iv ಸ್ವರಪ್ರಕರಣಮ್‌

೯೫ಅಆ. ಸಂಸಸಾ. (ಹಸ್ತಪ್ರತಿ)ದಲ್ಲಿ ಯಥಾವತ್ತಾಗಿ ಉದ್ಧೃತವಾಗಿದೆ.

೯೫ಅ. ದೀಪ್ತಾವಿತಿ : ದೀಪ್ತಾವಸ್ಯ (ಸಿಂಹ. ಸಂರ. ೧.೩.೨೪ : ೮೪)

೯೫ಇ. ಯೋ : ಹಿ (ಸಿಂಹ. ಅದೇ)

೯೫ಈ. ತಸ್ಮಾದೇಷ ಸ್ವರಃ : ತಸ್ಮಾತ್‌ ಸ್ವರ ಇತಿ (ಸಿಂಹ. ಅದೇ)

೯೬ಅ. ನನು ಸ್ವರ ಇತಿ ಕಿಮ್‌ ಉಚ್ಯತೇ ? : ನನು ಸ್ವರಶಬ್ದೇನ ಕಿಮುಚ್ಯತೇ ? (ಸಂಸಸಾ. ಹಸ್ತಪ್ರತಿ)

೯೭ಅ. ಅತ್ಮೇಚ್ಛಯಾ : ಆತ್ಮೇಚ್ಛಾಯಾ (ಭಕೋ : ೭೫೪)

೯೭ಆ. ಮಹೀ- : ಮಹಿ-(ಪ್ರಸಂ) ;ನಾಭಿ-(ಸಂಸಸಾ. ಹಸ್ತಪ್ರತಿ)

೯೭ಈ. ಧ್ವನೀ ರಕ್ತಃ ಸ್ವರಃ : ಧ್ವನಿರಕ್ತಃ (ಪ್ರಸಂ : ಭಕೋ: ೭೫೪); ಧ್ವನಿರಕ್ತೇಶ್ವರಃ (ಸಂಸಸಾ. ಹಸ್ತಪ್ರತಿ)

೯೮ಅ. ನನು ಸ್ವರ…. ಸ್ಯಾತ್‌: ನನು ಸ್ವರಃ ಏಕೋ ವಾ ಅನೇಕೋ ವಾ ನಿತ್ಯೋ ವಾ ಅನಿತ್ಯೋ ವಾ, ವ್ಯಾಪಕೋ ವಾ ಅವ್ಯಾಪಕೋ ವಾ (ಸಂಸಸಾ. ಹಸ್ತಪ್ರತಿ) ; ನನು ಸ್ವರಃ ನಿತ್ಯಃ ಅನಿತ್ಯೋ ವಾ, ವ್ಯಾಪಕೋ ವಾ ಅವ್ಯಾಪಕೋ ವಾ ಏಕೋSನೇಕೋ ವಾ? (ಅಲ್ಲಿಯೇ, ಪಾಠಾಂತರ)

೯೮ಇ. ರೂಪೇಣೈಕಃ : ರೂಪೇಣೈವ (ಸಂಸಸಾ. ಹಸ್ತಪ್ರತಿ)

೯೯ಆ. –ನಂತಃ ಕೀರ್ತಿತಃ ಸ್ವರಃ : – ನಂತಾಃ ಕೀರ್ತಿತಾಃ ಸ್ವರಾಃ (ಸಂಸಸಾ. ಹಸ್ತಪ್ರತಿ); – ನಂತಃ ಕೀರ್ತಿತಃ ಸ್ವರಃ (ಅಲ್ಲಿಯೇ ಪಾಠಾಂತರ)

೯೯ಇ. ಪದೈ : ನಾದೈ (ಪ್ರಸಂ)

೯೯ಇ. –ಸ್ವತ್ವಲ- : -ಸ್ತಾಲ- (ಪ್ರಸಂ); ಸ್ಥಾನ (ಸಸಂಸಾ. ಹಸ್ತಪ್ರತಿ)

೧೦೦ಆ. ವ್ಯಾಪಕಃ : ಸಂಸಸಾ. ಹಸ್ತಪ್ರತಿಯಲ್ಲಿ ಉದ್ದೃತವಾಗಿದೆ.

೧೦೦ಉ. ನಾಡೀ – : ನಾಟೀ (ಸಂಸಸಾ. ಹಸ್ತಪ್ರತಿ)

೧೦೦ಆ. –ನಿಘಟ್ಟ- : ವಿಘಟ್ಟಃ (ಅದೇ)

೧೦೦ಇ. –ಮೂಧ್ನಃ : – ಮೂರ್ಧ್ನಿ (ಸಂಸಸಾ. ಹಸ್ತಪ್ರತಿ, ಪಾಠಾಂತರ)

೧೦೨ ಸಂಸಸಾ. ಹಸ್ತಪ್ರತಿಯಿಂದ ಸೇರಿಸಿದೆ.

೧೦೨ಅ. ಚಾರ್ಹತ : ಚಾರ್ವಾಕಮತೇ ಎಂಬುದು ಸಮಂಜಸವಾದ ಪಾಠ; ಧ್ವನಿ (ಎಂದರೆ ಶಬ್ಧ)ಯ ಅನಿತ್ಯತ್ವ ಮತ್ತು ಅವ್ಯಾಪಕತ್ವಗಳನ್ನು ಇಲ್ಲಿ ಸಾಧಿಸಲೆಳಸಿದೆ. ಬಾರ್ಹತ ಎನ್ನುವುದು ಒಂದು ಸಾಮದ ಹೆಸರು. ಇದು ಸಾಮವೇದಿಗಳ ಮತವೆಂಬುದು ಅಸಂಭಾವ್ಯ.

೧೦೨ಆ. ವಿವರ್ಜಿತ : ವಿವಕ್ಷಿತ (ಸಂಸಸಾ. ಹಸ್ತಪ್ರತಿ, ಪಾಠಾಂತರ)

೧೦೨ಊ. ನ ಚ ತಥಾಸ್ತಿ ಲೋಕೇ : ನ ಚ ತಥಾ ಲೋಕೇ Sಸ್ತಿ | (ಸಂಸಸಾ ಹಸ್ತಪ್ರತಿಯಲ್ಲಿ ಪಾಠಾಂತರ)

೧೦೨ಋ. ತಸ್ಮಾತ್‌ಸ್ವರೋ Sವ್ಯಾಪಕೋ Sನಿಶ್ಶಶ್ಚ : ತಸ್ಮಾದನಿತ್ಯ ಅವಾಯಪಕಶ್ಚ ಸ್ವರಃ (ಸಂಸಸಾ. ಹಸ್ತಪ್ರತಿಯಲ್ಲಿ ಪಾಠಾಂತರ)

೧೦೩ಆ. ತದಾನೀಂ : ತರ್ಹಿ (ಸಂಸಸಾ. ಹಸ್ತಪ್ರತಿ)

೧೦೪ಆ. ಷಡ್ಜಾದೀನಾಮೇವ …. ಕಾದೀನಾಮಿತಿ : ಷಡ್ಜಾದೀನಾಮೇವ ಅಸಾಧಾರಣಧರ್ಮಶ್ವಾತ್‌, ನ ತು ಕಾದೀನಾಮಿತಿ (ಸಂಸಸಾ. ಹಸ್ತಪ್ರತಿಯಲ್ಲಿ ಪಾಠಾಂತರ)

೧೦೪ಇ. ಕಥಮ್‌? ಕಥಮುಚ್ಯತೇ (ಸಂಸಸಾ. ಹಸ್ತಪ್ರತಿ)

೧೦೪ಉ. ಕೋಹಲೇ : ಕೋಹಲಃ (ಪ್ರಸಂ)

೧೦೫ಇ. ವದತಿ : ವದಂತಿ (ಪ್ರಸಂ)

೧೦೫ಈ. ಗದ್ಯಗ್ರಂಥಭಾಗವನ್ನು ಸಂಸಸಾ. ಹಸ್ತಪ್ರತಿಯಿಂದ ಎತ್ತಿಕೊಂಡು ಇಲ್ಲಿ ಸೇರಿಸಿದೆ. ಪೌರ್ವಾಪರ್ಯಪರ್ಯಾಲೋಚನೆಯಿಂದ ಇದು ಮತಂಗೋಕ್ತಿಯೆಂದು ಸಿದ್ಧವಾಗುತ್ತದೆ.

೧೦೭ಅ. -ಮೇವಾ- : ಮೇವ (ಪ್ರಸಂ)

೧೦೮ಇ-ಊ ನನು… ಲಕ್ಷಣತಯಾ : ಇದು ಸಂಸಸಾ. ಹಸ್ತಪ್ರತಿಯಲ್ಲಿ ಮತಂಗೋಕ್ತಿಯೆಂದು ನಿರ್ಧರಿಸಬಹುದಾದ ಗ್ರಂಥಾಂಶಕ್ಕೆ ಪಾಠಾಂತರ. ಗಮನಿಸಿ : ೧೦೯ (ಊ)

೧೦೯ : ಈ ಗ್ರಂಥಾಂಶವೂ ಮತಂಗೋಕ್ತಿಯೆಂದೇ ತೀರ್ಮಾನಿಸಬಹುದು. ಇದನ್ನು ಸಂಸಸಾ. ಹಸ್ತಪ್ರತಿಯಿಂದ ಎತ್ತಿಕೊಂಡು ಇಲ್ಲಿ ಸೇರಿಸಿದೆ. ಈ ಭಾಗವೂ ೧೦೭ ಎಂಬ ಗ್ರಂಥಭಾಗವೂ ಪ್ರಸಂ. ದ್ವಿಸಂ.ಗಳಲ್ಲಿಲ್ಲ.

೧೦೯ಇ. –ಮಿತ್ಯಪರೇ : – ಮಿತಿ ಕೇಚಿತ್‌(ಸಂಸಸಾ. ಹಸ್ತಪ್ರತಿಯಲ್ಲಿ ಪಾಠಾಂತರ)

೧೦೯ಉ. ಅಹಮೇವ : ಮಂದ್ರತಾಂ (ಸಂಸಸಾ. ಹಸ್ತಪ್ರತಿಯಲ್ಲಿ ಪಾಠಾಂತರ)

೧೦೯ಊ. ಸ್ವರಾಣಾಂ : ಸಪ್ತಕಾನಾಂ (ಸಂಸಸಾ. ಹಸ್ತಪ್ರತಿಯಲ್ಲಿ ಪಾಠಾಂತರ)

೧೦೯ಊ. –ನಿನಾಮೇವ :- ನಿಸಾಮೇವ (ಸಂಸಸಾ. ಹಸ್ತಪ್ರತಿಯಲ್ಲಿ ಪಾಠಾಂತರ)

೧೦೯ಋ. ತಥೈವ : ತಥಾ ಚ (ಸಂಸಸಾ. ಹಸ್ತಪ್ರತಿಯಲ್ಲಿ ಪಾಠಾಂತರ)

೧೦೯ೠ. ಡಬಡಬೇತಿ : ಧಣಂಧಣಮಿತಿ (ಸಂಸಸಾ. ಹಸ್ತಪ್ರತಿಯಲ್ಲಿ ಪಾಠಾಂತರ) ಹೋಲಿಸಿ: ಅತ್ರ ಸರಿಗಾದಿಷ್ವಾದ್ಯಕ್ಷರಾಣಾಂ ವ್ಯಂಜನತ್ವಾತ್‌ಕಥಂ ಸ್ವರಪತ್ವಮಿತ್ಯಾಕ್ಷಿಪ್ಯಾಚಾರ್ಯ ಪರಿಭಾಷಯಾ ಸಂಕೇತಮಾತ್ರಮೇತದಿತಿ ಪ್ರತ್ಯಾಹ ಮತಂಗಃ (ಕಲ್ಲಿ. ಸಂರ. ೧.೩.೨೩:೮೨)

ಪ್ರಸಂ.ದಲ್ಲಿ ‘ನನು… ಸಂಕೇತಮಾತ್ರಮೇತದುಕ್ತಂ ಭವತಿ | ಆಚಾರ್ಯಾಣಾಂ ಪರಿಭಾಷೇತ್ಯರ್ಥಃ ಎಂಬ ಗ್ರಂಥಾಂಶಮಾತ್ರವಿದೆ : ದ್ವಿಸಂ. ದಲ್ಲಿಯೂ ಇಷ್ಟನ್ನೇ ಗ್ರಹಿಸಿದೆ.

