ಚೌಬಾರ ಪತ್ತೆದರವಾಜ ರಸ್ತೆ,
ತೇಲಿ ಗಲ್ಲಿ, ಬೀದರ.
ಮೊಬೈಲ್ (ಪಿ.ಪಿ.) : ೯೯೦೧೪ ೪೭೦೫೨

ಲ್ಲಮ್ಮ ದೇವಿಯ ಪರಮ ಭಕ್ತರಾಗಿರುವ ಶರಣಪ್ಪ ಭೂತೇರ, ಭೂತೇರ ಕುಣಿತವನ್ನು ಭಕ್ತಿ, ಭಾವಪರವಶತೆಯಿಂದ ಪ್ರಸ್ತುತಪಡಿಸಬಲ್ಲವರು.

ಅರವತ್ತರ ಹರೆಯದ ಶರಣಪ್ಪ ಭೂತೇರ, ಬೀದರ ಜಿಲ್ಲೆಯ ಕಿರೀಟಕ್ಕೆ ಮುಕುಟಪ್ರಾಯರಾದವರು. ಈ ಜಾನಪದ ಕಲೆಯಲ್ಲಿ ಮೈಮರೆತು ಹಾಡುವ, ಕುಣಿಯುವ ಇವರು ತಮ್ಮ ಜೀವನವನ್ನೇ ಇಂತಹ ಅಪರೂಪದ ಕಲೆಗಾಗಿ ಮುಡುಪಿಟ್ಟಿದ್ದಾರೆ.

ಎಲ್ಲಮ್ಮನ ಆಟ, ನಗರಗಾಣಿಗನ ಆಟ, ಮಾಳವಾರ ನಾಗಶೆಟ್ಟಿ ಆಟ, ಬಡವನ ಆಟ ಮುಂತಾದವುಗಳನ್ನು ತಮ್ಮ ಕಲಾವಂತಿಕೆ ಮೂಲಕ ಜೀವ ನೀಡಿದವರು.

ಬಹುಭಾಷಾ ಕೋವಿದರಾಗಿರುವ ಶರಣಪ್ಪ ಭೂತೇರ ಅಪ್ರತಿಮ ಕಲಾವಿದರಲ್ಲದೇ ಎಲ್ಲ ಭಾಷಿಕರಿಗೂ ಇಂತಹ ಜಾನಪದ ಕಲೆಯನ್ನು ಪರಿಚಯಿಸಿದವರು.

ಸಾಹಿತ್ಯ ಪರಿಷತ್ತಿನ ಸಮ್ಮೇಳನ, ವಿಶ್ವ ಕನ್ನಡ ಸಮ್ಮೇಳನ ಇತ್ಯಾದಿಗಳಲ್ಲಿ ತಮ್ಮ ಕಾರ‍್ಯಕ್ರಮ ಪ್ರಸ್ತುತಪಡಿಸಿರುವ ಅವರಿಗೆ ಈ ಕಲೆ ಕರಗತ ಮುಂದಿನ ಪೀಳಿಗೆಗೂ ಮಾರ್ಗದರ್ಶಕ.

ಬೆಳ್ಳಿ ಹಬ್ಬದ ಪ್ರಯುಕ್ತ ಈ ಅಭಿನಂದನೆ.