ರಾತ್ರಿಗೆ ಸಾವಿರ ಕಣ್ಣುಗಳು,
ಹಗಲಿಗೆ ಕಣ್ಣೊಂದೆ;
ಆದರು ಹಗಲಿನ ಕಣ್ಣದು ಮುಳುಗಲು
ಲೋಕಕೆ ಬೆಳಕಿಲ್ಲ.

ಮನಸಿಗೆ ಸಾವಿರ ಕಣ್ಣುಗಳು,
ಹೃದಯಕೆ ಕಣ್ಣೊಂದೆ;
ಆದರು ಎದೆಯೊಲುಮೆಯ ಕಣ್ಮುಚ್ಚಲು
ಜೀವಕೆ ಬೆಳಕಿಲ್ಲ.