[ಗ. ವರ್ಣೈಲಾಪ್ರಕಾರಗಳು]

೧೧೪೭ ಇದರಲ್ಲಿ ತಾಲದ ನಿಯಮವಾಗಲಿ ರಸದ ನಿಯಮವಾಗಲಿ ರಾಗದ ನಿಯಮವಾಗಲಿ ಇರುವುದಿಲ್ಲ, ಕೇವಲ ವರ್ಣಗಳ (ಸಂಖ್ಯೆಯ) ನಿಯಮವು (ಮತ್ರ) ಇರುವುದರಿಂದ (ಅದನ್ನು) ವರ್ಣೈಲಾ ಎಂದು ಕರೆಯಲಾಗುತ್ತದೆ.                                       ೯೨

೧೧೪೮ ಮದನವತೀ, ಶಶಿಲೇಖಾ, ಮಾಲತೀ ಹಾಗೆಯೇ [ಲಲಿತಾ], ಹೇಮವತೀ, ಕುಸುಮವತೀ – ಈ ಏಳು ಏಲಾಗಳು ವರ್ಣಗಳ (ಸಂಖ್ಯೆಯಿಂದ) ನಿಯಮಿತವಾಗಿರುತ್ತವೆ.                                                                                                                    ೯೩

೧೧೪೯ ಹನ್ನೊಂದರಿಂದ ಮೊದಲು ಮಾಡಿಕೊಂಡು ಹದಿನೇಳರ ಪೂರ್ತಿಯಾಗಿ ವರ್ಣಗಳನ್ನು ಕ್ರಮವಾಗಿ ಈ ಏಳರ(ಪ್ರತಿಯೊಂದು ಪಾದದ)ಲ್ಲಿಯೂ ಇರುವಂತೆ ಆಕರ್ಷಕವಾದ ಪದಗಳಿಂದಲೂ ಒಳ್ಳೆಯ ನಾದದಿಂದಲೂ ಗಂದರ್ವ(ವಿದ್ಯಾವರಿಷ್ಠ)ರು ಜಗತ್ತಿನಲ್ಲಿ ಹಾಡುತ್ತಾರೆ.           ೯೪

(೧. ಮದನವತೀ ೨. ಶಶಿಲೇಖಾ ೩. ಪ್ರಭಾವತೀ)

೧೧೫೦ (ಪ್ರತಿಯೊಂದು ಪಾದದಲ್ಲಿಯೂ ಹನ್ನೊಂದು ವರ್ಣಗಳು) ಲಘುವಿಲ್ಲದ (=ಗುರು) ಗಣಗಳಿಂದ (ಆಗುವುದು) ಮದನವತೀ. (ಪ್ರತಿಯೊಂದು ಪಾದದಲ್ಲಿಯೂ ಹನ್ನೊಂದು ವರ್ಣಗಳು) ಕೇವಲ ಲಘುಗಳೇ ಇರುವ ಗಣಗಳಿಂದ (ಆಗುವುದು) ಶಶಿಲೇಖಾ. (ಪ್ರತಿಯೊಂದು ಪಾದದಲ್ಲಿಯೂ ಹದಿಮೂರು ವರ್ಣಗಳು) ಗುರುಗಳಿರುವ ಗಣಗಳೇ ಹೆಚ್ಚಾಗಿರುವಂತೆ (ಆಗುವದು) [ಯಾವಾಗಳು] ಪ್ರಭಾವತೀ (ಆಗುತ್ತದೆ). ಮಾಲತೀ ಹಾಗೆಯೇ ಲಲಿತಾಗಳನ್ನು (ಮುಂದೆ ವರ್ಣಿಸಲಾಗುವುದು).                                                                                      ೯೫

[೪. ಮಾಲತೀ]

೧೧೫೧ ಗುರುಲಘುಗಳಿರುವ (ಗಣಗಳಿಂದ) ರಚಿತವಾಗಿರುವ, ಮಧುರವಾದ ಧ್ವನಿಯಿಂದ ಶೋಭಿಸುವ, ನೇರವಾಗಿರುವ, ಅನೇಕವಾದ ಗಮಕಗಳನ್ನೂ ಅಲಂಕಾರಗಳನ್ನೂ ಹೊಂದಿರುವ ಮನೋಹರವಾದ ಏಲೆಯ (ಪ್ರತೊಯೊಂದ ಪಾದದಲ್ಲಿಯೂ ಹದಿನಾಲ್ಕು ವರ್ಣಗಳಿರುವ) ಮಾಲತೀ (ವರ್ಣೈಲಾ) ಆಗುತ್ತದೆ.                                                                                                       ೯೬

[೫. ಲಲಿತಾ]

೧೧೫೨ ಲಲಿತಾ(ವರ್ಣೈಲಾ)ವನ್ನು ಆಕರ್ಷಕವಾದ (ಪ್ರತಿಯೊಂದು ಪಾದದಲ್ಲಿಯೂ ಹದಿನೈದು) ವರ್ಣಗಳಿರಬೇಕೆಂಬ ನಿಯಮದಿಂದಲೂ ಮೊದಲನೆಯ (ವರ್ಣೈಲಾ)ದಲ್ಲಿರುವ ಹಾಗೆ (ಮೊದಲಿನ) ಎರಡು ಚರಣಗಳನ್ನು ಗಮಕಸಹಿತವಾಗಿಯೂ ಬಿಂದುಮೂರ್ಛನಾ(?) ಸಮೇತವಾಗಿಯೂ ಗಂದರ್ವ (ವಿದ್ಯಾಪಾರಂಗತ)ರು ಹಾಡಬೇಕು.                                                                 ೯೭

೧೧೫೨ ೧೧೫೨ಇ

____

[೬. ಹೇಮವತೀ?]

೧೧೫೩ ಲಲಿತಪದಂ ಬಿರುದಾಂತಂ ತಥ ಚ ಯತಿಸಂಸ್ಥಿತಗಮಕಮ್ |
ಚರಣಯುಗಕ್ರಮಮೇವಂ ನಾಮ ತತೋ ಭವತಿ ವರ್ಣನೀಯಸ್ಯ || ೯೮ ||

[೭. ಕುಸುಮವತೀ]

೧೧೫೪ ಲಘುವರ್ಣಪದನಿಬದ್ಧಂ ತತ್ ಪುನರಪಿ ಗೀಯತೇ, ಗೀತ್ವಾ |
ಗಾತೃಜನನಾಮಧೇಯಂ ವೀರವಿಲಾಸಾದಿ ವರ್ಣನಾಪೂರ್ವಮ್‌ || ೯೯ ||

೧೧೫೫ ಯಸ್ಯಾಂ ವರ್ಣೈಲಾ ಸಾ ಕಥಿತಾ ಕ್ರಮತೋ ಮತಂಗೇನ |
ಪ್ರತಾಪೋತ್ಸಾಹಧೈರ್ಯಾದಿವರ್ಣನಾಗುಣಗೌರವಮ್ || ೧೦೦ ||

