213
ಯಾಕೊ ಹುಡಗಿಯ ಜೀವ ಏಸ ಹೂ ಬೇಡೈತಿ
ಮಾಚಕನೂರ ಮರನೂರ ತ್ವಾಟದ
ದಾಸ್ಯಾಳದ ಹೂವ ದವನವ
214
ಯಾತಕ ಹುಟ್ಟೈತಿ ಘಾತಕ ಬಬಲೇಸೂರ
ರಾತೂರಿ ಗಸ್ತಿ ಬರಲಿಲ್ಲ ಗುಜ್ಜನ್ನ
ಘಾತ ಮಾಡ್ಯಾರೊ ಗಳಿಗ್ಯಾಗ
215
ಯಾವತ್ತು ನಾತಕ ಯಾಲಕ್ಕಿ ನಾತಾನ
ನಾಗರ ಹಾಂವೀನ ಕುಲದಾಂವ ಕೂಸಪ್ಪಯ್ಯ
ಮಾಯವಾಗ್ಯಾನೊ ಮಠದಾಗ
216
ಯಾವತ್ತು ಉಡುವೂಳು ಎಳ್ಳಹೂವಿನ ಸೀರಿ
ಏನಿಲ್ಲದ ಬಡವಿ ಎಲ್ಲವ್ವ ಉಡುವೂದ
ವರಸದಾಗೊಮ್ಮಿ ಜರತಾರಿ
217
ರಂಡ್ಯಾರ ಗೆಣೆತಾನ ದಂಡಿಗಿ ಹತ್ತದಮಾತ
ಕಂಡ ಹಳಸಿದರ ಉಣಬ್ಯಾಡ ಎಲೆ ಹುಡುಗ
ದಂಡ ಒಣಗೀತೊ ಹುಳ ಹತ್ತಿ
218
ರಂಡೀಯ ಗೆಣಿತಾನ ತಿಂಡಿತೀರೂತನಕ
ಮಿಂಡ ಮತ್ತೊಬ್ಬ ಸಿಗುತನಕ ಅಂಥಾ
ಮಂಡ ಚಪ್ಪಲಿ ನಾಯಿಗೊ
219
ರಂಡೀಯ ಮನಿಯಾಗ ಹೆಂಡದ ಮಜಾ ಏನೊ
ಕಂಡದ ಗಡಿಗಿ ಒಲಿಮ್ಯಾಲ ಇದ್ದರ
ಮಿಂಡರ ಕೂಡ್ಯಾರೊ ಹದಿನೆಂಟೊ
220
ರವದಿಯಂಥಾ ಹೆಣ್ಣ ನಿನಮ್ಯಗ ನನ ಕಣ್ಣ
ನಿಮ್ಮಪ್ಪ ನನಗ ಕೊಡಲಿಲ್ಲ ನಾ ಈಗ
ಸುಂಟರಗಾಳ್ಯಾಗಿ ಬರತೀನ
221
ವಡ್ಡರ ಮನಿಮುಂದ ವಟವಟಿ ಗಿಡಹುಟ್ಟಿ
ವಡ್ಡರ ಪೋರಿ ಗೆಣೆತನ ಮಾಡಿದರ
ಗೊಡ್ಡೆಮ್ಮಿ ತುಪ್ಪ ಉಣಿಸ್ಯಾಳೊ
222
ವರಗೇಡಿ ಗಂಡಂತ ಮಾರಿ ತಿರುವ ಬ್ಯಾಡ
ಪರ್ಯಾಣ ನಿನ್ನ ಪಾಲೀಗಿ ಬಂದರ
ಕಾಲಿಟ್ಟ ಅದನ ಒಡಿಬ್ಯಾಡ
223
ವಾಳೀದ ಹೆಣ್ಣಿನಗೂಡ ಬಾಳೇ ಮಾಡೂದ ಕಷ್ಟ
ಗಾಳೀಗಿ ಬಾಯಿ ತಗದಂಗ ಮನಿಯ
ಮಾಳೀಗಿ ಜಂತಿ ಜರದಂಗ
224
ಶಿವನಿಗಿ ಗುಡಿಕಟ್ಟಿ ಸ್ವಾಮಿಗಿ ಮಠಕಟ್ಟಿ
ಹಸದ ಬಸವರಿಗಿ ಉಣಕೊಟ್ಟ ನಮ್ಮವ್ವ
ಕುಸಮೋಜಿನ ಮಗನ ಹಡದಾಳೊ
225
ಷಂಡ ಸಾವಕಾರ ಹುಡಗ ಹೆಂಡ್ತೀನ ಬಿಟ್ಟಾನ
ರಂಡೀಯ ಬೇಡಿ ಅಳತಾನೊ ಆಕೀಗಿ
ಖಂಡಗ ಹೊನ್ನ ಕೊಡತಾನ
