ಸಂಕೀರ್ಣ ಪದಗಳು

ಹೋಳಿ ಹಾಡಿನ ಪ್ರಕಾರಗಳು

ದೇವಸ್ತುತಿ :

1)      ಭಕ್ತಿಯ ಮಾಡಬೇಕ ಮುಕ್ತಿಯ ಪಡಿಬೇಕ
ಶಿವಾಯನಮಃ ಶಬ್ದ ಬಿಡಬ್ಯಾಡೋ ಮಾನವ
ನಿನ್ನನ್ನು ಬಿಟ್ಟು ದೂರಿರಲೋ

 

2)      ಬಸವಣ್ಣ ನಿನ್ನಂತ ಭಕ್ತಿಮಾನವರಿಲ್ಲ
ನೀಲಮ್ಮನಂತ ಶರಣೆಲ್ಲೋ ಹೇಮರೆಡ್ಡಿ
ಮಲ್ಲಮ್ಮನಂತ ಸೊಸಿ ಇಲ್ಲೊ

3)      ದುಂದೂರ ಬಸವಣ್ಣ ಬಾಳಸಮಾಧಾನನೆಂದು
ಕುತ್ನಿಯ ಟೊಪ್ಪಿಗೆ ತಂದಿನೋ ಬಸವಣ್ಣ
ಟೊಪ್ಪಿಗೆಗೆ ಮುತ್ತ ಬಿಗೆಸೆನೋ

4)      ಆಟವೆಲ್ಲಿ ಮಠವೆಲ್ಲಿ ಮಠದ ಬಾಗಿಲವೆಲ್ಲಿ
ಕಟದ ರುದ್ರಾಕ್ಷಿಕದವೆಲ್ಲಿ  ಅಂದಿನ
ಸ್ವಾಮಿ ಮಠವೈತೋ ಬಾಳಿವನದಾಗ

5)      ಸೀತಮ್ಮನ ಒಯ್ಯುವಾಗ ಶ್ರೀರಾಮಸಣ್ಣ
ವನು ಆಗ ಹನಮಂತ ಹಸುಮಗನು
ಸೀತಮ್ಮನ ಸೆರೆವಾಸ ಬಿಡಿಸ್ಯಾನ

6)      ಉದ್ದನ ಹನಮಂತ ಬುದ್ದಿಲೇ ಸಮನಾರುಂಟೆ
ಎದ್ದು ಹಾರ್ಯಾನ ಗಗನಕ್ಕೆ ಸೀತಮ್ಮನ ಗೆಮ್ಮ
ತರಿದಾನ ಗಳಿಗ್ಯಾಗ

7)      ಹುಡುಕುತ ಹುಡುಕುತ
ಬಂದೆನವ್ವ ಹೋಳಿಕಾಮನಲ್ಲಿ
ಸೂರ್ಯ ಚಂದ್ರಮಗಿಡಿದಿತ್ತು ಗ್ರಹಣ
ಭೂಮಿ ಆಕಾಶ ಒಂದೇ ಕಾಣ್ತಿತ್ತು

8)      ಚಂದ್ರಮಗ ಹೇಳತಾನ ಉತ್ತರ
ಸೂರ್ಯ ಪ್ರಕಾಶ ಆಗೋದ್ರೊಳಗ
ಗ್ರಾಣ ಹಿಡಿದಿದ್ದು ಆಗಿ ಹೋಯ್ತು
ಹೋಳಿ ಹುಣ್ಣಿವ್ಯಾಗ ಗ್ರಾಣ
ಹಿಡಿದಿತ್ತು ಸೂರ್ಯ ಮುನಗೋದುಳಗ
ಹೋಗಿತ್ತು ಗ್ರಾಣ

ಹೋಳಿ ಹಾಡುಗಳನ್ನು ಹಾಡುವುದಕ್ಕಿಂತ ಪೂರ್ವದಲ್ಲಿ ಮೊದಲು ತಮ್ಮ ಆರಾಧ್ಯದೇವರುಗಳನ್ನು ಆ ದೇವರ ಗುಣಗಳ ಬಗ್ಗೆ ಹಾಡಿ ನಂತರ ವಿವಿಧ ಹಾಡುಗಳನ್ನು ಹಾಡುತ್ತ ಹೋಗುವರು. ಇಲ್ಲಿ  ಭಕ್ತಿಯ ಹಾಡುಗಳು ಅವರ ಭಕ್ತಿಯ ಪರಾಕಾಷ್ಟೆಯನ್ನು ಚಿತ್ರಿಸುತ್ತವೆ.

