ಗೀಗೀ ಗಾಯನ ಸ್ಪರ್ಧೆಗಾಗಮಿಸಿದ ಇಂದಿನ ಅಧ್ಯಕ್ಷರಿಗೆ |
ಸುಸ್ವಾಗತ ಸಂಭ್ರಮವೀಗೆ  ||ಪ||

ಈಗ ಬಂದ ಸೌಭಾಗ್ಯ ಸಾಹಿತಿ ಮಾನ್ಯ ತೀರ್ಪುಗಾರರಿಗೆ |
ಸುಸ್ವಾಗತ ತಮ್ಮೆಲ್ಲರಿಗೆ  ||ಅ.ಪ||

ಕ್ರಾಂತಿವೀರ ಧೀರ ಸುಭಾಸಚಂದ್ರರ ಕಥಿ |
ಧಾರ್ಮಿಕ ಕ್ರಾಂತಿ ಬಸವಣ್ಣಗೈದಿಹ ಕೃತಿ |
ಭಾರತಪಿತ ಗಾಂಧಿ ಮಹಾತ್ಮರ ನೀತಿ | ರಾಷ್ಟ್ರೀಯ |
ರಾಷ್ಟ್ರೀಯ ಕ್ರಾಂತಿ ನಾಲ್ಕರಲಿ ಎರಡನು ಸ್ವಂತ ಬರೆದ ಕವಿಗಳಿಗೆ |
ಆದರದ ಸ್ವಾಗತವು ತಮಗೆ  ||೧||

ಭಾಗವಹಿಸಿ ಆಗಮಿಸಿದ ಕವಿಯಿತ್ರಿ ಅಕ್ಕ-ತಂಗಿ ತಾಯರಿಗೆ |
ಅಕ್ಕನ ಬಳಗದವರಿಗೆ ||
ಪರರಾಳಿಕೆಯಲ್ಲಿ ಮರೆಯಾದ ಪೂರ್ವಸಂಸ್ಕೃತಿ |
ಹೊರತೆಗೆದು ತೋರಿಸುವ ಕರ್ನಾಟಕ ಸಾಹಿತಿ |
ಸರಳ ಶೈಲಿಯಲಿ ಸರ್ವರಿಗೆ ತಿಳಿಸುವ ಕೃತಿ | ಗೀಗೀಲಾವಣಿ |
ಗೀಗೀಲಾವಣಿ ಪುನರುತ್ಥಾನ ಸಮಿತಿಯ ಮಾನ್ಯ ಸದಸ್ಯರ ಕರೆಗೆ |
ಓಗೊಟ್ಟು ಬಂದ ಸರ್ವರಿಗೆ ||೨||

ಸಾಲೋಟಗಿ ಗೀಗೀ ಮೇಳದ ನಾಲ್ವರು ಈಗ ಸಮಿತಿ ಪರವಾಗಿ |
ಸ್ವಾಗತಿಪರು ಸರ್ವರಿಗೆ ||

ರಚನೆ : ಶರಣಪ್ಪವಾಲಿ
ಕೃತಿ :
ಶರಣಸ್ಮೃತಿ