೯೫೨. (ಗಾಂಧಾರೀ): ಮಾತೃಕೆಗಳಲ್ಲಿ ಗಾಂಧಾರೀರಾಗದ ಲಕ್ಷಣವು ಕಳೆದುಹೋಗಿದೆ. ಗ್ರಂಥಾಂತರಗಳಿಂದ ಅದನ್ನು ಹೀಗೆ ಸಂಗ್ರಹಿಸಬಹುದು.

i           ಗಾಂಧಾರಪಂಚಮೇ ಭಾಷಾ ಗಾಂಧಾರೀ ಸಗಭೂಷಿತಾ |
ಧಾದ್ಯಂತಾ ಸರ್ವಲೋಕಸ್ಯ ಹೃದ್ಯಾ ಸ್ತ್ರೀಣಾಂ ವಿಶೇಷತಃ ||
(ಕಲ್ಲಿ. ಅದೇ : ೧೩೯)

ii          ಗಾಂಧಾರಪಂಚಮೇ ರಾಗೇ ಗಾಂಧಾರೀ ಭಾಷಿಕೈಕಿಕಾ |
ಧೈವತಾಂಶಗ್ರಹನ್ಯಾಸಾ ಷಡ್ಜಮಧ್ಯಮಭೂಯಸೀ |
ಗಾಂದಾರಬಹುಲಾ ವಾsಪಿ ಷಡ್ಜಗ್ರಾಮನಿವಾಸಿನೀ ||
(ಸಂರಾಜ.೨.೨.೧.೧೦೦೬:೩೯೦)

೯೫೩ಅ. ಮಧ್ಯಮಾಂತಾ : ಮಧ್ಯಮಾಂಶಾ (ಪ್ರಸಂ)

೯೫೪ಇ. ಸಂಭೂತಾ : ಸಂಪೂತಾ (ಪ್ರಸಂ)

೯೫೪ಇಈ. ಶಕರಾಗೇ…..ಪಂಚಮಷಾಡವೇ : ಶಕಭಾಷಾ ಎಂಬ ಒಂದು ರಾಗವು ಶಕದ ಜನ್ಯವೆಂದು ಈ ಶ್ಲೋಕರ್ಧದಲ್ಲಿದೆ; ಆದರೆ ಇದು ಬೇರೆಡೆ ಗೋಚರಿಸುವುದಿಲ್ಲ. ಕಲ್ಲಿ (ಅದೇ :೧೪೨)ನು ಶಕ ಎಂಬ ಭಾಷಾರಾಗವನ್ನು ರೇವಗುಪ್ತದಲ್ಲಿ ಜನ್ಯವೆಂದು ಉದ್ಧರಿಸಿಕೊಳ್ಳುತ್ತಾನೆ :

ಸನ್ಯಾಸಾ ರೇವಗುಪ್ತಸ್ಯ ಭಾಷಾ ಮಾಂಶಾ ಶಕಹ್ವಯಾ |
ಗಪಾಭ್ಯಾಂ ಬಹುಲಾ ರಿಧಾಭ್ಯಾಂ ಭೂಯಸೀ ||

ಇದು ಶಕರಾಗಕ್ಕೆ ಮತಂಗನು ನಿರೂಪಿಸಿದ ಲಕ್ಷಣಕ್ಕಿಂತ ಬೇರೆಯಾದುದು. ಆದರೆ ಶಕಭಾಷಾ ಎಂಬುದು ಪಂಚಮಷಾಡವದ ಜನ್ಯವೇ ಎಂದು ಸಂರಾಜ(೨.೨.೧.೧೧೦೦, ೧೧೦೧:೪೦೧)ದಲ್ಲಿ ಹೇಳಿದೆ. ಅದರ ಲಕ್ಷಣ ಮತಂಗನು ನಿರೂಪಿಸಿರುವುದಕ್ಕೆ ಪರಸ್ಪರವಾಗಿದೆ :

ಋಷಭಾಂಶಾ ಮಧ್ಯಮಾಂತಾ ಸಂಪೂರ್ಣ ಗಪಭೂಯಸೀ |
ರಿಧಯೋಃ ಸಂಗತಾ ಪ್ರೋಕ್ತಾ ರಾಗೇ ಪಂಚಮಷಾಡವೇ |
ಶಕಭಾಷಾಹ್ವಯಾ ಯಾ (s)ಸ್ಯಾ ಆಲಾಪಃ ಸಮುದೀರ್ಯತೇ || (೧೧೦೦)
ರಿ ರಿ ರಿ ಮ ಗ ಮಾ ರಿ ಮಾ ಮ ಗ ರೀ ಗ ರಿ ಸಾ ಮ ಧಾ |
ಧ ನಿ ಸಾ ಸ ಧ ನೀ ಮಾ ಗ ಗ ರಿ ಮಾ ರಿ ಗ ಮಾ ಮಾ ಮಾ || (೧೧೦೧)

ಕಲ್ಲಿ (ಅದೇ : ೧೪೨)ನು ಪಂಚಮಷಾಡವಜನ್ಯವಾದ ಪೋತಾರಾಗವನ್ನು

ಋಷಭಾಂಶಗ್ರಹನ್ಯಾಸಾ ಧಹೀನಾ ನಿಸಭೂಯಸೀ |
ಪೋತಾ ಪ್ರೋಕ್ತಾ ಮತಂಗೇನ ಭಾಷಾ ಪಂಚಮಷಾಡವೇ ||

ಎಂದು ವರ್ಣಿಸಿದರೆ, ಇದೇ ಲಕ್ಷಣವು ಸಂರಾಜ(೨.೨.೧.೧೧೦೨:೪೦೧)ದಲ್ಲಿ ಪಂಚಮ ಷಾಡವಜನ್ಯವಾದ ರೇವಗುಪ್ತ ಎಂಬ ಭಾಷಾರಾಗದ ಲಕ್ಷಣಕ್ಕೆ ಸಂಪೂರ್ಣವಾಗಿ ಪರಸ್ಪರವಾಗಿದೆ :

ಋಷಭಾಂಶಗ್ರಹನ್ಯಾಸ ನಿಭೂಯಿಷ್ಟಾ ಧದುರ್ಬಲಾ |
ರೇವಗುಪ್ತಾ ಸ್ಮೃತಾ ಭಾಷಾ ರಾಗೇ ಪಂಚಮಷಾಡವೇ ||

ಪೋತಾರಾಗವನ್ನು ಸಂರಾಜ(೨.೨.೧೦೦ಇಈ:೨೭೩)ದ ಉದ್ದೇಶಕ್ರಮದಲ್ಲಿ ಪಂಚಮಷಾಡವ ಜನ್ಯವನ್ನಾಗಿ ಹೇಳಿದೆ ಆದರೆ ಲಕ್ಷಣವನ್ನು ಕೊಡುವುದಿಲ್ಲ.

೯೫೬ಅಆ. ………… : ಪೋತಾರಾಗಲಕ್ಷಣಕ್ಕೆ ಮೂಲಗ್ರಂಥದಲ್ಲಿ ಲೋಪವಿದೆ.

೯೫೬ಎ. ಇಈ. [ಪೋತಾರಾಗಸ್ತು] ಎಂಬಷ್ಟನ್ನು ಅಂತಃಸಾಕ್ಷ್ಯಗಳಿಂದ ಪುನಾರಚಿಸಿ ಶ್ಲೋಕಾರ್ಧದ ಉಳಿದ ಭಾಗವನ್ನು ೯೫೬ ಗ್ರಂಥಭಾಗದಿಂದ (+ತ್) ಎಂಬುದನ್ನು ಸೇರಿಸಿ ಗ್ರಂಥಪೂರಣ ಮಾಡಿದೆ.

೯೫೭ಬಿ. ಲೋಪವಾಗಿರುವ ಪೋತಾರಾಗಲಕ್ಷಣವನ್ನು ಮತಂಗಾನುಸಾರವಾದ ಕಲ್ಲಿನಾಥೋದ್ಧೃತಿಯಿಂದ ಒದಗಿಸಿ ಅನುವಾದಮಾಡಿದೆ. ‘ಇತಿ ಪಂಚಮಷಾಡವೇ’ ಎಂಬ ಸಮಾಪ್ತಿವಾಕ್ಯಖಂಡವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಗ್ರಂಥಭಾಗ ೭೭೪. ಕ್ಕೆ ಬರೆದಿರುವ ಪಾಠವಿಮರ್ಶೆಯನ್ನೂ ಇಲ್ಲಿ ಓದಿಕೊಳ್ಳಬೇಕು.

