ಮುನ್ನುಡಿ

ಭಾಷೆಯ ವಿವಿಧ ಮಜಲುಗಳಲ್ಲಿ ಸಂಕೇತ ವ್ಯವಸ್ಥೆಗಳು ವಿಶಿಷ್ಟವಾದ ಸ್ಥಾನವನ್ನು ಪಡೆದಿದೆ. ಭಾಷೆ ಮನುಷ್ಯನ ಮನುಶ್ಯಕ್ತಿಯ ಒಂದು ಅಂಶ. ಭಾಷೆಯನ್ನು ಮನುಷ್ಯ ತನ್ನ ಮನೋಭಾವವನ್ನು ಅಭಿವ್ಯಕ್ತಿಪಡಿಸಲು ಮಾಧ್ಯಮವಾಗಿ ಬಳಸುತ್ತಾನೆ.

ಭಾಷೆಯನ್ನು ಸುಲಭ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವ ದಿಸೆಯಲ್ಲಿ ಭಾಷಾಶಾಸ್ತ್ರದ ವ್ಯಾಕರಣ, ಅರ್ಥಶಾಸ್ತ್ರ … ಮೊದಲಾದ ಕೆಲವು ವಿಷಯಗಳಲ್ಲಿ ತನ್ನ ಕೊಡುಗೆಯನ್ನು ನೀಡಿದೆ. ಈ ಶತಮಾನದಲ್ಲಿ ಎಲ್ಲ ವಿಷಯಗಳಲ್ಲೂ ಪ್ರಚಲಿತದಲ್ಲಿರುವ ಗಣಕಯಂತ್ರದಲ್ಲೂ ವ್ಯಾಕರಣವನ್ನು ಬಳಸಿ ಸುಲಭ ರೀತಿಯಲ್ಲಿ ವ್ಯಾಖ್ಯಾನಿಸಬಹುದಾದಂತಹ ಸಂಶೋಧನೆ ಭಾಷಾ ವಿಜ್ಞಾನದಲ್ಲಿ ನಡೆದಿದೆ. ಗಣಕ ಅಥವಾ ಕಂಪ್ಯೂಟರ್ ಭಾಷಾಶಾಸ್ತ್ರ ಎಂಬ ವಿಭಾಗದಲ್ಲಿ ಇದರ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ದೊರಕುತ್ತದೆ.

ಸಂಕೇತ ಭಾಷೆಯ ಅರ್ಥದ ಪ್ರಕಾರ ಬೇರೆ ಬೇರೆ ವಿಷಯಕ್ಕೆ ಸಂಬಂಧ ಪಟ್ಟಂತೆ ಅದಕ್ಕೆ ಸಮಂಜಸವಾದ ಭಾಷಾ ಬಳಕೆಯನ್ನು ನಿರೂಪಿಸಬಹುದು. ಆ ಭಾಷೆಯ ಸ್ವಾಭಾವಿಕ ಅಥವಾ ನೈಜ ಭಾಷೆಯ ತಳಹದಿಯ ಮೇಲೆ ನಿರ್ಮಿತವಾಗಿರಬಹುದು ಇಲ್ಲವೇ ತನ್ನದೇ ಆದ ವ್ಯಾಕರಣ ಹಾಗೂ ಪದ ಸಮೂಹವನ್ನು ರೂಢಿಸಿಕೊಂಡಿರಬಹುದು. ಈ ತೆರನಾದ ಸಂಕೇತ ಭಾಷೆ ವಿಷಯದಿಂದ ವಿಷಯಕ್ಕೆ ಬೇರೆಯಾಗುತ್ತ ಹೋಗುತ್ತದೆ.

ಈ ತೆರನಾದ ತಾಂತ್ರಿಕ ಭಾಷೆಯ ಪರಿಧಿಯಲ್ಲಿ ಬರುವ ಕೆಲವು ಭಾಷಾ ವಿಭಾಗಗಳೆಂದರೆ:

1. ಅಕಾರಾದೀಕರಣ ಸೂಚಿ ಅಥವಾ ವರ್ಗೀಕರಣ ಪರಿಭಾಷೆ

2. ಸಂಗೀತದ ಭಾಷೆ

3. ಗಣಿತ ಭಾಷೆ

4. ವಿಜ್ಞಾನ ಭಾಷೆ ಮುಂತಾದವು

1. ಅಕಾರಾದೀಕರಣ ಸೂಚಿ ಅಥವಾ ವರ್ಗೀಕರಣ ಪರಿಭಾಷೆ

ಗ್ರಂಥಾಲಯಗಳಲ್ಲಿರುವ ಎಲ್ಲ ಪುಸ್ತಕದ ಎಡಭಾಗದ ಕೊನೆಯಲ್ಲಿ ಒಂದು ಚಿಕ್ಕ (3 x 3.5 Cms) ಚೀಟಿ ಅಂಟಿಸಿ ಅದರ ಮೇಲೆ ಸಂಕೇತ ಭಾಷೆಯಲ್ಲಿ ಬರೆದಿರುವುದನ್ನು ನೋಡಬಹುದು. ಮೇಲಿನ ಸಾಲನ್ನು ವರ್ಗ ಸಂಖ್ಯೆ ಕ್ಲಾಸ್ ನಂಬರ್ ಎಂದೂ ಕೆಳಗಿನ ಸಾಲನ್ನು ಗ್ರಂಥದ ಬುಕ್ ನಂಬರ್ ಎಂದೂ ಎರಡನ್ನೂ ಸೇರಿಸಿ ಸೂಚಕ ಕ್ರಮಾಂಕ (ಕಾಲ್ ನಂಬರ್) ಎಂದು ಕರೆಯಲಾಗುತ್ತದೆ. ಇದರಲ್ಲಿ ವರ್ಗ ಸಂಖ್ಯೆ ನಮೂದಿಸುವ ಭಾಷೆಯೇ ತಾಂತ್ರಿಕವಾದ ಸೂಚೀಕರಣ ಭಾಷೆ.

ಗ್ರಂಥಾಲಯದಲ್ಲಿ ಒಂದು ಗ್ರಂಥದ ಇರುವನ್ನು ತೋರಿಸುವುದಲ್ಲದೆ, ಯಾವ ಸ್ಥಳದಲ್ಲಿರುವುದೆಂದೂ ಕೂಡ ಸೂಚೀಕರಣ ಭಾಷೆ ತಿಳಿಸುವುದು. ಒಂದೊಂದು ವಿಷಯಕ್ಕೆ ಸಂಬಂಧಪಟ್ಟಂತೆ ಪುಸ್ತಕಗಳನ್ನು ವರ್ಗೀಕರಣದ ಭಾಷೆಯ ಸಹಾಯದಿಂದ ವರ್ಗೀಕರಿಸಿ ಓದುಗರಿಗೆ ಸುಲಭವಾಗಿ ಹಾಗೂ ಶೀಘ್ರವಾಗಿ ಸಿಗುವ ಹಾಗೆ ಗ್ರಂಥಾಲಯದಲ್ಲಿ ಜೋಡಿಸಬಹುದು.

ಎಲ್ಲ ಭಾಷೆಗಳಿಗಿರುವಂತೆ ಈ ಭಾಷೆಗೂ ಪದ ಸಮೂಹ ಹಾಗೂ ವ್ಯಾಕರಣವಿದೆ. ಪದಸಮೂಹ ನಿಯಂತ್ರಿತವಾಗಿರುತ್ತದೆ. ಏಕೆಂದರೆ. ನೈಜಭಾಷೆ ಯಾವುದೇ ಇರಲಿ, ಒಂದೇ ಅರ್ಥವನ್ನು ಕೊಡುವ ಹಲವಾರು ಪದಗಳು ಚಾಲ್ತಿಯಲ್ಲಿರುತ್ತವೆ. ಗ್ರಂಥದ ಸೊಗಡಿಗೆ ಅದರ ಕರ್ತರು ಯಾವ ಪದ ವನ್ನಾದರೂ ಬಳಸಬಹುದು. ಸೂಚೀಕರಣ ಭಾಷೆಯಲ್ಲಿ ಆ ರೀತಿಯ ಎಲ್ಲ ಪದಗಳನ್ನು ನಿಯಂತ್ರಿಸಿ ಒಂದು ಚಿಂತನಾರೂಪವನ್ನು ಒಂದೇ ಪದ ಪ್ರತಿನಿಧಿಸುವಂತೆ ಪದ ಸಮೂಹವನ್ನು ರಚಿಸಿರುತ್ತಾರೆ. ಆ ಪದ ಸಮೂಹಕ್ಕೆ ಸಾಂಕೇತಿಕವಾಗಿ ಪ್ರತಿನಿಧಿಸುವಂತಹ ಭಾಷೆಯನ್ನು ಬಳಸಬಹುದು. ಅಥವಾ ಬರೀ ಆ ಪದ ಸಮೂಹದ ಪಟ್ಟಿಯೇ ಆಗಬಹುದು. ಸೂಚೀಕರಣದ ಭಾಷೆ ನಿಯಂತ್ರಿತವಾದ್ದರಿಂದ, ಗ್ರಂಥವು ಯಾವ ಭಾಷೆಯದ್ದಾಗಿರಲಿ ಅದು ಸಂಬಂಧ ಪಟ್ಟ ಸೂಚೀಕರಣ ಭಾಷೆಯು ಒಂದೇ ಆಗಿರುತ್ತದೆ. ಆದರೆ ವಿವಿಧ ವರ್ಗೀಕರಣ ಪದ್ಧತಿ ತನ್ನದೇ ಆದ ಪದಸಮೂಹ ಮತ್ತು ವ್ಯಾಕರಣವನ್ನು ಹೊಂದಿರುತ್ತದೆ. ಪದಸಮೂಹ ಸಾಂಕೇತಿಕವಾಗಬಹುದು. ಇಲ್ಲವೇ ಪದಾತ್ಮಕ ವಾಗಬಹುದು. ಸಾಮಾನ್ಯವಾಗಿ ವರ್ಗೀಕರಣ ಸೂಚಿ ಸಂಕೇತ ಭಾಷೆಯನ್ನು ವಿಷಯಸೂಚಿ ಪದಾತ್ಮಕ ಸಮೂಹವನ್ನು ಬಳಸುತ್ತದೆ. ಉದಾಹರಣೆಗೆ ಭಾರತದ ಚರಿತ್ರೆ

V44 – Colon Classification

954 – Dewey Decimal Classification

ಭಾರತ ಚರಿತ್ರೆ ವಿಷಯಸೂಚಿ (Subject Heading list)

ವರ್ಗೀಕರಣ ಪರಿಭಾಷೆ : ಗ್ರಂಥಗಳನ್ನು ವರ್ಗೀಕರಣ ಮಾಡಲು ಹಲವಾರು ವರ್ಗೀಕರಣ ಪದ್ಧತಿಗಳು ಪ್ರಚಲಿತದಲ್ಲಿವೆ. ಕೆಲವು ಗ್ರಂಥಾಲಯ ಗಳು ತಮಗೆ ಸರಿಹೊಂದುವ ವರ್ಗೀಕರಣ ಪದ್ಧತಿಯನ್ನು ತಾವೇ ತಯಾರಿಸಿ ಕೊಂಡಿವೆ. ಉದಾಹರಣೆಗೆ ಉತ್ತರ ಅಮೇರಿಕಾದ ಲೈಬ್ರರಿ ಆಫ್ ಕಾಂಗ್ರೆಸ್.

