[ದೇಶೀರಾಗಾಃ]

[ಮಂಗಲಾಚರಣಂ]

೧೦೩೭ ಬಂಧೂಕಾಭಾಂ ತ್ರಿನೇತ್ರಾಮಮೃತಕರಕಲಾಶೇಖರಾಂ ರಕ್ತವಸ್ತ್ರಾಂ
ಪೀನೋತ್ತುಂಗಪ್ರವೃತ್ತಸ್ತನಭರನಮಿತಾಂ ಯೌವನಾರಂಭರೂಢಾಮ್‌ |
ಸರ್ವಾಲಂಕಾರಭೂಷಾಂ ಸರಸಿಜನಿಲಯಾಂ ಬೀಜಸಂಕ್ರಾತಮೂರ್ತಿಂ
ದೇವೀಂ ಪಾಶಾಂಕುಶಾಢ್ಯಾಮಭಯವರಕರಾಂ ವಿಶ್ವಯೋನಿಂ ನಮಾಮಿ || ೧ ||

೧೦೩೮ ಅತಃಪರಂ ಪ್ರವಕ್ಷ್ಯಾಮಿ ದೇಶೀರಾಗಕದಂಬಕಮ್‌|| ೨ ||

[ತ್ರಿವಿಧದೇಶೀರಾಗಾಃ]

೧೦೩೯ [ಲಕ್ಷ್ಯಲಕ್ಷಣಸಂಯುಕ್ತ ತ್ರಿವಿಧಂ ವಾSಪಿ ಸಂಯುತಮ್‌ |
ರಾಗಾಂಗಂ ಚೈವ ಭಾಷಾಂಗಳಂ ಕ್ರಿಯಾಂಗಂ ಚ ತೃತೀಯಕಮ್‌|| ೩ ||

೧೦೪೦ ಪ್ರತ್ಯೇಕಂ ಲಕ್ಷಣಂ ಚೈಷಾಂ ಪ್ರವಕ್ಷ್ಯಾಮ್ಯನುಪೂರ್ವಶಃ || ೪ ||

೧೦೪೧ ಉಕ್ತಾನಾಂ ಗ್ರಾಮರಾಗಾಣಾಂ ಛಾಯಾಮಾತ್ರಂ ಭಜಂತಿ ಹಿ |
ಗೀತಜ್ಞೆಃ ಕಥಿತಾಃ ಸರ್ವೇ ರಾಗಾಂಗಾಸ್ತೇನ ಹೇತುನಾ || ೫ ||

೧೦೪೨ ಭಾಷಾಛಾಯಾಶ್ರಿತಾ ಯೇನ ಜಾಯಂತೇ ಸದೃಶಾಃ ಕಿಲ |
ಭಾಷಾಂಗಾಸ್ತೇನ ಕಥ್ಯಂತೇ ಗಾಯಕೈಃ ಸ್ತುತಿತತ್ಪರೈಃ || ೬ ||

೧೦೪೩ ಕರುಣೋತ್ಸಾಹಶೋಕಾದಿಪ್ರಭವಾ ಯಾ ಕ್ರಿಯಾ ತತಃ
ಜಾಯಂತೇ ಚ ಯತೋ ನಾಮ ಕ್ರಿಯಾಂಗಾಃ ಕಾರಣಾತ್ತತಃ || ೭ ||

ಪಾಠವಿಮರ್ಶೆ: ೧೦೩೭ಈಲ ೧೦೩೯-೧೦೪೩ ೧೦೪೧ಅಆ ೧೦೪೨ಈ ೧೦೪೩ಅ-ಈ, ಅಆ

—-

[ದೇಶೀರಾಗಗಳು]

[ಮಂಗಲಾಚರಣ]

