[xxvi ಜಯವರ್ಧನಃ]

೧೧೦೦ ಜಯಮಾಲಾಪದೈರ್ಯುಕ್ತೋ ಯತ್ರ ಸ್ಯಾದ್‌ ವಿಜಯೋ ಜಯಃ |
ಜಯಾರ್ಥಂ ಗೀಯತೇ ಯಸ್ತು ಜ್ಞೇಯೋsಸೌ ಜಯವರ್ಧನಃ || ೪೬

[xxvii ಅಂಕಚಾರೀಣಿ]

೧೧೦೧ ………………….

[xxviii ಸಿಂಹವಿಕ್ರಾಂತಃ]

೧೧೦೨ ಆದಿತಾಲೇನ ಸಂಯುಕ್ತ ಯತ್ರ ಖಂಡಚತುಷ್ಟಯಮ್‌ |
ಪದಪಾದಾಷ್ಟಕಂ ಸ ಸ್ಯಾತ್‌ಸಿಂಹವಿಕ್ರಾತಸಂಜ್ಞಕಃ || ೪೭ ||

[xxix ಕಲಹಂಸಃ]

೧೧೦೩ ಏಕಂ ಪಾದಂ ಪುರೋ ಗೀತ್ವಾ ಗೀಯತೇ ಚ ಸ್ವರಾಸ್ತತಃ |
ಝಂಪಾದಿತಾಲಸಂಯುಕ್ತಃ ಸ ಭವೇತ್‌ ಕಲಹಂಸಕಃ || ೪೮ ||

[xxx ಘಟಃ]

೧೧೦೪ ಯತ್ರಾರ್ಧಂ ತೇನಕೋಪೇತಂ ದ್ವಿಪದೀವದ್‌ಭವೇದ್‌ಘಟಃ || ೪೯ ||

[xxxi ಚಕ್ರವಾಲಃ]

೧೧೦೫ ಪದಮಂತ್ಯಂ ಗೃಹೀತ್ವಾ ತು ಯಮಕಸ್ಥಿತಿಭೂಷಿತಃ |
ಆವೃತ್ತ್ಯಾ ಗೀಯತೇ ಯೋsಸೌ ಚಕ್ರವಾಲಃ ಪ್ರಕೀರ್ತಿತಃ || ೫೦ ||

[xxxii ತ್ರಿಪದೀ, ಷಟ್ಪದೀ ವಾ]

೧೧೦೬ ತಾಲೇನ ಯೇನ ಕೇನಾಪಿ ಬಿರುದೈಃ ಕೇವಲೈರಪಿ |
ಯದ್ಯದಾ ಯದ್ಯದಾ (?ತ್ರಿಪಧ್ಯ?) ಫಿ ತಥಾಭೂತಾ ಯಾ[ss]ವೃತ್ತ್ಯಾ ಗೀಯತೇ ದ್ವಿಧಾ || ೫೧ ||

ಪಾಠವಿಮರ್ಶೆ: ೧೧೦೦ಅ,ಆ,ಇ ೧೧೦೦ಇ ೧೧೦೧ ೧೧೦೨ಅ-ಈ, ಆ ೧೧೦೩ಅ-ಈ ೧೧೦೪ಅ,ಆ,ಅಆ

—-

[xxvi ಜಯವರ್ಧನ]

೧೧೦೦ ವಿಜಯ, ಜಯ ಇತ್ಯಾದಿ ಜಯವನ್ನು ಹೇಳುವ ಪದಗಳ ಯಾವ ಮಾಲೆಯಲ್ಲಿರುತ್ತದೋ ಯಾವುದನ್ನು ಜಯವನ್ನು ಕೋರಿ ಹಾಡಲಾಗುತ್ತದೋ ಅದು ಜಯವರ್ಧನವೆಂದು ತಿಳಿಯಬೇಕು.                                                                    ೪೬

[xxvii ಅಂಕಚಾರಿಣೀ]

೧೧೦೧ ………………

[xxviii ಸಿಂಹವಿಕ್ರಾಂತ]

೧೧೦೨ ಯಾವುದರಲ್ಲಿ ನಾಲ್ಕು (ಗೀತ-) ಖಂಡಗಳೂ ಪದಗಳನ್ನುಳ್ಳ ಎಂಟು ಪಾದಗಳೂ ಆದಿತಾಳವನ್ನು ಸೇರಿಕೊಂಡಿವೆಯೋ ಅದು ಸಿಂಹವಿಕ್ರಾಂತವೆಂಬ ಹೆಸರಿನದಾಗುತ್ತದೆ.                                                                                                ೪೭

[xxix ಕಲಹಂಸ]

೧೧೦೩ (ಹಾಡಿನ) ಒಂದು ಪಾದವನ್ನು ಮೊದಲು ಹಾಡಿ ನಂತರ ಸ್ವರಗಳನ್ನು ಯಾವುದರಲ್ಲಿ ಹಾಡುತ್ತಾರೋ (ಯಾವುದು) ಝಂಪಾತಾಲಸಹಿತವಾಗಿರುತ್ತದೋ ಅದು ಕಲಹಂಸವಾಗುತ್ತದೆ.                                                                 ೪೮

[xxx ಘಟ]

೧೧೦೪ ಯಾವುದರಲ್ಲಿ (ಮೊದಲನೆಯ ಅರ್ಧವು ತೇನಕಗಳಿಂದ ಕೂಡಿರುತ್ತದೋ (ಉಳಿದಿದ್ದು ದ್ವಿಪದಿಯ ಹಾಗಿರುತ್ತದೋ ಅದು ಘಟ(ಪ್ರವಂಧ)ವಾಗುತ್ತದೆ.                                                                                                                ೪೯

[xxxi ಚಕ್ರವಾಲ]

೧೧೦೫ (ಒಂದು) ಪದದ ಕೊನೆಯನ್ನು ತೆಗೆದುಕೊಂಡು (ಅದರ ಧಾತುಮಾತುಗಳಲ್ಲಿ) ಯಮಕವಿರುವಂತೆ ಅಲಂಕರಿಸಿ (ಚಕ್ರಾಕಾರವಾಗಿ ಬರುವಂತೆ) ಮತ್ತೆ ಮತ್ತೆ ಹಾಡಿದರೆ ಅದು ಚಕ್ರವಾಲವೆಂದು ಹೆಸರುವಾಸಿಯಾಗಿದೆ. ೫೦

[xxxii ತ್ರಿಪದೀ ಅಥವಾ ಷಟ್ಪದೀ]

೧೧೦೬ ಯಾವುದಾದರೊಂದು ತಾಲದಲ್ಲಿ ಕೇವಲ ಬಿರುದಗಳಿಂದಲೇ ಪದ್ಯದ ಪದ್ಯದ (?ತ್ರಿಪದಿಯ?) ಆದಿಯನ್ನು ಅದೇ ರೀತಿಯಿರುವಂತೆ<ತಥಾಭೂತ> ಆವೃತ್ತಿಗೊಳಿಸಿ ಎರಡು ವಿಧ(?ಭಾಗ)ವಾಗಿ ಹಾಡುವುದು(ಹಾಡಬೇಕು?) ೫೧

