ತರಳೆ ನಾನು; ದೊರೆಯೆ, ನೀನು
ಬಾರ ತರಳನಂದದಿ;
ಚೆಲುವೆ ನಾನು; ಇನಿಯ, ನೀನು
ತೋರ ಚೆಲುವನಂದದಿ.
ತಿರುಪೆ ಬೇಡಿ ತಿಂಬೆ ನಾನು;
ಗುಡಿಸಲಲ್ಲಿ ಬಾಳ್ವೆ ನಾನು;
ಗೋಪಳಾನು; ಹರಿಯೆ, ನೀನು
ಬಾರ ಗೋಪನಂದದಿ!
ಬಗೆಯ ಚಿಂತೆ ಬಯಸಿದಂತೆ,
ತೋರ, ಬಾರ ಚಂದದಿ!