[ಕ.ಯಾಷ್ಟಿಕಮತ]

ಈ ಅಧ್ಯಾಯದ ಸಮಾಪ್ತಿವಾಕ್ಯದಿಂದ ಅದು ಯಾಷ್ಟಿಕಮುನೀಯ ಸರ್ವಾಗಮಸಂಹಿತೆಯ ಭಾಗವೆಂದು ತಿಳಿದುಬರುತ್ತದೆ. ಈ ಅಧ್ಯಾಯವೂ ಬೃಹ. ಯಂತೆಯೇ ಪೌರಾಣಿಶೈಲಿಯಲ್ಲಿ. ಎಂದರೆ ಮುನಿಗಳ ಪ್ರಶ್ನೆಗಳಿಗೆ ಮುನಿಗಳು ನೀಡಿದ ಉತ್ತರರೂಪದಲ್ಲಿ – ಮತಂಗನ ಪೂರ್ವಾಚಾರ್ಯರಾದ ಕಾಶ್ಯಪ (ಪ್ರಶ್ನೆ), ಯಾಷ್ಟಿಕ(ಉತ್ತರ)ರಸಂವಾದರೂಪದಲ್ಲಿ – ಇದೆ. ಇದರಲ್ಲಿ ಎರಡು ಭಾಗಗಳಿವೆ’ ಮೊದಲನೆಯದರಲ್ಲಿ ಯಾಷ್ಟಿಕಮತಾನುಸಾರವಾದ ಭಾಷಾಲಕ್ಷಣವು ೧೪೬ ಶ್ಲೋಕಗಳಷ್ಟು ವಿಸ್ತಾರವಾಗಿದೆ; ಎರಡನೆಯದರಲ್ಲಿ ಶಾರ್ದೂಲಮತಾನುಸಾರವಾದ ಭಾಷಾಲಕ್ಷಣವು ೩೩ ಶ್ಲೋಕಗಳಷ್ಟು ಮಾತ್ರ ಇದೆ. ದ್ವಿಸಂ.ರು ಇದನ್ನು ಬೃಹದ್ದೇಶಿಯ ನಾಲ್ಕನೆಯ ಅಧ್ಯಾಯವೆಂದು ಎಣಿಸಿಕೊಂಡಿದ್ದರೂ ಅದರ ಎರಡೂ ಭಾಗಗಳನ್ನು ಬೇರೆಯೆಂದೇ ಭಾವಿಸಿಕೊಂಡು ಅವುಗಳ ಶ್ಲೋಕಗಳನ್ನು ಬೇರೆ ಬೇರೆಯಾಗಿ ಲೆಕ್ಕಿಸಿದ್ದಾರೆ.

೭೪೦ಆ. ದೇಶಜಾ ತಥಾ : ದೇಶಜಾತರೇ (ಪ್ರಸಂ)

೭೪೨ಆ. ಗೀಯತೇ : ಗೀ(ತಯೇ?ಯತೇ) (ಪ್ರಸಂ) (ಅಕ್ಷರಪಲ್ಲಟನ ಪ್ರಮಾದದಿಂದ)

೭೪೯ಅ. ಕಕುಭೇ : ಕಕು(ಭೈ?ಭೇ) (ಪ್ರಸಂ)

೭೫೨ಅ. ಪಂಚಮ- : ಪಂಚ (ಮಾ?ಮ) – (ಪ್ರಸಂ)

೭೫೬ಇ. ಅಂಬಾಹೇರಿ : ವಾಹೇರ್ಯಾ (ಸಂರಾಜ. ೨.೨.೧.೧೧.ಇ:೨೭೪)

೭೫೭ಅ. ದೇಹಾ : ದೇಶಾ (ಪ್ರಸಂ)

೭೫೭ಈ. –ಷ್ಟಕ್ಕ- : (-ಷ್ಟಕ್ಕ-) (ಪ್ರಸಂ)

೭೫೭ಈ. ಷೋಡಶ : ಸಂ.ರಾಜದ ಪ್ರಕಾರ ಟಕ್ಕರಾಗದ ಭಾಷಾಗಳು ಹದಿನೈದೇ, ಏಕೆಂದರೆ ಅಲ್ಲಿ ಪೋತಾರಾಗವನ್ನು ಟಕ್ಕವಿಭಾಷೆಯನ್ನಾಗಿ ಸೇರಿಸಿಕೊಂಡು (೨.೨.೧.೧೨೦ಅಆ:೨೭೪) ವೇಸರಿಕಾಭಾಷಾವನ್ನು ಬಿಟ್ಟಿದೆ.

೭೫೮ಆ. ಚಾರ್ಧವೇಸರಿಕಾ : ಚಾದ್ಯವೇಸರಿಕಾ (ಪ್ರಸಂ). ಸಂರ(೨.೧.೩೩ಈ:೧೨)ದ ಆಧಾರದಿಂದ ಈ ಪಠವನ್ನು ಗ್ರಹಿಸಿದೆ.

೭೫೮ಇ. ಹರ್ಷಪೂರೀ : ಹರ್ಷಪುತ್ರೀ (ಪ್ರಸಂ) (ಅಕ್ಷರಾಪಭ್ರಂಶದಿಂದ)

೭೫೯ಇ. ಖಂಜರೀ : ಖಂಜನೀ (ಪ್ರಸಂ; ಸಂರ.೨.೧.೩೩ಇ:೧೨; ಸಂರಾಜ. ೨.೨.೧.೯೯೯ಇ:೩೯೦); ಆದರೆ ಸಂರಾಜದಲ್ಲೇ (೨.೨.೧೨೧ಇ:೨೭೪) ಇದನ್ನು ಯಾಷ್ಟಿಕಮತಾನುಸಾರವಾಗಿ ಖಂಜರೀ ಎಂದು ಪಠಿಸಿದೆ.

೭೬೦ಇ. ಸಾತವಾಹನಿಕಾ : ಶಾಲವಾಹಿನಿಕಾ (ಸಂರ. ೨.೧.೨೪:೧೧): ಶಾಲವಾಹಿನೀ (ಸಂರ. ೨.೨.೧.೧೨೩ಅ: ೨೭೫)

೭೬೦ಈ. ಭೋಗ- : (ಭಾಗ-(ಪ್ರಸಂ) (ಮಾತ್ರಾಲೋಪದಿಂದ)

೭೬೧ಅ. ಮುಹರೀ : ಮಧುಕರೀ (೮೪೩-೮೪೫); ಮಧುರೀ (ಸಂರ. ೨.೧.೨೨:೧೧)

೭೬೨ಈ. ಮಂಜರೀ : ಪ್ರಥಮಮಜರೀ (೮೫೫, ೮೫೬); ಚೂತಮಂಜರೀ (ಸಂರ. ೨.೧.೩.೧ಇಈ; ೧೨; ಕಲ್ಲಿ. ಸಂರ. ಅದೇ: ೧೩೭)

೭೬೩ಈ. ಹಿಂದೋಲಕ : ಈ ರಾಗಕ್ಕೆ ಪ್ರೇಂಖಕ ಎಂಬ ಹೆಸರನ್ನು ಅನ್ಯತ್ರ ಬಳಸಿದೆ. (ಉದಾ. ಸಂರ. ೨.೧.೩೧ಇಈ:೧೨)

೭೬೪ಈ. ಆಂಧ್ರೀ ತಾನೋ-: ಆಂಧ್ರೀ ತ್ವಾನ್ನೋ –(ಪ್ರಸಂ); ಲಕ್ಷಣಕಥನಾವಸರದಲ್ಲಿ (೮೭೯-೮೮೧) ಆಂಧಾಲಿ ಎಂದೂ ಕಲ್ಲಿ. (ಸಂರ. ೨.೨ಪರಿಶಿಷ್ಟ:೧೩೫) ಹಾಗೂ ಸಂರಾಜ(೨.೨.೧.೧೨೪ಈ) ಗಳಲ್ಲಿ ಆಂಧ್ರೀ ಎಂಧೂ ಇದನ್ನು ಕರೆದಿದೆ.

೭೬೫ಆ. ಕೈಶಿಕೀ : ಪಂಚಮೀ (ಸಂರಾಜ.೨.೨.೧.೧೨೬, ಯಾಷ್ಟಿಕನ ಮತ).