೧೧೫೬ ಕ್ರಮಶೋ ದೃಶ್ಯತೇ ಯಸ್ಯಾಂ ವರ್ಣೈಲಾ ಸಾ ಪ್ರಕೀರ್ತಿತಾ |
ಮಂಠದ್ವಿತೀಯಕಂಕಾಲೈಃ ಪ್ರತಿತಾಲೇನ ಗೀಯತೇ || ೧೦೧ ||

೧೧೫೭ ಪ್ರಕಾರೇಣೈಕೇನ ಕಥಿತಾ ಯೇನಾಧುನಾ ಸ್ಫುಟಮ್‌ |
ಕಥ್ಯತೇ ತು(!) ಸಮರಸೇನ ವರ್ಣೈಲಾ ಸಪ್ತಕಂ ಪುನಃ || ೧೦೨ ||

[ಘ. ಪುನರ್ವರ್ಣೈಲಾ ಸಪ್ತಕಂ]

೧೧೫೮ ರಮಣೀ ಚಂದ್ರಿಕಾ ಲಕ್ಷ್ಮೀಃ ಪದ್ಮಿನೀ ರಂಜನೀ ತಥಾ |
ಮಾಲತೀ ಮೋಹಿನೀ ಚೇತಿ ವರ್ಣೈಲಾಸಪ್ತಕಂ ತಥಾ || ೧೦೩ ||

[೧. ರಮಣೀ]

೧೧೫೯ ಸಮಾ ಯತ್ರ ಯತಿಃ ಪಾದೇ ಪ್ರಥಮೇ ಚ ದ್ವಿತೀಯಕೇ |
ಪಾದೇ ಪಾದೇ ಚ ನಾದಾಢ್ಯಾ ಷಟ್ಪದೀ ರಮಣೀತಿ ಸಾ || ೧೦೪ ||

ಪಾಠವಿಮರ್ಶೆ: ೧೧೫೩ಅಆ, ಇ ೧೧೫೬ಇ ೧೧೫೭ಇ ೧೧೫೯ಆ,ಇ

—-

[೬. ಹೇಮವತೀ]

೧೧೫೩ ಆಕರ್ಷಕವಾದ ಪದಗಳನ್ನೂ ಕೊನೆಯಲ್ಲಿ ಬಿರುದಗಳನ್ನೂ ಯತಿಗಳು ನೆಲೆಸಿರುವ ಗಮಕಗಳನ್ನೂ (ಮೊದಲನೆಯ) ಎರಡು ಪಾದಗಳನ್ನೂ ಹೀಗೆಯೇ (ಹಾಡಬೇಕು). ಇದರ ನಂತರ ವರ್ಣಿಸಲ್ಪಡಬೇಕಾಗಿರುವವರ ಹೆಸರು ಬರುತ್ತದೆ (ಪ್ರತಿಯೊಂದು ಪಾದದಲ್ಲಿಯೂ ಹದಿನಾರು ವರ್ಣಗಳಿರುವ ಹೇಂವತೀ ವರ್ಣೈಲಾದಲ್ಲೀ ?)                                                                                      ೯೮

[೭. ಕುಸುವತೀ]

೧೧೫೪ (ಪ್ರತಿಯೊಂದು ಪಾದದಲ್ಲಿಯೂ ಹದಿನೇಳು ವರ್ಣಗಳಿರುವ ಕುಸುಮವತೀತು, ಅದರ ಮೂರನೆಯ ಪಾದವು?) ಲಘು ವರ್ಣಗಳಿಂದಲೇ ಆದ ಪದಗಳಿಂದ ರಚಿತವಾಗಿದ್ದು (ಒಂದು ಸಲ ಹಾಡಿದ ಮೇಲೆ) ಪುನಃ ಒಮ್ಮೆ (ಅದನ್ನೇ) ಹಾಡಲಾಗುತ್ತದೆ. ಹಾಡಿ(ದ ಮೇಲೆ) ಹಾಡುವ ಜನರ ಹೆಸರನ್ನು (ವರ್ಣಿಸಬೇಕಾಗಿರುವವರ) ವೀರ, ವಿಲಾಸಾದಿ- ಗಳನ್ನು ವರ್ಣಿಸುವುದಕ್ಕೆ ಮುಂಚೆ (ಸಹಿತವಾಗಿ ? ಅಂಕಿತಗೊಳಿಸಬೇಕು.)    ೯೯

೧೧೫೫ ಯಾವುದರಲ್ಲಿ (ಹೀಗಿದೆಯೋ) ಅದನ್ನು(ಮೇಲೆ ಹೇಳಿರುವ) ಕ್ರಮವನ್ನು ಅನುಸರಿಸಿ ಮತಂಗನು (ಕುಸುಮಾವತೀ?-) ವರ್ಣೈಲಾ ಎಂದು ಹೇಳುತ್ತಾನೆ. (ನಾಯಕನ) ಪ್ರತಾಪ, ಉತ್ಸಾಹ, ಧೈರ್ಯ ಮುಂತಾದವುಗಳ ವರ್ಣನೆಯೂ ಅವನ (ಸದ್‌)ಗುಣಗಳ ಗಣ್ಯತೆಯೂ         ೧೦೦

೧೧೫೬ (ಒಂದು ನಿರ್ದಿಷ್ಟ) ಕ್ರಮದಲ್ಲಿ ಯಾವುದರಲ್ಲಿ ಕಂಡುಬರುತ್ತದೋ ಅದು ವರ್ಣೈಲಾ ಎಂದು ಹೇಳಲಾಗಿದೆ. ಅದನ್ನು ಮಂಠ, ದ್ವಿತೀಯ, ಕಂಕಾಲ ಅಥವಾ ಪ್ರತಿತಾಲದಲ್ಲಿ ಹಾಡಲಾಗುತ್ತದೆ.                                                                               ೧೦೧

೧೧೫೭ ಒಂದೇ ಪ್ರಕಾರದಲ್ಲಿ (ಕುಸುಮಾವತಿಯಲ್ಲಿ) ಏನನ್ನು ಈಗ ಸ್ಪಷ್ಟವಾಗಿ ಹೇಳಿದೆಯೋ ಅದನ್ನೇ ಯಥಾವತ್ತಾಗಿ (ಸಮರಸ) ಮತ್ತೆ (ಬೇರೆ) ಏಳು ವರ್ಣೈಲಾಗಳನ್ನು ಪುನಃ ಹೇಳಲಾಗುವುದು.                                                                                  ೧೦೨

[ಘ. ಪುನಃ ಏಳು ವರ್ಣೈಲಾಗಳು]

೧೧೫೮ ರಮಣೀ, ಚಂದ್ರಿಕಾ, ಲಕ್ಷ್ಮೀ, ಪದ್ಮಿನೀ, ಹಾಗೆಯೇ ರಂಜನೀ, ಮಾಲತೀ ಮತ್ತು ಮೋಹಿನೀ, ಎಂದು ಹೀಗೆಯೇ ಬೇರೆ ಏಳು ವರ್ಣೈಲಾಗಳಿವೆ.           ೧೦೩

