

____

[ಙ. ಸಾಧಾರಣರಾಗಾಃ]

೭೦೩   ಶುದ್ಧಾ ಭಿನ್ನಾಶ್ಚ ಗೌಡಾಶ್ಚ ತಥಾ ವೇಗಸ್ವರಾಃ ಪರೇ |
ಕಥಿತಾಃ ಸಾಂಪ್ರತಂ ವಕ್ಷ್ಯೇ ಸಪ್ತ ಸಾಧಾರಣಾಂಸ್ತತಃ                                                                || ೮೦ ||

೭೦೪   (ಅ) ನನು ಸಾಧಾರಣಾನಾಂ ಕಥಂ ಸಾಧಾರಣತ್ವಮ್? (ಆ) ಉಚ್ಯತೇ | (ಇ) ಪೂರ್ವೋಕ್ತಾನಾಂ ಸರ್ವೇಷಾಂ ರಾಗಾಣಾಂ ಯಾ ಗೀತಯಸ್ತಾಭಿರ್ಜಾಯಮಾನತ್ವಾತ್ ತೇಷಾಂ ಸಾಧಾರಣತ್ವಂ, ಏತತ್ ಸಾಧಾರಣಗೀತ್ಯಾ ಗೀಯಮಾನತ್ವಾತ್ | (ಈ) ತಥಾ ಚಹಾ ಕಶ್ಯಪಃ-  47

೭೦೫   “ಸಪ್ತ ಸಾಧಾರಣಾಃ ಪ್ರೋಕ್ತಾಃ ಸರ್ವಗೀತಿಸಮಾಶ್ರಯಾಃ”                                                         || ೮೧ ||

೭೦೬   (ಅ) ನನು ಕಶ್ಯಪಮುನಿಷಾ ನರ್ತರಾಗಸ್ಯ ಕಿಮಿತ್ಯಾದೌ ನಿರ್ದೇಶಃ ಕೃತಃ? (ಆ) ಉಚ್ಯತೇ | (ಇ) ಉದ್ಭಟಚಾರೀಮಂಡಲಾಜೌ ವಿನಿಯುಜ್ಯಮಾನತ್ವಾನ್ಮುಖ್ಯತ್ವಮಿತ ಕಶ್ಯಪಮತೇ | (ಈ) ದುರ್ಗಾಶಕ್ತಿಮತೇ ತು ಷಡ್ಜಕೈಶಿಕ ಏವ ಮುಖ್ಯಃ | (ಉ) ಕುತಃ? (ಊ) ಷಾಡವತ್ವೇನ ಕ್ರಮಾಯತತ್ವಾತ್‌ | (ಋ) ತದ್ಯಥಾ –                                                                              48

[೧. ನರ್ತರಾಗ]

೭೦೭   ಪಂಚಮಾಂಶೋ ಮಧ್ಯಮಾಂತಃ ಪಂಚಮೀಮಧ್ಯವೋದ್ಭವಃ |
ನರ್ತರಾಗಸ್ತು ವಿಜ್ಞೇಯಃ ಸ್ವಲ್ಪದ್ವಿಶ್ರುತಿಕಸ್ವರಃ                                                                   || ೮೨ ||

೭೦೮   (ಅ) ಅಸ್ಯಾರ್ಥಃ- ನರ್ತರಾಗೋ ಮಧ್ಯಮಗ್ರಾಮಸಂಬಂಧಃ ಪಂಚಮೀ ಮಧ್ಯಮೋದ್ಭವತ್ವಾತ್ | (ಆ) ಪಂಚಮೋ ಗ್ರಹೋs೦ಶಶ್ಚ | (ಇ) ಮಧ್ಯಮೋ ನ್ಯಾಸಃ | (ಈ) ನಿಷಾದಗಾಂಧಾರಯೋರತ್ರಾಲ್ಪತ್ವಮ್ (ಉ)ನಿಷಾದೋ sತ್ರ ಕಾಕಲೀ | (ಊ) ಉದ್ಭಟಚಾರೀಮಂಡಲಾಜೌ ಚಾಸ್ಯ ವಿನಿಯೋಗಃ | (ಋ) ಶೃಂಗಾರಾದಿ ರಸಃ | (ೠ) ಪಂಚಮಾದಿಮೂರ್ಛನಾ | (ಎ) ಅಲಂಕಾರಃ ಪ್ರಸನ್ನಮಧ್ಯಮಃ | (ಏ) ವರ್ಣಃ ಸಂಚಾರೀ | (ಐ) ಇತಿ ಕಶ್ಯಪ ಮತೇ |                                                                                               49

ಪಾಠವಿಮರ್ಶೆ : ೭೦೨ ಇಅ ಇಈ ೭೦೪ಆ ಇ ೭೦೫ಅ.ಇ ೭೦೭ಅಈ, ಈ ೭೦೮ಊ,ಋ

—-

[ಙ. ಸಾಧಾರಣರಾಗಗಳು]

೭೦೩   ಶುದ್ಧ, ಭಿನ್ನ, ಗೌಡ, ಅಲ್ಲದೆ ನಂತರದ ವೇಗಸ್ವರ (ಎಂಬ ರಾಗಗಳ ಲಕ್ಷಣಗಳನ್ನು ಈವರೆಗೆ) ಹೇಳಲಾಯಿತು. ಈಗ ಏಳು ಸಾಧಾರಣ(ರಾಗ)ಗಳನ್ನು ನಿರೂಪಿಸುತ್ತೇನೆ.                                                                                            ೮೦

೭೦೪   (ಅ) [ಪ್ರಶ್ನೆ:] ಸಾಧಾರಣ(ರಾಗ)ಗಳ ಸಾಧಾರಣತ್ವವು ಹೇಗೆ (ಉಂಟಾಗುತ್ತದೆ)? (ಆ) (ಉತ್ತರವನ್ನು) ಹೇಳಲಾಗುವುದು: (ಇ) ಹಿಂದೆ ನಿರೂಪಿಸಿರುವ ಎಲ್ಲಾ ರಾಗಗಳ ಗೀತಿಗಳಲ್ಲಿಯೂ ಹುಟ್ಟಿರುವುದರಿಂದ ಅವುಗಳಲ್ಲಿ ಸಾಧಾರಣತ್ವ(ವಿದೆ); ಸಾಧಾರಣ ಗೀತಿಯಿಂದ ಇದನ್ನು ಹಾಡುವುದರಿಂದ(ಲೂ ಸಾಧಾರಣತ್ವವು ಉಂಟಾಗುತ್ತದೆ). (ಈ ವಿಷಯದಲ್ಲಿ) ಕಶ್ಯಪನು ಹೀಗೆ ಹೇಳುತ್ತಾನೆ.       47

೭೦೫   “ಎಲ್ಲಾ ಗೀತಿಗಳನ್ನು ಆಶ್ರಯಿಸುವುದರಿಂದ (ಈ) ಏಳು ರಾಗಗಳು ಸಾಧಾರಣಗಳು (ಎಂದು) ಹೇಳಿದೆ.”         ೮೧

೭೦೬   (ಅ) [ಪ್ರಶ್ನೆ:] ಕಶ್ಯಪ ಮುನಿಯು ನರ್ತರಾಗ(ದ ಲಕ್ಷಣ)ವನ್ನು ಮೊಟ್ಟಮೊದಲೇ ಏಕೆ ನಿರೂಪಿಸಿದ್ದಾನೆ? (ಆ) (ಉತ್ತರವನ್ನು) ಹೇಳಲಾಗುವುದು. (ಇ) ಉದ್ಧತವಾದ ಚಾರೀ ಮತ್ತು ಮಂಡಲಗಳ (ನೃತ್ತ-ನೃತ್ಯಗಳ)ಲ್ಲಿಯೂ ಯುದ್ಧ(ದ ಅಭಿನಯ)ದಲ್ಲಿಯೂ ಇದು ವಿನಿಯೋಗಗೊಳ್ಳುವುದರಿಂದ ಇದು ಮುಖ್ಯವೆಂದು ಕಶ್ಯಪನು ಅಭಿಪ್ರಾಯಪಡುತ್ತಾನೆ. (ಈ) ದುರ್ಗಾಶಕ್ತಿಯ ಮತದಲ್ಲಿ ಷಡ್ಜಕೈಶಿಕವೇ ಮುಖ್ಯ. (ಉ) ಏಕೆ? (ಊ) (ಇದು ತನ್ನ) ಷಾಡವತ್ವವನ್ನು ಕ್ರಮವಾಗಿ(ದೀರ್ಘವಾಗಿ, ಪಾರಂಪರಿಕವಾಗಿ) <ಆಯತ>ಪಡೆದುಕೊಂಡಿದೆ, ಆದುದರಿಂದ. (ಋ) ಇದು ಹೇಗೆಂದರೆ –                                                                                                 48

[೧. ನರ್ತರಾಗ]

೭೦೭   ನರ್ತರಾಗವು ಪಂಚಮೀ ಮತ್ತು ಮಧ್ಯಮಾ(ಜಾತಿ)ಗಳಿಂದ ಹುಟ್ಟಿದೆಯೆಂದೂ, ಪಂಚಮವು (ಅದರ) ಅಂಶವೆಂದೂ, ಮಧ್ಯಮವು ನ್ಯಾಸವೆಂದೂ ಎರಡು ಶ್ರುತಿಗಳನ್ನುಳ್ಳ ಸ್ವರ (=ಗಾಂಧಾರ ನಿಷಾದ)ಗಳು ಅಲ್ಪಸ್ವರಗಳೆಂದೂ ತಿಳಿಯಬೇಕು.          ೮೨