226
ಸಣ್ಣನ್ನ ಶ್ಯಾಂವೀಗಿ ಉಣ್ಣಾಕ ಬಸದಾಳ
ಬೆಣ್ಣಿಯ ಮುದ್ದಿ ಕಾಸ್ಯಾಳೊ ಗೆಣಿಯಾಗ
ಬೆಣ್ಣಿ ಮಾತ್ಹೇಳಿ ಬೆಸದಾಳೊ
227
ಸತ್ತರ ಸುದ್ದಿಯ ಕಳುವೊ ನೆತ್ತರ ಅರಬೀ ಕಳುವೊ
ಕತ್ತೀಯ ಕಳುವೊ ನಿನಗುರತ ನನಗೆಣಿಯಾ
ಮುತ್ತೊಂದ ಕಳುವೊ ಮೂಗುತಿಗೆ
228
ಸಂಗಾಪೂರ ಹುಡುಗೂರು ಮಂಗ್ಯಾನ ಮಾರೆವರು
ಗಂಗಾಳ ಚರಗಿ ಬಗಲಾಗ ಹಿಡಕೊಂಡ
ಸಂಗಯ್ಯನಾಣಿ ಕೊಡತಾರೊ
229
ಸಂತಿ ಸವದೀ ಹೆಣ್ಣ ಸುಲದ ಬಾಳೀಹಣ್ಣ
ಮಾನೇಪುರ ಹೆಣ್ಣ ಮೈಬಣ್ಣ ಬಂಗಾರ
ಜಮಖಂಡಿ ಹೆಣ್ಣ ಕಳಿಬಾಳ
230
ಸಂದೀಯ ಮನಿಯವಳ ಮುಂದ ಚಪ್ಪರದವಳ
ಬಂದಿದ್ದಳೇನ ಜಾತ್ರೀಗಿ ನನಗಾಗಿ
ತಂದಿದ್ದಳೇನ ಕರಿಗಡಬ
231
ಸರಗಿ ಸಾಲಕ ಹೋತು ಬಳಿ ಬಾಳೇಕ ಹೋತು
ಒಡ್ಡ್ಯಾಣ ಹೋತು ಒಡ್ಡ್ಯಾಗ ಆ ಹುಡುಗಿ
ದಡ್ಡ್ಯಾಗ ಕುಂತ-ಅಳತಾಳೊ
232
ಸರಗಿ ಮಾಡಿಸಿ ಕೊಡೊ ಸರದಾರ ನನಗೆಣಿಯಾ
ಸರಿ-ಗೆಳತ್ಯಾರೊಳಗ ಇರತಿನೊ ನನ ಗೆಣಿಯಾ
ಕರದಾಗ ನಾನು ಬರತೀನೊ
233
ಸವತೀ ಮುಳ್ಳ ತುಳದ ಸಾವತಿನ ನನ ಗೆಣೆಯ
ಹೇಳಿ ಕಳುವೆನ್ನ ತವರೀಗೆ ತಾಯವ್ವನ
ಮಾರೀ ನೋಡಿ ಜೀಂವ ಬಿಡತಿನೊ
234
ಸಾಕ ಸಾಕಂದರ ಯಾಕ ನೀರಿಗಿ ಹ್ವಾದಿ
ನಾಕ ತೊಂಡಲದ ಮಳಿ ಬಡದ ಮಾವಿನ
ಕಗ್ಗಾಯಿ ಉದರಿ ಕೊಡವೊಡದ
235
ಸಾಸವಿಬಣ್ಣದ ಸೀರಿ ರೇಸೀಮಿ ಕುಪ್ಪಸ
ಯಾಸಿ ಬೇತಾಲಿ ತಗದಾಳೊ ಆ ಹುಡಗಿ
ಕಾಸಿ ಕಟ್ಟಿದವನ ಹುಡಕ್ಯಾಳೊ
236
ಸಾಲವ ಮಾಡ್ಯಾನ ಸೂಳೀಯ ಇಟ್ಟಾನ
ಸಾಲಿಗರು ಬಂದು ಎಳಿವಾಗ ಆ ಸೂಳಿ
ಮ್ಯಾಳೀಗಿ ಏರಿ ನಗತಾಳೊ
237
ಸಾಹೇಬ ಇಳದಲ್ಲಿ ಸಾಧೀಸಿ ಮಳಿಯಾಗಿ
ಸಾಹೇಬ ತೋದ ಗುಡಿ ತೋದ ಒಳಗೀನ
ಗಲ್ಲೀಪ ತೋದ ಗರಿತೋದ
238
ಸಿಟ್ಟಮಾರಿಯ ಶಿವನ ದಿಟ್ಟಿಸಿ ನೋಡ್ಯಾನ ಕಾಮ
