ಕ್ರಮವಾಗಿ ಏರೋಬಿಕ್‌ ವ್ಯಾಯಾಮವನ್ನು ಮಾಡುವುದರಿಂದ ಖಿನ್ನತೆ (ಡಿಪ್ರೆಷನ್‌) ಆತಂಕ ಮತ್ತು ಒತ್ತಡ ನಿವಾರಣೆಯಾಗುತ್ತದೆ ಎನ್ನುತ್ತಾರೆ ಡಾ. ಹ್ಯಾರಿ ಆಲ್ಡ್‌ರ್ ರವರು. ಅಲ್ಲದೆ, ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಜೀವನಕ್ಕೆ ಉದ್ದೇಶವಿದೆ ಎಂಬ ಭಾವನೆಯು ಮೂಡುತ್ತದೆ.

ಕ್ರಮವಾದ ವ್ಯಾಯಾಮದಿಂದ ಬಹಳಷ್ಟು ಲಾಭಗಳನ್ನು ನೀವು ನಿರೀಕ್ಷಿಸಬಹುದು.

ಅವುಗಳೆಂದರೆ:

೧) ನಿಮ್ಮ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.

೨) ಶರೀರದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಅಧಿಕಗೊಳಿಸುತ್ತದೆ.

೩) ಹೃದಯದ ಅಂಗಾಂಶವನ್ನು ಬಲಗೊಳಿಸುತ್ತದೆ.

೪) ಟೆನ್‌ಷನ್‌ನನ್ನು ನಿವಾರಿಸುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ.

೫) ರಕ್ತವನ್ನು ತೆಳುಗೊಳಿಸುತ್ತದೆ.

೬) ಪಾರ್ಶ್ವವಾಯು ಅಥವಾ ಸ್ಟೋಕ್‌ ರಿಸ್ಕ್ ನ್ನು ಕಡಿಮೆಗೊಳಿಸುತ್ತದೆ.

೭ ) ಒಳ್ಳೆಯ ಕೊಲೆಸ್ಟ್ರಾಲ್‌ ಹಂತವನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುತ್ತದೆ.

೮) ಟೈಪ್‌೨ ಡಯಾಬಿಟೀಸ್‌ ರಿಸ್ಕ್‌ನ್ನು ಕಡಿಮೆಗೊಳಿಸುತ್ತದೆ.

೯ ) ಶರೀರದ ಕೊಬ್ಬನ್ನು ಕಡಿಮೆಗೊಳಿಸುತ್ತದೆ.

೧೦) ಉಸಿರಾಟದ ವೇಗವನ್ನು ಕಡಿಮೆ ಮಾಡುತ್ತದೆ.

೧೧) ಜೀರ್ಣ ಆಗಲು ಸಹಾಯ ಮಾಡುತ್ತದೆ.

೧೨) ನಿಮ್ಮ ಶಕ್ತಿಯ ಹಂತವನ್ನು ಹೆಚ್ಚು ಮಾಡುತ್ತದೆ.

೧೩) ನಿಮ್ಮ ಶರೀರದ ಮಾಂಸಖಂಡಗಳ ಬಲವನ್ನು ಹೆಚ್ಚಿಸುತ್ತದೆ.

೧೪) ಕೀಲುಗಳ ಬಾಗಿಸುವಿಕೆ ಸುಲಭವಾಗುತ್ತದೆ.

೧೫) ಉತ್ತಮವಾಗಿ ಆಲೋಚಿಸುತ್ತೀರಿ.

೧೬) ಮೂಳೆ ಸವತೆವನ್ನು ತಡೆಗಟ್ಟುತ್ತದೆ.

೧೭) ನೋವನ್ನು ನಿವಾರಿಸುತ್ತದೆ (ಟೆನ್‌ಷನ್‌ ತಲೆನೋವನ್ನು ಕಡಿಮೆ ಮಾಡುತ್ತದೆ)

೧೮) ನಿಮ್ಮ ರೋಗನಿರೋಧಕ ವ್ಯೂಹವನ್ನು ಅಭಿವೃದ್ಧಿಗೊಳಿಸುತ್ತದೆ.

