ಐಸೋಟೋನಿಕ್‌: ಲಯಬದ್ಧ ಪುನರಾವರ್ತಿತ ವ್ಯಾಯಾಮ, ಇದರಲ್ಲಿ ಚಲನೆಯು ಸೇರಿರುತ್ತದೆ. ಈ ವ್ಯಾಯಾಮದಿಂದ, ರಕ್ತಪರಿಚಲನೆ ಅಭಿವೃದ್ಧಿಗೊಳ್ಳುತ್ತದೆ. ಸ್ನಾಯುಗಳು ರಿಲ್ಯಾಕ್ಸ್‌ ಆಗುತ್ತದೆ. ಇದು ಏರೋಬಿಕ್‌ ಅಥವಾ ಅನ್‌ಏರೋಬಿಕ್‌ ವ್ಯಾಯಾಮಗಳಾಗಿರಬಹುದು.

ಏರೋಬಿಕ್‌: ೧೫ ನಿಮಿಷ ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ಮಾಡುವಂತಹ ವ್ಯಾಯಾಮ. ಏರೋಬಿಕ ‌ವ್ಯಾಯಾಮವನ್ನು ನಿಲ್ಲಿಸದೆಯೇ ಮಾಡಲ್ಪಡುತ್ತದೆ. ಉದಾ: ಸ್ವಿಮಿಂಗ್‌ ( ಈಜು), ಜಾಗಿಂಗ್‌ ಮತ್ತು ವಾಕಿಂಗ್‌.

ಅನ್ಏರೋಬಿಕ್‌: ಇದು ಅಲ್ಪಾವಧಿಯ ವ್ಯಾಯಾಮವಾಗಿರುತ್ತದೆ ಉದಾ: ಟೆನ್ನಿಸ್‌ ಮತ್ತು ಗಾಲ್ಫ್‌.

 ಐಸೋಮೆಟ್ರಿಕ್‌: ಬಹಳ ಕಡಿಮೆ ಚಲನೆಯ ವ್ಯಾಯಮವಾಗಿರುತ್ತದೆ. ಪರಸ್ಪರ ಕೈಗಳನ್ನು ತಳ್ಳುವುದು, ಅಥವಾ ಯಾವುದಾದರೂ ವಸ್ತುಗಳನ್ನು ತಳ್ಳುವುದು ಅಥವಾ ಎತ್ತುವುದು. ಆದರೆ ಚಲನೆ ಇರುವುದಿಲ್ಲ. ಐಸೋ ಮೆಟ್ರಿಕ್‌ ವ್ಯಾಯಾಮದಿಂದ ಮಾಂಸಖಂಡ ಹದ (ಟೇಮ್‌) ಗೊಳ್ಳುತ್ತದೆ ಮತ್ತು ಮಾಂಸಖಂಡವನ್ನು ಬಲಗೊಳಿಸುತ್ತದೆ. ಆದರೆ, ನಿಮ್ಮ ಹೃದಯದ ಸ್ಥಿತಿಯನ್ನಹು ಅಭಿವೃದ್ಧಿಗೊಳಿಸುವುದಿಲ್ಲ. ಈ ವ್ಯಾಯಾಮ ಹೃದಯ ರೋಗಿಗಳಿಗೆ ಅಪಾಯಕಾರಿಯಾಗಿರುತ್ತದೆ.