೭೬೬ಅ. ವಿಶುದ್ಧಾ : ಗ್ರಂಥಭಾಗ ೮೯೧ಉ.ದ ಪಾಠವಿಮರ್ಶೆಯನ್ನು ನೋಡಿ.

೭೬೭ಅ. ಕಾಲಿಂಗೀ : ಕಾಲಿಂದೀ (ಪ್ರಸಂ)

೭೬೮ಇ. ಏವಂ ಜ್ಞೇಯಾ ಚತಸ್ರೋ ಹಿ : ಭಾಷಾ ಸೈಂಧವಿಕೀ ಜ್ಞೇಯಾ (ಪ್ರಸಂ); ಆದರೆ ಸೌವೀರಜನ್ಯವಾದ ಭಾಷಾರಾಗಗಳ ಲಕ್ಷಣನಿರೂಪಣೆಯಲ್ಲಿ ಸೈಂಧವಿಯು ಸೇರಿಲ್ಲ; ಈ ನಿರೂಪಣಾವಸರದಲ್ಲಿ ಇರುವ ರಾಗಗಳ ಅನುಕ್ರಮವನ್ನು (ಗ್ರಂ.ಭಾ.೯೧೪-೯೨೧) ಅನುಲಕ್ಷಿಸಿ ಪಾಠವನ್ನು ಹೀಗೆ ತಿದ್ದಿದೆ.

೭೬೯ಅ. ಶುದ್ಧ : ಶುದ್ದಾ (ಪ್ರಸಂ)

೭೬೯ಅ. ವರಾಟೀ : ವಾರಾಹೀ (ಪ್ರಸಂ)

೭೬೯ಇ. ವಿಶಾಲಾ : ವರಾಟೀ (ಪ್ರಸಂ). ಆದರೆ ವಿಸಾಲಾ (ಸಂರ.೨.೧.೩೦೬ಆ:೧೧ ಮತ್ತು ಸಂರಾಜ ೨.೨.೧.೮೬ಇ:೨೭೨, ವಿಶಾಲಿನಿ) ಇದರ ಆಧಾರದ ಮೇಲೆ ವಿಸಾಲಾ ಎಂಧು ತಿದ್ದಿದೆ.

೭೭೦ಅ. ಮಾಂಗಲ್ಯಾ – : ಮಂಗಲ್ಯಾ (ಪ್ರಸಂ)

೭೭೦ಇಈ. ಮಾಲಪಂಚಮೇ ….ಭಾವಿನೀ : ಪ್ರಸಂ.ದಲ್ಲಿ ಈ ಶ್ಲೋಕದ ಎರಡು ಅರ್ಧಗಳು ಅದಲುಬದಲಾಗಿವೆ. ಗ್ರಂಥಭಾಗ ೭೫೦ ರಲ್ಲಿ ರುವ ಭಾಷಾರಾಗ ಕ್ರಮದ ಆಧಾರದಿಂದ ಹೀಗೆ ತಿದ್ದಿದೆ.

೭೭೧ಆ. ಭಿನ್ನವಾಲಿಕಾ : ತೃತೀಯಾ ವೇಗಮದ್ಯಮಾ (ಪ್ರಸಂ); ಭಿನ್ನವಲಿತಾ (ಸಂರ.೨.೧.೩೦:೧೧; ಸಂರಾಜ.೨.೨.೧.೧೩೧.ಇ.೨೭೫) ಭಿನ್ನವಲಿತಾ ಎಂಬ ಪಾಠವು ಸಂಭಾವ್ಯವಾಗಿದೆ.

೭೭೧ಇಈ. ತೃತೀಯಾ ದ್ರಾವಿಡೀ ತತ್ರ ಭಾಷಾ : ಮಾಲವಾ ಭಿನ್ನವಾಲೀಕಾ +++++++++(ಪ್ರಸಂ)

೭೭೨ಅ. ಭಿನ್ನಷಾಡವನಾದಾಖ್ಯೋ: ಬಾಹ್ಯಷಾಡನಾದಾಖ್ಯಾ+(ಪ್ರಸಂ)

೭೭೩ಆ. ಗಾಂಧಾರಿಕಾ ಮತಾ : ++++++(ಪ್ರಸಂ)

೭೭೩ಇ. ಬಹುಗಾಂಧಾರಾ : ಸಂರಾಜ(೨.೨.೧.೧೦೦೬ಊ. ೩೯೦)ದ ಷಾಠವನ್ನು ಸ್ವೀಕರಿಸಿದೆ; ++++ (ಪ್ರಸಂ)

೭೭೪ಅ. ರೇವಗುಪ್ತೇ : ರೇವಗುಪ್ತವನ್ನು ಭಾಷಾಉದ್ದೇಶಕ್ರಮದಲ್ಲಾಗಲಿ, ಅದರ ಲಕ್ಷಣನಿರೂಪಣದಲ್ಲಾಗಲಿ, ಬೇರೆಡೆಯಲ್ಲಾಗಲಿ ಭಾಷಾಜನಕವೆಂದು ಹೇಳಿಲ್ಲವೆಂದು ದೈಸಂ. ರು ಶಕವನ್ನು ಪಂಚಮಷಾಡವದಲ್ಲಿ ಹುಟ್ಟಿದ ಭಾಷಾರಾಗವೆಂದು ಎಣಿಸಿಕೊಂಡಿದ್ದಾರಡ. ಆದರೆ ಮೇಲೆ ಹೇಳಿರುವ ಷಾಡವ(೭೪೮ಆ) ‘ಕೇಷಿದಿಚ್ಛಂತಿ ಷೋಢಶ’ ಎಂಬುದರ ಪ್ರಕಾರ ಯಾಷ್ಟಿಕಮತದಲ್ಲಿ ಟಕ್ಕಾರಾಗದ ಭಾಷಾಗಳು ಹದಿನಾರೆಂದೂ ರೇವಗುಪವು ಅವುಗಳಲ್ಲಿ ಹದಿನೈದನೆಯದು, ಪಂಚಮಷಾಡವವು ಹದಿನಾರನೆಯದು ಎಂದೂ ಪರಿಗಣಿಸಿ ಸಂರ. (೨.೧.೪೦-೪೧:೧೨) ದಲ್ಲಿರುವ ‘ಭಾಷಾ ಪಂಚಮಷಾಡವೇ ಫೋತಾ; ಭಾಷಾಂ ಶಕಾಮೇಕೇ ರೇವಗುಪ್ತೇ ವಿದುರ್ವಿದಃ ಎಂಬ ಉದ್ದೇಶಕ್ರಮವನ್ನುನುಸರಿಸಿ ಕೆಲವರ ಅಭಿಪ್ರಾಯದಲ್ಲಿ (‘ಏಕೇ’ಶಕವು ರೇವಗುಪ್ತದಲ್ಲಿ ಹುಟ್ಟಿರುವ ಭಾಷಾರಾಗವೆಂದೂ ಪಂಚಮಷಾಡದಲ್ಲಿ ಪೋತಾ ಎಂಬ ಭಾಷಾರಾಗವು ಹುಟ್ಟಿದೆಯೆಂದೂ ಇಟ್ಟುಕೊಳ್ಳುವುದು ಸರಿಯಾಗುತ್ತದೆ. ಕಲ್ಲಿನಾಥನು ಮತಂಗಮತಾನುಸಾರವಾಗಿ ಪೋತಾ ಎಂಬ ಭಾಷಾರಾಗವನ್ನು ಪಂಚಮಷಾಡವದಲ್ಲಿ ವರ್ಣಿಸುತ್ತಾನೆಂಬುದನ್ನು (ಅದೇ : ೧೪೨) ಗಮನಿಸಬೇಕು:

