[ಪ್ರಬಂಧಾಃ]

[ತತ್ರ ಪ್ರಬಂಧಾನಾಮುದ್ದೇಶಃ]

೧೦೫೩ ದೇಶಿಕಾರಪ್ರಬಂಧಾ ಯೇ ಹರವಕ್ತ್ರಾಭಿನಿರ್ಗತಾಃ |
ಅಸಂಖ್ಯಾತಸ್ತು ಕಥಿತಾ ನ ಜ್ಞಾಯಂತೇ sಲ್ಪಬುದ್ಧಿಭಿಃ || ೧ ||

೧೦೫೪ ತೇಷಾಂ ಮಧ್ಯಾತ್‌ ಸಮುದ್ಧೃತ್ಯ ಯುಕ್ತಲಕ್ಷಣಲಕ್ಷಿತಾನ್‌ |
ಶ್ರೀಮತಂಗಮುನಿಃ ಪ್ರಾಹ ಮುನೀನುದ್ಧೀಶ್ಯ ತದ್ಯಥಾ || ೨ ||

೧೦೫೫ ಆದ್ಯಃ ಪ್ರಬಂಧಃ ಕಂದಾಖ್ಯೋ ವೃತ್ತೋ ನಾಮ ದ್ವಿತೀಯಕಃ |
ಗದ್ಯರೂಪಸ್ತೃತೀಯಃ ಸ್ಯಾದ್ದಂಡಕಃ ಸ್ಯಾಚ್ಚತುರ್ಥಕಃ || ೩ ||

೧೦೫೬ ಪಂಚಮೋ ವರ್ಣಕಃ ಖ್ಯಾತಃ ಪಷ್ಠ ಆರ್ಯಾಭಿಧಾನಕಃ |
ಸಪ್ರಮೀ ಕಥಿತಾ ಗಾಥಾ ತತೋ ದ್ವಿಪಥಕೋsಷ್ಟಮಃ || ೪ ||

೧೦೫೭ ಪದ್ಧಡೀಂ ಮವಮೀಂ ಪ್ರಾಹುರಡಿಲಾ ದಶಮೀ ಭವೇತ್‌ |
ಏಕಾದಶಮಿತೇ ಸ್ಥಾನೇ ಗದಿತಾ ಸಾ ಚತುಷ್ಟದೀ || ೫ ||

೧೦೫೮ ದೋಧಕೋ ದ್ವಾದಶಃ ಪ್ರೋಕ್ತಸ್ತೋಟಕಃ ಸ್ಯಾತ್‌ ತ್ರಯೋದಶ[:] |
ತತಶ್ಚತುರ್ದಶೋ ಜ್ಞೇಯೋ ವಸ್ತ್ವಾಖ್ಯಸ್ತು ಪ್ರಬಂಧಕಃ || ೬ ||

೧೦೫೯ ತತಃ ಕ್ರೌಂಚಪದಸ್ತೂರ್ಧ್ವಂ ಹಂಸಪಾತ್‌ ಷೋಡಶಃ ಸ್ಮೃತಃ |
ಸಪ್ತದಶ್ ಪ್ರಬಂಧಸ್ತು ಶುಕಸಾರಿಕಸಂಜ್ಞಕಃ || ೭ ||

೧೦೬೦ ಅಷ್ಟಾದಶಶ್ವಾಲೀಲ ಏಕೋನೋ ಗಜಲೀಲಕಃ |
ವಿಂಶಶ್ಚ ಸ್ಯಾತ್‌ಸಿಂಹಲೀಲಃ ಶರಭಲೀಲ ಏಕೋತ್ತರಃ || ೮ ||

೧೦೬೧ ದ್ವಾವಿಂಶತಿ[ತ]ಮಃ ಸ್ಯಾತ್ತು ಶುಕಚಂಚುರಿತೀರಿತಃ |
ತ್ರಯೋವಿಂಶೋ ವಿಚಿತ್ರಃ ಸ್ಯಾಚ್ಚತುರ್ವಿಂಶಸ್ತ್ರಿಭಂಗಿಕಃ || ೯ ||

೧೦೬೨ ಪಂಚವಿಂಶತಿಸ್ಥಾನೇ ಚತುರಂಗ ಉದಾಹೃತಃ |
ಜಯವರ್ಧನಸಂಜ್ಞಶ್ಚ ತತಃ ಪರತರೋ ಭವೇತ್‌ || ೧೦ ||

ಪಾಠವಿಮರ್ಶೆ: ೧೦೫೩ಅ ೧೦೫೫ಅಆ, ಆ ೧೦೫೬ಆ,ಇ ೧೦೫೭ಇ ೧೦೫೮ಇ ೧೦೬೦ಅ,ಆ ೧೦೬೨ ಅ

—-

[ಪ್ರಬಂಧಗಳು]

[ಅದರಲ್ಲಿ ಪ್ರಬಂಧಗಳ ಹೆಸರುಗಳ ಸಂಗ್ರಹ]

೧೦೫೩ ಈಶ್ವರನ ಮುಖಗಳಿಂದ ಹೊರಹೊಮ್ಮಿರುವ, (ಸಂಗೀತದಲ್ಲಿ ದೇಶೀ[ತ್ವ]ವನ್ನು ಉಂಟುಮಾಡುವ ಪ್ರಬಂಧಗಳು ಎಣಿಸಲಾರದಷ್ಟು ವರ್ಣಿಸಲ್ಪಟ್ಟುವೆ. ಬುದ್ಧಿಯು ಕಡಿಮೆಯಿರುವವ (=ದಡ್ಡ)ರಿಗೆ ಅವು ತಿಳಿಯುವುದಿಲ್ಲ. ೧

೧೦೫೪ ಅವುಗಳ ನಡುವೆ ಸರಿಯಾದ ಲಕ್ಷಣಗಳಿಂದ ವರ್ಣಿಸಲಾಗಿರುವವುಗಳನ್ನು (ಮಾತ್ರ) ಎತ್ತಿಕೊಂಡು ಮತಂಗಮುನಿಯು ಮುನಿಗಳನ್ನು ಕುರಿತು ಹೀಗೆ ಹೇಳಿದನು                                                                                                                                ೨

೧೦೫೫ ಮೊದಲನೆಯ ಪ್ರಬಂಧವು ಕಂದವೆಂಬುದು, ವೃತ್ತವೆಂಬ ಹಸರಿನದು ಎರಡನೆಯದು ಗದ್ಯರೂಪ(ದ ಪ್ರಬಂಧ)ವು ಮೂರನೆಯದು; ದಂಡಕವು ನಾಲ್ಕೆನೆಯದಾಗಿದೆ.                                                                                                                            ೩

