ವ|| ಅದಲ್ಲದೆಯುಂ-

ಮ|| ಭವ ಲಾಲಾಟವಿಲೋಚನಾಗ್ನಿಶಿಖೆಯಿಂ ಬೆಂದಳ್ಕಿ ಮತ್ತಂ ಮನೋ
ಭವನೆೞ್ಚತ್ತೊಡೆ ಕಾಮಕಾಂತೆ ಬೞಯಂ ತನ್ನಿಚ್ಚೆಯಿಂ ಮೆಚ್ಚಿ ಬ|
ಣ್ಣವುರಂ ತೀವಿದ ಮಾೞ್ಕೆಯಾಯ್ತು ನವಿಲಿಂ ಕುಂದಂಗಳಿಂದಿಂದ್ರಗೋ
ಪವಿಳಾಸಂಗಳಿನಾಳಿಕಲ್ಲ ಪರಲಿಂ ಕಾರೊಳ್ ಮಹೀಮಂಡಲಂ|| ೨೪

ಚಂ|| ಪೊಳೆವಮರೇಂದ್ರಗೋಪದ ಪಸುರ್ತೆವುಲ್ಗಳ ತಳ್ತ ಕಾರ್ಮುಗಿ
ಲ್ಗಳ ಕಿಱುಗೊಂಕುಗೊಂಕಿದ ಪೊನಲ್ಗಳ ಕೆಂಪು ಪಸುರ್ಪು ಕರ್ಪು ಬೆ|
ಳ್ಪೊಳಕೊಳೆ ಶಕ್ರ ಕಾರ್ಮುಕ ವಿಳಾಸಮನೇನೆರ್ದೆಗೊಂಡು ಬೇಟದ
ತ್ತಳಗಮನುಂಟುಮಾಡಿದುದೊ ಕಾಮನ ಕಾರ್ಮುಕದಂತೆ ಕಾರ್ಮುಕಂ|| ೨೫

ವ|| ಅಂತು ತಮಗಿದಿರಂ ಬರ್ಪಂತೆ ಬಂದ ಪಯೋಧರಕಾಲದೊಳೆರಡು ತಡಿಯುಮಂ ಪೊಯ್ದು ಪರಿವ ತೊಗಳುಮಂ ತೊವಲ್ತು ಸೊಗಯಿಸುವಡವಿಗಳುಮಂ ಪಸಿಯ ನೇತ್ರಮಂ ಪಚ್ಚವಡಿಸಿದಂತೆ ಪಸುರ್ಪುವಡೆದ ನೆಲದೊಳ್ ಪದ್ಮರಾಗದ ಪರಲ್ಗಳಂ ಬಲಿಗೆದಱದಂತೆ ಉಪಾಶ್ರಯಂಬಡೆದಳಂಕರಿಸುವಿಂದ್ರಗೋಪಂಗಳುಮಂ ಕಿಸುಗಾಡ ನೆಲಂಗಳೆಳೆದಳಿರ ಬಣ್ಣಮಂ ಕೆಯ್ಕೊಂಡು ವಿರಹಿಗಳ ಮನಮನೊಲಿಸುವಂತೆ ಜಲಜಲನೆ ಪರಿವ ಜರಿವೊನಲ್ಗಳುಮಂ ಕಂಡು ತಮ್ಮ ಕಣ್ಗಂ ಮನಕಂ ಸೊಗಯಿಸೆ ಪಯಣಂಬಂದು ಕಾಮ್ಯಕವನಮಂ ಪುಗುತಂದರದೆಂತೆಂದೊಡೆ-

ಮ|| ದೆಸೆಗೆತ್ತಂ ಗಜಱುತ್ತುಮಿರ್ಪ ಪುಲಿಯಿಂ ನೀಳಾಭ್ರಮಂ ದಂತಿಗೆ
ತ್ತು ಸಿಡಿಲ್ದಾಗಸಕೆಯ್ದೆ ಪಾಯ್ವ ಪಲವುಂ ಸಿಂಗಂಗಳಿಂದೆತ್ತಗು|
ರ್ವಿಸಿ ಪಾಯ್ವರ್ವಿಗಳಿಂ ಮದಾಂಧ ವನಗಂಧೇಭಂಗಳಿಂ ಕಣ್ಗಗು
ರ್ವಿಸೆಯುಂ ಚಿತ್ತದೊಳಂದು ಕಾಮ್ಯಕವನಂ ಮಾಡಿತ್ತತಿ ಪ್ರೀತಿಯಂ|| ೨೬

ವ|| ಅಂತು ಸೌಮ್ಯಭಯಂಕರಾಕರಾಮಪ್ಪ ಕಾಮ್ಯಕವನಮಂ ಪುಗುತಂದಲ್ಲಿ ತದ್ವನಾಪತಿಯಪ್ಪ ದೈತ್ಯಂ ಕಿವಿರನವರಂ ಪುಗಲೀಯದಡ್ಡಮಾಗಿರೆ-

ಒಪ್ಪಿರಲು ಆಗತಾನೆ ಕಾಣುತ್ತಿರುವ ಮೊಳೆಹಲ್ಲುಗಳಿಂದ (ಹುಲ್ಲಿನ ಮೊಳಕೆಗಳಿಂದ) ಭೂಮಿಯು ಒಪ್ಪಿರಲು ಹೊಸ ಪ್ರಿಯಪ್ರೇಯಸಿಯರ ಹೃದಯವು ಹೊಸಮಳೆಗಾಲದ ವೈಭವವನ್ನು ನೋಡಿ ಅದೆಷ್ಟು ಕರ್ರಗಾದುವೋ, ಅದೆಷ್ಟು ಕೆರಳಿದುವೋ; ಅದೆಷ್ಟು ಗುಳಿಗೊಂಡವೋ! ವ|| ಅಷ್ಟೇ ಅಲ್ಲದೆ ೨೪. ಮಳೆಗಾಲದಲ್ಲಿ ಭೂಮಂಡಲವು ನವಿಲುಗಳಿಂದಲೂ ಮೊಲ್ಲೆಯ ಹೂವಿನಿಂದಲೂ ಮಿಂಚುಹುಳಗಳ ವಿಲಾಸದಿಂದಲೂ ಆಲಿಕಲ್ಲುಗಳ ಹರುಳುಗಳಿಂದಲೂ ಕೂಡಿರಲು ಈಶ್ವರನ ಹಣೆಗಣ್ಣಿನ ಬೆಂಕಿಯ ಜ್ವಾಲೆಯಿಂದ ಸತ್ತ ಮನ್ಮಥನು ಪುನ ಸಜೀವನಾಗಲು ಅದರಿಂದ ಸಂತೋಷಗೊಂಡ ಕಾಮನ ಸತಿಯಾದ ರತಿಯು ತನ್ನಿಷ್ಟಬಂದಂತೆ ನೆಲಕ್ಕೆ ಹಾಸಿದ ವಿವಿಧ ಬಣ್ಣದ ವಸ್ತ್ರದಂತೆ ಭೂಮಿಯು ಪ್ರಕಾಶಿಸಿತು. ೨೫. ಹೊಳೆಯುವ ಮಿಂಚುಹುಳುಗಳ, ಹಸುರಾದ ಎಳೆಯ ಹುಲ್ಲುಗಳ, ಒತ್ತಾಗಿರುವ ಕರಿಯಮೋಡಗಳ, ಕಿರಿಕಿರಿದಾಗಿ ವಕ್ರವಾಗಿ ಹರಿಯುವ ಪ್ರವಾಹಗಳ ಕೆಂಪು ಹಸುರು ಬಿಳುಪು ಬಣ್ಣಗಳು ಒಟ್ಟಾಗಿ ಸೇರಿ ಕಾಮನಬಿಲ್ಲಿನ ಸೌಂದರ್ಯವನ್ನೂ ಒಳಕೊಂಡಿರಲು ಮಳೆಗಾಲದ ಪ್ರವೇಶವು ಕಾಮನಬಿಲ್ಲಿನಂತೆಯೇ ಮನಸ್ಸನ್ನಾಕರ್ಷಿಸಿ ಪ್ರೇಮಾಕ್ಯವನ್ನುಂಟುಮಾಡಿತು. ವ|| ಹಾಗೆ ತಮಗೆ ಎದುರಾಗಿ ಬರುವಂತೆ ಬಂದ ಮಳೆಗಾಲದಲ್ಲಿ ಎರಡುದಡವನ್ನು ಘಟ್ಟಿಸಿ ಹರಿಯುವ ನದಿಗಳನ್ನೂ ಚಿಗುರಿ ಸೊಗಯಿಸುವ ಕಾಡುಗಳನ್ನೂ ಹಸುರುಬಟ್ಟೆಯನ್ನು ಹರಡಿದಂತೆ ಹಸುರಾದ ನೆಲದಲ್ಲಿ ಪದ್ಮರಾಗರತ್ನದ ಹರಳುಗಳನ್ನು ಚೆಲ್ಲಿದಂತೆ ಅವಲಂಬನವನ್ನು ಪಡೆದು ಅಲಂಕಾರವಾಗಿರುವ ಮಿಂಚುಹುಳುಗಳನ್ನೂ ಕೆಂಪಗಿರುವ ಕಾಡುಗಳ ನೆಲಗಳ ಎಲೆಯ ಚಿಗುರಿನ ಬಣ್ಣವನ್ನು ಹೊಂದಿ ವಿರಹಿಗಳ ಮನಸ್ಸನ್ನು ಕೆರಳಿಸುವಂತೆ ಜಲಜಲನೆ ಹರಿಯುವ ಝರಿಗಳ ಪ್ರವಾಹವನ್ನೂ ನೋಡಿ ಕಣ್ಣಿಗೂ ಮನಸ್ಸಿಗೂ ಆನಂದವಾಗಿರಲು ಪಾಂಡವರು ಪ್ರಯಾಣಮಾಡಿ ಕಾಮ್ಯಕವನವನ್ನು ಪ್ರವೇಶ ಮಾಡಿದರು. ಅದು ಹೇಗಿತ್ತೆಂದರೆ- ೨೬. ಎಲ್ಲ ದಿಕ್ಕುಗಳಲ್ಲಿಯೂ ಗರ್ಜಿಸುತ್ತಿರುವ ಹುಲಿಗಳಿಂದಲೂ ನೀಲಾಕಾಶವನ್ನು ಆನೆಯೆಂದು ಭ್ರಮಿಸಿ ಸಿಡಿದು ಆಕಾಶಕ್ಕೆ ವಿಶೇಷವಾಗಿ ಹಾರುವ ಹಲವು ಸಿಂಹಗಳಿಂದಲೂ ಎಲ್ಲೆಲ್ಲಿಯೂ ಭಯವನ್ನುಂಟುಮಾಡಿ ಹರಿಯುವ ಬೆಟ್ಟದ ಝರಿಗಳಿಂದಲೂ ಮದದಿಂದ ಸೊಕ್ಕಿದ ಕಾಡಾನೆಗಳಿಂದಲೂ ಕಾಮ್ಯಕವನವು ಕಣ್ಣಿಗೆ ಭಯವನ್ನುಂಟುಮಾಡಿದರೂ ಮನಸ್ಸಿಗೆ ಅತ್ಯಂತ ಪ್ರೀತಿಯನ್ನುಂಟುಮಾಡಿತು. ವ|| ಹಾಗೆ ಸೌಮ್ಯವೂ ಭಯಂಕರವೂ ಆದ ಕಾಮ್ಯಕವನವನ್ನು ಪ್ರವೇಶಿಸಲು ಆ ಕಾಡಿಗೆ ಒಡೆಯನಾದ ಕಿಮ್ಮೀರನೆಂಬ ರಾಕ್ಷಸನು