ರಿಷಭಾಂಶಗ್ರಹನ್ಯಾಸಾ ಧಹೀನಾ ನಿಸಭೂಯಸೀ |
ಪೋತಾ ಪ್ರೋಕ್ತಾ ಮತಂಗೇನ ಭಾಷಾ ಪಂಚಮಷಾಡವೇ ||

ಯಾಷ್ಟಿಕಮತದಲ್ಲಿ ರೇವಗುಪ್ತವು ಭಾಷಾಜನಕವಾದ ಗ್ರಾಮರಾಗವಲ್ಲದಿದ್ದರೂ ಬೇರೆ ಆಚಾರ್ಯರು ಅದಕ್ಕೆ ಭಾಷಾಜನಕತ್ವವನ್ನು ಹೇಳಿ ಅದರಲ್ಲಿ ಶಕರಾಗವು ಜನ್ಯವೆಂದು ವರ್ಗೀಕರಿಸುತ್ತಾರೆಂದು ಕಲ್ಲಿನಾಥನೇ ಹೇಳುತ್ತಾನೆ (ಸಂರ.೨.೧.೪೧ಆ:೧೨,೧೩) : ‘ಏಕೇ ರೇವಗುಪ್ತೇ ವಿದುರ್ವಿದ ಇತಿ ಉಕ್ತಮತಾನುಸಾರೇಣ ರೇವಗುಪ್ತಸ್ಯ ಭಾಷಾಜನಕೇಷ್ವಪರಿಗಣಿತೇsಪಿ ತಸ್ಯಾಪಿ ಭಾಷಾಜನಕತ್ವ ಮಂಗೀಕೃತ್ಯಾನ್ಯ ಆಚಾರ್ಯಾಃ ಶಕಾಂ ತದ್ಭಾಷಾಮುಕ್ತವಂತ ಇತ್ಯರ್ಥಃ | ಮತಂಗನು ಶಕದ ಜನ್ಯತ್ವವನ್ನು ಹೇಳಿದಂತೆ ಮೇಲೆ ಹೇಳಿರುವ ಸಂಗತಿಗಳಿಂದ ಸಿದ್ಧವಾಗುತ್ತದೆ. ಆದುದರಿಂದ ಇಲ್ಲಿ ಪಾಠವನ್ನು

‘ರೇವಗುಪ್ತೇ ಶಕಾಖ್ಯೈಕಾ (!-ಕೇ) ಪ್ರೋಕ್ತಾ (!ಪೋತಾ) ಪಂಚಮಷಾಡವೇ | ’

ಎಂದು ತಿದ್ದಿಕೊಂಡಿದೆ. ಇದನ್ನು ಅನುಸರಿಸಿ ಗ್ರಂಥಖಂಡ ೯೫೩ -೯೫೪ ಗಳ ಶೀರ್ಷಿಕೆಗಳನ್ನು ಬದಲಾಯಿಸಿರುವುದಲ್ಲದೆ ಮೂಲದಲ್ಲಿ ನಷ್ಟವಾಗಿರುವ ಪೋತಾರಾಗದ ಲಕ್ಷಣವನ್ನು ಕಲ್ಲಿನಾಥನಿಂದ ಉದ್ಧರಿಸಿಕೊಂಡಿದೆ. (ಗ್ರಂ. ಭಾ.೯೫೬,೯೫೭)

೭೭೬ಈ. ಷಡ್ಜಧೈವತಯೋಸ್ತಥಾ : ಷಡ್ಜಸ್ಯೇವ ತಯೋಸ್ತಥಾ(ಪ್ರಸಂ). ಸಂರಾಜ (೨.೨.೧.೭೮೫ ಈ:೩೬೫) ದಲ್ಲಿರುವ ಪಾಠವನ್ನು ಅವಲಂಬಿಸಿ ಹೀಗೆ ತಿದ್ದಿದೆ.

೭೭೬ಈ. ತ್ರವಣಾ : ಮತಂಗಮತದಲ್ಲಿ ಇದು ಟಕ್ಕಭಾಷಾಮಾತ್ರವಾಗಿದೆ. ಆದರೆ ನಂತರದಲ್ಲಿ ಇದನ್ನು ಟಕ್ಕರಾಗದ ಹಾಗೂ ಭಿನ್ನಷಡ್ಜದ ಭಾಷಾ ಎಂದು ವರ್ಗೀಕರಿಸಿರುವುದು ಕಂಡುಬರುತ್ತದೆ. ಉದಾ.ಸಂರ.(೨.೧.೨೪೬ಆಅ:೧೧;೨.೧.೩೬.:೧೨); ಸಂರಾಜ (೨.೨.೧೯೬ಇ:೨೭೩) ಹೋಲಿಸಿ

ಮಧ್ಯಮಾಂಶಗ್ರಹಾ ಹೀನಪಂಚಾ ಷಡ್ಜವಿಶ್ರಮಾ |
ನಿಷಾದವದ್ ಧೈವತಯೋಃ ಷಡ್ಜಧೈವತಯೋಃ ಕ್ರಮಾತ್ |
ಸಂಗತ್ಯಾ ಸಹಿತಾ ಟಕ್ಕೇ ತ್ರವಣಾ ಯಾಷ್ಟಿಕೇ ಮತೇ |
ರಸೇ ವೀರೇ ಪ್ರಯೋಕ್ತವ್ಯಾ ಮಧ್ಯಮಗ್ರಾಮಸಂಶ್ರಯಾ |
(ಸಂರಾಜ.೨.೨.೨.೧.೭೮೫,೭೮೬:೩೬೫)

ಇದೇ ಆಕರದಲ್ಲಿ (೨.೨.೧.೧೦೪೨:೩೯೪) ತ್ರವಣಾರಾಗವನ್ನು ಭಿನ್ನಷಡ್ಜಭಾಷಾ ಎಂದೂ ವರ್ಣಿಸಿದೇ.

೭೭೮ಈ. ಬಹುಲೌ ಧೈವತರ್ಷಭೌ : ಮುಹರೀ ಷಡ್ಜಧೈವತಃ (ಪ್ರಸಂ). ಕಲ್ಲಿ(ಸಂರ.೨.೨.ಪರಿಶಿಷ್ಟ: ೧೩೪) ನಲ್ಲಿರುವ ‘ಬಹುರಿಧಾ’ ಮತ್ತು ಸಂರಾಜ (೨.೨.೧.೭೮೯ಅಆ:೩೬೫) ದಲ್ಲಿರುವ ‘ಧೈವತರ್ಷಭಗಾಂಧಾರಭೂಯಸೀ’ ಎಂಬ ಲಕ್ಷಣಗಳನ್ನು ಅನುಲಕ್ಷಿಸಿ ಪಾಠವನ್ನು ಹೀಗೆ ತಿದ್ದಿದೆ.

೭೭೯ಅ. ಸ: ಸಾ; ಊ. ತ್ರವಣೋದ್ಭವಾ : (ತ್ರವಣೋದ್ಭವಾ) (ಪ್ರಸಂ

೭೮೦ಅ. ವೇರಂಜಿಕಾ : (ಯೇ?ವೇ) ರಂಜಿಕಾ (ಪ್ರಸಂ)

೭೮೦ಆ. ಗಾಂಧಾರಾಂಶಾಲ್ಪಪಂಚಮಾ : ಹೋಲಿಸಿ:

ಟಕ್ಕವೇರಂಜಿಕಾ ಸಾಂತಾ ಷಗ್ರಹಾಂಶಾಲ್ಪಪಂಚಮಾ (ಕಲ್ಲಿ. ಸಂರ.೨.ಪರಿಶಿಷ್ಟ:೧೩೪)

೭೮೦ಈ. ಷಡ್ಜಧೈವತಯೋಸ್ತಥಾ : ಹೋಲಿಸಿ :

ಸಪಯೋ ರಿಗಯೋಶ್ಚಾಪಿ ಸಂಗತಾ ಷಾಡವಾ ಮತಾ (ಕಲ್ಲಿ. ಅದೇ)

೭೮೧ಆ. ತು ಗಾಂಧಾರರ್ಷಭ-: ತು(?) ಗಾಂಧಾರರ್ಷ (ಭ) (ಪ್ರಸಂ)

೭೮೨ಆ. ರಿ : ದಿ (ಪ್ರಸಂ)

೭೮೩ಉ. ಮೂಲ : ಮೂಕ(ಪ್ರಸಂ)

೭೮೩ಉಊ. ಮೂಲ……ಗೇಯವೆದಿಭಿಃ : ಹೋಲಿಸಿ:

ಛೇವಾಟೀ ಟಕ್ಕಜಾ ಸಂಪೂರ್ಣಾ ಯಾಷ್ಟಿಕೋದಿತಾ (ಕಲ್ಲಿ.ಸಂರ.೨.ಪರಿಶಿಷ್ಟ :೧೩೪)

೭೮೪ಆ. ಪಾಮಪಾ : ಧಾಮಧಾ (ಪ್ರಸಂ)

೭೮೪ಈ. ಪಾ : ಧಾ(ಪ್ರಸಂ)

೭೮೪ಊ. (ಛೇವಾಟೀ) : ಛೇವಾಜ(ಪ್ರಸಂ)