೧೦೫೬ ಐದನೆಯದು ವರ್ಣವೆಂದು ಪ್ರಸಿದ್ಧವಾಗಿದೆ; ಆರನೆಯದು ಆರ್ಯಾ ಎಂಬ ಹೆಸರಿನದು. ಏಳನೆಯದು ಗಾಥಾ ಎಂದು ಹೇಳಿದೆ; ಆಮೇಲೆ ದ್ವಿಪಥಕವು ಎಂಟನೆಯದು.                                                                                                                  ೪

೧೦೫೭ ಪದ್ಧಡಿಯು ಒಂಭತ್ತನೆಯದೆಂದು ಹೇಳುತ್ತಾರೆ; ಅಡಿಲಾ ಹತ್ತನೆಯದಾಗುತ್ತದೆ. ಹನ್ನೊಂದನೆಯದರ ಎಡೆಯಲ್ಲಿ ಚತುಷ್ಟದೀ ಎಂಬುದನ್ನು ಹೇಳಿದೆ.                                                                                                                         ೫

೧೦೫೮ ದೋಧಕವು ಹನ್ನೆರಡನೆಯದೆಂದು ನಿರೂಪಿಸಿದೆ; ತೋಟಕವು ಹದಿಮೂರನೆಯದಾಗಿದೆ. ವಸ್ತುವೆಂಬ ಹೆಸರಿನ ಪ್ರಬಂಧವು; ಅಮೇಲೆ, ಹದಿನಾಲ್ಕನೆಯದೆಂದು ತಿಳಿಯಬೇಕು.                                                                                                     ೬

೧೦೫೯ ನಂತರ ಕ್ರೌಂಚಪದ(ವು ಹದಿನೈದನೆಯದು); ಮುಂದೆ ಹದಿನಾರನೆಯದು ಹಂಸ ಪದವೆಂದು ಸ್ಮರಿಸಿದೆ. ಹದಿನೇಳನೆಯ ಪ್ರಬಂಧವು ಶಕಸಾರಿಕವೆಂಬ ಹೆಸರಿನದು.                                                                                                                  ೭

೧೦೬೦ ಹದಿನೆಂಟನೆಯದು ಅಶ್ವಲೀಲ; (ಇಪ್ಪತ್ತಕ್ಕೆ) ಒಂದು ಕಡಿಮೆಯಾಗಿರುವುದು (= ಹತ್ತೊಂಬತ್ತನೆಯದು) ಗಜಲೀಲ (ಪ್ರಬಂಧ). ಇಪ್ಪತ್ತನೆಯದು ಸಿಂಹಲೀಲವಾಗುತ್ತದೆ. ಶರಭಲೀಲವು ಇನ್ನೂ ಒಂದನೆಯದು (= ಇಪ್ಪತ್ತೊಂದನೆಯದು).             ೮

೧೦೬೧ ಇಪ್ಪತ್ತೆರಡನೆಯದು ಶುಕಚಂಚುವಾಗುತ್ತದೆ ಎಂದಿದೆ. ಇಪ್ಪತ್ತಮೂರನೆಯದು ವಿಚಿತ್ರ(ವೆಂಬುದು) ಆಗುತ್ತದೆ ; ಇಪ್ಪತ್ತನಾಲ್ಕನೆಯದು ತ್ರಿಭಂಗಿ.                                                                                                                                          ೯

೧೦೬೨ ಇಪ್ಪತ್ತೈದನೆಯದರ ಜಾಗದಲ್ಲಿ ಚತುರಂಗವನ್ನು ಹೇಳಿದೆ. ಜಯವರ್ಧನವೆಂಬ ಹೆಸರಿನದು ಮುಂದಿನದಾಗುತ್ತದೆ. ೧೦

____

೧೦೬೩ ಸಪ್ತವಿಂಶತಿ[ತ]ಮಾ ಸಾ ಸ್ಯಾದಂಕಚಾರಿಣಿಕಾ ಮತಾ |
[ಅಷ್ಟಾವಿಶಂತಿಸಂಖ್ಯಸ್ತು ಸಿಂಹವಿಕ್ರಾಂತಕಃ ಸ್ಮೃತಃ || ೧೧ ||

೧೦೬೪ ಊನತ್ರಿಶಂತ್ತಮೋ ಜ್ಞೇಯಃ ಕಲಹಂಸಾಭಿಧೋ ಬುಧೈಃ |
ಘಟಸ್ತ್ರೀಂಶಶ್ಚಕ್ರವಾಲ ಏಕತ್ರಿಂಶತ್ತಮೋ ಮತಃ] || ೧೨ ||

೧೦೬೫ ದ್ವಾತ್ರಿಂಶತ್ತಮಸ್ಥಾನೇ [ಸ್ಯಾತ್‌] ತ್ರಿಪದೀ ಷಟ್ಪದೀ ಕ್ವಚಿತ್‌ |
ತ್ರಯಸ್ತ್ರಿಂಶತ್ತಮಂ ಪ್ರೋಕ್ತಂ ತದ್‌ಬಂಧಕರಣಂ ಪುನಃ || ೧೩ ||

೧೦೬೬ ಚತುಸ್ತ್ರಿಂಶತ್ತಮಂ ಪಾಟಕರಣಂ ಸಮುದಾಹೃತಮ್‌ |
ಪಂಚತ್ರಿಂಶತ್ತಮಃ ಪ್ರೋಕ್ತಃ ಕೈವಾಟ ಇತಿ ತದ್ವಿದೈಃ || ೧೪ ||

೧೦೬೭ ಷಟ್‌ತ್ರಿಂಶತ್ತಮಸಂಖ್ಯಾ ತು ದ್ವಿಪದೀತಿ ಸತಾಂ ಮತಾ |
ಸಪ್ತತ್ರಿಂಶತ್ತಮಾ ಯಾ ತು ಮುನಿನಾ ವರ್ತನೀ ಮತಾ || ೧೫ ||

೧೦೬೮ ಅಷ್ಟತ್ರಿಂಶತ್ತಮಾ ತ್ವೇಲಾ ಬಹುಭೇದಪ್ರವಿಸ್ತರಾ |
ಚತ್ವಾರಿಂಶಸ್ತ್ವಥೈಕೋನೋ ಮತೋ ಝೋಂಬಡಕಸ್ತಥಾ || ೧೬ ||