೭೦೮   (ಅ) ಇದರ ಅರ್ಥವು [ಹೀಗಿದೆ] : ನರ್ತರಾಗವು ಪಂಚಮೀ ಮತ್ತು ಮಧ್ಯಮಾ (ಜಾತಿ)ಗಳಿಂದ ಉತ್ಪನ್ನವಾಗಿರಲಾಗಿ ಮಧ್ಯಮಗ್ರಾಮವನ್ನು ಸಂಬಂಧಿಸಿದೆ. (ಆ) ಪಂಚಮವು (ಇದರ) ಗ್ರಹ ಮತ್ತು ಅಂಶ. (ಇ) ಮಧ್ಯಮವು (ಇದರ) ನ್ಯಾಸ. (ಈ) (ಇದರಲ್ಲಿ) ನಿಷಾದ ಗಾಂಧಾರಗಳ ಅಲ್ಪತ್ವವಿದೆ. (ಉ) ಇದರಲ್ಲಿ ನಿಷಾದವು ಕಾಕಲೀ. (ಊ) ಇದರ ವಿನಿಯೋಗವು ಉದ್ಧತವಾದ ಚಾರೀ, ಮಂಡಲ ಮತ್ತು ಯುದ್ಧಗಳ(ಅಭಿನಯದ)ಲ್ಲಿ (ಆಗುತ್ತದೆ). (ಋ) (ಇದರಲ್ಲಿ ಪ್ರತೀತವಾಗಬೇಕಾದ ರಸವು) ಶೃಂಗಾರ ಇತ್ಯಾದಿ. (ೠ) ಇದರ ಮೂರ್ಛನೆಯು ಪಂಚಮದಿಂದ ಪ್ರಾರಂಭವಾಗುತ್ತದೆ. (ಎ) (ಇದರಲ್ಲಿ ಪ್ರಯೋಗವಾಗಬೇಕಾದ) ಅಲಂಕಾರವು ಪ್ರಸನ್ನಮಧ್ಯ. (ಏ) (ಮತ್ತು) ವರ್ಣವು ಸಂಚಾರೀ. (ಐ) ಇದು ಕಶ್ಯಪನ ಮತ.                                                                                                                49

____

೭೦೯   (ಅ) ದುರ್ಗಾಶಕ್ತಿಮತೇ ತು ಅಯಮೇವ ರಾಗಃ ಪಂಚಮೀಧೈವತೀ ಜಾತ್ಯೋರ್ಜಾಯತೇ, ಷಡ್ಜಗ್ರಾಮಸಂಬಂಧ ಏವ ಬೋದ್ಭವ್ಯಃ | (ಆ) ಕುತಃ? (ಇ) ಪಂಚಮಸ್ಯ ಚತುಃಶ್ರುತಿಕತ್ವಾದ್ ಧೈವತಸ್ಯ ತ್ರಿಶ್ರುತಿಕತ್ವಾತ್ ಷಡ್ಜಗ್ರಾಮಸಂಬಂಧಃ |                    50

[೨. ಶಕಃ]

೭೧೦   ಸ್ಯಾತ್ ಷಾಡ್ಜೀಧೈವತೀಜಾತ್ಯೋಃ ಷಡ್ಜನ್ಯಾಸಾಂಶಸಂಯುತಃ |
ದುರ್ಬಲಃ ಪಂಚಮೋ ಯತ್ರ ಸ ಶಕಃ ಪರಿಕೀರ್ತಿತಃ                                                                            ೮೩

೭೧೧   (ಅ) ಅಸ್ಯಾರ್ಥಃ- ಶಕಃ ಷಡ್ಜಗ್ರಾಮಸಂಬಂಧಃ, ಷಾಡ್ಜೀಧೈವತೀಸಮುತ್ಪನ್ನತ್ವಾತ್ | (ಆ) ಷಡ್ಜೋ sಸ್ಯ ಗ್ರಹೋ s೦ಶೋ ನ್ಯಾಸಶ್ಚ | (ಇ) ಪಂಚಮಸ್ಯಾಲ್ಪತ್ವಮ್ | (ಈ) ನಿಷಾದಗಾಂಧಾರೌ ಚಾತ್ರ ಕಾಕಲ್ಯಂತರೌ | (ಉ)ಪೂರ್ಣಸ್ವರಶ್ಚಾಯಮ್ | (ಊ)ವೀರಾದ್ಭುತಯೋರ್ಹಾಸ್ಯೇ ನಿರ್ವಹಣೇ ಚಾಸ್ಯವಿನಿಯೋಗಃ | (ಋ) ವೀರಾದಿಕೋ ರಸಃ | (ೠ) ಷಡ್ಜಾದಿಮೂರ್ಛನಾ | (ಎ) ಆರೋಹೀ ವರ್ಣಃ | (ಏ) ಪ್ರಸನ್ನಮಧ್ಯೋ sಲಂಕಾರಃ (ಐ) ದಕ್ಷಿಣೇ ಕಲಾ, ವಾರ್ತಿಕೇ ಕಲಾ, ಚಿತ್ರೇ ಕಲಾ | (ಒ) ಸ್ವರಪದಗೀತೇ ಚಚ್ಚತ್ಪುಟಾದಿ ತಾಲಃ |           51

[೩. ಕಕುಭಃ]

೭೧೨   ಮಧ್ಯಮಾಪಂಚಮೀ ಜಾತ್ಯೋರ್ಧೈವತ್ಯಾಶ್ಚ ವಿನಿಃಸೃತಃ |
ಕಕುಭಃ ಪಂಚಮನ್ಯಾಸೋ ಧೈವತಾಂಶಸ್ತು ನಿರ್ಮಿತಃ                                                              || ೮೪ ||

೭೧೩   (ಅ) ಅಸ್ಯಾರ್ಥಃ – ಕಕುಭಃ ಷಡ್ಜಗ್ರಾಮಸಂಬಂಧಃ, ಮಧ್ಯಮಾಪಂಚಮೀಧೈವತೀ ಸಮುತ್ಪನ್ನೋ sಪಿ ಷಡ್ಜಗ್ರಾಮ ಏವ | (ಆ) ಕುತಃ? (ಇ) ಪಂಚಮಸ್ಯ ಚತುಃಶ್ರುತಿಕತ್ವಾದ್ ಧೈವತಸ್ಯ [ತ್ರಿ)ಶ್ರುತಿಕತ್ವಾಚ್ಚ | (ಈ) ಧೈವತೋ sಸ್ಯಾಂಶೋ ಗ್ರಹಶ್ಚ | (ಉ) ಪಂಚಮೋ ನ್ಯಾಸಃ | (ಊ) ಪೂರ್ಣಸ್ವರಶ್ಚಾಯಮ್ | (ಋ) ಮಧ್ಯಮಕರುಣೇ sಸ್ಯ ವಿನಿಯೋಗಃ | (ೠ) ಕರುಣೋ sಸ್ಯ ರಸಃ (ಎ) ಧೈವತಾದಿಮೂರ್ಛನಾ | (ಏ) ಆರೋಹೀ ವರ್ಣಃ |

ಪಾಠವಿಮರ್ಶೆ : ೭೦೯ಅ-ಈ ಇ ೭೧೦ಅ.ಈ ೭೧೧ಇ.ಊ ೭೧೩ಅ,ೠ

—-

೭೦೯   (ಅ) ಆದರೆ ದುರ್ಗಾಶಕ್ತಿಯ ಮತದಲ್ಲಿ ಇದೇ ರಾಗವು ಪಂಚಮೀ ಮತ್ತು ಧೈವತೀ ಜಾತಿಗಳಿಂದ ಹುಟ್ಟುತ್ತದೆ ; (ಆದುದರಿಂದ) ಷಡ್ಜಗ್ರಾಮದ್ದೇ ಸಂಬಂಧವನ್ನು (ಅದಕ್ಕೆ) ತಿಳಿಯಬೇಕು. (ಆ) ಏಕೆ? (ಇ) (ಇದರ) ಪಂಚಮಕ್ಕೆ ನಾಲ್ಕು ಶ್ರುತಿಗಳೂ ಧೈವತಕ್ಕೆ ಮೂರು ಶ್ರುತಿಗಳೂ ಇರುವುದರಿಂದ ಷಡ್ಜಗ್ರಾಮ(ದ್ದೇ) ಸಂಬಂಧ(ವಿದೆ).                                                                                50

[೨. ಶಕ]

೭೧೦   ಷಾಡ್ಜೀ ಮತ್ತು ಧೈವತೀಜಾತಿಗಳಿಂದ ಆಗಿ(=ಹುಟ್ಟಿ)ರುವುದು, ಷಡ್ಜವು ನ್ಯಾಸ ಮತ್ತು ಅಂಶಗಳಾಗಿರುವುದು, ಪಂಚಮವು ದುರ್ಬಲವಾಗಿರುವುದು ಎಲ್ಲಿದೆಯೋ ಅದು ಶಕ(ರಾಗ)ವೆಂದು ಹೇಳಲಾಗಿದೆ.                                                  ೮೩

