ಸಾರವಾಡ ಗ್ರಾಮ
ಬಿಜಾಪುರ ತಾಲೂಕು ಮತ್ತು ಜಿಲ್ಲೆ.

ರವತ್ತಎಂಟು ವರ್ಷ ವಯಸ್ಸಿನ ಶಿವನಗೌಡ ಕೋಟಿ ಅವರು ಬಿಜಾಪುರ ಜಿಲ್ಲೆಯ ಸಾರವಾಡ ಗ್ರಾಮದವರು.

ಬಾಲ್ಯದಲ್ಲೇ ಗ್ರಾಮೀಣ ಜಾನಪದ ಕಲೆಗಳಿಗೆ ಮಾರುಹೋಗಿ ನಾಟಕ, ಭಜನಾ ಕಾರ‍್ಯಕ್ರಮ ಹಾಗೂ ಪಾರಿಜಾತ ಆಟಗಳಿಗೆ ತಮ್ಮ ಸೇವೆಯನ್ನು ಧಾರೆ ಎರೆದವರು.

ಸುಮಾರು ಮೂರು ಸಾವಿರಕ್ಕೂ ಅಧಿಕ ಪಾರಿಜಾತ ಪ್ರದರ್ಶನಗಳನ್ನು ನೀಡಿರುವ ಶಿವನಗೌಡ ಕೋಟಿ ದಣಿವರಿಯದವರು. ಪ್ರಸಿದ್ಧ ಸಂಗೀತ ವಿದ್ವಾಂಸರಿಂದ ಸಂಗೀತ ದೀಕ್ಷೆ ಪಡೆದಿರುವ ಅವರು ನಾಡಿನ ಖ್ಯಾತನಾಮರಲ್ಲಿ ಒಬ್ಬರು.

ಆಕಾಶವಾಣಿ, ದೂರದರ್ಶನಗಳಲ್ಲಿ ತಮ್ಮ ಪಾರಿಜಾತ ಹಾಗೂ ಇನ್ನಿತರ ಕಲೆಗಳ ಪ್ರದರ್ಶನ ನೀಡಿದವರು. ಅಕಾಡೆಮಿ ತನ್ನ ಬೆಳ್ಳಿಹಬ್ಬದ ನಿಮಿತ್ತ ಅವರನ್ನು ಸನ್ಮಾನಿಸಲು ಮುಂದಾಗಿದೆ.