೧೦೬೯ ಚತ್ವಾರಿಂಶತ್ತಮಾ ಜ್ಞೇಯಾ ತತೋsಥ ಧ್ವನಿಕುಟ್ಟನೀ |
ಏಕಾಧಿಕಾ ಭವೇಡ್‌ ಢೇಂಕೀ ಧ್ವ್ಯಧಿಕಾ ಚೈಕತಾಲಿಕಾ || ೧೭ ||

೧೦೭೦ ಅತ್ರೈವ ತ್ರ್ಯಧಿಕಃ ಖ್ಯಾತಃ ಪ್ರಬಂಧೋ ಮಾತೃಕಾಹ್ವಯಃ |
ಚತುರ್ಭಿರಧಿ[ಕಸ್ತತ್ರ] ಚತ್ವಾರಿಂಶತ್ತಮಃ ಪುನಃ || ೧೮ ||

೧೦೭೧ ಪ್ರಬಂಧೋ sಯಂ ಸ್ವರಾರ್ಥ ಸ್ಯಾದ್‌ ಜ್ಞೇಯೋ sಸೌ ಗೀತವೇದಿಭಿಃ |
ಚತ್ವಾರಿಂಶತ್ತಮಂ ಪ್ರೋಕ್ತಂ ಕರಣಂ ಪಂಚಭಿರ್ಯುತಮ್‌ || ೧೯ ||

೧೦೭೨ ಚತ್ವಾರಿಂಶದ್ಯುತಃ ಷಡ್ಭಿಶ್ಚಾಸೌ ವರ್ಣಸ್ವರಃ ಸ್ಮೃತಃ |
ಚತ್ವಾರಿಂಶತ್‌ಸಪ್ತಯುತಾ ಜ್ಞೇಯಾ ಮುಕ್ತಾವಲೀತಿ ಯಾ || ೨೦ ||

೧೦೭೩ ಪ್ರತಾಪವರ್ಧನಶ್ಚಾಷ್ಟಚತ್ವಾರಿಂಶಃ ಪ್ರಕೀರ್ತಿತಃ |
ಅಷ್ಟೌ ಚ ಮುನಿನಾ ಖ್ಯಾತಾಶ್ಚತ್ವಾರಿಂಶತ್‌ಸುಸಂಯುತಾ[:] || ೨೧ ||

ಪಾಠವಿಮರ್ಶೆ: ೧೦೬೩ಇ-೧೦೬೪ಈ ೧೦೬೫ಅ,ಈ ೧೦೬೭ಅ ೧೦೬೮ಈಇ ೧೦೬೯ಅ,ಈ ೧೦೭೦ಅ

—-

೧೦೬೩ ಇಪ್ಪತ್ತೇಳನೆಯದು ಅಂಕಚಾರಿಣಿಯಾಗುತ್ತದೆಂದು ಅಭಿಪ್ರಾಯಪಡಲಾಗಿದೆ; ಇಪ್ಪತ್ತೆಂಟನೆಯ ಸಂಕ್ಯೆಯದು ಸಿಂಹವಿಕ್ರಾಂತವೆಂದು ಸ್ಮರಿಸಿದೆ.                                                                                                                                      ೧೧

೧೦೬೪ ಮೂವತ್ತಕ್ಕೆ ಒಂದು ಕಡಿಮೆಯಾಗಿರುವುದು ಕಲಹಂಸವೆಂಬ ಹೆಸರಿನದೆಂದು ವಿದ್ವಾಂಸರು ತಿಳಿಯಬೇಕು. ಘಟವು ಮೂವತ್ತನೆಯದು ; ಚಕ್ರವಾಲವು ಮೂವತ್ತೊಂದನೆಯದೆಂದು ಅಭಿಪ್ರಾಯಪಡಲಾಗಿದೆ.                                                              ೧೨

೧೦೬೫ ಮೂವತ್ತೆರಡನೆಯದರ ಜಾಗದಲ್ಲಿ ತ್ರಿಪದಿಯಿದೆ. ಕೆಲವೊಮ್ಮೆ (ಅಲ್ಲಿ) ಷಟ್ಪದಿಯೂ (ಉಂಟು). ಮೂವತ್ತಮೂರನೆಯದು ಬಂಧಕರಣವೆಂದು ತಿಳಯಿಯಲಾಗಿದೆ.                                                                                                   ೧೩

೧೦೬೬ ಮೂವತ್ತನಾಲ್ಕನೆಯದು ಪಾಟಕರಣವೆಂದು ವಿವರಿಸಿದೆ; ಮೂವತ್ತೈದನೆಯದು ಕೈವಾಟವೆಂದು ಬಲ್ಲವರು ಹೇಳುತ್ತಾರೆ.     ೧೪

೧೦೬೭ ಮೂವತ್ತಾರನೆಯ ಸಂಖ್ಯೆಯದು ದ್ವಿಪದ ಎಂದು ಸಜ್ಜನರ ಅಭಿಪ್ರಾಯವಾಗಿದೆ ಮೂವತ್ತೇಳನೆಯದು ವರ್ತನಿಯೆಂದು ಮುನಿಯ ಅಭಿಪ್ರಾಯಪಡುತ್ತಾನೆ.                                                                                                                    ೧೫

೧೦೬೮ ಮೂವತ್ತೆಂಟನೆಯದು ಬಹುಭೇದಗಳಲ್ಲಿ ಹರಡಿಕೊಂಡಿರುವ ಏಲಾ. ಹಾಗೆಯೇ ನಲವತ್ತನೆಯದಕ್ಕೆ ಒಂದು ಕಡಿಮೆಯಾಗಿರುವುದು ಝೊಂಬಡ.                                                                                                                                   ೧೬

೧೦೬೯ ನಂತರ ನಲವತ್ತನೆಯದು ಧ್ವನಿಕುಟ್ಟನಿಯೆಂದು ತಿಳಿಯಬೇಕು. ಅದರ ಮೇಲೆ ಒಂದನೆಯದು ಢೇಂಕೀ, ಅದರ ಮುಂದಿನ ಎರಡನೆಯದು ಏಕತಾಲೀ.                                                                                                                                     ೧೭

೧೦೭೦ ಅದರಲ್ಲಿಯೇ ಮುಂದಿನ ಮೂರನೆಯದು ಮಾತೃಕಾ ಎಂಬ ಹೆಸರುಳ್ಳ ಪ್ರಬಂಧವೆಂದು ಹೆಸರುವಾಸಿಯಾಗಿದೆ. ಅಲ್ಲದೆ, ನಲವತ್ತನೆಯದಕ್ಕಿಂತ ನಾಲ್ಕು ಹೆಚ್ಚಾಗಿರುವುದು-                                                                                   ೧೮