ಮ|| ಮಸಿಯಂ ಪುಂಜಿಸಿದಂತುಟಪ್ಪ ತನು ನೀಳಾಂಭೋಧರಂ ದಾಡೆಗಳ್
ಪೊಸ ಮಿಂಚುಗ್ರ ವಿಲೋಚನಂ ದಿವಿಜ ಗೋಪಂ ಕಾರೊ ಮೇಣ್ ಕಾಳ ರ|
ಕ್ಕಸನೋ ಪೇೞೆನೆ ಬಂದು ತಾಗೆ ಗದೆಯಂ ಕೊಂಡೆಯ್ದೆ ಭೀಮಂ ಸಿಡಿ
ಲ್ದು ಸಿಡಿಲ್ ಪೊಯ್ದವೊಲಾಗೆ ಪೊಯ್ವನಿಳೆಯೊಳ್ ಕಿವಿರನಂ ವೀರನಂ|| ೨೭

ವ|| ಅಂತು ಕಿವಿರನಂ ಕೊಂದು ಕಾಮ್ಯಕವನಮಂ ಪೊಕ್ಕು ತದ್ವನ ತಪೋಧನರ ಗೋಷ್ಠಿಯೊಳಮಾಟವಿಕರಟ್ಟಟ್ಟಿಯೊಳಂ ತಮಗಿಂದ್ರಪ್ರಸ್ಥದ ರಾಜ್ಯಶ್ರೀಯಂ ಮಸುಳಿಸೆ-

ಪಿರಿಯಕ್ಕರ|| ಪಿರಿಯ ಮರಂಗಳೆ ಮಾಡಮಾಗೆ ಪೊಳೆವೆಳದಳಿರ್ಗಳೆ ಸೆಜ್ಜೆಯಾಗೆ
ಪಿರಿಯ ಮಡುಗಳೆ ಮಜ್ಜನಮಾಗೆ ಪೊಸ ನಾರೆ ದೇವಾಂಗವಸ್ತ್ರಮಾಗೆ|
ಪರೆದ ತಱಗೆಲೆಯೆ ಪರಿಯಣಮಾಗೆ ಪಣ್ಪಲಮೆತ್ತಿದ ಬೋನಮಾಗೆ
ಸಿರಿಯ ಮಹಿಮೆಯಂ ಮೆಯಲೇನಾರ್ತುದೊ ಬನದೊಳಿರ್ಪಿರವಾ ಪಾಂಡವರಾ|| ೨೮

ಉ|| ಪಾಸ ಸಿಂಹಪೀಠಮಳಿನೀರುತಿ ಮಂಗಳಗೀತಿ ಭೂತಳಂ
ಪಾಸು ಮೃಗವ್ರಜಂ ಪರಿಜನಂ ಪೊದಲಗಸಾಲೆ ಮೊಕ್ಕಳಂ|
ಬೀಸುವ ಗಾಳಿ ಚಾಮರದ ಗಾಳಿಯೆನಲ್ ದೊರೆವೆತ್ತದೇಂ ಸುಖಾ
ವಾಸ ನಿಮಿತ್ತವಾಯ್ತೊ ವನವಾಸನಿವಾಸಮೆ ಪಾಂಡುಪುತ್ರರಾ|| ೨೯

ವ|| ಅಂತು ಕಾಮ್ಯಕವನದೊಳಯ್ದು ವರುಷಮಿರ್ದಾಱನೆಯ ವರುಷದೊಳದಱ ಕೆಲದೊಳೊಂದಿ ಸಂದಿಸಿ ಗಗನತಳಮಂ ತಱುಂಬುವಂತಿರ್ದ ಶಿಖರಿಶಿಖರಂಗಳಿಂದಂ ದೆಸೆಗಳಂ ತಡವರಿಸಿ ಕೊಳ್ವಂತೆ ಬಳ್ವವ ಬಳೆದು ಸೊಗಯಿಸುವ ಪೆರ್ಮರಂಗಳಿಂದಂ ವನಲಕ್ಷ್ಮಿಯ ಗೋಮಂಡಲದಂತಿರ್ದ ಕಡವಿ ಕಾಡೆರ್ಮೆಯ ಪಿಂಡುಗಳಿಂದಂ ದೆಸೆಗಳ್ಗೆ ಬೆರ್ಚಿ ಮೂಂಕಿಱದ ವನಮಹಿಷಿಗಳಿಂ ಮದಹಸ್ತಿಯಂತೆ ಮರವಾಯ್ವ ಪುಲಿಗಳಿನತಿ ಭಯಂಕರಾಕಾರಮಪ್ಪ ದ್ವೈತವನಕ್ಕೆ ಬಂದು ತದ್ವನೋಪಕಂಠವರ್ತಿಗಳಪ್ಪ ತಾಪಸಾಶ್ರಮಂಗಳೊಳ್ ವಿಶ್ರಮಿಸಲ್ ಬಗೆದು-