 


ನಿಜಗುಣಿ ಶಿವಯೋಗಿಗಳ ಹಾಡುಗಳು

ಜ್ಞಾನಹೋಳಿ ಪದ : (ರಾಗತಾಳ)

1)     ದುಂದುಮೆನೆಂದೆನ್ನಿ ಚಂದ್ರಶೇಖರಗೆ  ದುಂದುಮೆಬಿಂದು ನಿಗ್ರಹನಹಬ್ಬ ॥
ಮನರುತನು ಎಂಬಮಂದರಮೇರು ಕೈಲಾಸ  ಸೇರಿರುವಮಹಗುರ ವೆಪಾಲಿನೆನ್ನ ॥
ಧೋರಲಂಪಟದೊಳಗೆಮನಮಗ್ನವಾದಿಂದೆ  ಸಾರಮುಕ್ತಿಯಪದವ ಪಡೆವುದೆಂತಯ್ಯ   ॥

ಸಂಸಾರದೊಳಗೆ ಸದ್ಗತಿಯುಂಟು ಕೇಳ್ಮಗನೆ  ಬಸವಾದಿಪ್ರಮಥರಿಗೇನಿದ್ದಿಲ್ಲವೆ ॥
ಸಂಸಾರಪಿಡಿದು ಸನ್ಮಾರ್ಗದಲಿನಡೆವರಿಗೆ  ಕುಶಲ ಶಂಕರತಾನೆಮೋಕ್ಷವನು ಕೊಡುವ               ॥

ಬಿಡದೆ ತಮ್ಮ ಸಂಸಾರಹಡಗಸಾಗಿಸಿಕೊಳ್ಳುತ್ತ  ವಡೆಯ ಶ್ರೀ ಗುರುಸೇವೆ ಮಾಡುವರಿಗೆ ॥
ಕಡೆಗೆ ಸಂಸಾರದೊಳುನಡೆವ ಪುಣ್ಯಾತ್ಮರಿಗೆ  ಮಡದಿಮಕ್ಕಳಿಗೆ ನಿಜಮೋಕ್ಷ ಕೊಡನೇನು           ॥

ಸಿರಿಯ ಸಂಪತ್ತುಳ್ಳಮರವೆ ಸಂಸಾರೆಂಬ  ಹಿರಿಯ ಹೆಬ್ಬುಲಿಯನ್ನು ಕೊಲ್ಲುತಿಹುದು ॥
ಅರುಹು ಹಿಡಿವುದು ಕಷ್ಟ ಅಜ್ಞಾನ ಮುಸುಕುವುದು  ಕರುಣನಿಧಿಗುರುವೇ ನೀ ಕಡೆ                                                                           ಹಾಯ್ಸು ಕಂಡ್ಯಾ  ॥

ಹೊತ್ತುಗಳೆಲಿಬೇಡ ಬದುಕುತೀರಿದ ಮೇಲೆ  ವ್ಯರ್ಥಹರಟೆಯ ಮಾತುದುಸ್ಸಂಗದಿಂದ ॥
ಸತ್ಯಶರಣರಂಗ ಸದ್ಗೋಷ್ಟಿ ಪೂಜೆಯೊಳು  ಹೊತ್ತುಗಳೆದರೆ ಮುಂದೆಬುತ್ತಿ ಕೇಳ್ಮಗನೆ   ॥

ಗುರುವೆಹಿಂದಣಜನ್ಮದರುವಿಡಿದುನಡೆಯಲ್ಕೆ  ಇರದೆ ಮುಂದಧಿಕಾರ ಐಶ್ವರ್ಯ ಬರಲು ॥
ಶಿರವುಬಾಗದಯಿಂದ ಹುಲಿಯಂತೆಯಾಚರಿಸಿ  ಪರಶಿವನೇತಾಪಾದಮರೆವುದೀಮನವು               ॥