೧೧೦ಅ. ದರ್ಶಯಾಮಿ : ಸಂದರ್ಶಯಾಮಿ (ಪ್ರಸಂ.ಅ.ಖ). ಇಲ್ಲಿ ಪ್ರಥಮ ಪುರುಷೈಕವಚನದ ಪ್ರಯೋಗವನ್ನು ಗಮನಿಸಬೇಕು. ನಾಶಾ.ದ ಗದ್ಯಭಾಗಗಳಲ್ಲಿರುವಂತೆ ಬೃಹ. ಯ ಗದ್ಯಗ್ರಂಥಾಂಶಗಳಲ್ಲಿ ಸಾಮಾನ್ಯವಾಗಿ ಪ್ರಥಮಪುರುಷಬಹುವಚನವನ್ನೇ ಬಳಸಿದೆ.

೧೧೧ಇ. –ನಾಮಮಾತ್ರ : ನಾಮ (ಕಲ್ಲಿ. ಸಂರ. ೧.೩.೪೭ಇಈ ೪೮ಅಆ: ೯೨); ಹೋಲಿಸಿ; ವದನಂ ಹಿ ನಾಮಾತ್ರ ರಾಗಪ್ರತಿಪಾದಕತ್ವಂ ವಿವಕ್ಷಿತಂ (ಸಿಂಹ. ಸಂರ. ಅದೇ : ೯೩)

೧೧೧ಊ. ತೇ. : ತ್ರಿ (ತೇ?ಕೇ) (ಪ್ರಸಂ)

೧೧೩ಅ. ನವಾಂತರತ್ವೇನಾವ -: ನವಾಂತರತ್ವೇ ವಾ ಅನ್ಯೋSನ್ಯಂ (ಸಿಂಹ. ಅದೇ : ೯೪)

೧೧೩ಅ. ನವಾಂತರ(!೦ತತ್ವೇನ): ಪ್ರಸಂ ದೈ ಸಂ.ಗಳಲ್ಲಿ ‘ನವಾಂತರತ್ವೇನ’ ಎಂದೇ ಇದೆ. ಒಂದು ಸ್ವರ ಜೋಡಿಯಲ್ಲಿ ಮೊದಲನೆಯದರಿಂದ ಎರಡನೆಯದು ಎಂಟು ಅಥವಾ ಹನ್ನೆನನನರಡು ಶ್ರುತಿಗಳ ಅಂತರದಲ್ಲೋ ಒಂಬತ್ತನೆಯದೇ ಹದಿಮೂರನೆಯದೇ ಕೊನೆಯಾಗಿರುವ ಶ್ರತಿಯಲ್ಲೋ ಇದ್ದರೆ ಸಂವಾದಿಯೆನ್ನಿಸಿಕೊಳ್ಳುತ್ತದೆ ಎಂಬುದು ಶಾಸ್ತ್ರಮರ್ಯಾದೆ. ಆದುದರಿಂದ ಹೀಗೆ ತಿದ್ದದೆ. ಗ್ರಂ. ಭಾ. ೧೨೩ನ್ನೇನ ನೋಡಿ.

೧೧೪ಆ. ವಾದಿಸ್ವರೇಣ : ರಾಗಸ್ವರೇಣ (ಭಕೋ : ೭೬೫)

೧೧೫ಇ. ತಸ್ಮಿನ್‌: ಅಸ್ಮಿನ್‌(ಪ್ರಸಂ)

೧೧೭ಇ. ಏವಂ ಗಾಂಧಾರನಿಷಾದಯೋಃ … (…ಕುರುತಹ) : ಹೋಲಿಸಿ : ಗಾಂಧಾರನಿಷಾದಯೋಃ ಸ್ಥಾನೇ ನಿಆದಗಾಂಧಾರೌ ಪ್ರಯಜ್ಯಮಾನೌ ಜಾತಿರಾಗ ಹಾನಿ ನ ಕುರುತಃ | (ಸಿಂಹ ಅದೇ)

೧೧೭ಅ. ಕಕುಭಸ್ಯ : ಋಷಭಸ್ಯ (ಪ್ರಸಂ)

೧೧೭ಅ. ರೇವಗುಪ್ತಸ್ಯ : (ದೈವತ?) (ಪ್ರಸಂ)

೧೧೮ಅ. ಶ್ರುತ್ಯಂತರ – : ಶ್ರುತಿ- (ಪ್ರಸಂ)

೧೧೮ಆ. ತದನು : (-ತ್ವವನು ? ಪದನು-) (ಪ್ರಸಂ)

೧೧೯ಅ. ಯತ್‌ ಸಂವಾದಿತಾ : ಯದ್‌ವಾದಿನಾ (ಸಿಂಹ. ಅದೇ.)

೧೧೯ಅ. ಯತ್‌ ಸಂವಾದಿತಾ : ಯದ್‌ವಾದಿನಾ (ಸಿಂಹ. ಅದೇ)

೧೨೦ಆ. [ಜಾತಿ]: ಇದು ದ್ವಿಸಂ. ರು ಮಾಡಿರುವ ಸೇರ್ಪಡೆ. ಸಿಂಹ. (ಅದೇ : ೯೫)ನು ಈ ಗ್ರಂಥಾಂಶಕ್ಕೆ ‘ಮತಂಗೇನ ತ್ವೇಕಶ್ರುತ್ಯಂತರಹೀನತ್ವೇನಾನುವಾದಿತ್ವಮುಕ್ತಂ’ ಎಂಬ ಪೀಠಿಕೆಯನ್ನು ಬರೆದಿದ್ದಾನೆ. ಈ ಗ್ರಂಥಭಾಗದ ಶೈಲಿಯನ್ನು ಅನುಸರಿಸಿ ಈ ಸೇರ್ಪಡೆಯನ್ನು ಮಾಡಿದೆ.

೧೨೦ಉ. ಮಧ್ಯಮಸ್ಥಾನೇ… ನ ಭವತಿ | : ಈ ವಾಕ್ಯವನ್ನು ದ್ವಿಸಂ.ರು. ಸಿಂಹ (ಅದೇ: ೯೫)ನ ಶೈಲಿಯನ್ನು ಅನುಕರಿಸಿ ಇಲ್ಲಿ ರಚಿಸಿದ್ದಾರೆ.

೧೨೨ಆ. ಋಷಭ : ಪಂಚಮ ಋಷಭಃ (ಪ್ರಸಂ)

೧೨೩ ಸಪ್ತ | : ಇಲ್ಲಿ ವಾಕ್ಯಸಮಾಪ್ತಿಯನ್ನು (ದಂಡದ ಮೂಲಕ) ಪ್ರ.ಸಂ. ದಲ್ಲಿ ಸೂಚಿಸದೆ ಇರುವುದರಿಂದ, ಒಂಬತ್ತು ಮತ್ತು ಹದಿಮೂರು ಶ್ರುತಿಗಳ ಅಂತರದ ಸಂವಾದಿತ್ವವನ್ನು ಮಾತ್ರವಲ್ಲದೆ ಏಳು ಶ್ರುತಿಗಳ ಅಂತರದ ಸಂವಾದಿತ್ವವನ್ನೂ ಮತಂಗನು ಹೇಳುತ್ತಾನೆಂಬ ತಪ್ಪು ತಿಳುವಳಿಕೆಯನ್ನು ಆಧುನಿಕ ಸಂಗೀತ ಶಾಸ್ತ್ರದಲ್ಲಿ ಮೂಡಿಸಿದೆಯೆಂಬುದನ್ನು ದ್ವಿಸಂ.ರು ಗಮನಿಸಿದ್ದಾರೆ.

೧೨೩ಈ. ಹೀನತ್ವಾದನು – : ಹೀನಾದನು- (ಪ್ರಸಂ)

೧೨೮ಅ. ಗಾಥಿಕ : ಗಾಧಿಕ (ಪ್ರಸಂ. ಅ. ಖ); ಗಾಡಿಕ (ಪ್ರಸಂ)

೧೨೯ಅ. ಯ : ಹಿ (ಪ್ರಸಂ)

೧೩೦ಇ. ಔಡುವಃ : ಔಡುವಂ (ಪ್ರಸಂ)

೧೩೦ಇ. [ಪಂಚಭಿಶ್ವೈವ … ಯೋಕ್ತೃಭಿಃ]: ಈ ಗ್ರಂಥಾಂಶವನ್ನು ಸಿಂಹ. (ಸಂರ. ೧.೪೪೦:೧೨೦)ನು ‘ತಥಾ ಚಾಹ ನಾರದ.’ ಎಂಬ ಮುನ್ನುಡಿಯೊಡನೆ ಉದ್ಧರಿಸಿಕೊಂಡಿರುವ ಗ್ರಂಥಖಂಡದಿಂದ ಇಲ್ಲಿ ಎತ್ತಿಕೊಂಡಿದೆ.

೧೩೧-೧೩೬ +ಯದ್ವಾ: ಈ ಗ್ರಂಥಭಾಗವನ್ನು ಕಲ್ಲಿ. (ಸಂರ. ೧.೩.೨೩:೭೯-೮೧)ನು ಮತಂಗನಿಂದ ಉದ್ಧರಿಸಿಕೊಂಡಿರುವ ಶ್ಲೋಕಗಳಿಂದ ಪುನಾರಚಿಸಿದೆ. ಇಲ್ಲಿ ಗ್ರಂಥಾಪಾತವಿರಬಹುದೆಂಬುದನ್ನು ಪ್ರಸಂ.ರು (ಇತಃ)ಪರಂ ಔಡುವಾದಿ ನಿರೂಪಣಪರಃ ಕಿಯಾಂಶ್ಚಿದ್‌ ಗ್ರಂಥಪಾತಃ ಸಂಭಾವ್ಯತೇ (ಪ್ರಸಂ.ಅ)ಎಂಬ ಮಾತುಗಳಿಂದ ಗುರುತಿಸಿದ್ದಾರೆ.