ಅವರು ಪ್ರವೇಶ ಮಾಡುವುದಕ್ಕೆ ಅವಕಾಶಕೊಡದೆ ತಡೆದನು. ೨೭. ಮಸಿಯನ್ನು ಒಟ್ಟುಗೂಡಿಸಿದ ಹಾಗಿದ್ದ ಅವನ ಶರೀರವೇ ಕರಿಯಮೋಡ, ಕೋರೆಹಲ್ಲುಗಳೇ ಮಿಂಚು, ಭಯಂಕರವಾದ ಕಣ್ಣುಗಳೇ ಮಿಂಚುಹುಳುಗಳು, ಇದು ಮಳೆಗಾಲವೋ ಕಾಳರಾಕ್ಷಸನೋ ಎನ್ನುವ ಹಾಗೆ ಬಂದು ಮೇಲೆ ಬೀಳಲು ಭೀಮನು ಗದೆಯನ್ನು ತೆಗೆದುಕೊಂಡು ವಿಶೇಷವಾಗಿ ಆರ್ಭಟಿಸಿ ಸಿಡಿಲುಹೊಡೆದ ಹಾಗೆ ವೀರನಾದ ಕಿಮ್ಮೀರನನ್ನು ಹೊಡೆದು ಭೂಮಿಯಲ್ಲಿ ಕೆಡವಿದನು. ವ|| ಹಾಗೆ ಕಿಮ್ಮೀರನನ್ನು ಕೊಂದು ಕಾಮ್ಯಕವನವನ್ನು ಪ್ರವೇಶಿಸಿ ಆ ಕಾಡಿನಲ್ಲಿದ್ದ ತಪಸ್ವಿಗಳ ಗುಂಪಿನಲ್ಲಿಯೂ ಅಲ್ಲಿಯ ಕಾಡುಜನರ ಸೇವೆಗಳಲ್ಲಿಯೂ ಸುಖದಿಂದಿದ್ದರು. ಅಲ್ಲಿಯ ಸೌಖ್ಯವು ಅವರಿಗೆ ಇಂದ್ರಪ್ರಸ್ಥದ ರಾಜ್ಯವೈಭವವನ್ನು ಮರೆಯಿಸಿತು. ೨೮. ದೊಡ್ಡಮರಗಳೇ ಹಾಸುಗೆಯಾದವು, ಆಳವಾದ ಮಡುಗಳೇ ಸ್ನಾನ(ಗೃಹ) ವಾದುವು ಹೊಸ ನಾರೆ ರೇಷ್ಮೆಯ ಬಟ್ಟೆಯಾಯಿತು. ಹರಡಿದ ತರಗೆಲೆಯೇ ಊಟದ ತಟ್ಟೆಯಾಯಿತು. ಹಣ್ಣು ಹಂಪಲುಗಳೇ ಶ್ರೇಷ್ಠವಾದ ಭೋಜನವಾಯಿತು. ಪಾಂಡವರ ವನವಾಸವೂ ಐಶ್ವರ್ಯದ ಮಹತ್ವವನ್ನು ಪ್ರಕಟಿಸಲು ಸಹಾಯಕವಾಯಿತು.

೨೯. ಹಾಸು ಬಂಡೆಯೇ ಸಿಂಹಾಸನ, ದುಂಬಿಯ ಧ್ವನಿಯೇ ಮಂಗಳವಾದ್ಯ, ಭೂಮಿಯೇ ಹಾಸಿಗೆ, ಮೃಗಗಳ ಸಮೂಹವೇ ಪರಿಹಾರ, ಹೊದರುಗಳೇ ಸಭಾಸ್ಥಾನ, ವಿಶೇಷವಾಗಿ ಬೀಸುವ ಗಾಳಿಯೇ ಚಾಮರದ ಗಾಳಿ ಎನ್ನುವ ಹಾಗಿರಲು ಪಾಂಡವರ ವನವಾಸವೇ ರಾಜ್ಯಭಾರಕ್ಕೆ ಸಮಾನವಾಗಿ ಅವರ ಸುಖಾವಾಸಕ್ಕೆ ಕಾರಣವಾಯಿತು. ವ|| ಪಾಂಡವರ ಹಾಗೆ ಕಾಮ್ಯಕವನದಲ್ಲಿ ಅಯ್ದು ವರ್ಷಗಳ ಕಾಲವಿದ್ದರು. ಆರನೆಯ ವರ್ಷದಲ್ಲಿ ಅದರ ಪಕ್ಕದಲ್ಲಿಯೇ ಸೇರಿಕೊಂಡು ಆಕಾಶಪ್ರದೇಶವನ್ನು ಅಟ್ಟಿಹೋಗುವ ಹಾಗಿದ್ದ ಶಿಖರಗಳನ್ನುಳ್ಳ ಬೆಟ್ಟಗಳಿಂದಲೂ ದಿಕ್ಕುಗಳನ್ನೂ ಹುಡುಕುವಂತೆ ಕೊಬ್ಬಿ ಬೆಳೆದು ಸೊಗಯಿಸುತ್ತಿರುವ ದೊಡ್ಡ ಮರಗಳಿಂದಲೂ ವನಲಕ್ಷ್ಮಿಯ ಗೋವುಗಳ ಗುಂಪಿನ ಹಾಗಿರುವ ಕಡವು ಮತ್ತು ಕಾಡುಕೋಣಗಳ ಹಿಂಡುಗಳಿಂದಲೂ ದಿಕ್ಕುದಿಕ್ಕುಗಳಲ್ಲಿ ಹೆದರಿ ವಾಸನೆ ನೋಡಲು ಮೂಗನ್ನು ಚಾಚುತ್ತಿರುವ ಕಾಡೆಮ್ಮೆಗಳಿಂದಲೂ ಮದ್ದಾನೆಯಂತೆ ಬಂದು ಮರಕ್ಕೆ ತಗಲುವ ಹುಲಿಗಳಿಂದಲೂ ಅತ್ಯಂತ ಭಯಂಕರವಾಗಿರುವ ದ್ವೆ ತವನಕ್ಕೆ ಬಂದು ಆ ವನದ ಸಮೀಪದಲ್ಲಿರುವ ತಪಸ್ವಿಗಳ ಆಶ್ರಮಗಳಲ್ಲಿ ವಿಶ್ರಮಿಸಿಕೊಳ್ಳಲು

ಮ|| ಪುಗಲಿಲ್ಲೀ ಬನಮಾರ್ಗಮಿಂಬು ನೆಲಸಲ್ ನಾರುಂಟುಡಲ್ ಮೆಲ್ಲೆ ಕೊಂ
ಬುಗಳೊಳ್ ಪಣ್ಪಲಮುಂಟು ವಿಯೆ ಕುಡಿಯಲ್ ನೀರುಂಟು ಪದ್ಮಾಕರಾ|
ಳಿಗಳೊಳ್ ತಣ್ಪುಗಳುಂಟು ಹೇಮಲತಿಕಾ ಕುಂಜಂಗಳೊಳ್ ನಮ್ಮ ನ
ನ್ನಿಗೆ ಬನ್ನಂ ಬರಲೀಯದೀ ಬನದೊಳಿರ್ದೇಂ ಕಾಲಮಂ ಪಾರೆವೇ|| ೩೦

ವ|| ಎಂದು ತಮ್ಮೊಳಯ್ವರುಮೇಕ ಕಾರ್ಯಾಳೋಚನಪರರಾಗಿ ದ್ವೈತವನದೊಳದ್ವೈತ ಸಾಹಸರಿರ್ಪನ್ನೆಗಮೊಂದು ದಿವಸಂ ದುರ್ಯೋಧನನ ಮಯ್ದುನಂ ಸಿಂಧುದೇಶಾಶ್ವರಂ ಸೈಂಧವನವರಂ ಛಿದ್ರಿಸಲೆಂದು ಮೆಯ್ಗರೆದು ಬಂದು-

ಮ|| ಮೃಗಯಾಕ್ರೀಡೆಗೆ ಪಾಂಡುರಾಜತನಯರ್ ಪೋಪನ್ನೆಗಂ ಬಂದು ತೊ
ಟ್ಟಗೆ ಪಾಂಚಾಳಿಯನೆತ್ತಿ ತನ್ನ ರಥದೊಳ್ ತಂದಿಟ್ಟುಕೊಂಡುಯ್ದನ|
ನ್ನೆಗಮಂತಾ ಪಡೆಮಾತುಗಳೇಳ್ದತಿಬಳರ್ ಭೀಮಾರ್ಜುನರ್ ಕಾಯ್ದು ಕೆ
ಯ್ಮಿಗೆ ಬೆನ್ನಂ ಪರಿದೆತ್ತ ಪೋಪೆಯೆಲವೋ ಪೋ ಪೋಗಲೆಂದೆಯ್ದಿದರ್|| ೩೧

ವ|| ಅಂತೆಯ್ದಿ ತದ್ಗದಾಘಾತದೊಳಂ ಬಾಣಪಾತದೊಳಮವನ ರಥಮಂ ಶತಚೂರ್ಣಂ ಮಾಡಿ ಜಯದ್ರಥನಂ ಕೋಡಗಗಟ್ಟುಗಟ್ಟಿ ಬೆನ್ನಂ ಬಿಲ್ಲ ಕೊಪ್ಪಿನೊಳಿಱದು ನಡೆಯೆಂದು ನಡೆಯಿಸಿ ಪಾಂಚಾಳಿಯಂ ಲೀಲೆಯಿಂದೊಡಗೊಂಡು ಬೀಡಿಂಗೆ ವಂದಿ ಧರ್ಮಪುತ್ರಂಗೆ ತೋಱದೊಡೆ-

ಕಂ|| ಲಾಕ್ಷಾಗೃಹಮಂ ಪುಗಿಸಲು
ಮಕ್ಷಕ್ರೀಡೆಯೊಳೆ ಧರಣಿಯಂ ಕೊಳಲುಂ ಪಿಂ|
ಗಾಕ್ಷಂಗೆವೇೞ್ದು ಸೈರಿಸ
ದಾಕ್ಷೇಪದಿನೆಮ್ಮನಿಲ್ಲಿ ಛಿದ್ರಿಸ ಬಂದೈ|| ೩೨

