ಹಚ್ಚಿದೇರಿ ಹಾಡೋದಕ್ಕ ಕೂಡಿದೇರಿ ಕೇಳೋದಕ್ಕ
ಹುರಪ ಆಗವಲ್ತ ಮನಕ ಗದ್ಲಾ ಎಬ್ಬಿಸ್ಯಾರ ನಡಕ ||
ಹೆಣ್ಣಗಂಡಿನ ಪದಾ ಇಲ್ಲದ್ದಕ್ಕ ||

ಸಿನಿಮಾ ನಾಟಕಕ್ಕ ಹೋಗತಾರ ನೋಡಲಾಕ
ತಿಕೀಟ ತಗಸೋದಕ್ಕ ಹೋದೀತ ಕೈಯ್ಯಾನ ರೊಕ್ಕ ||
ಸುರು ಆಗೋತನಾ ಕುಂಡರತಾರ ಸುಮ್ಮಕ ||

ಕಾಲಮಡಿ ಆಗಿ ಇವರ ನಡಬಟ್ಲೆ ಎದ್ದಗಿದ್ದರ
ಪೋಲೀಸರ ಬರತಾರ ಕೊರಡಾದ್ಲೆ ಜಡಿತಾರ
ಅರೆ ಇಸಕಾ ಮಾಕ ||
ಮೆತ್ತಗಾಗಿ ಅಲ್ಲ್ಯಾರಿಗೆ ಹೇಳಬೇಕ ||

ಪುಕ್ಕಟ್ಟ ಹಾಡಿದರ ಭೇಷ್ ಭೇಷ್ ಅಂತಾರ
ಮನಸಿಗಿ ಬ್ಯಾಡ ಅದರ ವನ್ಸಮೋರ ಅಂತಾರ
ತೂಗಡಿಸತಾರ ಯಾಕ ||
ನಿದ್ದಿಬಂತ ಮನಸ ಇಲ್ಲದ್ದಕ್ಕ ||

ತಿಗಡೊಳ್ಳಿ ಊರ ಚೆಂದ ದ್ಯಾಮವ್ವನ ಗುಡಿಮುಂದ
ತೆಂಗಿನ ಗಿಡಗಳು ಚೆಂದ ಮಾಡಕೇಳ್ರಿ ಅಕ್ಕರಿತಿಂದ
ಬಲಭೀಮ ಜ್ಞಾನಕೊಟ್ಟ ಮನಕ ||
ಮರಿಕಲ್ಲ ಸಖಿ ಮಾಡಿದ ಠೀಕ ||

ರಚನೆ : ಮರಿಕಲ್ಲಕವಿ
ಕೃತಿ :
ಮರಿಕಲ್ಲ ಕವಿಯ ಗೀಗೀ ಪದಗಳು