೧೩೭ಅಆ. ಷಷ್ಠ… ಮತಃ : ಈ ಶ್ಲೋಕಾರ್ಧವನ್ನು ಕಲ್ಲಿ. (ಅದೇ : ೮೧)ನ ಉದ್ಧೃತಿಯಿಂದ ಸಂಗ್ರಹಿಸಿದೆ.

೧೩೭ಅ. ಷಷ್ಠಾಸ್ಥಾನ : ಪಂಚಮೇದ (ಪ್ರಸಂ)

೧೩೭ಆ. ತೇನಾಸೌ : ತತೋSಸೌ (ಸಸಂಸಾ. ಬೃಹಸ್ಪತಿ : ೧೪ ; ಕಲ್ಲಿ. ಅದೇ)

೧೪೦ ನನು… ಸ್ವರಾ ಇತಿ : ಈ ಗದ್ಯಖಂಡವು ಪ್ರಸಂ.ದಲ್ಲಿಲ್ಲ ; ಕಲ್ಲಿ. (ಅದೇ: ೮೧)ನು ತಾತ್ಪರ್ಯಗೊಳಿಸಿದ್ದಾನೆ ; ಸಿಂಹ (ಸಂರ. ೧.೩.೫೫: ೯೭)ನು ಉದ್ದರಿಸಿದ್ದಾನೆ.

೧೪೩ಅ-ಈ. ಚತುಃಶ್ರುತಿ… ಸ್ವರೌ : ಹೋಲಿಸಿ :

ಬ್ರಹ್ಮಜಾತೀ ಸಮೌ ಜ್ಞೇಯೌ ರಿಧೌ ಕ್ಷಿತ್ರಿಯಜಾತಿಕೌ |
ನಿಗೌ ವೈಶ್ಯಾವಿತಿ ಪ್ರೋಕ್ತೌಪಂಚಮಃ ಶೂದ್ರಜಾತಿಕಃ || (ಸಂಗೀತಮಕರಂದ ೧.೨೯)

೧೪೫ಇಈ – ಸ್ತೂದ್ಧರೇತ್‌ : ಸ್ತು ಉದ್ಧರೇತ್‌ತು (ಪ್ರಸಂ)

೧೪೫ಈ. ಸ ಪ್ರಯತ್ನತಃ : ಆದ್ಯಂ ಸ್ವರಂ ಸ್ವರಜ್ಞಸ್ತು ಉದ್ಧರೇತ್‌ ಸಪ್ರಯತ್ನತಃ (ಸಿಂಹ. ಅದೇ : ೯೮). ಇಲ್ಲಿರುವ ‘ಸ್ತು ಉ-’ ಎಂಬ ವಿಸಂಧಿಯನ್ನೊಲ್ಲದೆ ದ್ವಿಸಂ.ರು ‘-ಸ್ತೂ-’ ಎಂಬ ಸಂಧಿಯನ್ನು ಮಾಡಿ, ಇದರಿಂದ ಫಲಿಸುವ ಒಂದು ಅಕ್ಷರದ ಲೋಪವನ್ನು (ಸ)ರ್ವ ಎಂಬುದರಲ್ಲಿನ ಎರಡನೆಯ ಅಕ್ಷರದಿಂದ ತುಂಬಿದ್ದಾರೆ. ಸಂಸ್ಕೃತಶ್ಲೋಕರಚನೆಯಲ್ಲಿ ವಿಸಂಧಿಯು ವ್ಯಾಕರಣ ನಿಯಮ ಬಾಹಿರವಾಗಿರಬಹುದು, ಆದರೆ ಅಪರೂಪವೂ ಅಪವಾದವೂ ಅಲ್ಲ. ‘ಸ’ ಎಂದು ಉಚ್ಚರಿಸಲು ಪ್ರಯತ್ನವು ಸಾಕು, ಸರ್ವಪ್ರಯತ್ನವು ಬೇಕಾಗಿಲ್ಲ.

೧೪೮ಆ. ಆಂತಿಮಂ ಚಾದಿ : ಅಂತಿ (ಮ ಶ್ಚಾ?ಮಂಚಾ) ದಿ (ಪ್ರಸಂ)

೧೪೮ಈ. ಸ್ವರಸತ್ತಮಮ್‌ : ಸ್ವರಮುತ್ತಮಮ್‌ (ಸಿಂಹ. ಅದೇ: ೯೮), ಸ್ವರಸಪ್ತಕಮ್‌ (ಸಂಗೀತ ಚೂಡಾಮಣಿ ಹಸ್ತಪ್ರತಿ)

೧೪೯ಅಆ. ತದಾ… ಶೋಭನಮ್‌: ಇದನ್ನು ಸಿಂಹ. (ಅದೇ)ನು ಉದ್ಧರಿಸಿಕೊಂಡಿದ್ದಾನೆ.

೧೪೯ಅ. ತದಾ : ತಥಾ (ಪ್ರಸಂ)

೧೫೦ಆ. ಸಂಯುತಮ್‌ : ಭೂಷಿತಮ್‌ (ಸಿಂಹ. ಅದೇ)

೧೫೧ಅ. –ರಾನ್ಯಾಂತ : ರಾತಾಂತ- (ಪ್ರಸಂ)-

೧೫೨ಇಈ. ದೇವ … ಮಧ್ಯಮಾಃ : ಹೋಲಿಸಿ :

ಸ್ವರಾಃ ಸರಿಗಮಾಶ್ಚೈವ ಚತ್ವಾರೋ ರಾಕ್ಷಸಾಃ ಸ್ಮೃತಾಃ |
ಪಧೌ ಮಾನುಷಸಂಜ್ಞಾ ಚ ನಿಷಾದ(೦)ಧೈವತ(೦) ವಿದುಃ || (ಸಂಗೀತಮಕರಂದ ೧.೧.೪೬)

೧೫೪ಆ. ನಿಸಂಜ್ಞಿತಃ : ಇದರ ನಂತರ ‘ಶೂದ್ರಜಾತಿಸಮುತ್ಪನ್ನೌ ತೌ ಕಾಕಲ್ಯಂತರೌ ಸ್ವರೌ’ ಎಂಬ ಶ್ಲೋಕಾರ್ಧವು ಇದೇ ಪ್ರಕರಣದ ೧೪೩ಈ ನಲ್ಲಿರುವ ವಿಷಯದ ಪುನರುಕ್ತಿಯಾಗಿದೆ.

೧೫೪ಇಈ. ಪದ್ಮ… ವರ್ಣಕಃ : ಹೋಲಿಸಿ :

(೧) ಪದ್ಮಪತ್ರಪ್ರಭಃ ಷಡ್ಜ ಋಷಭಃ ಶುಕಪಿಂಜರಃ |
ಕನಕಾಭಸ್ತು ಗಾಂಧಾರೋ ಮಧ್ಮಮಃ ಕುಂದಸಪ್ರಭಃ ||
ಪಂಚಮಸ್ತು ಭವೇತ್‌ ಕೃಷ್ಣಃ ಪೀತಕಂ ಧೈವತಂ ವಿದುಃ |
ವಿಷಾದಃ ಸರ್ವವರ್ಣಶ್ಚ ಇತ್ಯೇ(ತೇ)ತತ್‌ ಸ್ವರವರ್ಣ(ಕಾಃ)ತಾ ||
(ನಾ. ಶಿ. ೧.೪.೧-೨)

(೨) ಪದ್ಮಪತ್ರನಿಭಃ ಷಡ್ಜ ಋಷಭಃ ಶುಕಪಿಂಜರಃ |
ಕನಕಾಭಸ್ತು ಗಾಂಧಾರೋ ಮಧ್ಯಮಃ ಕುಂದಸನ್ನಿಭಃ ||
ಪಂಚಮಸ್ತು ಭವೇತ್‌ ಕೃಷ್ಣಃ ಸುಪೀತಂ ಧೈವತಂ ವಿದುಃ |
ನಿಷಾದಃ ಸರ್ವವರ್ಣಸ್ತು ಸರ್ವೇ ಯೋಜ್ಯಾನುರೂಪತಃ || (ಗೀತಾಲಂಕಾರ, ೪.೭-೮:೫೦)

೧೫೪ಈ. ಹರ : (ಭಿ?ಹರ) (ಪ್ರಸಂ)

೧೫೮, ೧೫೯ : ಅಗ್ನಿಗೀತಃ … ಸ್ವರೌ : ಹೋಲಿಸಿ :

ಅಗ್ನಿಗೀತಃ ಸ್ವರಃ ಷಡ್ಜ ಋಷಬೋ ಬ್ರಹ್ಮಣೋಚ್ಯತೇ |
ಸೋಮೇನ ಗೀತೋ ಗಾಂಧಾರೋ ವಿಷ್ಣುನಾ ಮಧ್ಯಮಃ ಸ್ವರಃ ||
ಪಂಚಮಸ್ತು ಸ್ವರೋ ಗೀತೋ ನಾರದೇನ ಮಹಾತ್ಮನಾ |
ಧೈವತಶ್ಚ ನಿಷಾದಶ್ಚ ಗೀತೋ ತುಂಬುರುಣಾ ಸ್ವರೌ || (ನಾಶಿ. ೧.೫.೧೪-೧೫)

೧೬೦,೧೬೧. ಹಾಸ್ಯ… ಭಯಾನಕೇ : ಹೋಲಿಸಿ :

ಷಡ್ಜಾದ್ಭುತವೀರೌ ಚ ಋಷಭವಸ್ಯ ಚ ರೌದ್ರಕಃ |
ಗಾಂಧಾರಸ್ಯ ಚ ಶಾಂತ (೦) ಚ ಹಾಸ್ಯಾಖ್ಯಃ ಮಧ್ಯಮಸ್ತ ಚ ||
ಪಂಚಮಸ್ಯ ಚ ಶೃಂಗಾರೋ ಬೀಭತ್ಸೋ ಧೈವತಸ್ಯ ಚ |
ಕರುಣಾ ಚ ನಿಷಾದಸ್ಯ ಸಪ್ತಸ್ಥಾನರಸಾ ನವ || (ಸಂಗೀತಮಕರಂದ ೨.೧.೪೭, ೪೮)

ಇಲ್ಲಿ ಶಾಂತವನ್ನು ಸೇರಿಸಿಕೊಂಡು ಭಯಾನಕವನ್ನು ಬಿಟ್ಟಿದ್ದರೂ ರಸಗಳನ್ನು ಒಂಬತ್ತೆಂದೇ ಹೇಳಿದೆ. ಗ್ರಂಥಪಾತವಿರಬಹುದೇ?

೧೬೨ಆ ಸ್ಮೃತಃ : ಸ್ಥಿತಃ (ಪ್ರಸಂ)

೧೬೩ಇ. ತಾಲುದೇಶಾತ್‌: ತಾಲುದೇಶೇ (ಪ್ರಸಂ. ಅ. ಖ)

 

v ಗ್ರಾಮಮೂರ್ಛನಾ ಪ್ರಕರಣಮ್‌

೧೬೭ಅಆ. ಸಮೂಹ … ಸಂಯುತೌ : ಹೋಲಿಸಿ :

ಗ್ರಾಮೋನಾಮ ವಿಶಿಷ್ಟಶ್ರುತಿಸ್ವರಸಮೂಹೋ ಮೂರ್ಛನಾತ್ಮಾ ಪೂರ್ಣಾಪೂರ್ಣಸ್ವಭಾವಸ್ವರಗತ ಗ್ರಹಾಂಶಾದಿ ವಿಶೇಷಸಮೂಹರೂಪಜಾತಿಸಮೂಹಶ್ಚ | (ಅಭಾ. ನಾಶಾ. ೨೮.೬೪,೬೫: ೪೨) ಈ ಶ್ಲೋಕಾರ್ಧವು ಸಂಸಸಾ. ಹಸ್ತಪ್ರತಿಯಲ್ಲಿ ಉದ್ಧೃತವಾಗಿದೆ.

