ಪಲ್ಲವಿ : ಶ್ರೀ ಹರೇ ಕೃಷ್ಣ ರಾಧಾ ಕೃಷ್ಣ ಜಯ ಜಯ ಜಗನ್ಮೋಹನಾ

ಹಂಸ ನಡಿಗೆಯವ ಕಂಸಮರ್ದನ ಹರಿವಂಶ ರಕ್ಷಕಾ

ಚರಣ :  ರೇಭ ಮೋಕ್ಷಕಾ ಸಖ್ಯ ಧರ್ಮಕಾ ಶಿಷ್ಟ ಪಾಲಕಾ
ಕೃಪಾ ಸಾಗರಾ ಬೃಂದಾ ರಮಣ ಬೃಂದಾವನ ಲೋಲಾ

ಷ್ಣಾತ ನಿಷ್ಠನೇ ದೀನ ವತ್ಸಲಾ ರುಕ್ಮಿಣೀ ಲೋಲಾ
ರಾಜೀವಾಕ್ಷನೇ ರಮ್ಯಮೋಹನಾ ರಮಣೀಯ ಲೋಲಾ

ದಾನವಾಂತಕ ಧ್ರುವ ರಕ್ಷಕ ದುರಿತ ದೂರಕಾ
ಕೃಷ್ಣ ಕೃಷ್ಣ ಜಯ ಕೃಷ್ಣ ಕೃಷ್ಣ ಜಯ ಕೃಷ್ಣ ಕೃಷ್ಣ ಜಯ