೧. ಪ್ರಕರಣ : ಮಾತೃಕೆಯಲ್ಲಿ ಪ್ರಥಮ ಪತ್ರವು ನಷ್ಟವಾಗಿದೆಯೆಂದು ಪ್ರಸಂ. ರು ಸೂಚಿಸಿದ್ದಾರೆ. ೩. ಇಈ ತಸ್ಯೇತಿ ಸತ್ಯಂ : ಪ್ರಸಂ.ರು ತೇಷಾಂ ಇತಿ ಎಂಬ ಮಾತೃಕಾ ಪಾಠವನ್ನು ಸ್ವೀಕರಿಸಿದ್ದಾರೆ. ಆದರೆ ದ್ವಿಸ.ರು ತೇಷಾಂ ಎಂಬ ಷಷ್ಠೀಬಹುವಚನವು ಧ್ವನೇಃ ಎಂಬ ಷಷ್ಠೀಏಕವಚನದೊಡನೆ ಅಸಂಗತವಾಗುತ್ತದೆಂಬ ಕಾರಣದಿಂದ ಅದನ್ನು ತತ್‌ಶಬ್ದದ ಏಕವಚನ ವಷ್ಠ್ಯಂತವಾದ ತಸ್ಯ ಎಂದ ತಿದ್ದಿಕೊಂಡು ‘ತಸ್ಯೇತಿ ಸತ್ಯಂ’ ಎಂದು ಪಾಠಪೂರಣವನ್ನು ಮಾಡಿದ್ದಾರೆ. ಧ್ವನಿ ಎಂಬುದನ್ನು ಜಾತ್ಯೈ ವಚನವೆಂದಿಟ್ಟುಕೊಂಡು ಧ್ವನಿಯ ನಾನಾತ್ವವನ್ನು ತಸ್ಯ ಶಬ್ದದಲ್ಲಿ ಅಡಕಗೊಳಿಸಿಯೂ ಹೀಗೆ ಮಾಡಬಹುದು; ಆದರೆ ತೇಷಾಂ ಎಂಬ ಬಹುವಚನಕ್ಕೆ ಕಾರಣವನ್ನು ಈಗ ದೊರೆಯದೆ ಇರುವ ಪ್ರಥಮಪತ್ರದಲ್ಲಿ ಹೇಳಿರುವುದು ಅಸಂಭವವಲ್ಲ. ಗ್ರಂಥದಲ್ಲಿ ಧ್ವನಿಯ ಬಹು ವಿಧಗಳನ್ನು ನಾನಾ ದೇಶಗಳಲ್ಲಿ (೧ಅ, ೨ಅ), ವ್ಯಕ್ತಾವ್ಯಕ್ತರೂಪಗಳಲ್ಲಿ (೧ಇ), ಮಾತೃಕಾ, ವರ್ಣ, ಪದ ಮತ್ತು ವಾಕ್ಯಗಳಲ್ಲಿ (೬,೮,೯) ಗಾಂಧರ್ವವಿದ್ಯಾಪ್ರಸಕ್ತವಾಗಿ (೧೧) ತೋರಿಸಿರುವುದರಿಂದ ತೇಷಾಂ ಎಂಬ ಪಾಠವು ಅಸಂಗತವೆಂದು ತೋರುವುದಿಲ್ಲ.

(ಅನುಪಲಬ್ದ ಪ್ರಥಮ ಪತ್ರದಲ್ಲಿ ಹೇಳಿರಬಹುದಾದ) ಧ್ವನಿಯ ನಾನಾ ವಿಧಗಳೆಲ್ಲವೂ ಅಮೂರ್ತವಾಗಿಯೇ (ಗಾಳಿಯ ಹಾಗೆ) ಸಾರ್ವತ್ರಿಕವಾಗಿವೆ; ಹೀಗಿರುವಲ್ಲಿ ಧ್ವನಿಯನ್ನು ವಿಶಿಷ್ಟದೇಶ, ವಿಶಿಷ್ಟಸ್ಥಾನಗಳಿಗೆ ಸೀಮಿತಗೊಳಿಸುವುದು ಸರಿಯೆ ಎಂಬುದು ಈ ಪ್ರಶ್ನೆಯ ಭಾವ.

೪ಅಆ. ಯಥಾSನುಭೂತದೇಶಾಚ್ಚ ಧ್ವನೇಃ ಸ್ಥಾನಾನುಗಾದಪಿ: ದ್ವಿಸಂ. ರು ಧ್ವನೇಃ ಎಂಬುದನ್ನು ಷಷ್ಠೀವಿಭಕ್ತಿಯೆಂದು ಗ್ರಹಿಸಿ ಅದರ ವಿಶೇಷಣಗಳನ್ನು ಭಾವಾನಾಮಗಳನ್ನಾಗಿ ತಿದ್ದಿಕೊಂಡಿದ್ದಾರೆ : ‘ಯಥಾನುದೇಶಭತತ್ವಾದ್‌, ಧ್ವನೇಃ ಸ್ಥಾಕನುಗತತ್ವಾದಪಿ.’ ಯಥಾನುದೇಶಭೂತತ್ವಾದ್‌ಎಂಬುದನ್ನು ಸಮಸ್ತಪದವನ್ನಾಗಿ ಗ್ರಹಿಸಿದ್ದಾರೆ. ಆದರೆ ಮಾತೃಕಾಪಾಠವಾದ ಧ್ವನೇಃ ಎಂಬುದನ್ನು ಪಂಚಮೀವಿಭಕ್ತಿಯಲ್ಲಿ ಗ್ರಹಿಸಿ, ಯಥಾSನುಭೂತದೇಶಾಚ್ಚ ಎಂದು ವಿಂಗಡಿಸಿಕೊಂಡರೆ, ಅನು ಎಂಬ ಉಪಸರ್ಗವು ಎರಡೂ ಪದಗಳಲ್ಲಿ ಪುನರಾವರ್ತಿತವಾಗಿದೆ; ಅನುಭೂತಿಯಿಂದಲೂ ಗಮ್‌ ಧಾತುವಿನಿಂದಾದ ಅನುಗಾದ್‌ ಎಂಬುದರಿಂದಲೂ ಜ್ಞಾನವನ್ನೇ (ಅವಗತಿಯನ್ನೇ) ಗ್ರಹಿಸಬೇಕು; ವೇದಾಂತದಲ್ಲಿ ಅನುಭವಕ್ಕೂ ಜ್ಞಾನಕ್ಕೂ ಭೇದವಿಲ್ಲ; ಎಂಬ ಆಲೋಚನಾಪರಂಪರೆಯಿಂದ ಧ್ವನಿಯ ಜ್ಞಾನವು ದೇಶದ (ನಾನಾತ್ವದ) ಅನುಭವದಿಂದಲೂ ಅದರ (ಬಾಹ್ಯಭ್ಯಂತರ ವಿವಿಧ) ಸ್ಥಾನಗಳ ಜ್ಞಾನದಿಂದಲೂ ಉಂಟಾಗುತ್ತದೆ ಎಂಬ ಅರ್ಥವನ್ನು ಇಲ್ಲಿ ಹೊರಡಿಸಬಹುದು. ಉದ್ದಿಷ್ಟಾರ್ಥವನ್ನು ಹೀಗೆ ಮಾತೃಕಾಪಾಠದಿಂದಲೇ ಪಡೆಯಬಹುದು.

