೮೪೬ಆ. ಧೈವತಾಂತಾ : ಮಧ್ಯಮಾಂಶಾ (ಪ್ರಸಂ). ಹೀಗೆ ತಿದ್ದಲು ಎರಡು ಕಾರಣಗಳಿವೆ: ಸಂರಾಜ. ೨.೨.೧.೬೭೧, ೬೭೨ರ ಗ್ರಂಥಾಂಶ. (ಇದನ್ನು ಮುಂದೆ ೮೫೦ಊ ದ ಪಾಠವಿಮರ್ಶೆಯಲ್ಲಿ ಉದ್ಧರಿಸಿದೆ); ಉದಾಹರಣೆಯು ಧೈವತದಿಂದ ಮೊದಲಾಗಿ ಧೈವತದಲ್ಲಿಯೇ ಮುಗಿದಿದೆ.

೫೮೦ಆ. ಕಾಕಲ್ಯಾ ದೈವತಸ್ಯ ಚ : ಕಾಕ (ಲ್ಯೋಧ್ಯ? ಲ್ಯಾ ಧೈ)ವತಸ್ಯ ಚ (ಪ್ರಸಂ)

೮೫೦ಊ. ಛಾಯಾ ಸಕಾಕಲೀ : ಛಾಯಾ ಚ ಕಾಕಲೀ (ಪ್ರಸಂ). ದ್ವಿಸಂ. ರು ಛಾಯಾ ಎಂಬ ಪಾಠವನ್ನು ‘ಪ್ರಾಯಾ’ ಎಂದು ತಿದ್ದಿ ಹಾಗೆ ಮಾಡಲು ಈ ಕಾರಣಗಳನ್ನು ನಮೂದಿಸಿದ್ದಾರೆ: ಛಾಯಾ ಎಂಬ ಪದವು ಇಲ್ಲಿ ಸಂದರ್ಭೋಚಿತವಲ್ಲ: ‘ಪ್ರಾಯಾ’ ಎಂದರೆ ಕಾಕಲಿಯು ಬಹುಲಾ (ಈ ಭಾಷಾರಾಗದಲ್ಲಿ ಕಾಕಲಿ ಸ್ವರವಿದೆಯೆಂದು ಬೇರೆ ಯಾವ ಸಂಗೀತಶಾಸ್ತ್ರಗ್ರಂಥಗಳೂ ಹೇಳುವುದಿಲ್ಲ; ಇದನ್ನು ಅವರು ಗಮನಿಸಿದ್ದಾರೆ.); ಪ್ರಾಯಾ ಎಂಬುದು ಪ್ರಸಂ.ದ (ಛಾಯಾ ಎಂಬ) ಪಾಠಕ್ಕೆ ಸಮೀಪತಮವಾಗಿದೆ.

ಆದರೆ ಇಲ್ಲಿ ಛಾಯಾ ಎಂಬುದೇ ಸಮಂಜಸವಾದ ಪಾಠ. ಈ ಅಧ್ಯಾಯದ ಪ್ರಾರಂಭದಲ್ಲಿ (ಗ್ರಂ. ಭಾ. ೭೩೯)ಯಾಷ್ಟಿಕಮುನಿಯ ಭಾಷಾರಾಗಗಳನ್ನು ಮೂಲ, ಸಂಕೀರ್ಣ, ದೇಶಜ ಮತ್ತು ಛಾಯಾ (ಮಾತ್ರಾಶ್ರಯ) ಎಂಬ ನಾಲ್ಕು ಬಗೆಯೆಂದು ವಿಂಗಡಿಸಿದ್ದಾನಷ್ಟೆ; ಭಿನ್ನಪಂಚಮೀ ಭಾಷಾರಾಗವು ಛಾಯಾಮಾತ್ರಾಶ್ರಯವೆಂಬ ವರ್ಗಕ್ಕೆ ಸೇರಿದ್ದು ಎಂಬುದು ಇಲ್ಲಿನ ಆಶಯ. ಭಾಷಾರಾಗಗಳ ವರ್ಣನೆಯಲ್ಲಿ ಅವನು ಮೂಲ, ದೇಶಜ ಮತ್ತು ಸಂಕೀರ್ಣ ಎಂಬ ವರ್ಗೀಕರಣವನ್ನು ಭಾಷಾರಾಗಗಳಲ್ಲಿ ತಪ್ಪದೆ ಮಾಡುತ್ತಿರುವುದನ್ನು ಗಮನಿಸಬಹುದು. ನಿಷಾದವು ಕಾಕಲೀ ಮತ್ತು ಬಹುಲ ಎಂಬುದನ್ನು ೮೪೯ ಇ. ನಲ್ಲಿ ಹೇಳಿರುವುದರಿಂದ ಪ್ರಾಯಾ ಎಂಬಲ್ಲಿ ದ್ವಿ ರುಕ್ತಿದೋಷವು ತಪ್ಪುತ್ತದೆ. ಸಕಾಕಲೀ ಎಂದರೆ ಕಾಕಲಿಸಹಿತವಾದುದು (ಇಲ್ಲಿಯೂ ದ್ವಿರುಕ್ತಿದೋಷವೇ ಇದೆ). ಛಾಯಾ ಚ ಕಾಕಲೀ ಎಂಬ ಪ್ರಸಂ. ದ ಪಾಠದಿಂದ ಕಾಕಲೀಸ್ವರದಿಂದಾಗಿ ಛಾಯಾಮಾತ್ರಾ ಶ್ರಯವಾಗಿದೆ ಎಂಬ ಅರ್ಥವನ್ನೂ ಹೊರಡಿಸಬಹುದೆ?

೮೫೦ಊ. ಕಾಕಲೀ : ಹೋಲಿಸಿ :

ಷಡ್ಜಗ್ರಾಮಸಮುದ್ಬೂತಕಕುಭೇ ಜನಿತಾ ಯಥಾ |
ಧೈವತಾಂಶಗ್ರಹನ್ಯಾಸಾ ಧಾಪನ್ಯಾಸಾ ಧಮಂದ್ರಗಾ |
ಮಾಧ್ಯಮೈರಾರ್ಷಭೈತ್ತಾನೈಃ ಪಂಚಮೈರ್ಧೈವತೈರಪಿ |
ಸಂಯುಕ್ತೋಚ್ಝೆತಾಗಾಂಧಾರಾ ಭಾಷೇಯಂ ಭಿನ್ನಪಂಚಮೀ |
ವಿಪ್ರಲಂಭೇ ನಿಯೋಕ್ತವ್ಯಾ———- |
(ಸಂರಾಜ. ೨.೨.೧.೬೭೧,೬೭೨:೩೫೧)

೮೫೨ಅ. ಭಾಷಾಃ : ಭಾ(ಷಾ) (ಪ್ರಸಂ)

೮೫೩ಈ. ಯೋಜ್ಯಃ : ಯೇ(ನ್ಯ?ಜ್ಯಃ)(ಪ್ರಸಂ)

೮೫೩ಊ. ಸಾದ್ ಹಿ ವೇಸರೀ : ತಸ್ಯ ವೈಸರೀ (ಪ್ರಸಂ). ಪ್ರಸಂದಲ್ಲಿ ಈ ಶ್ಲೋಕಾರ್ಧವನ್ನು ಉದಾಹರಣದ ನಂತರ ಕೋಟ್ಟಿದೆ.

೮೫೫ಅ. ಪಂಚಮಾಂಶರ್ಷಭಹೀನಾ: ಪಂಚಮಾಂಶಾ ಋಷಭಹೀನಾ (ಪ್ರಸಂ; ಒಂದು ಅಕ್ಷರದ ಅಧಿಕಛಂದಸ್ಸಾಗುತ್ತದೆ. ಸಂರಾಜ(೨.೨.೧.೯೪೭ಇ: ೩೮೪ದಲ್ಲಿ ಈ ರಾಗಕ್ಕೆ ಮಧ್ಯಮವು ಗ್ರಹಾಂಶಗಳೆಂದಿದೆ: ‘ಮಧ್ಯಮಾಂಶಗ್ರಹಾ’

೮೫೫ಊ. ಪ್ರಥಮಮಂಜರೀ : ಈ ರಾಗವು ಸಂರ. ೨.೨.೧೧೫ಇಈ: ೯೬)ದ ಮತದಲ್ಲಿ ಕಕುಭದೆ ಭಾಷಾಂಗಜನ್ಯ, ಭಾಷಾ ಅಲ್ಲ. ಇದಕ್ಕೆ ಚೂತಮಂಜರೀಯೆಂಬ ಹೆಸರೂ ಇದೆ. (ಉದಾ.ಸಂರ. ೨.೧.೩೧ಈ.೧೧;ಕಲ್ಲಿ. ಅದೇ : ೧೩೭; ಸಂರಾಜ. ೨.೨.೧ಆ:೩೮೪)

೮೫೭ಆ. ಧೇನ ದುರ್ಬಲಾ : ಸಂರ (೨.೨.೧೪೬:೧೦೯)ದ ಪ್ರಕಾರ ಇದು ಧ-ದುರ್ಬಲವಲ್ಲ, ಧ-ಭೂಯಸೀ; ಬದಲು, ‘ರಿಷಭಹೀನಾ’

೮೫೭ಊ. ಛೇವಾಟೀ : ಚೇವಾಟೀ (ಪ್ರಸಂ)

೮೫೭ಅ-ಊ ಷಡ್ಜಾಂಶ —– ಸಂಪ್ರಕೀರ್ತಿತಾ : ಹೋಲಿಸಿ :