[೧. ರಮಣೀ]

೧೧೫೯ ಯಾವುದರ ಮೊದಲನೆಯ ಮತ್ತು ಎರಡನೆಯ ಪಾದಗಳಲ್ಲಿ ಸಮಾಯತಿಯು ಇರುತ್ತದೋ, ಆರು ಪಾದಗಳಿದ್ದು ಪ್ರತಿಯೊಂದು ಪಾದವೂ ನಾದದಿಂದ ಸಮೃದ್ಧವಾಗಿರುತ್ತದೋ ಅದು ರಮಣೀ                                                                             ೧೦೪

____

[೨. ಚಂದ್ರಿಕಾ]

೧೧೬೦ ಸ್ರೋತೋಗತಾ ಸಮಾ ಚೈವ ಯತ್ರ ಪಾದದ್ವಯೇ ಭವೇತ್‌ |
ಬಿಂದುಭಿರ್ಗಮಕೈರ್ಯುಕ್ತಾ ಚಂದ್ರಿಣೀತಿ ಪ್ರಕೀರ್ತಿತಾ || ೧೦೫ ||

[೩. ಲಕ್ಷ್ಮೀಃ]

೧೧೬೧ ಗೋಪುಚ್ಛಾ ಚ ಸಮಾ ಸ್ರೋತಾ ಯತ್ರ ಪಾದತ್ರಯೇ s ಪಿ ಚ |
ಮೂರ್ಛನಾ ನಾದಸಹಿತಾ ಸೈಲಾ ಲಕ್ಷ್ಮೀರಿತಿ ಸ್ಮೃತಾ || ೧೦೬ ||

[೪. ಪದ್ಮಿನೀ]

೧೧೬೨ ಆದ್ಯೇ ಪಾದೇ ದ್ವಿತೀಯೇ ಚ ತೃತೀಯೇ ಚ ಚತುರ್ಥಕೇ |
ವರ್ಣಧ್ವನಿಸಮಾಯುಕ್ತಾ ಪದ್ಮಿನ್ಯೇಲಾ ನಿಗದ್ಯತೇ || ೧೦೭ ||

[೫. ರಂಜನೀ]

೧೧೬೩ ಪ್ರಥಮೇ ಚ ಸಮಾ ಪ್ರೋಕ್ತಾ ದ್ವಿತೀಯೇ ಚ ತೃತೀಯಕೇ |
ಗೋಪುಚ್ಛಾ ಗಮಕಾಢ್ಯಾಚ ರಂಜನೀ ನಾಮ ಸಾ ಭವೇತ್‌ || ೧೦೮ ||

[೬. ಮಾಲತೀ]

೧೧೬೪ ಲಘುಭಿರ್ಗುರುಭಿರ್ವರ್ಣೈರ್ಯಾ ತು ಪ್ರಾಸೈರ್ವಿನಿರ್ಮಿತಾ |
ಯಥೇಷ್ಟಕಾ ಚತುಷ್ಟಾದಾ ಸಾ ಚೈಲಾ ಮಾಲತೀ ಮತಾ || ೧೦೯ ||

[೭. ಮೋಹಿನೀ]

೧೧೬೫ ಪಂಚಪಾದಸಮಾಯುಕ್ತಾ ಮೂರ್ಛನಾಗಮಕಾನ್ವಿತಾ |
ಮೋಹಿನೀ ನಾಮ ಸಾ ಜ್ಞೇಯಾ ವರ್ಣೈಲಾ ಸಪ್ತಮೀ ಶುಭಾ || ೧೧೦ ||

೧೧೬೦ (ಇತಿ ಪ್ರಕಾರಾಂತರೇಣ ವರ್ಣೈಲಾಸಪ್ತಕಮ್

ಪಾಠವಿಮರ್ಶೆ: ೧೧೬೩ಅ

—-

[೨. ಚಂದ್ರಿಕಾ]

೧೧೬೦ ಯಾವದರ (ಮೊದಲನೆಯ) ಎರಡು ಪಾದಗಳಲ್ಲಿ (ಕ್ರಮವಾಗಿ?) ಸಮಾ ಮತ್ತು ಸ್ರೋತೋಗತಾ ಯತಿಗಳಿರುತ್ತವೋ, ಬಿಂದುಗಳೂ (?) ಗಮಕಗಳೂ ಇರುತ್ತವೋ ಅದು ಚಂದ್ರಿಣಿಯೆಂದು ಹೆಸರುವಾಸಿಯಾಗಿದೆ. ೧೦೫

[೩. ಲಕ್ಷ್ಮೀ]

೧೧೬೧ ಯಾವದರ ಮೂರು ಪಾದಗಳಲ್ಲಿ (ಕ್ರಮವಾಗಿ) ಗೋಪುಚ್ಛಾ, ಸಮಾ ಮತ್ತು ಸ್ರೋತಾ (=ಸ್ರೋತೋವಹಾ)(ಯತಿ)ಗಳಿವೆಯೇ, ಮೂರ್ಛನೆಯ ನಾದವನ್ನು ಕೂಡಿಕೊಂಡಿರುತ್ತದೋ ಅದು ಲಕ್ಷ್ಮೀ ಏಲಾ ಎಂದು ಸ್ಮರಿಸುತ್ತಾರೆ.                         ೧೦೬

[೪. ಪದ್ಮಿನೀ]

೧೧೬೨ ಮೊದಲನೆಯ ಪಾದದಲ್ಲಿ ಎರಡನೆಯದರಲ್ಲಿ, ಮೂರನೆಯದರಲ್ಲಿ ಮತ್ತು ನಾಲ್ಕನೆಯದರಲ್ಲಿ ವರ್ಣಗಳನ್ನೂ ಧ್ವನಿಯನ್ನೂ ಕೂಡಿಕೊಂಡಿರುವುದನ್ನು ಪದ್ಮಿನೀ ಏಲಾ ನಿರೂಪಿಸುತ್ತಾರೆ.                                                                      ೧೦೭

[೫. ರಂಜನೀ]

೧೧೬೩ ಮೊದಲನೆಯ ಪಾದದಲ್ಲಿ ಸಮಾ(ಯತಿಯು ಇದೆ) ಎಂದು ಹೇಳಿದೆ ; ಎರಡನೆಯದಲ್ಲೂ ಮೂರನೆಯದರಲ್ಲೂ ಗೋಪುಚ್ಛಾ(ಯತಿ ಇರುತ್ತದೆ), ಗಮಕಗಳಿಂದ ಸಮೃದ್ಧವಾಗಿದೆ ಎಂದಾದರೆ ಅದು ರಂಜನೀ ಎಂಬ ಹೆಸರಿನದಾಗುತ್ತದೆ.                     ೧೦೮

[೬. ಮಾಲತೀ]