೪ಆ. ಈಗ್ರಂಥಾಂಶದ ನಂತರ ಗ್ರಂಥಪಾತವಿರಬಹುದೆಂದು ದ್ವಿಸಂ. ರು ಸೂಚಿಸಿದ್ದಾರೆ. ಧ್ವನಿಶಬ್ದದ ವಿಶೇಷಣಗಳಾದ ‘ಯಥಾನುಭೂತದೇಶಾತ್‌, ಸ್ಥಾನಾನುಗಾತ್‌’ಗಳು ಬೇರೆ ವಿಭಕ್ತಿಗಳಲ್ಲಿರುವುದರಿಂದ ಅರ್ಥೈಸುವುದು ತೊಡಕಾಗುತ್ತದೆ, ಧ್ವನಿಯ ದೇಶೀತ್ವಕ್ಕೆ ಹೇತುಗಳೂ ಸಾಧಕಗಳೂ ಆಗಿರುವ ಇವೆರಡನ್ನೂ ಭಾವನಾಮಗಳನ್ನಾಗಿ ತಿದ್ದಿಕೊಂಡರೆ ಅರ್ಥಸಾಧನವು ಸುಲಭವಾಗುತ್ತದೆ, ಎಂದು ಪಾಠದ ತಿದ್ದುಪಡಿಗೆ ಕಾರಣಗಳನ್ನು ನೀಡಿದ್ದಾರೆ.

ಧ್ವನಿಯ ದೇಶೀತ್ವಸಾಧಕಗಳಾದ ಅನುಭೂತದೇಶ, ಸ್ಥಾನಾನುಗತ್ವಗಳಿಗೂ ಧ್ವನಿಧರ್ಮವುಳ್ಳ ದೇಶೀಯ ಪ್ರಥಮ ಉಗಮಸ್ಥಾನವಾದ ಇನ್ನು ಯಾವುದಕ್ಕೋ ನಡುವಣ ಗ್ರಂಥಾಂಶದ ಕಂದರವು ಇಲ್ಲಿ ಕಾಣುತ್ತದೆ. ಮತಂಗಮುನಿಯ ಉಪಾಸನಾಮಾರ್ಗವಾಗಿದ್ದ ಶ್ರೀವಿದ್ಯಾತಂತ್ರದ ಆಧಾರದ ಮೇಲೆ ಈ ಉಗಮಸ್ಥಾನಗಳನ್ನು ನಾದ ಮತ್ತು ಕಾರಣಬಿಂದುಗಳೆಂದು ಊಹಿಸಬಹುದು. ಇದನ್ನೊಳಗೊಂಡ ಲುಪ್ತಗ್ರಂಥವು ಒಂದು ಅಥವಾ ಎರಡು ಶ್ಲೋಕಾರ್ಧಗಳನ್ನು ಪ್ರಮಾಣದ್ದಾಗಿದ್ದಿರಬಹುದು. ಇದನ್ನು ಮತಂಗಹೃದಯದಲ್ಲಿ ವಿವೇಚಿಸಲಾಗುವುದು.

೭ಅ ಸ್ವರ್ಯತೇ : ಸ್ವರ್ಯುತೇ (ಪ್ರಸಂರು ತಿದ್ದಿದ್ದಾರೆ.)

೭ಆ. – ಮಾದಿಕ್ಷಾಂತಂ -: ಸ್ವರ್ಯತೇ ಎಂದರೆ ಶಬ್ದಿತವಾಗುತ್ತದೆ ಎಂಬ ಅರ್ಥವನ್ನು ಗ್ರಹಿಸಿ ದ್ವಿಸಂ.ರು ಅದನ್ನು ವ್ಯಂಜನಪ್ರಕಾಶಕ ಮಾತ್ರವೆಂದು ಇಟ್ಟುಕೊಂಡು ಮಾತೃಕೆಯ ಆದಿಕ್ಷಾರಿಂತಂ ಎಂಬ ಪಾಠವನ್ನು ಕಾದಿಕ್ಷಾಂತಂ ಎಂದು ತಿದ್ದಿದ್ದಾರೆ. ಸ್ವರ-ವ್ಯಂಜನ ಎಂಬ ಅಕ್ಷರವಿಭಾಗವ್ಯವಸ್ಥೆಯಲ್ಲಿ ಇದು ಸರಿಯೇ; ಆದರೆ ಇದರಿಂದ ಸ್ವರವು ಸ್ವಯಂಪ್ರಕಾಶವೂ ವ್ಯಂಜನಪ್ರಕಾಶಕವಾದ ಸ್ವತಂತ್ರಾಸ್ತಿತ್ವವು ಅದಕ್ಕೆ ಇದೆಯೇ, ಇಲ್ಲವೇ ಎಂಬುದು ತಿಳಿಯುವುದಿಲ್ಲ. ಮೂಲಗ್ರಂಥದ ಆದಿಕ್ಷಾಂತಂ ಎಂಬ ಪಾಠವನ್ನು ಇಟ್ಟುಕೊಂಡರೆ ಆಕಾರವನ್ನು ಮೊದಲು ಮಾಡಿಕೊಂಡು ಕ್ಷಕಾರಾಂತವಾಗಿ ದೇಶಭಾಷೆಯಲ್ಲಿ ವರ್ಣಗಳು ಸ್ವರ್ಯವಾಗುವುದು ಯಾವುದರಿಂದಲೋ ಅದು ಸ್ವರ ಎಂಬ ಅರ್ಥವು ಹೊರಟು ತನ್ನದೇ ಪ್ರಕಾಶಕ್ಕೂ, ಎಂದರೆ ಸ್ವರವು ತನ್ನಿಂದ ತಾನೇ, ಅನ್ಯ ಹೇತುವಿಲ್ಲದೆ ಪ್ರಕಾಶಿಸುತ್ತದೆ ಎಂಬ ಅರ್ಥವು ಸಿದ್ಧಿಸುತ್ತದೆ. ‘ಸ್ವೈ’ ಎಂಬ ಭ್ವಾದಿಗಣದ ಪರಸ್ಮೈಧಾತುವಿಗೆ ಸ್ವರ್‌ಎಂಬ ರೂಪವೂ ಇದೆ. ಇದಕ್ಕೆ ಹೊಳೆಯುವುದು, ಕಾಂತಿ, ಪ್ರಕಾಶ ಇತ್ಯಾದಿ ಅರ್ಥವಿದೆ. ಸ್ವ + ರ್‌(ರಾಜೃದೀಪ್ತೌ) ಎಂಬುದರಿಂದ ಸ್ವಯಂಪ್ರಕಾಶಕ ಎಂಬ ಅರ್ಥವು ಸಾಧ್ಯವಾಗುತ್ತದೆ. ಸ್ವರ್ಯತೇ ಕೇನ? ಸ್ವರಯತಿ ಸ್ವಯಂ (ಸ್ವ+ರ್‌) ಎಂಬ ಸ್ವಯಂಸಾಧಕತ್ವವನ್ನು ಹೇಳಬಹುದು., ರಾಜ್‌ ಧಾತುವಿನಿಂದ (ರಾಜೃದೀಪ್ತೌ) ಸ್ವರಶಬ್ದದ ನಿಷ್ಪತ್ತಿಯನ್ನು ಮತಂಗಮುನಿಯೇ ಕೊಡುತ್ತಾನೆ.

೮ಆ. ವರ್ಗೇಷು : ಪ್ರಸಂ.ದಲ್ಲಿ ವರ್ಣೇಷು ಎಂಬ ಪಾಠಾಂತರವಿದೆಯೆಂದು ದ್ವಿಸಂ.ರು ಹೇಳುತ್ತಾರಾದರೂ ಪ್ರಸಂ.ದಲ್ಲಿ ವರ್ಗಏಷು ಎಂಬ ಸಮೀಚೀನಪಾಠವೇ ಇದೆ.

೯ಆ ಯತ್‌: ಇದನ್ನು ಅವ್ಯಯವಾಗಿ ‘ಏಕೆಂದರೆ’ ಎಂಬ ಅರ್ಥದಲ್ಲಿ ಬಳಸಿರುವುದಾಗಿ ದ್ವಿಸಂ.ರು ಹೇಳುತ್ತಾರೆ.

೯ಇ. ವರ್ಣಯಂತಿ: ವರ್ಣಾ ಯತ್ರ (ಪ್ರಸಂ).