೧೬೭ಈ ಭೂತ್ವಾ: ಭೂತಾ (ಸಸಂಸಾ ಹಸ್ತಪ್ರತಿ : ಸಿಂಹ. ಸಂರ. ೧.೪.೧:೧೦೧)

೧೬೭ಉಊ. ವ್ಯವಸ್ಥಿತಿಃ : (ಪ್ರಸಂ); ವ್ಯವಸ್ಥಿತೌ (ಸಂಸಾ. ಹಸ್ತಪ್ರತಿ): ವ್ಯವಸ್ಥಿತಿಃ (ಸಿಂಹ. ಅದೇ)

೧೭೦- ಸ್ಥಾಪನತ್ವ : – ಸ್ಥಾಪಕತ್ವಂ (ಸಿಂಹ. ಸಂರ. ೧.೪.೬-೮:೧೦೩)

೧೭೧ಈ. – ಕುಲಸಮುತ್ಪನ್ನ-: -ಕುಲ ಉತ್ಪನ್ನ-(ಸಿಂಹ. ಅದೇ)

೧೭೨ಅ-ಈ. ದೇವ… ಮಹೇಶ್ವರಾಃ : ಈ ಶ್ಲೋಕವು ನಾರದಪ್ರಣೀತವೆಂದಿದ್ದರೂ ಅದು ನಾಶಿ. ದಲ್ಲಿಲ್ಲ.

೧೭೩ಆ. ಗಮ್ಯತೇ: ಗಣ್ಯತೇ (ಸಿಂಹ. ಸಂರ. ೧.೪.೩; ೧೦೧)

೧೭೩ಇ. ಷಡ್ಜಸ್ಕೈವ ಹಿ : ಸಿಂಹ (ಅದೇ)ನಿಂದ ಉದ್ಧೃತವಾಗಿದೆ; ಷಡ್ಜವಾಹಿ ಚ (ಪ್ರಸಂ)

೧೭೫ಅ. : ದ್ವೌ … ಸಂಜ್ಞಿತೌ: ದ್ವೌ ಗ್ರಾಮೌ ವಿಶ್ರುತೌ ಲೋಕೇ ಷಡ್ಜಮಧ್ಯಮಸಂಜ್ಞಕೌ ಇತಿ ಮುನಿ ವಚನಾಚ್ಚ… (ಕಲ್ಲಿ. ಸಂರ.೧.೪೧:೯೯) ಆದರೆ ಈ ಶ್ಲೋಕಾರ್ಧವು ಉಪಲಬ್ಧ ನಾಶಾ.ದಲ್ಲಿಲ್ಲ.

೧೭೭ ಜಾತಿಭಿಃ… ಮಾಗತಾಃ | : ಇದು ನಾಶಾ (೧೮.೫ಅಆ:೪೦೯)ದಲ್ಲಿ ದೊರೆಯುತ್ತದೆ. ಆದರೆ ಇಲ್ಲಿ ಅದು ಉದ್ಧೃತವಾಗಿದೆಯೆಂಬುದರ ಸೂಚನೆಯಲ್ಲ.

೧೭೮ಅ. … ಶುದ್ಧಾಭಿರ್ವಿಕೃತಾಭಿಶ್ಚ ಶ್ರುತಿಭಿಶ್ಚ: ಶುದ್ಧಾಭಿಃ ಶ್ರುತಿಭಿಶ್ಚ ನಾತಿಕಾಭಿಃ (ಪ್ರಸಂ)

೧೭೮ಆ. ಕಿಂಚಿದು-: ಕಿಂ ಸ್ಯಾದು –(ಪ್ರಸಂ)

೧೭೮ಈ. ಶುದ್ಧಾಭಿಃ ಷಡ್ಜೋ: ಶುದ್ಧಾಭಿಃ ಷಡ್ಭಿಃ (ಪ್ರಸಂ). ಇಲ್ಲಿ ಷಡ್ಬಿಃಎಂಬುದು ನಿರರ್ಥಕಪಾಠವೆಂದು ದ್ವಿಸಂರು ತೀರ್ಮಾನಿಸಿದ್ದಾರೆ. ಆದರೆ ಶುದ್ಧವಾದ ಆರು ಜಾತಿಗಳಿಂದ, ಷಡ್ಜ(ಗ್ರಾಮ), ವಿಕೃತವಾದ (ಹನ್ನೊಂದು) ಜಾತಿಗಳಿಂದ ಮಧ್ಯಮ (ಗ್ರಾಮ), ಇವೆರಡರಿಂದ ಸಂಕೀರ್ಣವಾದ ಜಾತಿಗಳು, ಎಂದು ಇಲ್ಲಿ ಅರ್ಥೈಸಬೇಕು.೧೭೯ಅ. ಇದಾನೀಮವಸರ – : ಇದಾನೀಮದ ಸ್ವರಾಃ (ಪ್ರಸಂ)

೧೭೯ಉ. ಮೂರ್ಛ್‌.: ಮೂರ್ಚಾ (ಪ್ರಸಂ). ಈ ಗ್ರಂಥಖಂಡವನ್ನು ಸಿಂಹ. (ಸಂರ. ೧.೪.೯-೧೧:೧೦೫)ನು ಹೀಗೆ ಉದ್ಧರಿಸಿಕೊಳ್ಳುತ್ತಾನೆ:

ಕಥಿತಾ ಮತಂಗೇನ-

ಮೂರ್ಛನಾ ಶಬ್ದವ್ಯುತ್ಪತ್ತಿರ್ಮುರ್ಛಾ ಮೋಹೇ ಸಮುಚ್ಚಯೇ |
ಮೂರ್ಛ್ಯತೇ ಯೇನ ರಾಗೋ ಹಿ ಮೂರ್ಛನೇತ್ಯಭಿಸಂಜ್ಞಿತಾ ||

ಆದುದರಿಂದ ಈ ಶ್ಲೋಕದ ಪ್ರಥಮಾರ್ಧವನ್ನು ೧೮೦ನೆಯ ಗ್ರಂಥಖಂಡದ ಪೂರ್ವ ಶ್ಲೋಕಾರ್ಧವೆಂದು ಇಟ್ಟುಕೊಳ್ಳುವುದೇ ಸರಿಯೆಂದು ಕಾಣುತ್ತದೆ.

೧೮೧ಅ. ಸಾ ಚ ಮೂರ್ಛನಾ : ಸಾ ಮೂರ್ಛನಾ (ಸಂಸಸಾ. ಹಸ್ತಪ್ರತಿ)

೧೮೧ಋ. ಕಾಕಲ್ಯಂತರಸ್ವರೈ-: ಕಾಕಲ್ಯಂತರೈಃ ಸ್ವರೈಃ (ಸಿಂಹ. ಸಂರ. ೧.೪.೨೧-೨೬: ೧೧೪)

೧೪೧ಋ. : ಸಾಧಾರಣ : ಸಾಧಾರಣೀ (ಸಿಂಹ. ಅದೇ)

೧೮೨ಆ. ಪ್ರವೃತ್ತತ್ವಾತ್‌: ಪ್ರವೃ(ತ್ತಾಸ್ತಾ?ತ್ತತ್ವಾ)ತ್‌(ಪ್ರಸಂ)

೧೮೩ಅ. ಖಲು: ಖಂಡು (?) (ಪ್ರಸಂ)

೧೮೪ಇ. ಸ್ವರಾಃ ಕಾರ್ಯಾಃ : ಸ್ವರಾಸ್ತಿರ್ಯಕ್‌ ಕಾರ್ಯಾಃ | (ಪ್ರಸಂ).ಇಲ್ಲಿ ತಿರ್ಯಕ್‌ ಎಂಬುದನ್ನು ದ್ವಿಸಂ. ರು ನಿರರ್ಥಕ ದ್ವಿರುಕ್ತಿಯೆಂದು ಬಿಟ್ಟುಬಿಟ್ಟಿದ್ದಾರೆ. ಮೂರ್ಛನೆಗಳನ್ನು ಬರೆಯುವಲ್ಲಿ ಸ್ವರಗಳನ್ನು ಮೇಲು ಕೆಳಗಿನ ಪಙ್ತ್‌ಗಳಲ್ಲೂ ಅಡ್ಡಪಙ್ತ್‌ಗಳಲ್ಲೂ ಬರೆಯಬೇಕು. ಈ ಸಂದರ್ಭದಲ್ಲಿ ಅಡ್ಡಪಙ್ತ್‌ಯಲ್ಲಿ ಬರೆಯಬೇಕು ಎಂಬುದು ತಿರ್ಯಕ್‌ ಶಬ್ದ ಪುನರುಕ್ತಿಯ ಉದ್ದೇಶವಾಗಿರುವಂತೆ ಕಾಣುತ್ತದೆ.

೧೮೯-ಮಂದ್ರಾ : ಮಂದಾ (ಪ್ರಸಂ)

೧೯೩ಆ. ಹರಿಣಾಶ್ವಿಕಾ : ಹರಿಣಾಶ್ವಾ (ಪ್ರಸಂ). ಆಹ್ವಾ ಎಂಬುದರ ತೃತೀಯಾವಿಭಕ್ತಿರೂಪದಲ್ಲಿ ಆಹ್ವಯಾ ಎಂಬ ಶಬ್ದವು ಇಲ್ಲಿ ಪ್ರಯುಕ್ತವಾಗಿದೆಯೆಂದೂ ಅದು ಇಲ್ಲಿ ಪ್ರಸಕ್ತವಲ್ಲವೆಂದು ದ್ವಿಸಂ. ರೆನ್ನುತ್ತಾರೆ. ಆಹ್ವಯ ಎಂದರೆ ಹೆಸರು. (ಮೋನಿಯರ್‌ ವಿಲಿಯಂಸ್‌, ಎ ಸಂಸ್ಕೃತ-ಇಂಗ್ಲಿಷ್‌ಡಿಕ್ಷನರಿ: ೧೬೩), ಆಹ್ವಯಾ ಎಂಬುದು ಅದರ ಸ್ತ್ರೀಲಿಂಗರೂಪ.