ಬಹು(ಮಂದ್ರ?) ಷಡ್ಜಗ್ರಹಾಂಶಾಂತಾ ಋಷಭೇಣ ವಿವರ್ಜಿತಾ |
ಧೈವತಸ್ವರಭೂಯಿಷ್ಠಾ (s)ಪನ್ಯಾಸಾನ್ವಿತಗಸ್ವರಾ ||
ತಾರಗಾಂಧಾರರುಚಿರಾ ಮಂದ್ರಧೈವತಭೂಷಿತಾ |
ನಿಯೋಜ್ಯೋಯಂ ರಸೇ ಹಾಸ್ಯೇ ಗಮಕೈಃ ಸಮಲಂಕೃತಾ ||
ಉತ್ಸವೇ ಚ ಸದಾ ತಜ್ಲೈಃ ಛೇವಾಟೀ ಪ್ರೇಂಖಕೋದ್ಭವಾ |
ಯಾಷ್ಟಿಕಃ ಪುನರಾಚಷ್ಟ ಪೂರ್ಣಮೇತಾಂ ಸಮಸ್ವರಾಮ್‌ ||
(ಸಂರಾಜ ೨.೨.೧.೯೩೨:೩೮೨)

೮೫೮ (ಛೇವಾಟೀ) : ಛೇವಾದೀ (ಪ್ರಸಂ)

೮೫೯-೮೬೦ ಷಡ್ಜಾಂಶಾ … ಗೀಯತೇ : ಹೋಲಿಸಿ :

 1. ಷಡ್ಜಾದ್ಯಾ ಮಧ್ಯಮಾಂತಾಂಶಾ ಹಿಂದೋಲೇ ಷಡ್ಜಮಧ್ಯಮಾ |
  ಭಾಷಾ ನಿರಿವಿಹೀನಾ ಸ್ಯಾತ್‌ ಸಮಯೋರ್ಗಮಯೋರ್ಯುತಾ ||
  (ಕಲ್ಲಿ. ಅದೇ : ೧೩೮)
 2. ಷಡ್ಜಾಂಶಗ್ರಹಣನ್ಯಾಸಾ ಧೈವತರ್ಷಭದುರ್ಬಲಾ |
  ನಿಷಾದರ್ಷಭಹೀನತ್ವಾದೌಡುವಾ ಗಪಸಂಗತಾ |
  ಷಡ್ಜಮಧ್ಯಮಸಂವಾದಾ ಷಡ್ಜಮಧ್ಯೇತಿ ಕೀರ್ತಿತಾ ||
  (ಸಂರಾಜ ೨.೨.೧.೯೪೨, ೯೪೩ಇ: ೩೮೩)

೮೬೧ [ಷಡ್ಜಮಧ್ಯಮಾ] : ಷಡ್ಜ +++ (ಪ್ರಸಂ)

೮೬೨ಆ. ದುರ್ಬಲಾ ಪಂಚಮೇನ ತು : ಈ ಲಕ್ಷಣಕ್ಕೆ ಬದಲಾಗಿ ಪಂಚನಮವು ಬಹುಲವೆಂದು (‘ಬಹುಪಧನಿಸಾಋಷಭಾಲ್ಪಾ’) ಕಲ್ಲಿ. (ಅದೇ: ೧೩೮) ಮತ್ತು ಸಂರಾಜ (೨.೨.೧೯೪೫ ಈ: ೩೮೩ ‘ಪಂಚಮಭೂಯಸೀ’)ಗಳಲ್ಲಿ ಹೇಳಿದೆ.

೮೬೨ಇಈ. ಧೈವತ—ಸ್ತಥಾ : ಹೋಲಿಸಿ :

ಧನ್ಯೋಶ್ಚ ಧಪಯೋರುಕ್ತಾ ಸಂಗತ್ಯಾ ಪ್ರೇಕ್ಷಣೇ ಭವೇತ್‌ |
(ಸಂರಾಜ. ೨.೨.೧.೯೪೫ಉಊ: ೩೮೩)

೮೬೨ಊ. ಪ್ರೇಂಖಕೇ ಮಧುರೀ : ಪ್ರೇಕ್ಷಕೇ ಮಧುಕರೀ (ಪ್ರಸಂ)

೮೬೪ ಈ ಸ್ಥಾನದಲ್ಲಿ ‘ಅತಃಪರಂ ಪ್ರರ್ವಕ್ಪ್ಯಾಮಿ ಪಂಚಮಷಾಡವೇ ಭಾಷಾಃ’ ಎಂಬ ಗ್ರಂಥಾಂಶವಿದೆ. ಇದು ಇಲ್ಲಿ ಅಪ್ರಸಕ್ತವೆಂದೂ ಛಂದೋದುಷ್ಟವೆಂದೂ ಭಾವಿಸಿ ದಿಸಂ.ರು ಇದನ್ನು ಕೈಬಿಟ್ಟಿದ್ದಾರೆ. ಬದಲು, ‘ಆತಃ ಪರಂ ಪ್ರವಕ್ಪ್ಯಂತೇ ಪಂಚಮೇ ದಶ ಚ ಭಾಷಾಃ’ ಎಂದು ತಿದ್ದಿಕೊಂಡರೆ ಪ್ರಸಂಗೋಚಿತವಾಗುತ್ತದೆ; ಇಂತಹ ಪ್ರಾರಂಭಿಕ ಪ್ರತಿಜ್ಞಾವಾಕ್ಯಗಳು ಮತಂಗಮುನಿಯ ಶೈಲಿಯ ವೈಶಿಷ್ಟ್ಯವೂ ಹೌದು.

೮೬೫ಈ. ಷಡ್ಜಧೈವತಸಂಗತಿಃ : ಇದಕ್ಕೆ ಪ್ರತಿಯಾಗಿ ಷಡ್ಜಮಧ್ಯಮಗಳ ಸಂಗತಿಯನ್ನು (‘ಸಮಯೋರ್ಯುತಾ’)ಕಲ್ಲಿ. (ಅದೇ: ೧೩೬) ಉದ್ಧರಿಸುತ್ತಾನೆ.

೮೬೫ಅಆ. ಪೂರ್ಣಾ … ದೇಶಸಂಭವಾ : ಹೋಲಿಸಿ :

—–ಗಾಂಧಾರರ್ಷಭವರ್ಜಿತಾ |

ಸಂಪೂರ್ಣಾ ಚಾಸ್ತಿ ಭಾಷೇಯಂ ಯಾಷ್ಟಿಕಾಚಾರ್ಯಸಮ್ಮತೇ || (ಸಂರಾಜ. ೨.೨.೧.೮೨೯ಈ, ೮೩೦ಇಈ:೩೭೦)ರಿಷಭಗಾಂಧಾರಗಳನ್ನು ವರ್ಜಿಸಿದರೆ ಇದು ಹೇಗೆ ಸಂಪೂರ್ಣವಾಗಬಲ್ಲದು?

೮೬೬ಅ. ಪೂರ್ಣಾ : ಪೂರ್ಣ(ಪ್ರಸಂ)

೮೬೬ಆ. ತ್ವಾಭೀರೀ : ಆಭೀರೀ (ಪ್ರಸಂ)

೮೬೬ಇ. ಮಧ್ಯ : ಮಧ್ಯಮ ಎಂಬ ಪ್ರಸಂ. ದ ಪಾಠವು ಸಮಂಜಸವಾಗಿದ್ದರೂ ಒಂದು ಅಕ್ಷರದಷ್ಟು ಅಧಿಕಛಂದಸ್ಸಾಗುತ್ತದೆ.

೮೬೮-ಉ. ಭಾಮಿನೀ…ಗಾಂಧರ್ವವೇದಿಭಿಃ ಹೋಲಿಸಿ :

 1. ಶುದ್ಧಪಂಚಮಭಾಷಾ ಸ್ಯಾದ್‌ ಭಾವನೀ ಪಗ್ರಹಾಂತಿಮಾ)
  ರಿಹೀನಾ ಮಂದ್ರಸಾ ಮಾಪನ್ಯಾಸಾ ಸಮನಿಭೂಯಸೀ ||
  (ಕಲ್ಲಿ. ಅದೇ : ೧೩೯)
 2. ಗಾಂಧಾರಾಂಶಗ್ರಹಾ ಷಡ್ಜಗ್ರಾಮಗಾಮಿಸಮಸ್ವರಾ |
  ಪನ್ಯಾಸಾ ಸ್ವಲ್ಪನಿಸ್ವಾನಪಂಚಮಾ ಪೂರ್ಣಸುಸ್ವರಾ ||
  ಸಪಮಧ್ಯಮಸಂಗತ್ಯೋಪಚಿತಾ ಭಾವನೀ ಸ್ಮೃ ತಾ ||
  (ಸಂರಾಜ. ೨.೨.೧.೮೭೪:೩೭೫)

೮೭೦ಅ. ಮಾಂಗಾಲೀ : ಸಂರಾಜ (೨.೨.೧.೮೭೭:೩೭೫)ದಲ್ಲಿ ಈ ಲಕ್ಷಣವಿರುವ ರಾಗವನ್ನು ಬಾಂಗಾಲೀ ಎಂದು ಹೆಸರಿಸಿ, ಬಾಂಗಾಲೀ ಎಂಬ ಇನ್ನೊಂದು ರಾಗವನ್ನು ಶುದ್ಧಪಂಚಮದ ಭಾಷಾಜನ್ಯವನ್ನಾಗಿ (೨.೨.೧.೮೩೬:೩೭೧) ವರ್ಣಿಸಿದೆ.