____

[xxxiii ಬಂಧಕರಣಂ]

೧೧೦೭ ತಾಲೇನ ಕರಣೇನೈವ ಸ್ವರೈಃ ಸಮುರಜಾಕ್ಷರೈಃ |
ಗಂಧರ್ವೆರ್ಗೀಯತೇ ಯತ್ತು ತದ್‌ಬಂಧಕರಣಂ ಪುನಃ || ೫೨ ||

[xxxiv ಪಾಟಕರಣಂ]

೧೧೦೮ ಪಾಟಾಖ್ಯಂ ಕರಣಂ ಪ್ರೋಕ್ತಂ ಹಸ್ತಪಾಟಸ್ವರಾನ್ವಿತಮ್‌ || ೫೩ ||

[xxxv ಕೈವಾಟಃ]

೧೧೦೯ ಅಕ್ಷರೈರ್ಗೀಯತೇ ಸಮ್ಯಕ್‌ ಪಾಟೈರೇವ ಹಿ ಕೇವಲೈಃ |
ಕೈವಾಟ ಇತಿ ಸ ಜ್ಞೇಯೋ ಗಂದರ್ವೈಸ್ತಾಲಸಂಯುತಃ || ೫೪||

[xxxvi ದ್ವಿಪದೀ]

೧೧೧೦ ಯಾ ಸ್ಯಾತ್‌ ಕರಣತಾಲೇನ ದ್ವಿಪದೀವೃತ್ತಸಂಗತಾ |
ಸಾ ಭವೇದ್‌ ದ್ವಿಪದೀ ನಾಮ ಪ್ರೋಕ್ಥಾ ವಸ್ತು ವಿಚಕ್ಷಣೈ || ೫೫ ||

[xxxvii ವರ್ತನೀ]

೧೧೧೧ ಗ್ರಹಸ್ತ್ವಭಿಮತೋ ಯತ್ರ ನ್ಯಾಸಶ್ಚಾಂಶೇನ ಕೇವಲಮ್‌ |
ವರ್ಣನೀಯಸ್ಯ ಗಾತುಶ್ಚ ಯಸ್ಯಾಂ ನಾಮ ಪ್ರವೇಶ್ಯತೇ (?) || ೫೬ ||

೧೧೧೨ ಕಂಕಾಲಂ ಪ್ರತಿತಾಲಂ ಚ ದ್ರುತಮಂಠಂ ಕುಡುಕ್ಕುಕಮ್‌ |
ವಿಹಾಯ ಗೀಯತೇ ಯಾ ತು ಸ್ವರೈಃ ಸಾ ವರ್ತನೀ ಮತಾ || ೫೭ ||

[xxxviii ಏಲಾ]

೧೧೧೩ ಆದ್ಯಂ ಪದದ್ವಯಂ ಯತ್ರ ಸ್ಯಾದನುಪ್ರಾಸರಂಜಿತಮ್‌ |
ಅನುಪ್ರಾಸಸ್ತೃತೀಯೇ sಪಿ ಚತುರ್ಥೇ ವಾ sಥ ಗೀಯತೇ || ೫೮ ||

೧೧೧೪ ತ[ಯೋರ್ನ ವಾ ಹ್ಯನುಪ್ರಾಸಃ] ಸಾನುಪ್ರಾಸಶ್ಚ ಪಂಚಮಃ |
ಚತಸ್ರೋ ಗೀತಯೋ ಯತ್ರ ಪಾದೇ ಪಾದೇ ಭವಂತಿ ಚ || ೫೯ ||

ಪಾಠವಿಮರ್ಶೆ: ೧೧೦೭ಅ-ಈ ೧೧೦೮ಅ ೧೧೦೯ ಅ-ಈ ೧೧೧೦ಅ-ಈ, ಅ, ೧೧೧೧ಈ,

—-

[xxxiii ಬಂಧಕರಣ]

೧೧೦೭ ಸ್ವರಗಳಿಂದಲೂ ಮುರಜ (ವಾದ್ಯದಲ್ಲಿ ಹುಟ್ಟುವ ಪಾಟ-) ಅಕ್ಷರಗಳಿಂದಲೂ ಕರಣ (ವೆಂಬ) ತಾಳದಲ್ಲಿಯೂ ಗಂದರ್ವರು ಯಾವುದನ್ನು ಹಾಡುತ್ತಾರೋ ಅದು ಬಂಧಕರಣ (ವೆನ್ನಿಸಿಕೊಳ್ಳುತ್ತದೆ).                                                                          ೫೨

[xxxiv ಪಾಟಕರಣ]

೧೧೦೮ ಕೈಪಾಟಗಳಿಂದಲೂಸ್ವರಗಳಿಂದಲೂ ಕೂಡಿರುವುದನ್ನು ಪಾಟಕರಣ(ಪ್ರಬಂಧ)ವೆಂದು ಹೇಳಿದೆ.                  ೫೩

[xxxv ಕೈವಾಟ]

೧೧೦೯ ಕೇವಲ ಪಾಟಗಳ ಅಕ್ಷರಗಳಿಂದಲೇ ಪೂರ್ತಿಯಾಗಿ ತಾಲಸಹಿತವಾಗಿ ಹಾಡುವಂತ ಹದನ್ನು ಗಂದರ್ವ (ವಿದ್ವಾಂಸ)ರು ಕೈವಾಟ ಎಂದು ತಿಳಿಯಬೇಕು.                                                                                                                                 ೫೪

[xxxvi ದ್ವಿಪದೀ]

೧೧೧೦ ದ್ವಿಪದೀವೃತ್ತದಲ್ಲಿ ರಚಿತವಾಗಿದ್ದು ಕರಣವೆಂಬ ತಾಲಸಹಿತವಾಗಿರುವ (ಪ್ರಬಂಧವು) ದ್ವಿಪದೀ ಎಂಬ ಹೆಸರಿನದಾಗುತ್ತದೆಂದು ವಸ್ತು (= ಪ್ರಬಂಧ) ವಿಚಕ್ಷಣರು ಹೇಳುತ್ತಾರೆ.                                                                                                      ೫೫

[xxxvii ವರ್ತನೀ]

೧೧೧೧ ಯಾವುದರಲ್ಲಿ ಗ್ರಹವನ್ನು ಇಷ್ಟಬಂದ (ಸ್ವರದಿಂದ) ಮತ್ತು ನ್ಯಾಸವನ್ನು ಕೇವಲ ಅಂಶದಿಂದ ಮಾಡಿಕೊಂಡು, ವರ್ಣಿಸಬೇಕಾದವರ ಮತ್ತು ಹಾಡುವವರ ಹೆಸರುಗಳನ್ನು ಹೊಗಿಸಲಾಗುತ್ತದೋ <ಪ್ರವೇಶ್ಯತೇ>-                                                          ೫೬