೧೧೬೪ ಲಘುವರ್ಣಗಳಿಂದಲೂ ಗುರುವರ್ಣಗಳಿಂದಲೂ, ಪ್ರಾಸಸಹಿತವಾಗಿಯೂ, ಇಷ್ಟ ಬಂದಂತೆ ರಚಿತವಾದ ನಾಲ್ಕು ಪಾದಗಳಿಂದಲೂ ಆಗಿದ್ದರೆ ಅದು ಮಾಲತೀ ಏಲಾ ಎಂದು ಅಭಿಪ್ರಾಯಪಡಲಾಗಿದೆ.                                                                           ೧೦೯

[೭. ಮೋಹಿನೀ]

೧೧೬೫ ಐದು ಪಾದಗಳನ್ನು ಕೂಡಿಕೊಂಡಿರುವುದು, ಮೂರ್ಛನೆಗಳು, ಗಮಕಗಳೂ ಇರುವುದು ಶುಭಕರವಾದ ಮೋಹಿನೀ ಎಂಬ ಹೆಸರಿನ ಏಳನೆಯ ವರ್ಣೈಲಾ ಎಂದು ತಿಳಿಯಬೇಕು.                                                                                                       ೧೧೦

೧೧೬೬ ಹೀಗೆ ಬೇರೆ ಪ್ರಕಾರದ ಏಳು ವರ್ಣೈಲಾಗಳ ಲಕ್ಷಣಗಳು ಮುಗಿದವು.

____

(ಙ. ದೇಶೈಲಾಪ್ರಕಾರಾಃ)

೧೧೬೭ ಲಾಟಕರ್ಣಟಗೌಡಾಂಧ್ರದ್ರವಿಡಾನಾಂ ಸ್ವಭಾಷಯಾ |
ಪೃಥಗ್‌ ಪೃಥಗ್‌ ಭವೆಂತ್ಯೇತಾಃ [?-ಲಾಃ] ಮಾರ್ಗಯುಕ್ತಾ ಮನೋಹರಾಃ || ೧೧೧ ||

[೧. ಲಾಟೈಲಾ]

೧೧೬೮ ಅಂತ್ಯಪ್ರಾಸಸಮಾಯಕ್ತಾ ಮಧ್ಯಾದಿಪ್ರಾಸವರ್ಜಿತಾ |
ರಸೈರ್ಭಾವೈಶ್ಚ ಸಂಯುಕ್ತಾ ಲಾಟೈಲಾ ಪರಿಕೀರ್ತಿತಾ || ೧೧೨ ||

[೨. ಕರ್ಣಾಟೈಲಾ]

೧೧೬೯ ಪ್ರಾಸೈರ್ಮನೋಹರೈರ್ದಿವ್ಯೈರಾದಿಮಧ್ಯಾಂತಗೋಚರೈಃ |
ಏಲಾ ಕ\ಣಾಟಿಕಾ ಪ್ರೋಕ್ತಾ ಲಲಿತಧ್ಟನಿಸಂಯುತಾ || ೧೧೩ ||

[೩. ಗೌಡೈಲಾ]

೧೧೭೦ ಸರ್ವತ್ರ ಪ್ರಾಸಸಹಿತಾ ಗಮಕೈಶ್ಚ ವಿವರ್ಜಿತಾ |
ನಾದಬಿಂದುರಸೋಪೇತಾ ಏಲಾ ಸಾ ಗೌಡದೇಶಜಾ || ೧೧೪ ||

[೪. ಆಂಧ್ರೈಲಾ]

೧೧೭೧ ಅನೇಕಗಮಕಾಕೀರ್ಣಾಮನೇಕಧ್ವನಿಮಿಶ್ರಿತಾಮ್ |
ಅನೇಕರಾಗಸಂಕೀರ್ಣಾಮೇಲಾಮಾಂಧ್ರೀ ವಿದುರ್ಬುಧಾಃ || ೧೧೫ ||

[೫. ದ್ರಾವಿಡೈಲಾ]

೧೧೭೨ ಭಾವಾಭಿನಯತಾಲಾಢ್ಯಾ ವಿಚಿತ್ರಧ್ವನಿರಂಜಿತಾ |
ಪ್ರಾಸಹೀನಾ ರಸಸ್ಥಾ ಚ ಏಲಾ ದ್ರಾವಿಡದೇಶಜಾ || ೧೧೬ ||

|| ಇತಿ ದೇಶಾಖ್ಯೈಲಾ ಪಂಚಕಮ್ ||

ಪಾಠವಿಮರ್ಶೆ: ೧೧೬೬ ೧೧೬೮ಅ ೧೧೭೦ಅ,ಈ,ಇ ೧೧೭೧ಈ ೧೧೭೨ಅ-ಈ

—-

(ಙ. ದೇಶೈಲಾಪ್ರಕಾರಗಳು)

೧೧೬೭ ಲಾಟರ, ಕನ್ನಡಿಗರ, ಗೌಡರ, ಆಂಧ್ರ ಮತ್ತು ದ್ರವಿಡರ ಆಯ್ಮಾ ಭಾಷೆಗಳಲ್ಲಿ ರಚಿತವಾಗಿದ್ದು ಇವು (?ಏಲಾಗಳು?) ಸುಂದರವಾಗಿದ್ದು (ತಮ್ಮ ತಮ್ಮದೇ) (ಬೇರೆ ಬೇರೆ) ಶೈಲಿಪದ್ದತಿಗಳನ್ನು ಹೊಂದಿವೆ.                                                   ೧೧೧

[೧. ಲಾಟೈಲಾ]

೧೧೬೮ ಆದಿಪ್ರಾಸ ಮಧ್ಯಪ್ರಾಸಗಳನ್ನು ಬಿಟ್ಟು ಅಂತ್ಯ ಪ್ರಾಸದೊಡಗೂಡಿ ರಸ ಮತ್ತು ಭಾವಗಳನ್ನು ಹೊಂದಿರುವುದು ಲಾಟೈಲಾ ಎಂದು ವರ್ಣಿಸಲಾಗಿದೆ.                                                                                                                            ೧೧೨

[೨. ಕರ್ಣಾಟೈಲಾ]

೧೧೬೯ ಆದಿಯಲ್ಲಿ, ಮಧ್ಯದಲ್ಲಿ ಮತ್ತು ಅಂತ್ಯದಲ್ಲಿ ಕಂಡುಬರುವ ಮನೋಹರವಾದ, ದಿವ್ಯವಾದ ಪ್ರಾಸಗಳಿದ್ದು ಆಕರ್ಷಕವಾದ ಧ್ವನಿಯನ್ನು ಕೂಡಿಕೊಂಡಿರುವುದು ಕರ್ಣಾಟೈಲಾ ಎಂದು ಹೇಳಿದೆ.                                                                              ೧೧೩

[೩. ಗೌಡೈಲಾ]