೧೯೬(ಇ) ತಾರಕಾದೀತಚ್‌: ಪ್ರಸಂ. ದ್ವಿಸಂ. ರಿಬ್ಬರೂ ತಾರಕಾದಿತಚ್‌ ಎಂಬ ಪಾಠವನ್ನು ಮಾತ್ರ ಗ್ರಹಿಸಿದ್ದಾರೆ. ಇಲ್ಲಿ ಷಾಡವವನ್ನು ಒಳಗೊಂಡಿರುವುದು ಷಾಡವಿತ ಎಂಬ ನಿಷ್ಪತ್ತಿಯನ್ನು ಸಾಧಿಸಬೇಕಾಗಿದೆ. ಇದನ್ನು ಗ್ರಂಥಕಾರನು ಒಂದು ಪಾಣಿನೀಯ ಸೂತ್ರವನ್ನು (ಅಷ್ಟಾಧ್ಯಾಯಿ ೫.೨.೩೬) ಅವಲಂಬಿಸಿ ಮಾಡಿದ್ದಾನೆ. ಈ ಸೂತ್ರದ ಪ್ರಕಾರ ತಾರಕಾ ಎಂದು ಮೊದಲಾಗುವ (ತಾರಕಾದಿ) ವರ್ಗದಲ್ಲಿರುವ ನಾಮಪದಗಳಿಗೆ ‘ಇತ್‌’ ಎಂಬ ತದ್ಧಿತ ಪ್ರತ್ಯಯವು (‘ಇತಚ್‌’) ಸೇರಿ ಉಂಟಾಗುವ ಶಬ್ದವು ಆಯಾ ನಾಮಪದದ ಅರ್ಥವನ್ನೂ ಒಳಗೊಳ್ಳುತ್ತದೆ (ಉದಾ. ಪುಷ್ಟ-ಪುಷ್ಟಿತ). ಆದುದರಿಂದ ಗ್ರಂಥಕಾರನು ಉದ್ದೇಶಿಸಿರುವುದು ತಾರಕಾದಿ+ಇತಚ್‌; ಹೀಗಾಗಿ ಈ ಶಬ್ದದ ರೂಪವು ಸವರ್ಣದೀರ್ಘಸಂಧಿಯಿಂದ ತಾರಕಾದೀತಚ್‌ ಎಂದಾಗಬೇಕು.

೨೦೧ಆ. ಕದಾಚಿದನು… ಪ್ರಾಯಿಕಮ್‌: ಮಾತೃಕೆಯಲ್ಲಿ ಈ ಗ್ರಂಥಾಂಶವು ಪುನರುಕ್ತವಾಗಿದೆ. ಇದನ್ನು ದ್ವಿಸಂ.ರು ಗಮನಿಸಿದ್ದಾರೆ.

೨೦೨ಅ. ವಿಹೀನಾ : ವಿಹೀನೋ (ಪ್ರಸಂ.)

೨೦೨ಆ. ವಿಹೀನಶ್ಚ : ಸಹಿಸನಶ್ಚ (ಪ್ರಸಂ. ಅ.ಕ)

೨೦೨ಇ. ವಿಹೀನಾಶ್ಜೌಡುವಿತಾ: – ವಿಹೀನಶ್ಚೌಡವಿತೋ (ಪ್ರಸಂ.)

೨೦೨,೨೦೩ ಪ್ರಸಂ.ದಲ್ಲಿ ಗದ್ಯವೆಂದು ಕೊಟ್ಟಿರುವ ಇವುಗಳನು ಆರ್ಯಾವೃತ್ತದ ಶ್ಲೋಕಗಳೆಂದು ದ್ವಿಸಂ.ರು ಗುರುತಿಸಿದ್ದಾರೆ.

೨೦೩ಅ. ವಿಹೀನಾ : ವಿಹೀನಾ (ಪ್ರಸಂ.)

೨೦೩ಆ. –ವಿಹೀನಾಃ : ವಿಹೀನೇ (ಪ್ರಸಂ)

೨೦೩ಇ. ಪಂಚಸ್ವರಕ್ತಾಸ್ತಾನಾ : ಪಂಚಮಸ್ವರಕರ್ತಾ (?) (ಪ್ರಸಂ)

೨೧೭ಆ-ಊ. ನನು… ಭೇದಃ (೧) ನನು ಕಥಂ ಮೂರ್ಛನಾತಾನಯೋರ್ಭೇದಃ ಪ್ರತಿಪಾದಿತಃ? ಉಚ್ಯತೇ | ಆರೋಹಾವರೋಹಕ್ರಮಯುಕ್ತಃ ಸ್ವರಸಮುದಾಯೋ ಮೂರ್ಛನೇತ್ಯುಚ್ಯತೇ | ತಾನಸ್ತು ಆರೋಹಕ್ರಮೇಣ ಭವತೀತಿ ಭೇದಃ (ಸಂಸಸಾ. ಬೃಹಸ್ಪತಿ: ೧೮) (೨) ನನು ಕಥಂ ಮೂರ್ಛನಾ ತಾನಯೋರ್ಭೇದಃ ಪ್ರತಿಪಾದಿತಃ? ಉಚ್ಯತೇ – ಆರೋಹಾವರೋಹ (ಆರೋಹ್ಯವರೋಹ್ಯ?)ಕ್ರಮಯುಕ್ತಃ ಸ್ವರಸಮುದಾಯೋ(-ಸಮುದ್ಗಮೋ) ಮೂರ್ಛನಾ (ಮೂರ್ಛನೇತ್ಯುಚ್ಯತೇ) | ಕೂಟತಾನಸ್ತು (? ತಾನಾಸ್ತು) (ಕಥಂ?) ಆರೋಹಕ್ರಮೇಣ ಭವಂತೀತಿ ತಯೋಭೇದಃ | ತತ್ತಾನ ಸಂಖ್ಯಾ ಪಂಚಸಹಸ್ರಾಣಿ ತ್ರಯಸ್ತ್ರೀಂಶಂ ಚ (ಚಕ್ವಾರಿಂಶ ಚ?) ಭವತಿ | ಕಿಮಸ್ತಿ ತಾನಕಥನೇ ಕಾರ್ಯಂ ? ಉಚ್ಯತೇ | ಛಾಯಾ (ಸ್ಥಾಯಾ/ಠಾಯಾ)ನಾಂ ಕಾರಣತ್ವಾತ್‌ಇತಿ ತಾನಕಥನಮ್‌ | (ಸಂಸಸಾ. ಹಸ್ತಪ್ರತಿ; ಪಾರಾಂತರಗಳನ್ನು ಕಂಸಗಳಲ್ಲಿ ಕೊಟ್ಟಿದೆ. ಕೊನೆಯ ವಾಕ್ಯದಲ್ಲಿ ಸ್ಥಾಯ/ಠಾಯವನ್ನು ಹೇಳಿದೆ; ಇದು ಕಾಲವೈಯಧಿಕರಣವನ್ನು ಒಳಗೊಳ್ಳುವುದರಿಂದ ಈ ಗದ್ಯಖಂಡವು (ಕಡೆಯಪಕ್ಷ ಅಂಶಿಕವಾಗಿ) ಸಂಸಸಾ. ದ್ದೇ ಇರಬಹುದೇ ಎಂಬ ಶಂಕೆಗೆ ಆಸ್ಪದವನ್ನು ಉಂಟುಮಾಡುತ್ತದೆ. (೩) ಯದ್ಯಪಿ ಮೂರ್ಛನಾ ಏವ ಶುದ್ಧಾಸ್ತಾನಾಃ ಸ್ಯುರಿತ್ಯುಕ್ತೌ ತಾನೇಷ್ವಾರೋಹಾರೋಹತ್ವ(೦) ಪ್ರತೀಯತೇ; ತಥಾಪಿ ಮತಂಗಮತೇನಾರೋಹ ಏವ ತಾನ ಇತಿ ಜ್ಞೇಯಮ್‌ | ತಥಾ ಚ ಮತಂಗಃ-ನನು ಕಥಂ ಮೂರ್ಛನಾ ತಾನಯೋರ್ಭೇದಃ? ಉಚ್ಯತೇ | ಆರೋಹಾವರೋಹಕ್ರಮಯುಕ್ತಃ ಸ್ವರಸಮುದಾಯೋ ಮೂರ್ಛನೇತ್ಯುಚ್ಯತೇ, ತಾನಸ್ತ್ವಾರೋಹಣಂ ಭವತೀತಿ ಭೇದಃ | (ರಾವಿ: ೧.೪೪ರ ವ್ಯಾಖ್ಯಾನ: ೩೧)

೨೧೭ಆ. ತಾನಯೋರ್ನಾರ್ಥಾಂತರತ್ವಮಿತಿ : – ತಾನಯೋಃ ಅಣುತ್ವಾಂತರತ್ವಮಿತಿ; – ನುನುತ್ವ (ಪ್ರಸಂ)

೨೧೭ಆ. ವಿಶಾಖಿಲಃ : ವಿಶ್ರಾಂಖಿಲಃ (ಪ್ರಸಂ)

೨೧೭ಇ. ಏತಚ್ಚಾಸಂಗತಂ : ಏತನ್ನಸಂಗತಮ್‌ (ಸಿಂಹ.ಸಂರ.೧.೪.೨೧-೨೬:೧೧೪): ಭರತಸ್ಯಸಂಗ್ರಹಶ್ಲೋಕೇ- (ಭಕೋ: ೫೦೨)

೨೧೭ಉ. ತತ್‌ ಕಥಂ?: ನನು ಕಥಂ ಮೂರ್ಛನಾತಾನಯೋಭೇದಃ? ಬ್ರೂಮಃ | (ಸಿಂಹ. ಅದೇ)

೨೧೭ಊ. [ಆರೋಹಾವರೋಹಕ್ರಮಯುಕ್ತಃ ಸ್ವರಸಮುದಾಯೋ]: ಈ ಗ್ರಂಥಪೂರಣವನ್ನು ಸಂಸಸಾ (ಬೃಹಸ್ಪತಿ):೧೮, ಸಿಂಹ. (ಅದೇ), ರಾವಿ. (ಅದೇ)ಗಳಿಂದ ಮಾಡಿದೆ.

೨೧೭ಊ. ಮೂರ್ಛನೇತ್ಯುಚ್ಯತೇ : – ಮೂರ್ಛನಾSSರೋಹ-(ಪ್ರಸಂ.)

೨೧೭ಊ. ತಾನಸ್ತ್ವಾರೋಹಕ್ರಮೇಣ : ತಾನೋSವರೋಹಕ್ರಮೇಣ (ಪ್ರಸಂ)

೨೨೦ಅ. ಸ್ವಿಷ್ಟಕೃದ್‌ : – ಸ್ವಿಷ್ಟತೃಡ್‌(ಪ್ರಸಂ). ಸಂರ (೧.೪.೭೪: ೧೪೨)ದ ಆಧಾರದಿಂದ ತಿದ್ದಿದೆ.

೨೨೦ಅ. –ಸುವರ್ಣೋ: -ಸುವರ್ಣೋ (ಪ್ರಸಂ). ಸಂರ (ಅದೇ)ದ ಆಧಾರದಿಂದ ತಿದ್ದಿದೆ.

೨೨೦ಇ. ಬ್ರಹ್ಮಯಜ್ಞಶ್ಚ : ಬಹುಯಜ್ಞಶ್ಚ : ಸಂರ. (ಅದೇ)ದ ಆಧಾರದಿಂದ ತಿದ್ದಿದೆ.

೨೨೧ಈ. ಬಲಭಿನ್ನಾಗಯಜ್ಞಕಃ : ಸಂರಾಜ (೨.೧.೧.೪೫೭)ದಲ್ಲಿ ಈ ಪಾಠವಿದೆ. ಆದರೆ ಅಲ್ಲಿಯೇ (:೧೩೩-ಪಥಕ) ಬಲಭೃತ್‌, ನಾಗಯಕ್ಷ ಎಂದಿದೆ; ಸಂರ. (೧.೪.೭೬:೧೪೧)ದಲ್ಲಿ ಬಲಭಿನ್ನಾಗಪಕ್ಷಕಃ ಎಂದು ಪಠಿಸಿದೆ.