೧೪ಇ. ಯಾನುರಾಗೇಣ: ಸಾನುರಾಗೇಣ (ಪ್ರಸಂ) ಎಂಬುದು ಸಂಸ್ಕೃತ ಭಾಷಾನುಡಿಗಟ್ಟಿಗೆ ಹೊಂದುವುದಿಲ್ಲವೆಂದು ದ್ವಿಸಂ.ರ ಅಭಿಪ್ರಾಯ; ಯಾನುರಾಗೇಣ: ರಾವಿ.ಯಲ್ಲಿಉದ್ಧೃತಿ (:೧೦)

೧೫ಅ. ನಿಬದ್ಧನುಬದ್ಧಶ್ಚಾ : ನಿಬಂಧಶ್ಚಾನಿಬಂಧಶ್ಚಾ (ಪ್ರಸಂ.ಅ)-ಬದ್ಧ ಎಂಬ ರೂಪಗಳೇ ಹೆಚ್ಚು ರೂಢಿಸಿವೆ.

೧೫ಇ. ಆಲಾಪಾ : ಆಪ್ಲಾಪಾ-(ಮಾತೃಕಾಪಾಠ), ಆಲಾಪಾ-ರಾವಿ (:೧೦)

೧೬ಅಆ ಆಲಾಪಾದಿ … ಪ್ರಕೀರ್ತಿತಃ ರಾವಿ (:೧೦)ದಲ್ಲಿ ಅಧಿಕವಾಗಿ ಉದ್ದೃತವಾಗಿದೆ.

೧೬ಇ. ಪ್ರಕಾರಾ : ಪ್ರಕಾರೋ (ಪ್ರಸಂ)

೧೬ಇ. ದೇಶೀಯಂ : ದೇಶೀಯಃ (ಪ್ರಸಂ)

೧೬ಊ. ದೇಶ್ಯಾ ಉ-: ದೇಶ್ಯಾಮು – (ಪ್ರಸಂ.ಖ)

ii. (ನಾದಪ್ರಕರಣ)

೧೯ಅ – ಪಃ ಸ್ಮೃ-ತೋ : – ಪಸ್ತತೋ (ಪ್ರಸಂ)

೨೦ಆ ಈ – ದ್ಗಮಃ :- ದ್ಭವಃ (ಸಿಂಹ. ಸಂರ. ೧.೧.೧-೩:೨೩, ಪಾಠಾಂತರ)

೨೧ಇ ನಾದಾದುತ್ಪದ್ಯತೇ ಬಿಂದುಃ : ಬಿಂದುರುತ್ಪದ್ಯತೇ ನಾದಾನ್ನಾದಾತ್‌(ಸಂಸಸಾ. ೧೮:೧)

೨೧ಈ ನಾದಾತ್ : ತತಃ (ಸಿಂಹ. ಸಂರ. ೧.೧.೧-೩:೨೩, ಪಾಠಾಂತರ)

೨೨ಅ ಹಿ: Sಪಿ (ಸಿಂಹ. ಸಂರ. ೧.೩.೪;೬೫)

೨೨ಅ+ಈ ಕಂದಸ್ಥಾನ… ಮುದ್ಧತಾಮ್‌: ಇದು ಪ್ರಸಂ. ದಲ್ಲ ಭ್ರಷ್ಟವಾಗಿದೆ :

ಕಂದಸ್ಥಾನಸಮುತ್ಥೋ ಹಿ ಸ ಚ ಪಂಚವಿಧೋ ಭವೇತ್‌ |
ಸೂಕ್ಷ್ಮಶ್ಚೈವಾತಿಸೂಕ್ಷ್ಮಶ್ಚ ಸಮೀರಃ ಸಂಚರನ್ನಧಃ |
ಊರ್ಧ್ವಂ ಚ ಕುರುತೇ ಸರ್ವಾಂ ನಾದಪದ್ಧತಿಮುದ್ಧತಾಮ್‌ ||

ಈ ಗ್ರಂಥಾಂಶದಲ್ಲಿ ಪ್ರಥಮಶ್ಲೋಕಾರ್ಧದ ಉತ್ತರಾರ್ಧವೂ ಎರಡನೆಯ ಶ್ಲೋಕಾರ್ಧದ ಪ್ರಥಮಾರ್ಧವೂ ಇದೇ ಪ್ರಕರಣದ ೨೨ನೆಯ ಶ್ಲೋಕಾರ್ಧದ ಉತ್ತರಾರ್ಧವಾಗಿಯೂ ದ್ವಿತೀಯ ಶ್ಲೋಕಾರ್ಧದ ಪ್ರಥಮಾರ್ಧವಾಗಿಯೂ ಕ್ರಮವಾಗಿ ಕಂಡುಬರುತ್ತವೆ. ಅವುಗಳು ಇಲ್ಲಿ ಪ್ರಕ್ಷೇಪಗೊಂಡಿರುವುದರಿಂದ ಈ ಗ್ರಂಥಾಂಶವು ಭ್ರಷ್ಟವಾಗಿದೆ.

೨೨ಇಈ ಸರ್ವಾಂ ನಾದಪದ್ಧತಿಮುದ್ಧತಾಮ್‌: ಸರ್ವಾನ್ನಾದಾನ್ಮೂರ್ಧನಿ ತೂದ್ಧತಾನ್‌(ಸಿಂಹ, ಸಂರ, ೧.೩.೪:೬೫, ಆಕರಸ್ಮರಣೆಯಿಲ್ಲದೆ ‘ತದುಕ್ತಂ’-ಎಂದು ಮಾತ್ರ ಹೇಳಿ ಮಾಡಿದ ಉದ್ದೃತಿ)

೨೩ಅ. ನಕಾರಃ : ನಕಾರಂ (ಸಿಂಹ. ಸಂರ. ೧.೩.೬:೬೫; ಆಕಸ್ಮರಣೆಯಿಲ್ಲದೆ ‘ತಥಾ ಚೋಕ್ತಂ’ ಎಂಬ ಮುನ್ನುಡಿಯೊಡನೆ ಮಾಡಿದ ಉದ್ಧೃತಿ)

೨೩ಇ. ದ್ವಿ : ಹಿ (ಸಿಂಹ. ಅದೇ) ಲಿಪಿಭ್ರಂಶದಿಂದ ಒಂದು ಪಾಠವು ಇನ್ನೊಂದರಲ್ಲಿ ಪರಿಣಮಿಸಿದೆ.

೨೪ಅಆ. ನಾದೋSಯಂ … ಭವೇತ್‌: ಈ ಶಬ್ಧಾರ್ಥವನ್ನು ಜಗದೇಕಮಲ್ಲನು ಸಂಗೀತ ಚೂಡಾಮಣಿ (ಹಸ್ತಪ್ರತಿ)ಯಲ್ಲಿ ಹೀಗೆ ವಿಸ್ತರಿಸಿದ್ದಾನೆ:

ನಕಾರಃ ಪ್ರಾಣ ಇತ್ಯುಕ್ತೋ ದಕಾರೋ ವಹ್ನಿರುಚ್ಯತೇ |
ಅರ್ಥೋSಯಂ ನಾದಶಬ್ದಸ್ಯ ಸಂಕೇತಾತ್‌ ಪರಿಕೀರ್ತಿತಃ ||

ಇಲ್ಲ ನಾದಸ್ಯ ಹಿ (೨೩ಇ) ಎಂಬ ಪಾಠವನ್ನು ಜಗದೇಕಮಲ್ಲನು ಸ್ವೀಕರಿಸಿದ್ದಾನೆ.

ಇದೇ ಶ್ಲೋಕವು ಚತುರ್ಥಪಾದದಲ್ಲಿ ಸಂಕ್ಷೇಪಾತ್ ಎಂಬ ಪಾಠಾಂತರದೊಡನೆ ಸಂಸದಾ (೧.೪-೫೧)ದಲ್ಲಿ ಕಂಡುಬರುತ್ತದೆ.