೭೮೫ಆ. ದುರ್ಬಲಾ : ಇಲ್ಲಿ ಪಂಚಮವು ದುರ್ಬಲವಾಗಿದೆಯೆಂದು ಹೇಳಿದ್ದರೆ ಸಂರಾಜ (೨.೨.೧.೮೦೦ಈ: ೩೬೬:ದಲ್ಲಿ ಪಂಚಮವು ಲೋಪವೆಂದೇ ವಿಧಿಸಿದೆ: ‘ಪಂಚಮಲೋಪತಃ’

೭೮೫ಇ. –ಗಾಂಧಾರ : ಗಮಾರ(ಪ್ರಸಂ)

೭೮೫ಈ. ಮಧ್ಯಮಯೋಸ್ತಥಾ : (ಮಧ್ಯಮಂ?) ಮಧ್ಯಮಯೋಸ್ತಥಾ(ಪ್ರಸಂ)

೭೮೫ಉ. ಷಾಡವಾ : ಷಾ(ಡ)ವಾ (ಪ್ರಸಂ)

೭೮೫ಊ. ಮಾಲವೇಸರೀ : ಮಾಲವವೇಸರೀ(ಪ್ರಸಂ); ಕಲ್ಲಿ.ಸಂರ.೨.ಪರಿಶಿಷ್ಟ:೧೩೪; ಸಂರಾಜ. ೨.೨.೧.೮೦೦ ಆ: ೩೬೬); ಛಂದೋನಿಯಮಕ್ಕೆ ಅನುಸಾರವಾಗಿ ಮಾಲವೇಸರೀ ಎಂದು ತಿದ್ದಿದೆ.

೭೮೭ಇಈ. ಸಂಗ(ತಿ)…..ಸ್ತಥಾ : ‘ಸಂಗತಾ ಸಮಯೋ ರಿನ್ಯೋಃ… (ಕಲ್ಲಿ. ಅದೇ:೧೩೬); ಷಡ್ಜಮಧ್ಯಮಸಂವಾದಾ ನಿರಿಭ್ಯಾಂ ಸಂಗತಾ ತಥಾ (ಸಂರಾಜ.೨.೨೮೦೩ಇಈ:೩೬೭); ಇವುಗಳನ್ನು ಆಧರಿಸಿ ಪಾಠವನ್ನು ಹೀಗೆ ತಿದ್ದಿದೆ.

೭೮೭ಉಊ. ದೇಶ..ಪರಮೋಜ್ಜ್ವಲಾ : ಕಲ್ಲಿ(ಸಂರ.ಅದೇ:೧೩೬)ನು ಮತಂಗ, ಆಂಜನೇಯರ ಮತದಂತೆ ಗೂರ್ಜರಿಯನ್ನು ಟಕ್ಕಭಾಷಾ ಎನ್ನುವುದರ ಬದಲು ಟಕ್ಕವಿಭಾಷಾ ಎಂದು ವರ್ಗೀಕರಿಸುತ್ತಾನೆ. (‘ದೇಶಜಾ ಟಕ್ಕವಿಭಾಷಾ’)

೭೮೮ಊ. ನೀಗಾಸಾ: ಧಾಧಾಧಾ(ಪ್ರಸಂ)

೭೮೯ಅ. ನಿಷಾದಾ ನಿ(ಷಾ)ದಾ-(ಪ್ರಸಂ)

೭೮೯ಇಈ. ಸೌರಾಷ್ಟ್ರಿಕಾ….ಜನೈಃ : ಹೋಲಿಸಿ:

ಸಾಂಶಗ್ರಹಾಂತಾ ಸೌರಾಷ್ಟ್ರೀ ಟಕ್ಕರಾಗೇ sತಿಭೂರಿನಿಃ |
ಭೂರಿತಾರಾ ಮಮಂದ್ರಾ ಚ ಹೀನಾ ಕರುಣೇ ಭವೇತ್ |
(ಸಂರ.೨.೨.೧೭೩, ೧೭೪ಅಆ:೧೨೦)

೭೯೦ಅ. ಸಾ : ದೇ(ಪ್ರಸಂ)

೭೯೧ಅ. ಸೈಂಧವೀ : ಸೈ(ವಮೀ?ಧವೀ)(ಪ್ರಸಂ)

೭೯೨ಅಆ. ಗಾಂಧಾರ….ಘನಮ್ : ಹೋಲಿಸಿ :

ಪೂರ್ಣಾ ಮಧ್ಯಮಷಡ್ಜಾಭ್ಯಾಂ ಸಂಗತಾ ಮಿಥಃ (ಸಂರಾಜ.೨.೨.೧.೮೦೮ಇಈ:೩೬೭)

೭೯೨ಅ. ಗಾಂಧಾರ : ಗಾಭಾರ(ಪ್ರಸಂ)

೭೯೨ಆ. ಗಮನಂ : ಗಮಕಂ(ಪ್ರಸಂ). ಗಮಕವೆಂಬುದು ಒಂದು ವಿಶೇಷ ಸ್ವರಕಂಪದ ಹೆಸರಾಗಿದ್ದರೆ ಪ್ರಸಂ.ದ ಪಾಠವೂ ಸಮಂಜಸವಾಗಿದೆ.

೭೯೨ಇಈ. ದೇಶಭಾಷಾ..ಟಕ್ಕರಾಗಜಾ :

ಚತುರ್ಧಾಸೈಂಧವೀ ತತ್ರ ಟಕ್ಕಭಾಷಾ ರಿಪೋಜ್ಝಿತಾ |
ಸನ್ಯಾಸಾಂಶಗ್ರಹಾ ಸಾಂದ್ರಾ ಗಮಕೈರ್ಲಘಿತೈಃ ಸ್ವರೈ |
ಸಗತಾರಾ ಷಡ್ಜಮಂದ್ರಾ ಗೇಯಾ ಸರ್ವರಸೇಷ್ವಸೌ |
(ಸಂರ.೨.೨.೧೭೭ಇಈ, ೧೭೮:೧೨೨)

೭೯೩ಅ. ಮಾಮಾ : ಸಾಸಾ(ಪ್ರಸಂ)

೭೯೫ಈ. ವೇಸರಿಕಾ : ವೇಸರಿಕಾ(ಪ್ರಸಂ)

೭೯೫ಈ. ಪ್ರಯೋಕ್ತೃಭಿಃ : ಸಕಾಕಲೀ (ಕಲ್ಲಿ. ಅದೇ: ೧೩೬)

೭೯೭ಊ: ‘ಸಂಪೂರ್ಣಾ’ ಈ ದ್ವಿರುಕ್ತಿದುಷ್ಟವಾದ ಪಾಠವನ್ನು ಪ್ರಶಸ್ತವೂ ಸಮಂಜಸವೂ ಆಗಿರುವ ‘ಸಂಕಿರ್ಣಾ’ ಎಂದು ತಿದ್ದಿದೆ.

೭೯೮ಅ. ಪಾ : ವ(ಪ್ರಸಂ); (ಈ) ರೀ: ಗ(ಪ್ರಸಂ)

೭೯೮ಉ. (ಪಂಚಮಾಖ್ಯಾ) : ಪಂಚಮಾಖ್ಯಾ ರದ್ವಿಚ (ಪ್ರಸಂ). (ಮುಂದಿನ ರಾಗದ ಹೆಸರು ರವಿಚಂದ್ರಾ ಎಂಬುದನ್ನು ಗಮನಿಸಬಹುದು.)

೭೯೯ಇಈ. ಋಷಭ…ಸ್ತಥಾ : ಹೋಲಿಸಿ:

i           ರಿಸಯೋಃ ಸಮಯೋರ್ಯುಕ್ತಾ ಟಕ್ಕಜಾ ರವಿಚಂದ್ರಿಕಾ
(ಕಲ್ಲಿ.ಅದೇ:೧೩೪)

ii          ಸಂಗತಾ ಸಮಯೋಶ್ಚೈವ ರಿಗಯೋಶ್ಚಾಲ್ಪಸಪ್ತಮಾ |
(ಸಂರಾಜ.೨.೨.೧.೫೧೬ ಇಈ :೩೬೮)

೭೯೯ಇ. ಋಷಭಗಾಂಧಾರ-: +ರ್ಷಭಗಾಂಧಾರ(ಪ್ರಸಂ)

೮೦೦ಇ. ಸಂಕೀರ್ಣಾsಥ ವಿಜ್ಞೇಯಾ : ಸಂಕೀರ್ಣಾದಯೋ ಜ್ಞೇಯಾ(ಪ್ರಸಂ)

೮೦೦ಇಈ. ಸಾ…ರವಿಚಂದ್ರಿಕಾ : ಇದರ ನಂತರ ಪ್ರಸಂ.ದಲ್ಲಿ ಟಕ್ಕರಾಗಜಾ ಎಂಬ ಅನಾವಶ್ಯಕ ಟಿಪ್ಪಣಿಯಿದೆ.