೧೧೭೦ (ಆದಿ, ಮಧ್ಯ ಮತ್ತು ಅಂತ್ಯಗಳೆಂಬ) ಪ್ರಾಸಗಳು ಎಲ್ಲೆಡೆಯಲ್ಲಿಯೂ ಇದ್ದು, ಗಮಕಗಳನ್ನು ಬಿಟ್ಟು ನಾದ, ಬಿಂದು ಮತ್ತು ರಸಗಳನ್ನು ಕೂಡಿಕೊಂಡು ಇರುವಂತಹ ಏಲಾ ಗೌಡದೇಶದಲ್ಲಿ ಹುಟ್ಟಿದ್ದು.                                                              ೧೧೪

[೪. ಆಂಧ್ರೈಲಾ]

೧೧೭೧ ಅನೇಕ ಗಮಕಗಳು ವ್ಯಾಪಿಸಿರುವುದನ್ನು, ಅನೇಕ ಧ್ವನಿಗಳು ಬೆರಕೆಯಾಗಿರುವುದನ್ನು ಅನೇಕ ರಾಗಗಳು ದಟ್ಟೈಸಿರುವುದನ್ನು ಆಂಧ್ರೀಏಲಾ ಎಂದು ವಿದ್ವಾಂಸರು ತಿಳಿಯುತ್ತಾರೆ.                                                                                                  ೧೧೫

[೫. ದ್ರಾವಿಡೈಲಾ]

೧೧೭೨ ಭಾವಾಭಿನಯದಿಂದಲೂ ತಾಲದಿಂದಲೂ ಸಮೃದ್ಧವಾಗಿರುವ, ನಾನಾ ಬಗೆಯ ಧ್ವನಿಗಳಿಂದ ರಂಜಿಸುವ, ಪ್ರಾಸವಿಲ್ಲದ, ರಸವು ನೆಲೆಸಿರುವ ಏಲಾ ದ್ರಾವಿಡದೇಶದಲ್ಲಿ ಹುಟ್ಟಿರುವಂತಹದು.                                                                                   ೧೧೬

ಹೀಗೆ ದೇಶದ ಹೆಸರುಳ್ಳ ಐದು ಏಲಾಗಳ ವರ್ಣನೆಯು ಮುಗಿಯಿತು.

____

[ಏಲಾಸಂಖ್ಯಾ]

೧೧೭೩ ಗಣೈಲಾ ತು ಚತುರ್ಧೋಕ್ತಾ ಪಂಚಮೀ ಸಂಕರಾತ್ಮಿಕಾ |
ಮಾತ್ರೈಲಾ ತು ಚತುರ್ಭೇದೈಃ ಕಥಿಕಾ ಗೀತಕೋವಿದೃಃ || ೧೧೭ ||

೧೧೭೪ ಚತುದರ್ಶವಿಭೇದೇನ ವರ್ಣೈಲಾ ಪರಿಗೀಯತೇ |
ಪಂಚಧಾ ದೇಶಭೇದೇನ ದೇಶೈಲಾಃ ಸಮುದೀರಿತಾಃ || ೧೧೮ ||

೧೧೭೫ ಏಕತ್ರ ಮಿತಾಸ್ತವೇತಾ ಅಷ್ಟಾವಿಂಶತಿಸಂಖ್ಯಯಾ |
ವಿಜ್ಞಾತಾ ಗೀಗಶಾಸ್ತ್ರಚ್ಲ್ಯೆಃ ಸ್ವಸ್ವಲಕ್ಷಣಸಂಯುತಾಃ || ೧೧೯ ||

[ಇತ್ಯೇಲಾಭೇದಾಃ]

[ixl. ಝೊಂಬಡಃ]

೧೧೭೬ ಆವೃತ್ತ್ಯಾ ಯಂತ್ರ ಪಾದಾರ್ಧಂ ಗೀತ್ವಾ ತದನುಗೀಯತೇ |
ಅರ್ಧಂ ದ್ವಿತೀಯಮವ್ಯಾಪಿ ಪ್ರಾಸಸ್ತು ಸ್ಯಾದ್‌ದ್ವಯೋರಪಿ || ೧೨೦ ||

೧೧೭೭ ಏವಮೇವ ದ್ವಿತೀಯೋSಪಿ ಅಸ್ಯ ಪಾದಃ ಪ್ರಗೀಯತೆ |
ಏವಂ ತೃತೀಯಪಾದಶ್ಚ ಪಾದಶ್ಚ ಪಾದೋ ಯಶ್ಚ ಚತುರ್ಥಕಃ || ೧೨೧ ||

೧೧೭೮ ಪ್ರತ್ಯೇಕಂ ಸರ್ವಪಾದಾನಾಮಂತೇ Sಸೌ ಯತ್ರ ಗೀಯತೇ |
ಸ ತು ಝೊಂಬಡಕೋ ನಾಮ ಗೀತಜ್ಞೈರೆಭಿಧೀಯತೇ || ೧೨೨ ||

೧೧೭೯ ಕಂಕಾಲೋ ನಾಮ ತಾಲಶ್ಚ ನೈವ ಝೊಂಬಡಕೇ ಭವೇತ್‌ |
ಅನ್ಯೇ ತು ದೇಶಿಸಂಬಂಧಾಸ್ತಾಲಾಃ ಸರ್ವೇ ಭವಂತಿ ಹಿ |
ತೇನಕಾಲಂಕೃತಾ ಭೇದಾ ಝೊಂಬಡಸ್ಯ ಭವಂತಿ ಹಿ || ೧೨೩ ||

[x]. ಧ್ವನಿಕುಟ್ಟನೀ]

೧೧೮೦ ಮಾತ್ರಾ (:) ಸಮಾ ಧ್ವನಿಶ್ಚಾತ್ರ ವಿರಾಮೋ Sನಂತರಂ ಕ್ವಚಿತ್‌ |
ಆಸ್ಯಾಂ ದ್ವೌಯದಿ ತಲೌ ಸ್ತಸ್ತದಾ ಸಾ ಧ್ವನಿಕುಟ್ಟನೀ || ೧೨೪ ||

ಪಾಠವಿಮರ್ಶೆ: ೧೧೭೩ಅ ೧೧೭೪ಈ ೧೧೭೫ಇ ೧೧೭೬ಅ,ಈ ೧೧೭೭ಇ ೧೧೭೯ಅ,ಆ,ಇ,ಉ,ಊ

—-

[ಏಲಾಪ್ರಬಂಧದ ಸಂಖ್ಯೆ]

೧೧೭೩ ಗಣೈಲಾ ನಾಲ್ಕು ವಿಧವಾದುದೆಂದು ಹೇಳಿದೆ, ಐದನೆಯದು ಸಂಕರ ರೂಪದ್ದು ; ಮಾತ್ರೈಲಾವು ನಾಲ್ಕು ಭೇದಗಳದ್ದೆಂದು ಗೀತಪಂಡಿತರು ಹೇಳಿದ್ದಾರೆ.                                                                                                                                ೧೧೭

೧೧೭೪ ವರ್ಣೈಲಾವನ್ನು ಹದಿನಾಲ್ಕು ಭೇದಗಳಿಂದ ಹಾಡಲಾಗುತ್ತದೆ. ದೇಶಭೇದದಿಂದ ದೇಶೈಲಾಗಳು ಐದೆಂದು ಹೇಳಲಾಗಿದೆ.       ೧೧೮

೧೧೭೫ ಇವನ್ನೆಲ್ಲಾ ಒಂದೆಡೆ ಕೂಡಿಸಿದರೆ ತಮ್ಮ ತಮ್ಮದೇ ಆದ ಲಕ್ಷಣಗಳು ಸೇರಿಕೊಂಡಿರುವ ಏಲಾಗಳನ್ನು ಇಪ್ಪತ್ತೆಂಟೆಂಬ ಸಂಖ್ಯೆಯಿಂದ ಗೀತಶಾಸ್ತ್ರವಿದ್ವಾಂಸರು (ಏಲಾಗಳನ್ನು) ತಿಳಿಯುತ್ತಾರೆ.                                                                         ೧೧೯

[ಹೀಗೆ ಏಲಾಭೇದಗಳ ವರ್ಣನೆಯು ಮುಗಿಯಿತು]

[ixl. ಝೊಂಬಡ.]