೭೧೧   (ಆ) ಇದರ ಅರ್ಥವು [ಹೀಗಿದೆ]: ಷಾಡ್ಜೀ ಮತ್ತು ಧೈವತೀ ಜಾತಿಗಳಿಂದ ಹುಟ್ಟಿರುವುದರಿಂದ ಶಕ(ರಾಗ)ವು ಷಡ್ಜಗ್ರಾಮವನ್ನು ಸಂಬಂಧಿಸಿದೆ. (ಆ) ಷಡ್ಜವು ಇದರ ಗ್ರಹ, ಅಂಶ ಮತ್ತು ನ್ಯಾಸ. (ಇ) (ಇದರಲ್ಲಿ) ಪಂಚಮಕ್ಕೆ ಅಲ್ಪತ್ವಿವಿದೆ. (ಈ) ಇದರಲ್ಲಿ ನಿಷಾದ ಗಾಂಧಾರಗಳು (ಕ್ರಮವಾಗಿ)ಕಾಕಲೀ ಮತ್ತು ಅಂತರಗಳು. (ಉ) ಇದು (ಸಂ)ಪೂರ್ಣ (ರಾಗವಾಗಿದೆ). (ಊ) ವೀರ, ಅದ್ಭುತ ಮತ್ತು ಹಾಸ್ಯಗಳಲ್ಲಿಯೂ (ನಾಟ್ಯಪ್ರಯೋಗದ) ನಿರ್ವಹಣ(ಸಂಧಿ)ದಲ್ಲೂ ಇದರ ವಿನಿಯೋಗ(ವಿರುತ್ತದೆ). (ಋ) (ಇದರಲ್ಲಿ ಪ್ರತೀತವಾಗಬೇಕಾದ) ರಸವು ವೀರ ಇತ್ಯಾದಿ. (ೠ) ಇದರ ಮೂರ್ಛನೆಯು ಷಡ್ಜದಿಂದ ಪ್ರಾರಂಭವಾಗುತ್ತದೆ. (ಎ) (ಇದರಲ್ಲಿ ಪ್ರಯೋಗಿಸಬೇಕಾದ) ವರ್ಣವು ಆರೋಹೀ. (ಏ) (ಮತ್ತು) ಅಲಂಕಾರವು ಪ್ರಸನ್ನಮಧ್ಯ. (ಐ) (ಇದರ ತಾಳದ) ದಕ್ಷಿಣ(ಮಾರ್ಗ)ದಲ್ಲಿ ಕಲಾ (ಪ್ರಮಾಣವಿರುತ್ತದೆ), ವಾರ್ತಿಕದಲ್ಲಿ ಕಲಾ(ಇದೆ), ಚಿತ್ರದಲ್ಲಿ ಕಲಾ(ಇದೆ). (ಒ) ಸ್ವರ(ಗಳೂ) ಪದ(ಗಳೂ ಇರುವ) ಗೀತದಲ್ಲಿ ಚಚ್ಚತ್ಪುಟ ಇತ್ಯಾದಿ ತಾಳ(ಗಳನ್ನು ಪ್ರಯೋಗಿಸಬೇಕು).   51

[೩. ಕಕುಭ]

೭೧೨   ಕಕುಭವು ಮಧ್ಯಮಾ ಮತ್ತು ಪಂಚಮೀ ಜಾತಿಗಳಿಂದಲೂ ಧೈವತೀ(ಜಾತಿ)ಯಿಂದಲೂ ಹೊರಹೊಮ್ಮಿದೆ ; ಪಂಚಮವನ್ನು ನ್ಯಾಸವನ್ನಾಗಿಯೂ ಧೈವತವನ್ನು ಅಂಶವಾಗಿಯೂ ಮಾಡಿಕೊಂಡು ರಚಿತವಾಗಿದೆ.                                          ೮೪

೭೧೩   (ಅ) ಇದರ ಅರ್ಥವು [ಹೀಗಿದೆ]: ಕಕುಭವು ಷಡ್ಜಗ್ರಾಮವನ್ನು ಸಂಬಂಧಿಸಿದೆ; ಮಧ್ಯಮಾ ಪಂಚಮೀ ಧೈವತೀ(ಜಾತಿ)ಗಳಿಂದ ಹುಟ್ಟಿದ್ದರೂ ಷಡ್ಜಗ್ರಾಮವೇ (ಇದರ ನೆಲೆ). (ಆ) ಏಕೆ? (ಇ) ಇದರ ಪಂಚಮಕ್ಕೆ ನಾಲ್ಕು ಶ್ರುತಿಗಳಿರುವುದರಿಂದಲೂ ಧೈವತಕ್ಕೆ ಮೂರು ಶ್ರುತಿಗಳಿರುವುದರಿಂದಲೂ (ಹೀಗಿದೆ). (ಈ) ಧೈವತವು ಇದರ ಅಂಶ ಮತ್ತು ಗ್ರಹ. (ಉ) ಪಂಚಮವು (ಇದರ) ನ್ಯಾಸ. (ಊ) ಇದು (ಸಂ)ಪೂರ್ಣಸ್ವರ(ಗಳನ್ನುಳ್ಳ(ರಾಗ). (ಋ) ಮಧ್ಯಮಕರುಣ ರಸದಲ್ಲಿ ಇದರ ವಿನಿಯೋಗವಾಗುತ್ತದೆ. (ೠ) ಕರುಣವು ಇದರ ರಸ. (ಎ) (ಇದರ) ಮೂರ್ಛನೆಯು ಧೈವತದಿಂದ ಮೊದಲಾಗುತ್ತದೆ.

____

(ಐ) ಪ್ರಸನ್ನಮಧ್ಯೋ sಲಂಕಾರಃ | (ಒ) ದಕ್ಷಿಣೇ ಕಲಾ, ವಾರ್ತಿಕೇ ಕಲಾ, ಚಿತ್ರೇ ಕಲಾ | (ಓ) ಸ್ವರಪದಗೀತೆ ಚಚ್ಚತ್ಪುಟಾದಿ ತಾಲಃ |            52

[೪. ಭಮ್ಮಾಣಪಂಚಮಃ]

೭೧೪   ಷಡ್ಜಾಂಶೋ ಮಧ್ಯಮನ್ಯಾಸಃ ಸ್ವಲ್ಪದ್ವಿಶ್ರುತಿಕಸ್ವರಃ |
ಶುದ್ಧಮಧ್ಯಮಿಕಾಜಾತೇರ್ಭವೇದ್ ಭಮ್ಮಾಣಪಂಚಮಃ                                                         || ೮೫ ||

೭೧೫   (ಅ) ಅಸ್ಯಾರ್ಥಃ- ಭಮ್ಮಾಣಪಂಚಮೋ ಮಧ್ಯಮಗ್ರಾಮಸಂಬಂಧಃ ಶುದ್ಧಮಧ್ಯಮಾ ಜಾತೇಃ ಸಮುತ್ಪನ್ನತ್ವಾತ್ | (ಆ) ಷಡ್ಜೋ ಗ್ರಹೋs೦ಶಶ್ಚ | (ಇ) ಮಧ್ಯಮೋ ನ್ಯಾಸಃ | (ಈ) ನಿಷಾದಗಾಂಧಾರಯೋರಲ್ಪತ್ವಮ್ | (ಉ) ನಿಷಾದೋsತ್ರ ಕಾಕಲೀ | (ಊ) ಪೂರ್ಣಸ್ವರಶ್ಚಾಯಮ್ | (ಋ) ಪಥಿ ಗ್ರೀಷ್ಮೇ ಶ್ರಾಂತೇಷ್ವರಣ್ಯೇಷು ಚಾಸ್ಯ ವಿನಿಯೋಗಃ | (ೠ) ವೀರಾದಿರಸಃ | (ಎ) ಷಡ್ಜಾದಿಮೂರ್ಛನಾ | (ಏ)ಆರೋಹೀ ವರ್ಣಃ | (ಐ) ಪ್ರಸನ್ನಮಧ್ಯೋ sಲಂಕಾರಃ | (ಒ) ದಕ್ಷಿಣೇ ಕಲಾ, ವಾರ್ತಿಕೇ ಕಲಾ, ಚಿತ್ರೇ ಕಲಾ | (ಓ) ಸ್ವರಪದಗೀತೇ ಚಚ್ಚತ್ಪುಟಾದಿ ತಾಲಃ |                                                                                                                  53

[೫. ರೂಪಸಾಧಾರಿತಃ]

೭೧೬   ಷಡ್ಜಮಧ್ಯಾನಿಷಾದಾಭ್ಯಾಂ ರೂಪಸಾಭಾರಿತೋ ಭವೇತ್ |
ಷಡ್ಜಾಂಶೋ ಮಧ್ಯಮನ್ಯಾಸಃ ಪಂಚಮರ್ಷಭಸ್ವಲ್ಪಕಃ                                                                   ೮೬

೭೧೭   (ಅ) ಅಸ್ಯಾರ್ಥಃ- ರೂಪಸಾಧಾರಿತಃ ಷಡ್ಜಗ್ರಾಮಸಂಬಂಧಃ ಷಡ್ಜಮಧ್ಯಮಾ ನಿಷಾದ[ವತೀ] ಸಕಾಶಾದುತ್ಪನ್ನತ್ವಾತ್ | (ಆ) ಷಡ್ಜೋ sಸ್ಯ ಗ್ರಹೋ s೦ಶಶ್ಚ | (ಇ) ಮಧ್ಯಮೋ ನ್ಯಾಸಃ | (ಈ) ಪಂಚಮರ್ಷಭಯೋರಲ್ಪತ್ವಮ್ | (ಉ) ನಿಷಾದೋ sತ್ರ ಕಾಕಲೀ | (ಊ) ಪೂರ್ಣಶ್ಚಾಯಮ್ (ಋ) ವೀರಕರುಣೇ sಸ್ಯ ಪ್ರಯೋಗಃ | (ೠ) ವೀರಾದಿ ರಸಃ | (ಎ) ಷಡ್ಜಾದಿಮೂರ್ಛನಾ | (ಏ) ಆರೋಹೀ ವರ್ಣಃ (ಐ) ಅಲಂಕಾರಃ ಪ್ರಸನ್ನಮಧ್ಯಃ |

ಪಾಠವಿಮರ್ಶೆ: ೭೧೪ ಅ-ಈ. ಆ ೭೧೫ ಇ.ಋ ೭೧೭ಈ.ಏ

—-

(ಏ) (ಇದರಲ್ಲಿ) ಆರೋಹೀವರ್ಣ(ವನ್ನು ಪ್ರಯೋಗಿಸಬೇಕು). (ಐ) (ಇದರ) ಅಲಂಕಾರವು ಪ್ರಸನ್ನಮಧ್ಯ. (ಒ) (ಇದರ) ತಾಳದ ದಕ್ಷಿಣ (ಮಾರ್ಗ)ದಲ್ಲಿ ಕಲಾ ಪ್ರಮಾಣವಿರುತ್ತದೆ, ವಾರ್ತಿಕದಲ್ಲಿ ಕಲಾ(ಇದೆ), ಚಿತ್ರದಲ್ಲಿ ಕಲಾ (ಇದೆ). (ಓ) ಸ್ವರ(ಗಳೂ) ಪದ(ಗಳೂ ಇರುವ) ಗೀತದಲ್ಲಿ ಚಚ್ಚತ್ಪುಟ ಮುಂತಾದ ತಾಳ(ಗಳನ್ನು ಪ್ರಯೋಗಿಸಬೇಕು).                                                                       52