ಪ್ರಪಂಚದಾದ್ಯಂತ ಹೆಚ್ಚಿನ ಬಳಕೆಯಲ್ಲಿರುವುದು 19ನೆ ಶತಮಾನದ ಕೊನೆಯಲ್ಲಿ ತಯಾರಾದ Dewey Decimal Classification System (DDC) ಇದರಿಂದ ಪ್ರೇರಣೆಗೊಂಡು ತಯಾರಾಗಿದ್ದು Universal Decimal Classification (UDC) ಇದರಲ್ಲಿ ಬಳಕೆಯಾಗುವ ವರ್ಗೀಕರಣ ಭಾಷೆ ಮತ್ತು ಉಪಯೋಗಿಸುವ ಪದ್ಧತಿಯಿಂದಾಗಿ ಇದನ್ನು ಪರಿಗಣನಾತ್ಮಕ ವರ್ಗೀಕರಣ ಪದ್ಧತಿ ಎಂದು ಕರೆಯುತ್ತಾರೆ.

ಏಕೆಂದರೆ ಪ್ರತಿಯೊಂದೂ ವಿಷಯಗಳಲ್ಲೂ ಅದರಲ್ಲಿ ಬರುವಂತಹ ಉಪವರ್ಗಾಂಶಗಳನ್ನು ಅದಕ್ಕೆ ಸರಿಹೊಂದುವ ಸಂಕೇತದೊಂದಿಗೆ ನಮೂದಿ ಸಿರುತ್ತಾರೆ. ಜೊತೆಗೆ ಸಂಬಂಧಿತ ಸೂಚೀಕರಣವಿರುತ್ತದೆ.

DDCಯಲ್ಲಿ ಮುಖ್ಯವಾಗಿ ಅಂಕಿಗಳನ್ನೇ ಸಂಕೇತ ಭಾಷೆಯಲ್ಲಿ ಬಳಸಲಾಗಿದ್ದರೆ, UNCಯಲ್ಲಿ ಅಂಕಿ ಮತ್ತು ಆಂಗ್ಲ ಅಕ್ಷರಗಳನ್ನು ಮತ್ತು ಕೆಲವು ಚಿಹ್ನೆಗಳಾದ ವಿರಾಮ, ಅಲ್ಪವಿರಾಮ ಮುಂತಾದವನ್ನು ಬಳಸಲಾಗಿದೆ.

ವರ್ಗೀಕರಣ ಪದ್ಧತಿಗೆ ಭಾರತದ ಏಕೈಕ ಕೊಡುಗೆ ಎಸ್.ಆರ್. ರಂಗನಾಥನ್ ಅವರ ಕೋಲನ್ Classification (CC) ಅಥವ ದ್ವಿಬಿಂದು ವರ್ಗೀಕರಣ ಪದ್ಧತಿ 1. DCಯ 20ನೇ ಆವೃತ್ತಿ 4 ಸಂಪುಟಗಳಿದ್ದರೆ, ಆ ಭಾರತದ ಪರಿಸರಕ್ಕೆ ಹೊಂದುವಂತೆ ರಚಿತವಾದ CC ಒಂದೇ ಸಂಪುಟದಲ್ಲಿದೆ. CCಯ ಮೂಲತಂತ್ರ ವಿಶ್ಲೇಷ ಸಂಯೋಗಾತ್ಮಕ ವರ್ಗೀಕರಣ. ತಾಂತ್ರಿಕ ಭಾಷೆಯನ್ನು ವರ್ಗೀಕರಣ ತಾಂತ್ರಿಕ ಭಾಷೆಗೆ  ಉದಾಹರಣೆಯಾಗಿ ಇಲ್ಲಿ ನಿರೂಪಿಸಲಾಗಿದೆ. ಒಂದು ಪರಿಕಲ್ಪನೆಯನ್ನು ಒಂದೇ ಬಾರಿ CC ಯಲ್ಲಿ ಅಳವಡಿಸಿದ್ದಾರೆ. ಇವುಗಳ ಜೋಡಣೆಗೆ ತನ್ನದೇ ಆದಂತಹ ವ್ಯಾಕರಣ ಪದ್ಧತಿಯನ್ನು ರೂಪಿಸಿದ್ದಾರೆ. ಸ್ವಾಭಾವಿಕ ಭಾಷೆಯಲ್ಲಿರುವಂತೆ ನಾಮಪದ, ಕ್ರಿಯಾಪದ ಮುಂತಾದವು CCಯ ವರ್ಗೀಕರಣ ಪರಿಭಾಷೆಯಲ್ಲಿ ಪಂಚಮೂಲಭೂತ ದ್ರವ್ಯಗಳಾದ ವ್ಯಕ್ತಿತ್ವ, ವಸ್ತು ವಿಷಯ, ಚೈತನ್ಯ, ಪ್ರದೇಶ ಮತ್ತು ಕಾಲ ಎಂಬ ಉಪವರ್ಗಾಂಶಗಳು. ರಂಗನಾಥನ್‌ರ ಪ್ರಕಾರ ಒಂದು ಗ್ರಂಥದ ವರ್ಗೀಕರಣಕ್ಕೆ ಒಳಗಾಗುವ ಅಂಶಗಳು ಈ ಮೇಲೆ ಹೇಳಿದ ಐದು ಉಪವರ್ಗಗಳಲ್ಲೇ ವರ್ಗೀಕೃತವಾಗುತ್ತದೆ. CCಯ ಪ್ರಕಾರ ವ್ಯಾಕರಣವು PMEST ಎಂದಾಗುತ್ತದೆ. ಒಂದೊಂದು ಅಂಶಕ್ಕೂ ತನ್ನದೇ ಆದ ಸಂಬಂಧಿತ ಸಂಕೇತ ಇದೆ. ಅವೆಂದರೆ

P (ersonality)   ,

M (atter)          ;

E (neru)                       :

S (pace)                       .

T (ime)             ,

ಎಲ್ಲ ವರ್ಗೀಕರಣ ಪದ್ಧತಿಗಳ ಒಂದು ಮುಖ. ಅಂಶವೆಂದರೆ ಪ್ರಪಂಚದ ಎಲ್ಲ ಸಮಸ್ತ ವಿಷಯಗಳನ್ನು ಇವು ಪಟ್ಟಿ ಮಾಡಿರುತ್ತವೆ. ವಿಷಯಗಳ ವಿಂಗಡಣೆ ಪದ್ಧತಿಯಿಂದ ಪದ್ಧತಿಗೆ ಬೇರೆಯಾಗಬಹುದು. CCಯಲ್ಲಿ ಸಮಸ್ತ ವಿಷಯಗಳನ್ನು ಮೂರು ಮುಖ್ಯ ಗುಂಪುಗಳಾಗಿ ವಿಂಗಡಿಸಿದ್ದಾರೆ. ಅವೆಂದರೆ ವಿಜ್ಞಾನ, ಮಾನವಶಾಸ್ತ್ರ ಮತ್ತು ಸಮಾಜವಿಜ್ಞಾನ.

ಒಂದೊಂದು ಪ್ರಾಯೋಗಿಕ ವರ್ಗ ವಿಷಯಗಳೂ ಅದಕ್ಕೆ ಸಂಬಂಧಪಟ್ಟ ಮೂಲವರ್ಗದ ನಂತರ ಬರುತ್ತದೆ.

ಉದಾಹರಣೆಗೆ ಭೌತಶಾಸ್ತ್ರದ ನಂತರ ಇಂಜಿನಿಯರಿಂಗ್ ಬರುತ್ತದೆ. ಒಂದೊಂದು ವಿಭಾಗವನ್ನು ಆಂಗ್ಲ ಭಾಷೆಯ ಒಂದೊಂದು ದೊಡ್ಡ ಅಕ್ಷರ ಪ್ರತಿನಿಧಿಸುತ್ತದೆ. ಎಲ್ಲ ವಿಷಯಗಳ ಮಧ್ಯದಲ್ಲಿ ಬರುವ ‘Spiritual Experience Mysticism’ ಮಾತ್ರ ಗ್ರೀಕ್ ಅಕ್ಷರವಾದ ‘D’ ಇಂದ ಸೂಚಿತವಾಗಿದೆ. ಡೆಲ್ಟಾ ಚಿಹ್ನೆ ‘Spiritual Experience’ಗೆ ಅಂತರ ರಾಷ್ಟ್ರೀಯ ಚಿಹ್ನೆಯಾಗಿ ಒಪ್ಪಿಗೆಯಾಗಿದೆ. ಒಂದೊಂದು ಉಪವರ್ಗಾಂಶಗಳಲ್ಲಿ ಸೊನ್ನೆಯಿಂದ ಒಂಬತ್ತರವರೆಗಿನ ಅಂಕಿಗಳನ್ನು ಪರಿಕಲ್ಪನೆಗಳ ಜೋಡಣೆಗೆ ಹಾಗೂ ಅವುಗಳಲ್ಲಿ ಬರುವ ವಿವಿಧ ಸಂಬಂಧಕ್ಕಾಗಿ i, o ಮತ್ತು l ಬಿಟ್ಟು ಬಾಕಿ ಚಿಕ್ಕ ಅಕ್ಷರ ಮತ್ತು ದೊಡ್ಡ ಅಕ್ಷರಗಳ ಬಳಕೆ ಹಾಗೂ ಕೆಳಕಂಡ ವಿವಿಧ ಚಿಹ್ನೆಗಳಲ್ಲಿ ಇಲ್ಲಿ ಬಳಸಲ್ಪಟ್ಟಿದೆ. ಏಕೆಂದರೆ ಈ ಮೂರು ಅಂಕಿಗಳು  l ಮತ್ತು O ಯನ್ನು ಹೋಲುತ್ತವೆ.

)(          ಅರೆಸ್ಟರ್ ಬ್ರಾಕೆಟ್ಸ್

&         ಆಂಪರ್‌ಸಾಂಡ್

”           ಡಬಲ್ ಇನ್ವರ್‌ಟೆಡ್ ಕಾಮಾ

’           ಸಿಂಗಲ್ ಇನ್ವರ್‌ಟೆಡ್ ಕಾಮಾ

–           ಹೈಫನ್

=          ಈಕ್ವಲ್ ಟು

.           ಡಾಟ್

:           ಕೊಲನ್

;           ಸೆಮಿ ಕೊಲನ್

,           ಕಾಮಾ

à ß ಬಾಣದ ಚಿಹ್ನೆ

ಹೀಗೆ ಒಟ್ಟು 74 ಮಿಶ್ರ ಚಿಹ್ನೆಗಳನ್ನು CCಯ ತಾಂತ್ರಿಕ ಭಾಷೆಯಲ್ಲಿ ನಾವು ಕಾಣಬಹುದು.

ಪ್ರಾಯೋಗಿಕವಾಗಿ ವರ್ಗೀಕರಣದ ತಾಂತ್ರಿಕ ಭಾಷೆಯ ಬಳಕೆ

ಪ್ರಾಯೋಗಿಕವಾಗಿ ಒಂದು ಗ್ರಂಥವನ್ನು ವರ್ಗೀಕರಿಸುವಾಗ ಕೆಲವು ಹಂತ ಗಳಲ್ಲಿ ಹೋಗಬೇಕಾಗುತ್ತದೆ.

