ನನಗೆ ಯಾವುದೇ ಇಂಟರ್ವ್ಯೂ ಎದುರಿಸಲು ಅತಿ ಭೀತಿ. ಇಲ್ಲಿಯವರೆಗೂ ಎದುರಿಸಿದ ಹಲವಾರು ಸಂದರ್ಶನಗಳಲ್ಲಿ ಅನುತ್ತೀರ್ಣಳಾಗಿದ್ದೆನೆ. ನಾನು ಇಪ್ಪತ್ತೆರಡು ವರ್ಷದ ತರುಣಿ ಕಳೆದ ವರ್ಷ ಎಲೆಕ್ಟ್ರಾನಿಕ್, ಕಮ್ಯೂನಿಕೇಷನ್ ಡಿಪ್ಲೋಮಾ ಪಾಸಾಗಿದ್ದು ಕೆಲಸ ಹುಡುಕುತ್ತಿದ್ದೇನೆ. ಸಂದರ್ಶನ ಕಾಲದಲ್ಲಿ ಆಗುವ ಅನುಭವದಿಂದ ನನ್ನಲ್ಲಿ ಅತೀವ ಬೇಜಾರು, ಜಿಗುಪ್ಸೆ, ಆತಂಕ ಉಂಟಾಗಿವೆ. ನನಗೆ ಏನೂ ತೋಚದಂತಾಗುತ್ತದೆ, ಎಷ್ಟೇ ತಯಾರಿ ನಡೆಸಿದರೂ ಒಂದು ಪ್ರಶ್ನೆಗೆ ಉತ್ತರ ಹೇಳಲು ಅಸಮರ್ಥಳಾಗಿರುತ್ತೇನೆ.

ಹುಟ್ಟೂರು ಕುದುರೇಮುಖ. ಕಾನ್ವೆಂಟಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಈಗ ಕೆಲಸದ ಅನ್ವೇಷಣೆಗೆ ಬೆಂಗಳೂರಿಗೆ ಬಂದಿದ್ದೇನೆ. ಒಳ್ಳೆಯ ಕೆಲಸ ದೊರೆತು ಪಾರ್ಟ್ ಟೈಂ ಅಭ್ಯಾಸ ಮುಂದುವರೆಸಿ ಹೆಚ್ಚು ಓದಬೇಕೆಂಬ ಆಸೆ ನನ್ನಲ್ಲಿದೆ. ನಾನು ಯಾವಾಗಲೂ ಭಾವನಾತ್ಮಕ ಜೀವಿ ಮತ್ತು ಹೋಂಸಿಕ್, ಮನೆಯಲ್ಲಿ ಮದುವೆಗೆ ಪ್ರಯತ್ನ ನಡೆಸಿದ್ದಾರೆ. ಆದರೆ ನಾನು ಒಳ್ಳೆ ಕೆಲಸ ದೊರೆತು ಜೀವನದಲ್ಲಿ ಸೆಟ್ಲ್ ಆಗುವ ತನಕ ಮದುವೆಯಾಗಬಾರದೆಂದು ನಿರ್ಧರಿಸಿದ್ದೇನೆ. ಸಂದರ್ಶನಕ್ಕೆ ಸಂಬಂಧಿಸಿದ ಭೀತಿ ನಿವಾರಿಸಿ ನನಗೆ ಸಹಾಯ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.