೮೭೦ಅ. ಪಂಚಮಾಂತಾ : ಇದು ಕಲ್ಲಿ.(ಅದೇ: ೧೩೬)ನಲ್ಲಿ ಮಾಂಗಲಿಯೇ, ಆದರೆ ‘ಧೈವತಾಂತಾ’.

೮೭೦ಇ. ಷಡ್ಜಧೈವತಸಂವಾದೋ : ಸ-ಧ ಸಂವಾದ (ಎಂದರೆ ಪರಸ್ಪರಗಮನ)ದ ಬದಲು ಕಲ್ಲಿ. (ಅದೇ: ೧೩೬)ನಲ್ಲಿ ಈ ರಾಗವು ‘ರಿಪಸಂವಾದಿನೀ’ ಆಗಿದೆ.

೮೭೧ಅ ಸಂಪೂರ್ಣಾ : ಸಂಕೀರ್ಣಾ (ಪ್ರಸಂ). ಇದೇ ಶ್ಲೋಕಾರ್ಧದಲ್ಲಿ ಈ ರಾಗವನ್ನು ‘ದೇಶಸಂಭವಾ’ ಎಂದು ವರ್ಗೀಕರಿಸಿರುವುದರಿಂದ ಇಲ್ಲಿ ಸಂಪೂರ್ಣಾ ಎಂಬ ಪಾಠವು ಹೆಚ್ಚು ಪ್ರಶಸ್ತವೆಂದು ತೋರುತ್ತದೆ. ಆದರೆ ಕಲ್ಲಿ. (ಅದೇ: ೧೩೬)ನು ಈ ರಾಗಲಕ್ಷಣವನ್ನು ರಿಪಸಂವಾದಿನೀಧಾಂತಾ ಸಂಕೀರ್ಣಾ ಕಾಲೀಯುತಾ’ ಎಂದು ಉದ್ದರಿಸಿಕೊಂಡಿದ್ದಾನೆ. ಇದು ಯಾಷ್ಟಿಕಮತದ ಬದಲು ಮತಂಗನ ಅಥವಾ ಆಂಜನೇಯನ ಮತವಾಗಿರುವುದು ಸಂಭಾವ್ಯವಾಗಿದೆ.

೮೭೩ಇ. ಸಿಂಧುದೇಶಸಮುದ್ಭೂತಾಂ : ಸೈಂಧವೀ ಷಡ್ಜಸಂಭೂತಾಂ (ಪ್ರಸಂ)

೮೭೩ಅ.ಊ. ಪಂಚಮಾಂಶಾ — ಮುಹುರ್ಮುಹುಃ : ಹೋಲಿಸಿ :

ಯಾಷ್ಚಿಕೇನ ಮುನಿನಾ ಪಂಚಮೇ ಭಾಷಿತೇತಿ ಕಥಿತಾತ್ರ ಸೈಂಧವೀ |
ಸೈವ ಗೀತಪರಮಾರ್ಥವೇದಿನಾ ಸೈಂಧವೀ ನಿಗದಿತಾಂಗಸಂಜ್ಞಯಾ ||
(ಸಂರಾಜ. ೨.೨.೩.೨೧: ೪೨೫)

೮೭೫ಅಆ. ಗುರ್ಜರೀ… sಲ್ಪಮಧ್ಯಮಾ: ಕಲ್ಲಿ (ಅದೇ : ೧೩೬) ಗುರ್ಜರಿಗೆ ಪಂಚಮವೇ ಗ್ರಹಾಂಶಗಳೆಂದು ಉದ್ದರಿಸಿಕೊಂಡಿದ್ದಾನೆ. ಸಂರಾಜ (೨.೨.೧.೮೬೮:೩೭೪)ದಲ್ಲಿ ‘ಮಧನೀಸ್ವರಭೂಯಸೀ’ ಎಂಬ ಲಕ್ಷಣವನ್ನು ವಿಧಿಸಿದೆ.

೮೭೫ಉ. ವಿಭಾಷೇಯಂ ಸಮಾಖ್ಯಾತಾ : ಸಂರಾಜ (೨.೨.೧.೮೬೯)ದಲ್ಲಿ ಯಾಷ್ಟಿಕಮತಾನುಸಾರವಾಗಿ ಈ ರಾಗವು ವಿಭಾಷೆ ಎಂದೇ ಹೇಳಿದ್ದರೂ. (‘ಇಆಮೇವ ವಿಭಾಷೇತಿ ಮುನಿರಾಚಷ್ಟ ಯಾಷ್ಟಿಕಃ’) ಅಲ್ಲಿಯೇ (೨.೨.೧.೮೬೮, ೮೬೯:೩೭೪)ಮತ್ತು ಕಲ್ಲಿ. (ಅದೇ: ೧೩೬)ನ ಉದ್ದೃತಿಯಲ್ಲಿ ಇದನ್ನು ಭಾಷಾರಾಗವೆಂದು ಹೇಳಿದೆ.

೮೭೭-ಅಆ. ಪಂಚಮಾ— ಮನೋರಮಾ : ದಾಕ್ಷಿಣಾತ್ಯಾರಾಗದಲ್ಲಿ (ಪಂಚಮದ ಬದಲು )ಧೈವತವು ಗ್ರಹಾಂಶನ್ಯಾಸವೆಂದು ಸಂರ. (೨.೨.೧.೧೫೧ ಆ: ೧೧೧)ದಲ್ಲಿ ವಿಧಿಸಿದೆ.

೮೭೭-ಇಈ. ಸಂಪೂರ್ಣಾ — ಪ(೦ಚ)ಮೇ : ಈ ಶ್ಲೋಕಾರ್ಧವು ಗಾಂಧಾರೀರಾಗಲಕ್ಷಣವನ್ನು ನಿರೂಪಿಸುವ (ಆದರೆ ಬೃಹ ಮಾತೃಕೆಗಳಲ್ಲಿ ನಷ್ಟವಾಗಿರುವ) ಗ್ರಂಥಾಂಶದಿಂದ ಇಲ್ಲಿ ಪ್ರಕ್ಷೇಪಗೊಂಡಿರುವಂತೆ ಕಾಣುತ್ತದೆ.

೪೭೭ಉಊ. ವಿಭಾಷೇಯಂ— ಪಂಚ್ಛಮೋದ್ಭವಾ: ದಾಕ್ಷಿಣಾತ್ಯಾರಾಗವನ್ನು ಸಂರ (೨.೨.೧೫೦.೧೫೧ಇ:ಇ೧೧೧) ಮತ್ತು ಸಂರಾಜ(೨.೨.೧.೮೪೯:೩೭೨)ಗಳಲ್ಲಿ ಭಾಷಾರಾಗವೆಂದು ವರ್ಗೀಕರಿಸಿದೆ.

೮೭೯ಅ. ಋಷಭಾಂಶಾ : ಋಷಭಾಂಗ (ಪ್ರಸಂ)

೮೮೦ಇ. ಅಂಧಾಲೀ : ಅಮಾಲೀ (ಪ್ರಸಂ); ಅಂಧ್ರೀ: (ಉದ್ದೇಶಕಥನ, ೭೬೪; ಕಲ್ಲಿ. ಅದೇ: ೧೩೬; ಸಂರಾಜ. ೨.೨.೧.೮೭೨:೩೭೫) ಇದು ಭಾಷಾಂಗರಾಗವಾಗಿದ್ದು ಮತಂಗಪ್ರಣೀತ ಅಂಧಾಲೀ ಲಕ್ಷಣಕ್ಕೆ ಪರಸ್ಪರವಾಗಿದೆ. ಆದರೆ ಅಂಧಾಲೀ ಎಂಬ ರಾಗವು ಸಂರ. (೨.೨.೧೫೨ಇಈ-೧೫೩:೧೧೨) ಮತ್ತು ಸಂರಾಜ (೨.೨.೧.೮೯೦:೩೭೭)ಗಳಲ್ಲಿ ಪಂಚಮವು ಗ್ರಹಾಂಶನಾಸಗಳು, ನಿ ಅಲ್ಪ, ಉಳಿದ ಸ್ವರಗಳು ಬಹುಳ, ಗ-ಹೀನ, ತಾರ-ಧ, ಮಂದ್ರ – ಸ, ಧ ಅಪನ್ಯಾಸ ಎಂಬ ಲಕ್ಷಣವುಳ್ಳ ವಿಭಾಷೆಯೆಂದು ವರ್ಣಿತವಾಗಿದೆ.

೮೮೨ಅ. ಅಲ್ಪರ್ಷಭಾ ಮಧ್ಯಮಾಂಶಾ : ಮಧ್ಯಮಾಂಶಾಲ್ಪಋಷಭಾ (ಪ್ರಸಂ)

೮೮೨ಇ. ಮಧ್ಯ : ಮಧ್ಯಮ (ಪ್ರಸಂ)

೮೮೨ಇಈ. ವಾದೋ ಬಾಹುಲ್ಯಂ : – ವಾದಸ್ತುಲ್ಯಂ ಸ್ಯಾತ್‌(ಪ್ರಸಂ)

೮೮೨ಉ. ಸಂಪೂರ್ಣಾ ಪಂಚಮಾಚ್ಚೇಯಂ : ಸಂಪೂರ್ಣಷಾಡ (ವಾ)ಚೇಯಂ (ಪ್ರಸಂ)

೮೮೨ಉಊ. ಸಂಪೂರ್ಣಾ— ಭವೇತ್‌: ಹೋಲಿಸಿ :

ಮಾಂಶಾಲ್ಪಋಷಭಾ ಪಾಂತಾ ಸಂಕೀರ್ಣಾ ಧಮಸಂಗತಾ |
ತಾನೋದ್ಭವಾ ಪಾಂಚಮಸ್ಯ ಭಾಷಾ ಪ್ರಬಲಪಂಚಮಾ || (ಕಲ್ಲಿ. ಅದೇ : ೧೩೬)

ಒಂದೇ ರಾಗವು ‘ಅಲ್ಪಪಂಚಮ’‘ವ್ಯೂ’ ‘ಪ್ರಬಲಪಂಚಮ’‘ವೂ’ ಆಗುವುದು ಹೇಗೆ? ‘ಅಲ್ಪಋಷಭ’ ಎಂಬ ಬೃಹ.ಯ ಪಾಠವೇ ಸರಿಯಾಗಿರುವಂತೆ ಕಾಣುತ್ತದೆ.

