ಕಬ್ಬಳ್ಳಿ, ದುದ್ದ ಹೋಬಳಿ
ಹಾಸನ ತಾಲೂಕು ಮತ್ತು ಜಿಲ್ಲೆ.

ವತ್ತೆಂಟು ವರ್ಷದ ವೆಂಟಕರಾಮಯ್ಯ ಹಾಸನ ಜಿಲ್ಲೆ ಕಬ್ಬಳ್ಳಿ ಗ್ರಾಮದವರು. ಬಾಲ್ಯದಿಂದಲೇ ಜಾನಪದ ಕುಟುಂಬದ ಹಿನ್ನಲೆಯಿಂದಾಗಿ ಚಿಟ್ಟಿಮೇಳದ ಕಲಾವಿದರಾಗಿ ಬೆಳೆದವರು.

ತಂದೆ ತಂಬೂರಿ ದಾಸಪ್ಪನವರ ಪ್ರಭಾವದಲ್ಲಿ ಬೆಳೆದು ಗ್ರಾಮೀಣ ಜಾನಪದ ಲೋಕಕ್ಕೆ ತಮ್ಮ ಅಮೂಲ್ಯ ಕಾಣಿಕೆ ನೀಡುತ್ತ ಬಂದವರು.

ಕರಡಿ ವಾದ್ಯ ಮತ್ತು ಚಿಟ್ಟಿಮೇಳದಲ್ಲಿ ಕುಶಲತೆ ಮೆರೆದವರು. ಕರ್ನಾಟಕದ ವಿವಿಧ ಭಾಗಗಳಲ್ಲಿ ತಮ್ಮ ಕಲೆಗಾರಿಕೆ ಪ್ರದರ್ಶನ ನೀಡಿದ್ದಾರೆ.

ಊರ ಹಬ್ಬ-ಹರಿದಿನಗಳು, ಸಮಾರಂಭಗಳು ಅವರ ಪ್ರಮುಖ ವೇದಿಕೆಗಳಾಗಿವೆ.

ಅಕಾಡೆಮಿ ತನ್ನ ಬೆಳ್ಳಿ ಹಬ್ಬದ ನಿಮಿತ್ತ ಅವರನ್ನು ಅಭಿನಂದಿಸಿ ಪುರಸ್ಕರಿಸಿದೆ.