ಮಸಾಜ್‌ ಅಥವಾ ಅಂಗಮರ್ದನದಿಂದ ಬಿಗಿಯಾದ ಮಾಂಸಖಂಡಗಳು ರಿಲ್ಯಾಕ್ಸ್‌ಗೊಳ್ಳುತ್ತವೆ ಮತ್ತು ಭಾವನಾತ್ಮಕ ಟೆನಷನ್‌ಗೆ ತಾತ್ಕಾಲಿಕವಾಗಿ ರಿಲೀಪ್‌ ಕೊಡುತ್ತದೆ. ಗಂಡ-ಹೆಂಡತಿ ಇಬ್ಬರಿಗೂ ಮಸಾಜ್‌ನಿಂದ ಮುದ ದೊರೆಯುತ್ತದೆ.

ನಿಮ್ಮ ಶರೀರವನ್ನು ಪುನಃ ಶೋಧಿಸಿಕೊಳ್ಳಲು ಸ್ಪರ್ಶ ಸಹಾಯ ಮಾಡುತ್ತದೆ. ಈ ಶಾರೀರಿಕ ಸಂಪರ್ಕದಿಂದ ಕಲಿಕೆ ಮತ್ತು ಬದಲಾವಣೆ ಲಭಿಸುತ್ತದೆ. ಮಸಾಜನ್ನು ದಂಪತಿ ಪರಸ್ಪರ ಮಾಡಿಕೊಳ್ಳುವುದರಿಂದ, ಭಾವೋದ್ವೇಗ ಅಥವಾ ಸ್ನಾಯುಗಳ ಉದ್ವೇಗ ನಿವಾರಣೆಯಾಗುತ್ತದೆ. ಮಸಾಜ್‌ನಿಂದ ದಂಪತಿಗಳಿಗೆ ತಮ್ಮ ಅಸ್ತಿತ್ವದ ಬಗ್ಗೆ ಜಾಗೃತಿ ಮೂಡುತ್ತದೆ.

ಮೂಲಗಳು:

ನೀವು ಮಸಾಜ್‌ ಮಾಡಲು ಈ ಕೆಳಕಂಡ ಮಾರ್ಗಸೂಚಿಗಳು ಸಹಾಯ ಮಾಡುತ್ತವೆ.

ಬೆಚ್ಚಗಿರುವುದು: ಮಸಾಜ್‌ನ ಸ್ಥಳ ಬೆಚ್ಚಗಿರಬೇಕು. ಅಲ್ಲದೆ , ಮಸಾಜ್‌ ಮಾಡಲು ಉಪಯೋಗಿಸುವ ಆಯಿಲ್‌ ಸಹ ಬೆಚ್ಚಗಿರಬೇಕಲು. ಶೀತದ ವಾತಾವರಣದಿಂದ ಸ್ನಾಯುಗಳು ಸಂಕುಚಿತಗೊಳ್ಳುತ್ತವೆ. ಮಸಾಜ್‌ ಮಾಡುವ ಮುನ್ನ ನಿಮ್ಮ ಕೈಗಳೆರಡನ್ನು ಉಜ್ಜಿಕೊಂಡು ಅವು ಬೆಚ್ಚಗಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿರಿ.

ಉಡುಪು: ಸಡಿಲವಾದ ಕಾಟನ್‌ ಡ್ರೆಸ್‌ನ್ನು ಧರಿಸಿರಿ.

ಆಯಿಲ್ಗಳು: ಮಸಾಜ್‌ ಮಾಡಲು ಕೊಬ್ಬರಿ ಎಣ್ಣೆ, ಸನ್‌ಫ್ಲವರ್ ಅಥವಾ ಇತರೆ ಆರೋಗ್ಯಕರ ಎಣ್ಣೆಯನ್ನು ಉಪಯೋಗಿಸಬಹುದು.

ಎಲ್ಲಿ ಮಸಾಜ್ಮಾಡಬೇಕು?

ಫೋಮ್‌ಬೆಡ್‌ನ್ನು ನೆಲದ ಮೇಲೆ ಹಾಸಿ, ಅದರ ಮೇಲೆ ಮಲಗಿದ ನಿಮ್ಮ ಸಂಗಾತಿಯ ಶರೀರವನ್ನು ಮಸಾಜ್‌ಗೆ ಸಿದ್ಧಪಡಿಸಿರಿ.

ಮೌನ ವೀಕ್ಷಣೆ: ಮಸಾಜ್‌ ಮಾಡುವಾಗ ಮಾತನಾಡದಿರುವುದು ಉತ್ತಮ. ಮಸಾಜ್‌ಮಾಡುವಾಗ, ನಿಮ್ಮ ಸಂಗಾತಿಯ ಉಸಿರಾಟವನ್ನು ಹಾಗೂ ಶರೀರದ ಚಲನೆಯನ್ನು ವೀಕ್ಷಿಸಿರಿ.

ಎಷ್ಟು ಹೊತ್ತು ಮಸಾಜ್ಮಾಡಬೇಕು?

ಮಸಾಜ್‌ ಚಿಕಿತ್ಸೆಯನ್ನು ಸಾಮಾನ್ಯವಾಗಿ ೩೦ ರಿಂದ ೪೫ ನಿಮಿಷಗಳ ಕಾಲ ಮಾಡಬಹುದು. ಹೆಚ್ಚು ಕಾಲ ಮಸಾಜ್‌ ಮಾಡಿದರೆ, ನಿಮ್ಮ ಸಂಗಾತಿ ಏಕಾಗ್ರತೆಯನ್ನು ಕಳೆದುಕೊಳ್ಳುತ್ತಾರೆ.

ಯಾವಾಗ ಮಸಾಜ್ಮಾಡಬಾರದು?

ನಿಮ್ಮ ಸಂಗಾತಿ ತೀವ್ರವಾದ ಖಾಯಿಲೆಯಿಂದ ನರಳುತ್ತಿದ್ದರೆ, ಮಸಾಜ್‌ನ್ನು ಮಾಡಬೇಡಿ.

ಮಸಾಜ್ನ್ನು ಯಾವ ಭಾಗದಲ್ಲಿ ಮಾಡಬೇಕು?

ನಿಮ್ಮ ಸಂಗಾತಿಯ ಬೆನ್ನು, ಎದೆ , ತೊಡೆ, ಕತ್ತು, ಕೈಕಾಲುಗಳ ಭಾಗದಲ್ಲಿ ಮಸಾಜ್‌ ಮಾಡಿರಿ.

ಒಟ್ಟಾರೆ, ಕ್ರಮಬದ್ಧವಾದ ಮಸಾಜ್‌ನಿಂದ ನಿಮ್ಮ ಸಂಗಾತಿಯ ಶಾರೀರಿಕ ಟೆನ್‌ಷನ್‌ ಅಥವಾ ಒತ್ತಡ ಕಡಿಮೆಯಾಗುತ್ತದೆ. ಇಡೀ ಶರೀರದಲ್ಲಿ ನವಚೈತನ್ಯ ಮೂಡುತ್ತದೆ.