೧೦೭೧ ಸ್ವರಾರ್ಥವೆಂಬೀ ಪ್ರಬಂಧವೆಂಬುದನ್ನು ಹಾಡುಬಲ್ಲವರು ತಿಳಿಯಬೇಕು. ಐದನ್ನು ಕೂಡಿದ ನಲವತ್ತನೆಯದು ಕರಣವೆಂದು ಹೇಳಲಾಗಿದೆ.           ೧೯

೧೦೭೨ ಆರರಿಂದ ಕೂಡಿದ ನಲವತ್ತನೆಯದು ವರ್ಣಸ್ವರವೆಂದು ಸ್ಮರಿಸಿದೆ. ಏಳನ್ನು ಕೂಡಿದ ನಲವತ್ತನೆಯದು ಮುಕ್ತಾವಲೀ ಎಂದು ತಿಳಿಯಬೇಕು.           ೨೦

೧೦೭೩ ಪ್ರತಾಪವರ್ಧನವು ನಲವತ್ತೆಂಟನೆಯದೆಂದು ಹೆಸರುವಾಸಿಯಾಗಿದೆ. ಎಂಟನ್ನು ಕೂಡಿಕೊಂಡ ನಲವತ್ತು ಪ್ರಬಂಧಗಳು ಮುನಿಯಿಂದ ವರ್ಣಿತವಾಗಿವೆ.                                                                                                                               ೨೧

____

೧೦೭೪ ಏತೇಷಾಂ ಲಕ್ಷಣಂ ವಚ್ಮಿ ಸಮಾಸಾದ್‌(?ಮ) ವಿದುಷಾಂ ಕೃ ತೇ |
ಯಥೋಕ್ತಂ ಚಾತ್ರ ನಿಯಮೈ[:] [ಪದತಾಲಾದಿಸಂಯುತೈಃ]
ರಾಗೈರ್ಯಥಾವದುಕ್ತೈಸ್ತು ಗಾತವ್ಯಾ ಗೀತಕೋವಿದೈಃ || ೨೨ ||

[ಪ್ರಬಂಧಾನಾಂ ಲಕ್ಷಣಾನಿ]

[i ಕಂದಃ]

೧೦೭೫ ತಾಲಶೂನ್ಯಸ್ತು ಯಃ ಪಾಟೈರ್ಬಿರುದೈಶ್ಚ ಸಮನ್ವಿತಃ |
ಸ ಕಂದ ಇತಿ ಕರ್ಣಾಟಭಾಷಾದಿ ಪದಮಿಶ್ರಿತಃ |
ಕಂದಾದಿಪ್ರಬಂಧಾ [++] ಲಕ್ಷ್ಯತಃ ಪ್ರಸಿದ್ಧಾ ಏವ || ೨೩ ||

[ii ವೃತ್ತಃ]

೧೦೭೬ ಆರ್ಯಾಯಾಂ ಧ್ವಿಪಥೇ ವೃತ್ತೋ [!ವೃತ್ತೇ] ಗಾಥಾಯಾರ ದೋಧಕೇ ತಥಾ |
ತೋಟಕೇ [sಥ] ಚ ತಾಲಸ್ಯ ನಿಯಮೋ ನಾಸ್ತಿ ಕದಾಚನ || ೨೪ ||

೧೦೭೭ ಮುಖ್ಯತಾ ತೇಷು ನಿರ್ದಿಷ್ಟಾ ಮುನಿಭಿಶ್ಛಂಸಃ ಸ್ಫುಟಮ್‌ |
ಅಂತೇ ತು ಸ್ವರವಿನ್ಯಾಸಃ [ಸ್ವರಹೀನಂ ಸ್ಮೃತಂ ಪರೈಃ]
[ವೃತ್ತೇ ಛಂದಸಿ ಯಚ್ಚಾನ್ಯೇ] ವಙ್ತಿ ತದಪಿ ಸಮ್ಮತಮ್‌ || ೨೫ ||

[iii ಗದ್ಯ]

೧೦೭೮ ಪ್ರಾಂತೇ ಯಸ್ಯ ಭವೇತ್ತಾಲೋ ವರ್ಣನೀಯಸ್ಯ ಸಂಜ್ಞಯಾ |
ಗೀಯತೇ ಯತ್‌ತದತ್ರಾಹುರ್ಗದ್ಯಂ ಗೀತವಿಶಾರದಾಃ || ೨೬ ||

[iv ದಂಡಕಃ]

೧೦೭೯ ತಾಲಯುಕ್ತಂ ಸ್ವರೂಪೇತಂ ಮಧ್ಯೇ ಪಾಟವಿರಾಜಿತಮ್‌ |
ಪುನಃ ಪದಸಾಮಾಯುಕ್ತಂ ಗಾನಂ ತದ್‌ದಂಡಕಂ ವಿದುಃ || ೨೭ ||

ಪಾಠವಿಮರ್ಶೆ: ೧೦೭೪ಅ,ಆ,ಈ ೧೦೭೫ ಆ,ಉ,ಊ ೧೦೭೬ಅ,ಆ,ಇ ೧೦೭೭ ಆ,ಈ,ಉ,ಊ

—-

೧೦೭೪ ಇವುಗಳ ಲಕ್ಷಣಗಳನ್ನು ಒಂದೆಡೆ ಸಂಗ್ರಹಿಸಿ ವಿದ್ವಾಂಸರನ್ನು ಉದ್ದೇಶಿಸಿ ಹೇಳುತ್ತೇನೆ. ಹಾಡುವ ವಿದ್ವಾಂಸರು ಅವುಗಳನ್ನು [ವಿವರಿಸಿರುವ]ನಿಯಮ [=ಲಕ್ಷಣ]ಗಳಿಗೆ ಅನುಸಾರವಾಗಿ (ವಿಧಿಸಿರುವ) [ಪದ, ತಾಲ ಮುಂತಾದವುಗಳನ್ನೂ] ರಾಗಗಳನ್ನೂ (ಕೂಡಿಕೊಂಡು) ಹೇಗಿವೆಯೋ ಹಾಗೆಯೇ ಹಾಡಬೇಕು.                                                                                                   ೨೨

[ಪ್ರಬಂಧಗಳ ಲಕ್ಷಣಗಳು]

