ಕೃಷ್ಣ ಪಾರಿಜಾತ ಮತ್ತು ಭಾಮಾಕಲಾಪದಲ್ಲಿ ಸಂಗೀತವುಂಟು. ನೃತ್ಯದ ಒಂದು ಅವಿಭಾಜ ಅಂಗವಾಗಿದೆ ಸಂಗೀತ. ಈ ನೃತ್ಯ ನಾಟಕಗಳಲ್ಲಿ ಕೃಷ್ಣ ಪಾರಿಜಾತದ ಎಷ್ಟೋ ಭಾಗವತರು ಕಲಾವಿದರು ಶಾಸ್ತ್ರೀಯವಾಗಿ  ಸಂಗೀತವನ್ನು ಅಧ್ಯಯನ ಮಾಡುವವರು ಇಲ್ಲಿ ಅನುಕರಣೆಯೇ ಮುಖ್ಯ ಗುರು. ಹಾಡನ್ನು ಇಂತಹ ಹಾಡಿನ ದಾಟಿಯಲ್ಲಿ ಎಂದು ಜ್ಞಾಪಕದಲ್ಲಿಟ್ಟುಕೊಂಡು ಹಾಡುವ ಸಂಪ್ರದಾಯದ ಸ್ಪಷ್ಟ ಹೊಳಪು ಇಲ್ಲಿದೆ. ಅನೇಕ ಪಾರಿಜಾತ ಆಟಗಳಲ್ಲಿ ಇಂದು ಚಲನಚಿತ್ರದ ಧಾಟಿಗಳನ್ನು-ಹಾಡುಗಳನ್ನೂ ಸಹ ಸೇರಿಸಿದ್ದಾರೆ. ಹಾಡಿನ ಕೆಲವು ರಾಗ, ತಾಳಗಳ ವಿಚಾರವಾಗಿ ತಂಡದ ಭಾಗವತರಿಂದ ಕೇಳಿ ಬರೆದುಕೊಂಡಿದ್ದ ಇಲ್ಲಿಯ ವಿದ್ವಾಂಸರಿಂದ ತಿದ್ದುಪಡಿಯಾಗಿವೆ. ಕಾರಣವಿಷ್ಟೆ ನಮ್ಮ ನಾಡಿನಲ್ಲಿ ಈ ಕಲಾವಿದರ ತಯಾರಿಕೆಯಲ್ಲಿ ವ್ಯವಸ್ಥಿತ ವ್ಯವಸ್ಥೆ ಇಲ್ಲ. ಇದು ದುರ್ದೈವದ ಸಂಗತಿ. ಕೂಚಿಪುಡಿಯಲ್ಲಿ ವ್ಯವಸ್ಥಿತ ವ್ಯವಸ್ಥೆ ಇದ್ದು ಚಿಕ್ಕಂದಿನಿಂದಲೇ ಕಲಾವಿದನ ಸಂಗೀತಶಾಸ್ತ್ರದ ಅಧ್ಯಯನ ಕ್ರಮಬದ್ಧವಾದ ಹಾಡುಗತಿಗಳ ಹೆಜ್ಜೆ ಹಾಕುವುದರ ವಿಧಾನವನ್ನು ಗುರು ಮುಖಾಂತರ ಕಲಿಯುವ ಅವಕಾಶ ಉಂಟು. ಪಾರಿಜಾತದ ಹಾಡು ಮತ್ತು ನೃತ್ಯ ಅನುಕರಣದಿಂದಾಗಿಯೇ ವಿನಃ ಶಾಸ್ತ್ರ ಅಧ್ಯಯದಿಂದಲ್ಲ. ಅಲ್ಲಲ್ಲಿ ಸೂಚಿಸಿದ ರಾಗ, ತಾಳಗಳು ಶುದ್ಧ ಕರ್ನಾಟಕ ಸಂಗೀತದಿಂದ ಅಯ್ದು ಕೊಂಡಂಥವುಗಳು. ಕೂಚಿಪುಡಿಯ ಭಾಮಾ ಕಲಾಪದಲ್ಲಿಯೂ ಇದೇ ಸಂಗೀತವನ್ನು ಅಳವಡಿಸಿದೆ. ಕಾರಣ ಈಗ ಸಂಗೀತ, ರಾಗ, ತಾಳಗಳ, ವಿಹಂಗಮ ನೋಟವನ್ನು ಇಲ್ಲಿ ಕೊಡಲಾಗಿದೆ.