ವ|| ಎಂದು ನಿನ್ನಂ ಪರಿಭವಕ್ಕೆ ತಂದು ನಿನ್ನ ಯಶಮಂ ಕಿಡಿಸಿದೆವಿನ್ ಕೊಂದೊಡೇವಂದಪುದೆಂದು ದುರ್ಯೋಧನನಲ್ಲಿಗೆ ಪೋಗೆಂದು ಕಟ್ಟಿದ ಕಟ್ಟುಗಳಂ ಬಿಟ್ಟು ಕಳೆದೊಡೆ ಜಯದ್ರಥಂ ಸಿಗ್ಗಾಗಿ ಕೈಲಾಸದೊಳೀಶ್ವರಂಗೆ ತಪಂಗೆಯ್ದು ಮೆಚ್ಚಿಸಿ ಪಾಂಡವರನೊಂದು ದೆವಸದನುವರದೊಳ್ ಗೆಲ್ವೆನಕ್ಕೆಂದು ಬರಂಬಡೆದು ಪೋದನಿತ್ತ ದುರ್ಯೋಧನಂ ಸಮಸ್ತಸಾಧನಸಹಿತನಾಗಿ ಕಾಡೊಳ್ ಬೇಡರಂತೆ ತೊೞಲ್ವ ದಾಯಿಗರ ಕಂದಿ ಕುಂದಿದ ಮೊಗಂಗಳಂ ನೋಡುವುದುಮೆನ್ನನವರಿಂ ನೋಡಿಸುವುದವಿಯೆರಡೆ ಸಂಸಾರಫಲಮೆಂದು ನಾಗಪುರದಿಂ ಪೊಱಮಟ್ಟು ದುಶ್ಶಾಸನಾದಿಗಳಪ್ಪ ನೂರ್ವರ್ ತಮ್ಮಂದಿರುಂ ಭಾನುಮತಿಯುಂ ಚಂದ್ರಮತಿಯುಮೆಂಬ ಬೇಟದರಸಿಯರುಂ ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಂ ಗಾಂಗೇಯ ದ್ರೋಣ ಕೃಪ ವಿದುರ ಪ್ರಭೃತಿಗಳುಮಶ್ವತ್ಥಾಮ ಕರ್ಣ ಶಲ್ಯ ಶಕುನಿ ಸೈಂಧವ ಪ್ರಮುಖನಾಯಕರುಂಬೆರಸು ಬೇಂಟೆಯ ನೆವದಿಂ ಬಂದು ದ್ವೈತವನದ ಕೆಲದ ನಂದನವನದೊಳ್ ಪಾಂಡವರ್ಗೆ ಸಮೀಪಮಾಗೆ ಬೀಡು ಬಿಟ್ಟು ಪಾಡಿಸುತ್ತುಂ ಪೊಗೞಸುತ್ತಮಿರ್ದನನ್ನೆಗಂ ಪಗೆಯಿಱಯಬಂದರ ಮೂಗನರಿದರೆಂಬಂತನಿಬರಂ ಬಾಯಂ ಬಿಟ್ಟು

ಯೋಚಿಸಿದರು. ೩೦. ಈ ವನವು ಮತ್ತಾರಿಗೂ ಪ್ರವೇಶಿಸಲಾಗುವುದಿಲ್ಲ ; ಇರುವುದಕ್ಕೆ ಸ್ಥಳಾವಕಾಶವೂ ಉಡಲು ನಾರೂ ಉಂಟು; ಊಟಮಾಡಲು ಕೊಂಬೆಗಳಲ್ಲಿ ಹಣ್ಣು ಹಂಪಲುವುಂಟು; ಸ್ನಾನಮಾಡಲೂ ಕುಡಿಯಲೂ ಕೊಳಗಳಲ್ಲಿ ನೀರುಂಟು; ಹೊಂಬಣ್ಣದ ಬಳ್ಳಿವನೆಗಳಲ್ಲಿ ತಂಪುಂಟು; ಈ ವನದಲ್ಲಿ ನಮ್ಮ ಸತ್ಯಪರಿಪಾಲನೆಗೆ ಭಂಗಬರುವುದಿಲ್ಲ. ಈ ವನದಲ್ಲಿಯೇ ಇದ್ದು ಕಾಲಯಾಪನೆ ಮಾಡಬಹುದಲ್ಲವೇ ಎಂದು ಯೋಚಿಸಿ ವ|| ಅಯ್ವರೂ ಏಕಾಭಿಪ್ರಾಯವಾಗಿ ಅದ್ವಿತೀಯ ಬಲಶಾಲಿಗಳಾದ ಅವರು ಆ

ದ್ವೆ ತವನದಲ್ಲಿ ತಂಗಿದರು. ಅಷ್ಟರಲ್ಲಿ ಒಂದು ದಿವಸ ದುರ್ಯೋಧನನ ಮೈದುನನೂ ಸಿಂಧುದೇಶಾಪತಿಯೂ ಆದ ಸೈಂಧವನು ಅವರನ್ನು ಭೇದಿಸಬೇಕೆಂದು (ರಹಸ್ಯವನ್ನು ತಿಳಿಯಲೆಂದು) ಮೈಮರೆಸಿಕೊಂಡು ಬಂದನು. ೩೧. ಆ ಪಾಂಡುಪುತ್ರರು ಬೇಟೆಗೆ ಹೋಗಿರುವ ಸಮಯವನ್ನೇ ನೋಡಿ ಬಂದು ಇದ್ದಕ್ಕಿದ್ದ ಹಾಗೆ ದ್ರೌಪದಿಯನ್ನೆತ್ತಿ ತನ್ನ ರಥದಲ್ಲಿಟ್ಟುಕೊಂಡು ಹೋದನು. ಅಷ್ಟರಲ್ಲಿ ಆ ಸಮಾಚಾರವನ್ನು ಕೇಳಿ ಬಹುಸಾಹಸಿಗಳಾದ ಭೀಮಾರ್ಜುನರ ಕೋಪವು ಮಿತಿಮೀರಿರಲು ಅವನ ಬೆನ್ನಿನ ಹಿಂದೆಯೇ ಓಡಿ ಎಲ್ಲಿಗೆ ಹೋಗುತ್ತೀಯೋ ಹೋಗಬೇಡ, ಹೋಗಬೇಡ (ನಿಲ್ಲು) ಎಂದು ಅವನನ್ನು ಸಮೀಪಿಸಿದರು. ವ|| ತಮ್ಮ ಗದೆಯ ಪೆಟ್ಟಿನಿಂದಲೂ ಬಾಣ ಪ್ರಯೋಗದಿಂದಲೂ ಅವನ ತೇರನ್ನು ನೂರು ಚೂರುಮಾಡಿ ಸೈಂಧವನನ್ನು ಕಪಿಯನ್ನು ಬಿಗಿಯುವಂತೆ ಬಿಗಿದು ಅವನ ಬೆನ್ನನ್ನು ಬಿಲ್ಲಿನ ತುದಿಯಿಂದ ತಿವಿದು ಗಾಯಮಾಡಿ ನಡೆ ಎಂದು ನಡೆಯಿಸಿ ದ್ರೌಪದಿಯೊಡನೆ ಬೀಡಿಗೆ ಬಂದು ಧರ್ಮರಾಜನಿಗೆ ತೋರಿದರು. ೩೨. ‘ಅರಗಿನ ಮನೆಯನ್ನು ಪ್ರವೇಶಮಾಡಿಸಲೂ ಪಗಡೆಯಾಟದಿಂದ ರಾಜ್ಯವನ್ನು ಕಸಿದುಕೊಳಲೂ ದುರ್ಯೋಧನನಿಗೆ ಪ್ರೇರೇಪಿಸಿ (ಅಷ್ಟಕ್ಕೇ) ತೃಪ್ತಿಪಡದೆ ನಮ್ಮನ್ನು ದೌಷ್ಟ್ಯದಿಂದ ಇಲ್ಲಿಯೂ ಭೇದಿಸಲು ಬಂದೆಯಾ?’ ವ|| ‘ನಿನ್ನನ್ನು ಅವಮಾನ ಪಡಿಸಿ ನಿನ್ನ ಯಶಸ್ಸನ್ನು ಕೆಡಿಸಿದೆವು. ಇನ್ನು ನಿನ್ನನ್ನು ಕೊಂದರೆ ಏನು ಬರುತ್ತದೆ’, ದುರ್ಯೋಧನನ ಹತ್ತಿರಕ್ಕೆ ಹೋಗಿ ಬದುಕು ಎಂದು ಕಟ್ಟಿದ್ದ