೨೨೨ಅ. ಚಾತುರ್ಮಾಸ್ಯ : ಚಾತುರ್ಮಾಸಿಕ (ಪ್ರಸಂ). ಸಂರ. (೧.೪.೭೭:೧೪೩)ರ ಆಧಾರದಿಂದ ಹೀಗೆ ತಿದ್ದಿದೆ.

೨೨೨ಅ ಸಂಸ್ಥಾ SSಖ್ಯಃ : ಚ; ಸಂಜ್ಞಾಶ್ಚ (ಪ್ರಸಂ). ಸಂರ. (ಅದೇ)ದ ಆಧಾರದಿಂದ ಹೀಗೆ ತಿದ್ದಿದೆ.

೨೨೨ಆ. –ವೋಕ್ಥ- : (ಪ್ರಸಂ); ಸಂರ. (ಅದೇ) ಆಧಾರದಿಂದ ಹೀಗೆ ತಿದ್ದಿದೆ.

೨೨ಇ. ಸೌತ್ರಾಮಣಿಶ್ಚ : ಸೌತ್ರಾಮಣೀ ಚ (ಪ್ರಸಂ): ಸಂರ. (ಅದೇ) ಆಧಾರದಿಂದ ಹೀಗೆ ತಿದ್ದಿದೆ.

೨೨೨ಇ. ಚಿತ್ರಾ : ಪಿತ್ರಾ (ಪ್ರಸಂ); ಸಂರ. (ಅದೇ) ಆಧಾರದಿಂದ ತಿದ್ದಿದೆ.

೨೨೩ಅ. ಚಾರ್ಧ : ಚಾದ್ಯ (ಪ್ರಸಂ). ಸಂರ. (೧.೪.೭೯)ದ ಆಧಾರದಿಂದ ಹೀಗೆ ತಿದ್ದಿದೆ.

೨೨೩ಇಈ. [ಆದಿತ್ಯಾ … ನಾಮಕಃ]: ಪ್ರಸಂ.ದಲ್ಲಿ ಗ್ರಂಥಪತವಿದೆ. ಸಂರ. (೧.೪.೭೯ಎಬಿ: ೧೪೩)ದಿಂದ ಗ್ರಂಥಪೂರಣವನ್ನು ಮಾಡಿದೆ.

೨೨೩ಉಊ. ಸರ್ಪಾಣಾ…ಪಾಯನಃ : ಸರ್ಪೋ ಯಜನಸಂಜ್ಞಶ್ಚ ವೈಕುಂಠಾಯನಃ (ಪ್ರಸಂ). ಸಂರ (ಅದೇ)ದ ಆಧಾರದಿಂದ ತಿದ್ದಿದೆ.

೨೨೪ಇ. ಅಶ್ವಪ್ರತಿಗ್ರಹೋ ಬರ್ಹಿ-: ಅಶ್ವಪ್ರತಿಗ್ರಾಹೋದ ಬಹೀ (ಪ್ರಸಂ). ಸಂರ.(೧.೪.೮೦:೧೮೩)ದ ಆಧಾರದಿಂದ ಹೀಗೆ ತಿದ್ದಿದೆ.

೨೨೫ಇ. –ಕಾರಸ್ತನೂನಪಾತ್‌ತತೋ : – ಕಾರಶ್ಚನೂನಶ್ಚ (ಪ್ರಸಂ). ಸಂರ.(೧.೪.೮೨:೧೪೩)ಮತ್ತು ಸಂರಾಜ (೨.೧.೧.೪೬೫) ಗಳ ಆಧಾರದಿಂದ ಹೀಗೆತಿದ್ದಿದೆ.

೨೨೬ಅ. ಇಡಾ : ಇಖ್ಯಃ (ಪ್ರಸಂ)

೨೨೬ಆ. ವಜ್ಯ : ಯಜ್ಞ (ಪ್ರಸಂ).ಸಂರ. (೧.೪.೮೩:೧೦೪) ಮತ್ತು ಸಂರಾಜ (೨.೧.೧.೪೬೭)ಗಳ ಆಧಾರದಿಂದ ಹೀಗೆ ತಿದ್ದಿದೆ.

೨೨೬ಇ. ಕಂಠ : ಕಂಸ (ಪ್ರಸಂ); ಸಂರ (ಅದೇ) ಮತ್ತು ಸಂರಾಜ (ಅದೇ)ಗಳ ಆಧಾರದಿಂದ ಹೀಗೆ ತಿದ್ದಿದೆ.

೨೨೭ಆ. ಅಗ್ನಿಷ್ಟೋಮೋ : ಜ್ಯೋತಿಷ್ಟೋಮೋ (ಪ್ರಸಂ೦. ಸಂರ(೧.೪.೮೪:೧೪೪) ಮತ್ತು ಸಂರಾಜ (ಅದೇ)ಗಳ ಆಧಾರದಿಂದ ಹೀಗೆ ತಿದ್ದಿದೆ.

೨೨೭ಆ. ಪೌರ್ಣ-: ಪೂರ್ಣ-(ಪ್ರಸಂ); ಸಂರ(ಅದೇ) ಮತ್ತು ಸಂರಾಜ(ಅದೇ)ಗಳ ಆಧಾರದಿಂದ ಹೀಗೆ ತಿದ್ದಿದೆ.

೨೨೭ಈ. ಸೌಭರಕೋ : ಕೌರಭಕೋ (ಪ್ರಸಂ). ಸಂರ(ಅದೇ)ಮತ್ತು ಸಂರಾಜ (ಅದೇ)ಗಳ ಆಧಾರದಿಂದ ಹೀಗೆ ತಿದ್ದಿದೆ.

೨೨೮ಅ. ಕೃಚ್ಚ : -ಕಶ್ಚ (ಪ್ರಸಂ) ; ಸಂರ.(೧.೪.೮೫:೧೪೪) ಮತ್ತು ಸಂರಾಜ (೨.೧.೧.೪೬೯) ಗಳ ಆಧಾರದಿಂದ ಹೀಗೆ ತಿದ್ದಿದೆ.

೨೨೮ಅ. ಕಾರೀರೀ : ಶಾರೀರೀ (ಪ್ರಸಂ) ; ಸಂರ. (೧.೪.೮೬:೧೪೪) ಮತ್ತು ಸಂರಾಜ(ಅದೇ)ಗಳ ಆಧಾರದಿಂದ ತಿದ್ದಿದೆ.

೨೨೮ಆ. ಶಾಂತಿಕೃತ್‌: ಶಾರಿಕೃತ್‌(ಪ್ರಸಂ); ಸಂರ. (೧.೪.೮೬;೧೪೪) ಮತ್ತು ಸಂರಾಜ (ಅದೇ)ಗಳ ಆಧಾರದಿಂದ ಹೀಗೆ ತಿದ್ದಿದೆ.

೨೨೯ಆ. ವೀರಃ : ಧೀರಃ(ಪ್ರಸಂ). ಸಂರ.(೧.೪.೮೭:೧೪೪) ಮತ್ತು ಸಂರಾಜ (೨.೧.೧.೪೭೨)ಗಳ ಆಧಾರದಿಂದ ಹೀಗೆ ತಿದ್ದಿದೆ.

೨೨೯ಆ. – ಚೂಡೋ : -ಪೂಗೋ(ಪ್ರಸಂ)ಸಂರ (ಅದೇ) ಮತ್ತು ಸಂರಾಜ (ಅದೇ)ಗಳ ಆಧಾರದಿಂದ ಹೀಗೆ ತಿದ್ದಿದೆ.

೨೩೦ಅ. ಕಾಮದಃ : ಕ್ರಮಾದಃ (ಪ್ರಸಂ). ಸಂರ.(೧.೪.೮೮:೧೪೪) ಮತ್ತು ಸಂರಾಜ (೨.೧.೧.೪೭೩,೪೭೪)ಗಳ ಆಧಾರದಿಂದ ತಿದ್ದಿದೆ.

೨೩೦ಆ. ವಭೃಥೋsಷ್ಟ-: ಅಕುಷ್ಟೋsಬ್ಜಶ್ಚ (ಪ್ರಸಂ). ಸಂರ. (ಅದೇ) ಮತ್ತು ಸಂರಾಜ (ಅದೇ)ಗಳ ಆಧಾರದಿಂದ ತಿದ್ದಿದೆ.

೨೩೦ಇ. ಸ್ವಿಷ್ಟಕೃಚ್ಚ : ಸ್ವಿಷ್ಟಕದ್‌(ಪ್ರಸಂ). ಸಂರ. (ಅದೇ) ಮತ್ತು ಸಂರಾಜ (ಅದೇ)ಗಳ ಆಧರದಿಂದ ತಿದ್ದಿದೆ.

೨೩೦ಇ. ವಷಟ್‌ಕಾರಃ : -ವರ್ಷಕಾಂತಾರಃ (ಪ್ರಸಂ). ಸಂರ. (ಅದೇ) ಮತ್ತು ಸಂರಾಜ(ಅದೇ)ಗಳ ಆಧಾರದಿಂದ ತಿದ್ದಿದೆ.

೨೩೦ಈ. ಮೋಕ್ಷದಃ : ರಕ್ಷಿತಃ (ಪ್ರಸಂ) ಸಂರ. (ಅದೇ) ಮತ್ತು ಸಂರಾಜ(ಅದೇ)ಗಳ ಆಧಾರದಿಂದ ತಿದ್ದಿದೆ.

೨೩೨ಆ. ತದಾದಿಕೃತಾ : ತದಾದಿವಿಕೃತಾ (ಕಲ್ಲಿ.ಸಂರ.೧.೪.೧೫-೧೬:೧೦೮); ಆದರೆ ಸಾಧಾರಣವೂ ಒಂದು ವಿಕೃತಾವಸ್ಥೆಯೇ ಆಗಿರುವುದರಿಂದ ಪ್ರಸಂ.ದ ಈ ಪಾಠವನ್ನೇ ಸ್ವೀಕರಿಸಿದೆ ಎಂದು ದ್ವಿಸಂರೆನ್ನುತ್ತಾರೆ.

೨೩೨ಆ. ಭವಂತಿ : ಭವತಿ (ಪ್ರಸಂ)

೨೩೨ಈ. ತಾನ : ತಾನಾ (ಪ್ರಸಂ)

೨೩೪ಅ. ಚೇತ್‌: ಪ್ರಸಂ.ದಲ್ಲಿಲ್ಲ. ಸಿಂಹ(ಸಂರ.೧.೪.೨೯-೩೧:೧೧೭)ನ ಉದ್ದೃತಿಯನ್ನು ಅನುಸರಿಸಿ ಗ್ರಂಥಪೂರಣವನ್ನು ಮಾಡಿದೆ.