೧೧೧೨ ಕಂಕಾಲ, ಪ್ರತಿಕಾಲ, ದ್ರುತಮಂಠ ಮತ್ತು ಕುಡುಕ್ಕಗಳನ್ನು ಬಿಟ್ಟು (ಬೇರೆ ತಾಳದಲ್ಲಿ) ಸ್ವರಗಳಿಂದ ಹಾಡಲಾಗುತ್ತದೋ ಅದು ವರ್ತನೀಯಯೆಂದು ಅಭಿಪ್ರಾಯಪಡಲಾಗಿದೆ.                                                                                         ೫೭

[xxxviii ಏಲಾ]

೧೧೧೩ ಯಾವುದರಲ್ಲಿ ಮೊದಲನೆಯ ಎರಡು ಪಾದಗಳ(ಮಾತುಗಳ)ಲ್ಲಿ ಅನುಪ್ರಾಸಾಲಂಕಾರವು (= ಒಂದೇ ಅಕ್ಷರದ ಸುಂದರ ಪುನರಾವೃತ್ತಿಯು) ಶೋಭಿಸುತ್ತದೋ, ಅನುಪ್ರಾಸವನ್ನು ಮೂರನೆಯ ಮತ್ತು ನಾಲ್ಕನೆಯ ಪಾದಗಳಲ್ಲಿಯೂ ಹಾಡಲಾಗುತ್ತದೋ,    ೫೮

೧೧೧೪ ಅಥವಾ (ಮೂರನೆಯ, ನಾಲ್ಕನೆಯ ಎಂಬ) ರೆಡು ಪಾದಗಳಲ್ಲಿ ಅನುಪ್ರಾಸವಿರದೆ ಐದನೆಯ(ಪಾದ)ದರಲ್ಲಿ ಅನುಪ್ರಾಸವಿರುತ್ತದೋ, ಯಾವುದರಲ್ಲಿ (ಮಾಗಧೀ ಮುಂತಾದ) ನಾಲ್ಕು ಗೀತಿಗಳು ಒಂದೊಂದು ಪಾದದಲ್ಲಿಯೂ ಇರುತ್ತವೋ,               ೫೯

____

೧೧೧೫ ಗೀತ್ವಾ ತದೀಯಪಾದಾರ್ಧಮನುಪ್ರಾಸೋ ವಿಧೀಯತೇ |
ತ್ಯಾಗಸೌಭಾಗ್ಯಸೌಂದರ್ಯಶೌರ್ಯಧೈರ್ಯಾದಿವರ್ಣನಮ್‌ || ೬೦ ||

೧೧೧೬ ಯಸ್ಯಾಂ ಭವತಿ ಗೀತಜ್ಞಾಸ್ತಾಮೇಲಾಂ ಸಂಪ್ರಚಕ್ಷತೇ |
ಸ[ದಾ ಚೈ]ವ ಹಿ ಗಾತವ್ಯಾ ಗೀತಜ್ಞೆರ್ಗೀತವಸ್ತುಷು || ೬೧ ||

೧೧೧೭ ಮಂಠೇನಾಥ ದ್ವಿತೀಯೇನ ಕಂಕಾಲೇನ ತಥೈವ ಚ |
ಸಂಯುಕ್ತಾ ಪ್ರತಿತಾಲೇನ ಕರ್ತವ್ಯೈಲಾ ಮನೀಷಿಭಿಃ || ೬೨ ||

೧೧೧೮ ವರ್ಣನೀಯಸ್ಯ ಗಾತುಶ್ಚ ಸಾ ತು ನಾಮಾಂಕಿತಾ ಭವೇತ್‌ |
ವರ್ಣನೀಯಸಮಾಯುಕ್ತಾ ಮತೇ ಕೇಷಾಂಚಿದಿಷ್ಯತೇ || ೬೩ ||

೧೧೧೯ ರಮ್ಯಗೀತಗುಣೈರ್ಯುಕ್ತಾ ಛಂದೋಗಣಸಮನ್ವಿತಾ |
ಅಲಂಕಾರರಸೋಪೇತಾ ಕರ್ತವ್ಯೈಲಾ ಮನೀಷಿಭಿಃ || ೬೪ ||

[ಏಲಾಭೇದಾಃ]

[ಕ. ತತ್ರ ಗಣೈಲಾಪ್ರಕಾರಾಃ]

೧೧೨೦ ಆದೌ ನಾದಾವತೀ ಪ್ರೋಕ್ತಾ ತತೋ ಹಂಸಾವತೀ ಮತಾ |
ನಂದಾವತೀ ತೃತೀಯಾ ಚ ತುರ್ಯಾ ಭದ್ರಾವತೀ ಸ್ಮೃತಾ || ೬೫ ||

೧೧೨೧ ಋಗ್ವೇದಾದಿಸಮುದ್ಭೂತಾ ವಿಚಿತ್ರಧ್ವನಿರಂಜಿತಾ |
ಇತ್ಯೇಲಾ ಗಣಮಾರ್ಗೇಣ ಬುಧೈರುಕ್ತಾ ಚತುರ್ವಿಧಾ || ೬೬ ||

[೧. ನಾದಾವತೀ]

೧೧೨೨ ಏಲಾ ನಾದಾವತೀ ರಮ್ಯಾ ವರ್ಣಾಲಂಕಾರಶೋಭಿತಾ |
ಗೀಯತೇ ಮಂಠತಾಲೇನ ನಾದಯುಕ್ತಾ ಪದೇ ಪದೇ || ೬೭ ||

ಪಾಠವಿಮರ್ಶೆ: ೧೧೧೫ಈ ೧೧೧೬ಆ, ಇ ೧೧೧೭ಅ,ಆ ೧೧೨೦-೧೧೨೧

—-

೧೧೧೫ ಅದೇ ಅದೇ ಪಾದದ ಅರ್ಧವನ್ನು ಹಾಡಿ ಯಾವುದರಲ್ಲಿ ಅನುಪ್ರಾಸವನ್ನು ರಚಿಸಲಾಗುತ್ತದೋ (ನಾಯಕನ) ತ್ಯಾಗ (=ದಾನ), ಸೌಭಾಗ್ಯ (=ಸಮೃದ್ಧಿ), ಸೌಂದರ್ಯ, ಶೌರ್ಯ, ಧೈರ್ಯ ಮುಂತಾದವುಗಳ ವರ್ಣನೆಯು-                                               ೬೦

೧೧೧೬ ಯಾವುದರಲ್ಲಿ ಇರುತ್ತದೋ ಅದನ್ನು ಹಾಡಬಲ್ಲವರು ಏಲಾ ಎಂದು ಕರೆಯುತ್ತಾರೆ ಅದನ್ನು ಹಾಡುಬಲ್ಲವರು ಹಾಡುವ ವಸ್ತು(=ಪ್ರಬಂಧ)ಗಳ ಪೈಕಿ ಯಾವಾಗಲೂ (ತಪ್ಪದೆ) ಹಾಡಬೇಕು.                                                              ೬೧