೯೫೮ಈ. ತಥಾ : ತಸ್ಯ (ಪ್ರಸಂ)

೯೫೯ಆ. ಗಾತವ್ಯಾ : ಗೀಯತೇ (ಪ್ರಸಂ)

೯೫೯ಈ. ಕೌಶಲೇ : ಕೌಶಿಲಿ (ಪ್ರಸಂ)

೯೬೦ಅ. –ದಾಹವೇ [ದೃಷ್ಟಂ] : -ದಾಹ್ವಯೇ ++ (ಪ್ರಸಂ)

೯೬೦ಆ. ದರ್ಶಯೇತ್ತಚ್ಬ ಸಾ : ನಾಸಿಯೇತ್ + ತತ್ (ಪ್ರಸಂ)

೯೬೦ಇ. ಸರ್ವತ್ರ ಗ್ರಾಮ- : ಸರ್ವಂತ್ರಾಮ- (ಪ್ರಸಂ)

೯೬೧. ಭಾಷಾಲಕ್ಷಣಾಧ್ಯಾಯಃ : ಭಾಷಾಧ್ಯಾಯಃ (ಪ್ರಸಂ)

ಖ. (ಶಾರ್ದೂಲಮತೇ ಭಾಷಾಲಕ್ಷಣಮ್)

ಇದನ್ನು ಬೃಹ.ಯ ನಾಲ್ಕನೆಯ ಅಧ್ಯಾಯವಾದ ಭಾಷಾಲಕ್ಷಣದ ಎರಡನೆಯ ಭಾಗವೆಂದು ದ್ವಿ.ಸಂ.ರು ಇಟ್ಟುಕೊಂಡಿದ್ದಾರೆ. ಆದರೂ ಪ್ರತ್ಯೇಕವಾದ ಅಂಶವೆಂದೇ ಭಾವಿಸಿ ಅದರ ಶೋಕಗಳನ್ನು ಬೇರೆಯಾಗಿಯೇ, ಎಂದರೆ ಒಂದರಿಂದ ಮೂವತ್ತನಾಲ್ಕರವರೆಗೆ ಎಣಿಸಿಕೊಂಡಿದ್ದಾರೆ. ಆದರೆ ಪ್ರಕೃತ ಸಂಸ್ಕರಣದಲ್ಲಿ ನಾಲ್ಕನೆಯ ಅಧ್ಯಾಯದ ಯಾಷ್ಟಿಕಮತಾನುಸಾರವಾದ ಹಾಗೂ ಶಾರ್ದೂಲಮತಾನು ಸಾರವಾದ ಎರಡು ಭಾಗಗಳನ್ನು ಮತಂಗೋದ್ಧೃತವೆಂದೂ ಬೃಹದ್ದೇಶಿಯ ಅವಿಭಾಜ್ಯಂಗವೆಂದೂ ಭಾವಿಸಿ ಅವುಗಳ ಶ್ಲೋಕ ಮತ್ತು ಗಧ್ಯಭಾಗಗಳನ್ನು ಅವಿಚ್ಛಿನ್ನವಾಗಿ ಎಣಿಸಿದೆ. ಈ ಶಾರ್ದೂಲಮತವನ್ನು ಬೃಹ.ಯ ನಾಲ್ಕನೆಯ ಅಧ್ಯಾಯವೆಂದು ಭಾವಿಸಿರುವುದರಿಂದ ದ್ವಿಸಂ. ರೂ ಹೀಗೆಯೇ ಇಂಗಿತಗೊಳಿಸಿದ್ದಾರೆ. ಆದುದರಿಂದ ಪ್ರತ್ಯೇಕ ಗಣನಎಯು ಅಸಮಂಜಸವೆಂದು ತೋರುತ್ತದೆ.

೯೬೪ಅ. ಷಡ್ಜಾಂತಾ : ಷಡ್ಜಾ(ತಾ?ತಾ) (ಪ್ರಸಂ)

೯೬೪ಆ. ಭಾಷಾ : ದೇವಾಲವರ್ಧಿನಿಯನ್ನು ಕಲ್ಲಿ (ಅದೇ : ೧೩೫)ನು ದೇವಾರವರ್ಧನೀ ಎಂಬ ಹೆಸರಿನಲ್ಲಿ ಟಕ್ಕರಾಗದ ವಿಭಾಷಾ ಎಂದು ಉದ್ಧರಿಸಿಕೊಂಡಾನೆ.

೯೬೪. ದೇವಾಲವರ್ಧಿನೀ : ದೇವಾರವರ್ಧಿನೀ (ಕಲ್ಲಿ. ಅದೇ : ೧೩೫ ; ಸಂರಾಜ. ೨.೨.೧.೭೧೯:೩೫೭)

೯೬೪ಈ. ಚಾಸಾಂ : ಚೈಷಾಂ (ಪ್ರಸಂ)

೯೬೮ಅ. ಧೈವತಾ:– (ವೈಧ? ಧೈವ)ತಾ- (ಪ್ರಸಂ)

೯೬೮ಇ. ಟಕ್ಕ- : ಶಕ- (ಪ್ರಸಂ)

೯೭೦ಆ. ತಾನವಲಿತಿಕಾsಪಿ : ಮಾನವಲಿತಿಕಾ ವಿಪಾ (ಪ್ರಸಂ)

೯೭೦ಇ. –ರಾಗಸ್ಯ : ರಾಗಸ್ಯೆಷಾ (ಪ್ರಸಂ)

೯೭೦ಈ. ಮಧ್ಯಮಾಶ್ರಿತಾ : ಮೂಢಲಾಲಿತಾ (ಪ್ರಸಂ) ; ಸಂರಾಜ (೨.೨.೧.೮೨೪ಉಊ:೩೬೯)ದಲ್ಲಿರುವ ‘ಶಾರ್ದೂಲಮುನಿಸಮ್ಮತ್ಯಾಮಧ್ಯಮಗ್ರಾಮಸಂಶ್ರಯಾ’ ಎಂಬ ಗ್ರಂಥಾಂಶವನ್ನು ಆಧರಿಸಿ ಪಾಠವನ್ನು ಹೀಗೆ ತಿದ್ದಿದೆ.

೯೭೧. (ತಾನವಲಿತಿಕಾ) : ತಾನಲಲಿತಿಕಾ (ಪ್ರಸಂ)

೯೭೨ಅ. ಗಾಂಧಾರಾಂಶಾ ತು ಷಡ್ಜಾಂತಾ : ಸಾಧಾರಣ ತು ಷಡ್ಜಂಶಾಂತಾ (ಪ್ರಸಂ) ; ಹೀಗೆ ಪಾಠವನ್ನು ರಚಿಸಲು ಎರಡು ಆಧಾರಗಳಿವೆ :

i           ದೇಶಾಖ್ಯಾ ಟಕ್ಕಜಾ ದೋಹ್ಯಾ ಗಾದ್ಯಾ ಸಾಂತಾ ರಿಫೋಜ್ಝಿತಾ (ಕಲ್ಲಿ.ಅದೇ :೧೩೫)

  1. ಗಾಂಧಾರಾಂಶಗ್ರಹಾ ಷಡ್ಜನ್ಯಾಸಾ ರಿಪವಿವರ್ಜಿತಾ (ಸಂರಾಜ. ೨.೨.೧.೭೧೬ಇಈ:೩೫೬)

೯೭೨ಇ. ಹೀನಾ ತು : ಹೀನಂ ಚ (ಪ್ರಸಂ)

೯೭೪ಆ. ವಿಹೀನಾ : ವಿ(ಹೀ)ನಾ (ಪ್ರಸಂ)

೯೭೪ಈ. ಭಾಷಾ ಚರ್ಷಭದುರ್ಬಲಾ : ++ ಋಷಭ (ಜ್ಞೇಯಾ) (ಪ್ರಸಂ) ; ಹೋಲಿಸಿ :

ನಿಷಾದಾಂಶಗ್ರಹಾ ಸಾಂತಾ ಷಾಡವಾ ಪಸ್ಯ ಲೋಪತಃ |
ಸ್ವಲ್ಪರ್ಷಭಕನಿಸ್ವಾನಾ ಷಡ್ಜಗ್ರಾಮನಿವಾಸಿನೀ ||
ಭಾಷಾ ಶರ್ದೂಲಿಕಾ ನಾಮ್ನೀ ಶಾರ್ದೂಲಮುನಿಸಮ್ಮತಾ ||
(ಸಂರಾಜ.೨.೨.೧.೭೨೮: ೩೫೮)

೯೭೬ಇ. ಟಕ್ಕರಾಗೋತ್ಥಾ : ಟಕ್ಕರಾಗಜಾ (ಪ್ರಸಂ) ; ಛಂದಃಸೌಕರ್ಯಕ್ಕೆಂದು ಹೀಗೆ ತಿದ್ದಿದೆ.

೯೭೬ಈ. ಸ್ವಧಾಮನಿ : ಸ್ವಪಾಣಿನಿ (ಪ್ರಸಂ) : ಮಾತೃಕಾಪಾಠಕ್ಕೆ ಸಮೀಪವಾಗಿರುವಂತೆ ಹೀಗೆ ಮಾರ್ಪಡಿಸಿದೆ.

೯೭೬ಈ. ಗೀಯತೇ : ಗೀಯತೇ (?) (ಪ್ರಸಂ)

೯೭೯ಆ. ಧೈವತೋಜ್ಝಿತಾ : ಧೈವತವರ್ಜಿತಾ (ಪ್ರಸಂ)

೯೭೯ಈ. ವಿದ್ರುಮೈರ್ಜನೈಃ : ದ್ವಿಸಂ. ರು ಇದನ್ನು ವಿಜನೇ[?]ಜನೈಃ ಎಂದು ಕಾರಣವನ್ನು ಕೊಡದೆ. ತಿದ್ದಿದ್ದಾರೆ. ಈ ತಿದ್ದುಪಡಿಗೆ ನಿರ್ಜನವಾದ ಸ್ಥಳದಲ್ಲಿ ಜನರು ಭಿನ್ನವಲಿತಿಕಾ ರಾಗವನ್ನು ಹಾಡುತ್ತಾರೆ ಎಂದು ಅರ್ಥ. ‘ವಿದ್ರುಮೈರ್ಜನೈಃ’ ಎಂಬ ಪ್ರಸಂ.ದ ಪಾಠಕ್ಕೆ ಹವಳದ ಮೈಬಣ್ಣದ ಜನಾಂಗದರು, ವಿದ್ರುಮ ಎಂಬ ಪರ್ವತದ ನಿವಾಸಿಗಳು, ಮರಗಳಿಲ್ಲದೆ ಪ್ರಾಂತದ (ಮರಳುಗಾಡಿನ) ಜನ ಎಂದು ಮುಂತಾದ ಅರ್ಥಗಳಿವೆ (ಮೋನಿಯರ್ ವಿಲಿಯಂಸ್, ಎ ಸಂಸ್ಕೃತ-ಇಂಗ್ಲೀಷ್‌ಡಿಕ್ಷನರಿ : ೯೫೧). ಹೀಗೆ ಪ್ರಸಂ.ದ ಪಾಠವು ಪ್ರಶಸ್ತವಾಗಿದೆ.

