ಬೆಟಗೇರಿ ಗ್ರಾಮ, ಅಂಚೆ
ಕೊಪ್ಪಳ ತಾಲೂಕು ಮತ್ತು ಜಿಲ್ಲೆ.

ಕೊಪ್ಪಳ ಜಿಲ್ಲೆಯ ಬೆಟಗೇರಿಯವರಾದ ಹಿರಿಯ ಕಲಾವಿದ ಲಕ್ಷ್ಮಣ ಬಿಸರಹಳ್ಳಿ ಉತ್ತರ ಕರ್ನಾಟಕದ ಗೀ ಗೀ ಪದಗಳ ಹಾಡುಗಾರಿಕೆಯಲ್ಲಿ ಪ್ರಖ್ಯಾತಿ ಪಡೆದು ಕೊಂಡವರು.

ಬಾಲ್ಯದಿಂದಲೇ ಗ್ರಾಮೀಣ ಜಾನಪದ ಸಂಸ್ಕೃತಿ ಹಾಗೂ ಸಂಪ್ರದಾಯ ಗಳನ್ನು ಮೈಗೂಡಿಸಿಕೊಂಡಿರುವ ಲಕ್ಷ್ಮಣ ಬಸರಹಳ್ಳಿ ನಾಡಿನಾದ್ಯಂತ ತಮ್ಮ ಕಲೆಗಾರಿಕೆಯಿಂದ ಜನ-ಮನ ಸೂರೆಗೊಂಡವರು.

ಸಾಮಾಜಿಕ ಕಳಕಳಿ; ಕ್ರಾಂತಿ ಗೀತೆಗಳು, ನಾಣ್ಣುಡಿ ಪದಗಳು, ನಾಡಗೀತೆಗಳು ಅವರ ಹಾಡಿನ ಪ್ರಾಕಾರಗಳಲ್ಲಿ ಪ್ರಮುಖವೆನಿಸಿವೆ.

ಇಂತಹ ಮಹನೀಯರ ಮೂರು ದಶಕಗಳ ಸಾರ್ಥಕ ಸೇವೆ ಪರಿಗಣಿಸಿ, ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ತನ್ನ ಬೆಳ್ಳಿ ಹಬ್ಬದ ಪ್ರಯುಕ್ತ ಸನ್ಮಾನಿಸುವ ಸಂತಸ ಪಡೆದುಕೊಂಡಿದೆ.