ಸಂಗೀತ :

ಲಲಿತಕಲೆಗಳಲ್ಲಿ ಅತ್ಯಂತ ಶೇಷ್ಠವಾದ ಕಲೆ ಸಂಗೀತ. ಮನಸ್ಸಿಗೆ ರಂಜನೆಯನ್ನುಂಟು ಮಾಡುವ ಧ್ವನಿಗಳ ಶಾಸ್ತ್ರವೇ ಸಂಗೀತಶಾಸ್ತ್ರವಾಗಿದೆ. ಸಂಗೀತವು ಪುರಾತನ ಕಾಲದಿಂದ ಪೋಷಿಸಿ, ಬೆಳಸಲ್ಪಟ್ಟ ಕಲೆ. ಸಂಸ್ಕೃತದ ಒಂದು ಸುಭಾಷಿತದಲ್ಲಿ “ಸಂಗೀತ ಸಾಹಿತ್ಯ ಕಲಾವಿಹೀನ ಸಾಕ್ಷಾತ್ಪಶುಃ ಪುಜ್ಯನಿಷಾಣ ಹೀನಃ ಅಂದರೆ ಸಂಗೀತ ಸಾಹಿತ್ಯದ ಜ್ಞಾನವಿಲ್ಲದವನು ಬಾಲ, ಕೊಂಬುಗಳಿಲ್ಲದ ಪಶುವಿಗೆ ಸಮಾನ ಎಂದು ಹೇಳಿದೆ. ಸಂಗೀತವು ಸುಸ್ವರ. ಸುರಸ, ಸುರಾಗ, ಮಧುರಾಕ್ಷರ, ಸಾಲಂಕಾರ ಮತ್ತು ಸಪ್ರಮಾಣ ಈ ಆರು ಘಟಕಗಳಿಂದ ಆಗಿದೆ. ಈಗ ಪ್ರತಿ ಘಟಕದ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಳ್ಳೋಣ. ಗೀತಂ ವಾದ್ಯಂ ನೃತ್ಯಂ ತ್ತಾಯಂ ಸಂಗೀತವಚ್ಚತೇ ಅಂದರೆ ಗಾತ್ರ ಸಂಗೀತ ವಾದ್ಯ ಸಂಗೀತ ನೃತ್ಯ ಇವೆಲ್ಲಾ ಸೇರಿದ್ದೇ ಸಂಗೀತವೆಂದು ಪೂರ್ವಜರು ಹೇಳಿದರೂ, ಜ್ಞಾನದ ಹರವು ಹೆಚ್ಚಿ ಪ್ರತಿಯೊಂದು ಪ್ರತ್ಯೇಕ ಶಾಖೆಯಾಗಿ ನೃತ್ಯವು ಸಂಗೀತದಿಂದ ಬೇರ್ಪಟ್ಟು ಇನ್ನೊಂದು ಶಾಸ್ತ್ರವಾಗಿ ಬೆಳವಣಿಗೆ ಪಡೆಯಿತು.

ಸುಸ್ವರ:

