ಅಮೆರಿಕಾದ ಆರ್ಥ್ರೈಟಿಸ್ ಫೋಂಡೇಶನ್ ಸಂಧಿವಾತವನ್ನು ನಿಯಂತ್ರಿಸಿಕೊಳ್ಳುವ ಹನ್ನೊಂದು ಹಂತಗಳನ್ನು ಈ ಕೆಳಕಂಡಂತೆ ತಿಳಿಸಿದೆ.
(೧) ಕೀಲುನೋವನ್ನು ನಿರ್ಲಕ್ಷ್ಯ ಮಾಡಬೇಡಿ.
ಕೀಲು ನೋವಿನ ಹಾನಿ (ಡ್ಯಾಮೇಜ್) ಸಂಧಿವಾತದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆಂದು ಅಧ್ಯಯನಗಳು ತಿಳಿಸಿವೆ. ಅಂದರೆ, ಕೀಲಿಗೆ ಹಾನಿಯಾದ ಎರಡು ವರ್ಷಗಳೊಳಗೆ ಸಂಧಿವಾತ ಕಾಣಿಸಿಕೊಳ್ಳಬಹುದು.
ಹೆಲ್ತ್ ಟಿಪ್: ನಿಮಗೆ ಕೀಲು ನೋವು ಇದ್ದರೆ, ಅದು ಎರಡು ವಾರಗಳಿಗೂ ಮೇಲ್ಪಟ್ಟು ನೋವನ್ನುಂಟುವಾಡಿದರೆ ನಿಮ್ಮ ವೈದ್ಯರನ್ನು ಕಾಣಿರಿ.
(೨) ನಿರ್ದಿಷ್ಟವಾದ ಡಯೊಗ್ನೋಸಿಸ್ನ್ನು ಮಾಡಿಸಿಕೊಳ್ಳಿರಿ.
ನೂರಕ್ಕೂ ಹೆಚ್ಚು ವಿಧವಾದ ಸಂಧಿವಾತವಿದೆ. ಪ್ರತಿಯೊಂದು ಸಂಧಿವಾತಕ್ಕೂ ವಿವಿಧ ರೀತಿಯ ಚಿಕಿತ್ಸೆಯ ಅಗತ್ಯವಿರುತ್ತದೆ. ನೀವು ಯಾವ ವಿಧದ ಸಂಧಿವಾತವನ್ನು ಹೊಂದಿದ್ದೀರಿ ಎಂಬುದನ್ನು ನಿಮ್ಮ ವೈದ್ಯರಿಂದ ಡಯೊಗ್ನೋಸಿಸ್ ಮಾಡಿಸಿಕೊಳ್ಳುವುದು ಅತ್ಯಗತ್ಯ.
ಹೆಲ್ತ್ ಟಿಪ್: ನಿಮ್ಮ ವೈದ್ಯರಿಂದ ನಿಮ್ಮ ಸಂಧಿವಾತಕ್ಕೆ ಸಮರ್ಪಕವಾದ ಚಿಕಿತ್ಸೆಯನ್ನು ಪಡೆಯಿರಿ.
(೩) ಶರೀರದ ಅತಿಯಾದ ತೂಕವನ್ನು ಕಡಿಮೆ ಮಾಡಿಕೊಳ್ಳಿರಿ.
ನಿಮ್ಮ ಶರೀರ ಅತಿಯಾದ ತೂಕವನ್ನು ಹೊಂದಿದ್ದರೆ, ನಿಮ್ಮ ಕೀಲುಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ವಿಶೇಷವಾಗಿ, ನಿಮ್ಮ ಮಂಡಿಭಾಗ, ಹಿಪ್ಸ್ (ಕುಂಡಿಗಳು), ಬೆನ್ನು ಮತ್ತು ಪಾದಗಳ ಮೇಲೆ ಹೆಚ್ಚು ಒತ್ತದ ಬೀಳುತ್ತದೆ.
ಹೆಲ್ತ್ ಟಿಪ್: ನೀವು ಅತಿಯಾದ ತೂಕವನ್ನು ಹೊಂದಿದ್ದರೆ, ಕಡಿಮೆ ಮಾಡಿಕೊಳ್ಳಿರಿ, ಅದರಿಂದ, ಕೀಲಿನ ನೋವು ಕಡಿಮೆಯಾಗುತ್ತದೆ ಮತ್ತು ಇತರೆ ವಿಧದ ಸಂಧಿವಾತವನ್ನು ಶೇಕಡ ೫೦ ರಷ್ಟು ತಡೆಗಟ್ಟುತ್ತದೆ.