[i ಕಂದ]

೧೦೭೫ ತಾಲರಹಿತವಾಗಿ, ಪಾಟಗಳಿಂದಲೂ ಬಿರುದಗಳಿಂದಲೂ ಕೂಡಿದ್ದು, ಕನ್ನಡಭಾಷೆಯದೇ ಮೊದಲಾದ ಪದಗಳ ಬೆರಕೆಯಿಂದ ಯಾವುದು ನಿರ್ಮಿತವಾಗಿದೆಯೋ ಅದು ಕಂದ (ಪ್ರಬಂಧ). ಕಂದವೇ ಮೊದಲಾದ ಪ್ರಬಂಧಗಳು ಸಂಗೀತ ರೂಢಿಯಲ್ಲಿ ಪ್ರಸಿದ್ಧವೇ ಆಗಿವೆಯಷ್ಟು.            ೨೩

[ii ವೃತ್ತ]

೧೦೭೬ ಆರ್ಯಾದಲ್ಲಿ, ದ್ವಿಪಥದಲ್ಲಿ, ವೃತ್ತದಲ್ಲಿ, ಗಾಥಾದಲ್ಲಿ ಹಾಗೆಯೇ ದೋಧಕದಲ್ಲಿ ನಂತರ ತೋಟಕದಲ್ಲಿ ತಾಲ(ವಿರಬೇಕೆಂಬ) ನಿಯಮವು ಯಾವಾಗಲೂ ಇರುವುದಿಲ್ಲ.                                                                                              ೨೪

೧೦೭೭ ಅವುಗಳಲ್ಲಿ ಛಂದಸ್ಸು ಮುಖ್ಯವಾದುದೆಂಬುದನ್ನು ಮುನಿಗಳು ಸ್ಪಷ್ಟವಾಗಿ ನಿರ್ದೇಶಿಸಿದ್ದಾರೆ. ಅವುಗಳ ಕೊನೆಯಲ್ಲಿ ಸ್ವರವಿನ್ಯಾಸವಿರಬೇಕೆಂದು (ಹೇಳಿದೆ) ; [ಬೇರೆಯವರು] (ಕೊನೆಯಲ್ಲಿ) [ಸ್ವರಗಳಿರುವುದಿಲ್ಲವೆನ್ನುತ್ತಾರೆ.] [ಇನ್ನು ಕೆಲವರು ವೃತ್ತವೆಂಬ ಛಂದಸ್ಸಿನಲ್ಲಿ ಇದನ್ನು ರಚಿಸಬೇಕು] ಎನ್ನುತ್ತಾರೆ. ಇದೂ ಒಪ್ಪತಕ್ಕದ್ದಾಗಿದೆ.                                               ೨೫

[iii ಗದ್ಯ]

೧೦೭೮ ಯಾವುದರ ಕೊನೆಯಲ್ಲಿ ವರ್ಣಿಸಬೇಕಾದವರ ಹೆಸರಿನ ಜೊತೆಗೆ ತಾಲವೂ ಇದ್ದು ಹಾಡಲಾಗುತ್ತದೋ ಅದು ಗದ್ಯವೆಂದು ಗೀತದಲ್ಲಿ ಪಂಡಿತರಾದವರು ಈ ಸಂದರ್ಭದಲ್ಲಿ ಹೇಳುತ್ತಾರೆ.                                                                                  ೨೬

[iv ದಂಡಕ]

೧೦೭೯ ತಾಲವಿದ್ದು ಸ್ವರಗಳನ್ನೊಡಗೂಡಿ, ನಡುವೆ ಪಾಟಗಳಿಂದ ಶೋಭಿಸಿ, ಅಲ್ಲದೆ ಪದಗಳನ್ನೂ ಕೂಡಿಕೊಂಡಿರುವ ಗಾನವು ದಂಡಕವೆಂದು ತಿಳಿಯುತ್ತಾರೆ.                                                                                                                                ೨೭

____

[v ವರ್ಣಃ]

೧೦೮೦ ವಿಭೂತು ತ್ಯಾಗಸೌಭಾಗ್ಯಬಿರುದೈಃ ಸಮಲಂಕೃತಃ |
ತಾಲೇನಾಪಿ ಚ ಯುಕ್ತಃ ಸ್ಯಾದ್‌ವರ್ಣಃ ಕರ್ಣಾಟಭಾಷೆಯಾ || ೨೮ ||

[vi ಆರ್ಯಾ, vii ಗಾಥಾ, viii ಧ್ವಿಪಥಃ]

೧೦೮೧ …………………

[ix ಪದ್ಧಢೀ]

೧೦೮೨ ಸ್ವರಪಾಟಸಮಾಯುಕ್ತಾ ತಾಲೇನ ಚ ಸಮನ್ವಿತಾ |
ಕಯಾಪಿ ಭಾಷಯಾ ಯುಕ್ತಾ ಬಿರುದೈಃ ಸಾ ತು ಪದ್ಧಡೀ || ೨೯ ||

[x ಅಡಿಲಾ]

೧೦೮೩ ಯತ್ರ ಸ್ಯಾತ್‌ಸ್ವರವಿನ್ಯಾಸಃ ಪ್ರತಿಪಾದಾಂತಮುಜ್ಜ್ವಲಃ |
ತಾಲೇನ ಚ ಸಮಾಯುಕ್ತ ಅಡಿಲಾ ನಾಮತೋ ಭವೇತ್‌ || ೩೦ ||

[xi ಚತುಷ್ಟದೀ]

೧೦೮೪ ಯತ್ರ ಪ್ರತಿಪದಾರ್ಥಂ ತು ತಾಲಯುತಂ ಭವೇತ್‌ |
ಸ್ವರತೇನಕಸಂಯುಕ್ತೈಃ ಸಾ ಚತುಷ್ಟದಿಕಾ ಭವೇತ್‌ || ೩೧ ||

[xii ದೋಧಕಃ]

೧೦೮೫ …………….
ಅರ್ಧಂ ಗೀತ್ವಾ ಪರಾರ್ಧಂ ತು ತಸ್ಯೋಪರಿ ತತ್ವರಮ್‌ || ೩೨

[xiii ತೋಟಕಃ]

೧೦೮೬ ………………

ಪಾಠವಿಮರ್ಶೆ: ೧೦೮೦ಅ,ಆ ೧೦೮೧ ೧೦೮೨ಇ,ಈ ೧೦೮೩ಆ,ಈ ೧೦೮೪ಅ,ಈ ೧೦೮೫ಅ,ಆ ೧೦೮೬

—-

[v ವರ್ಣ]