ಇಂಪಾದ ಧ್ವನಿಗೆ ನಾದವೆಂದು ಹೆಸರು. ನಾದದಿಂದ ಶೃತಿ, ಶೃತಿಗಳಿಂದ ಸ್ವರಗಳು, ಸ್ವರಗಳಿಂದ ರಾಗಗಳೂ ಉಂಟಾಗಿವೆ. ನಾದವನ್ನು ಅಹತ ಅಂದರೆ ಸ್ವಾಭಾವಿಕವಾಗಿ ಉಂಟಾದ ನಾದ, ಅನಾಹತ-ಪ್ರಯತ್ನದಿಂದ ಉದ್ಭವಿಸಿದ್ದು ಎಂಬ ಎರಡು ವಿಧಗಳಿವೆ. ಸ್ವರಗಳ ಗುಣಕ್ಕನುಸಾರವಾಗಿ ಶಾರೀರಜ, ನಖಜ, ಧನುರ್ಜ ಇತ್ಯಾದಿ ೬ ವಿಧಾನಗಳಿವೆ, ಸ್ವರ ಎಂಬಲ್ಲಿ ಸ್ವ ಎಂಬುದು “ಸ್ವಯಂ” ರ ಎಂಬುದು “ರಂಜನೆ” ಎಂಬ ಅರ್ಥವನ್ನು ಹೊಂದಿದೆ. ಸ್ವರಗಳು ಏಳು ವ್ಯವಹಾರದ ಸಂಕೇತಾಕ್ಷರಗಳು, ಸ, ರಿ, ಗ, ಮ, ಪ, ಧ, ನಿ, ಎಂದಿದ್ದರೂ ಅವುಗಳ ಮೂಲ ಹೆಸರು ಕ್ರಮವಾಗಿ ಷಡ್ಜ, ರಿಷಧ, ಗಾಂಧಾರ, ಮಧ್ಯಮ, ಪಂಚಮ, ಧೈವತೆ ಮತ್ತು ನಿಷಾದ. ಇಲ್ಲಿ ಮೊದಲನೆಯ ಮತ್ತು ಐದನೆಯದರಲ್ಲಿ ಏರಿಳಿತಗಳಿಲ್ಲ. ಉಳಿದ ಸ್ವರಗಳು ಕೋಮಲ ಮತ್ತು ತೀವ್ರ ಎಂದು ಎರಡು ಬಗೆಯದಿವೆ. ಕಾರಣ ಒಟ್ಟಿನಲ್ಲಿ ಹನ್ನೆರಡು ಸ್ವರಗಳಾಗುತ್ತವೆ. ಒಂದು ಸ್ವರವು ಲಘು ಮಂದ್ರಸ್ಥಾಯಿಯಲ್ಲಿ ಸಾಗಬಹುದು.

ಸುರಸ :

ಕಲೆಯು ರಸದಿಂದ ಕೂಡಿದೆ. ರಸದ ಬಗ್ಗೆ ಕನ್ನಡದ ಲಾವಣಿಕಾರ ಮಂಗ ರಾಜರು “ರಸಸ್ಥಿತಿಯಂ ಪೊರಗೆ ಪಟ್ಟುವ ಮನೋವಿಕಾರಂ ಸ್ವಭಾವ ಮಕ್ಕು-ಅದು ರಸಮೇನಿಕ್ಕು” ಎಂದಿದ್ದಾರೆ. ಅಂದರೆ ಮನೋವಿಕಾರವು ರಸವನ್ನುಂಟು ಮಾಡುತ್ತದೆಂದು. ರಸಗಳಲ್ಲಿ ವೀರರಸ, ರೌದ್ರರಸ, ಭಯಾನಕ ರಸ, ಶೃಂಗಾರ ರಸ, ಅದ್ಭುತ ರಸ, ಕರುಣಾರಸ, ಭೀಬತ್ಸರಸ ಮತ್ತು ಶಾಂತರಸ ಮತ್ತು ಹಾಸ್ಯರಸ ಹೀಗೆ ನವರಸಗಳು ಉಂಟು.

ಸುರಾಗ :