೧೧೭೬ ಯಾವುದರಲ್ಲಿ (ಮೊದಲನೆಯ) ಪಾದದ (ಮೊದಲನೆಯ) ಅರ್ಧವನ್ನು (ಹಾಡಿ, ನಂತರ) ಪುನಃ ಹಾಡಿ, ಎರಡನೆಯ ಅರ್ಧವನ್ನು ಆಮೇಲೆ ಹಾಡಲಾಗುವುದೋ, ಎರಡು ಅರ್ಧಗಳಲ್ಲಿ ಪ್ರಾಸವಿದೆಯೋ-                                                                   ೧೨೦

೧೧೭೭ (ಯಾವುದರಲ್ಲಿ) ಅದರ ಎರಡನೆಯ ಪಾದವನ್ನೂ ಹಾಗೆಯೇ ಮೂರನೆಯ ಪಾದವನ್ನೂ ಇದೇ ರೀತಿಯಲ್ಲಿ ಹಾಡಲಾಗುವುದೋ, (ಯಾವುದರಲ್ಲಿನ) ನಾಲ್ಕನೆಯ(ಪಾದ-)ವನ್ನು –                                                                                  ೧೨೧

೧೧೭೮ ಪ್ರತ್ಯೇಕವಾಗಿ ಎಲ್ಲಾ ಪಾದಗಳ ಕೊನೆಯಲ್ಲಿಯೂ ಹಾಡಲಾಗುವುದೋ ಅದು ಝೊಂಬಡವೆಂಬ ಹೆಸರಿನ(ಪ್ರಬಂಧ)ದೆಂದು ಹಾಡುಬಲ್ಲವರು ಹೇಳುತ್ತಾರೆ.                                                                                                        ೧೨೨

೧೧೭೯ ಝೊಂಬಡದಲ್ಲಿ ಕಂಕಾಲವೆಂಬ ಹೆಸರಿನ ತಾಲವು ಇರುವುದಿಲ್ಲ; ದೇಶೀಗೆ ಸಂಬಂಧಿಸಿದ ಇತರ ಎಲ್ಲಾ ತಾಳಗಳೂ ಇರುತ್ತವೆ. ತೇನಕದಿಂದ ಸಿಂಗರವಾದ ಝೊಂಬಡ (ಪ್ರಬಂಧ)ದ ಭೇದಗಳು (ಬಹುವಾಗಿ) ಇವೆ.                                                         ೧೨೩

[xl. ಧ್ವನಿಕುಟ್ಟನೀ]

೧೧೮೦ (ಯಾವುದರಲ್ಲಿ) ಸಮವಾದ (ಸಮಸಂಖ್ಯೆಯ) ಮಾತ್ರೆಗಳು (ಪ್ರತಿಯೊಂದು ಪಾದದಲ್ಲಿಯೂ ಇರುತ್ತವೋ, ಅದರಲ್ಲಿ ಧ್ವನಿಯು ಇರುತ್ತದೋ, ನಂತರ ಒಮ್ಮೊಮ್ಮೆ ವಿರಾಮ (ಮೌನ) ವಿರುತ್ತದೋ, ಅದರಲ್ಲಿ ಎರಡು ತಾಳಗಳಿವೆಯೋ ಆಗ ಅದು ಧ್ವನಿ ಕುಟ್ಟನೀ (ಪ್ರಬಂಧವೆನ್ನಿಸಿಕೊಳ್ಳುತ್ತದೆ.)                                                                                                         ೧೨೪

೧೧೮೦ಆ,ಇ,ಈ

____

[xli. ಢೇಂಕೀ]

೧೧೮೧ ಸ್ವೇಚ್ಛಯಾ ಗೃಹ್ಯತೇ ಯತ್ರ ನಾದೋ Sಕ್ಷರಸಮನ್ವಿತಃ |
ತಾಲಶೂನ್ಯಸ್ತತಸ್ತಾಲೋ ಢೇಂಕಿಕಾ ಸಾ ಪ್ರಕೀರ್ತಿತಾ || ೧೨೫ ||

[xlii. ಏಕತಾಲೀ]

೧೧೮೨ ನಿರಂತರಮನುಪ್ರಾಸೋ ಯತಿರ್ಯತ್ರ ದ್ರುತೇ ದ್ರುತೇ |
ಕ್ರಿಯತೇ ಗೀತತತ್ತ್ವಚ್ಲೈಃ ಸಾ ಸ್ಮೃತಾ ತ್ವೇಕತಾಲಿಕಾ || ೧೨೬ ||

[xliii ಮಾತೃಕಾ]

೧೧೮೩ ಆದಾಯ ಗೀಯತೇ ಯಸ್ಯಾಮೇಕೈಕಂ ಮಾತೃಕಾಕ್ಷರಮ್‌ |
ಇಷ್ಟೇನಾರ್ಥೇನ ಸಂಯೋಜ್ಯ ಮಾತೃಕಾ ಸಾ ಪರಕೀರ್ತಿತಾ || ೧೨೭ ||

[xliii. ಸ್ವರಾರ್ಥಃ]

೧೧೮೪ ವಾಂಛಿತಾರ್ಥಸ್ವರೈರೇವ ಯತ್ರ ಸಮ್ಯಕ್‌ಪ್ರಗೀಯತೇ |
ವಸ್ತ್ವಾತ್ಮಕೇಷು ಗೀತೆಷು ಸ ಸ್ವರಾರ್ಥ ಇತಿ ಸ್ಮೃತಃ || ೧೨೮ ||

[xlv. ಕರಣಂ]

೧೧೮೫ ನಿರಂತರಂ ಸ್ವರೈರೇವ ಯತ್ರ ಖಂಡದ್ವಯಂ ಭವೇತ್‌ |
ತದತ್ರ ಕರಣಂ ಪ್ರೋಕ್ತಂ ಯತ್ಯಾ ತು ಕರುಣಾಖ್ಯಯಾ || ೧೨೯ ||

[xlvi. ವರ್ಣಸ್ವರಃ]