[೪. ಭಮ್ಮಾಣಪಂಚಮ]

೭೧೪   ಭಮ್ಮಾಣಪಂಚಮವು ಶುದ್ಧಮಧ್ಯಮಾಜಾತಿಯಿಂದ ಹುಟ್ಟುತ್ತದೆ; ಷಡ್ಜವನ್ನು ಅಂಶವಾಗಿಯೂ ಮಧ್ಯಮವನ್ನು ನ್ಯಾಸವಾಗಿಯೂ ಎರಡು ಶ್ರುತಿಗಳನ್ನುಳ್ಳವು(ನಿಷಾದ ಗಾಂಧಾರ)ಗಳನ್ನು ಅಲ್ವವಾಗಿಯೂ ಹೊಂದಿದೆ.                                        ೮೫

೭೧೫   (ಅ) ಇದರ ಅರ್ಥವು [ಹೀಗಿದೆ]: ಶುದ್ಧಮಧ್ಯಮಾಜಾತಿಯಲ್ಲಿ ಉತ್ಪತ್ತಿಯಾಗಿರುವುದರಿಂದ ಭಮ್ಮಾಣಪಂಚಮವು ಷಡ್ಜಗ್ರಾಮವನ್ನು ಸಂಬಂಧಿಸಿದೆ. (ಆ) ಷಡ್ಜವು (ಇದರ) ಗ್ರಹ ಮತ್ತು ಅಂಶ. (ಇ) ನಿಷಾದವು ಕಾಕಲೀ. (ಊ) ಇದು (ಸಂ)ಪೂರ್ಣ ಸ್ವರ(ಗಳನ್ನುಳ್ಳ ರಾಗ). (ಋ) ಅರಣ್ಯಗಳಲ್ಲಿ ದಾರಿಯನ್ನು ಬೇಸಿಗೆಯಲ್ಲಿ ನಡೆದು ದಣಿದಿರುವಾಗ ಇದರ ವಿನಿಯೋಗ(ವಾಗಬೇಕು). (ೠ) (ಇದರಲ್ಲಿ ಪ್ರಯೋಗವಾಗಬೇಕಾದುದು) ವೀರ ಇತ್ಯಾದಿ ರಸ(ಗಳು). (ಎ) ಇದರ ಮೂರ್ಛನೆಯು ಷಡ್ಜದಿಂದ ಪ್ರಾರಂಭವಾಗುತ್ತದೆ. (ಏ) (ಇದಕ್ಕೆ ತಕ್ಕ) ವರ್ಣವು ಆರೋಹೀ. (ಐ) (ಮತ್ತು) ಅಲಂಕಾರವು ಪ್ರಸನ್ನಮಧ್ಯ. (ಒ) (ಇದರ ತಾಳದ) ದಕ್ಷಿಣ(ಮಾರ್ಗ)ದಲ್ಲಿ ಕಲಾ(ಪ್ರಮಾಣವಿರುತ್ತದೆ). ವಾರ್ತಿಕದಲ್ಲಿ ಕಲಾ(ಇದೆ), ಚಿತ್ರದಲ್ಲಿ ಕಲಾ(ಇದೆ). (ಓ) ಸ್ವರ(ಗಳೂ) ಪದ(ಗಳೂ ಇರುವ)ಗೀತದಲ್ಲಿ ಚಚ್ಚತ್ಪುಟ ಮುಂತಾದ ತಾಳ(ಗಳನ್ನು ಪ್ರಯೋಗಿಸಬೇಕು).        53

[೫. ರೂಪಸಾಧಾರಿತ]

೭೧೬   ಷಡ್ಜಮಧ್ಯಮಾ ಮತ್ತು ನಿಷಾದಾ (ಜಾತಿ)ಗಳಿಂದ ರೂಪಸಾಧಾರಿತ(ರಾಗ)ವು ಹುಟ್ಟುತ್ತದೆ. ಷಡ್ಜವು (ಇದರ) ಅಂಶ, ಮಧ್ಯಮವು ನ್ಯಾಸ, ಪಂಚಮರಿಷಭಗಳು ಅಲ್ಪ.                                                                                                                ೮೬

೭೧೭   (ಅ) ಇದರ ಅರ್ಥವು (ಹೀಗಿದೆ): ರೂಪಸಾಧಾರಿತವು ಷಡ್ಜಮಧ್ಯಮಾ ನಿಷಾದ(ವತೀ) (ಜಾತಿ)ಗಳಿಂದ ಹುಟ್ಟಿರಲಾಗಿ ಷಡ್ಜಗ್ರಾಮಕ್ಕೆ ಸಂಬಂಧಿಸಿದೆ. (ಆ) ಷಡ್ಜವು ಇದರ ಗ್ರಹ ಮತ್ತು ಅಂಶ. (ಇ) ಮಧ್ಯಮವು (ಇದರ) ನ್ಯಾಸ. (ಈ) (ಇದರ) ಪಂಚಮ ರಿಷಭಗಳಲ್ಲಿ ಅಲ್ಪತ್ವ(ವಿದೆ). (ಉ) ಇದರಲ್ಲಿ ನಿಷಾದವು ಕಾಕಲೀ. (ಊ) ಇದು (ಸಂ)ಪೂರ್ಣ ಸ್ವರ(ಗಳನ್ನುಳ್ಳ ರಾಗ). (ಋ) ವೀರಕರುಣ(ರಸ)ದಲ್ಲಿ ಇದರ ಪ್ರಯೋಗ(ವಿರಬೇಕು). (ೠ) ವೀರ ಇತ್ಯಾದಿಗಳು (ಇದಕ್ಕೆ ಉಚಿತವಾದ)ರಸ(ಗಳು). (ಎ) ಇದರ ಮೂರ್ಛನೆಯು ಷಡ್ಜದಿಂದ ಮೊದಲಾಗುತ್ತದೆ. (ಏ) (ಇದಕ್ಕೆ

____

(ಒ) ದಕ್ಷಿಣೇ ಕಲಾ, ವಾರ್ತಿಕೇ, ಕಲಾ | ಚಿತ್ರೇ ಕಲಾ | (ಓ) ಸ್ವರಪದಗೀತೆ ಚಚ್ಚತ್ಪುಟಾದಿ ತಾಲಃ |                      54

[೬. ಗಾಂಧಾರಪಂಚಮಃ]

೭೧೮   ಗಾಂಧಾರೀರಕ್ತಗಾಂಧಾರ್ಯೋರ್ಜಾತೋ ಗಾಂಧಾರಪಂಚಮಃ |
ಗಾಂಧಾರೋsಸ್ಯ ಭವೇದಂಶೋ ನ್ಯಾಸೋ ಗಾಂಧಾರ ಏವ ಚ                                                  || ೮೭ ||

೭೧೯   (ಅ) ಅಸ್ಯಾರ್ಥಃ- ಗಾಂಧಾರಪಂಚಮೋ ಮಧ್ಯಮಗ್ರಾಮಸಂಬಂಧಃ, ಗಾಂಧಾರೀ ರಕ್ತಗಾಂಧಾರೀಸಮುತ್ಪನ್ನತ್ವಾತ್ | (ಆ) ಯದ್ಯಪಿ ದುರ್ಗಾಶಕ್ತಿಮತೇ ಧೈವತೀಸಮುತ್ಪನ್ನೋ sಸೌ, ತಥಾಪಿ, ಪಂಚಮಸ್ಯ ತ್ರಿಶ್ರುತಿಕತ್ವಾದುಭಯಗ್ರಾಮಜಾತಿಜಾತೋsಪಿ ಮಧ್ಯಮ[ಗ್ರಾಮ]ಸಂಬಂಧ ಏವ | (ಇ) ಗಾಂಧಾರೋsಸ್ಯ ಗ್ರಹೋ s೦ಶೋ ನ್ಯಾಸಶ್ಚ, ಪ್ರಯೋಕ್ತ್ರಪೇಕ್ಷಯಾ ಗಾಂಧಾರೋ ಧೈವತೋ ಭವೇತ್ | (ಈ) ನಿಷಾದೋ sತ್ರ ಕಾಕಲೀ | (ಉ) ಪೂರ್ಣಶ್ಚಾಯಮ್ | (ಊ) ಅದ್ಭುತೇ ವಿಸ್ಮಯೇ ಹಾಸ್ಯೇ ಚಾಸ್ಯ ವಿನಿಯೋಗಃ | (ಋ) ಕರುಣೋ ರಸಃ | (ೠ) ಗಾಂಧಾರಾದಿಮೂರ್ಛನಾ | (ಎ) ಸಂಚಾರೀ ವರ್ಣಃ | (ಏ) ಪ್ರಸನ್ನಮಧ್ಯೋ sಲಂಕಾರಃ | (ಐ) ದಕ್ಷಿಣೇ ಕಲಾ, ವಾರ್ತಿಕೇ ಕಲಾ, ಚಿತ್ರೇ ಕಲಾ | (ಒ) ಸ್ವರಪದಗೀತೇ ಚಚ್ಚತ್ಪುಟಾದಿ ತಾಲಃ |                                                                                     55

[೭. ಷಡ್ಜಶಿಕಃ]

೭೨೦   …………………………………….                                                                                      || ೮೮ ||

[೮. ಪಂಚಮಷಾಡವಃ]

೭೨೧   ಧೈವತ್ಯಾರ್ಷಭಿಕಾಜಾತ್ಯೋರ್ಜಾತಃ ಪಂಚಮಷಾಡವಃ |
ಋಷಭಾಂಶಸಮಾಯುಕ್ತೋ ಮಧ್ಯಮೋ ನ್ಯಾಸ ಏವ ಚ                                                         || ೮೯ ||