ನಮ್ಮ ಸಂಗೀತವು ರಾಗ ಮತ್ತು ತಾಳ ಪ್ರಾಧಾನ್ಯತೆಯನ್ನು ಪಡೆದಿದೆ. ಒಂದು ರಾಗದ ಸ್ವರೂಪವು ಆಯಾ ರಾಗಕ್ಕುನುಗುಣವಾದ ಒಂದು ನಿರ್ದಿಷ್ಟವಾದ ಲೇಪನಗಳುಳ್ಳ ಸ್ವರಗಳಿಂದ ಹೊರಹೊಮ್ಮುತ್ತದೆ, ರಸಾಯನ ಶಾಸ್ತ್ರದಲ್ಲಿ ಸಂಯುಕ್ತಗಳ ಸಂಕೇತಗಳಿದ್ದಂತೆ ಎನ್ನಬಹುದು. ರಾಗಗಳು ರಸಾನುಭವವನ್ನುಂಟು ಮಾಡುತ್ತವೆ. ರಾಗಗಳು ಕಲ್ಪಿತ ಮತ್ತು ಮನೋಧರ್ಮ ಸಂಗೀತ ಪರಂಪರೆಯು ವಾಗ್ಗೆಯಕಾರರಿಂದ ಮುಂದೊರೆಯಿಸಲ್ಪಡುತ್ತದೆ. ನಿಶ್ಚಿತ ರೂಪ ತಾಳಿದರೂ, ಬೆಳವಣಿಗೆಯ ಅಂಶ ವಿದ್ವಾಂಸರಿಂದ ತುಂಬಲ್ಪಡುತ್ತದೆ. ಆದರೆ ಅತೀ ಖಚಿತವಾಗಿ ‘ರಂಜಯತಿ ಇತಿ ರಾಗ’ ಎಂದಿರುವುದರಿಂದ ರಂಜನೆಯನ್ನು ಒದಗಿಸುವುದೇ ರಾಗದ ಮುಖ್ಯ ಉದ್ದೇಶ. ಸ್ವರ ವರ್ಣಗಳ ಸಮೂಹ ಅಥವಾ ವರಿಸೆ ಕ್ರಮಗಳನ್ನೇ ರಾಗಗಳೆಂದು ಕರೆಯುತ್ತೇವೆ. ಕಿವಿಗಳಿವೆ ಇಂಪಾದ ಸ್ವರಗಳ ಜೋಡಣೆಯೇ ರಾಗ ಆಧಾರ ಷಡ್ಜಕ್ಕೆ ನಿರ್ದಿಷ್ಟವಾದ ಸಂಬಂಧವನ್ನು ಹೊಂದಿ ನಿಶ್ಚಿತ ವರಿಸೆಯ ಕ್ರಮದ ಸ್ವರ ಸಂಚಾರವೇ ರಾಗ. ಒಂದು ರಾಗದಲ್ಲಿ ಪ್ರಯೋಗಿಸಬಹುದಾದ ಪ್ರಯೋಗಗಳನ್ನು ಉಪಯೋಗಿಸಿ ಆ ರಾಗದ ಲಕ್ಷಣವು ಹೊರಹೊಮ್ಮುವಂತೆ ಮಾಡುವ ವಿಧಾನವನ್ನೇ ರಾಗಾಲಾಪನೆಯೆಂದು ಕರೆಯುತ್ತೇವೆ. ರಾಗದ ಆರೋಹಣ ಅವರೋಹಣ ಮೇಳಕರ್ತ ಜನ್ಯ ಯಾವುದೆಂಬುದರ ಅರಿವು ರಾಗವನ್ನು ಅರಿಯಲು ಅವಶ್ಯ. ಜನಕ ಮತ್ತು ಜನ್ಯ ಎಂಬ ಎರಡು ವಿಧಧ ರಾಗಗಳಿವೆ. ಮೇಳಕರ್ತಗಳ ವ್ಯವಸ್ಥೆ ಕ್ರಮ ಅತ್ಯಂತ ವಿಸ್ತಾರಹೊಂದಿದ ಅಧ್ಯಯವಾಗಿದ್ದು ೭೨ ಮೇಳ ಕರ್ತ ರಾಗಗಳನ್ನು ಪೂರ್ವ ಮೇಳ ಕರ್ತ ಮೊದಲಿನ ೩೬ ನಂತರದ ೩೬ ನ್ನು ಉತ್ತರ ಮೇಳ ಕರ್ತ ರಾಗಗಳೆಂದು ವರ್ಗೀಕರಿಸಿದ್ದಾರೆ. ಕಾಂಬೋಜಿರಾಗದ ವಿವರವನ್ನು ತಿಳಿದು ಮುಂದಕ್ಕೆ ಸಾಗೋಣ. ‘ಏಕೆಂದರೆ ರಾಗದ ಅಧ್ಯಯನ ಗುರು ಮುಖದಿಂದ ಸಾಧ್ಯವೆನ್ನುವಷ್ಟು ಶಾಸ್ತ್ರೀಯವಾಗಿದೆ.

ಜನ್ಯರಾಗ :

ಆರೋಹಣ ಮತ್ತು ಅವರೋಹಣಗಳಲ್ಲಿ ಹೊಂದಿದ ಸ್ವರಗಳ ಸಂಖ್ಯೆ ಕ್ರಮವಾಗಿ ೬, ೭ ಮೇಳಕರ್ತದ ಸಂಖ್ಯೆ ೨೮ ಬರೆಯುವ ರೀತಿ ಇಂತಿದೆ :