ನೋಡೆ ಮೂಗನರಿದರೆಂಬಂತನಿಬರಂ ಬಾಯಂ ನೋಡೆ ನೋಡೆ ಪೂರ್ವಜನ್ಮದ ಪಗೆ ಚಿತ್ರಾಂಗದನೆಂಬ ಗಂಧರ್ವನಱುವತ್ತು ಕೋಟಿ ಗಾಂಧರ್ವಬಲಂಬೆರಸು ಬಂದು ದುರ್ಯೋಧನ ದುಶ್ಶಾಸನರಿರ್ವರುಮಂ ಕೋಡಗಗಟ್ಟುಗಟ್ಟಿ-

ಚಂ|| ಮಿಡುಕದೆ ಭೀಷ್ಮ ನೋಡುತಿರು ಕುಂಭಜ ಸುರ್ಕಿರು ಕರ್ಣ ಮಿಕ್ಕು ಮಾ
ರ್ನುಡಿಯದೆ ಮೂಗುವಟ್ಟಿರು ಗುರು ಪ್ರಿಯನಂದನ ಕೂಗಡಂಗದಿ|
ರ್ದೊಡೆ ಬರ್ದುಕಾವುದಿರ್ ಪೊಡರ್ದೊಡೀಗಡೆ ಕೊಂದಪೆನೆಂದು ಕೂಡೆ ಕ
ಣ್ಗಿಡೆ ಜಡಿದುಯ್ದನಾ ಖಚರನಿರ್ವರುಮಂ ಪರಮಾಣುಮಾರ್ಗದಿಂ|| ೩೩

ವ|| ಅಂತುಯ್ವುದುಂ ನೆಗೞ್ತೆಯ ಬೀರರೆಲ್ಲಂ ಬಡವರ ಪಿತರರಂತೆ ಮಿಳ್ಮಿಳ ನೋಡುತ್ತಿರೆ ಮಿಕ್ಕುದುಂಡರಂತೆ ತಲೆಯಂ ಬಾಗಿ ಬಿಲ್ಗಳಂ ಮುಂದಿಟ್ಟು ಬಿಲ್ಲುಂ ಬೆಱಗುಮಾಗಿರೆ ಸುಯೋಧನನ ಮಹಾದೇವಿ ಭಾನುಮತಿ ಬಾಯೞದು ಪುಯ್ಯಲಿಡುತುಂ ಬಂದು ಧರ್ಮನಂದನನ ಕಾಲ ಮೇಲೆ ಕವಿದುಪಟ್ಟು-

ಕಂ|| ನೋಂತರ ಪಗೆವರನೆೞಱ
ದಂತಾಯ್ತೆಂದಿರದೆ ಪುರುಷಕಾರದ ಪೆಂಪಂ|
ಚಿಂತಿಸಿ ತರಿಸಿ ಮಹೀಶನ
ನೆಂತಪ್ಪೊಡಮೆನಗೆ ಪುರುಷಭಿಕ್ಷಮನಿಕ್ಕಿಂ|| ೩೪

ವ|| ಎಂದು ಪುಯ್ಯಲಿಡುವ ಭಾನುಮತಿಯ ಪುಯ್ಯಲಂ ಕೇಳ್ದು ಸುಯೋಧನಂ ಬಂದ ವೃತ್ತಾಂತಮನಱದು-

ಮ|| ಪಿರಿದುಂ ಕಾಯ್ಪಿನೊಳೆಯ್ದೆ ಕಾಯ್ವ ಸಮಕಟ್ಟಿಂ ದೋಷಮಲ್ತಕ್ಕ ಮ
ಚ್ಚರಮಂ ಮೋಘಮೊಡಂಬಡುಂ ಕಲುಷಮುಂ ಮುನ್ನುಳ್ಳುದಂತೆತ್ತಿಯುಂ|
ಪೊರೆಯುಂ ಪಂತಮುಮಿಲ್ಲದಂತೆ ಮನದೊಳ್ ನಿಷ್ಕಾರಣಂ ಕಾಯ್ವರಂ
ಪರ ಚಿಂತಾಕರ ಏಹಿ ಎಂಬ ನುಡಿಯಂ ಮುಂ ಕೇಳ್ದೆನಿಲ್ಲಾಗದೇ|| ೩೫

ಕಟ್ಟುಗಳನ್ನೆಲ್ಲ ಬಿಚ್ಚಿ ಕಳುಹಿಸಲು ಸೈಂಧವನು ನಾಚಿಕೆಗೊಂಡು ಕೈಲಾಸದಲ್ಲಿ ಈಶ್ವರನನ್ನು ಕುರಿತು ತಪಸ್ಸುಮಾಡಿ ಮೆಚ್ಚಿಸಿ ‘ಪಾಂಡವರನ್ನು ಒಂದು ದಿನದ ಯುದ್ಧದಲ್ಲಿಯಾದರೂ ಗೆಲ್ಲುವಂತಾಗಲಿ’ ಎಂದು ವರವನ್ನು ಪಡೆದು ಹೋದನು. ಈ ಕಡೆ ದುರ್ಯೋಧನನು ಕಾಡಿನಲ್ಲಿ ಬೇಡರಂತೆ ತೊಳಲುತ್ತಿರುವ ಜ್ಞಾತಿಗಳ ಬಾಡಿ ಕೃಶವಾದ ಮುಖಗಳನ್ನು ನೋಡುವುದೂ ವೈಭವಯುಕ್ತವಾದ ತನ್ನನ್ನು ಅವರಿಂದ ನೋಡಿಸುವುದೂ ಇವೆರಡೇ ಸಂಸಾರದ ಫಲವೆಂದು (ಭಾವಿಸಿ) ಸಮಸ್ತ ಸಲಕರಣೆಗಳೊಡನೆ ಹಸ್ತಿನಾಪುರದಿಂದ ಹೊರಟು ದುಶ್ಶಾಸನನೇ ಮೊದಲಾದ ನೂರ್ವರು ತಮ್ಮಂದಿರನ್ನೂ ಭಾನುಮತಿ ಮತ್ತು ಚಂದ್ರಮತಿ ಎಂಬ ಇಬ್ಬರು ಪ್ರೀತಿಪಾತ್ರರಾದ ರಾಣಿಯರನ್ನು ಲಕ್ಷಣನೇ ಮೊದಲಾದ ನೂರುಜನ ಮಕ್ಕಳನ್ನೂ ಭೀಷ್ಮ, ದ್ರೋಣ ಕೃಪ ವಿದುರ ಮೊದಲಾದ ಪ್ರಭೃತಿಗಳನ್ನೂ ಅಶ್ವತ್ಥಾಮ, ಕರ್ಣ, ಶಲ್ಯ, ಶಕುನಿ ಸೈಂಧವನೇ ಮೊದಲಾದ ನಾಯಕರನ್ನೂ ಕೂಡಿಬೇಟೆಯ ನೆಪದಿಂದ ಬಂದು ದ್ವೆ ತವನದ ಪಕ್ಕದ ನಂದನವನದೊಳಗೆ ಪಾಂಡವರಿಗೆ ಸಮೀಪವಾಗಿರುವ ಹಾಗೆ ಬೀಡು ಬಿಟ್ಟನು. ತನ್ನ ವೈಭವವನ್ನು ಹಾಡಿಸುತ್ತಲೂ ಹೊಗಳಿಸುತ್ತಲೂ ಇದ್ದನು. ಅಷ್ಟರಲ್ಲಿ ‘ಹಗೆಯನ್ನು ಕೊಲ್ಲಲು ಬಂದವರ ಮೂಗನ್ನು ಕತ್ತರಿಸಿದರು’ ಎಂಬಂತೆ ಎಲ್ಲರೂ ಆಶ್ಚರ್ಯದಿಂದ ಬಾಯಿಬಿಟ್ಟುಕೊಂಡು ನೋಡುತ್ತಿದ್ದ ಹಾಗೆಯೇ ಹಿಂದಿನ ಜನ್ಮದ ಶತ್ರುವಾದ ಚಿತ್ರಾಂಗದನೆಂಬ ಗಂಧರ್ವನು ಅರುವತ್ತು ಕೋಟಿ ಗಂಧರ್ವಸೈನ್ಯದೊಡನೆ ಕೂಡಿ ಬಂದು ದುರ್ಯೋಧನ ದುಶ್ಶಾಸನರಿಬ್ಬರನ್ನೂ ಕಪಿಯನ್ನು ಕಟ್ಟುವ ಹಾಗೆ ಕಟ್ಟಿದನು. ೩೩. ‘ಭೀಷ್ಮ ಅಳ್ಳಾಡದೆ ನೋಡುತ್ತಿರು, ದ್ರೋಣನೇ ಮುದುರಿಕೊಂಡಿರು; ಕರ್ಣನೇ ಮೀರಿ ಮಾತನಾಡದೆ ಮೌನವಾಗಿರು; ಅಶ್ವತ್ಥಾಮ ನಿನ್ನ ಕೂಗು ಅಡಗದಿದ್ದರೆ ನಿನಗೆ ಬದುಕುವುದೆಲ್ಲಿ ಬಂತು, ಸುಮ್ಮನಿರು; ಜಂಬಮಾಡಿದರೆ ಈಗಲೆ ಕೊಲ್ಲುತ್ತೇನೆ’ ಎಂದು ಅವರೆಲ್ಲರೂ ಹೆದರುವಂತೆ ಬೆದರಿಸಿ ಇಬ್ಬರನ್ನೂ ಆ ಚಿತ್ರಾಂಗದನು ಆಕಾಶಮಾರ್ಗದಿಂದ ಎತ್ತಿಕೊಂಡು ಹೋದನು. ವ|| ಹಾಗೆ ಎತ್ತಿಕೊಂಡು ಹೋಗಲು ಪ್ರಸಿದ್ಧರಾದ ವೀರರೆಲ್ಲ ಬಡವರ ತಂದೆಯರಂತೆ ಮಿಟಮಿಟನೆ ನೋಡುತ್ತಿದ್ದರು. ಎಂಜಲನ್ನು ತಿಂದವರಂತೆ ತಲೆಯನ್ನು ತಗ್ಗಿಸಿಕೊಂಡರು. ಬಿಲ್ಲುಗಳನ್ನು ತಮ್ಮ ಮುಂದಿಟ್ಟುಕೊಂಡು ಆಶ್ಚರ್ಯಚಕಿತರಾಗಿ ಏನು ಮಾಡಲೂ ತೋರದಿದ್ದರು, ದುರ್ಯೋಧನನ ಮಹಾರಾಣಿಯಾದ ಭಾನುಮತಿಯು ಅಳುತ್ತಲೂ ಅರಚುತ್ತಲೂ ಬಂದು ಧರ್ಮರಾಜನ ಕಾಲಿನ ಮೇಲೆ ಕವಿದು ಬಿದ್ದಳು. ೩೪. ‘ತಾನೇ ಕೊಲ್ಲಬೇಕೆಂದು ವ್ರತಮಾಡುತ್ತಿದ್ದವರ ಹಗೆಯನ್ನು ಎತ್ತು ಇರಿದ ಹಾಗಾಯ್ತು ಎಂದು ಸುಮ್ಮನಿರದೆ ಪುರುಷಪ್ರಯತ್ನದ ವೈಭವವನ್ನು ಯೋಚಿಸಿ ಹೇಗಾದರೂ ಮಹಾರಾಜನನ್ನು ತರಿಸಿ ನನಗೆ ಪುರುಷಭಿಕ್ಷೆಯನ್ನು ಕೊಡಿ’ ವ|| ಎಂದು ಕೂಗಿಕೊಳ್ಳುತ್ತಿರುವ ಭಾನುಮತಿಯ ಗೋಳನ್ನು ಕೇಳಿ ದುರ್ಯೋಧನನು ಬಂದ ಕಾರಣವನ್ನು ತಿಳಿದು ೩೫. ಈಗ ವಿಶೇಷವಾಗಿ ಕೋಪಿಸಿಕೊಳ್ಳುವುದು ನನಗೆ ಯೋಗ್ಯವಲ್ಲ ತಾಯಿ! ಅಸೂಯೆಯೂ ವ್ಯರ್ಥವಾದ ತೊಂದರೆಯೂ

