ಕಡಲಿನಾಳವು ಹಿರಿದು
ಕಡಲಿಗಿಂತಲು ಮಿಗಿಲು
ಮನಸಿನಾಳ!

ಬಾನಿನಗಲವು ಹಿರಿದು.
ಬಾನಿಗಿಂತಲು ಮಿಗಿಲು
ಮನುಜನೆದೆಯು!

ತುಹಿನ ಗಿರಿಯದು ಹಿರಿದು.
ತುಹಿನ ಗಿರಿಮ್ಮಡಿಯು
ನರನ ಬಲವು!

ಮಳೆಯಬಿಲ್ಲದು ಚೆಲುವು.
ಮಳೆಯ ಬಿಲನು ಮೀರಿ
ಮನುಜನೊಲವು!