ಪಾಠವಿಮರ್ಶೆ: ೭೧೯ಆ,ಇ, ಊ,ಋ ೭೨೦ ೭೨೧ಅ,ಇ

—-

ತಕ್ಕದ್ದು) ಆರೋಹೀ ವರ್ಣ. (ಐ) (ಮತ್ತು) ಅಲಂಕಾರವು ಪ್ರಸನ್ನಮಧ್ಯ. (ಒ) (ಇದರ ತಾಳದ) ದಕ್ಷಿಣ(ಮಾರ್ಗ)ದಲ್ಲಿ ಕಲಾ(ಪ್ರಮಾಣವಿರುತ್ತದೆ), ವಾರ್ತಿಕದಲ್ಲಿ ಕಲಾ(ಇರುತ್ತದೆ), ಚಿತ್ರದಲ್ಲಿ ಕಲಾ(ಇರುತ್ತದೆ). (ಓ) ಸ್ವರ(ಗಳೂ)ಪದ(ಗಳೂ ಇರುವ) ಗೀತದಲ್ಲಿ ಚಚ್ಚತ್ಪುಟ ಇತ್ಯಾದಿ ತಾಳ(ಗಳನ್ನು ಪ್ರಯೋಗಿಸಬೇಕು).                                                                                                       54

[೬. ಗಾಂಧಾರಪಂಚಮ]

೭೧೮   ಗಾಂಧಾರಪಂಚಮ(ರಾಗ)ವು ಗಾಂಧಾರೀ ಮತ್ತು ರಕ್ತಗಾಂಧಾರಿ(ಜಾತಿ)ಗಳಲ್ಲಿ ಹುಟ್ಟಿದೆ; ಇದರ ಅಂಶವು ಗಾಂಧಾರವಾಗುತ್ತದೆ, ನ್ಯಾಸವೂ ಗಾಂಧಾರವೇ.                                                                                                                                 ೮೭

೭೧೯   (ಆ) ಇದರ ಅರ್ಥವು [ಹೀಗಿದೆ] : ಗಾಂಧಾರ ಮತ್ತು ರಕ್ತಗಾಂಧಾರೀ ಜಾತಿಗಳಲ್ಲಿ ಹುಟ್ಟಿರುವುದರಿಂದ ಗಾಂಧಾರಪಂಚಮವು ಮಧ್ಯಮಗ್ರಾಮಕ್ಕೆ ಸಂಬಂಧಿಸಿದೆ. (ಆ) ದುರ್ಗಾಶಕ್ತಿಯ ಮತದ ಪ್ರಕಾರ ಇದು ಧೈವತೀ(ಜಾತಿ)ಯಿಂದ(ಲೂ) ಹುಟ್ಟಿದೆ; (ಹೀಗೆ) ಎರಡೂ ಗ್ರಾಮಗಳಿಗೆ ಸೇರಿದ ಜಾತಿಗಳಿಂದ ಹುಟ್ಟಿದರೂ ಅದರಲ್ಲಿ ಮೂರು ಶ್ರುತಿಗಳ ಪಂಚಮವಿರುವುದರಿಂದ ಅದು ಮಧ್ಯಮ(ಗ್ರಾಮ)ಕ್ಕೇ ಸೇರಿದೆ. (ಇ) ಗಾಂಧಾರವು ಇದರ ಗ್ರಹ, ಅಂಶ ಮತ್ತು ನ್ಯಾಸ ; ಆದರೆ ಪ್ರಯೋಕ್ತೃವಿನ (=ಹಾಡಿ ನುಡಿಸುವವನ) ಆಪೇಕ್ಷೆಯಂತೆ ಗಾಂಧಾರವು ಧೈವತವಾಗಬಹುದು (ಧೈವತವೇ ಗ್ರಹ, ಅಂಶ ಮತ್ತು ನ್ಯಾಸವಾಗಬಹುದು). (ಈ) ಇದರಲ್ಲಿ ನಿಷಾದವು ಕಾಕಲೀ. (ಉ) ಇದು (ಸಂ)ಪೂರ್ಣ (ರಾಗವಾಗಿದೆ). (ಊ) ಇದರ ವಿನಿಯೋಗವು ಅದ್ಭುತ, ವಿಸ್ಮಯ ಮತ್ತು ಹಾಸ್ಯಗಳ (ಸಂದರ್ಭಗಳ)ಲ್ಲಿ (ಆಗಬೇಕು). (ಋ) ಕರುಣ ರಸ (ಪ್ರತೀತಿಗೆ ಇದು ತಕ್ಕುದಾಗಿದೆ) ; (ೠ) ಇದರ ಮೂರ್ಛನೆಯು ಗಾಂಧಾರದಿಂದ ಮೊದಲಾಗುತ್ತದೆ. (ಎ) (ಇದಕ್ಕೆ ಸರಿಯಾದುದು) ಸಂಚಾರೀ ವರ್ಣ. (ಏ) (ಮತ್ತು) ಪ್ರಸನ್ನಮಧ್ಯ ಅಲಂಕಾರ. (ಐ) (ಇದರ ತಾಳದ) ದಕ್ಷಿಣ(ಮಾರ್ಗ)ದಲ್ಲಿ ಕಲಾ(ಪ್ರಮಾಣವು ಇರುತ್ತದೆ), ವಾರ್ತಿಕದಲ್ಲಿ ಕಲಾ(ಇರುತ್ತದೆ), ಚಿತ್ರದಲ್ಲಿ ಕಲಾ (ಇರುತ್ತದೆ). (ಒ) ಸ್ವರ(ಗಳೂ)ಪದ(ಗಳೂ ಇರುವ) ಗೀತದಲ್ಲಿ ಚಚ್ಚತ್ಪುಟ ಇತ್ಯಾದಿ ತಾಳ(ಗಳನ್ನು ಪ್ರಯೋಗಿಸಬೇಕು).                 55

[೭. ಷಡ್ಜಕೈಶಿಕ]

೭೨೦   ………………………………….                                                                                                 ೮೮

[೮. ಪಂಚಮಷಾಡವ]

೭೨೧   ಪಂಚಮಷಾಡವವು ಧೈವತೀ ಮತ್ತು ಆರ್ಷಭೀ(ಜಾತಿ)ಗಳಿಂದ ಹುಟ್ಟಿದೆ. (ಇದು) ರಿಷಭವನ್ನು ಅಂಶವನ್ನಾಗಿ ಕೂಡಿಕೊಂಡಿದೆ ; ಮಧ್ಯಮವೇ (ಅದರ) ನ್ಯಾಸ.                                                                                                                               ೮೯

____

೭೨೨   (ಅ) ಅಸ್ಯಾರ್ಥಃ- ಪಂಚಮಷಾಡವಃ ಷಡ್ಜಗ್ರಾಮಸಂಬಂಧಃ | (ಆ) ಋಷಭೋ sಸ್ಯ ಗ್ರಹೋ s೦ಶಶ್ಚ | (ಇ) ಮಧ್ಯಮೋ ನ್ಯಾಸ | (ಈ) ಪ್ರಯೋಕ್ತ್ರಪೇಕ್ಷಯಾ ಕ್ವ ಚಿದಂಶೋsಪಿ(|) (ಉ) ನಿಷಾದೋsತ್ರ ಕಾಕಲೀ | (ಊ) ಪೂರ್ಣಶ್ಚಾಯಮ್ | (ಋ) ಉದ್ಭಟಚಾರೀಮಂಡಲಾಚೌ ವಿನಿಯೋಗಃ | (ೠ) ವೀರಾದಿರಸಃ | (ಎ) ಋಷಭಾದಿ ಮೂರ್ಛನಾ | (ಏ) ಪ್ರಸನ್ನಾದ್ಯಂತೋ sಲಂಕಾರಃ | (ಐ) ದಕ್ಷಿಣೇ ಕಲಾ, ವಾರ್ತಿಕೇ ಕಲಾ, ಚಿತ್ರೇ ಕಲಾ | (ಒ) ಸ್ವರಪದಗೀತೆ ಚಚ್ಚತ್ಪುಟಾದಿ ತಾಲಃ |                                                                       56

[೯. ರೇವಗುಪ್ತಃ]

೭೨೩   …………………………………                                                                                           || ೯೦ ||

೭೨೪   ಋಷಭಾಂಶೋ ಮಧ್ಯಮಾಂತಃ ಸಂಪೂರ್ಣಸ್ವರಕಸ್ತಥಾ |
ಆರ್ಷಭೀಮಧ್ಯಮಾಜಾತ್ಯೋ ರೇವಗುಪ್ತಃ ಪ್ರಕೀರ್ತಿತಃ                                                             || ೯೧ ||

೭೨೫   (ಅ) ಅಸ್ಯಾರ್ಥಃ- ರೇವಗುಪ್ತಃ ಷಡ್ಜಗ್ರಾಮಸಂಬಂಧಃ | (ಆ) ಆರ್ಷಭೀಮಧ್ಯಮಾ ಜಾತ್ಯೋರುತ್ಪನ್ನೋ sಪಿ ಷಡ್ಜಗ್ರಾಮಸಂಬಂಧ ಏವ ಪಂಚಮಸ್ಯ ಚತುಃಶ್ರುತಿಕತ್ವಾತ್ | (ಇ) ಋಷಭೋ sಸ್ಯ ಗ್ರಹೋ s೦ಶಶ್ಚ | (ಈ) ನ್ಯಾಸ ಮಧ್ಯಮ ಏವ ಚ | (ಉ) ನಿಷಾದೋsತ್ರ ಕಾಕಲೀ | (ಊ) ಪೂರ್ಣಸ್ವರಶ್ಚಾಯಮ್ | (ಋ) ಉದ್ಭಟಚಾರೀಮಂಡಲಾಜೌ ವಿನಿಯೋಗಃ | (ೠ) ವೀರಾದಿ ರಸಃ | (ಎ) ಋಷಭಾದಿಮೂರ್ಛನಾ | (ಏ) ಆರೋಹೀ ವರ್ಣಃ | (ಐ) ಪ್ರಸನ್ನಾಂತೋ sಲಂಕಾರಃ | (ಒ) ದಕ್ಷಿಣೇ ಕಲಾ, ವಾರ್ತಿಕೇ ಕಲಾ, ಚಿತ್ರೇ ಕಲಾ | (ಓ) [ಸ್ವರಪದಗೀತೇ] ಚಚ್ಚತ್ಪುಟಾದಿ ತಾಲಃ |                                                                                                                                        57

