ಬಿನ್ ರಾಮೇಗೌಡ ಪಾಟೀಲ
ಮುಗಳಿ ಗ್ರಾಮ ಮತ್ತು ಅಂಚೆ,
ಶಿಗ್ಗಾಂವ್ ತಾಲ್ಲೂಕು,
ಹಾವೇರಿ ಜಿಲ್ಲೆ – ೫೮೧೨೦೫
ಮೊಬೈಲ್ : ೯೨೪೨೭೫೨೦೫೫

ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಮುಗಳಿ ಗ್ರಾಮದ ಶಿವನಗೌಡ ರಾಮನಗೌಡ ಪಾಟೀಲ ಅವರು ಜಾನಪದ ಹಾಡುಗಾರಿಕೆಯಲ್ಲಿ ಪ್ರವೀಣರು.

ಬಾಲ್ಯದಿಂದಲೇ ಗ್ರಾಮೀಣ ಸಂಸ್ಕೃತಿ – ಪರಿಸರದಲ್ಲಿ ಬೆಳೆದು ಅದರೊಂದಿಗೆ ಸಮ್ಮಿಳಿತಗೊಂಡ ವ್ಯಕ್ತಿತ್ವ. ಜಾನಪದ ಕಲೆ ಹಾಗೂ ಸಂಸ್ಕೃತಿಯ ಉಳಿವಿಗಾಗಿ ತಮ್ಮದೇ ಆದ ‘ಜೇನುಗೂಡು’ ಎಂಬ ಮಾಸಿಕ ಕಾರ‍್ಯಕ್ರಮ ರೂಪಿಸಿ ಜನ-ಮನ ತಟ್ಟಿದವರು.

ಕಳೆದೆರಡು ದಶಕಗಳಿಂದಲೂ ಜಾನಪದ ಹಾಡುಗಾರಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿವನಗೌಡ ಪಾಟೀಲ ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಅಕಾಡೆಮಿ ತನ್ನ ಬೆಳ್ಳಿ ಹಬ್ಬದ ಪ್ರಯುಕ್ತ ಈ ಹಿರಿಯ ಕಲಾವಿದರನ್ನು ಅಭಿನಂದಿಸಲು ಮುಂದಾಗಿದೆ.