ಸಾದೂರ ಸಂಗ ಸಂವಿ ಸದ್ಗುರುವಿನ ಧ್ಯಾನ ಸಂವಿ
ಭಕ್ತಿ ಇದ್ರ ಭಜನಾ ಸಂವಿ ಸಂವಿಗಾರ ಬಲ್ಲಾ ತತ್ವದಕೀಲಾ ||
ಸದ್ಗತಿಯಿಂದ ಮುಂದ ಸಂವಿ ಯಾವದಿಲ್ಲಾ ||

ವಿಶ್ವಾಸ ಇದ್ರ ಕೇಳತಾನ ಸಂವಿ ಬೆಲ್ಲದ ಅಂತಾ ಮಾತ ಸಂವಿ
ಬಲ್ಲವಗ ಬೇವ ಸಂವಿ ಹಲ್ಲ ಇದ್ರ ಸಂವಿ ತಿಳಿಯೋದು ಎಲ್ಲಾ ||
ಎಲ್ಲಾ ಸಂವಿ ತಿಳ್ಯೋದು ನಾಲಿಗಿ ಮ್ಯಾಲಾ ||

ಬಾಲಕರಿಗೆ ಆಟ ಸಂವಿ ಹರೇದವಗ ನೋಟ ಸಂವಿ
ವೈಯ್ಯಾರಿಗೆ ವಣಪ ಸಂವಿ ಉಪ್ಪಿನಕಾಯಿ ಸಂವಿ ಊಟದಮ್ಯಾಲಾ ||
ಹೋಳಗಿ ಸಂವಿ ತುಪ್ಪ ಹಾಲಾ ||

ತಿಗಡೊಳ್ಳಿ ನೀರ ಸಂವಿ ಬಲಭೀಮಾನ ದರ್ಶನ ಸಂವಿ
ಮರಿಕಲ್ಲನ ಪದಾ ಸಂವಿ ಎಲ್ಲಾ ಸಂವಿ ಯಾರಿಗಿ ತಿಳದಿಲ್ಲಾ ||
ಸದ್ಗತಿ ಮುಂದ ಸಂವಿ ಮತ್ತ್ಯಾವದಿಲ್ಲಾ ||

ರಚನೆ : ಮರಿಕಲ್ಲಕವಿ
ಕೃತಿ :
ಮರಿಕಲ್ಲ ಕವಿಯ ಗೀಗೀ ಪದಗಳು