೨೩೪ಇ. ಪ್ರವೇಶ : ಪ್ರವೇಶೋ (ಪ್ರಸಂ)

೨೩೪ಇ. ಋಷಭಾ -:- ಹ್ಯೃಷಭಾ (ಸಿಂಹ. ಅದೇ)

೨೩೪ಇ. ವಿಪ್ರಕರ್ಷಃ : –(ಸಿಂಹ. ಅದೇ)

೨೩೪ಇ. –ಪಾದನಂ : – ವಾದಾನಂ (ಪ್ರಸಂ)

೨೩೪ಈ. ಪ್ರವೇಶನಂ –: ಪ್ರವೇಶೇನ (ಪ್ರಸಂ):; ಪ್ರವೇಶಃ (ಸಿಂಹ. ಅದೇ)

೨೩೫ಆ. ಮಾರ್ದವೇನ : ಮಾರ್ದನೇನಾಯಂ (ಸಿಂಹ. ಅದೇ)

೨೩೫ಅ. ದ್ವಿವಿಧಂ ಪ್ರವೇಶನಂ : ಯಾವತ್‌ | ಇತಿ ದ್ವಿವಿಧಃ ಪ್ರವೇಶಃ (ಸಿಂಹ. ಅದೇ). ಹೋಲಿಸಿ: ಪ್ರವೇಶೋ ದ್ವಿವಿಧಃ ಪೂರ್ಣಸ್ವರವಿಪ್ರಕರ್ಷೇಣೋತ್ತರಸ್ವರಮಾರ್ದವೇನ ಚ | ತತ್ರರ್ಷಭಾಪೇಕ್ಷಯಾ ಷಡ್ಜಸ್ಯಾಧರೀಭೂತಸ್ಯ ಲೋಪನೀಯಸ್ಯಾಪಿ ವಿಪ್ರಕರ್ಷಃ ಪೀಡನಂ, ಋಷಭಾಪಾದನಮಿತಿ ಯಾವತ್‌ | ತಸೈವ ಷಡ್ಜಸ್ಯ ನಿಷಾದಾಪೇಕ್ಷಯೋತ್ತರೀಭೂತಸ್ಯ ಮಾರ್ದವಂ ಶಿಥಿಲೀಕರಣಂ, ನಿಷಾದಾಪಾದನಮಿತಿ ಯಾವತ್‌ | (ಕಲ್ಲಿ. ಸಂರ. ೧.೪.೧೭:೧೧೧)

೨೩೬ಅ. –ಸ್ತ್ವಂತರ… ಸಂಸ್ಪರ್ಶನಮ್‌ : ಹೋಲಿಸಿ:

(೧) ನಿಗ್ರಹಸ್ತೂತ್ತರಸ್ವರಪರಿತ್ಯಾಗೋ sಸಂಸ್ಪರ್ಶಃ | ಪ್ರಯೋಗಸ್ತು ಯಥಾ- ಸಾಸಾ ಗರಿ ಪಾಪಾ ಮಾರೀ || ತಥಾ ಚಾಹ ಭರತಃ – ದ್ವಿಧಾ ತಾನಕ್ರಿಯಾ ತಂತ್ರ್ಯಾಂ ಪ್ರವೇಶೋ ನಿಗ್ರಹಶ್ಚ ಅತ್ರ ಪ್ರವೇಶೋನಾಮಾಧಾರಸ್ವರಪ್ರಕರ್ಷಾದುತ್ತರಸ್ವರಮಾರ್ದವಾಚ್ಚ | ನಿಗ್ರಹಶ್ಚಾಸಂಸ್ಪರ್ಶಃ | (ಸಿಂಹ. ಅದೇ)

(೨) ನಿಗ್ರಹಸ್ತೂತ್ತರಸ್ವರಪರಿತ್ಯಾರ್ಗ ಅಸಂಸ್ಪರ್ಶ ಇತಿ ಯಾವತ್‌ | ತಥಾ ಚಾಹ ಭರತಃ –ದ್ವಿಧಾ ತಾನಕ್ರಿಯಾ ತಂತ್ರ್ಯಾಂ, ಪ್ರವೇಶಾನ್ನಿಗ್ರಾಹಚ್ಚಾ | ಇತಿ ತತ್ರ ಪ್ರವೇಶೋ ನಾಮಾಧರ ಸ್ವರಪ್ರಕರ್ಷಾದುತ್ತರಸ್ವರಮಾರ್ದವಾದ್ವಾ | ನಿಗ್ರಹಶ್ಚಾಸಂಸ್ಪರ್ಶಃ |

೨೩೭ಆ. ತಂತ್ರ್ಯಾಂ : ತತ್ರ್ಯಾಃ (ಪ್ರಸಂ)

೨೩೭ಈ. ನಿಗ್ರಹಶ್ಚಾಸಂಸ್ಪರ್ಶ: ನಿಗ್ರಹಶ್ಚಾಹ ಸಂ-(ಪ್ರಸಂ)

೨೩೭ಅ-ಈ : ದ್ವಿವಿಧಾ….. ಶ್ಚಾಸಂಸ್ಪರ್ಶಃ : ಹೋಲಿಸಿ:

(೧) ದ್ವಿವಿಧಾ ಚ ತಾನಕ್ರಿಯಾ ತಂತ್ರ್ಯಾ ಪ್ರವೇಶಾನ್ನಿಗ್ರಹಾಚ್ಚ | ತತ್ರ ಪ್ರವೇಶನಂ-ಮಧುರ (ಪ್ರವೇಶನಮಧುರ) ಸ್ವರವಿಪ್ರಕರ್ಷಾದುತ್ತರಸ್ವರಮಾರ್ದವಾದ್ವಾ (ನಾಸಾ. ೨೮.೩೩ಗ;೨೭)

(೨) ದ್ವಿವಿಧಾಸ್ತಾ(ತಾ)ನಕ್ರಿಯಾ ತಂತ್ರ್ಯಾಂ ಪ್ರವೇಶೋ ನಿಗ್ರಹಶ್ಚ | ತತ್ರ ಪ್ರವೇಶೋ ನಾಮಾಧರ ಸ್ವರಪ್ರಕರ್ಷಾದುತ್ತರಸ್ವರಮಾರ್ದವಾಚ್ಚ | ನಿಗ್ರಹಸ್ತ್ವ ಸಂಸ್ಪರ್ಶಃ (ನಾಶಾಚೌ:೩೨೦, ೩೨೧)

೨೩೯ಇ. ಪ್ರವೇಶೋ ಧ್ವನಿಸಾದೃಶ್ಯಮ- : ತತ್ರ ಪ್ರವೇಶೋ ಧ್ವನೈಕ್ಯಮ- (ದತ್ತಲಂ ೩೬)

೨೪೦ಅ. ಕಾಕುವಿಧಾನೇ : ಕಾರೀಪಿಧನೇ(ಪ್ರಸಂ) ; ಸಾರೀವಿಧಾನೇ (ಸಸಂಸಾ. ಬೃಹಸ್ಪತಿ;೧೦೭): ಸಾರೀಗಳನ್ನು ಎಂದರೆ ಮಟ್ಟುಗಳನ್ನು, ಇಡುವ ವಿಧಾನದಲ್ಲಿ. ದ್ವಿಸಂ.ರು ಇದನ್ನು ಸ್ನೀಕರಿಸದೆ ನಾಶಾ (೧೭.೧೦೬:೩೮೭) ಮತ್ತು ಅಭಾ.(ಣಾಸಾ. ಅದೇ)ಗಳ ಆಧಾರದಿಂದ ಕಾಕುವಿಧಾನೇ ಎಂಬ ಪಾಠವನ್ನು ತೀರ್ಮಾನಿಸಿದ್ದಾರೆ.

ನನನು ತ್ರಿಷು ಸ್ಥಾನೇಷು ಸಪ್ತಸ್ವರಾ ಇತ್ಯುಕ್ತ ಕಾಕುವಿಧಾನೇ | ತತ್ರ ಕತಮ್‌[ಸ್ವರಸಪ್ತಕಮವಲಂಬ್ಯ] ಮೂರ್ಛನಾ ಕಾರ್ಯೇತಿ ಯೇ ಸಂಶೇರತೇ ತಾನ್‌ಪ್ರತ್ಯಾಹ ಮಧ್ಯಮಸ್ವರೇಣ ತ್ವಿತಿ ಜಾತಾವೇಕವಚನಂ, ಮಧ್ಯೈ ರೇವ ಸ್ವರೆರಿತಿ (ಅಭಾ. ನಾಶಾ ೨೮.೩೩.ಗ:೨೭)

೨೪೦ಇ. ಮಧ್ಯಮ –: ಮಧ್ಯ (ಕಲ್ಲಿ. ಸಂರ.೧.೪.೯-೧೧:೧೦೪)

೨೪೦ಇ. ನಿರ್ದೇಶೋ ಭವತಿ : ನಿರ್ದೇಶೋ ತಾವ(?) (ಪ್ರಸಂ); ನಿರ್ದೇಶಃ ಕಾರ್ಯೋ (ಕಲ್ಲಿ. ಅದೇ)

೨೪೧ಅ. ಪರ್ಯಗ್ರಹೇ : ಪರಿಗ್ರಹೋ (ಪ್ರಸಂ)

೨೪೧ಅ. ಮಧ್ಯಮಸ್ವರೇಣ : … ವಾ : ಹೋಲಿಸಿ:

೧. ಮಧ್ಯಮಸ್ವರೇಣ ತು ವೈಣೇನ ಮೂರ್ಛನಾನಿರ್ದೇಶೋ ಭವಂತ್ಯನಾಶಿತ್ವಾನ್ಮಧಮಸ್ವರಸ್ಯ ನಿಗ್ರಹಃ ಪ್ರವೇಶೋ ವಾ! (ನಾಶಾ. ಚೌ:೩೨೧)

೧. ಮಧ್ಯಮಸ್ವರೇಣೈವ ತು ಮೂರ್ಛನಾನಿರ್ದೇಶಃ ಕಾರ್ಯೋ ಭವತಿ ಅನಾಶಿತ್ವಾನ್ಮಧ್ಯಮಸ್ಯ ನಿಗ್ರಹೇ ಪರ್ಯಗ್ರಹೇ ವಾ | (ನಾಶ.೨೮.೩೩ಗ:೨೭)

೨೪೨ಇ. ಕಂಠ್ಯೇ ಸ್ವರೇ : ನಾಶಾ.(೨೮.೩೩ಗ.:೨೮)ದಲ್ಲಿ ‘ಚತುರ್ಥಸ್ವರ ಏವ ಕಂಠ್ಯೋ ಮಧ್ಯಮಾ (-ಮೋs)ತ್ರೇತ್ಯಪರೇ’ ಎಂದಿದೆ. ಇದರ ಆಧಾರದಿಂದ ಈ ಗ್ರಂಥಾಂಶವನ್ನು ಹೀಗೆ ತಿದ್ದಿದೆ.