ನಿಮಗಿರುವ ಸಮಸ್ಯೆ ಕೇವಲ ಒಂದು ವೈಯಕ್ತಿಕ ಪ್ರಕ್ರಿಯೆ ಎಂದು ನೀವು ಭೀತರಾಗಬೇಕಿಲ್ಲ. ನಿಮ್ಮೊಡನೆ ಸಂದರ್ಶನಕ್ಕೆ ಅಭ್ಯರ್ಥಿಗಳಾಗಿ ಬಂದ ಇತರರಲ್ಲಿ ಶೇಕಡ ತೊಂಭತ್ತೈದಕ್ಕೂ ಹೆಚ್ಚು ಜನರಿಗೆ ಈ ಸಂದರ್ಶನ ಭೀತಿ ಇರುವುದು ನಿರ್ವಿವಾದ. ಈ ಪರಿಸ್ಥಿತಿಗೆ ಹಲವಾರು ಅಂಶಗಳು ಕಾರಣ. ಆತಂಕಪೂರ್ಣ ವ್ಯಕ್ತಿತ್ವ. ನಿರ್ದಿಷ್ಟ ಗುರಿಗಳಿಲ್ಲದ ಪ್ರಯತ್ನ, ತಯಾರಿಕೆಯಲ್ಲಿ ಅಭ್ಯಾಸದ ಕೊರತೆ, ವಿಧಯಿಲ್ಲದೆ ಆಸಕ್ತಿ ಇಲ್ಲದ ಕೆಲಸವನ್ನು ಮಾಡಬೇಕಾದ ಅನಿವಾರ್ಯತೆ, ಇವೆಲ್ಲಾ ಬಿಡಿಯಾಗಿ ಅಥವಾ ಒಟ್ಟುಗೂಡಿ ಒಂದು ಸಂಕೀರ್ಣ ಪರಿಸ್ಥಿತಿಯನ್ನು ಮನಸ್ಸಿನಲ್ಲಿ ನಿರ್ಮಾಣ ಮಾಡುವುದರಿಂದ ಸಂದರ್ಶನ ಭೀತಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಪರಿಹಾರ ಸುಲಭಸಾಧ್ಯ, ನಿಧಾನವಾಗಿ ಆಲೋಚಿಸಿ.

ಸಂದರ್ಶನದಲ್ಲಿ ಆಯ್ಕೆಯಾದರೂ, ವಿಷಯದ ಬಗ್ಗೆ ಪ್ರಬುದ್ಧ ಜ್ಞಾನ ಎಷ್ಟು ಮುಖ್ಯವೋ, ಅದೇ ರೀತಿ ಅದನ್ನು ಪ್ರಚುರಪಡಿಸುವ ವಿಧಾನ, ಬಳಸುವ ಭಾಷೆ, ಸಹ ಮುಖ್ಯ. ಧ್ವನಿಯಲ್ಲಿನ ಲಯ, ಗತಿ, ಸಾಂಗತ್ಯ, ನಿಮ್ಮ ದೈಹಿಕ ವ್ಯಕ್ತಿತ್ವ, ಒಡನಾಡುವ ಸಂದರ್ಭದಲ್ಲಿ ಬೇಕಾಗುವ ವಿನಯದ ವರ್ತನೆ ಎಲ್ಲರ ಸಂಘಟಿತ ಪ್ರಯತ್ನ ಮಾತ್ರ ಸಂದರ್ಶನದಲ್ಲಿ ಯಶಸ್ವಿಗೆ ಕಾರಣ. ಇದರಲ್ಲಿ ಎಲ್ಲರೂ ಕೆಲವು ನ್ಯೂನತೆಗಳನ್ನು ಹೊಂದಿದ್ದು, ಸಂಪೂರ್ಣತೆ ಸಿದ್ಧಿಸಿರುವುದಿಲ್ಲ. ಆದ್ದರಿಂದ ವಿಷಯದ ಬಗ್ಗೆ ಪ್ರಾಮಾಣಿಕ ತಯಾರಿ ನಡೆಸಿದ ನಂತರ ನಿಮ್ಮ ಇತರೆ ಸ್ಟ್ರಾಂಗ್ ಪಾಯಿಂಟ್‌ಗಳು ಯಾವುದು