ಆಕಾಶವಾಣಿ ಕಲಾವಿದರು,
ಮಾಲೀಕರು ಶ್ರೀ ಕಲ್ಮೇಶ್ವರ,
ಶ್ರೀ ಕೃಷ್ಣ ಪಾರಿಜಾತ ಕಂಪನಿ, ಸೊನ್ನ ಗ್ರಾಮ,
ಬೀಳಗಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಮೊಬೈಲ್ : ೯೪೪೮೩೪೮೩೮೭, ೯೯೭೨೧೩೧೧೨೦

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಸೊನ್ನ ಗ್ರಾಮದ ಶ್ರೀ ಶ್ರೀಕಾಂತ ಲಕ್ಷ್ಮಣ ಹೂಗಾರ ಬಾಲ್ಯದಿಂದಲೂ ತಮ್ಮನ್ನು ಕಲಾಸೇವೆಯಲ್ಲಿ ತೊಡಗಿಸಿ ಕೊಂಡವರು. ಗ್ರಾಮೀಣ ಪ್ರದೇಶದ ಸಂಸ್ಕೃತಿ, ಕಲೆಗಳ ಪ್ರೋತ್ಸಾಹಕ್ಕೆ ಎಡಬಿಡದೆ ಶ್ರಮಿಸಿದವರು.

ಸುಮಾರು ನಾಲ್ಕು ದಶಕಗಳ ಕಾಲ ಶ್ರೀ ಕೃಷ್ಣ ಪಾರಿಜಾತ ಕಂಪೆನಿಯ ಹೊಣೆಗಾರಿಕೆ ಹೊತ್ತು ಹಲವಾರು ಗ್ರಾಮೀಣ ಪ್ರತಿಭೆಗಳಿಗೆ ಸ್ಫೂರ್ತಿಯಾದವರು.

ನೆರೆಯ ರಾಜ್ಯಗಳಲ್ಲೂ ತಮ್ಮ ತಂಡದೊಂದಿಗೆ ಕಲಾ ಪ್ರದರ್ಶನ ನೀಡಿ ಜನಪ್ರಿಯತೆ ಗಳಿಸಿರುವ ಶ್ರೀಕಾಂತ ಹೂಗಾರ ಆಕಾಶವಾಣಿ ಕಾರ‍್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರಾಗಿದ್ದಾರೆ.

ಹಲವಾರು ಸಂಘ ಸಂಸ್ಥೆಗಳ ಪುರಸ್ಕಾರಕ್ಕೆ ಪಾತ್ರರಾಗಿರುವ ಶ್ರೀಕಾಂತ ಹೂಗಾರ ವೃತ್ತಿಯಿಂದ ಹೂಮಾರುವವರಾದರೂ ಕಲೆಯ ಪರಿಮಳವನ್ನು ಎಲ್ಲೆಡೆ ಬೀರಿದವರು.

ಅಕಾಡೆಮಿ ಇಂತಹ ಮಹನೀಯರ ಅಭಿನಂದನೆಗೆ ಹರ್ಷ ವ್ಯಕ್ತಪಡಿಸಿದೆ.