೧೦೩೭ ಕೆಂಪುದಾಸವಾಳದ ಹೂವಿನ ಕಾಂತಿಯುಳ್ಳ, ಮೂರು ಕಣ್ಣುಗಳನುಳ್ಳ, ಸುಧಾಕರ (= ಚಂದ್ರ) ಕಲೆಯನ್ನು ತಲೆಯಲ್ಲಿ ಧರಿಸಿರಿವ, (ರಕ್ತದ ಬಣ್ಣದ) ಕೆಂಪು ಬಟ್ಟೆಗಳನ್ನು ಧರಿಸಿದ, ದಪ್ಪಗೂ, ಎತ್ತರಕ್ಕೂ ದುಂಡಗೂ ಇರುವ ಸ್ತನಗಳ ಭಾರದಿಂದ ಬಾಗಿದವಳೂ, ಯೌವನವು ಆಗ ತಾನೇ ಪ್ರಾರಂಭವಾಗಿರುವ ಷೋಡಶಿಯೂ, ಸಮಸ್ತವಾಗಿ ಒಡವೆಗಳಿಂದ ಸಿಂಗರಗೊಂಡಿರುವವಳೂ, ಕಮಲದಲ್ಲಿ ನೆಲೆಸಿರುವವಳೂ (ಎಲ್ಲಾ) ಬೀಜ (ಮಂತ್ರ)ಗಳೂ ಒಳಸೇರಿಹೋಗಿ (= ಸ್ವಾಧೀನವಾಗಿರುವ ಅಥವಾ ಪ್ರತಿಫಲಿಸಿರುವ ಮೈದಳೆದಿರುವ ಆಕಾರವುಳ್ಳವಳೂ ಆಗಿರುವ, (ಮೇಲಿನ ಎಡಬಲಕೈಗಳಲ್ಲಿ ಕ್ರಮವಾಗಿ) ಪಾಠ ಮತ್ತಯ ಅಂಕುಶಗಳನ್ನೂ (ಕೆಳಗಿನೆ ಎಡಬಲಕೈಗಳಲ್ಲಿ ಕ್ರಮವಾಗಿ) ಅಭಯ ಮತ್ತಯ ವರ(ದ) ಮುದ್ರೆಗಳನ್ನು ಧರಿಸಿರುವ, ಇಡೀ ವಿಶ್ವದ ಹುಟ್ಟಿಗೆ ಯೋನಿಯಾಗಿರುವ (= ವಿಶ್ವಮಾತೆ) ದೇವಿಯನ್ನು ನಮಸ್ಕರಿಸುತ್ತೇನೆ.            ೧

೧೦೩೮ ಇನ್ನು ಮುಂದೆ ದೇಶೀರಾಗಗಳ ಕದಂಬ(ದ ಹೂಗೊಂಚಲನ್ನು = ಸಮುದಾಯ)ವನ್ನು ವಿವರಿಸುತ್ತೇನಡ.        ೨

[ಮೂರು ವಿಧದ ದೇಶೀರಾಗಗಳು]

೧೦೩೯ [ಪ್ರಯೋಗದ ವಿವರಗಳನ್ನ (ಶಾಸ್ತ್ರದಲ್ಲಿ ವಿಧಿಸಿರುವ) ಲಕ್ಷಣಗಳನ್ನು ಕೂಡಿಕೊಂಡಿರುವ ರಾಗಾಂಗ, ಭಾಷಾಂಗ ಮತ್ತು ಮೂರನೆಯದಾದ ಕ್ರಿಯಾಂಗ ಎಂಬ ಮೂರು ವಿಧಗಳು ಸೇರಿರುವ ದೇಶೀರಾಗಕದಂಬವನ್ನು ವಿವರಿಸುತ್ತೇನೆ].                                     ೩

೧೦೪೦ ಇವುಗಳಲ್ಲಿ ಪ್ರತಿಯೊಂದರ ಲಕ್ಷಣವನ್ನೂ ಕ್ರಮವಾಗಿ ಒಂದಾದ ಮೇಲೊಂದರಂತೆ ನಿರೂಪಿಸುತ್ತೇನೆ.              ೪

೧೦೪೧ [ಮೇಲೆ] ಹೇಳಿರುವ ಗ್ರಾಮರಾಗಗಳ ಛಾಯೆಯನ್ನು ಮಾತ್ರ (ಇವು) ಪಾಲುಗೊಳ್ಳುತ್ತವೆ; ಆ ಕಾರಣದಿಂದ ಇವೆಲ್ಲವನ್ನೂ ಹಾಡಬಲ್ಲವರು ರಾಗಾಂಗಳೆಂದು ಕರೆಯುತ್ತಾರೆ.                                                                                                              ೫