೮೮೪ಅ. ತ್ರಾವಣೀ : ತ್ರಾಪಣೀ (ಪ್ರಸಂ)

೮೮೪ಇ. ಸ್ವರೂಪೇಣ : ತು ರೂಪೇಣ (ಪ್ರಸಂ)

೮೮೪-೮೮೫. ತ್ರಾವಣೀ — ಸಂಭವಾ : ಹೋಲಿಸಿ :

i.          ಯಾಷ್ಟಿಕೇ ತ್ರಾವಣೀ ಭಾಷಾ ಪಂಚಮಸ್ಯ ಗ್ರಹಾಂಶತಾ |
ಪಾಂತಾ ಸರಿಪಮೈರ್ಭೂರಿಸಂಗತದ್ವಿಶ್ರುತಿರ್ಮತಾ ||
ಏಷಾ ಭಾಷಾಂಗಮನ್ಯೇಷಾಂ ಧಗ್ರಹಾಂಶಾ ನಿಪೋಜ್ಝಿತಾ
ಅತಾರಾ ಪ್ರಾರ್ಥನೇ ಮುಂದ್ರಧಗವ್ಯಾಪ್ತೋರುಮಧ್ಯಮಾ
(ಸುಂರ. ೨.೨.೧೮೬, ೧೮೭:೧೨೭)

ii.         ನಿಷಾದಾಂಶಗ್ರಹಾ ನ್ಯಾಸಪಂಚಮಾ ಗನಿಸಂಯುತಾ
——————–
ಯಾಷ್ಟಿಕಸ್ಯ ಮತೇ ಜ್ಞೇಯಂ ಷಡ್ಜಾಂಶಾ ಪಂಚಮಾಂತಿಕಾ ||
——————–
ಕೇಷಾಂಚಿದೇಷಾ ಭಾಷಾಂಗಂ ಧಗ್ರಹಾಂಶಾ ರಿಪೋಜ್ಝಿತಾ |
ಆತಾರಮಂದ್ರಧಾ ಗಾಲ್ಟಾ ಪ್ರಾರ್ಥನೇ ಚೋರುಮಧ್ಯಮಾ ||
(ಸಂರಾಜ. ೨.೨.೧.೮೮೧ಅಆ, ೮೮೪,೮೮೬:೩೭೬)

೮೮೫ಈ ತ್ರಾವಣೀ : ತ್ರಾಪಣೀ (ಪ್ರಸಂ)

೮೮೭ಆ. ಮಧ್ಯಮಾಂಶಾ : ಆದರೆ ಉದಾಹರಣದಲ್ಲಿ ಪಂಚಮವೇ ಗ್ರಹಾಂಶನ್ಯಾಸಗಳಾಗಿದೆ. ಸಂರ. (೨.೨.೧೭೦ಇ:೧೧೮) ಮತ್ತು ಸಂರಾಜ (೨.೨.೧.೮೬೧:೩೭೩)ಗಳಲ್ಲೂ ಕೃಶಿಕಿರಾಗಕ್ಕೆ ಪಂಚಮವನ್ನು ಗ್ರಹಾಂಶನ್ಯಾಸಗಳೆಂದೇ ವಿಧಿಸಿದೆ.

೮೮೭ಇ – ಯಾನಂ : ಮಾತ್ರಂ (ಪ್ರಸಂ)

೮೮೭ಉ. ಭಾಷಾ : ಈ ರಾಗವು ಯಾವ ವರ್ಗದ್ದೆಂಬುದರ ಬಗ್ಗೆ ಅಭಿಪ್ರಾಯಭೇದವಿದೆ. ಸಂರ (೨.೨.೧೭೦ಅ:೧೧೮)ದಲ್ಲಿ ಇದು ಶುದ್ಧಪಂಚಮದ ಭಾಷಾ ಆದರೆ ಅಲ್ಲಿಯೇ (೨.೨.೧೭೧ಆ:೧೧೮) ಅದನ್ನು ‘ಭಾಷಾಂಗಂ ಕೇಚಿದೂಚಿರೇ.’ ಸಂರಾಜ (೨.೨.೧.೮೬೪ಅಆ: ೩೭೪)ದಂತೆಯೂ ಇದು ಭಾಷಾಂಗವೇ. ಆದರೆ (ಅಲ್ಲಿಯೇ) ಯಾಷ್ಟಿಕಮತಾನುಸಾರವಾಗಿ ಕೃಶಿಕೀ ರಾಗವು ವಿಭಾಷಾ.

೮೮೯ಆ. ಭಾಷಾ ದಶ : ಏಕಾದಶ (ಪ್ರಸಂ)

೮೯೦ಈ. ಭಿನನಷಡ್ಜಕೇ : ಭಿ (ನ?ನ್ನ)ಷಡ್ಜಕೇ (ಪ್ರಸಂ)

೮೯೧ಈ. ಭಿನ್ನಷಡ್ಜೇ : ಪಂಚಮಸ್ಯ (ಪ್ರಸಂ)

೮೯೧ಉ. ಹಿ ಶುದ್ಧಾ : ವಿಶುದ್ಧಾ (ಪ್ರಸಂ)ಸಂರ (೨.೧.೩೬ಇ:೧೨)ಕಲ್ಲ. (ಅದೇ: ೧೪೦) ಮತ್ತು ಸಂರಾಜ (೨.೨.೧.೧೦೩೮:೩೯೪)ಗಳಲ್ಲಿ ಈ ರಾಗದ ಹೆಸರನ್ನು ಶುದ್ಧಾ ಎಂದು ಪಠಿಸಿದೆ. ಆದುದರಿಂದ ವಿಶುದ್ಧಾ’ ಎಂಬ ಪಾಠವನ್ನು ‘ಹಿ ಶುದ್ಧಾ’ ಎಂದು ತಿದ್ದಿದೆ. ಬೃಹ. ಯ ಗ್ರಂಥಭಾಗ ೭೬೬ಅ.ದಲ್ಲಿ ವಿಶುದ್ಧಾ’ ಎಂದಿದೆ.

೮೯೧ಅ-ಊ ಧೈವತಾಂಶಾ —ಭವೇತ್‌: ಹೋಲಿಸಿ :

i           ಧಾಂಶಗ್ರಹಾಂತಾ ಮೃದುಲಧೈವತಾ ರಿಸಪವರ್ಜಿತಾ |
ಪವರ್ಜಿತಾ ವಾ ಸುಗಯೋಃ ಸಂಬಿದ್ಧಾ ಭಿನ್ನಷಡ್ಜಜಾ ||
ಸಾಪನ್ಯಾಸಾ ಮಂದ್ರಸಗಧಾ ಶುದ್ಧಾದೀರ್ಘಪಂಚಮಾ || (ಕಲ್ಲಿ. ಅದೇ: ೧೪೦)

ii          ಶುದ್ಧಾ ಭಾಷಾ ಭಿನ್ನಷಡ್ಜೇ ಗ್ರಹಾಂಶನ್ಯಾಸಧೈವತಾ |
ಗಪನ್ಯಾಸಾ ಧಭೂಯಿಷ್ಠಾ ರಿಹೀನಾ ಮೃದುಷಡ್ಜಿಕಾ
ಧತಾರಾ ಪಂಚಮೇನಾಪಿ ರಹಿತಾ ಯಾಷ್ಟಿಕೇ ಮತೇ |
(ಸಂರಾಜ ೨.೨.೧.೧೦೩೮: ೩೯೪)

೮೯೨. ವಿಶುದ್ಧಾ : ಇದರ ನಂತರ ಪ್ರಸಂ.ದಲ್ಲಿ ದಾಕ್ಷಿಣಾತ್ಯಾ ಎಂಬ ಪಾಠವಿದೆ. ಇದು ಮುಂದಿನ ರಾಗದ ಲಕ್ಷಣಕ್ಕೆ ಲಿಪಿಕಾರನು ಕೊಟ್ಟ ಶೀರ್ಷಿಕೆಯಿರಬಹುದು.

೮೯೩ಇಈ. – ಯೋಶ್ಚೈವರ್ಷಭ-: ಯೋಸ್ತು+ಋಷಭ (ಪ್ರಸಂ)

೮೯೩ಈ. –ರ್ಗತಿ : ಸ್ತಥಾ (ಪ್ರಸಂ)

೮೯೩ಉ. ವಿಭಾಷಾ : ಕಲ್ಲಿ.(ಅದೇ: ೧೪೦) ಮತ್ತು ಸಂರಾಜ (೨.೨.೧.೧೦೪೬:೩೯೫)ಗಳ ಅಭಿಪ್ರಾಯದಂತೆ ದಾಕ್ಷಿಣಾತ್ಯಾರಾಗವು ಭಾಷಾ, ವಿಭಾಷಾ ಅಲ್ಲ.