ಮನವನೊಕ್ಕಿಸಬೇಡೆಯಂದಿರಲು ಕೆಡಿಸುವುದು  ಧನಮಾರಿಕೋಣನ ಸೊಕ್ಕಸ್ಥಿರವೇನು ॥
ಅನ್ಯಾಯ ಸದ್ದಾಳದಿಂದನಡೆದರೆ ಮುಂದೆ  ಹೀನ ಜವತುಂಡುತುಂಡುಮಾಡಿಕಡಿಸುವನು             ॥

ಅದಕೆ ಹೆದರುವೆನಯ್ಯ ಗುರುರಾಯಸಲಹೆನ್ನ  ಸುದತಿ ಸುತರುಗಳ ಮಹಾಸೌಖ್ಯದೊಳಗೆ ॥
ಮದ ಹೆಚ್ಚಿ ಮೈಮೆರೆದು ಕೈಮೀರಿ ಹೋಗುವೆನು  ಸದಮಲಾತ್ಮಕ ಗುರುವೇಕೊಡಬೇಡ               ॥

ಹರನು ಬಾಣಾಸುರಗೆ ಸಹಸ್ರಾಭುಜಮಂಕೊಡಲು  ಪರಶಿವನ ಯುದ್ಧಕ್ಕೆ ಬಾರೆಂದು ಕರೆದ ॥
ಹರಿಬ್ರಹ್ಮಸುರರು ಫಲಪದವಹರಿನಿಂಪಡೆದು  ಮರಳಿಹರನಂಕೆಣಕಿ ಕೆಟ್ಟರೆಲಿಮನಸೆ       ॥

ಅರಸುಗಂಧರ ಸನಸಭೆಗೆ ತಾಂಡವಗಣನು  ಭರದಿಂದೆಮನಸು ನೋಡಲ್ಕೆಬರಲು ॥
ಗರುವಂದಿಂತುಳಿತು ದಾಂಡಿಗಮಾತನಾಡಲ್ಕೆ  ಶಿರಬಾಯ್ಲಿ ಪುಳಬಿದ್ದು ಕೆಟ್ಟನೆಲಿ ಗುರುವೆ             ॥

ನಾನು ಪೇಳುವ ಮಾತು ನೀನೆ ಪೇಳಿದ ಮೇಲೆ  ಜ್ಞಾನಪುರುಷಗೆ ನಾನು ಪೇಳ್ಪುದೇನು ॥
ಮಾನವಜನ್ಮದೊಳಗಿರಿತಪ್ಪ ಅರುವಿರಲು  ನೀನೆಮೋಕ್ಷವ ಪಡೆವ ಚಿಂತೇಕೊ ಮಗನೆ                ॥

ನುಡಿದ ಮಾತ್ರಡಿಯೆನಗೆ ಜ್ಞಾನಿಯನಬಹುದೆನೀ  ನಡೆದು ತೋರಿದರೆ ನಾ ಜ್ಞಾನಿಯಾದೆ ॥
ಒಡೆಯಯೇಮಾತೆನಗೆ ಬಾಣ ಹೊಡೆದಂತಾಯ್ತು  ಖಡ್ಗಹಿಡಿದಾಕ್ಷಣ-ಕೇ                                                             ಶೂರನೆನಬಹುದೆ               ॥

ಗುರುವು ಶಿಷ್ಯನ ಗುಣಕೆ ಮೆಚ್ಚಿ ಬಾರೆಂದವಗೆ  ಗಿರದಡಹಿಜ್ಞಾನೋಪದೇಶ ಮಾಡಿ ॥
ಪರಮಶಿವ ಮಹಾಂತಲೆಂಗಾಮಗಗೆ ಮೋಕ್ಷವನು  ಕರುಣದಿಂದ ಕೊಟ್ಟು ಮೋದದಲಿ
ಪೊರೆದ                                                                                ॥

2)    ಚಿನ್ಮಯರೂಪನೆನ್ನಿರಂಣ  ಚಿನ್ಮಯ ರೂಪನೆನ್ನಿಕೊತ್ರಿನಯ ಶಿಶುಮಹಂತೇನಗೆ  ॥

ರಾಗದ್ವೇಷರಹಿತಶಿವ  ಯೋಗಾನಂದಭರಿತ ನಿತ್ಯ  ಭೋಗಮೋಕ್ಷಪ್ರದಮಹ ಗುರುವೆ
ಪಾಲಿಸೆನ್ನನೂ                                                            ॥