೧೧೧೭ ಮಂಠತಾಲ, ದ್ವಿತೀಯತಾಲ, ಕಂಕಾಲತಾಲ ಹಾಗೆಯೇ ಪ್ರತಿ(ಯೆಂಬ) ತಾಲಗಳೊಡನೆ ಬುದ್ಧಿವಂತರು ಏಲಾವನ್ನು ಪ್ರಯೋಗಿಸಬೇಕು.           ೬೨

೧೧೧೮ (ಏಲಾದಲ್ಲಿ) ವರ್ಣಿಸಲ್ಪಡಬೇಕಾಗಿರುವವರ ಮತ್ತು ಹಾಡುವವರ ಹೆಸರುಗಳ ಅಂಕಿತವು (=ಗುರುತು) ಇರುತ್ತದೆ (= ಇರಬೇಕು). ವರ್ಣಿಸಲ್ಪಡಬೇಕಾಗಿರುವವರ (ಹೆಸರಿನ ಅಂಕಿತವು ಮಾತ್ರ ಸಾಕು) ಎಂಬುದು ಕೆಲವರ ಅಭಿಪ್ರಾಯ.                       ೬೩

೧೧೧೯ ಬುದ್ಧಿವಂತರು ಏಲಾ(ಪ್ರಬಂಧ)ವನ್ನು ಅಕರ್ಷಕವಾದ ಹಾಡಿನ ಗುಣಗಳಿರುವಂತೆಯೋ ಛಂದಸ್ಸಿನ ಗಣಗಳಿರುವಂತೆಯೂ (ಶಬ್ದ ಮತ್ತು ಅರ್ಥಗಳ) ಅಲಂಕಾರಗಳೂ ರಸಗಳೂ ಇರುವಂತೆಯೂ ರಚಿಸಬೇಕು.                                                              ೬೪

[ಏಲಾಭೇದಗಳು]

[ಕ. ಅವುಗಳ ಪೈಕಿ ಗಣೈಲಾದ ಪ್ರಕಾರಗಳು]

೧೧೨೦ ಮೊದಲು ನಾದಾವತೀ (ಏಲಾ) ಎಂಬುದನ್ನು ಹೇಳಿದೆ, ಆಮೇಲೆ ಹಂಸಾವತೀ, ನಂದಾವತೀ ಮೂರನೆಯದು, ನಾಲ್ಕನೆಯದು, ಭದ್ರಾವತೀ ಎಂದು ಸ್ಮರಿಸಿದೆ.                                                                                                                             ೬೫

೧೧೨೧ ಏಲಾವನ್ನು ಋಗ್ವೇದವೇ ಮೊದಲಾದವುಗಳಿಂದ ಹುಟ್ಟಿದ್ದು, ನಾನಾ ಬಗೆಯ (ಕಂಠ-ಮತ್ತು ಕಾವ್ಯ-) ಧ್ವನಿಗಳಿಂದ ಶೋಭಿಸುತ್ತದೆ ಎಂದು (ಛಂದೋ-) ಗಣಪದ್ಧತಿಯಿಂದ ನಾಲ್ಕು ವಿಧಗಳಲ್ಲಿ ಪಂಡಿತರು ನಿರೂಪಿಸುತ್ತಾರೆ.                                           ೬೬

[೧. ನಾದಾವತೀ]

೧೧೨೨ ಮನೋಹರವಾದ ನಾದಾವತೀ ಏಲಾವನ್ನು ವರ್ಣ(ಗಳಿಂದಲೂ) ಅಲಂಕಾರ ಗಳಿಂದ(ಲೂ) ಸಿಂಗರಿಸಲ್ಪಟ್ಟು ಮಾತು ಮಾತಿಗೂ (ಚರಣ, ಚರಣಕ್ಕೂ?) ನಾದವಿರುವಂತೆ ಮಂಠತಾಲದಲ್ಲಿ ಹಾಡುತ್ತಾರೆ.                                                                   ೬೭

____

೧೧೨೩ ಟಕ್ಕರಾಗೋ ಭವೇತ್ತತ್ರ ಸರ್ವೇಷಾಮನುರಂಜಕಃ |
ಶ್ವೇತೋ ವರ್ಣಶ್ಚ ವಿಜ್ಞೇಯಃ ಶೃಂಗಾರಃ ಕಥಿತೋ ರಸಃ || ೬೮ ||

೧೧೨೪ ಕೈಶಿಕೀ ವೃತ್ತಿರಾಖ್ಯಾತಾ ಪಾಂಚಾಲೀ ರೀತಿರಿಷ್ಯತೇ |
ಭಾರತೀ ದೇವತಾತಸ್ಯಾ ಬ್ರಾಹ್ಮಣಾನಾಂ ಕುಲಂ ತಥಾ || ೬೯ ||

೧೧೨೫ ಯತ್ರ ಚಂದ್ರಗಣಾಃ ಪಂಚ ಸ್ವರ್ಗ(?ಸೂರ್ಯಗ)ಣೈಕೇನ ಸಂಯುತಾ(:) |
ಏಲಾ ನಾದಾವತೀ ನಾಮ ಸಾ ಸ್ಮೃತಾ ಪೂರ್ವಸೂರಿಭಿಃ || ೭೦ ||

[೨. ಹಂಸಾವತೀ]

೧೧೨೬ ಹಂಸಸ್ಯೇವ ಗತಿಂ ಕೃತ್ವಾ ನಾದೇನ ಚ ಪದೇನ ಚ |
ಸಮಂ ಪ್ರವರ್ತತೇ ಯಸ್ಯಾತ್‌ ತತೋ ಹಂಸಾವತೀ ಸ್ಮೃತಾ || ೭೧ ||

೧೧೨೭ ತಾಲೋ ದ್ವಿತೀಯಕಸ್ತತ್ರ ಹಿಂದೋಲೇನ ಚ ಗೀಯತೇ |
ರಕ್ತೋ ವರ್ಣಃ ಸಮಾಖ್ಯಾತಶ್ಚಂಡಿಕಾ ದೇವತಾ ಭವೇತ್‌ || ೭೨ ||

೧೧೨೮ ವೃತ್ತೆರಾರಭಟೀ ಪ್ರೋಕ್ತಾ ಲಾಟೀಯಾ ರೀತಿರಿಷ್ಯತೇ |
ಕ್ಷತ್ರಿಯಾಣಾಂ ಕುಲ ಚೈವ ರಸೋ ರೌದ್ರಃ ಪ್ರಕೀರ್ತಿತಃ || ೭೩ ||

೧೧೨೯ ಯತ್ರಾನಲಗಣಾಃ ಪಂಚ ಷಷ್ಠೋ ವಾಯುಗಣಸ್ತಥಾ |
ಏಲಾ ಹಂಸವತೀ ಹಂತ ಸಾ ಸ್ಮೃತಾ ಗೀತಪಾರಗೈಃ || ೭೪ ||

[೩. ನಂದಾವತೀ]