1. ಗ್ರಂಥದ ಹೆಸರನ್ನು ಯಾವ ಬದಲಾವಣೆ ಇಲ್ಲದೆ ಹಾಗೇ ಬರೆಯುವುದು.

2. ಮೂಲ ವಿಷಯದೊಂದಿಗೆ ಹೆಸರನ್ನು ಬೇರೆ ಬೇರೆ ಉಪವರ್ಗಾಂಶ ದೊಂದಿಗೆ ಜೋಡಣೆ ಮಾಡುವುದು.

3. ಸ್ವಾಭಾವಿಕ ಭಾಷೆಯಲ್ಲಿ ಬಳಸಿರುವಂತಹ ವ್ಯಾಕರಣಾಂಶಗಳನ್ನು ತೆಗೆದು ಎಲ್ಲ ಅಂಶಗಳನ್ನು ಏಕವಚನ ಹಾಗೂ ಪ್ರಥಮಾ ವಿಭಕ್ತಿಯಲ್ಲಿ ನಿರೂಪಿಸುವುದು.

4. ಎರಡನೆಯ ಅಂಶಗಳನ್ನು ತೆಗೆದುಕೊಂಡು ಯಾವ ಉಪವರ್ಗಾಂಶ ದಲ್ಲಿ ಬರುತ್ತದೆಂದು ನಿರ್ಧರಿಸಿ ಜೋಡಣೆಯ ಚಿಹ್ನೆಗಳೊಂದಿಗೆ ನಿರೂಪಿಸುವುದು.

5. ವರ್ಗೀಕರಣದ ವ್ಯಾಕರಣ ಪ್ರಕಾರ ಎಲ್ಲ ಅಂಶಗಳನ್ನು ಉಪವರ್ಗದ ಸೂತ್ರದಲ್ಲಿ ಬರೆಯುವುದು.

6. ವರ್ಗೀಕರಣ ಭಾಷೆಯಲ್ಲಿ ಬಳಸಿರುವಂತಹ ಪದಸಮೂಹವನ್ನು ಅವಶ್ಯಕತೆ ಇದ್ದ ಕಡೆ ಬದಲಾಯಿಸುವುದು.

7. ಪದ ಸಮೂಹದ ಸ್ಥಳದಲ್ಲಿ ವರ್ಗೀಕರಣ ಭಾಷೆಯಲ್ಲಿರುವಂತಹ ಸಂಜ್ಞೆಯನ್ನು ಬರೆಯುವುದು.

8. ಬರೆದಿರುವ ಸಂಜ್ಞೆ ಸರಿಯಾಗಿದೆಯೇ ಎಂದು ದೃಢೀಕರಿಸುವುದು.

ಉದಾಹರಣೆಗೆ :

ಎರಡನೇ ಮಹಾಯುದ್ಧ ಸಮಯದಲ್ಲಿ ಚಿನ್ನದ ನಾಣ್ಯದ ಬೆಲೆಯ ಡೋಲಾಯಮಾನ ಸ್ಥಿತಿ

1. ಯುದ್ಧ ಸಮಯದಲ್ಲಿನ ಅರ್ಥಶಾಸ್ತ್ರ

2. ಯುದ್ಧ ಅರ್ಥಶಾಸ್ತ್ರ ವಿಶ್ವಪ್ರಪಂಚ 1940

3. ಯುದ್ಧ ಅರ್ಥಶಾಸ್ತ್ರ, ಅರ್ಥಶಾಸ್ತ್ರ, ವಿಶ್ವ, 1940, ಚಿನ್ನದ ನಾಣ್ಯ, ಬೆಲೆ, ಏರಿಳಿತ

4. ಮೂಲವರ್ಗ (ಬೇಸಿಕ್ ಕ್ಲಾಸ್) ಅರ್ಥಶಾಸ್ತ್ರವಾಗುತ್ತದೆ. ಯುದ್ಧ ವ್ಯಕ್ತಿತ್ವ (P) ಆಗುತ್ತದೆ. 1940 ಎಂಬುದು ಕಾಲ (T) ವಿಶ್ವ ಎಂಬುದು ಸ್ಥಳ (S) ಬೆಲೆಯ ಏರಿಳಿತ ಚೈತನ್ಯ (Energy) ಚಿನ್ನವು ವಸ್ತು (Matter) ನಾಣ್ಯ ವ್ಯಕ್ತಿತ್ವ (P2)

BC, P, T, S, E, M, P2

5. (Economics) ಅರ್ಥಶಾಸ್ತ್ರ,  BC ಯುದ್ಧ (P), ನಾಣ್ಯ (P2), ಚಿನ್ನ (M), ಟೀಕೆಯ ಏರಿಳಿತ (E), ವಿಶ್ವ (S), 1940 (T)

6. Facet Formula

X(BC) B(P) 61 (P2) 1 (M) 74 (E) 1 (S) N4 (T)

7. XB, 61;1;74.l’N4

CC ವರ್ಗೀಕರಣದಲ್ಲಿರುವ ತಾಂತ್ರಿಕ ಭಾಷೆ ತನ್ನದೇ ಆದಂತಹ ತತ್ವದ ಮೇಲೆ ರೂಪಿತವಾಗಿರುವುದರಿಂದ ಆ ತತ್ವವನ್ನು ಬಳಸಿ, ಒಂದೊಂದು ವಿಷಯಕ್ಕೂ ವರ್ಗೀಕರಣ ಸೂಚಿಯನ್ನು ರಚಿಸಬಹುದು. CC ಭಾರತದ ಕೊಡುಗೆಯಾದರೂ ಎಲ್ಲ ವರ್ಗೀಕರಣ ಭಾಷೆಗಳೂ ಸಾಮಾನ್ಯವಾಗಿ ಆಂಗ್ಲ ಭಾಷೆಯಲ್ಲೇ ಇವೆ. ಕೆಲವು ದೇಶಗಳು ತಮ್ಮದೇ ಭಾಷೆಗೆ ಅವರಿಗೆ ಸೂಕ್ತವಾದ ವರ್ಗೀಕರಣ ಪದ್ಧತಿಯನ್ನು ತರ್ಜುಮೆ ಮಾಡಿಕೊಂಡಿದ್ದಾರೆ. ಉದಾಹರಣೆಗೆ DDC ಯು ಹಿಂದಿಗೆ ತರ್ಜುಮೆಯಾಗಿದೆ. ಅದು ತನ್ನದೇ ಆದ ಅನಾನುಕೂಲತೆಗಳನ್ನೊಳಗೊಂಡಿರುವುದರಿಂದ ಕನ್ನಡವನ್ನೊಳಗೊಂಡು ಕೆಲವು ಭಾರತೀಯ ಭಾಷೆಗಳಲ್ಲಿ ವರ್ಗೀಕರಣ ತಾಂತ್ರಿಕ ಭಾಷೆಯನ್ನು ರೂಪಿಸುವ ಕಾರ್ಯದಲ್ಲಿ ಸಂಶೋಧನೆ ನಡೆಯುತ್ತಿದೆ.

7. ಸಂಗೀತ ಭಾಷೆ

ತಾಂತ್ರಿಕ ಭಾಷೆಯು ಪರಿಧಿಯಲ್ಲೇ ಬರುವ ಮತ್ತೊಂದು ವಿಭಾಗ ಸಂಗೀತ ಭಾಷೆ. ಸಂಗೀತದಲ್ಲಿ ವಿಶ್ವದಾದ್ಯಂತ ರೂಢಿಯಲ್ಲಿರುವುದು ಎರಡು ಪದ್ಧತಿಗಳು.

1. ಸ್ವರ ಮೇಳ ಪದ್ಧತಿ

2. ರಾಗವಿನ್ಯಾಸ ಅಥವ ಸುಸ್ವರ ಸಂಗೀತ ಪದ್ಧತಿ

ಮೊದಲನೆಯದು ಪಾಶ್ಚಾತ್ಯ ದೇಶಗಳಲ್ಲೂ ಎರಡನೆಯದು ಭಾರತದಲ್ಲೂ ಪ್ರಚಲಿತದಲ್ಲಿದೆ. ಇವೆರಡರಲ್ಲೂ ಬಳಕೆಯಾಗುವ ಸಂಗೀತ ತಾಂತ್ರಿಕ ಭಾಷೆಯ, ಅಲ್ಲಿನ ಪದ್ಧತಿಗೆ ಅನುಗುಣವಾದಂತಹ ಗುಣಗಳನ್ನು ಹೊಂದಿದೆ. ನಮ್ಮಲ್ಲಿ ಸ್ವರಲಿಪಿ ಇರುವಂತೆ ಪಾಶ್ಚಾತ್ಯ ಸಂಗೀತದಲ್ಲಿ ಸ್ಟಾಫ್ ನೋಟೀಷನ್ ಎಂಬ ಸ್ವರಲಿಪಿ ಪದ್ಧತಿ ಇದೆ. ಪ್ರಸ್ತುತ ಭಾರತಕ್ಕೆ ಅನುಗುಣವಾದ ಎರಡನೆಯ ಪದ್ಧತಿಯಲ್ಲಿ ಬಳಸುವ ತಾಂತ್ರಿಕ ಭಾಷೆಯನ್ನು ಚರ್ಚಿಸಲಾಗಿದೆ.

ಸ್ವರಗಳು : ಶ್ರುತಿಗಳಿಂದ ಏಳು ಸ್ವರಗಳು ಹುಟ್ಟಿಕೊಂಡಿವೆ. ಎಲ್ಲ ಸಂಗೀತ ಪದ್ಧತಿಯ ಮೂಲವಸ್ತುಗಳೂ ಸ್ವರಗಳಿಂದ ಕೂಡಿದ್ದು, ಇವುಗಳ ಸ್ಥಾಯಿಯ ಕ್ರಮವು ಈ ರೀತಿ ಇವೆ.

ಸಂಖ್ಯೆ ಸ್ವರಗಳ ಹೆಸರು ಸ್ವರಾಕ್ಷರ
1. ಷಡ್ಜ
2. ಋಷಭ ರಿ
3. ಗಾಂಧಾರ
4. ಮಧ್ಯಮ
5. ಪಂಚಮಿ
6. ಧೈವತ
7. ನಿಷಾದ ನಿ

ಸ್ವರ ಚಿಹ್ನೆ : ಸ್ವಾಭಾವಿಕ ಭಾಷೆಯಲ್ಲಿ ಅಕ್ಷರಗಳು ಎಷ್ಟು ಮುಖ್ಯವೋ ಹಾಗೇ ಸಂಗೀತದ ತಾಂತ್ರಿಕ ಭಾಷೆಯಲ್ಲಿ ಸ್ವರ ಮತ್ತು ಚಿಹ್ನೆಗಳು ಅಷ್ಟೇ ಮುಖ್ಯವಾಗಿರುವುದು. ಚಿಹ್ನೆ ಎಂದರೆ, ಸಂಗೀತದಲ್ಲಿ ಬರುವ ನಾನಾ ವಿಧ ಸ್ವರಗಳನ್ನು ಗುರುತಿಸಲು ಉಪಯೋಗಿಸುವ ಅಕ್ಷರ, ಸಂಕೇತ ಅಥವ ಅಂಕಿ. ಸಂಗೀತ ಚಿಹ್ನೆಗಳಲ್ಲೂ ಎರಡು ಮುಖ್ಯ ಪದ್ಧತಿಗಳಿವೆ.