ವ|| ಎಂದು ತನ್ನೊಳೆ ಬಗೆದು ಭಾನುಮತಿಯನಿಂತೆಂದಂ-

ಮ|| ಸುರಿಯಲ್ಬೇಡಮದರ್ಕೆ ಬಾಷ್ಪಜಳಮಂ ನಿನ್ನಾಣ್ಮನಂ ನಿನ್ನೊಳಿಂ
ದಿರದಾಂ ಕೂಡುವೆವೆಮ್ಮೊಳಾದ ಕಲಹಕ್ಕೆಂತಾದೊಡಂ ಕೇಳ ನೂ|
ರ್ವರೆ ದಲ್ ಕೌರವರಾಮುಮಯ್ವರೆ ವಲಂ ಮತ್ತೊರ್ವರೊಳ್ ತೊಟ್ಟ ಸಂ
ಗರರಂಗಕ್ಕೆ ಜಸಕ್ಕೆ ಕೂಡುವೆಡೆಯೊಳ್ ನೂಱಯ್ವರಾವಲ್ಲವೇ|| ೩೬

ವ|| ಎಂದು ಯುಷ್ಠಿರಂ ಪಾೞಯ ಪಸುಗೆಯನಱದು ನುಡಿದೊಡಾ ಪೂಣ್ದ ಬೆಸನಂ ಕರಮಾಸೆವಟ್ಟು ತನ್ನ ಕೆಲದೊಳಿರ್ದ ಸಾಹಸಾಭರಣನ ಮೊಗಮಂ ನೋಡಿ-

ಕಂ|| ಪಿಡಿದುಯ್ದುದು ಗಂಧರ್ವರ
ಪಡೆ ಗಡ ನಿಮ್ಮಣ್ಣನಂ ಸುಯೋಧನನನಿದಂ|
ಕಡೆಗಣಿಸಲಾಗ ನಮಗೀ
ಗಡೆ ಬೇಗಂ ಬಿಡಿಸಿ ತರ್ಪುದಾತನ ಸೆಯಂ|| ೩೭

ವ|| ಎಂಬುದುಂ ಮಹಾಪ್ರಸಾದಮಂತೆಗೆಯ್ವೆನೆಲ್ಲಿವೊಕ್ಕೊಡಂ ಕೊಂಡು ಬಂದೆಪೆನೆಂದು ಬಗೆಯದಿದಿರಂ ನೋಡುತ್ತಿರಿಮೆಂದು ತವದೊಣೆಗಳಂ ಬಿಗಿದು ಗಾಂಡೀವಮನೇಱಸಿ ನೀವಿ ಜೇವೊಡೆದು ಗಂಧರ್ವರ ಪೋಪ ಬೞಯಂ ಬೆಸಗೊಂಡು ಹಿಮವಂತದಲ್ಲಿ ರಾಕ್ಷಸಿ ಕೊಟ್ಟ ಚಕ್ಷುಸಿಯೆಂಬ ವಿದ್ಯೆಯಿಂ ತನ್ನ ಕಣ್ಣನಭಿಮಂತ್ರಿಸಿಕೊಂಡು ಪಾಱುವ ಗಂಧರ್ವಬಲಮಂ ಜಲಕ್ಕನೆ ಕಂಡು-

ಕಂ|| ಕೊಳ್ ಕೊಳ್ಳೆಂದೆಚ್ಚೊಡೆ ವಿಳ
ಯೋಳ್ಕದ ತೆಱದಿಂದೆ ಮುಸುಱ ದಿವ್ಯಾಸ್ತ್ರಚಯಂ|
ಗಳ್ ಕೊಳೆ ಗಾಂಧರ್ವಬಲಂ
ಗಳ್ ಕೆಡೆದುವು ಮಿಟ್ಟೆಗೊಂಡ ಚಿಟ್ಟೆಯ ತೆಱದಿಂ|| ೩೮