೧೧೩೦ ಲಘುಭಿರ್ಗಮಕೈರ್ಯುಕ್ತಾ ರಾಗೇ ಮಾಲವಕೈಶಿಕೇ |
ಏಲಾ ನಂದಾವತೀ ನಾಮ ಪ್ರತಿತಾಲೇನ ಗೀಯತೇ || ೭೫ ||

೧೧೩೧ ಇಂದ್ರಾಣೀ ದೇವತಾ, ವೃತ್ತಿಃ ಸಾತ್ತ್ವತೀ ತತ್ರ | ಕೀರ್ತಿತಾ |
ಗೌಡೀಯಾ ಕಥ್ಯತೇ ರೀತಿಃ ಪೀತೋ ವರ್ಣಃ ಸ್ಮೃತೋ ಬುಧೈಃ || ೭೬ ||

೧೧೩೨ ರಸೋ ವೀರಃ ಸಮಾಖ್ಯಾತೋ, ವೈಶಾನಾಂ ಕುಲಸಂಭವಾ |
ನಾದಾವತ್ಯಾಮಿವ ಸರ್ವಂ ಕರ್ತವ್ಯಂ ರಾಗಪೂರ್ವಕಮ್‌|| ೭೭ ||

ಪಾಠವಿಮರ್ಶೆ: ೧೧೨೪ಆ ೧೧೨೫ಆ ೧೧೨೬ಅ,ಅಆ ೧೧೩೦ಆ ೧೧೩೨ಆ,ಇ

—-

೧೧೨೩ ಅದರಲ್ಲಿ ಎಲ್ಲರನ್ನು ರಂಜಿಸುವ ಟಕ್ಕರಾಗವಿರುತ್ತದೆ; ಅದರ ಬಣ್ಣವು ಬಿಳುಪೆಂದು ತಿಳಿಯಬೇಕು. ಶೃಂಗಾರವು (ಅದರ) ರಸವೆಂದು ಹೇಳಿದೆ.                                                                                                                                        ೬೮

೧೧೨೪ (ಅದರಲ್ಲಿ ಕೈಶೀಕೀ ವೃತ್ತಿ(ಯಿರಬೇಕು) ಎಂದಿದೆ, ಪಾಂಚಾಲೀ ರೀತಿಯನ್ನೂ ಹೇಳಿದೆ. ಅದರ (ಅಧಿ) ದೇವತೆಯು ಭಾರತೀ: ಅದರದು ಬ್ರಾಹ್ಮಣರ ಕುಲ.                                                                                                                           ೬೯

೧೧೨೫ ಯಾವುದರ (ಪ್ರತಿಯೊಂದು ಪಾದದ)ಲ್ಲಿ ಐದು ಚಂದ್ರಗಣಗಳೂ ಒಂದು ಸ್ವರ್ಗ (?ಸೂರ್ಯ)ಗಣವೂ ಸೇರಿಕೊಂಡಿವೆಯೋ ಅದನ್ನು ಪ್ರಾಚೀನ ವಿದ್ವಾಂಸರು ನಾದಾವತೀ ಏಲಾ ಎಂಬ ಹೆಸರಿನಿಂದ ಸ್ಮರಿಸಿದ್ದಾರೆ.                                                  ೭೦

[೨. ಹಂಸಾವತೀ]

೧೧೨೬ ನಾದದಲ್ಲಿಯೂ ಪದದಲ್ಲಿಯೂ ಹಂಸದ್ದೇ ನಡಿಗೆಯನ್ನು ಪ್ರಯೋಗಿಸಿ (ಹಾಡು) ಏರುಪೇರುಗಳಿಲ್ಲದೆ ಸಮವಾಗಿ ಮುಂದುವರಿಯುವುದರಿಂದ ಹಂಸಾವತೀ (ಎಂಬ ಹೆಸರು ಬಂದಿದೆ) ಎಂದು ಸ್ಮರಿಸಿದೆ.                                         ೭೧

೧೧೨೭ ಅದರಲ್ಲಿ ತಾಲವು ದ್ವಿತೀಯ(ವೆಂಬುದು); ಹಿಂದೋಲದಲ್ಲಿ (ಅದನ್ನು) ಹಾಡಲಾ-ಗುತ್ತದೆ (ಅದರ) ಬಣ್ಣವು ಕೆಂಪು ಎಂದು ಹೇಳಿದೆ; (ಅದರ ಅಧಿ)ದೇವತೆಯು ಚಂಡಿಯಾಗಿದೆ.                                                                                              ೭೨

೧೧೨೮ ಆರಭಟಿಯು ಅದರ ವೃತ್ತಿ, ರೀತಿಯ ಲಾಟೀ ಎಂದು ಹೇಳಿದೆ, (ಅದರ) ಕುಲವು ಕ್ಷತ್ರಿಯರದು; ರಸವು ರೌದ್ರವೆಂದು ಪ್ರಸಿದ್ಧವಾಗಿದೆ.     ೭೩

೧೧೨೯ ಯಾವುದರ (ಪ್ರತಿಯೊಂದು ಪಾದದ)ಲ್ಲಿ ಐದು ಅಗ್ನಿಗಣಗಳೂ ಹಾಗೆಯೇ ಆರನೆಯದು ವಾಯುಗಣವೂ ಇರುತ್ತದೋ ಅದನ್ನು ಹಂಸಾವತೀ ಏಲಾ ಎಂದು ಗೀತದ (ಆಚೆಯ) ದಡವನ್ನು ಸೇರಿದವರು ಸ್ಮರಿಸುತ್ತಾರೆ.                                        ೭೪

[೩. ನಂದಾವತೀ]

೧೧೩೦ ಲಘುವಾದ (ಕೇವಲ ಲಘುವರ್ಣಗಳಾದ, ?) ಗಮಕಗಳೊಡನೆ ಮಾಲವಕೈಶಿಕರಾಗದಲ್ಲಿ ಪ್ರತಿ(ಎಂಬ)ತಾಲದಲ್ಲಿ ನಂದಾವತೀ ಏಲಾವನ್ನು ಹಾಡಲಾಗುತ್ತದೆ.                                                                                                                            ೭೫

೧೧೩೧ ಅದರಲ್ಲಿ ಇಂದ್ರಾಣಿಯು (ಅಧಿ)ದೇವತೆ; ವೃತ್ತಿಯು ಸಾತ್ತ್ವತೀ ಎಂದು ಹೇಳಿದೆ. ರೀತಿಯು ಗೌಡೀ ಎಂದು ನಿರೂಪಿಸಿದೆ ; ಬಣ್ಣವು ಹಳದಿ ಎಂದು ವಿದ್ವಾಂಸರು ಸ್ಮರಿಸುತ್ತಾರೆ.                                                                                                     ೭೬

೧೧೩೨ ಅದರ ರಸವು ವೀರವೆಂದು ನಿರೂಪಿಸಿದೆ ; ವೈಶ್ಯರ ಕುಲದಲ್ಲಿ (ಅದು) ಹುಟ್ಟಿದೆ, ರಾಗದಿಂದ ಮೊದಲುಮಾಡಿಕೊಂಡು ನಾದಾವತಿಯಲ್ಲಿರುವಂತೆಯೇ ಎಲ್ಲವನ್ನೂ ಮಾಡಬೇಕು.                                                                       ೭೭