೯೮೦ಅ. ನಿಪಾ : ನಿಧಾ (ಪ್ರಸಂ)

೯೮೦. ಭಿನ್ನವಲಿತಿಕಾ : ಭಿನ್ನವಲಿತಕಾ (ಪ್ರಸಂ)

೯೮೧. [ಷಡ್ಜಾಂತಾ] : +++ (ಪ್ರಸಂ) ; ಈ ಪಾಠವನ್ನು ಸಂರಾಜ (೨.೨.೧.೯೧೯:೩೮೦)ದಲ್ಲಿರುವ ಈ ಲಕ್ಷಣದಿಂದ ನಿರ್ಧರಿಸಿದೆ :

ನಿಷಾದಾಂಶಗ್ರಹಾ ಸಾಂತಾ ರವಿಚಂದ್ರಾ ಧವರ್ಜಿತಾ |
ಷಡ್ಜೇ ಪ್ರೇಂಖಕಸಂಭೂತಾ ಭಾಷಾ ಗೀತಜ್ಞವಲ್ಲಭಾ ||

೯೮೧ಇಈ. (ಹಿಂದೋಲೇ ಭಾಷಾ ವೈ ಗೀಯತೇ) : +++++++++ (ಪ್ರಸಂ)

೯೫೨ಅ. ಧಾಪಾ : ಧಾಧಾ (ಪ್ರಸಂ)

೯೮೨ಆ. ಪ್ರೇಂಖಕೇ : ಪ್ರೋಕ್ಷಕೈಃ (ಪ್ರಸಂ) : ಭಿನ್ನಪೌರಾಲೀಲಕ್ಷಣವನ್ನು ಕಲ್ಲಿ! (ಅದೇ : ೧೩೮)ನು ಹೀಗೆ ಉದ್ಧರಿಸಿದ್ದಾನೆ:

ಮಧ್ಯಮಾಂಶಗ್ರಹಾ ಷಡ್ಜನ್ಯಾಸಾ ಸಪ್ತಸ್ವರಾನ್ವಿತಾ |
ಹಿಂದೋಲಭಾಷಾ ಸ್ಯಾದ್ ಭಿನ್ನಪೌರಾಲೀ ಪ್ರೇಕ್ಷಣೇ ಮತಾ ||

ಪ್ರೇಂಖಕೇ ಎಂದರೆ ಹಿಂದೋಲರಾಗದಲ್ಲಿ ; ಪ್ರೇಕ್ಷಣೇ ಎಂದರೆ ರೂಪಕ(ನಾಟಕ) ದ ದೃಶ್ಯ ; ಹೀಗೆ ಮೊದಲನೆಯದು ಜನಕರಾಗವನ್ನು ಹೇಳಿದರೆ ಎರಡನೆಯದು ವಿನಿಯೋಗವನ್ನು ವಿಧಿಸುತ್ತದೆ. ಸಂರಾಜ (೨.೨.೧.೯೫೦ವು)ವು ಈ ಎರಡೂ ಅರ್ಥಗಳನ್ನೂ ಹೇಳಿ ಅದು ಹಿಂದೋಲವಿಭಾಷಾ ಎನ್ನುತ್ತದೆ :

೯೮೩ಇ. ಭಾಷಾ : ಸಂರಾಜ(೨.೨.೧.೯೫೦:೩೮೪ ಗ್ರಂಭಾ. ೯೮೩ರ ಪಾಠವಿಮರ್ಶೆಯಲ್ಲಿ ಉದ್ಧರಿಸಿದೆ)ದಲ್ಲಿ ಇದನ್ನು ವಿಭಾಷಾ ಎಂದು ಹೇಳಿದೆ.

೯೮೫ಆ. –ದೇಶಜಾ : ದೇ(ಶಾ?ಶಜಾ) (ಪ್ರಸಂ)

೯೮೫ಈ. ಪರಿಭ್ರಷ್ಟಸ್ಯ ಮಾರ್ಗಣೇ : ಪರಿಷ್ಟಸ್ಯ ಮಾರ್ಗಣೇ (ಪ್ರಸಂ); ‘ದ್ರಾವಿಡೀ ಸ್ಯಾತ್ ಪರಿಭ್ರಷ್ಟೇ ಪಾರ್ವತ್ಯು(ತ್)ಸಾಹ-ಹರ್ಷಯೋಃ ಎಂಬ ಅಭಾ. (ನಾಶಾ.೨೬.೧೩೪ :೭೭)ದ ಲಕ್ಷಣೋಕ್ತಿಯ ಆಧಾರದಿಂದ ಹೀಗೆ ತಿದ್ದಿದೆ.

೯೮೭ಅಆ. ಗಾಂಧಾರಾಂಶಾ ತು ಷಡ್ಜಾಂತಾ: ಪ್ರಸಂ.ದಲ್ಲಿ ಈ ಗ್ರಂಥಾಂಶವು ಹೀಗಿದೆ :

ಗಾಂಧಾರಾಂಶಾ ತು ಷಡ್ಜಾಂತಾ ಪೂರ್ಣ ದ್ರಾವಿಡದೇಶಜಾ |
ಗೀಯತೇ ನಿತ್ಯಮೇವೈಷಾ ವಿಭಾಷಾ (ವಿಜರಾ? ಪಿಂಜರೀ) ಶುಭಾ ||

ಇದೀಗ ತಾನೇ ವರ್ಣಿಸಿರುವ ದ್ರಾವಿಡಿಯ ಲಕ್ಷಣಶ್ಲೊಕದ ಎರಡನೆಯ ಮತ್ತು ಮೂರನೆಯ ಪಾದಗಳು ಈ ಶ್ಲೋಕದ ಪೂರ್ವಾರ್ಧದಲ್ಲಿ ಪುನರುಕ್ತವಾಗಿರುವುದರಿಂದ ಈ ಗ್ರಂಥಾಂಶವನ್ನು ಇಲ್ಲಿ ಕೈಬಿಟ್ಟಿದೆ.

೯೮೭ಆ. ಪಿಂಜರೀ : (ವಿಜರಾ? ಪಿಂಜರೀ) (ಪ್ರಸಂ)

೯೮೭ಇ. ಚ ನಿಹೀನಾ : ನಿಷಾದಹೀನಾ (ಪ್ರಸಂ)

೯೮೮ಆ. ರಿಸಾ1 : ನಿಸಾ (ಪ್ರಸಂ

೯೯೧. ಹಿಂದೋಲಕ : ಹಿಂದೋಲಿಕ (ಪ್ರಸಂ)

೯೯೨ಅ. ಪೌರಾಲೀ : ಪೋಪಾಪಾ (ಪ್ರಸಂ) ; ಪೌರಾಲೀ ಇತಿ ಸ್ಯಾತ್ (ಪ್ರಸಂ.ಅ)

೯೯೨ಆ. ಪಂಚಮೀ : ಪಂಚಮಾ (ಪ್ರಸಂ)

೯೯೨ಇ. ಆಂಧ್ರೀ : ಅಂಧ್ರೀ (ಪ್ರಸಂ)

೯೯೩ಆ. ದೇಶಜಾ : + ದೇಶಂ ಭಾ (?) (ಪ್ರಸಂ)

೯೯೩ಈ. –ಮಿತ- : -ಮಿತಿ- (ಪ್ರಸಂ)

೯೯೩ಈ. ಕಾಮಿನೀಮಿತಸಂಗಮೇ : ಹೋಲಿಸಿ :

ವನೇಷು ಕಾಮಿನೀಸಂಗೇ ನಿಯೋಜ್ಯಾ ಋಷಿಕೈರ್ನರೈ | (ಸಂರಾಜ.೨.೨.೧.೧೦೮೪ಇಈ:೩೯೯)ಕಲ್ಲಿ. (ಅದೇ : ೧೪೨)ನ ಉದ್ಧೃತಿಯಲ್ಲಿ ವಿಭಾವಿನಿಯು ಮಾಲವಪಂಚಮದಲ್ಲಿ ವಿಭಾಷಾ ; ಅದರ ಲಕ್ಷಣವು ಹೀಗಿದೆ ;