ದ್ವೇಷವೂ ದುರ್ಯೋಧನನಿಗೆ ಸಹಜವಾದುದೇ. ಅದನ್ನೇ ಅನುಸರಿಸಿಕೊಂಡು ನಾನು ದುಖದಿಂದ ನಿಷ್ಕಾರಣವಾಗಿ ಕೋಪಿಸಿಕೊಳ್ಳುವುದು ನನಗೆ ಯೋಗ್ಯವಲ್ಲ. ಇತರರಿಗೆ ಹಿಂಸೆಮಾಡುವ ಸ್ವಭಾವವು ನನ್ನಿಂದ ದೂರವಿರಲಿ ಎಂಬ ಮಾತನ್ನು ನಾನು ಹಿಂದೆಯೇ ಕೇಳಿಲ್ಲವೇ? ವ|| ಎಂದು ತನ್ನಲ್ಲಿ ಯೋಚಿಸಿ ಭಾನುಮತಿಯನ್ನು ಕುರಿತು ಹೀಗೆಂದನು. ೩೬. ಇದಕ್ಕಾಗಿ ನೀನು ಕಣ್ಣೀರನ್ನು ಸುರಿಸಬೇಡ; ಸಾವಕಾಶಮಾಡದೆ ನಿನ್ನ ಗಂಡನನ್ನು ಈ ದಿನವೇ ತಂದು ಸೇರಿಸುವೆವು; ಕೇಳಮ್ಮ ನಮ್ಮ ಮನೆಯಲ್ಲಿಯೇ ಉಂಟಾದ ಜಗಳಕ್ಕೆ ಕೌರವರು ನೂರು ಜನ, ನಾವು ಅಯ್ದು ಜನವೇ ದಿಟ. ಆದರೆ ಮತ್ತೊಬ್ಬರಲ್ಲಿ ಉಂಟಾದ ಯುದ್ಧ ಸೇರುವ ಸಂದರ್ಭದಲ್ಲಿ ನಾವು ನೂರೈದು ಜನವಲ್ಲವೇ? ವ|| ಎಂದು ಧರ್ಮರಾಜನು ಧರ್ಮದ ವಿವೇಕವನ್ನು ತಿಳಿಯುವ ಹಾಗೆ ಹೇಳಿ ತಾನು ಪ್ರತಿಜ್ಞೆ ಮಾಡಿದ ಕಾರ್ಯವನ್ನು ಶೀಘ್ರವಾಗಿ ಸಾಸಲು ಮನಸ್ಸು ಮಾಡಿ ತನ್ನ ಪಕ್ಕದಲ್ಲಿದ್ದ ಸಾಹಸಾಭರಣನಾದ ಅರ್ಜುನನ ಮುಖವನ್ನು ನೋಡಿ- ೩೭. ನಿಮ್ಮಣ್ಣನಾದ ದುರ್ಯೋಧನನನ್ನು ಗಂಧರ್ವಸೈನ್ಯವು ಹಿಡಿದುಕೊಂಡು ಹೋಗಿದೆ. ನಾವು ಇದನ್ನು ಕಡೆಗಣಿಸಬಾರದು; ಈಗಲೇ ಬೇಗ ಆತನ ಬಂಧನವನ್ನು ಬಿಡಿಸಿ ತರತಕ್ಕದ್ದು. ವ|| ಎನ್ನಲು ಮಹಾಪ್ರಸಾದ, ಹಾಗೆಯೇ ಮಾಡುತ್ತೇನೆ; ಎಲ್ಲಿ ಹೊಕ್ಕಿದ್ದರೂ ಕೊಂಡುಬರುತ್ತೇನೆ, ಆ ವಿಷವಾಗಿ ಚಿಂತಿಸದೆ ನಿರೀಕ್ಷಣೆ ಮಾಡುತ್ತಿರಿ ಎಂದು ತನ್ನ ಅಕ್ಷಯತೂಣೀರವನ್ನು ಬಿಗಿದುಕೊಂಡು ಗಾಂಡೀವಕ್ಕೆ ಹೆದೆಯನ್ನೇರಿಸಿ ನೀವು ಶಬ್ದಮಾಡಿ ನೋಡಿ ಗಂಧರ್ವರು ಹೋದ ದಾರಿಯನ್ನು ಹುಡುಕಿಕೊಂಡು ಹೊರಟನು. ಹಿಮವತ್ಪರ್ವತದಲ್ಲಿ ರಾಕ್ಷಸಿಯು ಕೊಟ್ಟ ಚಕ್ಷುಸಿಯೆಂಬ ವಿದ್ಯೆಯನ್ನು ತನ್ನ ಕಣ್ಣನ್ನು ಅಭಿಮಂತ್ರಿಸಿಕೊಂಡು ನೋಡಲು ಹಾರಿಹೋಗುತ್ತಿದ್ದ ಗಂಧರ್ವಸೈನ್ಯವನ್ನು ಸ್ಪಷ್ಟವಾಗಿ ಕಂಡನು. ೩೮. ತೆಗೆದುಕೊ ತೆಗೆದುಕೊ ಎಂದು ಹೊಡೆಯಲಾಗಿ ದಿವ್ಯಾಸ್ತ್ರಗಳ ಸಮೂಹವು ಪ್ರಳಯಕಾಲದ ಬೆಂಕಿಯ ಚೂರಿನಂತೆ ಮುತ್ತಿ ನಾಟಲಾಗಿ ಗಂಧರ್ವಸೈನ್ಯಗಳು ಮಣ್ಣು ಹೆಂಟೆಯು ತಗುಲಿದ ಚಿಟ್ಟೆಯ ಹುಳುವಿನ ಹಾಗೆ ಉರುಳಿ ಬಿದ್ದುವು. ವ|| ಅಲ್ಲಿ ಹದಿನಾಲ್ಕು ಸಾವಿರ ಗಂಧರ್ವರನ್ನು ಕೊಲ್ಲಲು ಚಿತ್ರಾಂಗದನು ಹೆದರಿ ನಿನ್ನ ಪ್ರೀತಿಪಾತ್ರವಾದ ಬಂದಿಯನ್ನು ತೆಗೆದುಕೋ ಎಂದು ದುರ್ಯೋಧನ ಮತ್ತು ದುಶ್ಶಾಸನರನ್ನು ಬಿಸಾಡಿದನು. ಅವರು ನೋಯುವುದಕ್ಕೆ ಅವಕಾಶ ಕೊಡದೆ ಭೂಮ್ಯಾಕಾಶಗಳ ಮಧ್ಯದಲ್ಲಿ ಬಾಣಗಳನ್ನು ವಿಧವಿಧವಾಗಿ ಪ್ರಯೋಗಮಾಡಿ ಮೆಟ್ಟಿಲುಗಳನ್ನು ಕಟ್ಟಿ ದುರ್ಯೋಧನ ದುಶ್ಶಾಸನರನ್ನು ಇಳಿಸಿ ಕಟ್ಟುಗಳನ್ನು ಬಿಡಿಸದೆಯೆ ಕರೆತಂದು ಧರ್ಮರಾಯನಿಗೆ ತೋರಿಸಿದನು. ಅವನು ಸಾಹಸಾಭರಣನ ಸಾಹಸವನ್ನು ಅಳತೆಯಿಲ್ಲದಷ್ಟು ಹೊಗಳಿ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಬಾಯಲ್ಲಿ ತಾಂಬೂಲವನ್ನು ಕೊಟ್ಟನು. ದ್ರೌಪದಿಯು ಶತ್ರುಗಳು ಕಟ್ಟುಗಳನ್ನು ಕಟ್ಟಿಸಿಕೊಂಡು

ವ|| ಅಂತಲ್ಲಿ ಪದಿನಾಲ್ಸಾಸಿರ್ವರ್ ಗಂಧರ್ವರಂ ಕೊಂದೊಡೆ ಚಿತ್ರಾಂಗದಂ ಬೆರ್ಚಿಕೊಳ್ ನಿನ್ನ ನಚ್ಚಿನ ಸೆಯನೆಂದು ಬಿಸುಟ್ಟೊಡೆ ನೋಯಲೀಯದೆ ನೆಲದಾಕಾಶದೆಡೆಯೊಳಂಬುಗಳುಂ ತರತರದಿಂದೆಚ್ಚು ಸೋಪಾನಂ ಮಾಡಿ ದುರ್ಯೋಧನ ದುಶ್ಶಾಸನರನಿೞಪಿ ಕಟ್ಟುಗಳುಂ ಬಿಡದೊಡಗೊಂಡು ಬಂದು ಧರ್ಮಪುತ್ರಂಗೆ ತೋಱದೊಡೆ ಸಾಹಸಾಭರಣನ ಸಾಹಸಮನಳವಲ್ಲದೆ ಪೋಗೞ್ದು ತೊಡೆಯನೇಱಸಿಕೊಂಡು ಬಾಯೊಳ್ ತಂಬುಲಂಗೊಟ್ಟಂ ಪಾಂಚಾಲರಾಜತನೂಜೆ ಪಗೆವರ ಕಟ್ಟುವಟ್ಟಿರ್ದೇಳಿದಿಕ್ಕೆಗೆ ಸಂತಸಂಬಟ್ಟು ಸೈರಿಸಲಾಱದಿಂತೆಂದಳ್-

ಕಂ|| ಎಮ್ಮಂ ಪಿಡಿದೆೞೆವಂದಿನ
ನಿಮ್ಮದಟುಗಳೀಗಳೆತ್ತವೋದವೊ ಪಿಡಿವ|
ಟ್ಟಮ್ಮ ಬೞಲ್ದಿರೆ ಕಂಡಿರೆ
ನಿಮ್ಮಳವಂ ನಿಮಗವಿಗಳೀಯೆಡರಾಯ್ತೇ|| ೩೯

ವ|| ಎಂದು ಸಾಯೆ ಸರಸಂ ನುಡಿದು ಕಟ್ಟಿದ ಕಟ್ಟುಗಳಂ ತಾನೆ ಬಿಟ್ಟು ಕಳೆದು ಭಾನುಮತಿಗೆ ನಿನ್ನಾಣ್ಮನುಮಂ ನಿನ್ನ ಮಯ್ದುನನುಮಂ ನೀನೊಪ್ಪುಗೊಳ್ಳೆಂಬುದುಂ ದುರ್ಯೋಧನಂದಾಡೆಗಳೆದ ಕುಳಿಕನಂತೆಯುಂ ಕೋಡುಡಿದ ಮದಹಸ್ತಿಯಂತೆಯುಂ ನಖಮುಡಿದ ಸಿಂಹದಂತೆಯುಂ ಗಳಿತಗರ್ವನಾಗಿ ಪಾಂಡವರ ಮೊಗಮಂ ನೋಡಲ್ ನಾಣ್ಚಿ ಮದಗಜಪುರಕ್ಕೆ ಪೋಗಿ ಜೂದಿನೊಳ್ ಗೆಲ್ದ ನೆಲನಂ ನಯಜ್ಞನಾಗಿ ತನ್ನೊಳ್ ಪತ್ತಿಸಿ ದುಶ್ಶಾಸನನಂ ಯುವರಾಜನಂ ಮಾಡಿ ನಿರ್ವ್ಯಾಜಮರಸುಗೆಯ್ಯುತ್ತುಮಿರ್ದನಿತ್ತ ಯುಷ್ಠಿರನಟ್ಟಿದ ಕಿರಾತದೂತಂ ತಾಪಸ ವ್ಯಾಜನಾಗಿ ಪೋಗಿ ಸುಯೋಧನನ ವಾರ್ತೆಯೆಲ್ಲಮುಮನಱದು ಬಂದಜಾತಕಶತ್ರುಗಿಂತೆಂದು ಬಿನ್ನಪಂಗೆಯ್ದಂ-