. ಸ್ಥಾಯಿ ರೇಖಾವಳಿ ವಿನ್ಯಾಸ ಕ್ರಮ (ಸ್ಟ್ಯಾಫ್ ನೊಟೇಶನ್) ಯಾವುದಾದರೂ ಗೆರೆಯ ಮೇಲಾಗಲೀ ಎರಡು ಗೆರೆಗಳ ನಡುವೆಯಾಗಲೀ ಸ್ವರದ ಸ್ಥಾಯಿಯನ್ನು ಸೂಚಿಸಲು ಸಂಕೇತವಾಗಿ ಐದು ಸಮಾನಾಂತರ ಅಡ್ಡ ರೇಖೆಗಳ ತಂಡ. ಇದು ಪಾಶ್ಚಿಮಾತ್ಯ ಸಂಗೀತದಲ್ಲಿ ಬಳಕೆಯಲ್ಲಿದೆ.

. ಅಕ್ಷರ ರೇಖಾವಳಿ ವಿನ್ಯಾಸಕ್ರಮ (ಸ್ಕ್ರಿಪ್ಟ್ ನೊಟೇಶನ್) ಸ, ರಿ, ಗ, ಮ. ಈ ಕ್ರಮವು ಭಾರತೀಯ ಸಂಗೀತದಲ್ಲಿ ಬಳಕೆಯಲ್ಲಿದೆ. ಇದನ್ನು ಸ್ವರಗಳ ಉಚ್ಚಾರಣೆಯಂತೆ ಅಕ್ಷರಗಳಿಂದ ಗುರುತಿಸಲಾಗುತ್ತದೆ. ಎಲ್ಲಾ ಸ್ವರಗಳೂ ಒಂದೇ ಪಂಕ್ತಿಯಲ್ಲಿರುತ್ತದೆ ಹಾಗೂ ಸ್ವರ ಚಿಹ್ನೆಯನ್ನು ನೋಡಿದ ತಕ್ಷಣವೇ ಸಂಗೀತದ ಕ್ರಮವು ತಿಳಿದುಬರುತ್ತದೆ.

ಮೇಲೆ ಹೇಳುವ ಎರಡು ಪದ್ಧತಿಗಳಲ್ಲದೆ, ಸಂಖ್ಯಾತ್ಮಕ ಚಿಹ್ನೆ (Numercial notation) ಎಂಬ ಕ್ರಮವು ಕೆಲವು ಕಡೆ ರೂಢಿಯಲ್ಲಿದೆ. ಮೊದಲನೆಯ ಏಳು ಅಂಕಿಗಳು 1 ರಿಂದ 7 ಏಳು ಸ್ವರಗಳನ್ನು ಸೂಚಿಸುತ್ತದೆ.

ಚಿಹ್ನೆಗಳಲ್ಲಿ ಸ್ವರದೊಂದಿಗೆ ಉಪಯೋಗಿಸುವ ಅನೇಕ ಸಂಕೇತ ಮತ್ತು ಅಂಕಿಗಳ ಬಳಕೆ ಕೆಳಗೆ ನಮೂದಿಸಿರುವ ನಾಲ್ಕು ಅಂಶಗಳ ಮೇಲೆ ಅವಲಂಬಿತವಾಗಿದೆ.

1. ತಾಳ ಅಥವ ಲಯ

2. ಸ್ವರದ ಕಾಲಾವಧಿ

3. ಸ್ಥಾಯಿ

4. ವೈವಿಧ್ಯ

1. ತಾಳ : ಸಂಗೀತದ ಕಾಲ ಪ್ರಮಾಣ ಅಥವ ಗತಿಯನ್ನು ಅಳೆಯುವ ಪದ್ಧತಿಗೆ ತಾಳವೆಂದು ಹೆಸರು. ಇದು ನಿಷ್ಕರ್ಷೆಯಾದ ಅಳತೆಯನ್ನು ತೋರಿಸುತ್ತದೆ. ಹಾಡುವಾಗ, ಕೈಯಿನ ಬೆರಳುಗಳ ಸಹಾಯದಿಂದ ಎಣಿಕೆ ಮಾಡಿ ಕಾಲ ಪ್ರಮಾಣವನ್ನು ಲೆಕ್ಕ ಮಾಡಿದರೆ ಸಂಗೀತದ ವಾದ್ಯಗಳನ್ನು ತಾಳಯಂತ್ರದ ಸಹಾಯದಿಂದ ಎಣಿಕೆ ಮಾಡುವರು.

ತಾಳಗಳಲ್ಲೂ ಪ್ರಧಾನವಾಗಿ ಸಪ್ತತಾಳಗಳನ್ನು ಕಾಣಬಹುದು. ಧ್ರುವ, ಮಠ್ಯ, ರೂಪಕ, ಝಂಪಾ, ತ್ರಿಪುಟ, ಅಟ್ಟ ಮತ್ತು ಏಕತಾಳ. ಈ ಸಪ್ತ ತಾಳಗಳು ತಿಶ್ರ, ಚತುರಶ್ರ, ಖಂಡ ಮತ್ತು ಸಂಕೀರ್ಣ ಎಂಬ ಐದು ಜಾತಿಗಳಿಂದ 35 (7×5 =35) ತಾಳಗಳಾಗುತ್ತವೆ. ತಾಳದ ಭಾಗಗಳಿಗೆ ಅಂಗಗಳೆಂದು ಹೆಸರು. ಅನುದ್ರುತ, ದ್ರುತ, ಲಘು, ಗುರು ಪ್ಲುತ ಮತ್ತು ಕಾರಪಾದ ಇವು ತಾಳಧ ಐದು ಅಂಗಗಳು.

ಅಂಗ ಸ್ವರೂಪ      
ಅನುದ್ರುತ ಅರ್ಧ ಚಂದ್ರದಂತೆ U
ದ್ರುತ ವಲಯಾಕಾರದಂತೆ O
ಲಘು ಅರ್ಧ ಬಾಣದಂತೆ I
ಗುರು ಬಿಲ್ಲನ್ನು ಎತ್ತಿಹಿಡಿದಂತೆ S
ಪ್ಲುತ ಖಿಖರೇಖೆಯ ಗೂಡಿನಂತೆ  
ಕಾಕಪಾದ ಹಂಸ ಪಾದದಂತೆ  

 

ಕಾಲಪ್ರಮಾಣ ಅಕ್ಷರಕಾಲ ಮಾತ್ರಾಕಾಲ  
1. ಅನುದ್ರುತ 1 ¼
2. ದ್ರುತ 2 ½
3. ದ್ರುತ ವಿರಾಮ 3 ¾
4. ಲಘು 4 1  
5. ಲಘು ವಿರಾಮ 5 1 ¼
6. ಲಘುದ್ರುತ 6 1 ½
7. ಲಘುದ್ರುತ ವಿರಾಮ 7 1 ¾
8. ಗುರು 8 2
9. ಗುರು ವಿರಾಮ 9 2 ¼
10. ಗುರುದ್ರುತ 10 2 ½
11. ಗುರುದ್ರುತ ವಿರಾಮ 11 2 ¾
12. ಪ್ಲುತ 12 3
13. ಪ್ಲುತ ವಿರಾಮ 13 3 ¼
14. ಪ್ಲುತ ದ್ರುತ 14 3 ½
15. ಪ್ಲುತದ್ರುತ ವಿರಾಮ 15 3 ¾
16. ಕಾಕಪಾದ 16 4

ಮೇಲೆ ಹೇಳಿದ ಕಾಲಪ್ರಮಾಣವನ್ನು ತಾಳದ ಷೋಡಶಾಂಗಗಳೆಂದು ಕರೆಯುತ್ತಾರೆ. ತಾಳಗಳು ಷೋಡಶಾಂಗದ ಕೆಲವು ಅಂಶಗಳನ್ನೊಳಗೊಂಡಿದೆ.

ಕಾಲಾವಧಿ : ಸರಿಗಮಪದನಿ – ಇವು ಹ್ರಸ್ವ ಸ್ವರಗಳು ಏಕಕಾಲವನ್ನು ನಿರ್ಧರಿಸುವುದು, ಸಾರೀಗಾಮಾಪಾದಾನಿ – ಇವು ದೀರ್ಘ ಸ್ವರಗಳು. ಸ ಮುಂದೆ ಬಂದು ಅಲ್ಪ ವಿರಾಮದ ಚಿಹ್ನೆ ಬಂದರೆ ಸ್ವರದ ಕಾಲಾವಧಿಯು ಏಕಮಾತ್ರ ಕಾಲದಿಂದ ಅಧಿಕವಾಗುವುದು. ಇನ್ನೂ ಕಾಲಾವಧಿಯನ್ನು ಹೆಚ್ಚಿಸಬೇಕೆಂದರೆ ಕಾಲದ ಅವಧಿಗೆ ತಕ್ಕಂತೆ ಅಲ್ಪ ವಿರಾಮ ಚಿಹ್ನೆಯನ್ನೂ, ಅರ್ಧವಿರಾಮ ಚಿಹ್ನೆಯನ್ನು ಹೆಚ್ಚಿಸಿಕೊಳ್ಳಬೇಕು.

1 ಅಕ್ಷರಕಾಲ
ಸಾ 2 ಅಕ್ಷರಕಾಲ
ಸಾ ಅಥವ ಸ, 3 ಅಕ್ಷರಕಾಲ
ಸ, ಸಾ 4 ಅಕ್ಷರಕಾಲ

ಹೀಗೆಯೇ ಮುಂದುವರಿಯುವುದು. ಒಂದು ಸ್ವರದ ಮೇಲೆ ಅಥವ ಅನೇಕ ಸ್ವರಗಳ ಗುಂಪಿನ ಮೇಲೆ ಒಂದು ಸಮತಲವಾಗಿರುವ ಗೆರೆಯನ್ನು ಎಳೆದರೆ ಕಾಲಾವಧಿಯನ್ನು ಅರ್ಧಕ್ಕಿಳಿಸುವುದು. ಎರಡು ಗೆರೆಗಳು ಕಾಲಾವಧಿಯನ್ನು ಕಾಲು ಭಾಗಕ್ಕೂ ಮೂರು ಗೆರೆಗಳು ಕಾಲಾವಧಿಯನ್ನು ಎಂಟನೆಯ ಒಂದು ಭಾಗಕ್ಕೂ ಇಳಿಸುವುವು. ಹೀಗೆಯೇ ಇನ್ನು ಕಡಿಮೆ ಮಾಡಿಕೊಂಡು ಹೋಗ ಬಹುದು.

