ವಾಕಿಂಗ್‌ ಅಥವಾ ನಡಿಗೆ ಪ್ರತಿಯೊಬ್ಬರಿಗೂ ಒಳ್ಳೆಯದು. ವಿಶೇಷವಾಗಿ ಸಂಧಿವಾತದವರಿಗೆ ವಾಕಿಂಗ್‌ ಬಹಳ ಒಳ್ಳೆಯದು. ಇದು ಸಹನಾಶಕ್ತಿಯ ವ್ಯಾಯಾಮವಾಗಿರುತ್ತದೆ. ಇದರ ಅರ್ಥ ನಡಿಗೆಯಿಂದ ನಿಮ್ಮ ಹೃದಯ ಬಲಗೊಳ್ಳುತ್ತದೆ. ನಿಮ್ಮ ಶ್ವಾಸಕೋಶಗಳು ಸಮರ್ಥವಾಗಿ ಕಾರ್ಯನಿರ್ವಹಿಸಲು ಸಹಾಯಕವಾಗುತ್ತದೆ ಮತ್ತು ನಿಮಗೆ ಹೆಚ್ಚಿನ ತಾಕತ್ತನ್ನು ನೀಡುತ್ತದೆ. ಅದರಿಂದಾಗಿ, ಬೇಗನೆ ಆಯಾಸ ಉಂಟಾಗುವುದಿಲ್ಲ.

ವಾಕಿಂಗ್‌ನಿಂದ ನಿಮ್ಮ ಮೂಳೆಗಳು ಬಲಗೊಳ್ಳಲು ಸಹಾಯಕವಾಗುತ್ತದೆ. ಟೊಳ್ಳುಮೂಳೆ ರೋಗದ ರಿಸ್ಕ್‌ನ್ನು ಕಡಿಮೆಮಾಡುತ್ತದೆ (ಮೂಳೆಗಳು ತೆಳ್ಳಗಾಗುವುದು)

ವಾಕಿಂಗ್‌ನಿಂದಾಗಿ, ನಿಮ್ಮ ಮಾಂಸಖಂಡಗಳು ಬಲಗೊಳ್ಳುತ್ತವೆ ಮತ್ತು ಕೀಲುಗಳ ಬಾಗಿಸುವಿಕೆಗೆ (ಫ್ಲೆಕ್ಸಿಬಿಲಿಟಿ) ಸಹಾಯ ಮಾಡುತ್ತದೆ.

ವಾಕಿಂಗ್‌ನಿಂದ, ಮಾಂಸ ಖಂಡಗಳು ಮತ್ತು ಕೀಲುಗಳ ಸುತ್ತಲೂ ಇರುವ ಅಂಗಾಂಶಗಳು ಬಲಗೊಳ್ಳುತ್ತವೆ. ಅಲ್ಲದೆ, ಕೀಲುಗಳನ್ನು ಸಂರಕ್ಷಿಸುವುದಲ್ಲದೆ, ಅವು ದೈನಂದಿನ ಚಟುವಟಿಕೆಗೆ ಸಿದ್ಧವಾಗಿರುವಂತೆ ಮಾಡುತ್ತದೆ.

ಇದೆಲ್ಲದರ ಜೊತೆಗೆ, ಶಾರೀರಿಕ ಲಾಭಗಳೇ ಅಲ್ಲದೆ, ವಾಕಿಂಗ್‌ನಿಂದ ಮಾನಸಿಕ ಸಮಾಧಾನ – ಸಂತೋಷವು ಲಭಿಸುತ್ತದೆ. ಕ್ರಮವಾದ (ರೆಗ್ಯುಲರ್) ವ್ಯಾಯಾಮದಿಂದ ನೀವು ಉತ್ತಮವಾಗಿ ನಿದ್ರಿಸಲು ಸಹಾಯಕವಾಗುತ್ತದೆ. ನಿಮ್ಮ ತೂಕವನ್ನು ನಿಯಂತ್ರಿಸುತ್ತದೆ ಮತ್ತು ನಿಮ್ಮಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ. ಸಂಧಿವಾತದ ಜೊತೆಗೆ ಬರುವ ಖಿನ್ನತೆ (ಡಿಪ್ರೆಷನ್‌), ಆಯಾಸ ಮತ್ತು ಸ್ಟ್ರೆಸ್‌ನ್ನು (ಒತ್ತಡ) ನಿವಾರಿಸುತ್ತದೆ.

ವಾಕಿಂಗ್ನ್ನು ಹೇಗೆ ಮಾಡಬೇಕು?

ಕೈಗಳನ್ನು ಬೀಸುತ್ತಾ ವಾಕಿಂಗ್‌ ಮಾಡಿರಿ.

ವಾಕಿಂಗ್‌ ಮಾಡಲು ಅನುಕೂಲಕರವಾದ ಶೂಗಳನ್ನು ಧರಿಸಿರಿ.

ವಾರದಲ್ಲಿ ಮೂರು ಸಾರಿಯಾದರು, ಸಾಧ್ಯವಾಗದಿದ್ದರೆ, ನಿಯಂತ್ರಿತ ವಾಕಿಂಗ್‌ನ್ನು ಪ್ರತಿದಿನ ಮಾಡಿರಿ . ವಾಕಿಂಗ್‌ ಮಾಡಿರಿ.

ಅಗತ್ಯವಾಗಿದ್ದರೆ, ಕೈಯಲ್ಲಿ ಕೋಲನ್ನು ಹಿಡಿದು ವಾಕಿಂಗ್‌ ಮಾಡಿರಿ.

ನಿಧಾನವಾಗಿ ವಾಕಿಂಗ್‌ ಮಾಡಿರಿ. ಅಭ್ಯಾಸದ ನಂತರ ವೇಗದ ನಡಿಗೆಯನ್ನು ಹೆಚ್ಚು ಮಾಡಿರಿ.