೨೪ಇಈ ಸೂಕ್ಷ್ಮ …. ಕೃತ್ರಿಮಃ : ಸಂಸಸಾ (೧.೬.೮:೧)ದಲ್ಲಿ ‘ಸ ಚ ಪಂಚವಿಧೋ ನಾದೋ ಮತಂಗಮಿನಿಸಮ್ಮತಃ’ ಎಂಬ ಪೀಠಿಕಡಯೊಡನೆ ಈ ಗ್ರಂಥಾಂಶವಿದೆ:

ಅತಿಸೂಕ್ಷ್ಮಶ್ಚ ಸೂಕ್ಷ್ಮಶ್ಚ ಪುಷ್ಟೋsಪುಷ್ಟಶ್ಚ ಕೃತ್ರೊಮಃ |
ಅತಿಸೂಕ್ಷ್ಮೋ ಭವೇನ್ನಾಭೌ ಹೃದಿ ಸೂಕ್ಷ್ಮಃ ಪ್ರಕಾಶತೇ ||

ಪುಷ್ಟೋsಭಿವ್ಯಜ್ಯತೇ ಕಂಠೇ ತ್ವಪುಷ್ಟಃ ಶಿರಸಿ ಸ್ಮೃತಃ |
ಕ್‌ಋತ್ರಿಮೋ ಮುಖದೇಶೇ ತು ಸ್ಥಾನಭೇದೇನ ಭಾಸತೇ ||

ಅವ್ಯಕ್ತಃ ಶಿರಸೀತ್ಯುಕ್ತಃ ಕೈಶ್ಚಿತ್‌ ತನ್ನೋಪಪದ್ಯತೇ |

೨೫ಈ ವ್ಯಕ್ತಾವ್ಯಕ್ತಸ್ತಾಲುದೇಶಗೇ : ವ್ಯಕ್ತಃ ಅವ್ಯಕ್ತಸ್ತಾಲುದೇಶಗೇ (ಸಿಂಹ ಅದೇ)ಹೋಲಿಸಿ:

……….. ಸೋ (= ಮಾರುತಃ) sಥ ಕ್ರಮಾದೂರ್ಧ್ವಪಥೇ ಚರನ್‌ |
ನಾಭಿಹೃತ್‌ಕಂಠಮೂರ್ಧಾಸ್ಯೇಷ್ವಾವಿರ್ಭಾವಯತಿ ಧ್ವನಿಮ್‌ |
ನಾದೋ sತಿಸೂಕ್ಷ್ಮಃ ಸೂಕ್ಷ್ಮಶ್ಚ ಪುಷ್ಪೋ sಪುಷ್ಪಶ್ಚ ಕೃತ್ರಿಮಃ |
ಇತಿ ಪಂಚಾಭಿಧಾಂ ಧತ್ತೇ ಪಂಚಸ್ಥಾನಸ್ಥಿತಃ ಕ್ರಮಾತ್‌ | (ಸಂರ.೧.೩.೪.,೫:೬೪)

ಹೀಗೆ ಸಂಗೀತಶಾಸ್ತ್ರಗ್ರಂಥಗಳಲ್ಲಿ ಪಂಚವಿಧಾನಾದಗಳ ಅನುಕ್ರಮದಲ್ಲಿಯೂ ಅವು ಉತ್ಪತ್ತಿಯಾಗುವ ದೇಹಸ್ಥಾನಗಳಲ್ಲಿಯೂ ಮತಭೇದವಿದೆ. ಇದನ್ನು ಮತಂಗಹೃದಯದಲ್ಲಿ ವಿವೇಷಿಸಲಾಗುವುದು.

೨೬ಈ ಮನೋಹರಾ : -ರಾ (ಪ್ರಸಂ.ಅ.ಖ)

iii (ಶ್ರುತಿಪ್ರಕರಣ)

೨೭ ಇಈ. ಶ್ರುಶ್ರವಣೇ … ಸಮುದ್ಭವಃ : ಶ್ರವಣಾರ್ಥಸ್ಯ ಧಾತೋಃ ಕ್ತಿನ್‌ ಪ್ರತ್ಯಯೇ ಚ ಸುಸಂಸ್ರಿತೇ | (ಸಿಂಹ. ಸಂರ. ೧.೧.೮ಅ:೬೮; ಕಲ್ಲಿ. ಸಂರ.೧.೧.೮ಆ:೭೦)

೨೭ ಊ – ಜ್ಞೈ : ಕರ್ಮ-: ಜ್ಞೈಃ ಕರ್ಮ – (ಸಿಂಹ. ಅದೇ, ಕಲ್ಲಿ, ಅದೇ) ; ಜ್ಞೈರ್ಭಾವ-(ಪ್ರಸಂ).

೨೮ಅ. ಶ್ರೂಯತ : ಶ್ರೂಯಂತ (ಸಿಂಹ. ಅದೇ : ೬೮; ಕಲ್ಲಿ. ಅದೇ)

೨೮ಅ. ಶ್ರುತಿಃ ಶ್ರುತಯಃ (ಸಿಂಹ. ಅದೇ ; ಕಲ್ಲಿ. ಅದೇ)

೨೮ಈ ಹೋಲಿಸಿ : ಆಕಾಶಪವನಯೋಗಾತ್ ಪುರುಷಪ್ರಯತ್ನಪ್ರೇರಿತೋ ಧ್ವನಿರ್ನಾಭೇರೂರ್ಧ್ವ ದೇಶಮಾಕ್ರಾಮನ್‌ ಧೂಮವತ್‌ ಸೋಪಾನಪದಕ್ರಮೇಣ ಪವನೇಚ್ಛಯಾssರೋಹನ್ನಂತರ್ಭೂತ ಪೂರಣಪ್ರಯತ್ಯಯಾರ್ಥತಯಾ ಚತುಃಶ್ರುತ್ಯಾದಿಬೇದಭಿನ್ನಃ ಪ್ರತಿಭಾಸತ ಇತ್ಯೇಕೈವಶ್ರುತಿರಿತಿ ಮತಂಗಃ (ಸಂಸಸಾ, ಹಸ್ತಪ್ರತಿ)

೨೮ಈ ದೇಹಾಗ್ನಿ : ದೇಹಾಕಾಶ (ಸಿಂಹ. ಅದೇ ; ಕಲ್ಲಿ ಅದೇ) : ಈ ಉದ್ದೃತಿಗಳಿಂದ ಪಾಠವನ್ನು ಪುನಾರಚಿಸಿದೆ.

೨೮ಈ. ಪದಕ್ರಮೇಣ : ಪದಾವಸ್ಥಾನ – (ಸಿಂಹ ಅದೇ)

೨೮ಈ. ಆರೋಹನ್‌.. ತಯಾ – : ಆಹಾಹರೋಹನ್ನತರ್ಭೂತಪೂರಣಪ್ರಾತಿನಿಪಾರ್ಯಾದ್ಯತಯಾ (!ಪ್ರಸಂ).