____

೧೧೩೩ ಯತ್ರಾಂಬರಗಣಾಃ ಪಂಚ ಮಾರ್ತಂಡಗಣಸಂಯುತಾಃ
ಏಲಾ ನಂದಾವತೀ ಸಾ ತು ವಿಜ್ಞೇಯಾ ಗೀತವೇದಿಭಿಃ || ೭೮ ||

[೪. ಭದ್ರಾವತೀ]

೧೧೩೪ ಏಕೈಕಪದಸಂಯುಕ್ತಾ ಮೂರ್ಛನಾಧ್ವನಿಸಂಕುಲಾ |
ಕಂಕಾಲತಾಲಸಂಬಂಧಾ ಕಕುಭೇನ ಪ್ರಗೀಯತೇ || ೭೯ ||

೧೧೩೫ ಏಲಾ ಭದ್ರಾವತೀ ನಾಮ ಶೂದ್ರಜಾತಿಸಮುದ್ಭವಾ |
ಕೃಷ್ಣವರ್ಣಾ ಚ ವಿಜ್ಞೇಯಾ ವೈದರ್ಭೀರೀತಿಶೋಭಿತಾ || ೮೦ ||

೧೧೩೬ ಭಾರತೀವೃತ್ತಿಯುಕ್ತಾ ಚ ಬೀಭತ್ಸರಸಭೂಷಿತಾ |
ವಾರಾಹೀದೇವತೋಪೇತಾ ಕಥಿತಾ ಗೀತಕೋವಿದೈಃ || ೮೧ ||

೧೧೩೭ ಯತ್ರ ಭೂಮಿಗಣಾಃ ಪಂಚ ಷಷ್ಠೋ ಜಲಗಣಸ್ತಥಾ |
ಭದ್ರಾವತೀತಿ ವಿಖ್ಯಾತಾ ಸಾ ಸ್ಮೃತಾ ಮುನಿಪುಂಗವೈಃ || ೮೨ ||

[ಸಾಮಾನ್ಯವಿಧಾನಂ]

೧೧೩೮ ತ್ರಿಪದಂ ಪಾದಸಂಖ್ಯಾನಂ ಮೂರ್ಛನಾಬಿಂದು ಸಂಕುಲಮ್ |
ಸ್ಥಿತಂ [ಚ] ಗಮಕಂ ಕುರ್ಯಾದೇತದೇಲಾಸು ಲಕ್ಷಣಮ್ || ೮೩||

೧೧೩೯ ತತಶ್ಚ ವರ್ಣ್ಯಮಾನಸ್ಯ ನಾಮ ಸಮ್ಯಕ್‌ಪ್ರವೇಶಯೇತ್‌ |
ಲಲಿತಾ ರಸಸಂಯುಕ್ತಾ ಸ್ವಾಭಿಧಾನಮತಃ ಪರಮ್‌ || ೮೪ |

[ಇತಿ ಗಣೈಲಾಃ]

[ಸಂಕರೈಲಾ]

೧೧೪೦ ತೃತೀಯಪಾದವತ್‌ಪಾದಶ್ಚತುರ್ಥೋ ಯದಿ ವರ್ಧತೇ |
ಏಲಾ ಸಂಕರತಾಮೇತಿ[ಸಾಂಕರ್ಯಮೇತೀ] ಮತಂಗಮುನಿಭಾಷಿತಾ |
ಪಂಚಮೀ ಹ್ಯತ್ರ ಸಂಕರನ್ನಾಮ್ಮೀ ತ್ವೇಲಾ [ಪ್ರಕೀರ್ತಿತಾ] || ೮೫ ||

ಪಾಠವಿಮರ್ಶೆ: ೧೧೩೩ಆ ೧೧೩೭ಈ ೧೧೩೮ಇ ೧೧೩೯ಆ ೧೧೪೦ಉ,ಊ

—-

೧೧೩೪ ಯಾವುದರ (ಪ್ರತಿಯೊಂದು ಪಾದದ)ಲ್ಲಿಯೂ ಐದು ಆಕಾಶ ಗಣಗಳು (ಒಂದು) ಸೂರ್ಯಗಣವನ್ನು ಕೂಡಿಕೊಂಡಿರುತ್ತವೋ ಅದನ್ನು ಹಾಡುಬಲ್ಲವರು ನಂದಾವತೀ ಎಂದು ತಿಳಿಯಬೇಕು.                                                                                ೭೮

[೪. ಭದ್ರಾವತೀ]

೧೧೩೪ ಒಂದೊಂದು ಪದ(=ಪಾದ)ವನ್ನು ಒಳಗೊಂಡ, ಮೂರ್ಛನೆಯ ಧ್ವನಿ ಸಮೂಹಗಳಿಗಿರುವ ಕಂಕಾಲತಾಲವು ಪ್ರಯೋಗವಾಗುವ (ಈ ಏಲಾವನ್ನು) ಕಕುಭರಾಗದಲ್ಲಿ ಹಾಡಲಾಗುತ್ತದೆ.                                                                                    ೭೯

೧೧೩೫ ಭದ್ರಾವತೀ ಎಂಬ ಹೆಸರಿನ (ಈ) ಏಲಾ (ಪ್ರಬಂಧ)ವು ಶೂದ್ರಜಾತಿಯಲ್ಲಿ ಹುಟ್ಟಿದೆ. ಅದರ ಬಣ್ಣವು ಕಪ್ಪೆಂದು ತಿಳಿಯಬೇಕು ; ಅದು ವೈದರ್ಭೀ ರೀತಿಯಿಂದ ಶೋಭಿಸುತ್ತದೆ.                                                                                                 ೮೦

೧೧೩೬ ಅದು ಭಾರತೀವೃತ್ತಿಯನ್ನು ಕೂಡಿಕೊಂಡಿದೆ; ಬೀಭತ್ಸರಸಿಂದ ಅಲಂಕೃತವಾಗಿದೆ. ವಾರಾಹೀದೇವತೆಯನ್ನು ಕೂಡಿಕೊಂಡಿದೆ ಎಂದು ಗೀತಪಂಡಿತರೆನ್ನುತ್ತಾರೆ.                                                                                                                   ೮೧

೧೧೩೭ ಯಾವುದರ(ಪ್ರತಿಯೊಂದು ಪಾದದ)ಲ್ಲಿಯೂ ಐದು ಭೂಮಿಗಣಗಳಿದ್ದು ಆರನೆಯ ಜಲಗಣವಾಗಿದೆಯೋ ಅದನ್ನು ಭದ್ರಾವತೀ (ಏಲಾ) ಎಂದು ಮುನಿಶ್ರೇಷ್ಠರು ಸ್ಮರಿಸುತ್ತಾರೆ.                                                                                                  ೮೨