ಸ ರಿ ಗ ಮ ಪ ದ ಸ
ಸ ನಿ ದ ಪ ಮ ಗ ರಿ ಸ

ರಾಗಗಳನ್ನು ವಿವಿಧ ರೀತಿಯಲ್ಲಿ ವರ್ಗೀಕರಿಸುವ ಪರಿಪಾಠವಿದೆ. ನೃತ್ಯ ಮತ್ತು ಸಂಗೀತದಲ್ಲಿ ರಸಗಳನ್ನು ಸೂಚಿಸಿರುವ ರಾಗಗಳ ವಿಧಾನವೂ ಉಂಟು. ಉದಾಹರಣೆಗಾಗಿ

ಶೃಂಗಾರ ರಸ-ರಾಗ :  ಹುಸೇನಿ
ವೀರ ರಸ-ರಾಗ ನಾಟೆ
ಹಾಸ್ಯ ರಸ- ಕಾಂಭೋಜಿ

ನಾಟ್ಯಕಾರನಿಗೆ ಸಂಗೀತದ ಎಲ್ಲಾ ಅನುಭವಗಳು ಅಗತ್ಯ ಆದರೆ ಸಂಗೀತ ಬಾರದವರಿಗೆ ನಾಟ್ಯ ಬರುವುದೆಂದಲ್ಲ. ನೃತ್ಯ ಕಲಾವಿದರಿಗೆ ಸಂಗೀತ ಒದಗಿಸಲು ಹಿಮ್ಮೇಳ ಗಾಯಕರಿರುವುದರಿಂದ ನೃತ್ಯ ಕಲಾವಿದ ಹಾಡಿದ ರಾಗಕ್ಕೆ ಅನುಗುಣವಾದ ರಾಗಸ್ವರೂಪವನ್ನು ತನ್ನ ವಿವಿಧ ಅಂಗಾಗಗಳ ಚಲನೆಯಿಂದ ಸ್ಫೂಟವಾಗಿ ವ್ಯಕ್ತಪಡಿಸಲು ಶಕ್ತನಾಗಿರಬೇಕು. ಹಾಡುತ್ತಾ ನೃತ್ಯ ಮಾಡಬಹುದಾದರೂ ಅಭಿನಯ, ಅಂಗಾಂಗಗಳ ಚಲನೆಯಿಂದ, ಅಯಾಸವಾಗಿ ರಸಾಭಾಸವಾಗುವ ಪ್ರವೇಯ ಒದಗಬಹುದು. ಕಾರಣ ನೃತ್ಯ ಕಲಾವಿದರು ಸಂಗೀತ ತಿಳಿದು, ರಾಗಮಾರ್ಗವನ್ನು ತಿಳಿದರೆ ಸಾಕು ಮಧುಕರವೆಂದರೆ ತಾಳಕ್ಕೆ ಸರಿಯಾಗಿ ರಾಗ ರಚನೆಯಲ್ಲಿಯ ಹೃಸ್ವ ದೀರ್ಘ, ಅಕ್ಷರಗಳ ಸಮೂಹ ಸಾಹಿತ್ಯ ರಚನೆಯಲ್ಲಿ ಕವಿಯು ಬೆಳೆಸಿದ ಪದ ಲಾರಿತ್ಯ; ಕ್ಷೇತ್ರ ಯ್ಯನ ಪದಗಳ ಲಾರಿತ್ಯ, ಒಂದೇ ಅಕ್ಷರವು ಅಡಿಗಡಿಗೆ ಬರಲು ರಂಜನೆ ಹೆಚ್ಚುತ್ತದೆ.

ಅಲಂಕಾರ :

