ತೊಗಲು ಗೊಂಬೆ ಕಲಾವಿದರು
ಸಾ : ಬಿಂಕದಕಟ್ಟೆ, ತಾ : ಜಿ : ಗದಗ
ದೂರವಾಣಿ : ೦೮೩೭೨-೨೩೭೪೧೫

ರವತ್ತೈದರ ವಿರೂಪಾಕ್ಷಪ್ಪ ಕ್ಷತ್ರಿ ಗದಗ ಜಿಲ್ಲೆಯ ಬಿಂಕದ ಕಟ್ಟೆಯವರು. ತಮ್ಮ ಕುಟುಂಬದ ಪಾರಂಪರಿಕ ತೊಗಲು ಬೊಂಬೆಯಾಟ ಕಲೆಯಲ್ಲಿ ನಿಪುಣತೆ ಪಡೆದುಕೊಂಡವರು.

ಕೃಷಿಕ ಕುಟುಂಬದವರಾಗಿದ್ದರೂ ಜಾನಪದ ಕಲೆಗಳಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡವರು ವಿರೂಪಾಕ್ಷಪ್ಪ ಕ್ಷತ್ರಿ ಗದಗ ಜಿಲ್ಲೆಯಲ್ಲಿ ತಮ್ಮ ಕಲೆಗಾಗಿ ಕಲಾನಿಧಿ ಎಂಬ ಬಿರುದಿಗೂ ಪಾತ್ರರಾಗಿರುವರು.

ಫ್ರಾನ್ಸ್, ಇಟಲಿ, ಹಾಲಂಡ್ ದೇಶಗಳಲ್ಲೂ ಭಾರತೀಯ ಪರಂಪರೆಯ ತೊಗಲು ಬೊಂಬೆಯಾಟವನ್ನು ಪ್ರದರ್ಶಿಸಿ ಸೈ ಎನಿಸಿಕೊಂಡವರು. ರಾಜ್ಯದ ಹಲವೆಡೆ ಅವರು ಕಲಾಪ್ರದರ್ಶನದಿಂದ ಪ್ರಖ್ಯಾತಿ ಪಡೆದುಕೊಂಡವರು.

ಇಂತಹ ವ್ಯಕ್ತಿಗಳ ಸನ್ಮಾನಕ್ಕೆ ಅಕಾಡೆಮಿಗೆ ಬೆಳ್ಳಿಹಬ್ಬ ಸಂಭ್ರಮವೂ ಕಾರಣವಾಗಿದೆ.