೮೯೩ಉ. ದಾಕ್ಷಿಣಾತ್ಯಾ ಚ : ‘ಷಾಡವ ಚೇಯಂ’ (ಪ್ರಸಂ). ಆದರೆ ಉದಾಹರಣದಲ್ಲಿ ಸಂಚಾರವು ಸಂರ್ಪೂವಾಗಿದೆ; ಷಾಡವವಲ್ಲ. ಲಕ್ಷಣದಲ್ಲಿ ಷಾಡವವಾಗಲು ಬಿಡಬೇಕಾದ ಸ್ವರವನ್ನು ನಿರ್ದೇಶಿಸಿಲ್ಲ; ಕಲ್ಲಿ. (ಅದೇ: ೧೪೦)ನ ಉದ್‌ಋತಿಯಲ್ಲಿ ‘ಪಂಚಮದುರ್ಬಲಾ’ ಎಂಬ ಸೂಚನೆಯಿದೆ. ಇದರ ಸೂಚನೆಯು ಉದಾಹರಣದಲ್ಲೂ ಇದೆ.

೮೯೩ಉ. ಷಡ್ಜಸಂಭವಾ: ಭಿನ್ನಷಡ್ಜಸಂಭವಾ ಎಂಬುದು ತಾತ್ಪರ್ಯ: ಹೋಲಿಸಿ ;

ತಥೈವ ದಾಕ್ಷಿಣಾತ್ಯಾಸ್ತಿ ಭಿನ್ನಷಡ್ಜೇ ಧಮಂದ್ರಿಕಾ |
ಷಡ್ಜತಾರಸ್ವರಾ ಧಾಂಶಗ್ರಹನ್ಯಾಸಾ ನಿದೋಲಿತಾ |
ನಿಯೂಕ್ತವ್ಯಾ ಚ ಸಂತಾಪೇ ಪ್ರಿಯಸ್ಯ ಸ್ಮರಣೇsಪಿ ಚ |
ವಿಭಾಷೇತಿ ಪುನರ್ಭಾಷಾಮಿಮಾಮಾಚಷ್ಟ ಯಾಷ್ಟಿಕಃ
(ಸಂರಾಜ. ೨.೨.೧.೧೦೪೫, ೧೦೪೬:೩೯೫)

೮೯೫ಇ. ಗಾಂಧಾರ : ಗಾಂಧಾರೋ (ಪ್ರಸಂ)

೮೯೫ಇ. – ಸ್ಯಾತ್ರ : – ಶ್ಚೇತಿ (ಪ್ರಸಂ)

೮೯೫ಉ. ಹ್ಯೇಷಾ : ಹಾ + (ಪ್ರಸಂ)

೮೯೭ಆ. ಪಂಚಮೋಜ್ಝೆತಾ: ಪಂಚಮಾಹಿತಾ (ಪ್ರಸಂ)

೮೫೦ಉ. ವಿಭಾಷಾ : ಕಂಠೀರಾಗವನ್ನು ಕಲ್ಲಿ. (ಅದೇ:೧೪೧) ಮತ್ತು ಸಂರಾಜ. (೨.೨,೧.೧೦೫೩:೩೯೬)ಗಳಲ್ಲಿಭಾಷಾರಾಗವೆಂದು ನಿರೂಪಿಸಿದೆ, ವಿಭಾಷಾ ಎಂದಲ್ಲ. ಸಂರಾಜ (ಅದೇ)ದಲ್ಲಿ ಶ್ರೀಕಂಠೀರಾಗಲಕ್ಷಣವನ್ನು ಹೀಗೆ ವರ್ಣಿಸಿದೆ:

ಧೈವತಾಂಶಗ್ರಹನ್ಯಾಸಾ ತ್ಯಕ್ತಪಾ ಧೈವತಾಲ್ಪಿಕಾ |
ಗತಾರಾ ಮಂದ್ರಧಾ ಚಾಪನ್ಯಾಸೇನರ್ಷಭಭೂಷಿತಾ |
ಶ್ರೀಕಂಠೀ ಭಿನ್ನಷಡ್ಜೋತ್ಥಾ ಭವೇದುತ್ಕಂಠಿತೇ ಜನೇ |
ಯಾಷ್ಟಿಕಃ ಪ್ರನರಾಚಷ್ಟ ರಿಲೋಪಾತ್‌ ಷಾಡವಾಮಿಮಾಮ್‌ ||

೮೯೯ಆ. ತು : (ತು)(ಪ್ರಸಂ)

೮೯೯ಇ. ಪಂಚಮಾನಾಂ : ಒಂದು ಅಕ್ಷರದಷ್ಟು ಅದಕಛಂದಸ್ಸಿದೆ. ಮದ್ಯರ್ಷಭ – ಎಂದು ಅಥವಾ – ಪಂಚಮನಂ ಎಂದು ತಿದ್ದಿಕೊಳ್ಳಬೇಕು. ಪಂಚಮಗಮನಂ (ಪ್ರಸಂ)

೮೯೯ಈ. ಧೃಶ್ಯತೇ ಘನಮ್‌ : ಧೃಶ್ಯತೇs೦ಧನಮ್‌(ಪ್ರಸಂ)(ಸದೃಶಾಕ್ಷರ ಪ್ರಮಾದದಿಂದ)

೯೦೦ಆ. ಚಾತಿ : ಚಾ (ನಿ?ತಿ) (ಪ್ರಸಂ)

೯೦೧ಈ. ಗಮಕೃಃ : ಗಧಕೈ (ಪ್ರಸಂ)

೯೦೧ಅ. ರಿಮಾ: ರಿಕಾ (ಪ್ರಸಂ)

೯೦೩ಆ. ಬಾಂಗಾಲೀ : ಬಂಗಾಲೀ (ಪ್ರಸಂ)

೯೦೩ಇಈ. ಏಷಾ ವೈ ಸರಸಾ ಭಾಷಾ ಧೈವತ : ಏಷಾ ಭಾಷಾ ರಸಾ ಚ+ದೈವತ (ಪ್ರಸಂ)

೯೦೩ಉ. ಲಕ್ಷ್ಮಾಚ : ಸೂಕ್ಷ್ಮಶ್ಚ (ಪ್ರಸಂ)

೯೦೪ (ಬಾಂಗಾಲೀ) : ಬಂಗಾಲೀ (ಪ್ರಸಂ)

೯೦೫ಅ. ಮಧ್ಯಮಾಂಶಾ ದೈವತಾಂತಾ : ಸಂರ (೨.೨.೧೮೨ಅ:೧೨೪)ದಲ್ಲಿ ಈ ರಾಗದ ಗ್ರಹಾಂಶ ನ್ಯಾಸಗಳು ದೈವತವೆಂದಿದೆ.

೯೦೫ಅ. ಪಂಚಮರ್ಷಭದುರ್ಬಲಾ : ಸಂರ. (ಅದೇ)ದಲ್ಲಿ ಪಂಚಮರಿಷಭಗಳು ಲುಪ್ತವೆಂದೇ ಹೇಳಿದೆ.

೯೦೫ಉ. ಸಂಭೂತಾಂ : ಸಂಭೂತಾ (ಪ್ರಸಂ)

೯೦೬ಅ. 1ಮಾ : ನೀ (ಪ್ರಸಂ)

೯೦೬ (ಸೈಂಧವೀ) : ಇದರ ನಂತರ ಪ್ರಸಂ.ದಲ್ಲಿ (ಸೈಂಧವೀ?) ಎಂಬ ಅಧಿಕಪಾಠವಿದೆ.

೯೦೭ಅ. ಕಾಲಿಂಗೀ : ಕಾಲಿಂದೀ (ಪ್ರಸಂ)

೯೦೮ಅ. ಹ್ಯಂತರಭಾಷಾ : ಕಾಲಿಂಗಿಯೂ ಕಲ್ಲಿ. (ಅದೇ: ೧೪೦)ನಲ್ಲಿ ಭಾಷಾರಾಗ; ಅವನಲ್ಲಿಯೇ (ಅದೇ ೧೪೧) ಅದು ವಿಭಾಷಾರಾಗವೂ ಹೌದು. ಸಂರಾಜ (೨.೨.೧.೧೦೭೬:೩೯೮) ದಲ್ಲಿ ಕಲಿಂಗಜಾ ಎಂಬ ಅಂತರಭಾಷಾರಾಗವು ಬೃಹಯ ಕಾಲಿಂಗೀರಾಗದ ಲಕ್ಷಣಕ್ಕೆ ಸಮೀಪವಾಗಿದೆ.

೯೦೮ಅ. ಕಾಲಿಂಗೈಃ : ಕಾಲಿಂಗೇ (ಪ್ರಸಂ)

೯೦೮ಈ. ಪಂಚಮಾದನುಗೀಯತೇ : ಹೋಲಿಸಿ :

ಯಾ ಭಿನ್ನಷಡ್ಜೇ ಕಾಲಿಂಗೀ ಯಾಷ್ಟಿಕೇನ ಪುರೋದಿತಾ |
ಸೈವ ಭಾಷಾಂಗಮಮಲಾ ಪರಿಣಾಮಮುಪೇಯುಷೀ ||
(ಸಂರಾಜ.೨.೨.೩.೧೦೬:೪೩೪)

೯೦೯. (ಕಾಲಿಂಗೀ): ಕಾಲಿಂದೀ (ಪ್ರಸಂ)

೯೧೦ಅ. ಧೈವತಾಂಶಾ : ಧೈವತನ್ಯಾಸಾ (ಪ್ರಸಂ); ಕಲ್ಲಿ. (ಅದೇ : ೧೪೦)ನ ಉದ್ದೃತಿಯಲ್ಲಿರುವ ‘ಸಾಂತಾ ಧಾಂಶಾ’ ಎಂಬುದರ ಆಧಾರದಿಂದ ಹೀಗೆ ತಿದ್ದಿದೆ.