ಬಿಟ್ಟಾವ ಬೆಂವರ ಎದಿಮಾಗ ಪಾರ್ವತಿಯ
ದಟ್ಟಿ ಸೆರಗ್ಹಿಡದ ನಡದಾನೊ
239
ಸಿಟ್ಟಿನ ಶಾಂತ್ವೀರ ಸ್ವಾಮಿ ಬಿಟ್ಟಾರೊ ಹಿರಿಮಠ
ಮೆಟ್ಟ ಮಾಡ್ಯಾರೊ ಹರಳಯ್ಯನ ಗುಂಡಕ
ನಿಟ್ಟುಳ್ಳ ಭಕ್ತರು ಬರತಾರೊ
240
ಸೀತಾನ ಒಯ್ಯಗ ಶ್ರೀರಾಮ ಸಣ್ಣಾಂವ
ಆಗ ಹುಣಮಂತು ಹಸುಮಗ ಇದ್ದರ
ಸೀತಾನ ಸೆರಿಯ ಬಿಡಿಶ್ಯಾನೊ
241
ಸಿಂದೀಯ ಗೊಬ್ಬೆವ್ವ ಎಟ್ಟುದ್ದ ಬೆಳದೆವ್ವ
ಒಂಟಿಮ್ಯಾಲೇರಿ ಮೆರೆದೆವ್ವ ಮಾತಾಯಿ
ಒಳ್ಳೊಳ್ಳೆವರ ಮಾನ ಕಳೆದೆವ್ವ
242
ಸುಣ್ಣುಂಡ ಬಿಳಿಹಲ್ಲ ಕಾಚುಂಡ ಕರಿಹಲ್ಲ
ಎಣ್ಣಿ-ತುಪ್ಪುಂಡ ಮಗಿದುರಬ ಕಟಗೊಂಡ
ಹೊನ್ನ ಕೊಟ್ಟಂವಗ ಹ್ವಾದಾಳೊ
243
ಸೂಳೀಗಿ ಹೋಗವನ ಸುಲದ ಮಟ್ಟಿಯ ಕಟ್ಟಿ
ಸೂಲಕ ಹಾಕಿ ಎಳದರೂ ಆ ಮೂಳ
ಸೂಳೆಂಬು ಶಬುದ ಬಿಡಲಿಲ್ಲೊ
244
ಸೂಳಿ ಬ್ಯಾಟಿನಾಯಿ ಗಂಡ ಜೂಗನಾಯಿ
ಸೂಳೀಯ ಅವ್ವ ಹಳಿನಾಯಿ ನಿಮ್ಮಪ್ಪ
ಬಾಳೇವಂತರ ಬಡನಾಯಿ
245
ಸೂಳೀಗಿ ಹ್ವಾದಾವ ಏನಾದ ಎಂತಾದ
ಕಾಳ ನಾಯಾದ ಕಪಿಯಾದ ಆ ಮೂಳಾ
ಸೂಳೀ ಕಾಲೀಗಿ ಕೆರುವಾದೊ
246
ಸೊಕ್ಕೀನ ಶ್ರೀಕೃಷ್ಣ ನಿನಗ್ಯಾಕಿಟ್ಟ ಹೆಂಡಿರೊ
ನನಗೊಂದ ಕೊಡು ಅಂದ ನಾರದ ಶ್ರೀ ಕೃಷ್ಣ
ನಾನಿಲ್ಲದಾಗ ಒಯ್ಯಂದ
247
ಹಚ್ಚಾನ ಮೈಯವನ ಹವಳದ ತುಟಿಯನ
ಎಲ್ಲಿಗಿ ಹೋಗದ್ದೊಗಿಣಿರಾಮ ಮಲ್ಲಾಡದ
ಹಣ್ಣೀಗಿ ಹೋಗಿದ್ದ ಹಡದವ್ವ
248
ಹಚ್ಚಿಬಟ್ಟಿನ ಕೈಯ್ಯ ಒತ್ತಿ ಹಿಡಿಯಲಿ ಬ್ಯಾಡೊ
ನೆತ್ತಳಿರಿಳದಾವೊ ಬೆರಳೀಗಿ ನನ ಗೆಣೆಯ
ಅತ್ತೆವ್ವ ನೋಡ್ಯಾಳೊ ಕೈಬಿಡೊ
249
ಹಚ್ಚಿಬಟ್ಟಿನ ಮ್ಯಾಲ ಹರದಾಡು ಕುಂಕುಮ
ಇಚ್ಚುಳ್ಳ ಗೆಣಿಯ ಇದರೀಗಿ ಬಂದರ
ಮೆಚ್ಚಿದ್ದ ಗಂಡನ್ನ ಮರತಾಳೊ
250
ಹಟಗಾರ ಹುಡಗೀ ಅವ್ವ ಕಟ-ಕಟದ ಹೇಳ್ಯಾಳ