೧೦೪೨ ಭಾಷಾರಾಗಗಳ ಛಾಯೆಯಗಳನ್ನು ಆಶ್ರಯಿಸುವುದರಿಂದ ಯಾವವುಗಳು ಅವುಗಳ ಹೋಲಿಕೆಯನ್ನು ಪಡೆಯುತ್ತವೋ ಆ ಕಾರಣದಿಂದ ಅವುಗಳನ್ನು (ದೇವತಾ ಅಥವಾ ಪ್ರಭು) ಸ್ತುತಿಯಲ್ಲಿ ತೊಡಗುವ ಗಾಯಕರು ಭಾಷಾಂಗಗಳೆಂದು ಕರೆಯುತ್ತಾರೆ.       ೬

೧೦೪೩ ಕರುಣ, ಉತ್ಸಾಹ, ಶ್ಲೋಕ ಮುಂತಾದವುಗಳಿಂದ ಎಂತಹ ಕ್ರಿಯೆಯು (= ಬಾಹ್ಯ ವರ್ತನೆಯು) ಹೊರಹೊಮ್ಮುತ್ತದೋ ತಮ್ಮಿಂದ ಹುಟ್ಟುತ್ತವೆ ಎಂಬ ಕಾರಣದಿಂದ ಕ್ರಿಯಾಂಗಗಳು ಎಂಬ ಹೆಸರು ಬಂದಿದೆ.                                                          ೭

____

೧೦೪೪ ತದತ್ರ ಮಾರ್ಗರಾಗೇಷು ನಿಯಮೋ ಯಃ ಪುರೋದಿತಃ
ಸ ದೇಶೀರಾಗಭಾಷಾದಾವನ್ಯಾಥಾ sಪಿ ಕ್ವಚಿದ್‌ಭವೇತ್‌] || ೮ ||
………………….

[ಭಾಷಾರಾಂಗರಾಗಾಃ?]

[೧ ಕಚ್ಛೇಲ್ಲೀ]

೧೦೪೫ ಮಧ್ಯಮಾಂಶಗ್ರಹನ್ಯಾಸಾ ರಿಮಂದ್ರಾ ತಾರತತ್ಪರಾ |
ಕಚ್ಛೇಲ್ಲೀ ಗಧಹೀನಾ ಚ ವಿಜ್ಞೇಯಾ ಪರಿಭೂರಿಗಾ || ೯ ||

[೨. ಶ್ವಸಿತಾ]

೪೦೪೬ ಗಾಂಧಾರಗ್ರಹನ್ಯಾಸಾ ಚ ಷಡ್ಜಂಶಾ ತಾರವರ್ಜಿತಾ |
ಮಸಂದ್ರಾ ಸ[ಮ]ಸ್ವರಾ ಚೈಚ[?ಚ] ಪರಿಹೀನಾ ಸದಾ ಭವೇತ್‌ || ೧೦ ||

[೩. ಮಾಂಗಾಲೀ]

೧೦೪೭ ಷಡ್ಜಾಂಶಾ ಧಗ್ರಹನ್ಯಾಸಾ ಧಮಂಧ್ರಾ ತಾರತತ್ಪರಾ |
ಸಮಸ್ವರಾ ಚ ಸಂಪೂರ್ಣಾ ಮಾಂಗಾಲೀ ಗೀಯತೇ ಜನೈಃ || ೧೧ ||

[೪. ಭಮ್ಮಾಣಿಕಾ]

೧೦೪೮ ಪಂಚಮಾಂಶಗ್ರಹನ್ಯಾಸಾ ಗಮಂದ್ರಾ ಷಡ್ಜತಾರಕಾ |
ರಿಹೀನಾ ಚ ಧಗಸ್ವಲ್ಪಾ ಜ್ಞೇಯಾ ಭಮ್ಮಾಣಿಕಾ ಬುಧೈಃ || ೧೨ ||

ಪಾಠವಿಮರ್ಶೆ: ೧೦೪೫ಅ-ಈ ೧೦೪೬ ಈ ೧೦೪೭ಅ-ಈ ೧೦೪೮ಅ-ಈ ೧೦೪೯ಅ-ಈ,ಅ,ಇ

—-

೧೦೪೪ ಈ ಸಂದರ್ಭದಲ್ಲಿ ಹಿಂದೆ ಮಾರ್ಗರಾಗಗಳಲ್ಲಿ ಯಾವ ನಿಯಮಗಳನ್ನು ಹೇಳಲಾಗಿತ್ತೋ ಅವು ದೇಶೀರಾಗಗಳಲ್ಲಿ ಮತ್ತು ಭಾಷಾರಾಗಗಳಲ್ಲಿ ಒಮ್ಮೊಮ್ಮೆ ಬೇರೆ ಪ್ರಕಾರವಾಗಿ (ಅಥವಾ ವಿರುದ್ಧವಾಗಿಯೂ ಆಗುವುದುಂಟು. ೮

[ಭಾಷಾಂಗರಾಗಗಳು?]