೧೧೮೬ ನಿಬದ್ಧೋ ಹಸ್ತಪಾಟೈರೈಃ ಸಂಯುಕ್ತಸ್ತೇನಕೈಃ ಪುನಃ |
ಸ್ವರೈಃ ಷದೃಶ್ಚ ಪಾಟೈಶ್ಚ ತೇನಕೈಶ್ಚ ಸಮನ್ವಿತಃ |
ಗೀಯತೆ ತಾಲಯುಕ್ತೋ ಯಃ ಸ ವರ್ಣಸ್ವರಕಃ ಸ್ಮೃತಃ || ೧೩೦ ||

ಪಾಠವಿಮರ್ಶೆ: ೧೧೮೧ಅ, ಈ ೧೧೮೩ಅ-ಈ ೧೧೮೫ಆ,ಇ,ಈ ೧೧೮೬ಅ-ಊ,ಆ,ಈ, ಉ

—-

[xli. ಢೇಂಕಿ]

೧೧೮೧ ಯಾವುದರಲ್ಲಿ ಅಕ್ಷರಕ್ಕೆ ಹೊಂದಿಕೊಂಡ ನಾದವನ್ನು ಬೇಕೆಂದೆಡೆಯಲ್ಲಿ ತಾಳವಿಲ್ಲದೆಯೇ ಎತ್ತಿಕೊಳ್ಳಲಾಗುತ್ತದೆಯೋ, ಅದರ ನಂತರ ತಾಳವಿರುತ್ತದೆಯೋ ಅದು ಢೇಂಕೀ (ಪ್ರಬಂಧ) ಎಂದು ಹೆಸರುವಾಸಿಯಾಗಿದೆ.                                                ೧೨೫

[xlii. ಏಕತಾಲೀ]

೧೧೮೨ ಯಾವುದರಲ್ಲಿ ಅನುಪ್ರಾಸವನ್ನು ಎಡಬಿಡದೆ ರಚಿಸಲಾಗುವುದೋ, ಬೇಗ ಬೇಗ (ಪ್ರತಿಯೊಂದು ದ್ರುತದಲ್ಲಿಯೂ?) ಯತಿಯನ್ನು (ನಿರ್ಮಿಸಲಾಗುವುದೋ) ಅದನ್ನು ಹಾಡಿನ ಸ್ವರೂಪವನ್ನು ಬಲ್ಲವರು ಏಕತಾಲೀ ಎಂದು ಸ್ಮರಿಸುತ್ತಾರೆ.            ೧೨೬

[xliii. ಮಾತೃಕಾ]

೧೧೮೩ ಯಾವುದರಲ್ಲಿ ಒಂದೊಂದೇ ಮಾತೃಕಾ (=ವರ್ಣಮಾಲೆಯ) ಅಕ್ಷರವನ್ನು ತೆಗೆದುಕೊಂಡು ಅದರಲ್ಲಿ ಇಷ್ಟವಾದ ಅರ್ಥವನ್ನು ಸಂಯೋಜಿಸಿಕೊಂಡು ಹಾಡಲಾಗುತ್ತದೋ ಅದು ಮಾತೃಕಾ (ಪ್ರಬಂಧ) ಎಂದು ಹೆಸರುವಾಸಿಯಾಗಿದೆ.                ೧೨೭

[xliv. ಸ್ವರಾರ್ಥ]

೧೧೮೪ ವಸ್ತುವನ್ನುಳ್ಳ ಯಾವ ಹಾಡುಗಳಲ್ಲಿ ಇಷ್ಟವಾದ ಅರ್ಥವನ್ನು ಕೊಡುವ ಸ್ವರಗಳಿಂದಲೇ ಸಂಪೂರ್ಣವಾಗಿ (ಸರಿಯಾಗಿ) ಹಾಡಲಾಗುವುದೋ ಅದು ಸ್ವರಾರ್ಥ (ಪ್ರಬಂಧ) ಎಂದು ಸ್ಮರಿಸಲಾಗಿದೆ.                                                     ೧೨೮

[xlv. ಕರಣ]

೧೧೮೫ ಯಾವುದರ (ಮಧ್ಯದ)ಲ್ಲಿ ಎಡೆಯನ್ನು ಬಿಡದೆ ಕೇವಲ ಸ್ವರಗಳಿಂದಲೇ ಎರಡು ಖಂಡಗಳಿರುತ್ತವೋ ಮತ್ತು ಕರಣಯತಿ(ಯೆಂಬ) ತಾಲವು ಇರುತ್ತದೋ ಅದನ್ನು ಇಲ್ಲಿ ಕರಣ(ಪ್ರಬಂಧ)ವೆಂದು ಹೇಳಿದೆ.                                                                  ೧೨೯

[xlvi. ವರ್ಣಸ್ವರ]

೧೧೮೬ ಯಾವುದು ಹಸ್ತಪಾಟಗಳಿಂದ ನಿರ್ಮಿತವಾಗಿರುತ್ತದೋ ತೇನಕಗಳನ್ನು ಸೇರಿಕೊಂಡಿರುತ್ತದೋ, ಸ್ವರಗಳಿಂದಲೂ ಪದಗಳಿಂದಲೂ ಪಾಟಗಳಿಂದಲೂ ತೇನಕಗಳಿಂದಲೂ ಕೂಡಿಕೊಂಡಿದೆಯೋ, ತಾಲದೊಡನೆ ಹಾಡಲಾಗುತ್ತದೋ ಅದು ವರ್ಣಸ್ವರ (ಪ್ರಬಂಧ) ಎಂದು ಸ್ಮರಿಸಲಾಗಿದೆ.           ೧೩೦

____

[xlvii. ಮುಕ್ತಾವಲೀ]

೧೧೮೭ ದೇಶೀಕಾರಪದೈ ರಮ್ಯೈಃ ಸಾನುಪ್ರಾಸೈಃ ಪ್ರಗೀಯತೇ |
ನಾಮಾನುವರ್ಣನೀಯಸ್ಯ ಸಾ ಮುಕ್ತಾವಲೀ ಸಂಜಞಿತಾ || ೧೩೧ ||

[xlviii. ಪ್ರತಾಪವರ್ಧನಃ]

೧೧೮೮ ಉತ್ಸಾಹಜನನೈಃ ಪಾಟೈಃ ಸ್ವರೈಶ್ಚಾಪಿ ಸುಸಂಯುತಃ |
ತೇನಕೈರ್ಬಿರುದೈರ್ಯತ್ರ ವರ್ಣನೀಯಸ್ಯ ಗೀಯತೇ || ೧೩೨ ||

೧೧೮೯ ಪ್ರತಾಪವರ್ಧನೋ ನಾಮ ಪ್ರಬಂಧಃ ಪರಿಕೀರ್ತಿತಃ |
ಅಷ್ಟಾಭಿರಧಿಕಾ ರಮ್ಯಾಶ್ಚತ್ವಾರಿಂಶದಿತಿ ಸ್ಫುಟಮ್‌ || ೧೩೩ ||