೨೮ಈ. ಭಾಸ(ತ)ಇತಿ ಮಾಮಕೀನಂ: ಭಾಸತಿ ಇತಿ ಮಾಮಕೀಯಂ (ಕಲ್ಲಿ. ಅದೇ)

೨೮ಈ. ತಾವದ್‌… ಮತಮ್‌: ಹೋಲಿಸಿ :

ಊರ್ಧ್ವಮುದ್ಯನ್‌ ಹೃದಾಕಾಶೇ ಪೂರ್ಯತೇ ಪ್ರೇರಿತೋ ಧ್ವನಿಃ |
ನಾನಾಸ್ಥಾನೋಪಾಧಿಭೇದಾದ್ಯೋ ನಾನಾ ಪ್ರತಿಭಾಸತೇ |
ತ (೦) ಮತಂಗಃ ಶ್ರೂತಿ (೦)ಪ್ರಾಹ ಮೇಘೇ Sಹರ್ಪತಿರಶ್ಮಿವತ್‌ |
(ಸಂ: ರಾಜ. ೧.೧.೧.೩೧ ಇಈ ೩೨)

೨೯ಅ. ತು… ಪ್ರಕಾರಾ : ಶ್ರುತಿರ್‌…: ತು ಪ್ರಕಾರಾಂ ಶ್ರುತಿಂ (ಕಲ್ಲಿ.ಅದೇ)

೨೯ಇ. -೦ತರಾ ವಿ- : -೦ತರ ವಿ – (ಕಲ್ಲಿ. ಅದೇ)

೨೯ಈ. ಚಾಹ : – ಚ (ಕಲ್ಲಿ. ಅದೇ)

೩೦ಇ. sಪಿ ದ್ವಿಧಾ : ದ್ವಿವಿಧಾ (ಸಿಂಹ. ಅದೇ ; ಕಲ್ಲಿ. ಅದೇ)

೩೧ಅ. ಸಂಸ್ಥಾನಾದ್‌: ಸಂಸ್ಥಾತೋ (ಸಿಂಹ. ಅದೇ)

೩೧ಅಆ. ನಿಯತ … ಗೀತಿಷು : ಹೋಲಿಸಿ :

…. ಶ್ರವಣಾತ್ ಶ್ರುತಿಸಂಜ್ಲೈತಾಃ |
…… |
ತಾಭ್ಯಃ ಕಾಶ್ಚಿದುಪಾಯಃ ಗೀಯಂತೇ ಸರ್ವಗೀತಿಷು |
ಆದ್ರಿಯಂತೇ ಚ ಯೇತೇಷು ಸ್ವರತ್ವಮುಪಲಭ್ಯತೇ | (ದತ್ತಿಲಂ, ೯ಈ, ೧೦)

೩೨ಅ. ಅಂತಃಸ್ವರವಿವರ್ತಿನ್ಯೋ : ಅಂತಃಶ್ರುತಿವಿವರ್ತಿನ್ಯೋ (ಪ್ರಸಂ): ಅಂತಃಸ್ವರವರ್ತಿನ್ಯೋ (ಸಿಂಹ. ಅದೇ; ಕಲ್ಲಿ. ಅದೇ; ಸಂಸಸಾ, ಹಸ್ತಪ್ರತಿ)

೩೨ಇ. ವೈಸ್ವರ್ಯಂ : ಚೈಶ್ವರ್ಯಂ (ಪ್ರಸಂ., ದ್ವಿಸಂ). ದ್ವಿಸಂ.ರು. ‘ಚೈಶ್ವರ್ಯಂ’ ಎಂಬ ಪಾಠಸ್ವೀಕೃತಿಯಲ್ಲಿ ನೀಡಿರುವ ಸಮರ್ಥನೆಯು (: ೧೫೬) ದುರ್ಬಲವಾಗಿದೆ. ಇದನ್ನು ವೈಷ್ಪರ್ಯವೆಂದು ಈ ಕಾರಣಗಳಿಂದ ತಿದ್ದಿವೆ :

೧. ವೈಸ್ವರ್ಯವೆಂದರೆ ಅಹಿತವಾದ ಸ್ವರವಲ್ಲ, ವಿಕೃತಿ. ‘ಕ್ರಿಯಾಗ್ರಾಮವಿಭಾಗತಃ’ ಎಂದರೆ ಗ್ರಾಮಾಶ್ರಿತಗಳಾದ ಮೂರ್ಛನಾತಾನ ಮುಂತಾದವುಗಳ ಕ್ರಿಯೆಗಳ ವಿಭಾಗದಿಂದ.

೨. ವೈಸ್ಪರ್ಯವೆಂದರೆ ಸ್ವರದೋಷವಲ್ಲ, ಅದು ವೈದಿಕಸ್ವರದ ಒಂದು ರಭೇದ (ಋಕ್‌ ತಂತ್ರ, ೨.೫.೫; ೨.೬.೪; ಇದರ ಮೇಲೆ ಋಕ್‌ ತಂತ್ರವಿವೃತಿಯ ವಿವರಣೆ; ನಾಶಿ. ೧.೮೬-೮ ಮತ್ತು ವಿವರಣದ ವ್ಯಾಖ್ಯಾನ; ಪುಷ್ಪಸೂತ್ರ ಗ್ರಂಥದ ಸಂಪಾದನಕ್ಕೆ ರಿಚರ್ಡ್‌ಸೈಮನ್ನರ ಮುನ್ನುಡಿ).

೩. ಮೇಲ್ಕಂಡ ಅಕರಗಳೆಲ್ಲೆಲ್ಲ ವೈಸ್ವರ್ಯವೆಂದರೆ ಸ್ವರ್ಯ, ಸ್ವಾರ; ಉಚ್ಚ-ನೀಚ ಸ್ವರಗಳ ನಡುವೆ ಸ್ಫುರಿಸುವ ಮಧ್ಯಂತರ ಸ್ಥಿತಿ, ತ್ರಿಮಾತ್ರ ಪ್ರಮಾಣವುಳ್ಳ ಸ್ವರ. ಅಭಾ. (ನಾಶಾ. ೧೭.೧೨೯ ಗದ್ಯ : ‘ಪ್ರಶಮನ’ದ ವ್ಯಾಖ್ಯಾನ: ೩೯೦)ಯಂತೆ ಅಂತರಾಲಶ್ರುತಿವಿಶೇಷಗಳಲ್ಲಿ ಧ್ವನಿಯ (ವಿ?)ಸಂವಾದದಿಂದ ಹುಟ್ಟುವ ಸ್ವರಸ್ಥಾನ. ಈ ಶ್ರುತಿವಿಶೇಷಗಳು ಸ್ವರತ್ವವಿಹಿತವಾದವುಗಳು. ಹೀಗೆ ಅಂತರಶ್ರುತಿಗಳಲ್ಲಿ ಹುಟ್ಟುವ ಸ್ವರಗಳು ವೈಸ್ವರ್ಯಗಳು. ವೈಸ್ವರ್ಯಶಬ್ದವನ್ನು ವೈ(=ನಿಪಾತ) + ಸ್ವರ್ಯ ಎಂದೂ ವಿಭಜಿಸಬಹುದೆಂಬುದು ಗಮನಾರ್ಹವಾಗಿದೆ. ಕಲ್ಲಿ. (ಸಂರ.೧.೧.೧೦-೧೬:೭೧) ಈ ಉದ್ದೃತಿಯಲ್ಲಿ ವೈಸ್ವರ್ಯಂ ಎಂಬ ಪಾಠವನ್ನೇ ಸ್ವೀಕರಿಸಿದ್ದಾನೆ.

೩೩ಅ. ಪ್ರತಿಪದ್ಯಂತೇ : ಮನ್ವತೇ (ಕಲ್ಲಿ. ಸಂರ. ೧.೧.೧೦-೧೬:೭೧)

೩೩ಆ. ಆಪರೇ : ಅನ್ಯೇ (ಕಲ್ಲಿ. ಅದೇ)

೩೪.ಆ. ತುಂಬುರುಃ : ಚತುರಃ (?) (ಪ್ರಸಂ).

೩೫ಇ. ಘನಲೀನಸ್ತು : (ಕಲ್ಲಿ. ಅದೇ);ಘನ (ನೀ?ಶ್ರೀ) ಲಶ್ಚ (ಪ್ರಸಂ)

೩೫ಈ. ಜ್ಞಾತವ್ಯಃ : ಜ್ಞೇಯೋSಸೌ (ಕಲ್ಲಿ. ಅದೇ)

೩೬ಈ ಸನ್ನಿಪಾತಜಃ : ಸನ್ನಿಪಾತಕಃ (ಅಸಂವಿ : ೨೭)

೩೭ಅ ಮೇಣ್ವಾದಯೋ : ವೇಣ್ವಾಂಧಯೋ (ಪ್ರಸಂ.)