ವಿಭಾವನೀ ವಿಭಾಷಾ ಸ್ಯಾತ್ ಪೂರ್ಣಾ ಮಾಲಪಂಚಮೇ |
ಪಂಚಮಾಂಶಗ್ರಹನ್ಯಾಸಾ ಮಗಧಾಲ್ಪಾ ಪಮಂದ್ರಭಾಕ್ ||

೯೯೪. ಉದಾಹರಣಂ- ‘ಸಾಸಾಸಾಸಾ ಧಸಾಸಾಸಾರೀಮಾಮಾಸಾ ನೀಧಾಸಾಸಾ ನೀಧಾಪಸಾಮಾಮಾಪಾಧಾ | ಸಾಸಾ | ಧಾಗಾರಿಸಾ ರಿಸಾ ನಿಧಾನಿ | ಸಾಸಾ | ಅಲಘ್ವೀ | ಟಕ್ಕರಾಗೇ ಶಾರ್ದೂಲಮತೇ ಭಾಷಾಃ ಸಮಾಪ್ತಾಃ | ’ ಇದರ ನಂತರದ ‘ಭಿನ್ನವಲಿತಿಕಾ ರವಿಚಂದ್ರಾ ಭಿನ್ನಪೌರಾಲೀ ದ್ರಾವಿಡೀ | ಪಿಂಜರೀ ಪಾರ್ವತೀ ಚೈವ ಹಿಂದೋಲಕೇ? ಎಂಬ ಗ್ರಂಥಭಾಗವು ಲೇಖಕ ಪ್ರಮಾದದಿಂದ ಪ್ರಕ್ಷಿಪ್ತವಾಗಿರುವುದೆಂದು ಪ್ರಸಂ.ರು ಸೂಚಿಸಿದ್ದಾರೆ. (ಪ್ರಸಂಅ). ಇದರ ನಂತರದ ‘ಷ (ಪ) ನಿನಿ — ನೀನೀ ಧಾಧಾಮಾಪಾಪಾ | ಪೌರಾಲೀ | ’ ಎಂಬ ಗ್ರಂಥಾಂಶಕ್ಕೆ ಅವರು ‘ವಿಭಾವನ್ಯಾ ಉದಾಹರಣಂ ಪೌರಾಲ್ಯಾ ಲಕ್ಷಣಂ ಚ ನ ದೃಶ್ಯತೇ’ ಎಂಬ ಅಡಿಟಿಪ್ಪಣಿಯನ್ನು ಬರೆಯುತ್ತಾರೆ. ‘ಪಂಚಮಾದ್ಯಂತಾ ಸಂಪೂರ್ಣ’ ಎಂಬ ಲಕ್ಷಣವು ಈ ಉದಾಹರಣಕ್ಕೆ ಅನ್ವುಯಿಸುವುದಿಂದ ದ್ವಿಸಂ.ರು ಈ ಉದಾಹರಣವು ವಿಭಾವನಿಯದು, ಪೌರಾಲಿಯದಲ್ಲ ಎಂಬ ಭಾವಿಸುತ್ತಾರೆ.ಪೌರಾಲೀ ಲಕ್ಷಣವು ಮಾತೃಕೆಗಳಲ್ಲಿ ಲುಪ್ತವಾಗಿದೆ. ಅದನ್ನು ಸಂರಾಜ (೨.೨.೧.೧೦೮೬:೩೯೯)ವು ಹೀಗೆ ವರ್ಣಿಸುತ್ತದೆ :

ಪಂಚಮಮಾಂಶಗ್ರಹನ್ಯಾಸಾ ಗಾಲ್ಪಾ ಮಾಲವಪಂಚಮೇ |
ಸಾವರೋಹಿಪ್ರಸನ್ನಾಂತಾ ಭಾಷಾ ಪೌರಾಲಿಕಾ ರಸೇ |
ಬೀಭತ್ಸೇ ಮುನಿನಾ ಪ್ರೋಕ್ತಾ ಮತಂಗೇನ ಭಯಾಕುಲೇ ||

೯೯೬ಆ. [ಜ್ಞೇಯಾ ವೇಗವತೀ ಶುಭಾ]: ++++++++ (ಪ್ರಸಂ)

೯೯೬ಇ. ವಿಭಾಷಾ ಕರುಣೇ : ಭಾಷಾ ಕರುಣೇ (ಪ್ರಸಂ)

೯೯೬ಇಈ. ಕರುಣೇ ದೈನ್ಯಭೂಯಿಷ್ಠೇ : ಹೋಲಿಸಿ :

ಕರುಣೇ ದೈನ್ಯಭೂಯಿಷ್ಠೇ ಆಹುರ್ವೇದವತೀಂ ಬುಧಾಃ | (ಅಭಾ. ನಾಶಾ.೨೯.೧೩ :೭೬, ಶ್ಲೋ.೪೦ಇಈ).

೯೯೬ಈ. ಚೈವ ಗೀಯತೇ : ಚೈವಮುದ್ಧಾರೇ (ಪ್ರಸಂ)

೯೯೬ಅ-ಈ. ಪಂಚಮಾಂಶಾ ….. ಗೀಯತೇ : ಹೋಲಿಸಿ :

i           ಸಗ್ರಹಾಂತಾ ವೇಗವತೀ ಧಾಂಶಾ ಮಾಲವಪಂಚಮೇ |
ಸಪ್ತಸ್ವರಾ ವಿಭಾಷೇಯಮಂಜನಾಸೂನುಸಮ್ಮತಾ || (ಕಲ್ಲಿ. ಅದೇ : ೧೪೨)

ii          ಪೂರ್ಣಾ ವೇದವತೀ ಭಾಷಾ ಸಾಂತಾ ಮಾಲವಪಂಚಮೇ |
ಪಂಚಮಾಂಶಗ್ರಹಾ ಯೋಜ್ಯಾ ರಸೇ ಸಾ ಕರುಣೇ ಬುಧೈಃ ||
(ಸಂರಾಜ.೨.೨.೧.೧೦೮೮:೪೦೦)

೯೯೮ಅ. ಪಂಚಮಾಂಶಾಂತ- : ಪಂಚಮಾರ್ಧಂ ತು (ಪ್ರಸಂ)

೯೯೮ಆ. ಪಂಚಮೀ : ಪಂಚಮಾ (ಪ್ರಸಂ)

೯೯೮ಈ. ಚೈಷಾ : ಭಾಷಾ (ಪ್ರಸಂ)

೧೦೦೦ಆ. ಭಾಷಾ ಸ್ಯಾದಾಂಧ್ರದೇಶಜಾ : ಭಾವನಾಸ್ಥಾ ಧ್ರುವೇಶಜಾ (ಪ್ರಸಂ)

೧೦೦೦ಇ. ಆಂಧ್ರೀ : ಅಂಧ್ರೀ (ಪ್ರಸಂ)

೧೦೦೦ಈ. ವ್ಯಾಧಿ- : ವ್ಯಾಧಾ (ಪ್ರಸಂ)

೧೦೦೦ಈ. ವ್ಯಾಧಿದುಷ್ಟೇಷು : ಹೋಲಿಸಿ :

i……..ಗರ್ವೇ ತ್ವಾಂಧ್ರೀ ಪ್ರಚಕ್ಷತೇ (ಅಭಾ. ನಾಶಾ.೨೯.೧೩ : ೭೬, ಶ್ಲೋ.೪೧ಆ)ಇದು ಕಶ್ಯಪೋಕ್ತಿಯೆಂದು ಉದ್ಧೃತವಾಗಿದೆ.

ii……. ಸರ್ವಭಾವವಿನಿಯೋಗಭಾಕ್ (ಸಂರಾಜ.೨.೨.೧.೧೦೯೦ಈ:೪೦೦)

‘ವ್ಯಾಧೌ ದಷ್ಟೇಷು’ ಎಂಬ ಪಾಠದ ಇನ್ನೊಂದು ಸಾಧ್ಯತೇಯಿದೆ, ರೋಗಸಮಯದಲ್ಲಿ ಹಾಗೂ ವಿಷಜಂತುಗಳು ಕಚ್ಚಿದಾಗ ಇದನ್ನು ಹಾಡಬೇಕು ಎಂದು ಅರ್ಥೈಸಬಹುದು ಎಂಬು ದ್ವಿಸಂ.ರು ಹೇಳುತ್ತಾರೆ. ಹಾವು ಚೇಳು ಮುಂತಾದವು ಕಚ್ಚಿದಾಗ ತೆಲುಗರು (ನಾಟಕದಲ್ಲಿಯೇ ಆಗಲಿ!) ರಾಗವನ್ನು ಆಲಾಪಿಸಿ ಹಾಡುಗಳನ್ನು ಹಾಡಿ ಅಭಿನಯಿಸುತ್ತಿದ್ದರೆಂಬುದು ಸಂಭಾವ್ಯವಾಗಿ ತೋರುವುದಿಲ್ಲ. ವ್ಯಾಧಿದೋಷದಿಂದ ಬಳಲಿರುವಾಗ ಮನಸ್ಸಿಗೆ ಸಾಂತ್ವನವನ್ನೋ ಉಲ್ಲಾಸವನ್ನೋ ಉಂಟುಮಾಡಲೆಂದು ಹಾಡಿಕೊಳ್ಳುವುದು ಅಥವಾ ಹಾಡಿಸುವುದು ಸಹಜವಾಗಿದೆ ; ಗರ್ವದ ಅಭಿವ್ಯಕ್ತಿಗೆಂದು ಹಾಡುವುದೂ ಸಹಜವೇ.

೧೦೦೧ಅ. ಮಾ1 : ಸಾ (ಪ್ರಸಂ)

೧೦೦೨ಆ. ಪಂಚಮಾಂತಿಮಾ : ಪಂಚಮಾನುಗಾ (ಪ್ರಸಂ)

೧೦೦೨ಇ. ಸಾನುರೋ[ಹೇ ಚ] : ಸಾನುನಾ (ಪ್ರಸಂ). ‘ಸಾನು’ ಎಂದರೆ ಪಂಡಿತ, ಋಷಿ ಎಂಬ ಕೋಶಾರ್ಥವೂ ಇದೆ (ಮೋನಿಯರ್ ವಿಲಿಯಂಸ್, ಎ ಸಂಸ್ಕೃತ-ಇಂಗ್ಲೀಷ್ ಡಿಕ್ಷನರಿ : ೧೨೦೨). ಈ ಅರ್ಥವೂ ಇಲ್ಲಿ ಚೆನ್ನಾಗಿ ಹೊಂದುತ್ತದೆ. ಹೋಲಿಸಿ :

ಔಗ್ರ್ಯೇ ಕ್ರೋಧೇ ಚ ಗಾಂಧಾರೀ (ಅಭಾ.ನಾಶಾ.೨೯.೧೩ :೭೬, ಶ್ಲೋ.೪೧ಇ)

೧೦೦೨ಈ. ಗೀಯತೇ ಮಾಲವಪಂಚಮೇ : ಗೀಯತೇ (?) ಮಾಲವ ಪಂಚಮೇ (ಪ್ರಸಂ)

