ಬನವೆಲ್ಲ ಕೊನರೊಡೆದು ತಳಿರಿಂದ ನಳನಳಿಸೆ
ಅರಳುತಿಹ ಬಿರಿಮುಗುಳ ನೋಡಿರುವೆಯೇನು?
ಬಾನೆಲ್ಲ ತಿಳಿಯಾಗಿ ಮುಗಿಲ ಸುಳಿವಿಲ್ಲದಿರೆ
ಮೂಡುತಿಹ ತಾರೆಯನು ಕಂಡಿರುವೆಯೇನು?
ಮೂಡುತಿರೆ ನೇಸರೆಳಬೆಳಕಿನಲಿ ಮಿಂಚುತಿಹ
ತಾವರೆಯ ಹಿಮಮಳಿಯ ದಿಟ್ಟಿಸಿಹೆಯೇನು?
ಇನಿತೆಲ್ಲವನು ನೀನು ಕಂಡಿರುವೆಯಾದೊಡೆಯು
ನೋಡಬೇಕೆನ್ನಿನಿಯಳೆಳನಗೆಯ ನೀನು!