ಅಲಂಕಾರವೆಂದರೆ ವರ್ಣನೆ. ಇದು ತಾಳಗಳಿಗೂ ಮತ್ತು ವರ್ಣಗಳಿಗೂ ಅನ್ವಯಿಸುತ್ತದೆ. ತಾಳಗಳ ಅಲಂಕಾರಗಳನ್ನು ತಾಳ ವಿಭಾಗದಲ್ಲಿ ಚರ್ಚಿಸಿದೆ. ಈಗ ನಾಟ್ಯ ಸಂಗೀತದ ಕೆಲವು ಸಂಗತಿಗಳನ್ನು ಅಲಂಕಾರಕ್ಕೆ ಸಂಬಂಧಿಸಿದವುಗಳನ್ನು ನೋಡೋಣ. ಅಂದಕಾರಿಕ ಅಂಗಗಳು ಕೃತಿಯ ಧಾತುವಿನ ರಂಜನೆಯನ್ನು ಹೆಚ್ಚಿಸುತ್ತವೆ. ರಾಗಭಾವವನ್ನು ವ್ಯಕ್ತಪಡಿಸಲು ರಚನೆಯ ವರ್ಣಮೆಟ್ಟನ್ನು ಸ್ವರ ಸಂಚಾರವು ನಿಯಂತ್ರಿಸಿದೆ. ಇದನ್ನು ಚಿಟ್ಟೀಸ್ವರ ಎಂದು ಕರೆಯುತ್ತಾರೆ. ಆದಿ ತಾಳದಲ್ಲಿ ೨ ಅಥವಾ ೪ ಆವರ್ತಗಳಿದ್ದರೆ ಛಾಪು ತಾಳದ ಚಿಟ್ಟಿ ಸ್ವರಗಳಲ್ಲಿ ೮ ಅಥವಾ ೧೬ ಆವರ್ತಗಳಿವೆ. ಅನುಪಲ್ಲವಿ ಮತ್ತು ಚರಣದ ನಂತರವೂ ಒದಗಿಸಿದ್ದಲ್ಲಿ ಅದನ್ನು ಅನುಪಲ್ಲವಿ ಮತ್ತು ಚರಣವಾದ ಮೇಲೆ ಹಾಡಬೇಕು. ಅನುಪಲ್ಲವಿಯ ಕೊನೆಯ ಭಾಗದಲ್ಲಿ ಅಥವಾ ಚರಣದ ಬರುವ ಸಾಹಿತ್ಯವು ಕಲ್ಪನಾ ಸ್ವರವನ್ನು ಹಾಡಲು ಅವಕಾಶವನ್ನೊದಗಿಸುತ್ತದೆ.

ಸಪ್ರಮಾಣವು ಪಲ್ಲವಿ, ಅನುಪಲ್ಲವಿ ಮತ್ತು ಚರಣಗಳ ನಿಕರವಾದ ಜ್ಞಾನ ಪಡೆದು ಸಂಗೀತ ಹೊರಹೊಮ್ಮಿಸುವ ವಿಧಾನ. ಸಂಗೀತ ರಚನೆಗಳಲ್ಲಿ ಕಲ್ಪಿತ ಸಂಗೀತ ಮತ್ತು ಮನೋಧರ್ಮ ಸಂಗೀತವೆಂದು ಎರಡು ಭಾಗಗಳಿದ್ದು ನಾಟ್ಯಕ್ಕಾಗಿ ಏರ್ಪಟ್ಟ ರಚನೆಗಳನ್ನು ನೃತ್ಯ ಸಂಗೀತವೆಂದೂ, ಗೇಯ ನಾಟಕ ಮತ್ತು ನೃತ್ಯ ನಾಟಕಕ್ಕಾಗಿ ರಚಿಸಿದ ರಚನೆಗಳು ಜಾನಪದ ಗೀತೆಗಳೆಂದು ಸಂಗೀತ ರಚನೆಗಳನ್ನು ವಿಭಜಿಸಬಹುದು. ನೃತ್ಯ ಪ್ರಬಂಧಗಳು ನಾಟ್ಯಕ್ಕಾಗಿ ಏರ್ಪಟ್ಟ ರಚನೆಗಳು ಅನೇಕ ಬಗೆಯ ಗೀತ ಪ್ರಬಂಧಗಳಿಂದ ಕೂಡಿರುತ್ತದೆ. ಗೇಯನಾಟಕದ ಮತ್ತು ನೃತ್ಯ ಸಂಗೀತ ಇವು ಶುದ್ಧ ಸಂಗೀತವೆನಿಸಿ ಮನೋಧರ್ಮ ಸಂಗೀತಕ್ಕೆ ಅನ್ವಯಿಸಿದೆ.