೧೦೦೪ಇಈ. ಬಾಹ್ಯ ….. ಸ್ವರವಲ್ಲಿ (?ಲಿ) ತಾ : ಬಾಹ್ಯ (ಷೌಢಕೌ ಸಂದ್ಯೇ ? ಷಾಡವಕೌಸಲ್ಯೌ) ಗಾಂಧಾರೀ ಪರವಂದಿತಾ (ಪ್ರಸಂ)

೧೦೦೫ಅಆ. ನಿಷಾದವತೀ …. ಲಲಿತಾ : – ನಿಷಾದವತ್ಯಾ ಚ ಸ್ವರಗಾಂಧಾರವರ್ಜಿತಾ (ಪ್ರಸಂ)

೧೦೦೬ಊ. ಧೈವತಾಂತಾsಲ್ಪಷಡ್ಜಿಕಾ : ನೀಪೋಮುಪ ಚ (?) ಗೀಯತೇ (ಪ್ರಸಂ) ; ಮಾತೃಕೆಯಲ್ಲಿ ತ್ರಾವಣೀಲಕ್ಷಣವು ಪೂರ್ತಿಯಾಗಿಲ್ಲ. ಅದನ್ನು ಸಂರಾಜ (೨.೨.೧.೧೦೦೮:೩೯)ದಿಂದ ಪೂರೈಸಿದೆ :

ಭಿಬ್ಬಷಡ್ಜೇ ರಿಗ್ರಹಾಂಶಾ (-ಶ) ಧೈವತಾಂತಾ(-ತಾ ಚಾ) ಲ್ಪಷಡ್ಜಿಕಾ |
ಸಂಪೂರ್ಣಾ ಯಾಮಕಾಲೇಷು ಪ್ರಯೋಕ್ತವ್ಯಾsದ್ಭುತೇ ರಸೇ ||
ಷಡ್ಜಗ್ರಾಮೇ ತ್ರಾವಣೀಯಂ ಭಾಷಾ ಕಿನ್ನರವಲ್ಲಭಾ ||

ಇದರಲ್ಲಿ ಪ್ರಥಮಶ್ಲೋಕಾರ್ಧವನ್ನು ‘ರಿಗ್ರಹಾಂಶಧೈವತಾ’ ಎಂಬುದರಿಂದ ದ್ವಿಸಂ.ರು ತಿದ್ದಿದ್ದಾರೆ. ಸಂರಾಜ (೨.೨.೩.೭೧:೪೩೧)ದಲ್ಲಿ ತ್ರಾವಣೀ ಎಂಬ ಇನ್ನೂ ಒಂದು ಭಾಷಾರಾಗವನ್ನು ಹೀಗೆ ನಿರೂಪಿಸಿದೆ :

ಯಾ ಭಿನ್ನಷಡ್ಜೇ ತ್ರವಣಾ ಪುರೋಕ್ತಂ ತದಂಗಕಂ ತ್ರಾವಣಿಕಾ ಪ್ರದಿಷ್ಟಾ |
ಧಾಂತಗ್ರಹಾಂಶಾ ವಿರಿಪಾ ದಿನಾದೌ ಯಾಂಚಕೃತೌ ಪ್ರೇಯಸಿ ಗೀಯತೇ ಚ ||

೧೦೦೭. (ತ್ರಾವಣೀ) : ತ್ರಾವಣಾ

೧೦೦೮ಆ. ಸದುರ್ಬಲಾ : ತು ದುರ್ಬಲಮ್ (ಪ್ರಸಂ). ಸಂರಾಜ (೨.೨.೧.೧೦೧೦ಆ: ೩೯೧)ದಲ್ಲಿರುವ ‘ಸಂಪೂರ್ಣಾ ಷಡ್ಜದುರ್ಬಲಾ’ ಎಂಬ ಪಾಠದಿಂದ ಹೀಗೆ ತಿದ್ದಿದೆ.

೧೦೦೮ಇಈ. ದೇವತಾರಾಧನೇ …. ಷಟ್‌ಸ್ವರಾ : ಹೋಲಿಸಿ :

ಸಕಾಕಲ್ಯಂತರಾ ತ್ಯಕ್ತರಿಪಾ ದೇವಾರ್ಚನೇ ಮತಾ (ಕಲ್ಲಿ. ಅದೇ : ೧೪೦)

೧೦೦೯ಅ. ಧಾನಿ1 : ಪಾನಿ (ಪ್ರಸಂ)

೧೦೧೦, iii ಮಾಲವೀ

೧೦೧೦ iv. ಗುರ್ಜರೀ : ‘ಮಾಲವೀರ್ಗುರ್ಜರ್ಯೋಕ್ಷಣಮುದಾಹರಣಂ ಚ ನ ದೃಶ್ಯತೇ’ (ಪ್ರಸಂ.ಅ)

ಲುಪ್ತವಾಗಿರುವ ಈ ಲಕ್ಷಣಗಳನ್ನು ಗ್ರಂಥಾಂತರಗಳಿಂದ ಹೀಗೆ ಪೂರೈಸಬಹುದು :

ಮಾಲವೀ : ಪೂರ್ಣಾ ಸರಿಗಮೈರ್ಬಹ್ವೀ ಗ್ರಂಹಾಂಶನ್ಯಾಸಧೈವತಾ |

i           ಧಮಂದ್ರಾ ಭಿನ್ನಷಡ್ಜೋತ್ಥಾ ವಿಭಾಷಾ ಮಾಲವೀ ಮತಾ ||
(ಕಲ್ಲಿ.ಅದೇ: ೧೪೧)

ii          ಮಧ್ಯಮಾಂಶಾ ಧೈವತಾಂತಾ ವಿಭಾಷಾ ಮಾಲವೀ ಮತಾ |
ಪೂರ್ಣಾ ಮಾಲವದೇಶೋತ್ಥಾ ಚಿಂತಾಗ್ರಸ್ತೇ ವಿನಿಯುಜ್ಯತೇ ||
(ಸಂರಾಜ.೨.೨.೧.೧೦೬೧:೬೩೯)

iii         ತಥಾ ಮತಂಗಮುನಿನಾ ಭಿನ್ನಷಡ್ಜೇ ಸಮೀರಿತಾ |
ಸಂಪೂರ್ಣಾಂಶಗ್ರಹನ್ಯಾಸಧೈವತಾ ಭೂಯಸೀ ಪುನಃ ||
ಸರಿಗೈಶ್ಚ ಪ್ರಯೋಗಾರ್ಹಾ ಟಕ್ಕಕೈಶಿಕಸಂಜ್ಞಿನಃ |
ರಾಗಸ್ಥ ಸಾಮ್ಯಯೋಗೇನ ವಿಭಾಷಾ ಮಾಲವಾಭಿಧಾ ||
(ಸಂರಾಜ.೨.೨.೧.೧.೧೦೬೩,೧೦೬೪:೩೯೭)

ಗೂರ್ಜರೀ : ಮಧ್ಯಮಾಂಶಾ ಧೈವತಾಂತಾ ಗೂರ್ಜರೀ ಭಿನ್ನಷಡ್ಜಗಾ |

ಪೂರ್ಣಾ ಗೂರ್ಜರದೇಶೋತ್ಥಾ ನಿಯೋಜ್ಯಾ ಮುನಿಚಿಂತನೇ ||

(ಸಂರಾಜ.೨.೨.೧.೧.೦೧೨:೩೯೦)

೧೦೧೨ಅ. ಧೈವತಾಂತಾ : ಗಾಂತಾ (ಸಂರಾಜ.೨.೨.೧.೧೦೧೪ ಇ:೩೯೧)

೧೦೧೨ಆ. ಋಷಭೋಜ್ಞಿತಾ : ಋಷಭಾನ್ವಿತಾ (ಪ್ರಸಂ)

೧೦೧೪ಆ. ಸ್ಯಾದ್ ರಿವರ್ಜಿತಾ : ಷಡ್ಜವರ್ಜಿತಾ (ಪ್ರಸಂ) ; ‘ರಿಲೋಪೇನ ಹಿ ಷಾಡವಾ’ ಎಂಬ (ಸಂರಾಜ.೨.೨.೧.೧೦೨೧ಆ:೩೯೨) ಪಾಠದ ಆಧಾರದಿಂದ ಹೀಗೆ ತಿದ್ದಿದೆ.

೧೦೧೪ಇ. ಕೌಸಲೀದೇಶ : ಕೌಸಲ ದೇಶ- (ಪ್ರಸಂ)

೧೦೧೬ಅ. ಗಾಂಧಾರಾಂಸಾ : ಗಾಂಧಾರಾಂ(ಶ?ಶಾ) (ಪ್ರಸಂ)

೧೦೧೬ಆ. ಮಧ್ಯಮಾಶ್ರಿಕಾ : ಹೋಲಿಸಿ :

ಗಾಂಧಾರಾಂಶಾ ಮಧ್ಯಮಾಂತಾ ಗಾಂಧಾರೀ ಮಧ್ಯಮೋಜ್ಝಿತಾ |
ಗೇಯೈಕಾಂತೇ ಭಿನ್ನಷಡ್ಜಭಾಷಾ ಶಾರ್ದೂಲಸಮ್ಮತಾ || (ಕಲ್ಲಿ. ಅದೇ : ೧೪೧)

ಒಂದೇ ರಾಗವು ‘ಮಧ್ಯಮಾಂತಾ’ ಮತ್ತು ‘ಮಧ್ಯಮೋಜ್ಝಿತಾ’ ಆಗಿರುವುದು ಅಸಂಭವ. ಆದುದರಿಂದ ‘ಮಧ್ಯಮಾಶ್ರಿತಾ’ (ಮಧ್ಯಮಗ್ರಾಸಂಬಂಧಿ) ಎಂಬ ಪಾಠವೇ ಸರಿಯಾಗಿದೆ.