[೧. ಕಚ್ಛೇಲ್ಲೀ]

೧೦೪೫ ಕಚ್ಛೇಲ್ಲಿಯು ಅಂಶ, ಗ್ರಹ ನ್ಯಾಸಗಳಲ್ಲಿ ಮಧ್ಯಮವನ್ನೂ ಮಂದ್ರ(ಸ್ವರದ ವ್ಯಾಪ್ತಿಯಲ್ಲಿ) ರಿಷಭವನ್ನು, ತಾರ(ಸ್ವರದ ವ್ಯಾಪ್ತಿಯಲ್ಲಿ) ಅದು ಪರವಾಗಿರುವ ಸ್ವರ (=ಷಡ್ಜ)ವನ್ನೂ ಹೊಂದಿದ್ದು ಗಾಂಧಾರಧೈವತಗಳನ್ನು ಬಿಟ್ಟುದೆಯೆಂದೂ ಪಂಚಮ ರಿಷಭಗಳನ್ನು ಹೇರಳವಾಗಿ ಪ್ರಯೋಗಿಸುತ್ತದೆಂದೂ ತಿಳಿಯಬೇಕು.                                                                                                    ೯

[೨. ಶ್ವಸಿತಾ]

೧೦೪೬ (ರಾಗವು) ಗಾಂಧರವನ್ನು ಗ್ರಹ, ನ್ಯಾಸಗಳಾಗಿಯೂ ಷಡ್ಜವನ್ನು ಅಂಶವಾಗಿಯೂ, ತಾರ ಸ್ವರವು ಇಲ್ಲದೆಯೂ ಷಡ್ಜಸ್ವರವನ್ನು ಮಂದ್ರ(ಸ್ಥಾಯಿ)ವ್ಯಾಪ್ತಿಯಲ್ಲಿಯೂ, ಪಂಚಮ ರಿಷಭಗಳನ್ನು ಯಾವಾಗಲೂ ಬಿಟ್ಟೂ ಇರುತ್ತದೆ.                     ೧೦

[೩. ಮಾಂಗಾಲೀ]

೧೦೪೭ ಮಾಂಗಾಲೀರಾಗವು ಷಡ್ಜವನ್ನು ಅಂಶವಾಗಿಯೂ ಧೈವತವನ್ನು ಗ್ರಹ ಮತ್ತು ನ್ಯಾಸಗಳನ್ನಾಗಿಯೂ ಧೈವತವನ್ನು ಅದರ ಮಂದ್ರ(ವ್ಯಾಪ್ತಿಯ ಸ್ವರ)ವಾಗಿಯೂ ಅದು ಪರವಾಗಿರುವ (ಎಂದರೆ ಪಂಚಮ) ಸ್ವರವನ್ನು ತಾರ (ವ್ಯಾಪ್ತಿಯ ಸ್ವರ)ವಾಗಿಯೂ ಉಳಿದ ಸ್ವರಗಳು (ಇದರ ಹಿಂದೆ ಹೇಳಿರುವ ರಾಗದಲ್ಲಿರುವವುಗಳಿಗೆ) ಸಮನಾಗಿಯೂ ಸಂಪೂರ್ಣವಾಗಿಯೂ ಇರುವಂತೆ ಜನರು ಹಾಡುತ್ತಾರೆ.             ೧೧

[೪. ಭಮ್ಮಾಣಿಕಾ]

೧೦೪೮ ಪಂಚಮವು ಅಂಶ ಗ್ರಹ ಮತ್ತು ನ್ಯಾಸಗಳಾಗಿ, ಗಾಂಧಾರವು ಮಂದ್ರ(ಸ್ವರ)ವಾಗಿ, ಷಡ್ಜವು ತಾರ(ಸ್ವರ)ವಾಗಿ, ರಿಷಭವು ಲೋಪವಾಗಿ, ಧೈವತಗಾಂಧಾರಗಳು ಅಲ್ಪವಾಗಿ (ಪ್ರಯೋಗವಾಗುವಂತೆ) ಇರುವ ವಿದ್ವಾಂಸರು ಭಮ್ಮಾಣಿಕಾ ಎಂದು ತಿಳಿಯುತ್ತಾರೆ.      ೧೨

