(ಬ್ರೌನಿಂಗ್ ಕವಿಯ ಒಂದು ಕವನ ಭಾಗದ ಅನುಕರಣೆ)

ಸುಗ್ಗಿಯ ಬಣ್ಣದ ಸವಿಗನಸೆಲ್ಲಾ
ಇಹುದೊಂದೇ
ತುಂಬಿಯ ತುತ್ತಿನ ಚೀಲದಲಿ.
ಗಣಿವಸಿರಿನ ಹೊಳೆವೈಸಿರಿಯೆಲ್ಲಾ
ಇಹುದೊಂದೇ
ರನ್ನದ ಕಿರುನಗೆಯಾಳದಲಿ.
ಕಡಲೊಳಗಡಗಿಹ ಸಂಪತ್ತೆಲ್ಲಾ
ಹೊಳೆಯುವುದೊಂದೇ ಮುತ್ತಿನಲಿ;
ಇಲ್ಲಿಯ ಅಲ್ಲಿಯ ಸಿರಿಸೊಬಗೆಲ್ಲಾ –
– ನನ್ನಿಗೆ ನನ್ನಿ; –
ಹುದುಗಿದೆ ನನ್ನೀ
ಗೌರಿಯ ಚೆಂದುಟಿ ಮುತ್ತಿನಲಿ;
ಒಂದೇ ಮುತ್ತಿನಲಿ!