೯೧೦ಇಈ. ಷಡ್ಜ—ಸ್ತಥಾ : ಈ ಪಾಸಂಕಲನವನ್ನು ಕಲ್ಲಿ. (ಅದೇ೧೪೦)ನ ‘ಸಧಯೋಃ ಸಮಯೋರುಕ್ತಾ’ ಎಂಬ ಉದ್ದೃತಿಯನ್ನು ಅವಲಂಬಿಸಿ ಮಾಡಿದೆ.

೯೧೧ಇ. ಪುಲಿಂದಿಕೇತಿ : ಪುಲಿಂದಿಕೇ ತು (ಪ್ರಸಂ)

೯೧೧ಈ. – ತಾ ತಥಾ : ತಾಸ್ತಥಾ (ಪ್ರಸಂ)

೯೧೧೩ಅಆ. ಏತಾ ಯಾಷ್ಟಿಕನಿರ್ದಿಷ್ಟಾ ಭಾಷಾಃ : ಏತಾ ಯಾಷ್ಟಿಕೇನ ನಿರ್ದಿಷ್ಟಾ ಭಾಷಾಃ (ಪ್ರಸಂ)

೯೧೩ಈ. ಷಡ್ಜಪಂಚಮೌ : ಪ್ರಸಂ. ದ ‘ಧ್ವನಿಪಂಚಮೌ’ ಎಂಬ ಪಾಠವನ್ನು ಸಂರ.

(೨.೨.೧೨೨ಈ: ೧೦೧) ದ’ ಬಹುಲಮಧ್ಯಮಾ’ ಮತ್ತು ಸಂರಾಜ. ದ (೨.೨.೧.೬೬ಊ: ೩೫೦)ದ ‘ಷಡ್ಜಪಂಚಮಭೂಯಸೀ’ ಎಂಬುದರ ಆಧಾರದಿಂದ ಹೀಗೆ ತಿದ್ದಿದೆ.

೯೧೫ಈ. ದಿವ್ಯರೂಪಿಣೀ : ದ್ರವ್ಯರೂಪಿಣೀ (ಪ್ರಸಂ). ಹೋಲಿಸಿ :

ಸೌವೀರೇ ಯಾಷ್ಟಿಕೇನೋಕ್ತಾ ಸೌವೀರೀ ಯಾತ್ರ ಭಾಷಿಕಾ |
ಸೈವ ಭಾಷಾಂಗಮಿತ್ಯುಕ್ತಾ ಭಾಷಾಮರ್ಮವಿದಾಂ ವರೈ ||
(ಸಂರಾಜ ೨.೨.೩.೧೨೧:೪೩೬)

೯೧೭ಅ. ಮಧ್ಯಮಾಂಶಾ ತು ಷಡ್ಜಾಂತಾ : ಸಗ್ರಹಾಂತಾ … ಮಧ್ಯಾಮಾಂಶಾ (ಕಲ್ಲಿ. ಅದೇ. ೧೩೨) ಎಂಬ ಉದ್ದೃತಿಯು ಈ ಪಾಠದ ಸಮರ್ಥನೆಯಾಗಿದೆ.

೯೧೭ಇಈ. ಮಧ್ಯಮಪಂಚಮಾನಾಂ ತು ವೇಗವತ್ತ್ವಂ : ಸಂಗತ್ಯಾಮಪಯೋರುಕ್ತಾ (ಸಂರಾಜ. ೨.೨.೧.೬೬೧ಉ: ೩೫೦) ಎಂಬುದರೊಡನೆ ಹೋಲಿಸಿ. ಆದರೆ ಕಲ್ಲಿ (ಅದೇ: ೧೩೨)ನಲ್ಲಿ ಸಂಗತಿಯು ಸಪ-ಗಳಲ್ಲಿದೆ ಎಂದಿದೆ.

೯೧೭ಈ. ಚ : ನ (ಪ್ರಸಂ)

೯೧೭ಊ. ಮಧ್ಯಮಾ : -ಪಂಚಮಾ (ಪ್ರಸಂ)

೯೧೯ಅಆ. ಷಡ್ಜಾಂಶಾ — ಸಾ : ಸಾಧಾರಿತಾರಾಗದ ಲಕ್ಷಣಕ್ಕೂ ಉದಾಹರಣಕ್ಕೂ ಮಾತೃಕೆಗಳಲ್ಲಿ ಗ್ರಂಥ್ರಪಾತವಿದೆ. ಈ ಲಕ್ಷಣವನ್ನು ಬೇರೆ ಆಕರಗಳಿಂದ ಹೀಗೆ ಸಂಗ್ರಹಿಸಬಹುದು:

ಸೌವೀರಾ ಸಾಧಾರಿತಾ ಸ್ಯಾನ್ಮನ್ಯಾಸಾ ಸಗ್ರಹಾಂಶಿಕಾ |
ರಿಮಯೋಃ ಸಮಯೋರ್ಯುಕ್ತಗಮಕಾ ಸಕಲಸ್ವರಾ ||
(ಕಲ್ಲಿ. ಅದೇ:೧೩೨)

ಸೌವೀರಕಸಮುತ್ಪನ್ನಾ ಭಾಷಾ ಸಾಧಾರಿತಾಹ್ವಯಾ |
ಷಡ್ಜಗ್ರಹಾಂಶಾ ಸಂಪೂರ್ಣಾ ಮಧ್ಯಮಸ್ವರವಿಶ್ರಮಾ |
ಷಡ್ಜಧೈವತಸಂವಾದಾ ಗಾಂಧಾರರ್ಷಭಸಂಗತಾ |
ಸಾಸಾಸಧಾನೀ(?) ಸಗಸಾ ಸಗಾರೀಸಾ ಧನೀಪಮರಿಗಾಮಮ
(ಇತ್ಯಾಲಾಪಃ; ಸಂರಾಜ. ೨.೨.೧.೬೫೭, ೬೫೮: ೩೫೦)

೯೧೯ಆ. ಸಾಧಾರಿತಾ ತು ಸಾ : ಸಾಧಾರಿ(ಧಾ?ಆ) (ಪ್ರಸಂ)

೯೨೦ಅ-ಈ. ನಿಷಾದಾಂತಾ—ಸದಾ : ಹೋಲಿಸಿ

ನಿಷಾದಾಂಶಗ್ರಹಾ ಷಡ್ಜನ್ಯಾಸಾಲ್ಪ ರ್ಷಭನಿಸ್ವನಾ |
ಬಹುಮಧ್ಯಮಗಾಂಧಾರಾ ಸೌವೀರಕಸಮುದ್ಭವಾ ||
ಭಾಷಾ ಗಾಂಧಾರಿಕಾ ನಾಮ ಪೂರ್ಣಾ ಸ್ಯಾತ್‌ಕರುಣೇ ರಸೇ ||
(ಸಂರಾಜ. ೨.೨.೧.೬೫೯:೩೫೦)

೯೨೧. ಗಾಂಧಾರೀರಾಗಲಕ್ಷಣದಲ್ಲಿ ರಿಷಭವು ಅಲ್ಪವೆಂದಿದ್ದರೂ ಉದಾಹರಣದಲ್ಲಿ ಅದು ಇಲ್ಲವೇ ಇಲ್ಲ.

೯೨೧ ಇದರ ನಂತರ ಶೀರ್ಷಿಕೆ: ಭಿನ್ನಪಂಚಮ : ಭಿನ್ನಪಂಚಮೇ s‌ಸ್ಯ(ಪ್ರಸಂ)

೯೨೨ಆ. ಸಂಪೂರ್ಣಾ : ಆದರೆ ಉದಾಹರಣದಲ್ಲಿ ರಿಷಭವು ಪೂರ್ತಿಯಾಗಿ ಲೋಪವಾಗಿದೆ.

೯೨೩ಇ. ರಂಜನಂ : ರಂಜಕಂ (ಪ್ರಸಂ)

೯೨೫-೯೨೬. ಮಧ್ಯಮಾಂಶಾ — ಕಿಲ: ಹೋಲಿಸಿ :

ವಿಬಾಷಾ ರಾಗರಾಜಸ್ಯ ಪಂಚಮಸ್ಯ ವರಾಟಿಕಾ |
ಅಂಶಃ ಷಡ್ಜಗ್ರಹನ್ಯಾಸಃ ನಿತಾರಾ ಮಂದ್ರಮಧ್ಯಮಾ |
ಸಮಶೇಷಸ್ವರಾ ಪೂರ್ಣಾ ಶೃಂಗಾರೇ ಯಾಷ್ಟಿಕೋದಿತಾ ||
(ಭಕೋ: ೫೮೪, ಜಗದೇಕಮಲ್ಲನಿಂದ ಉದ್ಧಿರಿಸಿದೆ.)