ಚಂ|| ಕಿವಿಗಿನಿದುಂ ನೃಪಂದೆ ಹಿತಮಂ ನುಡಿಯೆಲ್ಲಿಯುಮಿಲ್ಲ ಕೇಳ ಬಿ
ನ್ನವಿಸುವೆನೆನ್ನ ಕಂಡುದನೆ ಜೂದಿನೊಳುಕ್ಕೆವದಿಂದೆ ಗೆಲ್ದ ನಿ|
ನ್ನವನಿತಳಂ ಕರಾತಳದವೋಲ್ ತನಗಂ ಬೆಸಕೆಯ್ಯೆ ಕೆಯ್ಗೆ ಮಾ
ಡುವ ನಯಮಾ ಬೃಹಸ್ಪತಿಯುಮಂ ಗೆಲೆವಂದುದು ಧಾರ್ತರಾಷ್ಟ್ರನಾ|| ೪೦

ಮ|| ಮೊದಲೊಳ್ ತಿಣ್ಣಮದೊಪ್ಪಿ ತಪ್ಪಿದುದನೀಯೆಂದಟ್ಟಿದಂ ದಂಡನ
ಟ್ಟದೆ ಸಾಮರ್ಥ್ಯದಿನಟ್ಟಿದೋಲೆಗೆ ಮಹಾಪ್ರತ್ಯಂತ ಭೂಪಾಳರ|
ಟ್ಟದ ಕಾಳಿಂಗ ಗಜೇಂದ್ರ ದಾನಜಲಧಾರಾಸಾರದಿಂ ನೋಡ ಕುಂ
ದಿದುದಿಲ್ಗೊಳ್ಗೆಸಱು ಸುಯೋಧನ ನೃಪದ್ವಾರೋಪಕಂಠಗಳೊಳ್|| ೪೧

ಕಂ|| ಕುಸಿದಂ ರಿಪುವಿಜಯದೆ ನಿ
ದ್ರಿಸಿದಂ ಕಂಡೆಂದಿನಂದಮಂ ತಪ್ಪಿದನಾ|
ಳ್ವೆಸಕಗಿಯೆ ನುಡಿದನೆಂಬೀ
ಪಿಸುಣನಣಂ ಕೇಳ್ದೆನಿಲ್ಲ ಬೀಡಿನೊಳವನಾ|| ೪೨

ಅವಮಾನ ಪಟ್ಟುದಕ್ಕೆ ಸಂತೋಷಪಟ್ಟು ಸಹಿಸಲಾರದೆ ಹೀಗೆಂದಳು- ೩೯. ನಮ್ಮನ್ನು ಹಿಡಿದೆಳೆದ ಆ ದಿನದ ನಿಮ್ಮ ಪರಾಕ್ರಮಗಳು ಈಗ ಎಲ್ಲಿಗೆ ಹೋದವು; ಅಪ್ಪ ಬಳಲಿದಿರಲ್ಲಾ; ನಿಮ್ಮ ಪರಾಕ್ರಮದ ಪ್ರಮಾಣವನ್ನು ತಿಳಿದುಕೊಂಡಿರಾ; ಛೀ, ನಿಮಗೂ ಈಗ ಈ ಪರಾಭವವುಂಟಾಯಿತೇ? ವ|| ಎಂದು ಸಾಯುವ ಹಾಗೆ ಹಾಸ್ಯಮಾಡಿ ಕಟ್ಟಿದ ಕಟ್ಟುಗಳನ್ನು ತಾನೇ ಬಿಚ್ಚಿ ಭಾನುಮತಿಗೆ ನಿನ್ನ ಗಂಡನನ್ನೂ ಮೈದುನನನ್ನೂ ಒಪ್ಪಿಸಿಕೊ ಎಂದಳು. ದುರ್ಯೋಧನನು ಹಲ್ಲುಕಿತ್ತ ಕ್ರೂರಸರ್ಪದಂತೆಯೂ ಕೊಂಬುಮುರಿದ ಮದ್ದಾನೆಯಂತೆಯೂ ಉಗುರು ಕತ್ತರಿಸಿದ ಸಿಂಹದಂತೆಯೂ ಗರ್ವಹೀನನಾಗಿ ಪಾಂಡವರ ಮುಖವನ್ನು ನೋಡಲು ನಾಚಿ ಹಸ್ತಿನಾಪುರಕ್ಕೆ ಹೋಗಿ ಜೂಜಿನಲ್ಲಿ ಗೆದ್ದ ರಾಜ್ಯವನ್ನು ನೀತಿಯುಕ್ತವಾಗಿ ಆಳುತ್ತಾ ದುಶ್ಶಾಸನನನ್ನೂ ಯುವರಾಜನನ್ನಾಗಿ ಮಾಡಿ ಸುಖದಿಂದ ರಾಜ್ಯಭಾರ ಮಾಡುತ್ತಿದ್ದನು. ಈ ಕಡೆ ಯುಷ್ಠಿರನು ಕಳುಹಿಸಿದ ಕಿರಾತದೂತನು ತಪಸ್ವಿ ವೇಷದಿಂದ ಹೋಗಿ ದುರ್ಯೋಧನನ ಸಮಾಚಾರವನ್ನೆಲ್ಲ ತಿಳಿದು ಬಂದು ಧರ್ಮರಾಯನಿಗೆ ವಿಜ್ಞಾಪಿಸಿದನು- ೪೦. ಒಂದೇ ಮಾತು ಕಿವಿಗಿಂಪಾಗಿಯೂ ಶ್ರೇಯಸ್ಕರವಾಗಿಯೂ ಇರಲು ಸಾಧ್ಯವಿಲ್ಲ. ನಾನು ಕಂಡುದನ್ನು ವಿಜ್ಞಾಪಿಸುತ್ತೇನೆ. ಜೂಜಿನಲ್ಲಿ ಮೋಸದಿಂದ ಗೆದ್ದ ನಿನ್ನ ರಾಜ್ಯವು ಅಂಗಯ್ಯಲ್ಲಿರುವ ಹಾಗೆ ತನಗೆ ಆಜ್ಞಾಧಾರಕವಾಗಿರುವ ಹಾಗೆ ಮಾಡಿಕೊಳ್ಳುವ ದುರ್ಯೋಧನನ ಆ ಹೊಸರಾಜನೀತಿ ಬೃಹಸ್ಪತಿಯನ್ನೂ ಮೀರಿಸಿದೆ. ೪೧. ಮೊದಲು ನಿಷ್ಕರ್ಷೆಯಿಂದ ಒಪ್ಪಿದುದನ್ನು ಕೊಡದೆ ತಪ್ಪಿದವರಿಗೆ ಸೈನ್ಯವನ್ನಟ್ಟದೆ ಕೊಡು ಎಂದು ಸಾಮದಿಂದ ಹೇಳಿ ಕಳುಹಿಸುವನು. ರಾಜ್ಯಾಕಾರದಿಂದ ಕಳುಹಿಸಿದ ಇವನ ಆಜ್ಞಾಪತ್ರಕ್ಕೆ ರಾಜ್ಯದ ಎಲ್ಲೆಡೆಗಳಲ್ಲಿದ್ದ ಸಾಮಂತರಾಜರು ಕಳುಹಿಸಿದ ಕಳಿಂಗ ದೇಶದ ಉತ್ತಮವಾದ ಆನೆಗಳ ಮದೋದಕದ ಧಾರಾಪ್ರವಾಹದಿಂದ ಉಂಟಾದ ಕೆಸರು ಆ ದುರ್ಯೋಧನ ರಾಜನ ಅರಮನೆಯ ಬಾಗಿಲುಗಳ ಸಮೀಪಪ್ರದೇಶದಲ್ಲಿ ಕಡಿಮೆಯೇ ಆಗಿಲ್ಲ. ೪೨. ಶತ್ರುವು ಆಡಿದ ಮಾತಿಗೆ ತಪ್ಪಿದ, ಗೆಲುವಿನಿಂದ ನಿದ್ರಿಸಿದುದನ್ನು ಕಂಡ, ಹಿಂದಿನಿಂದ