ಪ್ರಾಚಾರ್ಯರು,
ಬನ್ನಿಮರದ ಪಕ್ಕದ ಮನೆ, ರಾಮಕೃಷ್ಣ ಬಡಾವಣೆ,
ಚನ್ನರಾಯಪಟ್ಟಣ, ಹಾಸನ ಜಿಲ್ಲೆ.
ದೂರವಾಣಿ : ೦೮೧೭೬-೨೭೦೨೨೦ ಕಛೇರಿ
ಮನೆ : ೨೫೩೦೬೮

ವತ್ತೇಳರ ಹಿರಿಯ ಜಾನಪದ ಕಲಾಸಕ್ತ ಮೇಟಿಕೆರೆ ಹಿರಿಯಣ್ಣ ಹಾಸನ ಜಿಲ್ಲೆಯ ಮೇಟಿಕೆರೆಯವರು. ವಿದ್ಯಾರ್ಥಿ ದೆಸೆಯಿಂದಲೇ ಜಾನಪದ ಸಾಹಿತ್ಯ, ಸಾಂಸ್ಕೃತಿಕ ಕಲೆ ಹಾಗೂ ಪರಂಪರೆಗಳಿಗೆ ಮಾರು ಹೋದವರು.

ಜಾನಪದ ರಾಮಾಯಣ ಒಳಗೊಂಡ ಭಾಗವಂತಿಕೆ ಎಂಬ ಕೃತಿ ಸಂಪಾದನೆ ಮಾಡಿದ್ದಾರೆ.

ಜಾನಪದದ ಸಂಶೋಧನೆ ಹಾಗೂ ಕ್ಷೇತ್ರ ಕಾರ‍್ಯಗಳಿಗೆ ತಮ್ಮನ್ನು ತೊಡಗಿಸಿ ಕೊಂಡು ಸುಮಾರು ಮೂರು ದಶಕಗಳ ಕಾಲ ಆ ಕ್ಷೇತ್ರದಲ್ಲಿ ಶ್ರಮಿಸಿದವರು.

ಅಧ್ಯಯನ, ಅಧ್ಯಾಪನ, ಸಾಮಾಜಿಕ, ಸಾಹಿತ್ಯಕ ಸೇವೆಗಳಲ್ಲಿ ಅಪಾರ ಸಾಧನೆಗೆ ಮೂಲಮಂತ್ರ ಹೇಳಿಕೊಡುವ ಮೇಟಿಕೆರೆ ಹಿರಿಯಣ್ಣ ಹಿರಿಯ ಚೇತನವೂ ಹೌದು.

ಬೆಳ್ಳಿ ಹಬ್ಬದ ಪ್ರಯುಕ್ತ ಅಕಾಡೆಮಿ ಅವರನ್ನು ಅಭಿನಂದಿಸಿದೆ.