ಸ = ಸಸ = ಸಸಸಸ = ಸಸಸಸಸಸಸಸ = ಒಂದು ಅಕ್ಷರ ಕಾಲ

1 = ½ ½ = ¼ ¼ ¼ ¼ = 1/8 1/8 1/8 1/8 1/8 1/8 1/8 1/8 = 1

ಸ್ಥಾಯಿ

ಸ್ವರದ ಮೇಲೆ ಒಂದು ಚುಕ್ಕಿಯು ಬಂದರೆ ಅದು ಮೇಲು ಸಪ್ತಕವೆಂದೂ ಸ್ವರದ ಅಡಿಯಲ್ಲಿ ಒಂದು ಚುಕ್ಕಿಯು ಬಂದರೆ ಅದು ಕೆಳಗಿನ ಸಪ್ತಕವೆಂದೂ ಹಾಗೂ ಉಳಿದ ಸ್ವರಗಳೆಲ್ಲ ಮಧ್ಯಮ ಸಪ್ತಕ ಸ್ವರಗಳೆಂದು ಪರಿಗಣಿಸಲಾಗಿದೆ.

ಸರಿಗಮ – ಮೇಲು ಸಪ್ತಕ ಅಥವಾ ತಾರಸ್ಥಾಯಿ

ನಿಧಪಮ – ಕೆಳಗಿನ ಸಪ್ತಕ ಅಥವಾ ಮಂದ್ರಸ್ಥಾಯಿ

ವೈವಿಧ್ಯ

ಐದು ಸ್ವರಗಳಲ್ಲಿ ಬರುವ (ರಿ, ಗ, ಮ, ದ, ನಿ)DD ಕೋಮಲ ಮತ್ತು ತೀವ್ರ ಸ್ವರಗಳನ್ನು 1 ಮತ್ತು 2 ಎಂಬ ಆಕರಗಳಿಂದ ಸೂಚಿಸಲಾಗುತ್ತದೆ.

ಒಂದು ರಾಗದಲ್ಲಿ ಎಷ್ಟು ಸ್ವರಗಳು ಯಾವ ಸ್ವರ ವೈವಿಧ್ಯದಲ್ಲಿ ಬರುತ್ತದೆ ಎನ್ನುವುದನ್ನು ಆ ರಾಗದ ಆರೋಹಣ ಸರಿಗಮ ಪಧನಿಸ ಹಾಗೂ ಅವರೋಹಣದಲ್ಲಿ ಸನಿಧಪಮಗರಿಸ ಸೂಚಿತವಾಗಿರುತ್ತದೆ. ಇದನ್ನು ಅ ಮತ್ತು ಆ ಎಂದು ಸೂಚಿಸಿರುತ್ತಾರೆ. ಉದಾಹರಣೆಗೆ ಒಂದು ಸಂಗೀತ ರಚನೆಯನ್ನು ಬರೆಯುವಾಗ ನಿರೂಪಿಸುವ ಕೆಲವು ಅಂಶಗಳು ಈ ರೀತಿ ಇವೆ.

ರಿ1 = ಕೋಮಲ ರಿ
ರಿ2 = ತೀವ್ರ ರಿ
ಗ1 = ಕೋಮಲ ಗ
ಗ2 = ತೀವ್ರ ಗ
ಮ1 = ಕೋಮಲ ಮ
ಮ2 = ತೀವ್ರ ಮ
ಧ1 = ಕೋಮಲ ಧ
ಧ 2 = ತೀವ್ರ ಧ
ನಿ1 = ಕೋಮಲ ನಿ
ನಿ2 = ತೀವ್ರ ನಿ

ರಿ ಮತ್ತು ಧ – ಶುದ್ಧ ಮತ್ತು ಚತುಶ್ರುತಿ ಎಂದೂ, ಗಾಂಧಾರದಲ್ಲಿ ಸಾಧಾರಣ ಮತ್ತು ಅಂತರ ಗಾಂಧಾರವೆಂದೂ, ನಿಷಾದದಲ್ಲಿ ಕೈಶಿಕಿ ಮತ್ತು ಕಾಕಲಿ ಎಂಬ ಎರಡೆರಡು ಕಾಣಬಹುದು.

ಒಂದು ರಾಗದಲ್ಲಿ ಎಷ್ಟು ಸ್ವರಗಳು ಯಾವ ಸ್ವರ ವೈವಿಧ್ಯವನ್ನು ಬರುತ್ತದೆ ಎನ್ನುವುದನ್ನು ಆ ರಾಗದ ಆರೋಹಣ ಸರಿಗಮ ಪದನಿಸ ಹಾಗೂ ಅವರೋಹಣ ಸನಿದಪಮಗರಿಸಗಳಲ್ಲಿ ಸೂಚಿತವಾಗಿರುತ್ತವೆ. ಇದನ್ನು ಆ ಮತ್ತು ಅ ಎಂದು ಸೂಚಿಸಿರುತ್ತಾರೆ. ಉದಾಹರಣೆಗೆ ಒಂದು ಸಂಗೀತ ರಚನೆಯನ್ನು ಬರೆಯುವಾಗ ನಿರೂಪಿಸುವ ಕೆಲವು ಅಂಶಗಳು ಈ ರೀತಿ ಇವೆ. ಉದಾಹರಣೆಗೆ

ರಾಗ : ಮಾಯಾ ಮಾಳವ ಗೌಳ 15 ನೇ ಮೇಳಕರ್ತ ರಾಗ

ಅ : ಸನಿ2ದ1ಪಮಗ2ರಿ1ಸ

ರಾಗ : ಮಧ್ಯಮಾವತಿ 22 ನೇ ಮೇಳಖರಹರಪ್ರಿಯದಲ್ಲಿ ಜನ್ಯ

ಆ : ಸರಿ2ಮ1ಪನಿ1ಸ

ಅ : ಸನಿ1ಪಮರಿ2ಸ

ತಾಳ : ತಾಳದ ಹೆಸರನ್ನು ನಿರೂಪಿಸಲಾಗಿರುತ್ತದೆ.

ಉದಾ: ತಾಳ : ಆದಿ (ಆದಿ ತಾಳದಲ್ಲಿ ಈ ರಚನೆಯನ್ನು ಹಾಡಬೇಕು ಎಂದು ಅರ್ಥ)

ಸನಿಪ, ಸಾನಿಪಗ ನಿಪಾಗಪಗರಿಸ 1

ನಿಪಾನಿಸರಿಗಪ ನಿಪಾಗರಿಗಪನಿ

ಆದಿತಾಳದಲ್ಲಿ ಒಂದು ಲಘು ಎರಡು ಧೃತ ಬರುತ್ತದೆ. ತಾಳ ಹಾಕುವಾಗ ಒಂದು ತಾಳದ ಅಳತೆಯಲ್ಲಿ ಬರುವ ಸ್ವರಗಳ ತಳದಲ್ಲಿ ಒಂದು ರೇಖೆ ಎಳೆದಿದೆ. ಆದಿತಾಳದಲ್ಲಿ ಗಳುವಿಗೆ 4 ಎಣಿಕೆ ಅಂದರೆ ಒಂದು ಏಟು, ಮೂರು ಬೆರಳಿನ ಎಣಿಕೆ ನಂತರ ಒಂದು ಏಟು ಹಾಕಿ ಕೈಯನ್ನು ತಿರುಗಿಸುವಿಕೆಗೆ ಧ್ರುವ ಎನ್ನುತ್ತಾರೆ. ಹಾಗೆ ಧ್ರುವ ಆದಿತಾಳದಲ್ಲಿ ಎರಡಾವರ್ತಿ ಬರುತ್ತದೆ.

ಅನಂತರ ಬರುವುದು ರಚನಾಕಾರರ ಹೆಸರು

ಉದಾ: ತ್ಯಾಗರಾಜರ ರಚನೆಗಳನ್ನು ಸ್ವರದೊಂದಿಗೆ ನಿರೂಪಿಸುವಾಗ ಒಂದೊಂದು ಚಿಹ್ನೆಗೂ ಮೇಲೆ ಹೇಳಿದಂತೆ ಅದರದೇ ಆದ ಅರ್ಥಗಳಿವೆ. ಸ್ವರದ ಕೆಳಗೆ ಸಾಹಿತ್ಯವನ್ನು ನಿರೂಪಿಸುವುದು ಹಾಡುವವರಿಗೆ ಆ ಸ್ವರ ಛಾಯೆಯಲ್ಲೇ ಹಾಡಲು ಅನುಕೂಲವಾಗುತ್ತದೆ.

||; ರಿರಿಮಾ; ಮಗರಿಗರಿಸಸಾ |; ನಿಸ  ನಿಸರೀ ಸ | ಸನಿನಿದದಪಪಾ ||

ತುಳಸೀ ಬಿಲ್ವ      ಮ        ಲ್ಲಿ         ಕಾ        ದಿ

ಸಾಮಾನ್ಯವಾಗಿ ಸಂಗೀತ ರಚನೆಗಳಲ್ಲಿನ ಸಾಹಿತ್ಯವನ್ನು ಅವರವರ ಮಾತೃಭಾಷೆಯ ಲಿಪಿಯಲ್ಲೇ ಬರೆದು ಕಲಿಸಿಕೊಡಲಾಗುತ್ತದೆ.

ಗಣಿತ ಭಾಷೆ : ಸ್ವರಗಳು ಸಂಗೀತದಲ್ಲಿ ಎಷ್ಟು ಮುಖ್ಯವೋ ಹಾಗೇ ಗಣಿತದಲ್ಲಿನ ಚಿಹ್ನೆ ಮತ್ತು ಸಂಜ್ಞೆಗಳು. ಒಂದು ಮೊತ್ತ ಅಥವ ರಾಶಿ ಮತ್ತು ಪರಿಕಲ್ಪನೆಗಳನ್ನು ಹಾಗೂ ಅವುಗಳ ನಡುವಿನ ಪರಿಕ್ರಮಗಳನ್ನು ಮತ್ತು ಸಂಬಂಧಗಳನ್ನು ಅಮೂರ್ತೀಕರಿಸಿ ಸ್ಪಷ್ಟವಾಗಿಯೂ, ಸಂಕ್ಷೇಪವಾಗಿಯೂ ನಿರೂಪಿಸುವ ಭಾಷಾ ಸಾಮಗ್ರಿಗಳು ಗಣಿತದಲ್ಲಿ ಬಳಸುವ ವಿವಿಧ ಚಿಹ್ನೆಗಳು. ಅವು ಈ ಕೆಳಕಂಡಂತೆ ಇವೆ.

1. ಸೊನ್ನೆ ಇಂದ (0) ತೊಡಗಿ ಒಂಬತ್ತರ (9) ವರೆಗಿನ ಅಂಕಿಗಳು ಮತ್ತು ಅವು ರಚಿಸುವ ಅಸಂಖ್ಯಾತ ಸಂಖ್ಯೆಗಳು –

2. ವರ್ಣಮಾಲೆಗಳಿಂದ ಆಯ್ದ ವಿವಿಧ ಅಕ್ಷರಗಳು – a, b,c, x, y, z ಇತ್ಯಾದಿ ……… ಇತ್ಯಾದಿ ಗ್ರೀಕ್ ಸಂಜ್ಞಾಗಳು.

3. +, -, x, %, U, >, <, =, Î ಇತ್ಯಾದಿ ಸಂಜ್ಞೆಗಳು

4. p, C, Sin, Log, Cos, f(x) ಇತ್ಯಾದಿ ಪರಿಕಲ್ಪನೆಗಳು.