ಎಂದು ಗಮನಿಸಿ ಅದಕ್ಕೆ ಒತ್ತು ಕೊಡಿ. ಸಂದರ್ಶನದಲ್ಲಿನ ಸೋಲು ಗೆಲುವು, ಇತ್ತೀಚಿನ ದಿನಗಳಲ್ಲಿ ನಿಮ್ಮ ಪ್ರತಿಭೆಯ ಪ್ರತಿಬಿಂಬವಲ್ಲ. ಬದಲಾಗಿ ವಶೀಲಿ, ಲಂಚ ಇದರ ಆಧಾರಿತವಾಗಿರುವುದರಿಂದ, ನೀವು ಸಂದರ್ಶನದ ಕಾಲದಲ್ಲಿ ಸಹಜವಾಗಿರಲು ಪ್ರಯತ್ನಿಸಿ. ನಿಮ್ಮ ಸಂದರ್ಶನ ಆರಂಭವಾಗುವ ಸುಮಾರು ಇಪ್ಪತ್ತು ನಿಮಿಷದ ಮುಂಚೆಯೇ ವಿಷಯದ ಬಗ್ಗೆ ನಿಮ್ಮ ಸಹಪಾಠಿಯೊಂದಿಗೋ, ನೆಂಟರೊಂದಿಗೋ ವಿಷಯದ ಬಗ್ಗೆ ಮುಕ್ತವಾಗಿ ಚರ್ಚಿಸಿ, ನಿಮ್ಮನ್ನು ಸಂದರ್ಶಿಸುವವರೆಲ್ಲಾ ಅತಿ ಮೇಧಾವಿಗಳಲ್ಲ. ಬದಲಾಗಿ, ಕೆಲವರಿಗೆ ನಿಮಗೆ ಗೊತ್ತಿರುವಷ್ಟೂ ತಿಳಿದಿಲ್ಲ ಎನ್ನುವ ನೈಜ ಸ್ಥಿತಿ ನಿಮಗೆ ತಿಳಿದಿದೆ. ಬಸ್ಸಿನಲ್ಲಿ ಪ್ರಯಾಣಿಸುವಾಗ, ಅನಿರೀಕ್ಷಿತವಾಗಿ ಸಂಭಾಷಣೆ ನಡೆಸುತ್ತಿರುವಾಗ, ಇರುವ ಮನೋಸ್ಥಿತಿಯನ್ನು ನಿರ್ಮಿಸಿಕೊಳ್ಳಿ, ಮುಂದೆ ಬರಬಹುದಾದಂತಹ ಪ್ರಶ್ನೆಗಳ ಬಗ್ಗೆ ಆತಂಕ ಬೇಡ. ಈಗಾಗಲೇ ನೀಡಿರುವ ಉತ್ತರಗಳ ಬಗ್ಗೆ ಮರಣೋತ್ತರ ಪರೀಕ್ಷೆಯು ಸಲ್ಲದು. ಒಟ್ಟಿನಲ್ಲಿ ಸಹಜವಾಗಿ, ಸರಳವಾಗಿ ವರ್ತಿಸಿ ಸಮೀಪದಲ್ಲಿ ಮನೋವೈದ್ಯರು ಅಥವಾ ಮನೋವಿಜ್ಞಾನಿಗಳಿದ್ದರೆ ಅವರಲ್ಲಿ ರಿಲ್ಯಾಕ್ಸೇಷನ್ ಅಭ್ಯಾಸಗಳನ್ನು ಕಲಿತು ನಿರಾತಂಕವಾಗಿರಲು ಕಲಿಯಿರಿ. ನಿಮಗೆ ತಿಳಿದ ಯಾವುದಾದರೂ ಏಕಾಗ್ರತೆಯ ಅಭ್ಯಾಸವನ್ನು ಅಥವಾ ಒಂದು ಉಪಯುಕ್ತ ಹವ್ಯಾಸವನ್ನು ಬೆಳೆಸಿಕೊಂಡರೆ ಉತ್ತಮ.

sp/} <Їb �\ =KN>ಮುಂದೆ ಮದುವೆಯಾದ ನಂತರ ಇದೇ ರೀತಿ ಹೋಂ ಸಿಕ್‌ನೆಸ್ ಬಂದೂ ಆಗ ಮತ್ತೊಮ್ಮೆ ಇದನ್ನು ಪರಿಶೀಲಿಸೋಣ.