೧೦೧೮ಅ-ಈ. ಧೈವತಾ ….. ಮಾಮಸೈಃ : ಹೋಲಿಸಿ :

ಧೈವತಾಂಶಗ್ರಹನ್ಯಾಸಾ ಋಷಭೇಣ ವಿವರ್ಜಿತಾ |
ವಿಜ್ಞೇಯಾಂತರಭಾಷೆಯಂ ಸ್ವರವಲ್ಲೀ ಮೃದುಸ್ವರಾ ||
(ಸಂರಾಜ.೨.೨.೧.೧೦೭೪:೩೯೮)

ಇದರ ಆಧಾರದಿಂದ ಇಲ್ಲಿ ಪಾಠವನ್ನು ಪುನಾರಚಿಸಿದೆ ಈ ರಾಗವು ಸಂರಾಜದಲ್ಲಿ ಅಂತರಭಾಷಾ ಆಗಿದೆಯೆಂಬುದನ್ನು ಗಮನಿಸಬಹುದು.

೧೦೧೮ಆ. ಷಾಡವಸ್ವರಾ : ಷಡ್ಜರ್ಷಭಹೀನಾ (ಪ್ರಸಂ)

೧೦೧೮ಇ. ಸ್ವರವಲ್ಲಿತಿಕಾ : ++ವಲಿತಗಾ (ಪ್ರಸಂ)

೧೦೨೦ಆ. ಪಂಚಮರ್ಷಭ : ಷಡ್ಜಪಂಚಮ (ಪ್ರಸಂ)

೧೦೨೦ಇಈ. ಪಂಚಸ್ವರಾ : ಉದಾಹರಣದಲ್ಲಿ ರಿಷಭಪಂಚಮಗಳು ಇಲ್ಲದಿರುವುದರಿಂದ ಹೀಗೆ ತಿದ್ದಿದೆ. ಸಂರಾಜವು ಇದನ್ನು ಮತಂಗತದಲ್ಲಿ ಸಂಪೂರ್ಣರಾಗವೆಂದು ಹೇಳಿದೆ. ಹೋಲಿಸಿ:

ರಿತಾರಾ ಭಿನ್ನಷಡ್ಜೋತ್ಥಾ ರಿಲೋಪಾತ್ ಷಾಡವಾ ಮತಾ |
ಮತಂಗಸ್ಯ ಮತೇ ಪೂರ್ಣಾ ಅಸ್ಯಾ ಆಲಾಪ ಈರ್ಯತೇ ||
ಧಾ ಸಾ ಧಾ ಧಾ ಧ ಮಾ ಸಾ ನೀ ನೀ ಧಾ ಮಾ ಗಾ ಸಾ ನೀ ಧ ಧಾ |
ಮಾ ಧಾ ಧ ನಿ ಸ ಮಾ ಗಾ ಗಾ ಧಾ ಸ ಮಾ ಮಾ ಸ ನೀ ಮ ಧಾ ||
(ಸಂರಾಜ. ೨.೧.೧.೧೦೧೯, ೧೦೨೦: ೩೯೨)

‘ರಿತಾರಾ’ ಎಂಬ ಲಕ್ಷಣವನ್ನು ‘ಮತಂಗಸ್ಯ ಮತೇ ಪೂರ್ಣಾ’ ಎಂಬ ಲಕ್ಷಣದೊಡನೆ ಅನ್ವಯಿಸಿಕೊಳ್ಳಬೇಕು. ಇಲ್ಲದಿದ್ದರೆ ಲಲಿತಾರಾಗವು ಏಕಕಾಲದಲ್ಲಿ ರಿತಾರಾ, ರಿಲೋಪಾ ಆಗುವುದು ಅಸಂಭವ. ಇದು ಮತಂಗತದಲ್ಲಿ (ಸಂರಾಜದಂತೆ) ಪೂರ್ಣಾ ಆಗಿದ್ದು ಬೃಗ.ದಲ್ಲಿ ಪಂಚಸ್ವರಾ ಆಗುವುದು ಹೇಗೆ? ರಿಲೋಪದಿಂದ ಷಾಡವವಾದರೆ ರಿಷಭದ ಸಂವಾದಿಯಾದ ಪಂಚಮದ ಲೋಪದಿಂದ ಔಡುವವಾಗುವುದು ಉಚಿತವೇ ಆಗಿದೆ. ರಿಷಭಪಂಚಮಗಳು ಸಂವಾದಭಾವದಲ್ಲಿರುವುದು ಮಧ್ಯಮದಗ್ರಾಮದಲ್ಲಾದುದರಿಂದ ಲಲಿತಾರಾಗವು ಮಧ್ಯಮಗ್ರಾಮಾ ಶ್ರಿತವಾದುದು ಎಂಬ ಅನುಮಿತಿಯು ಹೊರಡುತ್ತದೆ. ಪಂಚಮವು ಲೋಪವಾದರೂ ಗ್ರಾಮವೈಶಿಷ್ಟ್ಯ ಬೋಧಕವಾದ ಧೈವತವು ಗ್ರಹಾಂಶನ್ಯಾಸಗಳಾಗಿರುವುದರಿಂದ ಮಧ್ಯಮವು ಗ್ರಾಮವೈಶಿಷ್ಟ್ಯವು ಉಳಿಯಲು ಅಡ್ಡಿಯಾಗದು. ಅವಿನಾಶಿಯಾದುದರಿಂದ ಮಧ್ಯಮವು ಲೋಪವಾಗದೆ ಉಳಿದುಕೊಂಡಿದೆ. ಇದು ಶಾರ್ದೂಲ ಮತದಲ್ಲಿ ಪಂಚಸ್ವರಾ(=ಔಡುವ), ಮತಂಗಮತದಲ್ಲಿ ಷಾಡವಾ, ಸಂರಾಜದ(ಇತರ ಅಜ್ಞಾತ) ಆಕರದಲ್ಲಿ ಸಂಪೂರ್ಣ ಎಂದಿಟ್ಟುಕೊಂಡರೆ ಈ ಸಮಸ್ಯೆಯು ಬಗೆಹರಿಯುತ್ತದೆ.

೧೦೨೧ಉ. ನಿನಿ1 : ರಿನಿ (ಪ್ರಸಂ)

೧೦೨೨ಅಆ. ನಿಷಾದ …… [ಜಿತಾ] : ನಿಷಾದಪತರಖ್ಯಾತಾ (?) ಧೈವತಾದ್ಯಂತರಾ ++ (ಪ್ರಸಂ). ಹೋಲಿಸಿ :

i           ನಿಷಾದಿನೀ ಭಿನ್ನಡ್ಜಭಾಷಾ ಧಾಂಶಗ್ರಹಾಂತಿಮಾ | (ಕಲ್ಲಿ. ಅದೇ : ೧೪೦)

ii          ದೈವತಾಂಶಗ್ರಹನ್ಯಾಸಾ ಸಂಪೂರ್ಣ ಷಡ್ಜದುರ್ಬಲಾ |
ಭಿನ್ನಷಡ್ಜೇsತರಾ ಭಾಷಾ ನಿಷಾದವತಿಕಾ ಮತಾ ||
(ಸಂರಾಜ. ೨.೨.೧.೧೦೭೨:೩೯೮)

೧೦೨೨ಇಈ. ಸಂಪೂರ್ಣಾ …… ರಿವರ್ಜಿತಾ : +++ಮ್ಯಾ : ಭಾಷಾ ಚ ಗೀತಾನ್ಯೇನ ವಿವರ್ಜಿತಾ (ಪ್ರಸಂ).

‘ರಿವರ್ಜಿತಾ’ ಬದಲು ‘ನಿವರ್ಜಿತಾ’ ಎಂಬುದು ಸಾಧ್ಯವೆಂದು ದ್ವಿಸಂ.ರು ಭಾವಿಸುತ್ತಾರೆ. ಆದರೆ ಉದಾಹರಣದಲ್ಲಿ ನಿಷಾದದ ಪ್ರಯೋಗವು ಸ್ಪಷ್ಟವಾಗಿದೆ. ಅಲ್ಲದೆ ‘ನಿಷಾದವತೀ’ ರಾಗದಲ್ಲಿ ನಿಷಾದವೇ ವರ್ಜ್ಯವಾಗುವುದುಂಟೆ !

೧೦೨೩ಇ. ಧಾಪಾ1 : ಧಾವಾ (ಪ್ರಸಂ)

೧೦೨೪ಆ. ತುಂಬುರು [ಹಃ] : ತುಂಬುರಾ (ಕಲ್ಲಿ. ಅದೇ : ೧೪೦) : ತುಂಬರಾ (ಸಂರಾಜ. ೨.೨.೧.೧೦೨೩ಇ:೩೯೨)

೧೦೨೪ಇ. ಬ್ರಹ್ಮವಾದಿಭಿಃ : ಬ್ರಹ್ಮಚಾರಿಣೀ (ಕಲ್ಲಿ. ಅದೇ : ೧೪೦); ಬ್ರಹ್ಮಚಾರಿಭಿಃ (ಸಂರಾಜ. ೨.೨.೧.೧೦೨೩ ಈ:೩೯೨)

೧೦೨೫ಅ. ಮಾಗನಿ1 : ಮಾಗರಿ (ಪ್ರಸಂ)

೧೦೨೬ಅ. ಗಾಂಧಾರಲಲಿತಾ : ಗಾಧಾರವಲ್ಲಿ (ಕಲ್ಲಿ.ಅದೇ : ೧೪೦)

೧೦೨೬ಆ. -೦ತಧೈವತಾ : ‘ಧಾಂತಿಮಾ’ (ಕಲ್ಲಿ. ಅದೇ : ೧೪೦) ಮತ್ತು ‘ಧೈವತನ್ಯಾಸಭೂಷಿತಾ’ (ಸಂರಾಜ. ೨.೨.೧.೧೦೨೫: ೩೯೨) ಎಂಬ ಪಾಠಗಳನ್ನು ಆಧರಿಸಿ ಪ್ರಸಂ.ದ ‘sಲ್ಪಧೈವತಾ’ ಎಂಬ ಪಾಠವನ್ನು ತಿದ್ದಿದೆ .