೮೦೧ಅ. ಗಾ : ಮಾ(ಪ್ರಸಂ)

೮೦೧ಈ. ಗಾ : ಧಾ(ಪ್ರಸಂ)

೮೦೨ಆ. ಬಹು-: ಬಾಹು(ಪ್ರಸಂ)

೮೦೨ಉ. ಪೋಜ್ಝೇತಾ : ಕೇ++ನಿ(ಪ್ರಸಂ); ಇದನ್ನು ‘ಅಂಬಾಹೇರಿ ಟಕ್ಕಭಾಷಾ ದೇಶಾಖ್ಯಾ ಪಂಚಮಾಂಕಿತಾ’ (ಕಲ್ಲಿ. ಅದೇ:೧೩)ಮತ್ತು’ ಮಧ್ಯಮಾಂಶಗ್ರಹಾ ಷಡ್ಜನ್ಯಾಸಾ ಪಂಚಮವರ್ಜಿತಾ’ (ಸಂರಾಜ.೨.೨.೧.೮೧೮:ಅಆ:೩೬೯)ಎಂಬ ಲಕ್ಷಣೋಕ್ತಿಗಳನ್ನು ಆಧರಿಸಿ ಪೋಜ್ಝೇತಾ’ ಎಂದು ತಿದ್ದಿದೆ.

೮೦೩ಅ. ಮಾಮಾ : ಸಾಸಾ(ಪ್ರಸಂ); (ಇ)ಧಾಧಾನಿ: ತಥಾನಿ(ಪ್ರಸಂ)

೮೦೪ಆ. ಬಹುಮಧ್ಯಮ : ಬಾಹುಲಾಧಮ (ಪ್ರಸಂ)

೮೦೪ಇ. ದ್ವಿಶ್ರುತಿ-: ವಿಶ್ರುತಿ-(ಪ್ರಸಂ)

೮೦೪ಈ. ಹೀನ-: (ಧೀತ? ಹೀನ)(ಪ್ರಸಂ)

೮೦೪ಉ. ಷಾಡವಿತಾ ಹ್ಯೇಷಾ : ಔಡುವಿತಾ++(ಪ್ರಸಂ). ಸಂರಾಜ(೨.೨.೧.೮೧೮:೩೬೯)ದ ಆಧಾರದಿಂದ ಹೀಗೆ ತಿದ್ದಿದೆ.

೮೦೪ಊ. ಲಲಿತಾ ಭವೇತ್: ಹೋಲಿಸಿ:

i           ಟಕ್ಕ ಭಾಷೈವಲಲಿತಾ ಲಲಿತೈರುತ್ಕಟೈಃ ಸ್ವರೈಃ |
ಷಡ್ಜಾಂಶಗ್ರಹಾಪನ್ಯಾಸ ಷಡ್ಜಮಂದ್ರಾ ರಿಪೋಜ್ಝಿತಾ |
ಧೀರೈರ್ವೀರೋತ್ಸವ ಪ್ರೋಕ್ತಾ ತಾರಗಾಂಧಾರಧ್ವೈವತಾ |
(ಸಂರ.೨.೧.೧೭೪ಇಈ, ೧೭೫:೧೨೦)

ii          ಟಕ್ಕಭಾಷೈವ ಲಲಿತಾ ಗ್ರಹಾಂಶನ್ಯಾಸಷಡ್ಜಭಾಕ್ |
ಪಂಚಮರ್ಷಭಹೀನಾ ಚ ತಾರಗಾಂಧಾರಧೈವತಾ |
ಷಡ್ಜಾನುಮಂದ್ರಬಹುಲಾ ಗಮಧಸ್ವರರಾಜಿತಾ |
ಲಲಿತಾ ಲಿತೈಃ ಸ್ತೋಭೈರ್ಲಲಿತ್ಕಟೈಃ ಸ್ವರೈಃ |

ಷಾಡವಾ ಯಾಷ್ಟಿಕಮತೇ ಋಷಭೈಕವಿಲೋಪತಃ |
ಸಂಗ್ರಾಮೇ ವಿನಿಯೋಕ್ತವ್ಯಾ ವೀರೋತ್ಸಾಹವರ್ಧಿನೀ ||
(ಸಂರಾಜ. ೨.೨.೧.೭೪೩-೭೪೫: ೩೬೦)

೮೦೪ಊ. ಲಲಿತಾ ಭವೇತ್: ಟಕ್ಕರಾಗಜಾ ಎಂಬ ಪಾಠಾಂತರವನ್ನು ದ್ವಿಸಂ.ರು ಪ್ರಸಂ. ದಿಂದ ಗ್ರಹಿಸಿದ್ದಾರೆ. ಇದು ಕೋಲಾಹಲೀ ರಾಗಲಕ್ಷಣದ (ಗ್ರಂ.ಭಾ.೮೦೭ಆ) ಸದೃಶಾಕ್ಷರಪದಾವಲೋಕನ ಪ್ರಮಾದದಿಂದ ಹೀಗಾಗಿದೆ. ಇದು ಪಾಠಾಂತರವಲ್ಲ.

೮೦೫ಇ. ಸಸಸಾ : ಸರಿಸಾ(ಪ್ರಸಂ)

೮೦೬ಇ. ವಿರಹಿತಾ : ವಿನಿಹಿತಾ(ಪ್ರಸಂ)

೮೦೬ಇ. ಸಪ್ತಮೇನ : ಸಪ್ತಮೇತ(ಪ್ರಸಂ)

೮೦೭ಅ. ಭಾಷಾ : ಹೋಲಿಸಿ:

ಔಡುವಾ ನಿಪಲೋಪೇನ ಯಾಷ್ಟಿಕಸ್ಯ ಮತೇ ಸತಃ(ಸಂರಾಜ.೨.೨.೧.೭೭೪ಅಆ.:೩೬೪). ಆದರೆ ಸಂರ (೨.೨.೧೪೩ಆ ‘ಪವರ್ಜೀತಾ’)ದಲ್ಲಿ ಪಂಚಮವು ಮಾತ್ರ ಲೋಪನೀಯವೆಂದು ಹೇಳಿದೆ.

೮೦೭ಅ. ತತ್ರ : ++ (ಪ್ರಸಂ)

೮೦೮ಈ. 1ಧಾರೀ : ನೀನೀ (ಪ್ರಸಂ) 2ನೀನೀ : ಧಾಪಾ(ಪ್ರಸಂ) 3ಧಾಧಾ : ಧಾಪಾ(ಪ್ರಸಂ)

೮೦೯ಆ. ಷಡ್ಜಮಧ್ಯಮ : ಷಡ್ಜೇ ಮಧ್ಯಮ (ಪ್ರಸಂ)4

೮೦೯ಇ. ಸುಸಂಪೂರ್ಣಾ : ಸಂರಾಜ(೨.೨೧.೮೨೦ಊ:೩೬೯)ದಲ್ಲಿ ‘ಪೂರ್ಣಸ್ವರೋದಿತಾ’ ಎಂದಿದೆ; ಆದರೆ ಕಲ್ಲಿ. (ಅದೇ:೧೩೪)ನು ಅಸಂಪೂರ್ಣಾ ಎಂದು ಉದ್ಧರಿಸಿಕೊಂಡಿದ್ದಾನೆ.