[ಗೀತದೋಷಃ]

೧೧೯೦ ಲೋಕದುಷ್ಟಂ ಶಾಸ್ತ್ರದುಷ್ಟಂ ಪುನರುಕ್ತಂ ಚ ವರ್ಜಯೇತ್‌ |
ಛಂದೋದುಷ್ಟಂ [?] ತಥಾ ಗ್ರಾಮ್ಯಂ ಗತಕ್ರಮಮಪಾರ್ಥಕಮ್‌ |
ಪದಂ ಚಾರ್ಥಂ ತು ಸಂದಿಗ್ಧಂ ಕಲಾಬಾಹ್ಯಂ ವಿಭಕ್ತಕಮ್‌ || ೧೩೪ ||

[ಉಪಸಂಹಾರಃ]

೧೧೯೧ ವಿಬುಧಾನಾಂ ವಿನೋದಾಯ ಪ್ರಬಂಧಾಃ ಕಥಿತಾ ಮಯಾ |
ಇದಾನೀಂ ಕಥಯಿಷ್ಯಾಮಿ ವಾದ್ಯಾನಾಂ ನಿರ್ಣಯೋ ಯಥಾ
ಏತಾವಾನೇವೋಪಲಬ್ಧೋSಯಂ ಗ್ರಂಥಃ | || ೧೩೫ ||

೧೧೯೨ ಇತಿ ಮತಂಗಮುನಿವಿರಚಿತ ಬೃಹದ್ದೇಶ್ಯಾಂ ಪ್ರಬಂಧಾಧ್ಯಾಯಃ ಷಷ್ಠಃ

ಪಾಠವಿಮರ್ಶೆ: ೧೧೮೮ಅಆ,ಇ, ೧೧೮೯ಅ ೧೧೯೦ಅ-ಉ ಅಆ,ಇ,ಉ,ಊ ೧೧೯೧ಇಈ, ಊ ೧೧೯೨

—-

[xlvii. ಮುಕ್ತಾವಲೀ]

೧೧೮೭ (ಯಾವುದನ್ನು) ಸುಂದರವಾದ ಅನುಪ್ರಾಸಗಳಿರುವ ದೇಶೀ (ಭಾಷೆಯ) ಪದಗಳಿಂದ ವರ್ಣಿಸಬೇಕಾಗಿರುವವರ ಹೆಸರನ್ನು ಹಾಡಲಾಗುತ್ತದೋ ಅದು ಮುಕ್ತಾವಲಿಯೆಂಬ ಹೆಸರಿನದಾಗುತ್ತದೆ.                                                           ೧೩೧

[xlviii. ಪ್ರತಾಪವರ್ಧನ]

೧೧೮೮ ಉತ್ಸಾಹವನ್ನುಂಟು ಮಾಡುವ ಪಾಟಗಳಿಂದಲೂ ಸ್ವರಗಳಿಂದಲೂ ಕೂಡಿಕೊಂಡು ತೇನಕಗಳಿಂದಲೂ ವರ್ಣಿಸಬೇಕಾಗಿರುವವರನ್ನು ಕುರಿತ ಬಿರುದಗಳಿಂದಲೂ ಹಾಡಲಾಗುವುದನ್ನು-                                                                                           ೧೩೨

೧೧೮೯ – ಪ್ರತಾಪವರ್ಧನವೆಂಬ ಹೆಸರಿನ ಪ್ರಬಂಧವೆಂದು ನಿರೂಪಿಸಿದೆ.
ಹೀಗೆ ನಲವತ್ತರ ಮೇಲೆ ಎಂಟು ಸುಂದರವಾದ ಪ್ರಬಂಧಗಳನ್ನು ಸ್ಪಷ್ಟವಾಗಿ ವರ್ಣಿಸಲಾಗಿದೆ. ೧೩೩

[ಗೀತದೋಷಗಳು]

೧೧೯೦ ಲೋಕರೂಢಿಯ ದೃಷ್ಟಿಯಿಂದ ದೋಷವಿರುವುದು, ಶಾಸ್ತ್ರದ ವಿಧಿನಿಷೇಧಗಳ ದೃಷ್ಟಿಯಿಂದ ದೋಷವಿರುವುದು, ಹೇಳಿದ್ದನ್ನೇ ಹೇಳುವುದು, ಛಂದಸ್ಸಿನ ದೋಷವಿರುವುದು (?), ಪಾಮರಜನರ ವ್ಯವಹಾರದಲ್ಲಿ ಮಾತ್ರ ಇರುವಂತಹದು <ಗ್ರಾಮ್ಯ,>, ಮೊದಲು ನಿರ್ದೇಶಿಸಿರುವ ಕ್ರಮವನ್ನು ಉಲ್ಲಂಘಿಸಿ ವಿಷಯಗಳನ್ನು ನಿರೂಪಿಸುವುದು <ಗತಕ್ರಮ>, ವಾಕ್ಯಕ್ಕೆ ಅಥವಾ ವಾಕ್ಯಖಂಡಕ್ಕೆ ಒಟ್ಟಂದದ ಅರ್ಥವಿಲ್ಲದಿರುವುದು <ಅಪಾರ್ಥ>, ಪದಗಳಲ್ಲಿಯೂ ಅರ್ಥಗಳಲ್ಲಿಯೂ ಸಂದಿಗ್ದತೆಯಿರುವುದು, ಕಲೆಯ ಅಂತರಂಗ-ಬಹಿರಂಗಗಳಿಗೆ ವಿರುದ್ಧವಾದುದು <ಕಲಾಬಾಹ್ಯ>, ಅವಕಾಶವಿರಲಿ, ಇಲ್ಲದಿರಲಿ ಪದಗಳನ್ನು ಒಡೆಯುವುದು (?) <ವಿಭಕ್ತ>- ಇವುಗಳನ್ನು (ಮಾತುವಿನ ರಚನೆಯಲ್ಲಿ) ಬಿಡಬೇಕು.           ೧೩೪

[ಉಪಸಂಹಾರ]

೧೧೯೧ ವಿದ್ವಾಂಸರ ಬೇಸರನ್ನು ಕಳೆಯುವ ವಪಾಯವಾಗಿ ನಾನು ಪ್ರಬಂಧಗಳನ್ನು ಹೇಳಿದ್ದಾಯಿತು. ಈಗ ವಾದ್ಯಗಳ ನಿರ್ಣಯವನ್ನು ಹೇಳುತ್ತೇನೆ. ಅದು ಹೇಗೆಂದರೆ-                                                                                                                          ೧೩೫

೧೧೯೨ ಹೀಗೆ ಮತಂಗಮುನಿಯು ರಚಿಸಿರುವ ಬೃಹದ್ದೇಶಿಯಲ್ಲಿ ಆರನೆಯ ಪ್ರಬಂಧಾಧ್ಯಾಯವು ಮುಗಿಯಿತು

ಈ ಗ್ರಂಥವು ದೊರೆತಿರುವುದು ಇಷ್ಟೇ.