೨೪೨ಈ. ಅಪಕೀರ್ತಿತಸ್ಯಾಪಿ : ಅಪಕೀರ್ತಿತಃ ತಸ್ಯಾಪಿ (ಪ್ರಸಂ)

೨೪೪ಆ. ವಿನಾಶಿನಮ್‌: ವಿನಾಶನಮ್‌(ಪ್ರಸಂ)

೨೪೪ಇ. ವಿದ್ವಾನೇ -: ವಿದ್ಯತೇ(ಪ್ರಸಂ); ದತ್ತಿಲಂ(೩೭)ದ ಆಧಾರದಿಂದ ಹೀಗೆ ತಿದ್ದಿದೆ

೨೪೬ಅ. ಇದಂ… ಮುಕ್ತಮ್‌ | ಹೋಲಿಸಿ:

೧. ಪ್ರಯೋಕ್ತೃಶ್ರೋತೃಸುಖಾರ್ಥಂ ಚ ಮೂರ್ಛನಾ ನಾನಾತ್ವಂ | ಮೂರ್ಛನಾತಾನ ಪ್ರಯೋಜನಮಪಿ ಸ್ಥಾನಪ್ರಾಪ್ತ್ಯರ್ಥಮ್‌ | (ನಾಶಾ.೨೮.೩೩.ಗ.೨೮)

೨. ಪ್ರಯೋಕ್ತೃಶ್ರೋತೃಸುಖಾರ್ಥಂ ತಾನಮೂರ್ಛನಾತತ್ವಮ್‌ | ಪ್ರಯೋಜನಮಪಿ ಸ್ಥಾನಪ್ರಾಪಿಃ | (ನಾಶಾಚೌ: ೨೭) ನಾಶಾ.ದಲ್ಲಿ ನಾನಾತ್ವವನ್ನು ಮೂರ್ಛನೆಗೆ ಹೇಳಿದ್ದರೆ ಬೃಹ.ಯಲ್ಲಿ ಮೂರ್ಛನಾ-ತಾನಗಳು ಬೇರೆ ಬೇರೆ ಎಂಬ ಅರ್ಥವು ಹೊರಡುತ್ತದೆ. ಈ ಅನ್ಯತ್ವವು ೨೧೭ (ಈ) ದಲ್ಲಿ ಹೇಳಿರುವ ನಾನಾತ್ವಕ್ಕೆ ಅನುಸಾರವಾಗಿದೆ.

೨೪೭ಅ. ರಾಗೇಷೂಪ -: ರಾಗಭಾಷಾದಿಷೂಪ- (ಸಿಂಹ.ಸಂರ.೧.೪.೨೯-೩೧:೧೧೭)

೨೪೭ಆ. ಕುತ್ರೋಪಯುಜ್ಯಂತೇ? ಹೋಲಿಸಿ:

ನನು ಚ ಮೂರ್ಛನಾಸ್ತಾವತ್‌ ಜಾಜ್ಜತಿ(-ಜ್ಜಾತಿ)ಗ್ರಹ(ರಾಗ)ಭಾಷಾವನ್ಯ ಪ್ರಯೋಗೋಪಯೋಗಿನ್ಯಃ ತಾನಾಶ್ಚ ಕುಪತ(ಕುತ್ರ) ಉಪಯಜ್ಯಂತೇ, ತಾನೋಕ್ತಸ್ವರಾತಿರಿಕ್ತಾ ನಾಮಪಿ ಜಾತಿಷು ಲೋಪಾ(ಪ್ಯ) ಭಾವಾದ್‌ ದುಷ್ಟತ್ವಾತ್‌ | (ಕಂಸಗಳಲ್ಲಿರುವ ಪಾಠಗಳನ್ನು ದ್ವಿಸಂ.ರು ನೀಡಿದ್ದಾರೆ) (ಅಭಾ. ನಾಶಾ. ೨೮.ಗ:೨೯)

೨೪೭ಈ.: ನಷ್ಟೋದ್ದಿಷ್ಟ: ನಷ್ಟೋತ್ರದ್ರಷ್ಟ (ಪ್ರಸಂ). ಹೋಲಿಸಿ:

ಗ್ರಾಮದ್ವಯೇsಪಿ ತಾನಾನಾಂ ಷಾಡವೌಡುವಸಂಜ್ಞಾನಾಮ್‌ |
ನಷ್ಟೋದ್ದಿಷ್ಟವಿಧಾನಾಯ ತತ್ಸಂಖ್ಯಾಮಭಿದದ್ಮಹೇ || (ಸಂರಾಜ. ೨.೧.೧.೪೨೪)

೨೪೮ಅ. ಪಂಚ ತ್ರಯ – : ಪಂಚಮಸ್ತ್ರಿ-(ಪ್ರಸಂ)

೨೪೯ಅ. ಪೂರ್ನಾಃ : ಪೂರ್ಣಃ ದತ್ತೊಲಂ(೩೯)ಅನ್ನು ಅನುಸರಿಸಿ ಹೀಗೆ ತಿದ್ದಿದೆ.

೨೪೯ಆ. ಪಂಚ : ಪಂಚಮ-; ದತ್ತಿಲಂ(ಅದೇ)ನ್ನು ಅನುಸರಿಸಿ ಹೀಗೆ ತಿದ್ದಿದೆ.

೨೪೯ಈ. ಮುಪಾಯೋ -: ಪಯೋಗೇನ; ದತ್ತಿಲಂ(ಅದೇ)ಅನ್ನು ಅನುಸರಿಸಿ ಹೀಗೆ ತಿದ್ದಿದೆ.

೨೪೯ಈ. ನೇ sಧುನಾ- : ನೈಧುನಃ : ದತ್ತಿಲಂ(ಅದೇ) ಅನ್ನು ಅನುಸರಿಸಿ ಹೀಗೆ ತಿದ್ದಿದೆ.

೨೫೦ಅ. ಗಣನಾsತ್ರ : ಗಣಮಾತ್ರ (ಪ್ರಸಂ)

೨೫೧ಈ. ಕ್ರಮಾಃ ಶೇಷಾಃ : ಕ್ರಮಚ್ಛೇಷಾಃ (ದತ್ತಿಲಂ ೪೦)

೨೫೨ಆ. ಹನ್ಯೇತ : ಹ(ರೇsನ್ಯೇ)ತ (ಪ್ರಸಂ)

೨೫೨ಇ. –ಹತೌ : ಹತ್ವಾ (ಪ್ರಸಂ)

೨೫೨ಇ. ಭವತಿ : ಭವಂತಿ (ಪ್ರಸಂ)

೨೫೨ಉ ಭವತಿ : ಭವಂತಿ (ಪ್ರಸಂ)

೨೫೪ಇ. ವ್ಯುತ್ಕ್ರಮೋಃ : ತ್ಯತಃ (ಪ್ರಸಂ)

೨೫೪ಊ. ಗಸರಿ ರಿಗಸ : ರಿಗಸ ಗಸರಿ (ಪ್ರಸಂ)

೨೫೪ಊ. ಪಂಚ : ಪಂಚಮ (?) (ಪ್ರಸಂ)

೨೫೫ಅ. –ತ್ಯೇಕ ಕ್ರಮಃ : –ಮೇಕಂ ರಕ್ರಮಃ (?) (ಪ್ರಸಂ)

೨೫೫ಆ. –ಮಾದಯಸ್ತ್ರಯೋವಿಂಶತಿ-: ಮಾದಯೋ ವಿಂಸತಿ-(ಪ್ರಸಂ)

೨೫೭ಅ. ಸ್ವರಾಣಾಂ ತಾನವಿಧಾನಂ : ಸ್ವರಾನ್‌ ವಿಧಾನ್‌ (ಪ್ರಸಂ)

೨೫೭ಆ. ಸ್ವಮಾನಾನಿ ಮಧ್ಯಮಾದೀನಿ : ಭಾವಾ ಋ(?ಮ)ಧ್ಯಮಾದಿನಾಂ (ಪ್ರಸಂ)

೨೫೯ಅ. ತದೇಷಾಂ : ಹೋಲಿಸಿ :

ಪ್ರಯೋಜನಮಪಿ ಸ್ಥಾನಪ್ರಾಪ್ತಿಃ | ಸ್ಥಾನಂ ತು ಪೂರ್ವೋಕ್ತಲಕ್ಷಣಂ ಕಾಕುವಿಧಾನೇ |

೨೫೯ಅ. (ಸ್ಥಾನ-) : ನಾಸಾ. (೨೮.೩೩ಗ)ದ ಆಧಾರದಿಂದ ಇದನ್ನು ಸೇರಿಸಿದೆ.

೨೫೯ಆ. ಸ್ಥಾನಾನಿ : ಹೋಲಿಸಿ :

ಯತ್‌ ತ್ರಿವಿಧೇನೋಕ್ತ ಕಾಕುವಿಧಾನೇನ ತಚ್ಚಷಟ್‌ಷಷ್ಟಿಭೇದಃ ಸಂಕ್ಷೇಪತಸ್ತ್ರಿಧಾ ಸದ್ವರ್ಣಾ ಲಂಕಾರಯೋಗಃ ಪ್ರಯೋಕ್ಷ್ಯತೇ |

೨೬೧ಇ. ತು : ಸಂ-(ಸಿಂಹ. ಸಂರ.೧.೪.೧೫,೧೬:೧೧೦)

೧೬೧ಈ. ಮೂರ್ಛನಾಃ : ಮೂರ್ಛನಾಂ (ಪ್ರಸಂ)

೨೬೩ಅ-ಈ. ಯೋಜನೀಯೋ … ಸಿದ್ಧಯೇ : ಹೋಲಿಸಿ :

ಗಾಯತಾ ಶೃಣ್ವತಾ ಚಾಪಿ ಭವೇದ್‌ ರಾಗಾಮೃತಂ ಹೃದಿ |
ಮನಸೋ ಮಜ್ಜನಂ ಯತ್‌ ತನ್ಮೂರ್ಛನೇತ್ಯಾಹ ಕೋಹಲಃ || (ಸಂಸಸಾ. ಬೃಹಸ್ಪತಿ:೪೩)

೨೬೫ಅ. ಯದ್ಯಪ್ಯಾ- : ಯದ್ವಾಪ್ಯಾ – (ಪ್ರಸಂ) ; ಯದ್ಯಾಪ್ಯಾ – (ಭಕೋ: ೨೮೯)

೨೬೬ಆ. ರಿಮಾ : ರಿಸಾ (ಪ್ರಸಂ)

೨೬೬ಇ. ಸತಿ ಸ ರಾಗಃ ಸಿದ್ಧೋ ನ ಸ್ಯಾತ್‌: ಸತಿ ರಾಗಸಿದ್ಧಿಃ ಸ್ಯಾತ್‌ (ಭಕೋ:೨೮೯)

೨೬೬ಈ. ಷಾಡ್ಜೀ – : ಷಡ್ಜ೦-(ಪ್ರಸಂ)

೨೬೬ಊ. ಧನ್ಯಾದಾ : ನಿ ಅನ್ಯಾ-(ಪ್ರಸಂ)

೨೬೮ಅ. ನಿಸರಿಗಮಪಧಾಧ್ಯಾ : ಸಿಂಹ(ಸಂರ.೧.೪.೧೫,೧೬:೧೧೦)ನು ಉದ್ಧರಿಸಿರುವಂತೆ ಸರಿಗಮಪಧನಿಸರಿಗಮಪ ಸ್ವರಗಳಿಂದ ಮೊದಲಾಗುವ ಮೂರ್ಛನೆಗಳ ಹೆಸರುಗಳನ್ನೂ ಅವುಗಳ ಪ್ರಸ್ತಾರಗಳನ್ನೂ ಇಲ್ಲಿ ಸಂಗ್ರಹಿಸಿದೆ.