ಉದಾಹರಣೆಗೆ Set Theory ಯಲ್ಲಿನ ನಿರೂಪಣೆಯಂತೆ

S ಎಂಬುದು T ಯ ಉಪವರ್ಗ

S Í  T

S È T (union)

S Ç T (Intersection)

S – T(difference)

I – S (Complement)

+ ಎಂದರೆ ಕೂಡು, – ಎಂದರೆ ಕಳೆ, x ಎಂದರೆ ಗುಣಿಸು ಹೀಗೆ ಒಂದೊಂದು ಚಿಹ್ನೆಗೂ ತನ್ನದೇ ಆದ ಅರ್ಥವಿದೆ. ಗಣಿತದಲ್ಲಿ ಮಾಡಬೇಕಾದ ಪರಿಕರ್ಮವನ್ನು ಇಲ್ಲಿ ಬಳಸುವ ತಾಂತ್ರಿಕ ಭಾಷೆ ಸಂಕ್ಷೇಪವಾಗಿ ಹೇಳುತ್ತದೆ.

ವಿಜ್ಞಾನ : ವಿಜ್ಞಾನದ ಒಂದು ಭಾಗವಾದ ರಾಸಾಯನಿಕ ಶಾಸ್ತ್ರವನ್ನು ತೆಗೆದುಕೊಂಡು ಅದರಲ್ಲಿನ ತಾಂತ್ರಿಕ ಭಾಷೆಯನ್ನು ನೋಡಿದಾಗ ಎಲ್ಲ ರಾಸಾಯನಿಕ ವಸ್ತುಗಳಿಗೂ ಒಂದೊಂದು ಚಿಹ್ನೆಯನ್ನು ಕಾಣುತ್ತೇವೆ. ಈ ಪದ್ಧತಿ ನೂರಾರು ವರ್ಷಗಳ ಹಿಂದೆ ಇದ್ದು ಆಲ್ ಕೆಮಿಸ್ಟ್‌ಗಳಿಂದ ಪ್ರಾರಂಭವಾಯಿತು. ಆಲ್ ಕೆಮಿಸ್ಟ್ ಬಳಸುತ್ತಿದ್ದ ಕೆಲವು ಚಿಹ್ನೆಗಳು ಈ ರೀತಿ ಇವೆ.

ಉಪ್ಪು l ಚಿನ್ನ     ಬೆಳ್ಳಿ      ಸೀಸ      ತವರ

ಜಾನ್ ಡಾಲ್ ಟನ್ ಬಳಸಿದ ಚಿಹ್ನೆಗಳೆಂದರೆ

S Silver L Lead G Gold l Corbon O Oxygen l +O, +

O OO Carban Dioxide

ಸ್ವೀಡನ್‌ನ ಜೆ.ಜೆ. ಬರ್ಜೆ ಲಯಸ್ ಎಂಬ ವಿಜ್ಞಾನಿ ಎಲ್ಲ ರಾಸಾಯನಿಕ ವಸ್ತುವಿನ ಮೊದಲ ಅಕ್ಷರವನ್ನು ಆ ವಸ್ತುವಿನ ಚಿಹ್ನೆಯಾಗಿ ಬಳಸಬಹುದೆಂದು ಸೂಚಿಸಿದನು. ಅದನ್ನು ಒಪ್ಪಲು ವಿಜ್ಞಾನಿಗಳಿಗೆ ನೂರು ವರ್ಷವೇ ಹಿಡಿಯಿತು.

ಸ್ವಾಭಾವಿಕ ಭಾಷೆಯಲ್ಲಿ ಶೀಘ್ರಲಿಪಿ ಎಂದು ನಾವು ಏನನ್ನು ಕರೆಯುತ್ತೇ ವೆಯೋ ಹಾಗೆ, ರಾಸಾಯನಿಕ ವಿಜ್ಞಾನದಲ್ಲಿ ಆ ವಸ್ತುಗಳ ಚಿಹ್ನೆಯೂ ಅವುಗಳ ಹೆಸರಿನ ಮೊದಲ ಅಕ್ಷರದ್ದಾಗಿರುತ್ತದೆ. ಒಂದೇ ಅಕ್ಷರದಿಂದ ಪ್ರಾರಂಭವಾಗುವ ಕೆಲವು ವಸ್ತುಗಳಿಗೆ ಅವುಗಳ ಎರಡನೆಯ ಅಥವ ಮೂರನೆಯ ಅಕ್ಷರವೂ ಸೇರಿಸಬೇಕಾಗುತ್ತದೆ. ಮೊದಲಕ್ಷರ ದೊಡ್ಡದಾಗಿದ್ದರೆ ಅದರ ನಂತರದ್ದು ಚಿಕ್ಕಕ್ಷರವಾಗಿರುತ್ತದೆ.

ಉದಾಹರಣೆಗೆ

Hydrogen ಜಲಜನಕ H Corbon C
Helium He Chloride Cl

ಎಷ್ಟೋ ರಾಸಾಯನಿಕ ವಸ್ತುಗಳ ಹೆಸರು ಲಾಟಿನ್ ಭಾಷೆಯ ಮೂಲದಿಂದ ಬಂದಿದ್ದು, ಕೆಲವು ಹಾಗೇ ಉಳಿದಿವೆ.

ಉದಾಹರಣೆಗೆ

ಮೂಲವಸ್ತು ಲ್ಯಾಟಿನ್ ಹೆಸರು ಚಿಹ್ನೆ
Sodium Natrium Na
Copper Cupereum Cu
Iron Ferrum Fe
Potassium Kalium K
Silver Argentum Ag
Tin Stannum Sn
Gold Aurum Au
Mercury Hydragyrum Hg
Lead Plumbum Lb

 

ಎರಡು ರಾಸಾಯನಿಕಗಳನ್ನು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಸೇರಿಸಿದಾಗ ಒಂದು ಸಂಯುಕ್ತ ರಾಸಾಯನಿಕವು ಉತ್ಪತ್ತಿಯಾಗುತ್ತದೆ. ಈ ಸಂಯುಕ್ತವನ್ನು ಪ್ರತಿನಿಧಿಸುವ ಚಿಹ್ನೆಯು, ಆ ಸಂಯುಕ್ತ ವಸ್ತುವಿನಲ್ಲಿರುವ ರಾಸಾಯನಿಕ ವಸ್ತುಗಳನ್ನು ಅವುಗಳ ಪ್ರಮಾಣದೊಂದಿಗೆ ಸೂಚಿಸುತ್ತದೆ.

ಉದಾಹರಣೆಗೆ ನೀರು – H2O

ನೀರು ಎರಡಂಶ ಜಲಜನಕವನ್ನು, ಒಂದಂಶ ಆಮ್ಲಜನಕವನ್ನು ಹೊಂದಿದೆ. ಭಾರತೀಯ ಭಾಷೆಗಳಲ್ಲಿ ಈ ರಾಸಾಯನಿಕ ವಸ್ತುಗಳನ್ನು ಹೆಸರಿಸುವಾಗ ವಸ್ತುವಿನ ಹೆಸರು ಮಾತ್ರ ತರ್ಜುಮೆಗೊಂಡು ಚಿಹ್ನೆ ಇಂಗ್ಲಿಶ್ ನಲ್ಲಿರುವಂತೆಯೇ ಇರುತ್ತದೆ.

ಕಂಪ್ಯೂಟರ್ ಸಂಕೇತ ಭಾಷೆ

ಕಂಪ್ಯೂಟರ್‌ನಲ್ಲಿ ಅಳವಡಿಸಿರುವ ಕೀಲಿಮಣಿಯೇ ಕಂಪ್ಯೂಟರ್‌ನ ಸಂಕೇತ ಭಾಷೆಗೆ ಒಳ್ಳೆಯ ಉದಾಹರಣೆ. ಇದರಲ್ಲಿ 84 ರಿಂದ 131 ಕೀಲಿಗಳಿರುತ್ತವೆ. ಇದು ಅಕ್ಷರ, ಸಂಖ್ಯೆ, ಸಂಜ್ಞೆ ಮತ್ತು ಫಂಕ್ಷನ್ ಕೀಲಿಗಳನ್ನು ಒಳಗೊಂಡಿರುತ್ತದೆ. ಕೀಲಿಮಣೆಯ ಚಿತ್ರ ಕೆಳಕಂಡಂತಿದೆ.

ಕಂಪ್ಯೂಟರ್ ಕೀಲಿಮಣೆಯ ವಿನ್ಯಾಸ

ಮಾಡಿಫೈಯರ್ ಕೀ (Modifier Key)

n ಕಂಟ್ರೋಲ್ ಕೀ (Control Key)

n ಶಿಫ್ಟ್ ಕೀ (Shift Key)

n ಆಲ್ಟ್ ಕೀ (Alt Key / Option Key (Macintosh)

n ಆಲ್ಟ್ ಜಿಆರ್ಕೀ (AltrGr Key)

n ಕಮಾಂಡ್ ಕೀ (Command Key / Meta Key

(MIT Computer Keyboards)

n ವಿಂಡೋಸ್ ಕೀ (Windows Key)

n ಫಂಕ್ಷನ್ ಕೀ

[Fn Key (Compact Keyboards)]

ಮಾಡಿಫೈಯರ್ ಕೀಯು ಒಂದು ವಿಶೇಷ ಕೀಲಿಯಾಗಿದ್ದು, ಕಂಪ್ಯೂಟರೀಕರಣದಲ್ಲಿ ಒಂದಕ್ಕಿಂತ ಹೆಚ್ಚು ಕೀಲಿಗಳನ್ನು ಒಂದೇ ಬಾರಿ ಉಪಯೋಗಿಸಿದಾಗ ಒಂದು ಕ್ರಿಯೆ ರೂಪುಗೊಳ್ಳಲು ಸಹಾಯ ಮಾಡುತ್ತದೆ. ಉದಾಹರಣೆಗೆ <Alt + <F4> ಕೀಲಿಯನ್ನು ಒತ್ತಿದಾಗ ಮೈಕ್ರೊಸಾಫ್ಟ್ ವಿಂಡೋಸ್ ನ ಕ್ರಿಯೆ ಅಂತ್ಯಗೊಳ್ಳುತ್ತದೆ. ಮಾಡಿಫೈಯರ್ ಕೀ ಒಂದರಿಂದ ಯಾವುದೇ ಕ್ರಿಯೆಯೂ ಜರುಗುವುದಿಲ್ಲ.