೩೯ಆ …. ಸ್ವರಾ : ಇದರ ನಂತರ ಅಧಿಕಪಾಠ : ಕಂಪ್ಯಮಾನಾರ್ಧಮುಕ್ತಾಶ್ಚ ವ್ಯಕ್ತಮುಕ್ತಾಂಗುಲಿಃ ಸ್ವರಾಃ | (ಕಲ್ಲಿ. ಅದೇ : ೭೨)

೩೯ಈ ಸವಂಶ : ಸಮಿಚ್ಯ (ಕಲ್ಲಿ. ಅದೇ)

೪೦ಇಈ ಇತಿ …ನವ : ಈ ಶ್ಲೋಕಾರ್ಧವನ್ನು ಮತಂಗಮುನಿಯು ಭರತನಿಂದ ಉದ್ಧರಿಸಿಕೊಂಡಿದ್ದೆಂದು ಕಲ್ಲಿ. (ಅದೇ) ಕೊಡುತ್ತಾನೆ. ಆದರೆ ಇದು ಮತಂಗೋಕ್ತಿ, ಭರತೋಕ್ತಿಯಲ್ಲ.

೪೧ಅ ಮನ್ಯಂತೇ : ವದಂತಿ (ಕಲ್ಲಿ. ಅದೇ)

೪೧ಈ ತಥಾ : ಯಥಾ (ಕಲ್ಲಿ. ಅದೇ)

೪೨ಈ –ಮನ್ಯೇ :- ಮೇವ (ಕಲ್ಲಿ. ಅದೇ; ಸಿಂಹ. ಸಂರ. ೧.೩.೮-೯:೬೮)

೪೩ಇ –ಸ್ತಾವದ್‌… ಪ್ರಸಿದ್ಧಃ ತ- : ಪ್ರಸಂ.ದಲ್ಲಿಲ್ಲ ; ಸಿಂಹ (ಸಂರ. ೧.೩.೧೦-೧೬:೭೪)ನು ಮಾಡಿರುವ ಉದ್ಡೃತಿಯಿಂದ ಈ ಗ್ರಂಥಾಂಶವನ್ನು ಇಲ್ಲಿ ಸೇರಿಸಿದೆ.

೪೩ಈ ಪ್ರಮಾಣಾಶ್ರುತಿ -: ಸಿಂಹ (ಅದೇ): ಪ್ರಮಾ (ಣಾ?ಣಂ) ಶ್ರು(ತಿ?ತೇ-) (ಪ್ರಸಂ.)ದಿಂದ ದ್ವಿಸಂ. ರ ತಿದ್ದುಪಡಿ. ತತ್‌ಪ್ರಮಾಣಾಶ್ರುತಿಃ = ಶ್ರುತಿಯು ಆ ಪ್ರಮಾಣದ್ಧಾಗಿರುತ್ತದೆ. ತತ್‌ ಪ್ರಮಾಣಂ ಶ್ರುತೇಃ = ಶ್ರುತಿಯು ಪ್ರಮಾಣವು ಅದರಷ್ಟಾಗಿರುತ್ತದೆ.

೪೪ಆ ವೀಣೇ : ವೇಣೇ (ಪ್ರಸಂ)

೪೪ಆ ತುಲ್ಯ ಪ್ರಮಾಣೇ: ಈ ಪರಸಂ.ದ ಪಾಠವನ್ನು ದ್ವಿಸಂ.ರು ‘ತುಲ್ಯಪ್ರಮಾಣ’- ಎಂದು ತಿದ್ದಿದ್ದಾರೆ. ಇದರಲ್ಲಿ ‘ತುಲ್ಯ’ ಶಬ್ದವಿರುವುದರಿಂದ ಅದನ್ನು ಪ್ರತ್ಯೇಕಿಸಿ ‘ವೀಣೇ’ ಎಂಬುದಕ್ಕೆ ವಿಶೇಷಣಗಳನ್ನಾಗಿ ಮಾಡುವುದು ಉತ್ತಮವೆಂದು ಭಾವಿಸಿ ಪ್ರಸಂ.ದ ಪಾಠವನ್ನೇ ಇಲ್ಲಿ ಸ್ವೀಕರಿಸಿದೆ.

೪೪ಆ ತಂತ್ರ್ಯುಪಪಾದನ : ತಂತ್ರ್ಯುಪವಾದನ (ನಾಶಾ. ೨೮.೨೬ಗ : ೧೯). ಕೋಶಗಳಲ್ಲಿ ಉಪವಾದನ ವೆಂಬ ಶಬ್ದವಿಲ್ಲ. ಆದರೆ ಉಪವದ್‌, ಉಪವಾದಿತ, ಉಪವಾದಿನ್‌ ಶಬ್ದಗಳಿದ್ದು ಅವಕ್ಕೆಲ್ಲ ಬೈಗಳು, ನಿಂದೆ, ಆಕ್ಷೇಪ ಇತ್ಯಾದಿಗಳಿಗೆ ಸಂಬಂಧಿಸಿದ ಅರ್ಥಗಳು ಮಾತ್ರ ಇವೆ. ತಂತ್ರೀ ಶಬ್ದದ ಸಾಹಚರ್ಯದಿಂದ ಉಪವಾದನ ಎಂಬ ಮಾತಿಗೆ ನುಡಿಸುವುದು ಎಂಬ ಅರ್ಥಾಯಾಮವನ್ನು ಹೊರಟಿಸಬಹುದೋ ಹೇಗೆಂದು ತಿಳಿಯದು; ಇದರ ಪ್ರಯೋಗವು ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಎಲ್ಲಾದರೂ ಅಪರೂಪವಾಗಿ ಇದ್ದರೂ ಬೈಗಳು ಮುಂತಾಗಿ ಚೆನ್ನಾಗಿ ರೂಢಿಸಿರುವ ಪ್ರಸಿದ್ದಾರ್ಥಕ್ಕೆ ತುಂಬಾ ದೂರವಾದ ಒಂದು ಅಪ್ರಸಿದ್ದಾರ್ಥವನ್ನು ಶಾಸ್ತ್ರಗ್ರಂಥದಲ್ಲಿ ಇಟ್ಟುಕೊಳ್ಳ ಬಹುದೇ ಎಂಬ ಶಂಕೆಯೂ ಇದೆ.

ಉಪಪಾದನವೆಂದರೆ ಯುಕ್ತಿಯಿಂದ ವಿವರಿಸುವುದು, ನಿರ್ಣಯಿಸುವುದು, ಸಮರ್ಥಿಯಿಸುವುದು ಎಂಬ ಅರ್ಥಗಳಿವೆ. ತಂತಿಯ ಸಾಮಗ್ರಿ, ಉದ್ದ, ದಪ್ಪ ಇತ್ಯಾದಿಗಳಲ್ಲಿ ಸಮಾನತೆಯನ್ನು ನಿರ್ಣಯಿಸಿ ಅದರ ಮೂಲಕ ವೀಣೆಗಳಲ್ಲಿ ಸಮಾನತೆಯನ್ನು ವಿವರಿಸುವುದು ಅಥವಾ ಸಮರ್ಥಿಸುವುದು ಎಂಬ ಅರ್ಥವು ಇಲ್ಲಿ ಸಮಂಜವಾಗಿದೆ. ಉಪಪಾದನ ಎಂಬ ಶಬ್ದಕ್ಕೆ ಪ್ರಸಂ.ದಲ್ಲಿ ಪಾಠಾಂತರವಿಲ್ಲವೆಂಬುದನ್ನು ಶಾಸ್ತ್ರದಲ್ಲಿ ತತ್ರ್ಯಪವಾದನೆ ಎಂದೇ ಹೇಳಿದೆ. (೨೮.೨೬ಗ : ೧೯). ಆದರೆ ಅಭಾ (ನಾಶಾ. ಅದೇ) ದಲ್ಲಿ ‘ತುಲ್ಯಪಮಾಣತಂತ್ರಯ ಪಪಾದನದಂಡಮೂರ್ಛನಾ ಯಯೋರ್ವೀಣಯೋರಿತಿ’ ಎಂಬ ವ್ಯಾಖ್ಯಾನವಿದೆ. ಎರಡಕ್ಕೂ ಪಾಠಾಂತರಗಳಿಲ್ಲ. ದ್ವಿಸಂ.ರು ಇಲ್ಲಿ ಭಾರತೀಯ ಪಾಠವನ್ನು ಗ್ರಹಿಸಿದ್ದಾರೆ.

