ಚಿತ್ತಪಾಡಿ ಗ್ರಾಮ,
ಅಂಚೆ – ಸಾಲಿಗ್ರಾಮ – ೫೭೫ ೨೨೫,
ಉಡುಪಿ ತಾಲ್ಲೂಕು.

(ಚಿತ್ರ ೭)

ಎಪ್ಪತ್ತೊಂಬತ್ತರ ಹಾರಾಡಿ ಮಹಾಬಲ ಗಾಣಿಗ ಅವರು ಉಡುಪಿ ಜಿಲ್ಲೆಯ  ಚಿತ್ತಪಾಡಿ ಗ್ರಾಮದವರು. ಸುಮಾರು ಐದು ದಶಕಕ್ಕೂ ಮೀರಿ ವೇಷ ಕಲಾವಿದನಾಗಿ ಸೇವೆ ಸಲ್ಲಿಸುತ್ತಿರುವ ಧೀಮಂತ ಕಲೆಗಾರ.

ವೃತ್ತಿಪರ ಮೇಳಗಳಲ್ಲಿ ಪಾಲ್ಗೊಂಡು ಯಾವ ರಂಗಸಜ್ಜಿಕೆಗೂ ಸರಿ; ಯಾವ ವೇಷಕ್ಕೂ ಸರಿ ಎಂಬಂತೆ ಕೌಶಲ್ಯ ಮೆರೆದಿರುವ ಹಾರಾಡಿ ಮಹಾಬಲ ಗಾಣಿಗ ನಮ್ಮ ಮುಂದಿರುವ ಹಿರಿಯ ಚೇತನ.

ಡಾ|| ಕಾರಂತ ಅವರ ಬ್ಯಾಲೆಯಲ್ಲಿ ೨೨ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅವರ ಶ್ರಮ ಸಾರ್ಥಕ ಅಮೆರಿಕಾ, ಜರ್ಮನಿ, ಹಾಂಗ್‌ಕಾಂಗ್, ದಕ್ಷಿಣ ಅಮೆರಿಕಾ, ಇಂಗ್ಲೆಂಡ್ ಹೀಗೆ ಹಲವಾರು ದೇಶಗಳಲ್ಲಿ ತಮ್ಮ ಕಲಾಪ್ರದರ್ಶನದಿಂದ ಜನ-ಮನ ಸೂರೆಗೊಂಡವರು.

ಇಂತಹ ಚೇತನಕ್ಕೆ ಬೆಳ್ಳಿ ಹಬ್ಬದ ಪ್ರಯುಕ್ತ ಅಕಾಡೆಮಿ ಅಭಿನಂದಿಸುತ್ತದೆ.