೧೦೮೦ ಅತಿಮಾನುಷವಾದ ದಿವ್ಯಶಕ್ತಿ/ಅಣಿಮಾದಿ ಅಷ್ಟೃಶ್ವರ್ಯ, ಉದಾರದಾನ <ತ್ಯಾಗ>, ಸೌಭಾಗ್ಯ ಮತ್ತು ಹೊಗಳಿಕೆಯ ಮಾತು <ಬಿರುದ> ಇವುಗಳಿಂದ ಅಲಂಕಾರಗೊಂಡು ಕನ್ನಡಭಾಷೆಯಲ್ಲಿದ್ದು ತಾಲವೂ ಇರುವುದು ವರ್ಣ(ವೆಂಬ ಪ್ರಬಂಧ)ವಾಗುತ್ತದೆ. ೨೮

[vi ಆರ್ಯಾ vii ಗಾಥಾ, viii ದ್ವಿಪಥ]

೧೦೮೧ ………………………

[xi ಪದ್ಧಡೀ]

೧೦೮೨ ಸ್ವರ ಮತ್ತು ಪಾಟಗಳಿಂದ ಕೂಡಿಕೊಂಡು, ತಾಲವನ್ನು ಅನ್ವಯಿಸಿ, ಯಾವುದಾದರೊಂದು ಭಾಷೆಯ ಮಾತುಗಳಿದ್ದು ಬಿರುದುಗಳನ್ನು ಹೊಂದಿರುವುದೇ ಪದ್ಧಡೀ.                                                                                                                ೨೯

[x ಅಡಿಲಾ]

೧೦೮೩ ಯಾವುದರಲ್ಲಿ ಪ್ರತಿಯೊಂದು ಪಾದದ ಕೊನೆಯಲ್ಲಿಯೂ ಕಾಂತಿಯುಕ್ತವಾದ (= ವಿಫುಲವಾದ) ಸ್ವರಗಳ ವಿನ್ಯಾಸವಿರುತ್ತದೋ ತಾಲವೂ ಕೂಡಿಕೊಂಡಿರುತ್ತದೋ ಅದು ಅಡಿಲಾ ಎಂಬ ಹೆಸರಿನದಾಗುತ್ತದೆ.                                                                ೩೦

[xi ಚತುಷ್ಟದೀ]

೧೦೮೪ ಯಾವುದರ ಪ್ರತಿಯೊಂದು ಪದ (= ಚರಣ ?)ಕ್ಕೂ ಅರ್ಥವು (ಸ್ವಯಂಪೂರ್ಣವಾಗಿ?) ಇರುತ್ತದೋ, ತಾಲವು ಸೇರಿಕೊಂಡಿದೆಯೋ, ಸ್ವರತೇನಕಗಳೂ ಇವೆಯೋ ಅದು ಚತುಷ್ಪದಿಕಾ ಆಗುತ್ತದೆ.                                                                      ೩೧

[xii ದೋಧಕ]

೧೦೮೫ …………… (ಮೊದಲನೆಯ) ಅರ್ಧವನ್ನು ಹಾಡಿ(ದ ಮೇಲೆ) ಮುಂದಿನ ಅರ್ಧವು ಅದರ ನಂತರದಲ್ಲಿ ವಿಸ್ತರಿಸಿದ ಸ್ವರಗಳಿಂದಾಗುತ್ತದೆ.           ೩೨

[xiii ತೋಟಕ]

೧೦೮೬ …………….

____

[xiv ವಸ್ತು]

೧೦೮೭ ಯತ್ರ ಪಾಟಾಶ್ಚ ತೇನ್ನಾಶ್ಚ ಶೇಷಂ ಭವೇತ್‌ತತ[:?] ಸ್ವರಮ್‌ |
ದೇಶೀಗೀತೆ sಪಿ ವಸ್ತು ಸ್ಯಾನ್ನಾಟಕೇ sಪಿ ಪ್ರಯುಜ್ಯತೇ || ೩೩ ||

[xv ಕ್ರೌಂಚಪದಃ]

೧೦೮೮ ಗೀತಸ್ತು ಪ್ರತಿತಾಲೇನ ಪದಸ್ವರಸಮಾಯುತಃ |
ಮತಃ ಕ್ರೌಂಚಪದೋ ನಾಮ ಸ ತು ಗಾಂಧರ್ವವೇದಿನಾಮ್‌ || ೩೪ ||

[xvi ಹಂಸಪದಃ]

೧೦೮೯ ಸಂಸ್ಕೃತ ಪಾದಮೇಕಂ ತು ದ್ವಿತೀಯ ದೇಶಸಂಯುತಮ್‌ |
ಸಪ್ರಾಸಂ ಗೀಯತೇ ಯತ್ತದ್‌ಗೀತಂ ಹಂಸಪದಂ ವಿದುಃ || ೩೫ ||

[xvii ಶುಕಸಾರಿಕಃ]

೧೦೯೦ ಯಸ್ತು ತಾಲಪದೋಪೇತ[:] ಪದಪಾಟವಿರಾಜಿತಃ |
ಪ್ರಶ್ನೋತ್ತರಸಮಾಯುಕ್ತಃ ಸ ತೂಕ್ತಃ ಶುಕಸಾರಿಕಃ || ೩೬ ||

೧೦೯೧ [ಯಃ ಸ್ಯಾತ್‌] ಕರ್ನಾಟಭಾಷಾಯಾಂ ಅಥವಾ ಮಿಶ್ರಿತೋ ಯದಿ |
ಸಂವಾದಕಪದೋಪೇತಃ ಸ ಭವೇಚ್ಛುಕಸಾರಿಕಃ || ೩೭ ||

[xviii ಹಯಲೀಲಾ]

೧೦೯೨ ಅರ್ಧಂ ಯತ್ರ ಸ್ವರೈರ್ಗೀತ್ವಾ ಯಸ್ಯಾಸ್ತುರಗಲೀಲಯಾ |
ಗೀಯತೇ ಬಿರುದೈರರ್ಧಂ ಹಯಲೀಲೇತಿ ಸಾ ಸ್ಮೃತಾ || ೩೮ ||

[xix ಗಜಲೀಲಾ]

೧೦೯೩ ಹಯಲೀಲಾಕೃತಂ ಸರ್ವಂ ತಾಲಸ್ತು ಗಜಲೀಲಕಃ |
ಕ್ರಿಯತೇ ಯತ್ರ ಸಾ ಜ್ಞೇಯಾ ಗಜಲೀಲೇತಿ ನಾಮತಃ || ೩೯ ||