೪೪ಇ. ಪಂಚಮವಶಾತ್‌: ಪಂಚಮಸ್ಯ ಶ್ರುತ್ಯುತ್ಯರ್ಷವಶಾತ್‌(ನಾಶ. ಅದೇ : ೨೦)

೪೪ಈ. ಏಕಶ್ರುತ್ಯ- : ಏವಂ ಶ್ರುತ್ಯ- (ಪ್ರಸಂ.). ‘ತತ್ ಪ್ರಮಾಣಂಶ್ರುತಿರಿತಿ’ ಎಂಬುದರೊಡನೆ ಓದಿಕೊಂಡರೆ ಏಕ ಎಂಬ ಪಾಠವು ಸಮಂಜಸವಾಗುತ್ತದೆ; ‘ಪರಂ ವಿಶೇಷಲಾಬೋನಾಸ್ತಿ, ಉಚ್ಚನೀಚ ಮಾತ್ರಪ್ರತೀತೇಃ’ ಎಂಬ ಗ್ರಂಥಾಶಂಕ್ಕೆ ಅನ್ವಯಿಸಿದರೆ ಏವಂ ಎಂಬ ಪಾಠವು ಒಪ್ಪುತ್ತದೆ.

೪೪ಉ. ವಾಪಕರ್ಷಾದ್‌:- ವಾಪಕರ್ಷಯೇತ್‌ (ಪ್ರಸಂ)

೪೪ಉ ಸ್ಥಿರ- : ಸ್ಥಿತ – (ಪ್ರಸಂ.)

೪೪ಉ ದ್ವಿಶ್ರುತ್ಯಭ್ಯಧಿಕತ್ವಾತ್‌: ಈ ಗ್ರಂಥಖಂಡದಲ್ಲಿ ಪಾಠವು ತುಂಬಾ ದೋಷಯುಕ್ತವಾಗಿದೆ. ಇದನ್ನು ಮತಂಗಹೃದಯದಲ್ಲಿ ವಿವೇಚಿಸಲಾಗುವುದು.

೪೪ಊ. ಇತರಸ್ಯಾಂ : ಇತಿ ಅಸ್ಯಾಂ (ಪ್ರಸಂ.)

೪೫ಅ. ನಿದರ್ಶನೇನ : ದರ್ಶನೇನ (ಪ್ರಸಂ.) ; ನಿದರ್ಶನೇನ (ನಾಶಾ. ೨೮.೨೬ಗ. :೨೦)

೪೬ಆ. ಚತುಃಶ್ರುತಿಲಾಭಃ : ಮೂರನೆಯ ಸಾರಣಾಕ್ರಿಯೆಯ ಅಂಶಕ್ಕೆ ಗ್ರಂಥಪಾತವಿದ್ದು ಇಲ್ಲಿ ಪಾಠವು ಅಸಮರ್ಪಕವಾಗಿದೆ.

೪೭ಆ. ಪ್ರತ್ಯೇಕ : ಪ್ರತ್ಯೇ(ಕಾ?ಕಂ) (ಪ್ರಸಂ)

೪೮ಅ. ತು : ಹಿ (ಕಲ್ಲಿ. ಸಂರ. ೧.೩.೧೦-೧೬:೭೨: ಅಸಂರ:೪)

೪೯ಅ. ಚ : ತು (ಕಲ್ಲಿ. ಅದೇ ; ಅಸಂರ. ಅದೇ)

೪೯ಆ. ದರ್ಶಯಂತಿ : ಸೂಚಿಯಂತಿ (ಕಲ್ಲಿ.ಸಂರ.೧.೩.೧೦-೧೬ :೭೨ ; ಇದನ್ನು ಕೋಹಲೋಕ್ತಿಯೆಂದು ಉದ್ಧರಿಸಿದೆ.)

೪೯ಈ. – ಣಾಮಾನಂತ್ಯಂ : – ಣಾಮಾನಂತ್ಯ – (ಅಸಂರ :೪)

೫೦ಅ. ಉತ್ತಾಲ : ಉ(ತ್ತಾರುಗ?ಚ್ಚಂಡ) (ಪ್ರಸಂ) ; ಉತ್ತಾಲ (ಕಲ್ಲಿ. ಅದೇ)

೫೦ಇ. ಕಿಯತ್ಯಃ : (ಪ್ರಸಂ) ; ಇಯತ್ತಾ (ಕಲ್ಲಿ. ಅದೇ) ; ಇಯತ್ಯಃ (ಅಸಂರ : ೪)

೫೩ಈ. ಪರಿಕಥ್ಯತೇ : ಪರಿಕಲ್ಪತೇ (ಪ್ರಸಂ. ಅ.ಖ ; ಸಂಸಸಾ. ಹಸ್ತಪ್ರತಿ)

೫೫ಅಆ. ವಿಶೇಷ … ಗ್ರಹ್ಯಯೋಃ : (ಭಕೋ : ೭೬೫)

೫೫ಆ. ಗ್ರಾಹ್ಯಯೋಃ : ಗ್ರಾಹ್ಯತಾ (ಸಂಸಸಾ, ಹಸ್ತಪ್ರತಿ); ಗಮ್ಯಯೋ (ಸಿಂಹ. ಸಂರ.೧.೩.೨೪;೮೩)

೫೫ಈ –ವ್ಯಕ್ತ್ಯೋ : ಸಂಸಸಾ. (ಹಸ್ತಪ್ರತಿ)ಯಲ್ಲಿ ಇದೇ ಪಾಠವಿದೆ.

೫೬ಆ. ತು : -ಷು (ಸಿಂಹ. ಅದೇ) : ಚ (ಸಂಸಸಾ. ಹಸ್ತಪ್ರತಿ)

೫೬ಆ. ವಿವರ್ತಿತಂ : ವಿವರ್ತತೇ (ಸಿಂಹ. ಅದೇ), ವಿವರ್ತಿತಂ (ಸಂಸಸಾ, ಹಸ್ತಪ್ರತಿ)

೫೬ಇಈ. ಪ್ರತಿಭಾತಿ … ವಿವರ್ತಿತಃ : ಸಂಸಸಾ. ಹಸ್ತಪ್ರತಿಯ ಪಾಠ; ಆದರೆ ಪ್ರತಿಭಾಂತಿ … ವಿವರ್ತಿನಃ (ಸಿಂಹ. ಅದೇ : ಭಕೋ : ೭೫೬)

೫೭ಅ. ಸ್ವರಾಣಾಂ : ಶ್ರುತೀನಾಂ (ಪ್ರಸಂ.) ಆದರೆ ಸ್ವರಾಣಾಂ (ಸಿಂಹ. ಅದೇ; ಸಂಸಸಾ. ಹಸ್ತಪ್ರತಿ; ಭಕೋ : ೭೫೬)

೫೭ಈ. ಘಟಸ್ಯೇಹ : ಘಟಸ್ಯೇವ (ಭಕೋ : ೭೫೫) ; ಘಟಸ್ಯ ಹಿ (ಸಂಸಸಾ. ಹಸ್ತಪ್ರತಿ)

೫೭ಈ. ಭವತಿ : ವದೇತ್‌(ಸಂಸಸಾ. ಹಸ್ತಪ್ರತಿ)

