ನಂ. ೩೨೩, ೧೧ನೇ ಅಡ್ಡರಸ್ತೆ, ೩ನೇ ಮುಖ್ಯರಸ್ತೆ
ಎ-೧ ಬ್ಲಾಕ್, ವಿಜಯನಗರ ೩ನೇ ಹಂತ
ಮೈಸೂರು-೫೭೦ ೦೧೭.

(ಚಿತ್ರ ೯)

ಬೆಂಗಳೂರು ಮಾಗಡಿ ತಾಲ್ಲೂಕಿನ ಎಣ್ಣೆಗೆರೆ ಗ್ರಾಮದವರಾದ ಸುಧಾಕರ ಸಾಹಿತ್ಯ, ಜಾನಪದ ಹಾಗೂ ಅಧ್ಯಯನ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು.

ಸಾಹಿತ್ಯ ಕೃಷಿಯೊಂದಿಗೆ ಜಾನಪದ ಒಳ-ಹೊರಗನ್ನು ಸಮಗ್ರವಾಗಿ ಅಧ್ಯಯನ ಮಾಡಿರುವ ಸುಧಾಕರ ಅವರಿಗೆ ಗ್ರಾಮೀಣರೇ ವಸ್ತು ವಿಷಯದ ಮೂಲದ್ರವ್ಯ ವಾಗಿದ್ದಾರೆ.

ಜನಪದ ಬೆಡಗಿನ ವಚನಗಳು, ಶಿವಗಂಗೆಯ ಸುತ್ತಿನ ಕತೆಗಳು, ನಮ್ಮ ಸುತ್ತಿನ ಗಾದೆಗಳು ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟವು ಜಾನಪದ ಕಲಬೆರಕೆತನ ಎಂಬ ಹೊತ್ತಿಗೆ ಕೂಡ ಗಮನಾರ್ಹವಾದುದು.

ನಾಡಿನ ಜನಪ್ರಿಯ ದಿನಪತ್ರಿಕೆಗಳಲ್ಲಿ ಕಥೆಗಳನ್ನು, ಲೇಖನಗಳನ್ನು ಬರೆದಿರುವ ಸುಧಾಕರ ಅಲ್ಲಿ ಬಹುಮಾನಕ್ಕೂ ಪಾತ್ರರಾಗಿದ್ದಾರೆ. ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಕೂಡ ಸುಧಾಕರ ಅವರ ಕ್ಷೇತ್ರ ಕಾರ‍್ಯಗಳಿಗೆ ಪುರಸ್ಕಾರ ನೀಡಿ ಗೌರವಿಸಿದೆ.

ಕ್ರಿಯಾಶೀಲ ವಿದ್ವಾಂಸರಾದ ಶ್ರೀ ಸುಧಾಕರ ಇವರಿಗೆ ಬೆಳ್ಳಿ ಹಬ್ಬದ ಪ್ರಯುಕ್ತ ಅಭಿನಂದಿಸಿದೆ.