೯೨೭. [ವರಾಟೀ]: (ವರಾಟೀ) (ಪ್ರಸಂ)

೯೨೮ಆ. [ಧೈವತಶ್ಚ]: ++++ (ಪ್ರಸಂ)

೯೨೮ಈ. ದ್ರುತ-: ದ್ರುತಂ (ಪ್ರಸಂ)

೯೨೯ಅ. ತಾರಮಂದ್ರಗತಿಂ : ತಾರಮ(೦ತ್ರ?೦ದ್ರ) (ಪ್ರಸಂ)

೯೨೮-೯೨೯ ಮಂದ್ರೇ — ಸಂಭವಾ : ಹೋಲಿಸಿ :

i           ತಥೈವ ಪಂಚಮೇ ಭಿನ್ನೇ ಮಧ್ಯಮಗ್ರಾಮಗಾನಯುಕ್‌ |
ಮಧ್ಯಮಾಂಶಗ್ರಹಾ ಧಾಂತಾ ಮಂದ್ರರ್ಷಭಭೂಷಿತಾ ||

ಮಧ್ಯಮರ್ಷಭಸಂವಾದಾ ಋಷಭಸ್ವರದುರ್ಬಲಾ |
ದ್ರುತಮಧ್ಯಲಯಾ ತಾರಷಡ್ಜಾ ಸ್ಫುರಿತಧೈವತಾ ||

ಪೂರ್ಣಾರೋಹ್ಯವರೋಹಿಭ್ಯಾಂ ವರ್ಣಾಭ್ಯಾಮುಪಶೋಭಿತಾ |
ಲಲಿತೈರ್ಗಮಕೈರ್ಯುಕ್ತಾ ಭಾಷಾ ಧೈವತಭೂಷಿತಾ ||
(ಸಂರಾಜ. ೨.೨.೧.೮೯೮-೯೦೦:೩೭೮)

ii         ಪೂರ್ಣಾ ಧಾಂಶಗ್ರಹನ್ಯಾಸಾ ಸಧಯೋ ರಿಧಯೋರ್ಯುತಾ |
ಭಿನ್ನಪಂಚಮಸಂಭೂತಾ ಭಾಷಾ ಧೈವತಭೂಷಿತಾ ||
(ಕಲ್ಲಿ. ಅದೇ: ೧೩೬)

೯೩೦ಅ1 ಧಾಧಾ : ಧಾವಾ (ಪ್ರಸಂ)

೯೩೧ಈ. ಸಂಚಾರಃ ಸಧಯೋಹಿಚ ಧೈವಚ: ಸಂಚಾರೋ ಧ್ಧೈತಸ್ತಥಾ (ಪ್ರಸಂ). ಈ ತಿದ್ದುಪಡಿಯನ್ನು ಕಲ್ಲಿ (ಅದೇ: ೧೩೭)ನ ‘ಸಧಸಂಚಾರಿಣೀ ಪೂರ್ಣಾ ಪಾಂಶಾ ಧಾಂತಾ ಧಭೂಷಿತಾ] ಎಂಬ ಉದ್ಧೃತಿಯ ಹಾಗೂ ಸಂರಾಜ (೨.೨.೧.೯೦೨:೩೭೮)ದ ‘ಷಡ್ಜಧೈವತಸಂಗತಾ’ ಎಂಬ ಲಕ್ಷಣೋಕ್ತಿಯ ಆಧಾರದಿಂದ ಮಾಡಿದೆ.

೯೩೩ಇ. ಧೈವತನಿಷಾದಸಂಚಾರೋ : ಮಾಂಗಾಲೀರಾಗದಲ್ಲಿ ನಿಷಾದಧೈವತಗಳಸಂವಾದ (=ಪರಸ್ಪರಗಮನ)ವನ್ನು ಸಂರಾಜ (೨.೨.೧.೯೫೬)ವು ಹೇಳುತ್ತದೆ. ಆದರೆ ಕಲ್ಲಿ (ಅದೇ: ೧೩೮) ನು ‘ರಿಧಸಂಚಾರಾ’ ಎಂದು ಉದ್ಧರಿಸುತ್ತಾನೆ, ಇವನಲ್ಲಿ ನಿ ಎಂಬುದು ಲೇಖಕಪ್ರಮಾದದಿಂದ ‘ರಿ’ ಆಗಿದ್ದರೂ ಇರಬಹುದು.

೯೩೩ಇ. –ನಿಷಾದ – : ನಿಷಾದಃ (ಪ್ರಸಂ)

೯೩೩ಈ. ಬಹುಲಃ ಸದಾ : ಹೋಲಿಸಿ :

ಬಾಹುಲ್ಯಂ ದೃಶ್ಯತೇ ತ್ವಸ್ಯಾಃ ಸರ್ವಸ್ವರಗತಃ ಬುಧೈಃ |
(ಸಂರಾಜ. ೨.೨.೧.೯೫೬ಇಈ: ೩೮೫)

೯೩೪ಅ. ತು : (ತು) (ಪ್ರಸಂ)

೯೩೫ (ಮಂಗಲಾ) : ಮಾಂಗಾಲೀ (ಪ್ರಸಂ)

೯೩೬ (ಭಾವಿನೀ): ಮಾತೃಕೆಗಳಲ್ಲಿ ಭಾವಿನೀರಾಗವನ್ನು ಮಾಲವಪಂಚಮದ ಭಾಷಾ ಎಂದು ಉದ್ದೇಶಕ್ರಮದಲ್ಲಿ (ಇದೇ ಅಧ್ಯಾಯ, ಗ್ರಂ. ಭಾ. ೭೬೪) ಹೇಳಿದೆ. ಆದರೆ ಅದರ ಲಕ್ಷಣೋದಾ ಹರಣಗಳ ಗ್ರಂಥಾಂಶವು ಲುಪ್ತವಾಗಿದೆ. ಕಲ್ಲಿ (ಅದೇ : ೧೪೨)ನು ಭಾವನೀ ಮತ್ತು ವಿಭಾವನೀ ಎಂಬ ಎರಡು ರಾಗಗಳನ್ನು ಮಾಲವಪಂಚಮದಜನ್ಯ ವಿಭಾಷಾಗಳೆಂದು ಹೀಗೆ ನಿರೂಪಿಸುತ್ತಾನೆ:

i           ಭಾವನೀ ಪಂಚಮಾಂಶಾಂತಗ್ರಹಾ ಮಾಲವಪಂಚಮಾತ್‌ |
ಜಾತಾ ವಿಭಾಷಾ ಷಡ್ಜಾಪನ್ಯಾಸಾ ಋಷಭವರ್ಜಿತಾ ||

ii          ವಿಭಾವನೀ ವಿಭಾಷಾ ಸ್ಯಾತ್‌ಪೂರ್ಣಾ ಮಾಲವಪಂಚಮೇ |
ಪಂಚಮಾಂಶಗ್ರಹನ್ಯಾಸಾ ಮಗಧಾಲ್ಪಾ ಪಮಂದ್ರಭಾಕ್‌ ||

ಸಂರಾಜದಲ್ಲಿ ಭಾವನಿಯ ಲಕ್ಷಣವಿಲ್ಲ. ಆದರೆ ವಿಭಾವನಿಯನ್ನು ಹೀಗೆ (೨.೨.೧.೧೦೮೪: ೩೯೯)ವರ್ಣಿಸಿದೆ:

ಪಾಂಶಗ್ರಹಾಂತಾ ಸಂಪೂರ್ಣಾ ಭಾಷಾ ಮಾಲವಪಂಚಮೇ |
ವನೇಷು ಕಾಮಿನೀಸಂಗೇ ನಿಯೋಜ್ಯಾ ಋಷಿಕೈರ್ನರೈಃ ||
ವಿಭಾವನೀತಿ ತಾಮೇವಾಚಷ್ಟ ಯಾಷ್ಟಿಕಸತ್ತಮಃ ||

೯೩೭ಆ. ಮಾಲವಪಂಚಮೀ : ಇದರ ಹೆಸರನ್ನು ಬೃಹ.ಯ ಉದಾಹರಣದಲ್ಲೂ ಸಂರಾಜ (೨.೨.೧.೯೦೫: ೩೭೮)ದಲ್ಲೂ ಮಾಲವಾ ಎಂದು ಮಾತ್ರ ತೋರಿಸಿದೆ.

೮೮೯ಇ. ಷಡ್ಜರ್ಷಭಸಂವಾದಃ : ಹೋಲಿಸಿ :

ಸಂಚಾರಃ ಸಧಯೋರ್ಯಸ್ಯಾಂ ರಿಧಯೋಶ್ವೈವ ದೃಶ್ಯತೇ (ಕಲ್ಲಿ. ಅದೇ: ೧೩೭)

೯೩೭ಈ. ಷಡ್ಜಧೈವತಯೋಸ್ತಥಾ : ಹೋಲಿಸಿ: ಬಹುಧೈವತಯೋಸ್ತಥಾ (ಕಲ್ಲಿ. ಅದೇ)

೯೩೭ಉ. ಸಂಪೂರ್ಣಾ : ಆದರೆ ಉದಾಹರಣದಲ್ಲಿ ಷಡ್ಜವೇ ಇಲ್ಲ.