ಪಾಠವಿಮರ್ಶೆ : ೭೨೨ಅ, ಈ, ಋ, ಒ ೭೨೩ ೭೨೪ ಆ ೭೨೫ ಋ

—-

೭೨೨   (ಅ) ಇದರ ಅರ್ಥವು (ಹೀಗಿದೆ): ಪಂಚಮಷಾಡವು ಷಡ್ಜಗ್ರಾಮಕ್ಕೆ ಸಂಬಂಧಿಸಿದ್ದು, (ಆ) ರಿಷಭವು ಇದರ ಗ್ರಹ ಮತ್ತು ಅಂಶ. (ಇ)ಮಧ್ಯಮವು (ಅದರ) ನ್ಯಾಸ. (ಈ) ಪ್ರಯೋಕ್ತೃವಿನ(-ಗಾಯಕವಾದಕನ) ಅಪೇಕ್ಷೆಯಿದ್ದರೆ (ಮಧ್ಯಮವು) ಕೆಲವೊಮ್ಮೆ ಅಂಶವೂ (ಆಗುತ್ತದೆ). (ಉ) ಇದರಲ್ಲಿ ನಿಷಾದವು ಕಾಕಲೀ. (ಊ) ಇದು (ಸಂ)ಪೂರ್ಣ (ರಾಗವಾಗಿದೆ). (ಋ) (ಇದರ) ವಿನಿಯೋಗವು ಉದ್ಧತ(=ರಭಸ)ವಾದ ಚಾರೀ, ಮಂಡಲ ಮತ್ತು ಯುದ್ಧ(ದ ಅಭಿನಯ)ಗಳಲ್ಲಿ (ಆಗುತ್ತದೆ). (ೠ) ವೀರ ಮುಂತಾದ ರಸ(ಗಳಲ್ಲಿ ಇದನ್ನು ಪ್ರಯೋಗಿಸಬೇಕು). (ಎ) (ಇದರ) ಮೂರ್ಛನೆಯು ರಿಷಭದಿಂದ ಮೊದಲಾಗುತ್ತದೆ. (ಏ) (ಇದಕ್ಕೆ ತಕ್ಕುದಾದ) ಅಲಂಕಾರವು ಪ್ರಸನ್ನಾದ್ಯಂತ. (ಐ) (ಇದರ ತಾಳದ) ದಕ್ಷಿಣ(ಮಾರ್ಗ)ದಲ್ಲಿ ಕಲಾ (ಪ್ರಮಾಣವಿರುತ್ತದೆ). ವಾರ್ತಿಕದಲ್ಲಿ ಕಲಾ(ಇರುತ್ತದೆ). ಚಿತ್ರದಲ್ಲಿ ಕಲಾ(ಇರುತ್ತದೆ). (ಒ) ಸ್ವರ(ಗಳೂ)ಪದ(ಗಳೂ ಇರುವ) ಗೀತದಲ್ಲಿ ಚಚ್ಚತ್ಪುಟ ಇತ್ಯಾದಿ ತಾಳ(ಗಳನ್ನು ಪ್ರಯೋಗಿಸಬೇಕು).                                                56

[೯. ರೇವಗುಪ್ತ]

೭೨೩   ……………………………….                                                                                                    ೯೦

೭೨೪   ರೇವಗುಪ್ತ(ರಾಗ)ವು ಆರ್ಷಭೀ ಮತ್ತು ಮಧ್ಯಮಾ ಜಾತಿಗಳಿಂದ ಹುಟ್ಟಿದೆ; ರಿಷಭವನ್ನು ಅಂಶವಾಗಿಯೂ ಮಧ್ಯಮವನ್ನು ನ್ಯಾಸವಾಗಿಯೂ ಪಡೆದಿದ್ದು ಸಂಪೂರ್ಣವಾದ ಸ್ವರಗಳನ್ನು ಹೊಂದಿದೆ.                                                                              ೯೧

೭೨೫   (ಅ) ಇದರ ಅರ್ಥವು [ಹೀಗಿದೆ] : ರೇವಗುಪ್ತವು ಷಡ್ಜಗ್ರಾಮಕ್ಕೆ ಸಂಬಂಧಿಸಿದೆ. (ಆ) ಆರ್ಷಭೀ ಮತ್ತು ಮಧ್ಯಮಾಜಾತಿಗಳಲ್ಲಿ ಹುಟ್ಟಿದ್ದರೂ ಸಹ (ಇದರ) ಪಂಚಮಕ್ಕೆ ನಾಲ್ಕು ಶ್ರುತಿಗಳಿರುವುದರಿಂದ ಷಡ್ಜಗ್ರಾಮದೊಡನೆ ಸಂಬಂಧವೇ (ಸಿದ್ಧಿಸುತ್ತದೆ). (ಇ) ರಿಷಭವು ಇದರ ಗ್ರಹ ಮತ್ತು ಅಂಶ. (ಈ) ನ್ಯಾಸವು ಮಧ್ಯಮವೇ. (ಉ) ಇದರಲ್ಲಿ ನಿಷಾದವು ಕಾಕಲೀ. (ಊ) ಇದು (ಸಂ)ಪೂರ್ಣ ಸ್ವರ(ಗಳನ್ನುಳ್ಳ ರಾಗ). (ಋ) (ಇದನ್ನು) ಉದ್ಧತ(=ರಭಸ)ವಾದ ಚಾರೀ ಮತ್ತು ಮಂಡಲಗಳಲ್ಲಿಯೂ ಯುದ್ಧಗಳ(ಅಭಿನಯದ)ಲ್ಲೂ ವಿನಿಯೋಗಿಸಬೇಕು. (ೠ) ವೀರವೇ ಮೊದಲಾದ ರಸ(ಗಳಲ್ಲಿ ಇದರ ಉಪಯೋಗವಾಗುತ್ತದೆ). (ಎ) ಇದರ ಮೂರ್ಛನೆಯು ರಿಷಭದಿಂದ ಮೊದಲಾಗುತ್ತದೆ. (ಏ) ಆರೋಹೀ ವರ್ಣವನ್ನು ಇದರಲ್ಲಿ ಪ್ರಯೋಗಿಸಬೇಕು). (ಐ)ಪ್ರಸನ್ನಾಂತ ಅಲಂಕಾರ(ವನ್ನೂ ಬಳಸಬೇಕು). (ಒ) (ಇದರ ತಾಳದ) ದಕ್ಷಿಣ(ಮಾರ್ಗ)ದಲ್ಲಿ ಕಲಾ (ಪ್ರಮಾಣವಿರುತ್ತದೆ), ವಾರ್ತಿಕದಲ್ಲಿ ಕಲಾ(ಇರುತ್ತದೆ), ಚಿತ್ರದಲ್ಲಿ ಕಲಾ (ಇರುತ್ತದೆ). (ಓ) ಸ್ವರ(ಗಳೂ) ಪದ(ಗಳೂ ಇರುವ) ಗೀತದಲ್ಲಿ ಚಚ್ಚತ್ಪುಟವೇ ಮೊದಲಾದ ತಾಳ(ಗಳನ್ನು ಪ್ರಯೋಗಿಸಬೇಕು).                                                                                                       57

____

[೧೦. ಟಕ್ಕಸೈಂಧವಃ]

೭೨೬   ಸ್ಯಾತ್ ಷಾಡ್ಜೀಧೈವತೀಜಾತ್ಯೋಷ್ಟಕ್ಕರಾಗಸ್ತು ಸೈಂಧವಃ |
ಷಡ್ಜಾಂಶನ್ಯಾಸಸಂಯುಕ್ತಃ ಪಂಚಮೇನ ತು ದುರ್ಬಲಃ                                                            || ೯೨ ||

೭೨೭   (ಅ) ಅಸ್ಯಾರ್ಥಃ- ಟಕ್ಕಸೈಂಧವರಾಗಃ ಷಡ್ಜಗ್ರಾಮಸಂಬಂಧಃ, ಷಾಡ್ಜೀಧೈವತೀ ಸಮುತ್ಪನ್ನತ್ವಾತ್ | (ಆ) ಷಡ್ಜೋ sಸ್ಯ ಗ್ರಹೋ s೦ಶೋ ನ್ಯಾಸಶ್ಚ | (ಇ) ನಿಷಾದ ಗಾಂಧಾರೌ ಚಾತ್ರ ಕಾಕಲ್ಯಂತರೌ | (ಈ) ಪಂಚಮಸ್ಯಾಲ್ಪತ್ವಮ್ | (ಉ) ಪೂರ್ಣ ಸ್ವರಶ್ಚಾಯಮ್ | (ಊ) ಯುದ್ಧವೀರೇ sಸ್ಯ ವಿನಿಯೋಗಃ | (ಋ) ವೀರಾದಿಕೋ ರಸಃ | (ೠ) ಷಡ್ಜಾದಿಮೂರ್ಛನಾ | (ಎ) ಆರೋಹೀ ವರ್ಣಃ | (ಏ) ಪ್ರಸನ್ನಾಂತೋ sಲಂಕಾರಃ | (ಐ) ದಕ್ಷಿಣೇ ಕಲಾ, ವಾರ್ತಿಕೇ ಕಲಾ, ಚಿತ್ರೇ ಕಲಾ | (ಒ) ಸ್ವರಪದಗೀತೆ ಚಚ್ಚತ್ಪುಟಾದಿ ತಾಲಃ |        58

[ಸಾಧಾರಣರಾಗಾಣಾಂ ಗ್ರಾಮವಿಭಾಗಃ]