೫೮ಆ. ಪರಿಣಮಂತಿ : ಪರಿಣಮತಿ (ಪ್ರಸಂ.) ; ಪರಿಣಾಮಂ (ಸಿಂಹ. ಅದೇ ; ಸಂಸಸಾ:೮); ಯಥಾ ಕ್ಷೀರಂ ಒರಿಣತಂ, ಯತಾಕ್ಷೀರಂ ಪರಿಣಮೇತ್‌(ಸಂಸಸಾ. ಹಸ್ತಪ್ರತಿ, ಅಲ್ಲಿಯೇ ಪಾಠಾಂತರ)

೫೮ಆ. ನ ಸಂಶಯಃ : ವಜಂತಿ ಹಿ (ಸಿಂಹ. ಅದೇ); ಭಜಂತಿ ಹಿ (ಭಕೋ :೭೫೬)

೫೮ಇ. ಪರಿಣಮೇದ್‌ : ಪರಿಣಮೇತ (ಪ್ರಸಂ)

೫೯ಆ. ಶ್ರಿತಿಭಿಃ : ಸೂರಿಭಿಃ (ಸಂಸಸಾ. ಹಸ್ತಪ್ರತಿ), ಶ್ರುತಿಭಿಃ (ಅಲ್ಲಿಯೇ ಪಾಠಾಂತರ)

೬೧ಅ. ಸ್ವಲಕ್ಷಣಾನಾಂ : ಸ್ವರಕ್ಷನಾಂ (ಪ್ರಸಂ) ಆದರೆ ಸ್ವಲಕ್ಷಣಾನಾಂ (ಸಿಂಹ. ಅದೇ)

೬೧ಇಈ. ವಿಶೇಷೈಃ ಶೂನ್ಯಂ ಭವತಿ ನಭಃ : ವಿಶೇಷೈಸ್ತು ಭವತಿ ಪುನಃ ಖ – (ಭಕೋ: ೭೫೬)

೬೨ಅ. ಪ್ರಸಾಧ್ಯ – : ಗೃಹೀತ- (ಸಿಂಹ. ಅದೇ; ಭಕೋ : ೭೮)

೬೩ಆ. ಸ್ವರಾಣಾಂ : ಶ್ರುತೀನಾಂ (ಪ್ರಸಂ)

೬೩ಇ. ವಿವರ್ತತ್ವೇ : ವಿವರ್ತತ್ವಾತ್‌(ಭಕೋ: ೭೫೬)

೬೪ಇ. –ಮಿಹ : -ಮಿವ (ಪ್ರಸಂ. ಅ.ಖ)

೬೫ಆ. –ಗ್ರಹಪೂರ್ವಕ -: ಗ್ರಹಪೂರ್ವಕಂ (ಭಕೋ. ಅದೇ)

೬೬ಇ. ತಥಾಪಿ : ತಥಾ ಚ (ಸಿಂಹ. ಅದೇ : ೮೪)

೬೭ಅ. ವಿದ್ಯ- : ಭಿದ್ಯ – (ಪ್ರಸಂ. ಅ.ಖ)

೬೭ಇ. ತು : (ಷು? ತು) (ಪ್ರಸಂ) ; ಆದರೆ ತು (ಭಕೋ. ಅದೇ)

೬೭ಈ. ನೋಪ- : sಪ್ಯುಪ – (ಭಕೋ. ೭೫೫)

೬೮ಅ. ಪರಿಣಾಮೋ : ಪರಿಣಾಮಾ (ಸಂಸಸಾ, : ೯)

೬೮ಅ. ಅಭಿವ್ಯಕ್ತಿಸ್ತು : ಹ್ಯಭಿವ್ಯಕ್ತಿಃ (ಭಕೋ. ಅದೇ)

೬೮ಅಆ. –ಕ್ತ್ಯಿಸ್ತು ನ್ಯಾಯಾಃ : ಕ್ತಿರ್ನ್ಯಾಯಾಯಃ (ಸಿಂಹ. ಅದೇ)

೭೧ಆ. ವ್ಯಾಕು- : ದ್ಯಾಕು – (ಪ್ರಸಂ)

೭೧ಆ. ಸ್ಯಾತ್‌:- ತ್ವಾತ್‌(ಪ್ರಸಂ)

೭೧ಇ +++ : +++ (ಪ್ರಸಂ)

೭೧ಈ. –ವಯವಾ- : ವಯವೀ (ಪ್ರಸಂ)

೭೨ಅ. ತಾಃ ಸಂಭವಂತೀ : ತಾಸಾಂ ಭವಂತೀತಾಃ (ಪ್ರಸಂ)

೭೨ಆ. ಮಾತೃಕಾಃ : ಮಾತ್ರಕಾಃ (ಪ್ರಸಂ)

೭೨ಆ. ಪ್ರತಿ : ಪ್ರತಿ (ಪ್ರಸಂ. ಅ.ಖ) ; ಪ್ರತೀ(ಪ್ರಸಂ)

೭೩ಇ. ತಾಸಾಂ : ತಸ್ಯಾಂ (ಪ್ರಸಂ)

೭೩ಈ. ಮಾತೃಕಾ : ಮಾತ್ರಕಾ (ಪ್ರಸಂ)

೭೫ಅ. ಧರ್ಮಿಷ್ಟಸತ್ಸು : ++++ (ಪ್ರಸಂ)

೭೫ಆ. ನೋ ಸಂತೀತ್ಯಾ – : ಣಃ ಸಂತೋಪ್ಯಾ (!ಪ್ರಸಂ)

೭೫ಇ. ತದಾ : ಸದಾ (!ಪ್ರಸಂ)

೭೭ಈ. ಗುಣಿನಾಂ : ಗುಣಾಂ ತು (ಪ್ರಸಂ)

೭೮ಆ. ಮಾತೃಕಾ : ಮಾತ್ರಕಾಃ (ಪ್ರಸಂ)

೭೯ಅ. ಪ್ರತ್ಯಕ್ಷಜ್ಞಾನತೋsಪಿ : ಶ್ರೋತ್ರಜ್ಞೇನ (ಸಂಸಸಾ. : ೯) ; ಪ್ರತ್ಯಕ್ಞಾತ್‌ಶ್ರೋತ್ರಜಾ (ಸಂಸಸಾ. ಹಸ್ತಪ್ರತಿ) ; ಪ್ರತ್ಯಕ್ಷಾತ್‌ಶ್ರೋತ್ರಜ್ಞೇನ (ಅಲ್ಲಿಯೇ ಪಾಠಾಂತರ)

೮೦ಆ. ದ್ವಾವಿಂಸತಿ : ದ್ವಾವಿಂಶತಯಃ (?) (ಪ್ರಸಂ)

೮೨ಅ. ತ್ರಿಶ್ರುತೀರತಿ- : ತ್ರಿಶ್ರುತಿರಿತಿ – (ಪ್ರಸಂ)

೮೨ಅ. ಜ್ಞೇಯಃ : ದೇಯಃ (ಪ್ರಸಂ)

೮೨ಇ. ಶ್ರುತೀಸ್ತ್ಯಕ್ತ್ವಾ ತೃತೀಯ : ಶ್ರುತಿ(ತಿತ್ವಾ? ತ್ತ್ಯಕ್ತ್ವಾ)ತೃತೀಯ- (ಪ್ರಸಂ)

೮೪ಇ. ದ್ವಯಂ : ತ್ರಯಂ (ಪ್ರಸಂ.ಅ.ಖ)

೮೮ಆ. ತೃತೀಯಾ : ತೃತೀಯಃ (ಪ್ರಸಂ)

೮೮ಈ. ಚತುರ್ಥೀ : ಚತುರ್ಥೋ (ಪ್ರಸಂ)

೮೯ಆ. ದ್ವಿತೀಯಿಕಾ : ದ್ವಿತೀಯಕಃ (ಪ್ರಸಂ)

೯೦ಆ. ತೃತೀಯಾ : ತೃತೀಯಃ (ಪ್ರಸಂ)

೯೨ಈ – ಮಧ್ಯಮಸ್ವರೌ : ಮಧ್ಯಮಪರೌ (ಪ್ರಸಂ)