ತಾಳ :

ಕರ್ನಾಟಕ ಸಂಗೀತದಲ್ಲಿ ತಾಳ ಪದ್ಧತಿಯು ಕಠಿಣ ಮತ್ತು ತೊಡಕಿನಿಂದ ಕೂಡಿದ ಅಂಶ. ತಾಳಗಳ ಸ್ವರೂಪವನ್ನು ತಿಳಿಯುವುದು ದಕ್ಷಿಣದಿಂದ ಬೀಸುವ ಗಾಳಿಯ ಸ್ವರೂಪವನ್ನು ಕಂಡು ಹಿಡಿದಷ್ಟು ಕಠಿಣವೆಂದು ತಮಿಳು ಕವಿ ವ್ಯಾಖ್ಯಾನಿಸಿದ್ದಾನೆ. ಮಾರ್ಗ ಮತ್ತು ದೇಶಿ ಎಂದು ಎರಡು ವಿಧಧ ತಾಳಗಳಿದ್ದು ಒಟ್ಟು ೧೦೮ ಎಂದು ಪ್ರಾಚೀನ ಸಂಗೀತಶಾಸ್ತ್ರಗಳಲ್ಲಿ ಹೇಳಿದೆ. ಈಗ ೩೫ ತಾಳಪದ್ಧತಿಗಳು ಬಳಕೆಯಲ್ಲಿದ್ದರೂ ನೃತ್ಯಸಂಗೀತದಲ್ಲಿ ಪರಿಮಿತ ತಾಳಗಳ ಉಪಯೋಗ ಕಂಡು ಬರುತ್ತದೆ. ಸಪ್ತ ತಾಳಗಳು, ದೈವತಾಳ (ಚತುರಶ್ರಜಾತಿ ) ಮಠ್ಯತಾಳ, ರೂಪಕತಾಳ, ಝುಂಪೆತಾಳ, ತ್ರಿಪುಟತಾಳ ಆಟತಾಳ ಮತ್ತು ಏಕತಾಳ ಇಲ್ಲಿ ಝೊಂಪೆ ಮಿಶ್ರಜಾತಿ ತ್ರಿಪುಟ ತಿಶ್ರಜಾತಿ ಆಟ ತಾಳವು ಖಂಡಜಾತಿಯದು ಮತ್ತು ಬೇಕತಾಳವೆಂದರೆ ಚರುರಶ್ರಜಾತಿಗೆ ಸೇರಿದೆ ಈ ಏಳು ತಾಳಗಳಲ್ಲಿಯ ಲಘುಜಾತಿಯ ಬದಲಾವಣೆಯಿಂದ ೩೫ ಆಗಿದೆ. ತಾಳಗಳನ್ನು ನಿರೂಪಿಸಲು ಪ್ರತಿಯೊಂದಕ್ಕೆ ಒಂದೊಂದು ಅಲಂಕಾರವಿದೆ. ತಾಳದ ಇತರ ಅಂಗಗಳೆಂದರೆ ಅನುದ್ರುತ, ದ್ರುತ, ಗುರು, ಪ್ಲುತ ಮತ್ತು ತಾಕಪಾದ, ರೂಪಜ ತಾಳವು ತಿಶ್ರ, ಚತುರಶ್ರ, ಖಂಡ, ಮಿಶ್ರ ಮತ್ತು ಸಂಕೀರ್ಣ ಜಾತಿ ಪಡೆಯಲು ಆಗ ಕ್ರಮವಾಗಿ ೫, ೬, ೭, ೯, ೧೧ ಅಕ್ಷರ ಕಾಲಗಳನ್ನು ತೆಗೆದುಕೊಳ್ಲುತ್ತದೆ. ಅಂದರೆ ತಿಶ್ರಜಾತಿಯಿರಲು.

ಸ ರಿ, ಗ ಮ ಪ೨-೩ ಅಕ್ಷರ ಕಾಲಗಳನ್ನು ಪಡೆಯುತ್ತದೆ.
ರಿ ಗ, ಮ ಪ ದ
ಗ ಮ, ಪ ದ ನಿ
ಮ ಪ, ದ ನಿ ಸ
ಸ ನಿ, ದ ಪ ಮ
ನಿ ದ, ಪ ಮ ಗ
ದ ಪ, ಮ ಗ ರಿ
ಪ ಮ, ಗ ರಿ ಸ