ಲಾಕ್ ಕೀಲಿಗಳು (Lock Key)

n  ಸ್ಕ್ರೋಲ್ ಲಾಕ್

n  ನಂಬರ್ ಲಾಕ್

n  ಕ್ಯಾಪ್ಸ್ ಲಾಕ್

ಸಂಚಾರಿ ಕೀಲಿಗಳು (Navigation Keys)

n  ಆರೋ ಕೀ (Arrow Keys)

n  ಪೇಜ್ ಸ್ಕ್ರೋಲ್ [Page Scroll (Page UP / Page Down)]

n  ಹೋಮ್ ಕೀ / ಎಂಡ್ ಕೀ (Home Key / End Key)

ಪುಟದ ಮೇಲ್ಭಾಗಕ್ಕೆ ಹೋಗಿ ಕೆಳಭಾಗಕ್ಕೆ ಇಳಿಯಲು ಪೇಜ್ ಅಪ್ ಮತ್ತು ಪೇಜ್ ಡೌನ್ ಎಂಬ ಕೀಲಿಗಳು ಇವೆ. ಯಾವುದೇ ಅಕ್ಷರವನ್ನು, ಪದವನ್ನು, ಸಾಲನ್ನು ಅಳಿಸಲು ಡಿಲೀಟ್ ಕೀ ಇದೆ. ನಡುವೆ ಯಾವುದನ್ನಾದರೂ ಸೇರಿಸಲು ಇನ್ಸ್‌ರ್ಟ್ ಕೀ ಇದೆ. ಇವಲ್ಲದೆ ಕರ್ಸರ್ ಕಂಟ್ರೋಲ್‌ಗೆಂದು ನಾಲ್ಕು ಕೀಲಿಗಳಿವೆ. ಇವುಗಳ ಮೇಲೆ ಎಡಕ್ಕೆ, ಬಲಕ್ಕೆ, ಕೆಳಗೆ, ತಿರುಗಿದ ಬಾಣದ ಗುರುತು ಇದೆ. ಕರ್ಸರನ್ನು ಬೇಕಾದ ದಿಕ್ಕಿಗೆ ಚಲಿಸಲು ಸಹಾಯಕ ವಾಗಿ ಈ ಕೀಲಿಗಳನ್ನು ಬಳಸಲಾಗುತ್ತದೆ.

ಎಡಿಟ್ ಕೀಲಿಗಳು (Edit Key)

n  ಎಂಟರ್ ಕೀ (Return Key / Enter Key)

n  ಬ್ಯಾಕ್ ಸ್ಪೇಸ್ (Backspace)

n  ಇನ್ಸ್ರ್ಟ್ ಕೀ (Insert Key)

n  ಡಿಲೀಟ್ ಕೀ (Delete Key)

n  ಟ್ಯಾಬ್ (Tab)

Edit Keys are used for various editing purposes like deleting inserting etc.

ಪ್ರಿಂಟ್ ಸ್ಕ್ರೀನ್ ಕೀ (SysRq/Print Screen

ಪ್ರಿಂಟ್ ಸ್ಕ್ರೀನ್ ಕೀಯಿಂದ ಮಾನಿಟರ್ ಮೇಲೆ ಇರುವುದನ್ನು ಯಥಾವತ್ತಾಗಿ ಪ್ರಿಂಟ್ ಮಾಡಬಹುದು.

ಇನ್ನು ಕೆಲವು ಕೀಲಿಗಳೆಂದರೆ ಬ್ರೇಕ್ ಕೀ (Break Key) ಪಾಸ್ ಕೀ (Pause Key) ಎಸ್ಕೇಪ್ ಕೀ (Escape Key) ಮತ್ತು ಮೆನು ಕೀ (Menu Key) ಸ್ಪೇಸ್ ಬಾರ್ (Space Key) ನಂ ಪ್ಯಾಂಡ್ (Num pad) ಫಂಕ್ಷನ್ ಕೀ (Function Key) ಮುಂತಾದವು.

ಫಂಕ್ಷನ್ ಕೀಲಿಗಳನ್ನು F1, F2….F12 ಎಂದು ನಮೂದಿಸಲಾಗಿದೆ. ಇವು ನಿರ್ದಿಷ್ಟ ಕಾರ್ಯನಿರ್ವಹಣೆಯ ಸೂಚಕಗಳು. ಇವುಗಳಲ್ಲಿ ಒಂದು ಕೀಯನ್ನು ಒತ್ತಿದಾಗ ಏನಾಗುತ್ತದೆ ಎಂಬುದು ಕಂಪ್ಯೂಟರ್ ಪ್ರೋಅನ್ನು ಅವಲಂಬಿಸಿದೆ. ಒಂದೊಂದು ಸಾಫ್ಟ್‌ವೇರ್‌ನಲ್ಲಿಯೂ ಈ ಫಂಕ್ಷನ್ ಕೀಗಳಿಗೆ ಬೇರೆ ಕೆಲಸಗಳನ್ನು ನೀಡಲಾಗಿರುತ್ತದೆ.

Functioning of the comuter is basically dependent on two numbers “O” and “I”. Many operating systems allow the use to install or create any user interface they desire. Modern operating systems use a Command Line Interface (or CLI) typically with only the keyboard for input and/or a Graphical user interface which uses a pointing device such as a mouse or stylus for input in addition to the keyboard. Operating system translates these commands into binary codes understandable by the computer and Vice Versa.

ಕಂಪ್ಯೂಟರ್ ಕೇವಲ ದ್ವಿಮಾನ ಪದ್ಧತಿ ಅದರೆ 0 ಮತ್ತು 1 ನ್ನು ಮಾತ್ರ ಅರ್ಥಮಾಡಿಕೊಳ್ಳಬಲ್ಲದು. ಆದ್ದರಿಂದ ಈ 0 ಮತ್ತು 1 ಕಂಪ್ಯೂಟರ್‌ನ ಮೂಲ ಭಾಷೆ. ಅಂದರೆ ನಾವು ಕಂಪ್ಯೂಟರಿಗೆ ಹೇಳುವ ಎಲ್ಲ ಕೆಲಸವನ್ನು ಕಾರ್ಯನಿರ್ವಹಕ ರಚನೆಯು (Operating System) ಅನುವಾದಿಸುತ್ತದೆ.

ಸೊನ್ನೆ ಮತ್ತು ದ್ವಿಮಾನ ಅಥವಾ ಬೈನರ್ ಸಂಖ್ಯೆಗಳಾದರೆ, ಮತ್ತೆ ಕೆಲವು ಪದ್ಧತಿಗಳಾದ ದಶಮಾನ /decimal/hexadecimal (0-9) (A-F) ಮುಂತಾದವು ಬಳಕೆಯಲ್ಲಿವೆ. ಉದಾಹರಣೆಗೆ ಆಂಗ್ಲ ಅಕ್ಷರ ‘A’ ಯ ದಶಮಾನ ಸಂಖ್ಯೆ 65 (also known as ASCII Value – American Standard Code for Information Interchange). ಇದು ಬೈನರಿ ಕೋಡ್‌ನಲ್ಲಿ 1000001 ಆಗುತ್ತದೆ.

ಆಂಗ್ಲಭಾಷೆಯನ್ನು ಹೊರತುಪಡಿಸಿ ಪ್ರಪಂಚದ ಬಹಳಷ್ಟು ಭಾಷೆಗಳಿಗೆ ಯೂನಿಕೋಡ್ (UNICODE) ಸಂಖ್ಯೆಗಳನ್ನು ಅಳವಡಿಸಲಾಗಿದೆ. ಯೂನಿ ಕೋಡ್ ಪ್ರತಿಯೊಂದು ಅಕ್ಷರಕ್ಕೂ ತನ್ನದೇ ಆದ ಹೆಕ್ಸಾಡೆಸಿಮಲ್ ಸಂಖ್ಯೆಯನ್ನು ಹೊಂದಿದೆ. irrespective of Platform, Program and Language.

ಉದಾಹರಣೆಗೆ : ಕನ್ನಡ ಅಕ್ಷರ ‘ಅ’ದ ಯೂನಿಕೋಡ್ ಸಂಖ್ಯೆ

ನೈಜ ಭಾಷಾ ಪ್ರಕ್ರಿಯೆ

ಭಾಷಾವಿಜ್ಞಾನದ ಒಂದು ಅಂಗವಾದ Computational Linguistics (CL)ನಲ್ಲಿ ಸಂಕೇತ ಭಾಷೆಯು ಪ್ರಮುಖ ಸ್ಥಾನವನ್ನು ಪಡೆದಿದೆ. CL ಎಂದರೆ ಗಣಕಯಂತ್ರದ ಬಳಕೆಯಿಂದ ನಡೆಸುವ ಭಾಷಾವಿಜ್ಞಾನಕ್ಕೆ ಸಂಬಂಧಪಟ್ಟ ಕಾರ್ಯಕ್ರಮ. ಭಾಷಾವಿಜ್ಞಾನಕ್ಕೆ ಸಂಬಂಧಪಟ್ಟಂತೆ, CLನಲ್ಲಿ ನಡೆದಿರುವ ಸಂಶೋಧನೆಯ ಫಲವಾಗಿ, ಪ್ರಚಲಿತದಲ್ಲಿ ಸಂಶೋಧಕರ ಹೆಚ್ಚಿನ ಗಮನ ಸೆಳೆದಿರುವುದು ನೈಜ ಭಾಷಾ ಪ್ರಕ್ರಿಯೆ (NLP) ಇತ್ತೀಚಿನ ದಿನಗಳಲ್ಲಿ CLಗೆ ಸಮಾನಾರ್ಥ ಪದವಾಗಿ NLPಯನ್ನು ಬಳಸಲಾಗುತ್ತಿದೆ. ಇಲ್ಲಿ ಕೃತಕ ಬುದ್ದಿ ವಂತಿಕೆ (Artificial Intelligence)ಯನ್ನು ಗಣಕದಲ್ಲಿ ಅಳವಡಿಸಲಾಗುತ್ತದೆ. NLPಯ ಕೆಲವು ಉಪಯೋಗಗಳು ಕೆಳಕಂಡಂತೆ ಇವೆ.

1. ರೂಪವರ್ಗೀಕರಣ : ಇದರಲ್ಲಿ ಗ್ರಂಥದಲ್ಲಡಕವಾಗಿರುವ ಮುಖ್ಯ ವಿಷಯಗಳನ್ನು ಸ್ಥೂಲವಾಗಿ ಕಂಡುಹಿಡಿಯುವುದು ಸಾಧ್ಯವಾಗುತ್ತದೆ.

2. ಮಾಹಿತಿ ವರ್ಗೀಕರಣ : ಗ್ರಂಥದಲ್ಲಿ ಹಲವಾರು ವಿಷಯಗಳಲ್ಲಿ ಪ್ರಧಾನವಾಗಿ ಕಂಡುಬರುವ ಅಂಶಗಳನ್ನು ತೆಗೆದು ಸಂಗ್ರಹಿಸುವುದು. ವಿಷಯ ಸೂಚಿಯಾಗಿ ಇದನ್ನು ಹಲವಾರು ರೀತಿಯಲ್ಲಿ ಬಳಸಬಹುದು.

3.ಯಂತ್ರ ವರ್ಗೀಕರಣ : ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಕಂಪ್ಯೂಟರ್ ತಾನೇ ತರ್ಜುಮೆ ಮಾಡುವುದು. ಈ ದಿಕ್ಕಿನಲ್ಲಿ ಇನ್ನು ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ.