ಪಾಠವಿಮರ್ಶೆ: ೧೦೮೭ಅ,ಆ ೧೦೮೮ಅ,ಅ-ಈ ೧೦೮೯ಇಅ-ಈ, ಇ ೧೦೯೦ಅಆ,ಈ ೧೦೯೧ಅ,ಆ,

—-

[xiv ವಸ್ತು]

೧೦೮೭ ಯಾವಯದರಲ್ಲಿ ಪಾಟಗಳೂ ತೆನ್ನಗಳೂ ಇದ್ದು ಉಳಿದಿದ್ದು ಆಮೇಲೆ (= ಕೊನೆಯಲ್ಲಿ? ವಿಸ್ತರಿಸಿದ?) ಸ್ವರಗಳಾಗಿರುತ್ತದೋ (ಅದು) ವಸ್ತು ; ಅದನ್ನು ದೇಶೀಹಾಡುಗಳಲ್ಲಿಯೂ ನಾಟಕದಲ್ಲಿಯೂ ಪ್ರಯೋಗಿಸಲಾಗುತ್ತದೆ. ೩೩

[xv ಕ್ರೌಂಚಪದ]

೧೦೮೮ ಪದ ಮತ್ತು ಸ್ವರಗಳನ್ನು ಕೂಡಿಕೊಂಡು ಪ್ರತಿ(ಯೆಂಬ) ತಾಲದಲ್ಲಿ ಹಾಡುವಂರಹದು ಕ್ರೌಂಚಪದವೆಂಬ ಹೆಸರಿನದು ಎಂದು ಗಾಂಧರ್ವವಿದ್ಯೆಯನ್ನು ಬಲ್ಲವರು ಅಭಿಪ್ರಾಯಪಡುತ್ತಾರೆ.                                                                      ೩೪

[xvi ಹಂಸಪದಃ]

೧೦೮೯ ಮೊದಲನೆಯ ಪಾದವನ್ನು ಸಂಸ್ಕೃತದ(ಮಾತುಗಳ)ಲ್ಲಿಯೂ ಎರಡನೆಯದನ್ನು ದೇಶ (ಭಾಷೆಯ ಮಾತು)ಗಳಿಂದಲೂ ಪ್ರಾಸಸಹಿತನಾಗಿ ಯಾವುದನ್ನು ಹಾಡುತ್ತಾರೋ ಅದು ಹಂಸಪದವೆಂದು ತಿಳಿಯುತ್ತಾರೆ. ೩೫

[xvii ಶುಕಸಾರಿಕ]

೧೦೯೦ ಯಾವುದು ತಾಲ ಮತ್ತು ಪದಗಳೊಡಗೂಡಿ ಪದ ಮತ್ತು ಪಾಟಗಳಿಂದ ಶೋಭಿಸುತ್ತದೋ, ಪ್ರಶ್ನೆ ಮತ್ತು ಉತ್ತರಗಳನ್ನು ಒಳಗೊಂಡಿರುತ್ತದೋ ಅದನ್ನು ಶುಕಸಾರಿಕವೆಂದು ಹೇಳಿದೆ.                                                                        ೩೬

೧೦೯೧ ಕನ್ನಡಭಾಷೆಯ(ಮಾತುಗಳ)ಲ್ಲಿ ಅಥವಾ (ಬೇರೆ ಬೇರೆ ಭಾಷೆಗಳ ಮಾತುಗಳ) ಬೆರಕೆಯಲ್ಲಿ ಇದ್ದರೆ ಸಂವಾದದ (=ಪ್ರಶ್ನೋತ್ತರಗಳ) ಮಾತುಗಳಿಂದ ಕೂಡಿದ್ದರೆ ಅದು ಶುಕಸಾರಿಕವಾಗುತ್ತದೆ.                                                                           ೩೭

[xviii ಹಯಲೀಲಾ]

೧೦೯೨ ಯಾವುದರಲ್ಲಿ (ಮೊದಲನೆಯ) ಅರ್ಧವನ್ನು ಸ್ವರಗಳಿಂದಲೂ ತುರಗಲೀಲಾ (ಛಂದಸ್ಸಿನಲ್ಲಿ ಮತ್ತಯ/ ಅಥವಾ ತಾಳ)ದಲ್ಲಿಯೂ ಹಾಡಿ (ಉಳಿದ) ಅರ್ಧವನ್ನು ಬಿರಿದ- ಗಳಿಂದಲೂ ಹಾಡಲಾಗುತ್ತದೋ ಅದು ಹಯಲೀಲಾ ಎಂದು ಸ್ಮರಿಸಲಾಗಿದೆ.            ೩೮

[xix ಗಜಲೀಲಾ]

೧೦೯೩ ಯಾವುದರಲ್ಲಿ ಹಯಲೀಲಾದಲ್ಲಿರುವಂತೆಯೇ ಎಲ್ಲವನ್ನೂ ಮಾಡಿ ಗಜಲೀಲಾ ತಾಳವನ್ನು (ಬದಲಿಗೆ) ಪ್ರಯೋಸಿಸುತ್ತಾರೋ ಅದನ್ನು ಗಜಲೀಲಾ ಎಂಬ ಹೆಸರಿನದನ್ನಾಗಿ ತಿಳಿಯಬೇಕು.                                                                                     ೩೯

____

[xx ಸಿಂಹಲೀಲಃ]

೧೦೯೪ ಛಂದಸಾ ಸಿಂಹಲೀಲೇನ ಸ್ವರತೇನಕಸಂಯುತಃ |
ಗೀಯತೇ ಯಸ್ತು ಬಿರುದೈಃ ಸ ಭವೇತ್‌ಸಿಂಹಲೀಲಕಃ || ೪೦ ||

[xxi ಶರಭಲೀಲಃ]

೧೦೯೫ ಸ್ವರಪಾಟೈರ್ನಿಬದ್ಧಂ ಚ ಭವೇದ್ಯತ್ರ ಪದಾಷ್ಟಕಮ್ |
ಮತಃ ಶರಭಲೀಲೋ sಸೌ ರಾತಾಲಷ್ಟಕಾನ್ವಿತಃ || ೪೧ ||

[xxii ಶುಕಚಂಚುಃ]