೭೨೮   (ಅ) ಇದಾನೀಂ ಸಾಧಾರಣಾನಾಂ ಗ್ರಾಮವಿಭಾಗಃ ಪ್ರದರ್ಶ್ಯತೇ –                                                         59

೭೨೯   ಭಮ್ಮಾಣಪಂಚಮೋ ಜ್ಞೇಯೋ ಮಧ್ಯಮಗ್ರಾಮಸಂಭವಃ |
ಗಾಂಧಾರಪಂಚಮೋ ನರ್ತಃ ಷಡ್ಜಕೈಶಿಕ ಏವ ಚ                                                                    || ೯೩ ||

೭೩೦   ರೂಪಸಾಧಾರಿತೋ ರಾಗಃ ಶಕಃ ಕಕುಭ ಏವ ಚ |
ರೇವಗುಪಸ್ತಸ್ತು ಷಡ್ಜಾಖ್ಯೇ ಜ್ಞೇಯಃ ಪಂಚಮಷಾಡವಃ                                                         || ೯೪ ||
ಸಪ್ತ [ದಶ?] ಸಾಧಾರಣಾಃ ಪ್ರೋಕ್ತಾ ಗ್ರಾಮದ್ವಯಸಮಾಶ್ರಯಾಃ

[ಗ್ರಾಮರಾಗಾಣಾಂ ಮೂರ್ಛನಾನಿರ್ದೇಶಸ್ಯ ಆಧಾರಃ]

೭೩೧   (ಅ) ನನು ಪೂರ್ವೋಕ್ತಾನಾಂ [ಗ್ರಾಮರಾಗಾಣಾಂ] ಮೂರ್ಛನಾವಿಶೇಷನಿರ್ದೇಶಃ ಕಸ್ಮಾಜ್‌ಜ್ಞಾಯತ ಇತಿ [ಚೇತ್], ಉಚ್ಯತೇ | (ಆ) ಆಪ್ತವಚನಾನ್ಮೂರ್ಛನಾನಿರ್ದೇಶೋ ಜ್ಞಾಯತೇ | (ಇ) ತಥಾ ಚಾಹ ಕಾಶ್ಯಪಃ-                                             60

ಪಾಠವಿಮರ್ಶೆ: ೭೨೭ಇ ಊ ೭೩೦ಈ, ಊ ೭೩೧ಅ,ಇ

—-

[೧೦. ಟಕ್ಕಸೈಂಧವ]

೭೨೬   ಟಕ್ಕಸೈಂಧವರಾಗವು ಷಾಡ್ಜೀ ಮತ್ತು ಧೈವತೀಜಾತಿಗಳಿಂದ ಆಗಿದೆ. ಅದು ಷಡ್ಜವನ್ನು ಅಂಶ, ನ್ಯಾಸಗಳಾಗಿ ಕೂಡಿಕೊಂಡಿದೆ ; ಪಂಚಮ (ಸ್ವರ) ದಿಂದ ದುರ್ಬಲವಾಗಿದೆ.                                                                                                           ೯೨

೭೨೭   (ಅ) ಇದರ ಅರ್ಥವು [ಹೀಗಿದೆ]: ಟಕ್ಕಸೈಂಧವರಾಗವು ಷಾಡ್ಜೀ, ಧೈವತೀ(ಜಾತಿ)ಗಳಿಂದ ಹುಟ್ಟಿರಲಾಗಿ ಷಡ್ಜಗ್ರಾಮಕ್ಕೆ ಸಂಬಂಧಿಸಿದೆ. (ಆ) ಷಡ್ಜವು ಇದರ ಗ್ರಹ, ಅಂಶ ಮತ್ತು ನ್ಯಾಸ. (ಇ)ಇದರಲ್ಲಿ ನಿಷಾದ ಮತ್ತು ಗಾಂಧಾರಗಳು (ಕ್ರಮವಾಗಿ) ಕಾಕಲೀ ಮತ್ತು ಅಂತರ. (ಈ) (ಇದರ) ಪಂಚಮದಲ್ಲಿ ಅಲ್ಪತ್ವ(ವಿದೆ). (ಉ) ಇದು (ಸಂ)ಪೂರ್ಣ ಸ್ವರ(ಗಳನ್ನುಳ್ಳ ರಾಗ). (ಊ) ಯುದ್ಧವೀರ (ಸನ್ನಿವೇಶ)ದಲ್ಲಿ ಇದನ್ನು ವಿನಿಯೋಗಿಸಬೇಕು. (ಋ) ವೀರವೇ ಮೊದಲಾದ ರಸ(ಗಳಲ್ಲಿ ಇದನ್ನು ಬಳಸಬೇಕು). (ೠ) ಇದರ ಮೂರ್ಛನೆಯು ಷಡ್ಜದಿಂದ ಮೊದಲಾಗುತ್ತದೆ. (ಎ) ಆರೋಹೀ ವರ್ಣವು (ಇದಕ್ಕೆ ತಕ್ಕುದಾಗಿದೆ). (ಏ) (ಇದರಲ್ಲಿ ಬಳಸಬೇಕಾದುದು) ಪ್ರಸನ್ನಾಂತ ಅಲಂಕಾರ. (ಐ) (ಇದರ ತಾಳದ) ದಕ್ಷಿಣ(ಮಾರ್ಗ)ದಲ್ಲಿ ಕಲಾ (ಪ್ರಮಾಣವಿರುತ್ತದೆ), ವಾರ್ತಿಕದಲ್ಲಿ ಕಲಾ(ಇರುತ್ತದೆ), ಚಿತ್ರದಲ್ಲಿ ಕಲಾ (ಇರುತ್ತದೆ). (ಒ) ಸ್ವರ(ಗಳೂ) ಪದ(ಗಳೂ ಇರುವ)ಗೀತದಲ್ಲಿ ಚಚ್ಚತ್ಪುಟ ಮುಂತಾದ ತಾಳ(ಗಳನ್ನು ಪ್ರಯೋಗಿಸಬೇಕು).                                              58

[ಸಾಧಾರಣರಾಗಗಳನ್ನು ಗ್ರಾಮಗಳಲ್ಲಿ ವಿಭಾಗಿಸುವುದು]

೭೨೮   (ಅ) ಈಗ ಸಾಧಾರಣ(ರಾಗ)ಗಳ(ನ್ನು) ಗ್ರಾಮ(ಗಳಲ್ಲಿ) ವಿಭಾಗ(ಮಾಡುವ ಕ್ರಮ)ವನ್ನು ತೋರಿಸಲಾಗುವುದು-59

೭೨೯   ಭಮ್ಮಾಣಪಂಚಮವು ಮಧ್ಯಮಗ್ರಾಮದಲ್ಲಿ ಹುಟ್ಟಿದ್ದೆಂದು ತಿಳಿಯಬೇಕು. ಗಾಂಧಾರಪಂಚಮ, ನರ್ತ, ಷಡ್ಜಕೈಶಿಕ(ಗಳೂ ಮಧ್ಯಮಗ್ರಾಮದಲ್ಲಿಯೇ ಹುಟ್ಟಿವೆ).                                                                                                 ೯೩

೭೩೦   ರೂಪಸಾಧಾರಿತರಾಗ, ಶಕ, ಕಕುಭ, ರೇವಗುಪ್ತಗಳು ಷಡ್ಜ(ಗ್ರಾಮ)ವೆಂಬುದರಲ್ಲಿ ಹುಟ್ಟಿವೆಯೆಂದು ತಿಳಿಯಬೇಕು. ಪಂಚಮಪಾಡವವೂ (ಅಷ್ಟೆ). ಎರಡುಗ್ರಾಮಗಳಲ್ಲಿ ನೆಲೆಸಿರುವ ಈ ಏಳು (ಹತ್ತು?) ಸಾಧಾರಣ(ರಾಗ)ಗಳನ್ನು ಹೇಳಿಯಾಗಿದೆ.              ೯೪

[ಗ್ರಾಮ ರಾಗಗಳಿಗೆ ಮೂರ್ಛನೆಗಳನ್ನು ನಿರ್ದೇಶಿಸುವುದಕ್ಕೆ ಆಧಾರ]

೭೩೧   (ಅ) [ಪ್ರಶ್ನೆ:] ಈ ಹಿಂದೇ ಹೇಳಿರುವ [ಗ್ರಾಮರಾಗಗಳಿಗೆ] ಇಂತಿಂತಹ ಮೂರ್ಛನೆಯೆಂಬ ನಿರ್ದೇಶವು ಎಲ್ಲಿಂದ(=ಯಾವ ಪ್ರಮಾಣದಿಂದ) ತಿಳಿಯುತ್ತದೆ (ಎಂದರೆ,) (ಉತ್ತರವನ್ನು) ಹೇಳಲಾಗುವುದು : (ಆ) (ಹಿರಿಯರಾದ) ಆಪ್ತರ ಮಾತಿನಿಂದ (ಇಂತಹ) ಮೂರ್ಛನಾನಿರ್ದೇಶವು ತಿಳಿಯುತ್ತದೆ. (ಇ) (ಈ ವಿಷಯದಲ್ಲಿ) ಕಾಶ್ಯಪನು ಹೀಗೆ ಹೇಳುತ್ತಾನೆ. –                                                     60

____

೭೩೨   “ಜ್ಞಾತ್ವಾ ಜಾತ್ಯಂಶಬಾಹುಲ್ಯಂ ನಿರ್ದೇಶ್ಯಾ ಮೂರ್ಛನಾ ಬುಧೈಃ”                                              || ೯೫ ||

[ಗೀತರಾಗಯೋರ್ಭೇದಃ]