೮೦೯ಉ. ಭಾಷಾ: ಭಿನ್ನ (ಪ್ರಸಂ)

೮೧೦. [ಮಧ್ಯಮ (ಗ್ರಾಮ)ದೇಹಾ] : ಸಂರಾಜದಲ್ಲಿ ಮಧ್ಯಮಗ್ರಾಮದೇಹಾ ಮತ್ತು ಮಧ್ಯದೇಹಾ ಎಂಬ ಎರಡೂ ಭಾಷಾರಾಗಗಳನ್ನು ಟಕ್ಕಜನ್ಯಗಳೆಂದು ವರ್ಣಿಸಿದೆ. ಅವುಗಳಲ್ಲಿ ಮಧ್ಯಮಗ್ರಾಮದೇಹಾ ಎಂಬುದು ಬೃಹ ಯ ಈ ರಾಗಕ್ಕೆ ಹೀಗೆ ಅದೃಶವಾಗಿದೆ:

ಮಧ್ಯಮಾಂಶಗ್ರಹಾ ಷಡ್ಜನ್ಯಾಸಾ ಟಕ್ಕಸಮುದ್ಭವಾ |
ಷಡ್ಜಮಧ್ಯಮಸಂಗತ್ಯಾ(ತ್ಯೋ)ಪಚಿತಾ ಮಧ್ಯಗಾನಯುಕ್ |
ಮಧ್ಯಮಗ್ರಾಮದೇಹೇಯುಂ ಭಾಷಾ ಪೂರ್ಣಸ್ವರೋದಿತಾ ||
(ಸಂರಾಜ.೨.೨.೧.೮೨೦:೩೬೯)

ಮಧ್ಯಮದೇಹಾ ಎಂಬ ರಾಗವು ಇದಕ್ಕಿಂತ ಬೇರೆಯಾಗಿದೆ:

ಷಡ್ಜಾಂಶಗ್ರಹಪನ್ಯಾಸಾ ಪಂಚಮರ್ಷಭವರ್ಜಿತಾ |
ತಾರಧೈವತಗಾಂಧಾರ ಮಂದ್ರಮಧ್ಯಮಸಂಶ್ರವಾ |
ಮಧ್ಯಧೈವತಷಡ್ಜಾಖ್ಯಾ ನಿಯೋಜ್ಯಾ ವೀರ ಉತ್ತಮೇ |
ಉದ್ಭಟಪ್ರಾಯಗಮಕಾ ಷಡ್ಜಗ್ರಾಮಸಮಾಶ್ರಯಾ |
ಭಾಷಾ ಮಧ್ಯಮದೇಹೇಯಂ——– |
(ಸಂರಾಜ.೨.೨.೧.೭೬೧,೭೬೨:೩೬೨)

೮೧೧ಉ. ಭಾಷಾ : ಚ++(ಪ್ರಸಂ)

೮೧೧ಊ. ನಾಗಕಿನ್ನರೈಃ : ಪಾಲಕಿನ್ನರೈಃ (ಪ್ರಸಂ)

೮೧೨ಅ. ಧ : ಪ (ಪ್ರಸಂ)

೮೧೨ಋ. ಗಾಂಧಾರಪಂಚಮಿಕಾ : ಗಾಂಧಾರಪಂಚಮೀಕಾ(ಪ್ರಸಂ)

೮೧೨ ಇದರ ನಂತರ ಶೀರ್ಷಿಕೆ : (ಟಕ್ಕರಾಗವಿಭಾಷಾ:): ಇದರ ನಂತರ ಪ್ರಸಂ.ದಲ್ಲಿ ‘ಅತಃ ಪರಂ ಪ್ರವಕ್ಷ್ಯಾಮಿ ಲಕ್ಷಣಂ ಚ ಸಮಾಸತಃ ಎಂಬ ಗ್ರಂಥಂಶವಿದೆ. ಇಲ್ಲಿ ವಿಭಾಷಾವಿಷಯಕವಾದ ಒಂದು ಶ್ಲೋಕಾರ್ಧವು ಕಳೆದುಹೋಗಿರಬಹುದು.

೮೧೪. ಪೋತಾ : ಶುದ್ಧಾ(ಪ್ರಸಂ). ಸಂರಾಜ(೨.೨.೧.೧೨೦:೨೭೪)ದಲ್ಲಿ ಪೋತಾರಾಗವನ್ನು ಟಕ್ಕವಿಭಾಷಾ ಎಂದು ವರ್ಗೀಕರಿಸಿ ಅದನ್ನು ಹೀಗೆ (೨.೨.೧.೮೨೬:೩೭೦) ನಿರೂಪಿಸಿದೆ:

ಪಂಚಮಾಂಶಗ್ರಹಾ ಷಡ್ಜನ್ಯಾಸ ಯಾಷ್ಟಿಕಸಮ್ಮತಾ |
ಮಧ್ಯಮಗ್ರಾಮಗಾ ಪೂರ್ಣಾ ಪೋತಾ ನಾಮ ವಿಭಾಷಿಕಾ ||

ಇದರ ಆಧಾರದಿಂದ ಪ್ರಸಂ.ಸ ‘ಶುದ್ಧಾ’ ಎಂಬ ಪಾಠವನ್ನು ‘ಪೋತಾ’ ಎಂದು ತಿದ್ದಿದೆ.

೮೧೫ಅಆ. ಪ್ರಸಂ.ದಲ್ಲಿ ಪೋತಾರಾಗದ ಉದಾಹರಣವು ಇಷ್ಟು ಮಾತ್ರ ದೊರೆಯುತ್ತದೆ. ಉಳಿದ ಅಂಶವನ್ನು ಮುಂದಿನ ರಾಗವಾದ ಪೌರಾಲಿಯ ಉದಾಹರಣದ ಪ್ರೌರಂಭಿಕ ಭಾಗವಾಗಿ ‘ಶುದ್ಧಾ’ ಎಂದು ಮುಗಿಯುವವರೆಗೆ ಕೊಟ್ಟಿದೆ.

೮೧೭ಅ. 1 : ಗ(ಪ್ರಮ)

೮೧೮ಅ. ಷಡ್ಜಾಂತಾ : ಷಡ್ಜಾಂಶ (ಪ್ರಸಂ)

೮೧೮ಇ. ಹರ್ಷಸಂಯುಕ್ತಾ : ಹರ್ಷ+(?) ಸಂಯುಕ್ತಾ(ಪ್ರಸಂ)

೮೧೮ಈ. ಶುದ್ಧಾ : ಶುದ್ಧ-(ಪ್ರಸಂ)

೮೧೮ಇಈ. ಗೀಯತೇ —–ಕೈಶಿಕೇ : ಕಲ್ಲಿ(ಅದೇ:೧೩೯)ನ ಉದ್ಧೃತಿ ‘ಶುದ್ಧಾಪ್ರಹರ್ಷೇ ನಿಯುಕ್ತಾ ಜಾತಾ ಮಾಲವಕೈಶಿಕೇ’ಯನ್ನು ಆಧರಿಸಿ ಹೀಗೆ ಪಾಠಪುನಾರಚನೆಯನ್ನು ಮಾಡಿದೆ.

೮೨೦ಆ. ಚಾರ್ಧವೇಸರೀ : ಚಾಧ್ಯವೇಸರೀ (ಪ್ರಸಂ); ಆದರೆ ಚಾರ್ಧವೇಸರಿ(ಸಂರ.೨.೧.೩೩ಈ::೧೨,ಕಲ್ಲಿ. ಅದೇ :೧೩೯; ಸಂರಾಜ ೨.೨.೧.೯೯೫ಈ:೩೮೯)

೮೨೦ಉ. ಸದಾ : ಯದಾ(ಪ್ರಸಂ)

೮೨೧ಊ. 1ಮ : ಮ್ಮ

೮೨೧ಓ. —(ಅರ್ಧವೇಸರೀ) : ಚಾದ್ಯವೇಸರಿ (ಪ್ರಸಂ)

೮೨೨ಇ. ಅರ್ಧವೇಸರೀ : (ಪ್ರಸಂ)

೮೨೨ಇ. ಚ : ತು(ಪ್ರಸಂ)

೮೨೨ಈ. ಸಂಕರಾ : ಸಂಕರಃ (ಪ್ರಸಂ)

೮೨೨ಉ. ಹರ್ಷಪೂರಿಕಾ : ಹರ್ಷಪೂರಿ(ಮ?)ತಾ(ಪ್ರಸಂ)

೮೨೨ಊ: ಸಾಧಾರಣ… ಹರ್ಷಪೂರಿಕಾ : ಈ ರಾಗವು ಸಂರ (೨.೨.೧೮೮:೧೨೭) ಮತ್ತು ಸಂರಾಜ(೨.೨.೧.೯೬೯ಈ:೨೮೬)ಗಳಲ್ಲಿ ದೈವತರಹಿತವಾಗಿದೆ. ಆದರೆ ಸಂರಾಜವೇ(ಅದೇ)ಅದನ್ನು ಯಾಷ್ಟಿಕಮತಾನುಸಾರವಾಗಿ ಸಂಪೂರ್ಣವೆಂದು ವರ್ಣಿಸುತ್ತದೆ.