೧೦೯೬ ಆದೌ ರಾಗಃ ಸಗಮಕಸ್ತಾಲೇನ ತು ಸಮನ್ವಿತಃ |
ಸ್ವರಪಾಟೈಃ ಪ್ರಗೀತಸ್ತು ನಾನಾದೇಶಾದಿಭಾಷಾಯಾ |
ಗೀಯತೇ ಯಃ ಸ ಉದ್ದಿಷ್ಟಃ ಶುಕಚಂಚುರ್ಜನಪ್ರಿಯಃ || ೪೨ ||

[xxiii ವಿಚಿತ್ರಃ]

೧೦೯೭ ಅನೇಕದೇಶಭಾಷಾಭಿಃ ಪಾಟೈರ್ಬಿರುದತೇನಕೈಃ |
ಚಿತ್ರಿತಃ ಸ್ವರತಾನೈಶ್ಚ ವಿಚಿತ್ರ ಇತಿ ಕೀರ್ತಿತಃ || ೪೩ ||

[xxiv ತ್ರಿಭಂಗಿಃ]

೧೦೯೮ ಪದೈಃ ಸ್ವರೈಸ್ತಥಾ ಪಾಟೈರ್ವೃತ್ತತ್ರಯಪದೇನ ಚ |
ತಾಲತ್ರಯವಿಮಿಶ್ರೇಣ ತ್ರಿಭಂಗಿರಭಿಧೀಯತೇ || ೪೪ ||

[xxv ಚತುರಂಗಃ]

೧೦೯೯ ರಾಗತಾಲಚತುಷ್ಕೇಣ ಯತ್ರ ಭಾಷಾಚತುಷ್ಟಯಮ್‌ |
ಗೀಯತೇ ಗೀತಚತುರೈಶ್ಚತುರಂಗಃ ಸ ಉಚ್ಯತೇ || ೪೫ ||

ಪಾಠವಿಮರ್ಶೆ: ೧೦೯೪ಅಆ,ಇಅ-ಈ ೧೦೯೫ಅ-ಈ ೧೦೯೬ಅ,ಇ ೧೦೯೭ಆ ೧೦೯೮ಅ-ಈ, ಆ

—-

[xx. ಸಿಂಹಲೀಲ]

೧೦೯೪ ಯಾವುದನ್ನು ಸಿಂಹಲೀಲಛಂದಸ್ಸಿನಿಂದಲೂ ಸ್ವರ ಮತ್ತು ತೇನಕಗಳ ಸಹಿತವಾಗಿಯೂ (ಉಳಿದರ್ಧವನ್ನು) ಬಿರುದಗಳಿಂದಲೂ ಹಾಡಲಾಗುತ್ತದೋ ಅದು ಸಿಂಹಲೀಲ- ವಾಗುತ್ತದೆ.                                                                                ೪೦

[xxi ಶರಭಲೀಲ]

೧೦೯೫ ಯಾವುದರಲ್ಲಿ ಸ್ವರ ಮತ್ತು ಪಾಟಗಳಿಂದ ರಚಿತವಾದ ಎಂಟು ಪಾದಗಳಿರುತ್ತವೋ (ಅವುಗಳನ್ನು) ಎಂಟು ರಾಗ ಮತ್ತು (ಎಂಟು) ತಾಳಗಳಲ್ಲಿ ಹೊಂದಿಸಿದೆಯೋ ಅದು ಶರಭಲೀಲವೆಂದು ಅಭಿಪ್ರಾಯಪಡಲಾಗಿದೆ.                                           ೪೧

[xxii ಶುಕಚಂಚು]

೧೦೯೬ ಮೊದಲಿನ (ಅರ್ಧದ-?)ಲ್ಲಿ ಗಮಕಗಳಿರುವ ರಾಗವು ತಾಳಸಹಿತವಾಗಿದ್ದು ಸ್ವರ ಮತ್ತ ಪಾಟಗಳಿಂದ ಹಾಡುವುದು ಮತ್ತು (ಉಳಿದರ್ಧವು?) ಬೇರೆ ಬೇರೆ ದೇಶಗಳ ಭಾಷೆಗ(ಳ ಮಾತುಗ-)ಳಿಂದ ಹಾಡುವುದು ಯಾವುದೋ ಅದು ಜನರಿಗೆ ಇಷ್ಟವಾದ ಶುಕಚಂಚು ಎಂದು ನಿರೂಪಿಸಿದೆ.       ೪೨

[xxiii ವಿಚಿತ್ರ]

೧೦೯೭ ಅನೇಕ ದೇಶಗಳ ಭಾಷೆ(ಗಳ ಮಾತು)ಗಳಿಂದ, ಪಾಟಗಳಿಂದ, ಬಿರುದುಗಳಿಂದ, ತೇನಕಗಳಿಂದ ಹಾಗೂ ಸ್ವರ ಮತ್ತು ತಾಳಗಳಿಂದ, ಯಾವುದನ್ನು ಚಿತ್ರಿಸಿದೆಯೋ (= ಸುಂದರವನ್ನಾಗಿಸಿದೆಯೋ) ಅದು ವಿಚಿತ್ರ[ಪ್ರಬಂಧ]ವೆಂದು ಹೆಸರುವಾಸಿಯಾಗಿದೆ. ೪೩

[xxiv ತ್ರಿಭಂಗಿ]

೧೦೯೮ ಪದಗಳಿಂದ, ಸ್ವರಗಳಿಂದ ಪಾಟಗಳಿಂದ, (ಮೂರು) ಪಾದಗಳಲ್ಲಿ (ಬೇರೆ ಬೇರೆ) ಮೂರು ವೃತ್ತಗಳಿಂದ(ಅಥವಾ) ಮೂರು ತಾಳಗಳ ಬೆರಕೆಯಿಂದ (ರಚಿತವಾಗಿ)ಇರುವುದನ್ನು ತ್ರಿಭಂಗಿಯೆಂದು (ಅನ್ವರ್ಥವಾಗಿ) ಹೆಸರಿಸಲಾಗುತ್ತದೆ.                           ೪೪

[xxv ಚತುರಂಗ]

೧೦೯೯ ಯಾವುದರಲ್ಲಿ ನಾಲ್ಕು ಭಾಷೆ(ಗಳ ಮಾತು)ಗಳನ್ನು ನಾಲ್ಕು ರಾಗಗಳಲ್ಲಿ ಮತ್ತು ತಾಳಗಳಲ್ಲಿ ಗೀತಚತುರರು ಹಾಡುತ್ತಾರೋ ಅದನ್ನು ಚತುರಂಗವೆಂದು ಕರೆದಿದೆ.                                                                                                                  ೪೫

____