ನಂ. ೧೦೦, ಬಿ.ಎಸ್.ವಿ. ನಗರ, ೭ನೇ ಕ್ರಾಸ್,
೫ನೇ ಮುಖ್ಯರಸ್ತೆ, ಚಾಮರಾಜನಗರಪೇಟೆ,
ಬೆಂಗಳೂರು – ೫೬೦ ೦೧೮.
ದೂರವಾಣಿ : ೨೨೪೨೬೫೮೯
ಮೊಬೈಲ್ : ೯೪೪೯೫೦೪೪೯೫

(ಚಿತ್ರ ೬)

ವಂಶ ಪಾರಂಪರೆಯಿಂದ ಮಹದೇಶ್ವರ ಭಕ್ತರಾಗಿರುವ ಹೆಬ್ಬಣಿ ಮಾದಯ್ಯ ನವರ ಕುಟುಂಬ ಕಂಸಾಳೆ ಕಲೆಯಿಂದ ಭಕ್ತಿ ಪರಂಪರೆಗೂ ನಾಂದಿ ಹಾಡಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ಜನಿಸಿರುವ ಮಾದಯ್ಯನವರು ನಾಡಿನ ಹಿರಿಯ ಜಾನಪದ ಕಲಾವಿದರಲ್ಲಿ ಒಬ್ಬರು. ತಮ್ಮ ವಿಶಿಷ್ಟ ಕಲೆಗಾರಿಕೆಯಿಂದ ಜನಮನ ಸೂರೆಗೊಂಡವರು.

ತಂದೆ ತಾಯಿಗಳಿಂದ ಹಾಡುಗಾರಿಕೆಯಲ್ಲಿ ಸ್ಫೂರ್ತಿ, ಪ್ರಭಾವ ಪಡೆದು ಕೊಂಡಿರುವ ಮಾದಯ್ಯನವರು ತಮ್ಮದೇ ವಿಶೇಷತೆಯಿಂದ ಜನಪ್ರಿಯರಾದವರು.

ಮಲೆಮಾದೇಶ್ವರ ಸ್ವಾಮಿ ಚರಿತ್ರೆ, ಹಾಲಂಬಾಡಿ, ಜುಂಜೇಗೌಡನ ಕಥೆ, ಬಂಕಾಪುರಿ ಶ್ರವಣಯ್ಯನ ಕಥೆ, ಮುಂತಾದವುಗಳನ್ನು ತಮ್ಮ ಹಾಡುಗಾರಿಕೆ ಮೂಲಕ ಜನರಿಗೆ ತಲುಪಿಸಲು ಅತ್ಯಂತ ಶ್ರಮವಹಿಸಿದವರು.

ಶ್ರೀ ಮಲೆಯಮಾದೇಶ್ವರಸ್ವಾಮಿ ಭಕ್ತ ಮಂಡಳಿಯನ್ನು ಹುಟ್ಟುಹಾಕಿರುವ ಮಾದಯ್ಯನವರು ಈ ಮೂಲಕ ತಮ್ಮ ಕಲೆಯನ್ನು ಪ್ರಚುರಪಡಿಸಿದ್ದಾರೆ.

ಹಾಡು, ಕುಣಿತಗಳಲ್ಲಿ ಆರಾಧನಾ ಭಾವ ತುಂಬುವ ಮಾದಯ್ಯನವರಲ್ಲಿ ಕಂಸಾಳೆ ಕಲೆ ಕರಗತವಾಗಿದೆ. ತಮ್ಮ ಅನೇಕ ಶಿಷ್ಯರಿಗೂ ತಮ್ಮ ಸೇವೆಯನ್ನು ಧಾರೆ ಎರೆದಿರುವ ಮಾದಯ್ಯನವರದು ಸಾರ್ಥಕ ಸೇವೆ.

ಬೆಳ್ಳಿ ಹಬ್ಬದ ಪ್ರಯುಕ್ತ ಈ ಅಭಿನಂದನೆ.