೮೨೪ಅಆ. ಮಾಂಗಾಲೀ… ಮೋಜ್ಜ್ವಲಾ | : ಇದರ ಹೆಸರು ಬಾಂಗಾಲೀ ಎಂದು ಕಲ್ಲಿ (ಅದೇ:೧೩೮) ಮತ್ತು ಸಂರಾಜ(೨.೨.೧.೯೯೩:೩೮೯)ಗಳಲ್ಲಿದೆ. ಸಂರಾಜವು(೨.೨.೧.೯೯೩:೩೮೯) ಇನ್ನೂ ಒಂದು ಬಾಂಗಾಲಿಯನ್ನು ಮಾಲವಕೈಶಿಕಿಯ ಭಾಷಾಜನ್ಯವೆಂದು ನಿರೂಪಿಸುತ್ತದೆ. ಕಲ್ಲಿ.(ಅದೇ:೧೩೮) ನು ಮಾಂಗಾಲಿಯನ್ನು ಬೋಟ್ಟಜನ್ಯನನವನ್ನಾಗಿ ವರ್ಣಿಸುವುದರ ಜೊತೆಗೆ ಮಾಲಕೈಶಿಕದ ಜನ್ಯವಾಗಿಯೂ ಲಕ್ಷಿಸುತ್ತಾನೆ. ಬೃಹ.ಯ ಮಾಂಗಾಲೀರಾಗವು ಕಲ್ಲಿ.(ಅದೆ) ಮತ್ತು ಸಂರಾಜ(೨.೨.೧.೯೯೩ಇ:೩೮೯)ಗಳ ಮಾಂಗಾಲೀ ವರ್ಣನೆಗೆ ಪರಸ್ಪರವಾಗಿದೆ.

೮೨೪ಇ. ಮಧ್ಯಮರ್ಪಭಸಂಗತ್ಯಾ : ಮಧ್ಯಮರ್ಷಭಸಂಪೂರ್ಣಾ(ಪ್ರಸಂ)

೮೨೪ಈ. ಸಂಪೂರ್ಣಾ : +++ (ಪ್ರಸಂ)

೮೨೪ಇಈ. ಮಧ್ಯಮ— ರಂಜಿಕಾ : ಈ ಪಾಠವನ್ನು ಸಂರಾಜ(೨.೨೧.೯೯೩ಇ: ೩೮೯)ಯನ್ನು ಆಧರಿಸಿ ಪುನಾರಚಿಸಿದೆ; ಕಲ್ಲಿ. (ಅದೇ: ೧೩೮)ನು ರಿ-ನಿಗಳಲ್ಲಿ ಸಂವಾದವಿದೆಯೆನ್ನುತ್ತಾನೆ.

೮೨೫ಉ ….: ಗ್ರಂಥವು ನಷ್ಟವಾಗಿದೆ. (ಪ್ರಸಂ)

೮೨೬ಉ. ಸಿಂಧು : ಸಬಂಧು (ಪ್ರಸಂ)

೮೨೬ಉ. ಸಂಭೂತಾಂ : … ಸಂಭೂತಾ (ಪ್ರಸಂ)

೮೨೬ಉಊ. ಸಿಂಧು…ವಿದುಃ : ಹೋಲಿಸಿ :

 1.           ಮಾಲವಕೈಶಿಕೀ sಪ್ಯಸ್ತಿ ಸೈಂಧವೀ ಮೃದುಪಂಚಮಾ |
  ಸಮಂದ್ರಾ ನಿಗನಿರ್ಮುಕ್ತಾ ಷಡ್ಜನ್ಯಾಸಗ್ರಹಾಂಶಿಕಾ |
  ಪ್ರಯೋಜ್ಯಾ ಸರ್ವಭಾವೇಷು ಶ್ರೀಸೋಢಲಸುತೋದಿತಾ ||
  (ಸಂರ. ೨.೨.೧೮೦ ಇಈ, ೧೮೧:೧೨೪)
 2.         ಷಡ್ಜಗ್ರಹಾಂಶನ್ಯಾಸಾ ಷಡ್ಜಗ್ರಾಮಕೃತಾಶ್ರಯಾ |
  ಗನಿಹೀನಾ ಪಭೂಯಷ್ಠಾ ಸಮಂದ್ರಾ ತಾರಪಂಚಮಾ ||
  ಸರ್ವಭಾವನಿಯೋಗಾರ್ಹಾ ಜಾತಾ ಮಾಲವಕೈಶಿಕಾತ್‌ |
  ಔಡುವಾ ಸೈಂಧವೀ ಭಾಷಾ ಕಾಲಸೇನೇನ ವರ್ಣಿತಾ |
  ಸಂಪೂರ್ಣಾಮೇತಾಮಾಚಷ್ಟ ಯಾಷ್ಟಿಕೋ ಮುನಿಪುಂಗವಃ ||
  (ಸಂರಾಜ. ೨.೨.೧.೯೮೬, ೯೮೭:೩೮೮)

೮೨೮ಆ. ಸಂಪೂರ್ಣಾ : ಸಂಪೂರ್ಣ (ಪ್ರಸಂ)

೮೨೮ಇಈ. ಋಷಭ.. ರೂಪಿಣೌ : ಸರಿಸಂಗತಾ (ಕಲ್ಲಿ. ಅದೇ : ೧೩೯) ಎಂಬ ಪಾಠದ ಆಧಾರದಿಂದ ಹೀಗೆ ತಿದ್ದಿದೆ.

೮೨೮ಇ. ಋಷಭಷಡ್ಜಸಂವಾದೋ : +++ಷಡ್ಜಸಂವಾದೋ (ಪ್ರಸಂ)

೮೨೮ಈ. ದ್ವಿಶ್ರುತೀ ಚಾಲ್ಪರೂಪಿಣೌ : ದ್ವಿಶ್ರುಚಾಲ್ಪರೂಪಿಣೌ(?) (ಪ್ರಸಂ)

೮೨೯ಊ. ತ್ವಾಭೀರಿ : ಅಭೀರೀ (ಪ್ರಸಂ)

೮೩೦ಅ. ಖಂಜನೀ : ಖಂಡನೀ(ಪ್ರಸಂ); ಆದರೆ ಕಲ್ಲಿ. (ಅದೇ: ೧೩೮) ಮತ್ತು ಸಂರಾಜ, (೨.೨.೧: ೯೯೯ ಊ. ೩೯೦ ೯೯೯), ಖಜ್ಜನೀ

೮೩೦ಆ. ದೈವತೋಜ್ಝಿತಾ : ಗಾಂಧಾರೇಣ ವಿವರ್ಜಿತಾ, ಸಂರಾಜ. ೨.೨.೧.೯೯೯.ಆ:೩೯೦

೮೩೨ಆ. ಗುರ್ಜರೀ : ಗೂರ್ಜರೀ (ಪ್ರಸಂ)

೮೩೨ಊ. ಭಾಷಾ ವೈ : ಷಾಡವಾ (ಪ್ರಸಂ)

೮೩೨ಉ. ಸಂಪೂರ್ಣಾ ಚೈವ ವಿಜ್ಞೇಯಾ : ಗುರ್ಜರೀ ರಾಗವು ಕಲ್ಲಿ. (ಅದೇ: ೧೩೯) ಮತ್ತು ಸಂರಾಜ (೨.೨.೧.೧೦೦೧ಊ:೩೯೦) ಗಳಲ್ಲಿ ಸಂಪೂರ್ಣವೆಂದೇ ನಿರೂಪಿತವಾಗಿತೆ. ಆದುದರಿಂದ ಪಾಠವನ್ನು ಹೀಗೆ ತಿದ್ದಿದೆ.