೧೦೨೬ಈ. ಷಡ್ಜಧೈವತಸಂಗತಿಃ (ಕ್ರಮಾತ್) : ಷಡ್ಜಧೈವತಕ್ರಮಾತ್ (ಪ್ರಸಂ) ; ‘ಸಧಯುತಾ (ಕಲ್ಲಿ. ಅದೇ : ೧೪೦)ದ ಆಧಾರದಿಂದ ಪ್ರಸಂ.ದ ಪಾಠವನ್ನು ದ್ವಿಸಂ.ರು ಹೀಗೆ ತಿದ್ದಿದ್ದಾರೆ ಕ್ರಮಣವೆಂದರೆ ಚಲನೆ; ಇಲ್ಲಿ ಪರಸ್ಪರ ಚಲನೆ, ಎಂದರೆ ಸಂಗತಿ. ಹೀಗೆ ಪ್ರಸಂ.ದ ಪಾಠವೂ ಪ್ರಶಸ್ತವೇ ಆಗಿದೆ.

೧೦೨೭ಆ. ರೀರೀ : ಕಾರೀ (ಪ್ರಸಂ)

೧೦೨೭. (ಗಾಂಧಾರಲಲಿತಾ) : ಗಾಂಧಾರಪಲಿತಾ (ಪ್ರಸಂ)

೧೦೨೮. ಕಲಿಳಗರಾಗ : ಪ್ರಸಂ (:೧೪೦)ದಲ್ಲಿ ಭಿನ್ನಷಡ್ಜದ ಜನ್ಯಭಾಷಾರಾಗಗಳನ್ನು ವರ್ಣಿಸುವಾಗ ಗಾಂಧಾರಲಲಿತಾದ ಲಕ್ಷಣೋದಾಹರಣಗಳನ್ನು ಕೊಟ್ಟ ನಂತರ ಈ ಶ್ಲೋಕವಿದೆ :

ಕಲಿಂಗಾ ಧೈವತಾಂತರಭಾಷಾ ಧೈವತಮಧ್ಯಮಾ ಶುಭಾ |
ಮೂಲಭಾಷಾ ಭಿನ್ನಷಡ್ಜೇ ಗೀಯತೇ ನಾರದತುಂಬುರೂ ||

ಈ ಶ್ಲೋಕದ ಪ್ರಥಮಾರ್ಧವು ಎರಡಕ್ಷರಗಳ ಅತಿಛಂದಸ್ಸಿನಿಂದ (ಹೈಪರ್ಮೆಟ್ರಿ) ದೂಷಿತವಾಗಿದೆ. ಕಲಿಂಗಾರಾಗದ (ಅನುಪಲಬ್ಧವಾಗಿರುವ) ಲಕ್ಷಣೋದಾಹರಣೆಗಳಿಗೆ ಅವ್ಯವಹಿತ ಪೂರ್ವದಲ್ಲಿ ಗಾಂಧಾರಲಲಿತಾ ರಾಗದ ಲಕ್ಷಣೋದಾಹರಣಗಳಿವೆ. ಈ ಉದಾಹರಣದಲ್ಲಿ ‘ಗಾಂಧಾರಲಲಿತಾ’ ಎಂಬ ಮಾತಿನ ನಂತರ ಈ ಉದಾಹರಣಾಂಶವಿದೆ : (ಇದರಲ್ಲಿ ಮಧ್ಯಮಲೋಪವು ಗಮನಾರ್ಹವಾಗಿದೆ; ಲೋಪಗಳು ಭ್ರಷ್ಟಪಾಠಗಳು ಇರುವುದು ಸಂಭವ)

ಧಾಧಾಧಾಪಾ | ಗರಿರಿಧಾಪಧಾನಿನಿರಿಗಾ ಪಪಾನಿಧಾಧಾ ರಿಗರಿಗಧಾಪಧಾ
ರಿಪಾರಿ(ನಿ?ಗಾ) ರಿನಿಧಾ (ಪಾಧಪಾ? ಪಾಧಾಧಾ) |

ಇದರ ನಂತರ ರಾಗನಾಮವಾಗಿ ಬರಬೇಕಾದುದು ಲೇಖನಪ್ರಮಾದದಿಂದ ಮುಂದಿನ ಶ್ಲೋಕದ ಆದಿಯಲ್ಲಿ ನಂತರ ಬಂದಿದೆ. ಹೀಗೆ ಕಲಿಂಗರಾಗದ ಲಕ್ಷಣವು ಮಾತೃಕೆಯಲ್ಲಿ ಲುಪ್ತವಾಗಿ ಅದರ ಉದಾಹರಣೆಯು ಮಾತ್ರ ದೊರೆತಿದೆ. ಈ ಉದಾಹರಣವು ಕಲಿಂಗರಾಗದ ಲಕ್ಷಣವನ್ನು ಯಥಾವತ್ತಾಗಿ ಪ್ರತಿಬಿಂಬಿಸುತ್ತದೆ ಎಂದಿಟ್ಟುಕೊಂಡರೆ, ಕಲಿಂಗರಾಗಲಕ್ಷಣವನ್ನು (ಈ ಗ್ರಂಥಭಾಗದ ಶೈಲಿಯನ್ನು ಅನುಕರಿಸಿ) ಊಹಾತ್ಮಕವಾಗಿ ಹೀಗೆ ಪುನಾರಚಿಸಬಹುದು:

ಧೈವತಾದ್ಯಂಸಾ ಚ ಪಾಂತಾ ಷಡ್ಜಮಧ್ಯಮವರ್ಜಿತಾ |
ಗೀಯತೇsಹ್ಯಮರ್ಷಾವೇಶೇ ಲಿಂಗಿನಾಂ ಕಪಟಾತ್ಮನಾ |
ಕಲಿಂಗಾ ಭಿನ್ನಷಡ್ಜೋತ್ಥಾ ಭಾಷಾ ಕಲಿಂಗದೇಶಜಾ ||

ಇಲ್ಲಿನ ಉದಾಹರಣದ ಅಂತ್ಯಸ್ವರವು ‘ಪಾ’ ಅಲ್ಲದೆ, ‘ಧಾ’ ಎಂದಾದರೆ ಮೊದಲನೆಯ ಶ್ಲೋಕಾರ್ಧದ ಪೂರ್ವಾರ್ಧದಲ್ಲಿ ‘ಧಾಂತಾ’ ಎಂದೋ ‘ಧೈವತಾದೃಂಶನ್ಯಾಸಾ ಚ’ ಎಂದೋ ಮಾರ್ಪಡಿಸಿಕೊಂಡು ಅದರ ಉತ್ತರಾರ್ಧವನ್ನು ‘ಸಮಹೀನಾ ಪಂಚಸ್ವರಾ’ ಎಂದು ಬದಲಾಯಿಸಿಕೊಳ್ಳಬಹುದು. ಎರಡನೆಯ ಶ್ಲೋಕಾರ್ಧದ ಪಾಠವನ್ನು ಅಭಾ (ನಾಶಾ. ೨೯.೧೩:೭೩ ಶ್ಲೋ.೧೩ ಅಆ : ‘ಕಾಲಿಂಗ್ಯಮರ್ಷಾವೇಸೇ ತು ಲಿಂಗಿನಾಂ ಕಪಟಾತ್ಮನಾಮ್’)ಯ ಲಕ್ಷಣೋಕ್ತಯನ್ನು ಆಧರಿಸಿ ಪುನರಾಚಿಸಿದೆ. ಮಧ್ಯಮಸ್ವರವು ಅವಿನಾಶಿಯಾದುದರಿಂದ ಈ ಊಹೆಯು ದುರ್ಬಲವಾಗಿದೆ. ಉದಾಹರಣ

೧೦೩೦ಅಈ. ಧೈವತಾ ….. ನಾರದಾದಿಭಿಃ : ಪ್ರಸಂ.ದ ‘ಕಲಿಂಗಾ ….. ತುಂಬುರೂ’ (ಎಂದ ಮೇಲೆ ಉದ್ಧರಿಸಿರುವ) ಶ್ಲೋಕದಲ್ಲಿ ಹೇಳಿರುವ ಲಕ್ಷಣವು ಶುದ್ಧ ಎಂಬ ರಾಗದ್ದೆಂದು ದ್ವಿಸಂ.ರು ಊಹಿಸಿ ಅದನ್ನು ಹೀಗೆ ತಿದ್ದಿದ್ದಾರೆ :

ಧೈವತಾದ್ಯಂತಭಾಷಾ (ಸ್ಯಾಚ್ಛುದ್ಧಾ) ಧೈವತಮಧ್ಯಮೌ (?) |
ಮೂಲಭಾಷಾ ಭಿನ್ನಷಡ್ಜೇ ಗೀಯತೇ ನಾರದಾದಿಭಿಃ ||