[ಏಲೆಯ ಗಾಯನದಲ್ಲಿ ಸಾಮಾನ್ಯವಿಧಾನ]

೧೧೩೮ ಮೂರೂ ಪಾದಗಳ ಸಮಷ್ಟಿಗೆ ಏಲೆಯ ಒಂದೇಪಾದವೆಂದು ಎಣಿಸಿಕೊಳ್ಳುವುದು,) ಅದಕ್ಕೆ ಪಾದದ ಹೆಸರನ್ನೇ ಕೊಡುವುದು (?), ಮೂರ್ಛನಾ, ಬಿಂದು(?)ಗಳ ಸಮೂಹವಿರುವುದು, ನೆಲೆಯಾದ (ನಿಂತು ಚಲಿಸುವ? ವಿಳಂಬ?) ಗಮಕ ಇವುಗಳನ್ನು ಪ್ರಯೋಗಿಸುವುದು ಇದು ಏಲಾಗಳಲ್ಲಿ ಲಕ್ಷಣ.                                                                                                                        ೮೩

೧೧೩೯ ಆಮೇಲೆ, ವರ್ಣಿಸಬೇಕಾಗಿರುವವರ ಹೆಸರನ್ನು ಸರಿಯಾಗಿ (ಪ್ರಬಂಧದ) ಒಳಗೆ ಇರಿಸಬೇಕು, ಅದಾದ ಮೇಲೆ ರಸಭರಿತವಾಗಿ ತನ್ನ (=ಗಾಯಕನ) ಹೆಸರನ್ನು ಆಕರ್ಷಕವಾಗಿ (ಪ್ರವೇಶಗೊಳಿಸಬೇಕು).                                                                  ೮೪

[ಹೀಗೆ ಗಣೈಲಾವರ್ಣನೆಯು ಮುಗಿಯಿತು.]

[ಸಂಕರೈಲಾ]

೧೧೪೦ ನಾಲ್ಕನೆಯ ಪಾದವನ್ನೂ ಮೂರನೆಯ ಪಾದದಲ್ಲಿರುವಂತೆಯೇ ಹೆಚ್ಚಿಸಿದರೆ ಏಲಾ (ಪ್ರಬಂಧ)ವು ಸಂಕರವಾಗುತ್ತದೆ [ಎಂದು] ಮತಂಗಮುನಿಯು ಹೇಳಿದ್ದಾನೆ. (ಮೇಲೆ ಹೇಳಿದ ನಾದಾವತೀ ಇತ್ಯಾದಿ ನಾಲ್ಕಲ್ಲದೆ) ಈ ಐದನೆಯ ಏಲಾ(ಪ್ರಬಂಧ)ವು ಸಂಕರವೆಂಬ ಹೆಸರಿನಿಂದ ಪ್ರಸಿದ್ಧವಾಗಿದೆ.                                                                                                                              ೮೫

____

[ಖ. ಮಾತ್ರ್ಯಲಾ ಪ್ರಕಾರಾಃ]

೧೧೪೧ ರತಿಲೇಖಾ ಕಾಮಲೇಖಾ ಬಾಣಲೇಖಾ ತಥೈವ ಚ |
ಕಥ್ಯತೇ ಚಂದ್ರಲೇಖಾ ಚ ಮಾತ್ರ್ಯಲಾಮಾಹ ವಲ್ಲಭಃ || ೮೬ ||

[. ರತಿಲೇಖಾ]

೧೧೪೨ ಯಸ್ಯಾಮಘ್ರಿಧ್ವಯೇ ಮಾತ್ರಾ ರುದ್ರಸಂಖ್ಯಾಯಾಸ್ತೃತೀಯಕೇ |
ರುದ್ರಹಸ್ತಸಮಾಶ್ಚೈವ ರತ್ಯಾಖ್ಯಗಣಸಮ್ಮಿತಾಃ || ೮೭ ||

೧೧೪೩ ಭವಂತೀತಿ ಯತಸ್ತಜ್ಞೈರ್ಧಾತುಮಾತುಸಮನ್ವಿತಾಃ |
ಕಥಿತಾ ಗೀತಶಾಸ್ತ್ರಜ್ಞೈ ರತಿಲೇಖೇತಿ ನಾಮತಃ || ೮೮ ||

[೨. ಕಾಮಲೇಖಾ]

೧೧೪೪ ದ್ವಿಗುಣಿತರುದ್ರಾ ಪ್ರಥಮೇ, ಮಾತ್ರಾ ಯುಜಿ ಸಂಭವಂತಿ ತಾ ಏವ |
ವಿಂಶತಿಖ್ಚಾಸಮೇ ಚರಣೇ, ಯಸ್ಯಾಃ ಸಾ ಕಾಮಲೇಖೇತಿ || ೮೯ ||

[೩. ಬಾಣಲೇಖಾ]

೧೧೪೫ ದ್ವಿಗುಣಿತಕಲಾ ಯದಿ ಸ್ಯುರ್ಮಾತ್ರಾಃ ಪಾದತ್ರಯೇ sಪ್ಯವಶಿಷ್ಟಾಃ |
[ತಾ] ಬಾಣಗಣೋಪೇತಾ ಯಸ್ಯಾಂ ಸಾ ಬಾಣಲೇಖೇತಿ || ೯೦ ||

[೪. ಚಂದ್ರಲೇಖಾ]

೧೧೪೬ ಚತಾರ್ವಿಂಶತ್‌ತ್ರ್ಯಧಿಕಾ ಮಾತ್ರಾಸಂಖ್ಯಾ s೦ಘ್ರಿ ಯುಗ್ಮೇಷು |
ಏಕೋನಾ ಸಾ ವಿಷಮೇ ಯಸ್ಯಾಂ ಸಾ ಚಂದ್ರಲೇಖೇತಿ || ೯೧ ||

|| ಇತಿ ಮಾತೈಲಾಚತುಷ್ಟಯಮ್‌ ||

ಪಾಠವಿಮರ್ಶೆ: ೧೧೪೨ಈ ೧೧೪೨-೧೧೪೩ ೧೧೪೩ಆ ೧೧೪೪ಅ-ಈ ೧೧೪೪ಇ

—-

[ಖ ಮಾತ್ರ್ಯಲಾದ ಪ್ರಕಾರಗಳು]

೧೧೪೧ ರತಿಲೇಖಾ, ಕಾಮಲೇಖಾ, ಬಾಣಲೇಖಾ ಹಾಗೆಯೇ ಹೇಳಲಾಗುವ ಚಂದ್ರಲೇಖಾ ಎಂಬ ಮಾತ್ರ್ಯೆಲಾಗಳನ್ನು ವಲ್ಲಭನು ನಿರೂಪಿಸುತ್ತಾನೆ.           ೮೬

[೧. ರತಿಲೇಖಾ]