೧೯) ಉತ್ತಮ ನಿದ್ರೆ ಬರುತ್ತದೆ.

೨೦) ಉತ್ಪಾದನಾ ಶಕ್ತಿಯನ್ನು ಹೆಚ್ಚಿಸುತ್ತದೆ.

೨೧) ಸ್ವತಂತ್ರವಾದ ಜೀವನಶೈಲಿಯನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ.

೨೨) ಹೃದಯದ ಕಾಯಿಲೆಗಳು ಆಗುವುದನ್ನು ತಡೆಗಟ್ಟುತ್ತದೆ.

೨೩) ವ್ಯಾಯಾಮದಿಂದ ಗುಣಾತ್ಮಕವಾದ ಜೀವನ ರೂಪುಗೊಳ್ಳುತ್ತದೆ.

೨೪) ವ್ಯಾಯಾಮದಿಂದ ನಿಮ್ಮ ಮನಸ್ಸು ಚುರುಕುಗೊಳ್ಳುತ್ತದೆ.

೨೫) ವಯಸ್ಕರು ಕ್ರಮವಾಗಿ ವ್ಯಾಯಾಮದಲ್ಲಿ ತೊಡಗುವುದರಿಂದ ಆತಂಕ  ಮತ್ತು ಡಿಪ್ರೆಷನ್‌ ಲಕ್ಷಣಗಳು ಕಡಿಮೆಯಾಗುತ್ತವೆ. ಅಲ್ಲದೆ, ಸಕಾರಾತ್ಮಕವಾದ ಮೂಡ್‌ ಉಂಟಾಗುತ್ತದೆಂದು ಅಧ್ಯಯನಗಳು ತಿಳಿಸಿವೆ.

೨೬) ವ್ಯಾಯಾಮ ಮಾಡುವವರಿಗಿಂತಲೂ, ವ್ಯಾಯಾಮ ಮಾಡದವರು ಬಹಳ ಬೇಗನೆ ಡಿಪ್ರೆಷನ್‌ಗೊಳಗಾಗುತ್ತಾರೆ.

೨೭) ಶಾರೀರಿಕ ವ್ಯಾಯಾಮದಲ್ಲಿ ತೊಡಗದ ಹೆಂಗಸರು, ಡಿಪ್ರೆಷನ್‌ ಲಕ್ಷಣಗಳ ರಿಸ್ಕ್‌ಗೊಳಗಾಗುವ ಸಂಭವ ಹೆಚ್ಚು.

೨೮) ವೇಗವಾದ, ಅಳತೆ ಮೀರಿಎದ ವ್ಯಾಯಾಮದಿಂದ ಹೃದಯಕ್ಕೆ ಧಕ್ಕೆ ಉಂಟಾಗುತ್ತದೆ.

೨೯) ಸುಧಾರಿತ ವ್ಯಾಯಾಮಗಳು: ವೇಗದ ನಡಿಗೆ, ಸೈಕಲ್‌ ತುಳಿಯುವುದು, ಸ್ವಿಮ್ಮಿಂಗ್‌, ಟೇಬಲ್‌ ಟೆನ್ನಿಸ್‌ ಇತ್ಯಾದಿ.

೩೦) ವ್ಯಾಯಾಮದ ಚಟುವಟಿಕೆಗಳಲ್ಲಿ ಮನೆಗೆಲಸ, ಮೆಟ್ಟಿಲುಗಳನ್ನು ಹತ್ತಿ-ಇಳಿಯುವುದು ಸೇರಿರುತ್ತದೆ.

ಕ್ರಮಬದ್ಧವಾದ ಶಾರೀರಕ ಚಟುವಟಿಕೆ , ಶಾರೀರಕ್ಕೆ ಲಾಭದಾಯಕವಾಗಿರುತ್ತದೆ.