NLPಯಲ್ಲಿ ಬಳಸಲಾಗುವ ತಂತ್ರ ಅಥವ ವಿಧಾನ :

ಅನ್ವಯಿಕ NLPಯಲ್ಲಿ ನಾಲ್ಕು ವರ್ಗಗಳಿವೆ.

l ವಾಕ್ಯವನ್ನು ಪದಗಳಾಗಿ ಬಿಡಿಸಿ ಪ್ರತಿಪದದ ವ್ಯಾಕರಣಾನ್ವಯವನ್ನು ಹೇಳುವುದು ಪಾರ್ಸಿಂಗ್

l ಅರ್ಥಪೂರ್ಣವಾಗಿ  ವ್ಯಾಖ್ಯಾನಿಸುವುದು

l ಊಹೆಯ ಮೇರೆಗೆ ತರ್ಕಿಸಿ ತೀರ್ಮಾನಕ್ಕೆ ಬರುವುದು

ಪಾರ್ಸಿಂಗ್ ವ್ಯಾಕರಣಾನ್ವಯ ವಾಕ್ಯವನ್ನು ಪದಗಳಾಗಿ ಬಿಡಿಸಿ ಪ್ರತಿಪದದ ವ್ಯಾಕರಣಾನ್ವಯವನ್ನು ಹೇಳುವುದು, ಮೊದಲನೆ ಹಂತದಲ್ಲಿ ವಾಕ್ಯದ ಬಾಹ್ಯ ರೂಪವನ್ನು ಕಂಪ್ಯೂಟರ್ನ ಆಂತರಿಕ ಭಾಷೆಗೆ ತರ್ಜುಮೆ ಮಾಡುವುದು. ಇದು ಮುಂದೆ ಮಾಡುವ ಭಾಷಾ ಪ್ರಕ್ರಿಯೆಗೆ ಬಹಳ ಸಹಕಾರಿಯಾಗುತ್ತದೆ. ಇದರಲ್ಲೂ ಕೆಲವು ಹಂತಗಳನ್ನು ಗುರುತಿಸಲಾಗುತ್ತದೆ. ಏಕೆಂದರೆ ಸಹಜ ಭಾಷೆಯಲ್ಲಿ ಬರುವ ಸಂದಿಗ್ಧತೆ ಮುಖ್ಯ ಕಾರಣ. ಸಂದಿಗ್ಧತೆಯಲ್ಲೂ ಎರಡು ರೀತಿಗಳನ್ನು ನೋಡಬಹುದು.

1. ಅರ್ಥ ಸಂದಿಗ್ಧತೆ : ಕಾಲು – ಮನುಷ್ಯನ ಒಂದು ಅಂಗ ಅಥವಾ ಅಂಕಿಗಳ ಪ್ರಕಾರ ಕಾಲು ಭಾಗ

2. ರಚನಾತ್ಮಕ ಸಂದಿಗ್ಧತೆ

ಕಂಪ್ಯೂಟರ್ ಒಂದು ಸಮಸ್ಯೆ ಉತ್ತರಿಸುವ ಮೊದಲೇ ಈ ತೆರನಾದ ಆಂತರಿಕ ಸಂದಿಗ್ಧಗಳನ್ನು ನಿವಾರಿಸಿಕೊಳ್ಳಬೇಕು. ಇಲ್ಲವೇ ಸಂದಿಗ್ಧತೆಗೆ ಸಂಬಂಧಪಟ್ಟ ಪ್ರಧಾನವಾಗಿರುವ ವಾಸ್ತವಾಂಶಗಳನ್ನು ಮಾಹಿತಿ ಕೋಶದಲ್ಲಿ ಹಾಕಿರಬೇಕು. ವ್ಯಾಕರಣಾನ್ವಯ ಸಾಮಾನ್ಯವಾಗಿ ಒಂದು ಅರ್ಥಪೂರ್ಣ ವಾಗಿರುವ ವಾಕ್ಯವನ್ನು ಮಾತ್ರ ಪರಿಗಣಿಸುತ್ತದೆ. ಇದರಲ್ಲಿ ಮಿಕ್ಕ ಹಂತಗಳೆಂದರೆ,

n ಗ್ರಾಸದಲ್ಲಿ ಎಷ್ಟು ಸಾಧ್ಯವೋ ಅಷ್ಟು ಪರಿವಿಡಿಯನ್ನು ಒಳಗಿರುವ ರಚನಾಕೃತಿಯಲ್ಲಿ ತೆಗೆದಿರಿಸಿ ನಿರೂಪಿಸಬೇಕು.

n ಭಾಷಾಗ್ರಾಸದ ಸ್ವೀಕೃತಿ : ಅಂದರೆ, ಭಾಷೆಯ ಬಳಕೆಯಲ್ಲಿ ತಪ್ಪಿದಲ್ಲಿ ತಪ್ಪಾಗಿ ಸಂಯೋಜನೆಯಾಗಿರಲಿ, ರೂಢವಾಗಿರಲಿ, ಯಾವುದನ್ನು ಗಣಿಸದೆ ಗ್ರಾಸ ಸ್ವೀಕರಿಸಿ ಅನಂತರ ಪರಿಷ್ಕರಿಸುವುದು.

n ಸಮಸ್ಯೆಯ ಪರಿಹಾರ : ಆದಷ್ಟು ಶೀಘ್ರಗತಿಯಲ್ಲಿ ನಡೆಸಿಕೊಂಡು ಹೋಗುವ ಸಾಮರ್ಥ್ಯ ಪಡೆದಿರಬೇಕು.

ಈ ತಂತ್ರದಲ್ಲಿ ವ್ಯಾಕರಣಾನ್ವಯವಾಗುವುದಕ್ಕೆ ಮುಂಚೆ, ಪ್ರತಿಯೊಂದು ಶಾಖೆಯಲ್ಲೂ ಪದಗಳು ತಮ್ಮ ಸ್ಥಾನವನ್ನು ಹುಡುಕಿಕೊಂಡು ಸರಿಯಾದ ವ್ಯಾಖ್ಯಾನವೂ ಒಳಗಾಗಿ ನಂತರ ವ್ಯಾಕರಣಾನ್ವಯರಾಗುತ್ತದೆ. ಈ ಜಾಲದಲ್ಲಿ ಅಳವಡಿಸಿರುವ ವ್ಯಾಕರಣಕ್ಕೆ ಹೊರತಾಗಿರುವ ಯಾವುದನ್ನಾದರೂ ಗ್ರಾಸವಾಗಿ ಕೊಟ್ಟಲ್ಲಿ ಅದನ್ನು ಪ್ರಕ್ರಿಯೆ ಮಾಡಲು ಶಕ್ಯವಿರುವುದಿಲ್ಲ. ಆದ್ದರಿಂದ ಕಂಪ್ಯೂಟರ್ ಕೃತಕ ಬುದ್ದಿವಂತಿಕೆಯಲ್ಲಿ, ನಮ್ಮ ಬಳಕೆಗೆ ತಕ್ಕಂತಹ ಕಾರ್ಯ ಕ್ರಮವನ್ನು ರೂಪಿಸಿ, ಗ್ರಾಸಕ್ಕೆ ಬಳಸುವ ಭಾಷೆಯ ವ್ಯಾಕರಣಕ್ಕೆ ಸಂಬಂಧಪಟ್ಟಂತೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

ಆಂಗ್ಲ ಭಾಷೆ ಮತ್ತು ಕೆಲವು ಮುಖ್ಯ ಜಾಗತಿಕ ಭಾಷೆಗಳಾದ ಜರ್ಮನ್, ಫ್ರೆಂಚ್ ಮುಂತಾದ ಭಾಷೆಗಳಲ್ಲಿಪಾರ್ಸಿಂಗ್ ವ್ಯಾಕರಣಾನ್ವಯವು ತಂತ್ರಾಶ ಗಳಲ್ಲಿ ಲಭ್ಯವಿದೆ. ಭಾರತೀಯ ಭಾಷೆಗಳಲ್ಲೂ NLPಯ ಕೆಲಸ ಸಾಗುತ್ತಿದೆ. ಉದಾಹರಣೆಗೆ ಕನ್ನಡದಲ್ಲಿ ಈ ಕೆಳಕಂಡ NLP ಸಹಾಯಕಗಳು (NLP Tools) ರೂಪಿತವಾಗಿವೆ. ಉದಾಹರಣೆಗೆ –

1. Frequency Count

2. Statistical Analyzer

3. Sentence Analyser

4. KWIC-KWOC Retriever

5. Syllable Count

6. Automatic Tagger

7. Morphological Analser

ಮೇಲ್ಕಂಡ ಸಹಾಯಕಗಳು ಯೂನಿಕೋಡ್‌ನಲ್ಲಿ ತಯಾರಿಸಿರುವುದರಿಂದ ಯಾವ ಭಾರತೀಯ ಭಾಷೆಗೆ ಬೇಕಾದರೂ ಇವುಗಳನ್ನು ಬಳಸಬಹುದು. ಉದಾಹರಣೆಗೆ ಮೇಲೆ ಹೇಳಿದ ಕ್ರಮಸಂಖ್ಯೆ ಮೂರು Sentence Analyserನಲ್ಲಿ ಕನ್ನಡ ವಾಕ್ಯದ ಕೊನೆಯಲ್ಲಿ ವಿರಾಮ ಚಿಹ್ನೆಯಾಗಿ ಬಿಂದು (.) ಬಳಸಿದರೆ, ಹಿಂದಿ ಭಾಷೆಯಲ್ಲಿ ವಿರಾಮ ಚಿಹ್ನೆಯಾಗಿ (|) ಬಳಸುತ್ತಾರೆ. ಯಾವುದೇ ಭಾಷೆಯಲ್ಲಿನ ವಾಕ್ಯಗಳನ್ನು ಮೇಲ್ಕಂಡ ಸಹಾಯಕದಲ್ಲಿ ಹಾಕಿದರೆ ವಿಶ್ಲೇಷಿಸಿ ಕೊಡುತ್ತದೆ.

ಈ ಸಹಾಯಕಗಳನ್ನು ಕೆಳಕಂಡ ಕ್ರಿಯೆಗಳ ಕಾರ್ಯನಿರ್ವಹಣೆಗೆ ಬಳಸಬಹುದಾಗಿದೆ.

1. ಯಾಂತ್ರಿಕ ಅನುವಾದ (Machine Translation)

2. ವ್ಯಾಕರಣದ ತಿದ್ದುಪಡಿ (Grammatical Mistakes)

3. ಪದಗಳ ತಿದ್ದುಪಡಿ (Spell Checker)

4. ನಿಘಂಟು (Dictionary)

5. ವರ್ಗೀಕೃತ ಸಮಾನಾರ್ಥಕೋಶ (Thesaurus)

ಇನ್ನೂ ಮುಂತಾದವು.

ಈ ದಿಸೆ ಬಹಳ ಸಂಕೀರ್ಣವಾದುದು. ಒಂದು ಗೊತ್ತಾದ ಗುರಿ ಮುಟ್ಟುವ ದಿಕ್ಕಿನಲ್ಲಿ ಸಂಶೋಧನೆ ಇನ್ನೂ ಕಾರ್ಯಗತವಾಗುತ್ತಿದೆ. ನಮ್ಮ ಮಾತನ್ನು ಅರ್ಥಮಾಡಿಕೊಳ್ಳುವಂತಹ ಕಂಪ್ಯೂಟರ್ ಬಳಕೆಗೆ ಬಂದಲ್ಲಿ                                  NLPಗೆ ಸಂಬಂಧಪಟ್ಟ ಎಲ್ಲ ಅಂಶಗಳೂ ಉಪಕಾರಿಯಾಗುವುದರಲ್ಲಿ ಸಂದೇಹವಿಲ್ಲ.