೭೩೩   (ಅ) ನನು ಗೀತರಾಗಯೋಃ ಕೋ ಭೇದಃ ? (ಆ) ಉಚ್ಯತೇ | (ಇ) ದಶಲಕ್ಷಣಲಕ್ಷಿತಂ ಗೀತಂ ರಾಗಶಬ್ದಾಭಿಧೇಯಮ್ | (ಈ) ಗೀತಂ ಚತುರಂಗೋಪೇತಂ, ಧ್ರುವಾಯೋಗಾತ್ ಪಂಚವಿಧಮ್ | (ಉ) ಕುತ ಏತದ್ ವಿಜ್ಞಾಯತೇ? (ಊ) ಆಪ್ತವಚನಾತ್ | (ಋ) ತಥಾ ಚಾಹ ಕಾಶ್ಯಪಃ-                                                                                                          61

೭೩೪   “ಕ್ವಚಿದಂಶಃ ಕ್ವಚಿನ್ನ್ಯಾಸಃ ಷಾಡವೌಡುವಿತೇ ಕ್ವಚಿತ್ |
ಅಲ್ಪತ್ವಂ ಚ ಬಹುತ್ವಂ ಚ ಗ್ರಹಾಪನ್ಯಾಸಸಂಯುತಮ್                                                         || ೯೬ ||

೭೩೫   “ಮಂದ್ರತಾರೌ ತಥಾ ಜ್ಞಾತ್ವಾ ಯೋಜನೀಯಂ ಮನೀಷಿಭಿಃ |
ಗ್ರಾಮರಾಗಾಃ ಪ್ರಯೋಕ್ತವ್ಯಾ ವಿಧಿವದ್ ದಶರೂಪಕೇ                                                            || ೯೭ ||

೭೩೬   “ಪ್ರವೇಶಾಕ್ಷೇಪನಿಷ್ಕ್ರಾಮಪ್ರಾಸಾದಿಕಮಥಾಂತರಮ್ |
ಗಾನಂ ಪಂಚವಿಧಂ ಯತ್ತದ್ ರಾಗೈರೇಭಿಃ ಪ್ರಯೋಜಯೇತ್”                                                   || ೯೮ ||

[ಗೀತಾನಾಂ ವಿನಿಯೋಗಃ]

೭೩೭   ಪೂರ್ವರಂಗೇ ತು ಶುದ್ಧಾ ಸ್ಯಾದ್ ಭಿನ್ನಾ ಪ್ರಸ್ತಾವನಾಶ್ರಯಾ |
ವೇಸರಾ ಮುಖಯೋಃ ಕಾರ್ಯಾ ಗರ್ಭೇ ಗೌಡೀ ವಿಧೀಯತೇ |
ಸಾಧಾರಿತಾ sವಮರ್ಶೇ ಸ್ಯಾತ್ ಸಂಧೌ ನಿರ್ವಹಣೇ ತಥಾ                                                        || ೯೯ ||

ಇತಿ ಮತಂಗಮುನಿವಿರಚಿತಬೃಹದ್ಧೇಶಾಂ ರಾಗಲಕ್ಷಣಂ[ನಾಮ]
ತೃತೀಯೋ(
sಧ್ಯಾಯಾಃ) ಸಮಾಪ್ತಃ

ಪಾಠವಿಮರ್ಶೆ : ೭೩೨ಅಆ ೭೩೩ಅ,ಇ, ಊ, ೠ ೭೩೫ಆ,ಈ ೭೩೬ಅ,ಇ ೭೩೭ಅ,ಉ,ಊ ಸಮಾಪ್ತಿವಾಕ್ಯ

—-

೭೩೨   (ಆಯಾ) ಜಾತಿಯಲ್ಲಿರುವ ಅಂಶಗಳು (ಪ್ರಯೋಗದಲ್ಲಿ) ಎಷ್ಟು ಬಹುಳವಾಗಿವೆಯೆಂಬುದನ್ನು ತಿಳಿದುಕೊಂಡು ವಿದ್ವಾಂಸರು (ತಕ್ಕ) ಮೂರ್ಛನೆಯನ್ನು ನಿರ್ದೇಶಿಸಬೇಕು.                                                                                                     ೯೫

[ಗೀತ ಮತ್ತು ರಾಗಗಳಲ್ಲಿ ವ್ಯತ್ಯಾಸ]

೭೩೩   (ಅ) [ಪ್ರಶ್ನೆ:] ಗೀತ ಮತ್ತು ರಾಗಗಳಲ್ಲಿ ವ್ಯತ್ಯಾಸವೇನು? (ಅ) (ಉತ್ತರವನ್ನು) ಹೇಳಲಾಗುವುದು: (ಇ) ಹತ್ತುಲಕ್ಷಣಗಳಿಂದ ನಿರ್ದಿಷ್ಟಗೊಂಡ ಗೀತವು ರಾಗ ಎಂದು ಹೆಸರಾಗುತ್ತದೆ. (ಈ) ಗೀತವು ನಾಲ್ಕು ಅಂಗಗಳಿಂದ ಕೂಡಿದೆ ; ಧ್ರುವಾ (ಅಂಗವೂ) ಸೇರಿದರೆ (ಗೀತಗಳು) ಐದು ವಿಧ. (ಉ) ಇದು ಯಾವುದರಿಂದ ತಿಳಿಯುತ್ತದೆ ? (ಊ) ಆಪ್ತರ ಮಾತಿನಿಂದ (ಹೀಗೆ ತಿಳಿಯುತ್ತದೆ). (ಋ) (ಈ ವಿಷಯದಲ್ಲಿ) ಕಾಶ್ಯಪನು ಹೀಗೆ ಹೇಳುತ್ತಾನೆ –                                                                                                                        61

೭೩೪   “ಕೆಲವು ವೇಳೆ ಅಂಶವು (ಯಾವುದು), ಕೆಲವು ವೇಳೆ ನ್ಯಾಸವು (ಯಾವುದು), ಕೆಲವು ವೇಳೆ ಷಾಡವ –ಔಡುವಿತಗಳು (ಯಾವುದು) ಇವುಗಳನ್ನೂ ಗ್ರಹ(ವು ಯಾವುದು), ಅಪನ್ಯಾಸವು (ಯಾವುದು), ಇವುಗಳ ಸಮೇತವಾದ ಅಲ್ಪತ್ವ-ಬಹುತ್ವಗಳು (ಯಾವುವು) –    ೯೬

೭೩೫   “ಅಂತೆಯೇ ಮಂದ್ರ-ತಾರಗಳು (ಯಾವುವು) ಎಂಬುದನ್ನು ಬುದ್ಧಿವಂತರು ತಿಳಿದುಕೊಂಡು ಗ್ರಾಮರಾಗಗಳನ್ನು (ವಿನಿಯೋಗದ) ವಿಧಿಗೆ ಅನುಸಾರವಾಗಿ ಹತ್ತು ರೂಪಕಗಳಲ್ಲಿ ಸಂಯೋಜಿಸಬೇಕು.                                                                         ೯೭

೭೩೬   “ಪ್ರವೇಶ(=ಪಾತ್ರಗಳು ರಂಗದ ಒಳಗೆ ಬರುವುದು), ಆಕ್ಷೇಪ (=ಪ್ರಸ್ತುತ ರಸವನ್ನು ಉಲ್ಲಂಘಿಸಿ ಬೇರೆ ರಸವನ್ನು ಬೇರೆ ಲಯದಲ್ಲಿ ಹಾಡುವುದು), ನಿಷ್ಕ್ರಾ ಮ (=ಪಾತ್ರಗಳು ರಂಗದಿಂದ ಹೊರಟುಹೋಗುವುದು), ಪ್ರಾಸಾದಿಕ(=ಪಾತ್ರದ ಅಥವಾ ಸಹೃದಯರ ಚಿತ್ತವನ್ನು ಪ್ರಸನ್ನಗೊಳಿಸುವುದು), ನಂತರ ಅಂತರ (=ದೃಶ್ಯಕಥೆ, ಸಂದರ್ಭ ಮುಂತಾದವುಗಳ ನಡುವೆ ಸಂಭವಿಸುವ ಅಂತರ – ಎಂದರೆ ಖಾಲಿ – ಗಳನ್ನು ತುಂಬುವುದು) – ಇದಕ್ಕಾಗಿ ಪ್ರಯೋಗಿಸುವ ಐದು ವಿಧದ ಗಾನವನ್ನು ಮೇಲೆ ಹೇಳಿರುವ ರಾಗಗಳಿಂದ (ಸಮುಚಿತವಾಗುವಂತೆ) ಪ್ರಯೋಗಿಸಬೇಕು.”          ೯೮

[ಗೀತಿಗಳ ವಿನಿಯೋಗ]

೭೩೭   ಶುದ್ಧ(ರಾಗವು) ಪೂರ್ವರಂಗದಲ್ಲಿ ಆಗುತ್ತದೆ (=ಪ್ರಯುಕ್ತವಾಗುತ್ತದೆ); ಭಿನ್ನ(ರಾಗವು) (ರೂಪಕದ) ಪ್ರಸ್ತಾವನೆಯಲ್ಲಿ ನೆಲೆಸುತ್ತದೆ. ವೇಸರ(ರಾಗ)ವನ್ನು ಮುಖ (ಮತ್ತು ಪ್ರತಿಮುಖ)ಗಳಲ್ಲಿ (ಪ್ರಯೋಗ)ಮಾಡಬೇಕು. ಗರ್ಭ(ಸಂಧಿ)ಯಲ್ಲಿ ಗೌಡೀ (ರಾಗ)ವನ್ನು ವಿಧಿಸಿದೆ. ಇದೇ ರೀತಿಯಲ್ಲಿ ಸಾಧಾರಿತ(ರಾಗವು) ಅವಮರ್ಶಸಂಧಿಯಲ್ಲೂ ನಿರ್ವಹಣ(ಸಂಧಿ)ಯಲ್ಲೂ ಇರುತ್ತದೆ.                      ೯೯

ಹೀಗೆ ಮತಂಗಮುನಿಯು ರಚಿಸಿರುವ ಬೃಹದ್ದೇಶಿಯಲ್ಲಿ ರಾಗಲಕ್ಷಣವೆಂಬ
ಮೂರನೆಯ (ಅಧ್ಯಾಯವು) ಮುಗಿಯಿತು.