ಭಿನ್ನಷಡ್ಜಾಜನ್ಯಭಾಷಾರಾಗಗಳ ಲಕ್ಷಣಾಂತರದಲ್ಲಿ, ‘ಇತಿ ಶಾರ್ದೂಲಮತೇ ಭಾಷಾಃ ಷೋಡಶ ಸಮಾಪ್ತಾಃ’ ಎಂಬ ಸಮಾಪ್ತಿವಾಕ್ಯವಿದೆ. ಆದುದರಿಂದ ಭಿನ್ನಷಡ್ಜಾದಲ್ಲಿ ಹುಟ್ಟುವ ಭಾಷಾರಾಗಗಳು ಹದಿನಾರೆಂದು ತಿಳಿಯುತ್ತದೆ. ಇವುಗಳ ಉದ್ದೇಶಕಥನದಲ್ಲಿ ತ್ರಾವಣೀ, ಷಡ್ಜಭಾಷಾ, ಮಾಲವೀ, ಗುರ್ಜರೀ, ಬಾಹ್ಯಷಾಡವಾ, ಕೌಸಲೀ, ಗಾಂಧಾರೀ, ಸ್ವರವಲ್ಲಿತಾ, ಲಲಿತಾ, ನಿಷಾದವತೀ, ತುಂಬುರು, ಗಾಂಧಾರಲಲಿತಾ ಎಂಬ ಹನ್ನೆರಡರ ಹೆಸರುಗಳು ಮಾತ್ರ ದೊರೆಯುತ್ತವೆ (೧೦೦೪, ೧೦೦೫ ಅಆ). ಉಳಿದ ನಾಲ್ಕರ ಹೆಸರುಗಳನ್ನು ಊಹಿಸಿ ದ್ವಿಸಂರು [ಕಲಿಂಗಾ ಚೈವ ಶುದ್ಧ ಚ ಮಧ್ಯಮಾ ಪಾರ್ವತೀ ತಥಾ] ಎಂಬ ಶ್ಲೋಕಾರ್ಧವನ್ನು ರಚಿಸಿದ್ದಾರೆ. ಇವುಗಳ ಪೈಕಿ ಕಲಿಂಗಾ, ಮಧ್ಯಮಾ ಮತ್ತು ಪಾರ್ವತೀ ಎಂಬ ರಾಗನಾಮಗಳು ಆಯಾ ರಾಗಲಕ್ಷಣಗಳಲ್ಲೋ ಉದಾಹರಣ ಸಮಾಪನಗಳಲ್ಲೋ ಇವೆ; ಶುದ್ಧಾ ಎಂಬುದಿಲ್ಲ. ಅದು ದ್ವಿಸಂ.ರ ಪಾಠಪುನಾರಚನೆಯಲ್ಲಿ ಮಾತ್ರ ಇದೆ. ಮೇಲೆ ಅವರು ಪುನಾರಚಿಸಿರುವ ಲಕ್ಷಣಶ್ಲೋಕವು ಶುದ್ಧಾರಾಗದ್ದು ಎನ್ನಲು ಅವರು ಕಲ್ಲಿ. ಮತ್ತು ಸಂರಾಜಗಳಲ್ಲಿರುವ ಈ ಲಕ್ಷಣೋಕ್ತಿಗಳನ್ನು ಅವಲಂಬಿಸಿದ್ದಾರೆ :

i           ಧಾಂಶಗ್ರಹಾಂತಾ ಮೃದುಲಧೈವತಾ ರಿಧವರ್ಜಿತಾ |
ಪವರ್ಜಿತಾ ವಾ ಸಗಯೋಃ ಸಂಬದ್ಧಾ ಭಿನ್ನಷಡ್ಜಜಾ |
ಸಾಪನ್ಯಾಸಾ ಮಂದ್ರಸಗಧಾ ಶುದ್ಧಾ ದೀರ್ಘಪಂಚಮಾ || (ಕಲ್ಲಿ. ಅದೇ : ೧೪೦)

ii          ಶುದ್ಧಾ ಭಾಷಾ ಭಿನ್ನಷಡ್ಜೇ ಗ್ರಹಾಂಶನ್ಯಾಸಧೈವತಾ |
ಗಾಪನ್ಯಾಸಾ ಧಭೂಯಿಷ್ಠಾ ರಿಹೀನಾ ಮೇದಯಷಡ್ಜಿಕಾ |
ಧತಾರಾ ಪಂಚಮೇನಾಪಿ ರಿಹತಾ ಯಾಷ್ಟಿಕೇ ಮತಾ ||
(ಸಂರಾಜ.೨.೨.೧.೧೦೩೮:೩೯೪)

ಭಿನ್ನಷಡ್ಜದಲ್ಲಿ ಭಾಷಾತ್ವ, ಧೈವತವು ಗ್ರಹ ಮತ್ತು ನ್ಯಾಸ (ಮತ್ತು ಅಂಶ?)ಗಳೆಂಬ ಎರಡು ಸಾಧಾರಣಾಂಶಗಳನ್ನು ಬಿಟ್ಟರೆ ಈ ಮೂರು ಲಕ್ಷಣೋಕ್ತಿಗಳೂ ಪರಸ್ಪರ ವಿರುದ್ಧವಾಗಿಯೇ ಇವೆ. ಸಂರಾಜದ ಪ್ರಕಾರ ಇದು ಶಾರ್ದೂಲಮತವು ಸಹ ಅಲ್ಲ, ಯಾಷ್ಟಿಕ ಮತ. ಶುದ್ಧಾರಾಗಲಕ್ಷಣವೆಂದು ಮೇಲೆ ಗ್ರಹಿಸಿರುವ ಶ್ಲೋಕದ ಎರಡನೆಯ ಪಾದದ(‘ಧೈವತಮಧ್ಯಮಾ’ ಎಂಬ) ಗ್ರಂಥಾಂಶವನ್ನೂ ಉದಾಹರಣ ಸಮಾಪ್ತಿಯಲ್ಲಿರುವ ‘ಮಧ್ಯಮಾ’ ಎಂಬ ಹೆಸರನ್ನೂ ಗಮನಿಸಿದರೆ ಸದರಿ ಲಕ್ಷಣವು ಶುದ್ಧಾರಾಗದ್ದಾಗಿರುವುದರ ಬದಲು ‘ಮಧ್ಯಮಾ’ರಾಗದ್ಧಾಗಿರಬಹುದೇ ಎಂಬ ಸಂದೇಹವು ಮೂಡುತ್ತದೆ. ಒಂದು ವೇಳೆ ಅದು ಶುದ್ದಾರಾಗದ ಲಕ್ಷಣವೇ ಆಗಿದ್ದರೆ ‘ಧೈವತಮಧ್ಯಮಾಶುಭಾ’ ಎಂಬ ಗ್ರಂಥಾಂಶವನ್ನು ‘ಧೈವತಮೇದುಲಾ ಶುಭಾ’ ಕಲ್ಲಿನಾಥನ ಉದ್ಧೃತಿಯನ್ನು ಅನುಲಕ್ಷಿಸಿ ಎಂದು ತಿದ್ದಬಹುದು. ‘ಧೈವತಮಧ್ಯಮೌ ಸ್ಯಾಚ್ಛುದ್ಧೌ’ ಎಂಬ ಪಾಠವೂ ಪರಿಶೀಲನಾರ್ಹವಾಗಿದೆ. ಭಿನ್ನಷಡ್ಜಾದ ಭಾಷಾರಾಗಗಳ ಹೆಸರುಗಳಲ್ಲಿಯೂ ಲಕ್ಷಣಗಳಲ್ಲಿಯೂ ಯಾಷ್ಟಿಕಮತ-ಶಾರ್ದೂಲ ಮತಗಳು ಪರಸ್ಪರ ಭಿನ್ನವಾಗಿರುವುದರಿಂ ಅದರಿಂದ ಪಾಠವಿಮರ್ಶೆಗೆ ನೆರವು ದೊರೆಯುವುದಿಲ್ಲ.

೧೦೩೨. ಮಧ್ಯಮಾರಾಗದ ಲಕ್ಷಣಕ್ಕೂ ಗ್ರಂಥಪಾತವಿದೆ. ಈ ಲಕ್ಷಣವು ಗ್ರಂಥಾಂತರಗಳಲ್ಲಿ ಹೀಗೆ ದೊರೆಯುತ್ತದೆ :

ಮಧ್ಯಮಾ ಭಿನ್ನಷಡ್ಜಸ್ಯ ಭಾಷಾ ಮಾಂತಾ ಗ್ರಹಾಂಶಧಾ | (ಕಲ್ಲಿ. ಅದೇ : ೧೪೦)
ಗ್ರಹಾಂಶಧೈವತಾ ಷಡ್ಜಪ್ರಾಂತಾ. ಪೂರ್ಣಾ ಚ ಮಧ್ಯಮಾ |
(ಸಂರಾಜ ೨.೨.೧.೧೦೩೩:೩೯೩)

೧೦೩೪ಅ. ಪಾರ್ವತೀ ಸ್ಯಾದ್ : ತು ಪಾರ್ವತ್ಯಾ (ಪ್ರಸಂ)

೧೦೩೪ಇಈ. ಕ್ಷತ್ರರಿಷದಿ ….. ಸಮುದ್ಭವಾ : ಹೃಷ್ಟಾ ಕ್ಷತ್ರಪರಿಷದಿ ಗೀಯತೇ ಪೂರ್ಣಷಡ್ಜ ಸಮುದ್ಭವಾ(ಪ್ರಸಂ) ಛಂದೋನಿಯಮಕ್ಕೆ ಅನುಸಾರವಾಗಿ ಹೀಗೆ ಪುನಾರಚಿಸಿದೆ.

೧೦೩೬ ಸಮಾಪ್ತಿ: [ಮತಂಗಮುನಿ…ಸಮಾಪ್ತಃ] ಇತಿಭಾಷಾಲಕ್ಷಣಂ, ಸಮಾಪ್ತಂ (ಪ್ರಸಂ) ಗ್ರಂ. ಭಾ.೧೦೫೨ನ್ನೂ ೧೦೯೨ನ್ನೂ ಅನುಲಕ್ಷಿಸಿ ಹೀಗೆ ತಿದ್ದಿದೆ ದ್ವಿಸಂ.ರೂ [ಇತಿ ಚತುರ್ಥೋsಧ್ಯಾಯ:] ಎಂದು ಊಹಾತ್ಮಕವಾಗಿ ಸೇರಿಸಿದ್ದಾರೆ.