೧೧೪೨ ಯಾವುದರ (ಮೊದಲನೆಯ) ರೆಡು ಪಾದಗಳಲ್ಲಿ ರುದ್ರಸಂಕ್ಯೆಯ (= ಹನ್ನೊಂದು) ಮಾತ್ರಾಗಳೂ ಮೂರನೆಯದಲ್ಲಿ ರುದ್ರಹಸ್ತ(? ಹತ್ತು?)ಕ್ಕೆ ಸಮವಾದಷ್ಟು ರತಿ ಎಂಬ ಹೆಸರಿನ ಗಣಗಳಿಂದ (ಮೊತ್ತಲಾಗುವಷ್ಟೇ ಮಾತ್ರೆಗಳು)-                                    ೮೭

೧೧೪೩ ಸುತ್ತಾ ರೋ ಇರುತ್ತಪೊ, ಇವುಗಳಿಂದ ತಜ್ಞರು (ಹಾಡಿನ ಧಾತುಮಾತುಗಳನ್ನು ಹೊಂದಿ ಇದನ್ನು ಗೀತಶಾಸ್ತ್ರವನ್ನು ಬಲ್ಲವರು ರತಿಲೇಖಾ(ಏಲಾ) ಎಂಬ ಹೆಸರಿನಿಂದ ಕರೆಯುತ್ತಾರೆ.                                                                                 ೮೮

[೨. ಕಾಮಲೇಖಾ]

೧೧೪೪ ಮೊದಲನೆಯ ಪಾದದಲ್ಲಿ ಇಮ್ಮಡಿ ರುದ್ರ (= ಇಪ್ಪತ್ತೆರಡು) ಮಾತ್ರೆಗಳೂ ಸಮ ಸಂಖ್ಯೆಯದರಲ್ಲಿ(ಎರಡನೆಯದರಲ್ಲಿ)ಯೂ ಅಷ್ಟೇ ಇರುತ್ತವೆ. ಬೆಸಸಂಖ್ಯೆಯ (= ಮೂರನೆಯ) (ಪಾದದಲ್ಲಿ) ಇಪ್ಪತ್ತು(ಮಾತ್ರೆಗಳು) ಯಾವುದರಲ್ಲಿ ಇರುತ್ತವೋ ಅದನ್ನು ಕಾಮಲೇಖಾ(ಏಲಾ) ಎನ್ನುತ್ತಾರೆ.                                                                                                                                   ೮೯

[. ಬಾಣಲೇಖಾ]

೧೧೪೫ ಕಲೆಯ (=ಹದಿನಾರರ) ಎರಡರಷ್ಟು (= ಮೂವತ್ತೆರಡು) ಮಾತ್ರೆಗಳು ಮೂರೂ ಪಾದಗಳಲ್ಲಿದ್ದಯ ಉಳಿದವುಗಳು (?) ಬಾಣ(ಗಣ)ಗಳನ್ನು ಹೊಂದಿರುವುದು ಯಾವುದರಲ್ಲಿದೆಯೋ ಅದು ಬಾಣಲೇಖಾ ಎಂದು (ಹೇಳಿದೆ)                     ೯೦

(೪. ಚಂದ್ರಲೇಖಾ)

೧೧೪೬ ನಲವತ್ತರ ಮೇಲೆ ಮೂರರಷ್ಟು ಮಾತ್ರೆಗಳು ಯಾವುದರ (ಮೊದಲನೆಯ) ಎರಡು ಪಾದಗಳಲ್ಲಿರುತ್ತವೋ ಬೆಸಸಂಖ್ಯೆಯದರಲ್ಲಿ (=ಮೂರನೆಯದರಲ್ಲಿ) ಒಂದು (ಮಾತ್ರೆಯಷ್ಟು) ಕಡಿಮೆಯಾಗಿಯೂ (=ನಲವತ್ತೆರಡು) ಇರುತ್ತವೋ ಅದು ಚಂದ್ರಲೇಖಾ ಎಂಬುದು.           ೯೧


೧೧೪೫ಅ-ಈ, ಅ,ಆ,ಇ

____

[ಗ. ವರ್ಣೈಲಾಪ್ರಕಾರಾಃ]

೧೧೪೭ ನೈವಾತ್ರ ತಾಲನಿಯಮೋ ರಸನಿಯಮೋ ರಾಗನಿಯಮಸ್ತು |
ಭವತಿ [ಖಲು] ವರ್ಣನಿಯಮೋ ವರ್ಣೈಲಾ ಕಥ್ಯೆತೇ ತಸ್ಯಾತ್‌ || ೯೨ ||

೧೧೪೮ ಮದನವತೀ ಶಶಿಲೇಖಾ ಪ್ರಭಾವತೀ ಮಾಲತೀ ತಥಾ [ಲಲಿತಾ] |
ಹೇಮವತೀ ಕುಸುಮವತೀ ವರ್ಣನಿಬಂಧಾ ಭವಂತಿ ಸಪ್ತೈಲಾಃ || ೯೩ ||

೧೧೪೯ ಏಕಾದಶಾದಿ ವರ್ಣೈಃ ಸಪ್ತದಶಾಂತೈಃ ಕ್ರಮೇಣ ಸಪ್ತೈತಾಃ |
ಗೀಯತೇ ಗಂಧರ್ವೈರ್ಲಲಿತಪದೈರ್ಜಗತಿ ಸನ್ನಾದೈಃ || ೯೪ ||

[೧. ಮದನವತೀ ೨. ಶಶಿಲೇಖಾ ೩. ಪ್ರಭಾವತೀ]

೧೧೫೦ ಅಲಘುಗಣೋಪೇತಾ [ಸಾ] ಮದನವತೀ ಲಘುಗಣೇನ ಶಶಿಲೇಖಾ |
ಗುರುಗಣಬಹುಲಾ [ನಿತ್ಯಂ] ಪ್ರಭಾವತೀ ಮಾಲತೀ ತಥಾ ಲಲಿತಾ || ೯೫ ||

[೪. ಮಾಲತೀ]

೧೧೫೧ ಏಲಾಗುರುಲಘುರಚಿತಾ ಮಧುರಧ್ವನಿ ಶೋಭಿತಾ ತಥಾ ಸರಲಾ |
ಬಹುಗಮಕಾಂಕಾರಾ ರಮಣೀಯಾ ಆಲತೀ ಭವತಿ || ೯೬ ||

[೫. ಲಲಿತಾ]

೧೧೫೨ ಗಾತವ್ಯಾ ಗಂಧರ್ವೈರ್ಲಲಿತಾ ಲಲಿತೇನ ವರ್ಣನಿಯಮೇನ |
ಪ್ರಥಮಮಿವ ಚರಣಯುಗಲಂ ಸಗಮಕಮಥ ಬಿಂದುಮೂರ್ಛನಾಯುಕ್ತಮ್‌ || ೯೭ ||

ಪಾಠವಿಮರ್ಶೆ: ೧೧೪೬ ಅ-ಈ ೧೧೪೭ಇ ೧೧೪೮ಆ,ಇ ೧೧೫೦ಅ-ಈ, ಅ, ಈ ೧೧೫೧ ಅ,ಇ,ಇಈ

—-