೯೩೯ಆ. ಭಿನ್ನವಾಲಿಕಾ : ಭಿನ್ನಲಾಲಿಕಾ (ಪ್ರಸಂ); ಭಿನ್ನವಲಿತಾ (ಸಂರ.೨.೧.೩೦ಇಈ : ೧೧; ಸಂರಾಜ. ೨.೨.೧.೧೩೧ಇ: ೨೭೫): ಭಿನ್ನಲಲಿತಾ (ಸಂರಾಜ. ೨.೨.೧.೮೮ಅ: ೨೭೨:); ಭಿನ್ನವಲ್ಲಿಕಾ (ಅದೇ ೨.೨.೧.೯೦೭:೩೭೯); ಭಿನ್ನವಲಿಕಾ (ಬೃಹ.೭೭೧) ಎಂಬುದನ್ನು ಛಂದೋಸೌಕರ್ಯಕ್ಕಾಗಿ ಭಿನ್ನವಲ್ಲಿಕಾ ಎಂದು ಮಾರ್ಪಡಿಸಿಕೊಂಡಿರಬಹುದೆಂದೂ ಭಿನ್ನವ(ವಾ)ಲಿ(ಲ್ಲಿ)ಕಾ ಎಂಬ ಪದವು ಲೇಖನಪ್ರಮಾದದಿಂದ ಭಿನ್ನಲ(ಲಾ)ಲಿತಾ ಎಂದು ಮಾತೃಕೆಗಳಲ್ಲಿ ಬದಲಾಗಿರಬಹುದೆಂದೂ ದ್ವಿಸಂ.ರು ಅಭಿಪ್ರಾಯಪಟ್ಟಿದ್ದಾರೆ.

೯೩೯ಇ. ಬಾಹುಲ್ಯಂ : – ಬಾಹುಲ್ಯಾ (ಪ್ರಸಂ)

೯೪೦ಅ. ಕ್ವಚಿದ್‌ದೃಷ್ಟಂ : ಕಿಂಚಿದ್‌ಹೃಷ್ಟಂ (ಪ್ರಸಂ) ಎಂಬ ಪಾಠವು ಅಕ್ಷರಸಾದೃಶ್ಯಪ್ರಮಾದದಿಂದ ಉಂಟಾಗಿದೆ.

೯೪೧. (ಭಿನ್ನವಾಲಿಕಾ): (ಭಿನ್ನಲಾಲಿತಾ) (ಪ್ರಸಂ)

೯೪೨ಅ. ಗಾಂಧಾರಾಂಶಾ ಧೈವತಾಂತಾ : ಮಗ್ರಹಾಂಶಾ (ಕಲ್ಲಿ. ಅದೇ : ೧೩೭)

೯೪೩ಅ-ಊ. ಗಾಂಧಾರಾಂಶಾ….. ಸುಮನೋಹರಾ : ಹೋಲಿಸಿ :

ಪಂಚಮಾಂಶಗ್ರಹಾ ಧಾಂತಾ ಪೂರ್ಣಾ ಮಧ್ಯಮಭೂಯಸೀ |
ಮಧ್ಯಮಗ್ರಾಮಗಾ ಭಾಷಾ ಧನಿಸಂಗತಿರಾಜಿತಾ |
ದ್ರಾವಿಡೀ ದೇಶನಾಮ್ನೇಯಂ ವಿಖ್ಯಾತಾ ಯಾಷ್ಟಿಕೋದಿತಾ |
(ಸಂರಾಜ.೨.೨.೧.೯೧೨:೩೭೯)

ಆದರೆ ದ್ರಾವಿಡೀರಾಗದ ಉದಾಹರಣೆಯು ಬೃಹ. (೯೪೨) ಕಲ್ಲಿ. ಸಂರಾಜ ಅಥವಾ ಬೇರೆಡೆಗಳಲ್ಲಿರುವ ಪರಸ್ಪರ ಭಿನ್ನಲಕ್ಷಣಗಳಲ್ಲಿ ಯಾವುದಕ್ಕೂ ಅನುಸಾರವಾಗಿಲ್ಲ.

೯೪೪ಆ. –ಷಾಡವಾ: – ಷಾಡವೇ (ಪ್ರಸಂ)

೯೪೪ಇ. ದ್ವಿಶ್ರುತ್ಯೋಃ ಸ್ಯಾಚ್ಚ : (ವಿ?ದ್ವಿ)ಶ್ರುತಿಭ್ಯಾಂ ಚ (ಪ್ರಸಂ). ದ್ವಿವಚನದ ತೃತೀಯಾ ವಿಭಕ್ತಿಯನ್ನು ದ್ವಿವಚನದ ಷಷ್ಠೀವಿಭಕ್ತಿಗೆ ಬದಲಾಯಿಸಿದೆ. ; ಏಕೆಂದರೆ ತೃತೀಯಾ ವಿಭಕ್ತಿಯು ಇನ್ನೊಂದು ನಾಮಪದವನ್ನು (ಇಲ್ಲಿ, ಇನ್ನೊಂದು ಸ್ವರವನ್ನು) ಸಂವಾದಕ್ಕಾಗಿ (ಎಂದರೆ ಪರಸ್ಪರಗಮನಕ್ಕಾಗಿ) ಅಪೇಕ್ಷಿಸುತ್ತದೆ. ಕಲ್ಲಿ. (ಅದೇ:೧೪೧)ನು ‘ನಿಗಯೋ ರಿಗಯೋರ್ಯುಕ್ತಾ’ ಎಂದು ಉದ್ಧರಿಸಿಕೊಂಡಿದ್ದಾನೆ.

೯೪೫ಅ. ಸುಸಂಪೂರ್ಣಾ -: ಹೋಲಿಸಿ:

ಸಂಪೂರ್ಣಾ, ಪಂ ವಿನಾ ಬಾಹ್ಯಷಾಡವಾ ಕೃಶ್ಚಿದಿಷ್ಯತೇ
(ಸಂರಾಜ. ೨.೨.೧.೧೦೭೯ ಉಊ: ೩೭೯)

೯೪೬ಅ. ಮಾಮಾ1: ಸಾಸಾ (ಪ್ರಸಂ)

೯೪೬ (ಬಾಹ್ಯಷಾಡವಾ): ಬಾಹ್ಯಷಾಡವಮ್‌(ಪ್ರಸಂ)

೯೪೭ಈ. ನಾದಾಖ್ಯಾ: ನಟ್ಟಾ (ಸಂರಾಜ. ೨.೨.೧.೧೦೮೧ಆ:೩೯೯); ಇದು ಅಕ್ಷರಸಾದೃಶ್ಯದಿಂದ ಆಗಿರಬಹುದಾದ ಲೇಖನಪ್ರಮಾದ. ಸಂರಾಜದಲ್ಲಿ ನಟ್ಟಾ ಎಂಬುದು ಸಂಪೂರ್ಣರಾಗವಾಗಿದೆ.

೯೪೮ಈ. ಲೋಕಾನಾಂ ರಂಜಿಕಾ ಮತಾ : ಲೋಕಿನೀ ರಂಜಿಕಾಮಿಕಾ (‌ಪ್ರಸಂ)

೯೫೦ಈ. ಗೀತಕೋವಿದೈಃ : ಸಾಧಾರಣಾ (ಉದಾ?) (ಪ್ರಸಂ). ಸಾಧಾರಣಾ ಎಂಬುದು ಮಾತೃಕೆಯಲ್ಲಿ ಪುನರ್ಲೇಖನಪ್ರಮಾದ (ಡಿಟ್ಟೊಗ್ರಫಿ)ದ ಪರಿಣಾಮವಾಗಿಯೂ ಉದಾ. ಎಂಬುದು (ಮುಂದೆ ಲೋಪವಾಗಿರುವ) ಉದಾ (ಹರಣ)ದ ಪ್ರಾರಂಭಕಾಕ್ಷರಗಳಾಗಿಯೂ ಇರಬಹುದು.

೯೫೦ಊ. ತಾನೋದ್ಭವಾ : ತಾನಾ ಎಂಬ ಭಾಷಾರಾಗದ ಲಕ್ಷಣವನ್ನು ಸಂರಾಜ (೨.೨.೧.೧೦೯೭-೧೦೯೯:೪೦೧)ದಲ್ಲಿ ಹೀಗೆ ನಿರೂಪಿಸಿದೆ;

ಪಂಚಮಾಂಶಾಂತಿಮಾ ತಾನಾ ಭಿನ್ನತಾನೇ ರಿವರ್ಜಿತಾ |
ಸಕಾಕಲಿಕಾ ಶೃಂಗಾರೇ ವಿನಿಯುಕ್ತಾ ಪುರಾತನೈಃ ||
……………………………
ತಾನಾ ಭಾಷೈಕಿಕಾ ಭಿನ್ನತಾನೇ ಯಾಷ್ಟಿಕಸಮ್ಮತಾ ||

ಈ ಲಕ್ಷಣವು ತಾನೋದ್ಭವಾಗೆ ಅಪ್ರಸ್ತುತವೆಂದು ತೋರುತ್ತದೆ.ಏಕೆಂದರೆ ಅದರ ಲಕ್ಷಣದಲ್ಲಿ ರಿಷಭಹೀನತೆಯಿದ್ದರೆ ತಾನಾದ ಉದಾಹರಣದಲ್ಲಿ ರಿಷಭವು ಸ್ಪಷ್ಟವಾಗಿ ಪ್ರಯುಕ್ತವಾಗಿದೆ. ಈ ರಾಗಗಳ ಹೆಸರುಗಳು ಭಿನ್ನವಷ್ಟಎ. ತಾನೋದ್ಭವಾ ಎಂಬ ಹೆಸರು ಅನ್ವರ್ಥವಾಗಿದ್ದ ಪಕ್ಷದಲ್ಲಿ. ಅದು ತಾನಾರಾಗದ ರಿಲೋಪದಿಂದ ಉದ್ಭವವಾಗಿರಬಹುದು.