(೪) ಚಟುವಟಿಕೆಯಿಂದ ಇರಿ:
ರೆಗ್ಯುಲರ್ ಆಗಿ ವ್ಯಾಯಾಮವನ್ನು ಮಾಡುವುದರಿಂದ, ಕೀಲುಗಳ ಸುತ್ತ ಇರುವ ಸ್ನಾಯುಗಳನ್ನು (ಮಸಲ್ಸ್) ಬಲಗೊಳಿಸುವುದರ ಮೂಲಕ ಕೀಲುಗಳ ರಕ್ಷಿಸುತ್ತದೆ, ನೋವನ್ನು ಕಡಿಮೆ ಮಾಡುತ್ತದೆ. ಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ.
ಹೆಲ್ತ್ ಟಿಪ್: ಪ್ರತಿದಿನ ೩೦ ನಿಮಿಷಗಳ ಕಾಲ ಸುಧಾರಿತ ಶಾರೀರಿಕ ವ್ಯಾಯಾಮವನ್ನು ಮಾಡಿರಿ ಮತ್ತು ಸಂತೋಷವನ್ನು ಹೊಂದಿರಿ.
(೫) ಆರೋಗ್ಯಕರವಾದ ಆಹಾರವನ್ನು ಸೇವಿಸಿರಿ
ಸಮಗ್ರ ಆರೋಗ್ಯಕ್ಕೆ, ಸಮತೋಲನವಾದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಇತ್ತೀಚಿನ ಸಂಶೋಧನೆಗಳ ಪ್ರಕಾರ ವಿಟಮಿನ್ ‘ಸಿ’ ಇರುವ ಹಣ್ಣು-ಹಂಪಲುಗಳನ್ನು ಮತ್ತು ಹ್ಯಾಂಟಿ ಆಕ್ಸಿಡೆಂಟ್ಸ್ ಇರುವ ಹಣ್ಣುಗಳನ್ನು ಸೇವಿಸುವುದರಿಂದ, ಆಸ್ಟಿಯೋಆರ್ಥ್ರೈಟಿಸ್ ರಿಸ್ಕ್ ಕಡಿಮೆಯಾಗುತ್ತದೆ.
ಹೆಲ್ತ್ ಟಿಪ್ : ಸ್ನಾಕ್ಸ್ನ್ನು ಸೇವಿಸುವ ಬದಲು ಒಂದು ಕಿತ್ತಳೆಹಣ್ಣನ್ನು ಸೇವಿಸಿರಿ. ಅಥವಾ ಒಂದು ಲೋಟ ಕಿತ್ತಳೆಹಣ್ಣಿನ ಜ್ಯೂಸನ್ನು ಕುಡಿಯಿರಿ.
(೬) ದೊಡ್ಡದಾಗಿ ಆಲೋಚಿಸಿರಿ
ಶಾರೀರಿಕ ಚಟುವಟಿಕೆಯಲ್ಲಿ ತೊಡಗುವ ಅವಧಿಯಲ್ಲಿ ನಿಮ್ಮ ಕೀಲುಗಳನ್ನು ರಕ್ಷಿಸಿಕೊಳ್ಳಲು, ಯಾವಾಗಲೂ ಉದ್ದವಾದ ಮತ್ತು ಬಲವಾದ ಕೀಲನ್ನು ಉಪಯೋಗಿಸಿರಿ.
ಹೆಲ್ತ್ಟಿಪ್: ಭುಜಕ್ಕೆ ನೇತು ಹಾಕಿಕೊಳ್ಳುವ ಬ್ಯಾಗ್ನಲ್ಲಿ ವಸ್ತುಗಳನ್ನು ಇಟ್ಟುಕೊಂಡು ಕೊಂಡೊಯ್ಯಿರಿ. ನಿಮ್ಮ ಕೈಗಳನ್ನು ಉಪಯೋಗಿಸುವ ಬದಲು ನಿಮ್ಮ ಭುಜದ ಭಾಗವನ್ನು ಉಪಯೋಗಿಸಿರಿ.
(೭) ಜಾಣ್ಮೆಯಿಂಧ ಆಡಿರಿ
ಶಾರೀರಿಕ ಚಟುವಟಿಕೆಯ ಅವಧಿಯಲ್ಲಿ, ನಿಮ್ಮ ಕೀಲು ಹಾನಿಗೊಳಗಾಗದಿರಬೇಕಾದರೆ ಹಾಗೂ ನಿಮ್ಮನ್ನು ರಕ್ಷಿಸಿಕೊಳ್ಳಲು, ಶಾರೀರಿಕ ವ್ಯಾಯಾಮವನ್ನು ಮಾಡುವ ಮೂಲಕ ಮೈಯನ್ನು ಬೆಚ್ಚಗಾಗಿಸಿಕೊಳ್ಳಿರಿ ಅಂದರೆ, ವಾರ್ಮ್ ಅಪ್ (Warm-up ) ಮಾಡಿಕೊಳ್ಳಿರಿ.
ಹೆಲ್ತ್ ಟಿಪ್: ಕೀಲುಗಳನ್ನು ರಕ್ಷಿಸುವ ರಕ್ಷಾ ಕವಚಗಳನ್ನು ಧರಿಸಿರಿ.