____

[೫ ಪುಲಿಂದಿಕಾ]

೧೦೪೯ ಷಡ್ಜಂಶಾ ಧೈವತನ್ಯಾಸಾ ಗಪಹೀನಾ ಪುಲಿಂದಿಕಾ |
ಷಡ್ಜಧೈವತಸಂವಾದೋ ಧೈವತರ್ಷಭಯೋಸ್ತಥಾ || ೧೩ ||

[೬ ಗಾಂಧಾರಸಿಂಧುಃ]

೧೦೫೦ ಗಾಂಧಾರಸಿಂಧು ………… || ೧೪ ||

[೭ ಕರ್ನಾಟೀ]

೧೦೫೧ ಷಡ್ಜನ್ಯಾಸಗ್ರಹಾ ಧಾಂಶಾ ಗತಾರಾ ಮಂದ್ರಮಧ್ಯಮಾ |
ಸಮಸ್ವರಾ ಚ ಸಂಪೂರ್ಣಾ ಕರ್ನಾಟೀ ನಾಮತೋ ಭವೇತ್‌|
…………….. | || ೧೫ ||

೧೦೫೨ ಇತಿ ಮತಂಗಮುನಿವಿರಚಿತ ಬೃಹದ್ದೇಶ್ಯಾಂ ದೇಶೀರಾಗಾಧ್ಯಾಯೋನಾಮ ಪಂಚಮಃ ಸಮಾಪ್ತಃ |

ಪಾಠವಿಮರ್ಶೆ: ೧೦೫೦ ೧೦೫೧ಅ-ಈ, ಈ ೧೦೫೨

—-

[೫ ಪುಲಿಂದಿಕಾ]

೧೦೪೯ ಷಡ್ಜವು ಅಂಶವಾಗಿರುವುದು, ಧೈವತವು ನ್ಯಾಸವಾಗಿರುವುದು, ಗಾಂಧಾರಪಂಚಮಗಳು ಲೋಪವಾಗಿರುವುದು, ಷಡ್ಜಧೈವತಗಳಲ್ಲಿಯೂ ಅಂತೆಯೇ ಧೈವತರಿಷಭಗಳಲ್ಲಿಯೂ ಸಂವಾದ (= ಪರಸ್ಪರ ಸಂಚಾರ)ವಿರುವುದು – (ಹೀಗಿರುವುದು ಯಾವುದೋ ಅದು) ಪುಲಿಂದಿಕಾ.          ೧೩

[೬. ಗಾಂಧಾರ ಸಿಂಧು]

೧೦೫೦ ಗಾಂಧಾರಸಿಂಧುವು………………(ಹೀಗಿರುತ್ತದೆ)                                                                            ೧೪

[೭. ಕರ್ನಾಟೀ]

೧೦೫೧ ಷಡ್ಜವು ನ್ಯಾಸ ಮತ್ತಯ ಗ್ರಹ; ಧೈವತವು ಅಂಶ; ಗಾಂಧಾರವು ತಾರ (ವ್ಯಾಪ್ತಿಯ ಸ್ವರ) ; ಮಧ್ಯಮವು ಮಂದ್ರ(ವ್ಯಾಪ್ತಿಯ ಸ್ವರ), ಉಳಿದ ಸ್ವರಗಳು ಸಮ(= ಹಿಂದೆ ಹೇಳಿರುವಂತೆ?); ಸಂಪೂರ್ಣ(ರಾಗ) – ಇದು ಕರ್ನಾಟೀ ಎಂಬ ಹೆಸರಿನದಾಗುತ್ತದೆ. ………… ೧೫

೧೦೫೨ ಹೀಗೆ ಮತಂಗಮುನಿಯು ರಚಿಸಿದ ಬೃಹದ್ದೇಶಿಯಲ್ಲಿ ದೇಶೀರಾಗ ಎಂಬ ಐದನೆಯ ಅಧ್ಯಾಯವು ಮುಗಿಯಿತು.