೮೩೪ಅ. ಯಾಸ್ಟಿಕಪ್ರೋಕ್ತಾ : ಯಾಷ್ಟಿಕೇನ ಪ್ರಯುಕ್ತಾಃ (ಪ್ರಸಂ)

೮೩೫ಆ. ಪೂರ್ಣ : ಪೂರ್ವ (ಪ್ರಸಂ)

೮೩೭ಇ. ದೃಶ್ಯತೇ : ದೃಶ್ಯೇತ (ಪ್ರಸಂ)

೮೩೭ಇಈ. ಏಷಾ—ಸಂಭವಾ : ಹೋಲಿಸಿ :

ಕಕುಭೇ ಮಧ್ಯಮಗ್ರಾಮಭಾಷಾ ಧೈವತವಿಶ್ರಮಾ |
ಮಧ್ಯಮಾಂಶಗ್ರಹಾ ಪೂರ್ಣಾ ಸಂಕೀರ್ಣಾ ರಿಧಸಂಗತಾ |
(ಸಂರಾಜ. ೨.೨.೧.೬೮೩:೩೫೨)

೮೩೯ಆ. ಸಾತವಾಹಿನೀ : ಸಾಲವಾಹಿನೀ (ಷಡ್ಜಗ್ರಾಮದ ಐದು ಅಂತರಭಾಷಾಗಳಲ್ಲಿ ಒಂದು, ಭಭಾ ೨.೭.೪೭ಇ) ಶಾಲವಾಹನೀ (ಕಕುಭಭಾಷಾಗಳ ಉದ್ದೇಶಕಥನ, ಸಂರಾಜ ೨.೨.೧.೧೨೩ಅ: ೨೭೫)

ಶಾತವಾಹನೀ (ಲಕ್ಷಣಕಥನ, ಅದೇ ೨.೨.೧.೬೮೬.ಊ: ೩೫೩)
ಶಾಲವಾಹನಿಕಾ (ಕಕುಭದ ಅಂತರಭಾಷೆಗಳ ಉದ್ದೇಶಕಥನ ಅದೇ, ೨.೨.೧.೭೯ಅ: ೨೭೧)
ಶಾತವಾಹನೀ (ಕಶುಭದ ಅಂತರಭಾಷಾ, ಲಕ್ಷಣನಿರೂಪಣ, ಕಲ್ಲಿ. ಅದೇ: ೧೩೪)

೮೩೯ಈ. ಸಂಗತೌ ಮಧ್ಯಮರ್ಷಭೌ : ರಿಗಸಂಗತಾ (ಕಲ್ಲಿ. ಅದೇ: ೧೩೪)

೮೩೯ಇಈ. ದೃತ್ಯೇತೇ — ಮರ್ಷಭೌ : ದೃಶ್ಯಂತೇ ಮಧ್ಯಮರ್ಷಭಸಂಗತೌ (ಪ್ರಸಂ)

೮೩೯ಉ. ಬಹುಮಿಚ್ಛಂತಿ : ಕೇಚಿಚ್ಛಂತಿ (ಪ್ರಸಂ)

೮೪೧ಅಆ. ಮಧ್ಯಮಾಂಶಾ — ದುರ್ಬಲಾ : ಹೋಲಿಸಿ :

 1.          ವಿಭಾಷಾ ಕಕುಭೇ ಭೋಗವರ್ಧನೀ ತಾರಮಂದ್ರಗಾ |
  ಧೈವತಾಂಶಗ್ರಹನ್ಯಾಸಾ ಮಾಪನ್ಯಾಸಾ ರಿವರ್ಜಿತಾ |
  ಧನಿಭ್ಯಾಂ ಗಮಪೈರ್ಬೂರಿವೈರಾಗ್ಯೇ ವಿನಿಯುಜ್ಯತೇ ||
  (ಸಂರ. ೨.೨.೧೧೨ಇ.೧೧೩:೯೫)
 2.         ನಿಷಾದಾಂಶಗ್ರಹಾ ಭಾಷಾ ಕಕುಭೇ ಭೋಗವರ್ಧಿನೀ |
  ಸ್ವಲ್ಪರ್ಷಭಸಮಾಯುಕ್ತಾ ಧೈವತನ್ಯಾಸಭೂಷಿತಾ |
  ನಿಗಯೋರ್ಗಪಯೋರ್ಯುಕ್ತಾ ಸಂಗತ್ಯಾ ಗಾನಮಾಶ್ರಿತಾ ||
  (ಸಂರಾಜ. ೨.೨.೧.೬೯೦, ೬೯೧)

iii.        ತಥೈವ ಯಾಪ್ಟಿಕೇನೋಕ್ತಾ ವಿಭಾಷಾ ಭೋಗವರ್ದ್ದನೀ |
ಷಡ್ಜಗ್ರಾಮೇಣಸಂಬದ್ಧಾ ಕಕುಭೇ ತಾರಮಂದ್ರಗಾ ||
ಧೈವತಾಂಶಗ್ರಹನ್ಯಾಸಾ ಋಷಭೇಣ ವಿವರ್ಜಿತಾ |
ಷಡ್ಜಾನ್ಯಸ್ವರಭೂಯಿಷ್ಠಾ ಗಾಪನ್ಯಾಸಾ, ನಿಯೋಜಿತಾ |
ವೈರಾಗ್ಯೇ sಪ್ಯಥ ವಾ ಸಂನ್ಯಾಸೇ…… ||
(ಅದೇ, ೨.೨.೧.೭೦೭,೭೦೮:೩೩೫)

೮೪೩ಆ. ಧಾಂತಾ : ++ (ಪ್ರಸಂ)

೮೪೩ಈ. ಹಿ : ತು (ಪ್ರಸಂ)

೮೪೪ಅ. ಧೈವತಸ್ಯ ನಿಷಾದಸ್ಯ : ಧೈವತ+ನಿಷಾದ+(ಪ್ರಸಂ)

೮೪೪ಇಈ. ಏಷಾ… ಸಂಭವಾ: ಹೋಲಿಸಿ :

 1.           ಮಧುರೀ ಕಕುಭೋದ್ಭೂತಾ ಸಾಂಶಾ ಧಾಂತಾsಖಲಸ್ವರಾ |
  ಗಪಯೋರ್ನಿಧಯೋರ್ಯುಕ್ತಾ ಸಂಕೀರ್ಣಾ ಯಾಷ್ಟಿಕೋದಿತಾ ||
  (ಕಲ್ಲಿ. ಅದೇ: ೧೩೩)
 2.         ಪಂಚಮಾಂಶಗ್ರಹಾ ಧಾಂತಾ ನಿಗಯೋರ್ಗಪಯೋರಪಿ |
  ಧೈವತರ್ಷಭಯೋಶ್ಚೈವ ಸಂಗತ್ಯಾ ಸಂಗಥಾ(ತಾ) ಮಿಥಃ ||
  ಮಧುರೀ ಕಕುಭೇ ಭಾಷಾ ಷಡ್ಜಗ್ರಾಮಸಮಾಶ್ರಿತಾ ||
  (ಸಂರಾಜ. ೨.೨.೧:೩೫೪)
 3.        ಮಧುಕರಿಯು ಕಕುಭದ ಒಂದು ವಿಭಾಷಾ
  (ಸಂರಾಜ. ೨.೨.೧:೭೦೪,೭೦೫:೩೩೫)

೮೪೬ಆ. (ನಿಷಾದಗ್ರಹಸಂಯುತಾ): ++++++++(ಪ್ರಸಂ)

೮೪೬ಇ. (ಭಾಷಾ): ++ (ಪ್ರಸಂ)

೮೪೭ ಶಕಮಿಶ್ರಿತಾ : ಹೋಲಿಸಿ :

i.          ನಿಪಯೋ ರಿಧಯೋರ್ಯಸ್ಯಾಂ ಸಂವಾದೋ ನಿಗ್ರಹಾಂಶತಾ |
ರಿನ್ಯಾಸಾ ಕಕುಭೇ ಭಾಷಾ ಶಕಮಿಶ್ರಾ ತು ಸಾ ಮತಾ ||
(ಕಲ್ಲಿ. ಅದೇ : ೧೩೩)

 1. ನಿಷಾದಾಂಶಗ್ರಹಾ ಭಾಷಾ ಶಕಮಿಶ್ರಾ ರಿವಿಶ್ರಮಾ |
  ನಿಧಯೋಃ ಸಧಯೋರ್ಯುಕ್ತಾ ಸಂಗತ್ಯಾ ಕಕುಭಾಶ್ರಿತಾ |
  ಷಡ್ಜಗ್ರಾಮೇಣ ಸಂಬದ್ಧಾ ಮಧುರೈರ್ಗಮಕೈರ್ಯುತಾ ||
  (ಸಂರಾಜ. ೨.೨.೧.೬೯೮:೩೫೪)