(೮) ಉದ್ಯೋಗದಲ್ಲಿ ಸುಧಾರಣೆ ಮಾಡಿಕೊಳ್ಳಿರಿ:
ಪುನರಾವರ್ತಿತ ಚಲನೆಯಿಂದ ಸಂಧಿವಾತದ ರಿಸ್ಕ್ ಅಭಿವೃದ್ಧಿಗೊಳ್ಳುತ್ತದೆ.
ಹೆಲ್ತ್ ಟಿಪ್: ನಿಮ್ಮ ದಿನದ ಉದ್ಯೋಗವನ್ನು ನಿರ್ವಹಿಸಲು ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಿರಿ. ಕೆಲಸ ಮಾಡುವಾಗ, ಕೆಲಸ ಮಾಡಿದ ಕೀಲುಗಳನ್ನೇ ಪುನಃ ಉಪಯೋಗಿಸಬೇಡಿ. ಬಿಗಿಯಾದ ಕೀಲುಗಳನ್ನು ಉಪಯೋಗಿಸುವಾಗ ಆಗಿಂದಾಗ್ಯೆ ರಿಲ್ಯಾಕ್ಸ್ ಮಾಡಿಕೊಳ್ಳಿರಿ.
(೯) ರಿಲ್ಯಾಕ್ಸ್ (ವಿರಮಿಸಿಕೊಳ್ಳಿರಿ):
ನಿಮಗೆ ನೀವು ಒಳ್ಳೆಯವರಾಗಿರಿ. ಕೀಲಿನಲ್ಲಿ ನೋವು ಬರಲು ಮತ್ತು ಆಯಾಸ ಉಂಟಾಗಲು ಸಾಮಾನ್ಯವಾದ ಕಾರಣ ಸ್ಟ್ರೆಸ್ (ಒತ್ತಡ)
ಹೆಲ್ತ್ ಟಿಪ್: ನಿಮಗೆ ನೀವೆ ಮಸಾಜ್ ಮಾಡಿಕೊಳ್ಳಿರಿ. ಅಥವಾ ಬಿಸಿ ನೀರಿನ ಸ್ನಾನವನ್ನು ಮಾಡಿ, ರಿಲ್ಯಾಕ್ಸ್ ಆಗಿರಿ. ಮಸಾಜ್ ಮತ್ತು ಬಿಸಿ ನೀರಿನ ಸ್ನಾನದಿಂದ ಸ್ನಾಯುಗಳ ಟೆನ್ಷನ್ ಮತ್ತು ಕೀಲುನೋವು ಕಡಿಮೆಯಾಗುತ್ತದೆ. ನೆನಪಿಡಿ. ಭಾವನಾತ್ಮಕ ಆರೋಗ್ಯದಿಂದ ಶಾರೀರಿಕ ಆರೋಗ್ಯ ಉತ್ತಮಗೊಳ್ಳುತ್ತದೆ.
(೧೦) ಧೂಮಪಾನವನ್ನು ಬಿಟ್ಟುಬಿಡಿ:
ಧೂಮಪಾನದಿಂದ ಬೋನ್ ಮಾಸ್ ಕಡಿಮೆಯಾಗುತ್ತದೆ. ಅಲ್ಲದೆ, ಆಸ್ಟಿಯೋ ಪೋರೋಸಿಸ್ (ಟೊಳ್ಳು ಮೂಳೆ ರೋಗ) ಗೆ ಅವಕಾಶ ಮಾಡಿಕೊಡುತ್ತದೆ ಮತ್ತು ಮೂಳೆ ಮುರಿಯುವ ರಿಸ್ಕ್ ಹೆಚ್ಚಾಗುತ್ತದೆ. ಸಂಧಿವಾತದ ತೊಡಕುಗಳು ಅಧಿಕಗೊಳ್ಳುತ್ತವೆ.
ಹೆಲ್ತ್ ಟಿಪ್: ಧೂಮಪಾನವನ್ನು ಬಿಡಲು ಆಗದಿದ್ದರೆ ಮನೋವೈದ್ಯರ ಸಲಹೆಯನ್ನು ತಡೆಯಿರಿ.
(೧೧) ನಿಯಂತ್ರಿಸಿಕೊಳ್ಳಿರಿ:
ಸುಧಾರಿತ ವ್ಯಾಯಾಮವನ್ನು ದಿನ ಬಿಟ್ಟು ದಿನ ಮಾಡಿದರು ಸಾಕು, ಸಂಧಿವಾತವನ್ನು ನಿಯಂತ್ರಿಸಿಕೊಳ್ಳಬಹುದು.
ಹೆಲ್ತ್ ಟಿಪ್: ಪ್ರಶಾಂತವಾದ ಜಾಗದಲ್ಲಿ ಸರಳವಾದ ಶಾರೀರಕ ವ್ಯಾಯಾಮವನ್ನು’ ಮಾಡಿರಿ.
Leave A Comment