ಕರ್ನಾಟಕ ಸಂಗೀತ ಸಂಪ್ರದಾಯದ ತಾಳಾಂಗವೇ ಭರತನಾಟ್ಯದ ತಾಳಾಂಗವು. ತಾಳ, ಲಯ, ಗತಿಗಳ ವಿಸ್ತಾರವಾದ ವಿವರಣೆ ಭರತನ ನಾಟ್ಯದಲ್ಲಿ ಬಂದಿದೆ. ನಾಟ್ಯದ ಹೆಜ್ಜೆ ವಿನ್ಯಾಸವು ಅಂಗ ಭಂಗಿಮಗಳಲ್ಲಿ ವ್ಯಕ್ತವಾಗುತ್ತದೆ. ನಾಟ್ಯದಲ್ಲಿ ತಾಳವನ್ನು ಪ್ರತ್ಯಕ್ಷ ಪಡಿಸುವುದೇ ಜತಿಲಯವು. ತಾಳವನ್ನು ನಿಯಂತ್ರಿಸುವುದರಿಂದ ಲಯ ಪ್ರಮಾಣದ ತಿಳಿವಳಿಕೆ ಕಲಾವಿದನಿಗೆ ಅವಶ್ಯ. ಲಯ ಪ್ರಮಾಣಗಳನ್ನು ಮೂರು, ನಾಲ್ಕು, ಒಂದು, ಏಳು, ಒಂಭತ್ತು ಹೀಗೆ ಪರಿಗಣಿಸಿದೆ. ಅದನ್ನೇ ತಿಶ್ರ ಚತುರಶ್ರ ಇತ್ಯಾದಿಯಾಗಿ ಈ ಮೊದಲೇ ಹೇಳಿದಂತೆ ಕರೆಯುವುದುಂಟು. ತ್ರಿಶ್ರಜಾತಿಯ ನುಡಿತವು ತಕಿಟ ಎಂದು ಹೇಳಬಹುದು. ಆದರೆ ಇಲ್ಲಿಯ ಮೂರು ಅಕ್ಷರಗಳನ್ನು ಗಿಣದ, ಕಿಟತ, ನಂಕಿಟ ತೊಂಕಿಟ ಇತ್ಯಾದಿಯಾಗಿ ಹೇಳಬಹುದು. ಲಯ ವಿನ್ಯಾಸವು ಕತ್ತವಿನ ಪಾಂಡಿತ್ಯವನು, ರಂಜನೆಯ ಮನೋಧರ್ಮವನ್ನು ಅವಲಂಬಿಸಿದೆ. ಚತುರಶ್ರ ಜಾತಿ ಕಿಟಡಕ ಇದನ್ನು ತಕಿಟ–ಕಿಟತ ಎಂಬುದಾಗಿ ತಿಶ್ರವನ್ನಾಗಿ ನುಡಿಸಬಹುದು. ಇಲ್ಲಿ ಶೂನ್ಯ ಸ್ಥಾನವನ್ನು ಸೂಚಿಸುತ್ತದೆ. ಇಲ್ಲಿಗೆ ಮುಗಿಯಿತು ಎಂಬುದನ್ನು ಸೂಚಿಸಲು ಸಂಜ್ಞಾತ್ಮಕ ಶಬ್ದಗಳಿವೆ. ಒಂದೇ ನುಡಿಯನ್ನು ಮೂರು ಸಲ ನುಡಿಸುವುದು ಮುಕ್ತಾಯದ ಲಕ್ಷಣವೆಂದು ಸಾಮಾನ್ಯವಾಗಿ ಪರೀಗೃತವಾಗಿದೆ. ನಾಟ್ಯದಲ್ಲಿ ತದಗಿಣತೊಂ ಎಂಬ ಜಲೆಗೆ ತಕ್ಕಂತೆ ಹೆಜ್ಜೆ ಹಾಕಲಾಗುವುದು. ಒಂದಕ್ಷರಕ್ಕೆ ಒಂದೇ ಘಾತವನ್ನೋ ಇಲ್ಲವೆ ಎಡದಿನಿಂದ ಅಥವಾ ಸಮದಿಂದ ಕೂಡಿದ ಎರಡು. ಮೂರು, ನಾಲ್ಕು ಘಾತಗಳನ್ನೋ ನುಡಿಸಬಹುದು. ಪದಘಾತವು ಮೊದಲನೆಯ ಅಥವಾ ಕೊನೆಯ ಅಕ್ಷರಕ್ಕಿರಬಹುದು. ಹೆಜ್ಜೆಗಳು ಲಯ ವಿನ್ಯಾಸದಲ್ಲಿ ಶೂನ್ಯ ಕುಂಚಿತ ಮತ್ತು ಪ್ರಫುಲ್ಲಿತ ಎಂಬ ಭೇದಗಳನ್ನು ಹೊಂದಿದೆ.