ಚಟಗಾರನ ಬೆನ್ನ ಬಿಡಲಾಕ ಆ ಹುಡಗಿ
ಸೆಟ-ಸೆಟದ ಹಂಗ ತಿರಗ್ಯಾಳೊ
251
ಹಟೇಲದಾಗಿನ ಹೆಣ್ಣ ಹಾದೀ ಗಿಡದಾನ ಹಣ್ಣ
ಹಾದ ಹ್ವಾದವರೆಲ್ಲ ಕಣ್ಹೆತ್ತಿ ಹಳಸ್ಯಾವೊ
ತಿಂದರ ತಿಂಗಳದ ಆರೈಕೊ
n� ;l=0�h�koe:12.0pt; mso-ascii-font-family:Calibri;mso-hansi-font-family:Calibri;mso-bidi-font-family: Calibri’>
189
ಮಕ್ಕಳ ಬೇಡವರು ಪಟ್ಟಣಕ ಹೋಗರೆವ್ವ
ಪಟ್ಟಣದ ತೆಳಗ ಅರಕೇರಿ ಅಮೋಗಸಿದ್ದ
ತೊಟ್ಟೀಲ ಹೊರಿಸಿ ಕಳುವ್ಯಾನ
l� *< n0�h�koautospace:none’>
ಕುಲು ಕುಲು ನಗುವೂಳು ಕುಲಕಣ್ಣಿಗಿ ಹೋಗೂಳು
ಕುಲಕಣ್ಣಿ ನಿನಗೇನ ಕೊಡತಾನ ಬಾಳಾದರ
ಬಿರಾಡದಾಗ ರೊಕ್ಕ ಬಿಡತಾನ
91
ಕುಸಬೀಯ ಹೂ ಚೆಂದ ಕೋಗಿಲದ ದನಿ ಚೆಂದ
ನಸುಗೆಂಪಿನಾಕಿ ನಗಿ ಚೆಂದ ಚೊಚ್ಚಿಲ
ಬಸರಾದರ ಹೆಣ್ಣ ಬಲುಚೆಂದ
92
ಕೂಡೀದ ಕುಡಿಹುಬ್ಬ ತೀಡೀದ ಬೇತಾಲಿ
ಕಾಡೀಗಿ – ಗಣ್ಣ ನಡಸಣ್ಣ ನಡದರ
ಮಿಡಿನಾಗರಾಡಿ ಹರದಂಗ
93
ಕೂಡೂ ಮನಸಿದ್ದರ ಗ್ವಾಡಿ ಜಿನದರ ಬಾರೊ
ದಡ್ಡೀ ಬಾಗೀಲ ತೆರಿತೀನೊ ಆವಾಗ
ಅಡ್ಡ ಬಂದವರನ ಇರಿತೀನೊ
94
ಕೂಸಿನ್ನ ಕೊಲಿಮಾಡಿ ಘಾಸಿ ಗಂಡಗ ಮಾಡಿ
ಹಾಸಿಗಿ ಮಾಡ್ಯಾಳೊ ಗೆಣಿಯಾಗ ಆ ಗೆಣಿಯ
ಪಾಸಿ ಮಾಡ್ಯಾನೋ ಬರಲಿಲ್ಲ
95
ಕೂಸಿನ್ನ ಕರಕೊಂಡ ಮಾಸೆತ್ತ ಏರ್ಯಾಳೊ
ತಾಸೊತ್ತಿನ ಹಾದಿ ಯಮನೂರ ತೇರಿಗಿ
ಕೂಸೆತ್ತಿ ಕೈಯ ಮುಗದಾಳೊ
96
ಕೂಲಿಕಾರ ಹುಡಗಗ ಹಾಲ ಸಕ್ಕರಿ ಹಾಕಿ
ಮ್ಯಾಲ ಕೊಟ್ಟೀನ ಎಲಿ ಅಡಕಿ ಹುಡಗಗ
ಕಾಲ್ಹಿಡಿದರ ಕರುಣಿ ಬರಲಿಲ್ಲೊ
97
ಕೆಂಪ-ಜ್ವಾಳದ ರೊಟ್ಟಿ ಗಿಂಜ ಬದನೀಕಾಯಿ
ದುಂದೀಲಿರುವೂದು ಹೊಳಸಾಲ ಹುಡಗ್ಯಾರು
ಸಂಜೀಕ ದೀಪ ಹೊಡದಾರೊ
Leave A Comment