ನಾಮರೂಪಕ್ರಿಯಾತೀತ  ಸ್ವಾಮಿನಿಮ್ಮಪಾದಸೇವೆ  ನೇಮವಾಗಿ ಮಾಡುವಂತೆನೆನವಪಾಲಿಸು ॥
ಕಾಮಿತಾರ್ಥ ಪ್ರದನಿಮಿತ್ಯ  ಸೋಮಶೇಖರನಾಜ್ಞಿಪಿಡಿದು  ಭೂಮಿಮೇಲವತಾರ                                                          ಮಾಡಿದಾರ್ಯ ಪಾಲಿಸೋ                                              ॥

ಕುಲವುಬಲವು ಸೋಲುಗೆಲುವು  ನಲಿಯಬೇಸಿನರಮೃಗಕ್ಕೆ  ನೆಲೆಯತಿಳಿಸಿದಂತ ಗೋಪ್ಯ
ಮೂರ್ತಿ ಪಾಲಿಸೋ ॥
ಇಳಿಯ ಸಹಜ ಭಕ್ತಜನಕೆ  ಸುಲಭವಾಗಿ ಬಂದು ಜ್ಞಾನ  ಕಳೆಯ ಜನಿಸಿದಂತ ಮೋಕ್ಷ
ಗುರುವೆ ಪಾಲಿಸೋ                                                  ॥

ಹಾವು ಚೇಳು ಬೇನೆಯಿಂದ  ಕೀವು ರಕ್ತ ಸುರಿವತನವು  ಸಾವುದೀಗೊಪಿಗೊ                                                                   ಗುರುವೆನೆಚ್ಚಿರೆಲ್ಲವು ॥
ದಿವಸಪ್ರಾಯಮುಪ್ಪಿನಿಂದ  ನವೆದು ಸವೆದು ಹೋಗುತಿಹುದು  ಯಾವಧೈರ್ಯವಿಲ್ಲೊ
ಗುರುವೆ ಪಾಲಿಸೆನ್ನನು                                              ॥

ಅರಸಿಗರಸಿನುದ್ದ ದುಃಖ  ಕೊರಸಾಳಿಗಾಳುದ್ದ ದುಃಖ  ಅರಸೆಯೊಳು ಅಳೆಯರ
ಪುಣ್ಯಪಾಪದಿ
ಅರುವಿನಿಂದ ಅರಸುಗುದಿಸಿ  ಮರವೆಯಿಂದ ಆಳಾಗುದಿಸಿ  ಅರಸು ಅಳುರ್ಮ
ಮಾಡಮಗೊಂಡವ ಬೀಳ್ವದು                                          ॥

ಸತಿಯು ಸೋತು ನೆಲಕೆ ಬೀಳೆ  ಸತಿಗುದಾಸೀನಾಗುತಿಹುದು  ಪತಿಯುಸೋತು ನೆಲಕೆ
ಬೀಳಿಪತಿಗುದಾಸೀನ ॥
ಹಿತವು ಇಲ್ಲವೊಂದಕ್ಕೊಂದು  ಕ್ಷಿತಿಯಪಪಕೆಳಸದಂತ  ಮತಿಯ ಪಾಲಿಸಯ್ಯ
ಮಹಂತಲಿಂಗ ಕರುಣದಿ ॥

ಜ್ಞಾನಹೋಳಿ ಪದಗಳೆಂದು ಕೈವಲ್ಯ ದರ್ಪಣಕಾರರು ಹಾಡುವುದನ್ನು ನಾವು ಕಾಣುತ್ತೇವೆ. ಅಲ್ಲದೆ ಇಲ್ಲಿ ನಿಜಗುಣಿ ಶಿವಯೋಗಿಗಳು ಆಧ್ಯಾತ್ಮದ ಹಾಡುಗಳನ್ನು ಹಾಡಿರುವುದನ್ನು ನಾವು ಕಾಣುತ್ತೇವೆ. ಇವು ಇಲ್ಲಿ ಕಾಮವನ್ನು ಅಳಿಸಿ ನೈಜ ಜೀವನವನ್ನು ಚಿತ್ರಿಸುವ ಅರ್ಥವನ್ನು ನೀಡಿವೆ.