ವಿಶ್ವದಾದ್ಯಂತ ಔಷಧ ಮತ್ತು ಅದಕ್ಕೆ ಸಂಬಂಧಿಸಿದ ವಿಜ್ಞಾನದ ಅಭಿವೃದ್ಧಿಯಿಂದಾಗಿ ಜನರ ಆಯುಸ್ಸು
ದ್ವಿಗುಣಗೊಂಡಿದೆ. ಭಾರತದಲ್ಲಿ ಬಡತನ ಮತ್ತು ಜನಸಂಖ್ಯೆ ಇದ್ದರೂ ಸಹ, ಸರಾಸರಿ ೭೦ ವರ್ಷ ಮನುಷ್ಯ ಬದುಕುತ್ತಿದ್ದಾನೆ. ಭಾರತದಲ್ಲಿ ಅನೇಕ ರೋಗ-ರುಜಿನಗಳನ್ನು ಹತೋಟಿಗೆ ತಂದಿರುವುದರಿಂದ, ಬಹಳಷ್ಟು ಆರೋಗ್ಯ ಸುಧಾರಣೆ ಆಗುತ್ತಿದೆ.
ಆರೋಗ್ಯದ ರಹಸ್ಯ ನಮ್ಮಲ್ಲೇ ಅಡಗಿದೆ. ನಾವು ಆರೋಗ್ಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದರ ಜೊತೆಗೆ, ನಮ್ಮ ಸುತ್ತಮುತ್ತಲ ಪರಿಸರವನ್ನು ಸಂರಕ್ಷಿಸಿಕೊಳ್ಳುವುದರಿಂದ, ಸಕಾರಾತ್ಮಕ ಆರೋಗ್ಯ (ಪಾಸಿಟೀವ್ ಹೆಲ್ತ್) ವನ್ನು ಅಭ್ಯಾಸ ಮಾಡುವುದರಿಂದ, ನಾವು ಆರೋಗ್ಯ ಜೀವನ ಸಾಗಿಸಲು ಸಹಾಯಕವಾಗುತ್ತದೆ.
ಅಂತಹ ಪಾಸಿಟೀವ್ ಹೆಲ್ತ್ ಯಾವುದು?
ಆರೋಗ್ಯವಾಗಿ ಜೀವಿಸಲು ಅಗತ್ಯವಾದ ಉತ್ತಮ ಪರಿಸರ, ಸ್ವಚ್ಛತೆ ಮತ್ತು ಮಾಲಿನ್ಯವಿಲ್ಲದ ಪರಿಸರ, ಹೆಚ್ಚು ಜನಸಾಂದ್ರತೆ ಇಲ್ಲದೆ ಕಡೆ ಜೀವಿಸುವ ಉದು.
- ಪ್ರತಿದಿನ ವೈವಿಧ್ಯಮಯವಾದ, ಪೌಷ್ಠಿಕ ಆಹಾರದ ಸೇವನೆ.
- ಪ್ರತಿದಿನ ಸಾಕಷ್ಟು ತಾಜಾ ಹಸಿರು ಕಾಯಿ ಪಲ್ಲೆಗಳು ಮತ್ತು ಹಣ್ಣುಗಳ ಸೇವನೆ.
- ಮಿತ ಪ್ರಮಾಣದಲ್ಲಿ ಸಕ್ಕರೆ, ಉಪ್ಪಿನ ಸೇವನೆ.
- ಶಾರೀರಿಕವಾಗಿ ಚಟುವಟಿಕೆಯಿಂದ ಜೀವಿಸುವುದು.
- ಪ್ರತಿದಿನ ಸುಧಾರಿತ ವ್ಯಾಯಾಮವನ್ನು ಮಾಡುವುದು.
- ಜೀವನದ ಬಗ್ಗೆ ಕ್ರಿಯಾಶೀಲ ಆಸಕ್ತಿ.
- ಪ್ರೀತಿ, ಧೈರ್ಯ ಮತ್ತು ಆಶಾವಾದದ ಬಗ್ಗೆ ಸಕಾರಾತ್ಮಕ ಆಲೋಚನೆ.
- ಸಂತೋಷದ ಪ್ರವೃತ್ತಿ, ಸುತ್ತಮುತ್ತಲು ಇರುವವರಿಗೆ ಕೈಲಾದ ಸಹಾಯ.
- ದೇವರಲ್ಲಿ ನಂಬಿಕೆ.
- ದಾಂಪತ್ಯ ಜೀವನದಲ್ಲಿ ಪ್ರಾಮಾಣಿಕತೆ.
- ಆರ್ಥಿಕ ಸ್ವಾತಂತ್ಯ್ರ.
- ಕಾಯಿಲೆಗೆ, ಸಕಾಲದಲ್ಲಿ ಚಿಕಿತ್ಸೆಯನ್ನು ಪಡೆಯುವುದು.
- ರೋಗಗಳನ್ನು ತಡೆಗಟ್ಟಿಕೊಳ್ಳುವ ಕ್ರಮಗಳನ್ನು ಅನುಸರಿಸುವುದು.
Leave A Comment